﻿
ಡಿ. ವೆಂಕಟರಾವ್
03-05-21
Kannada
ರಾಷ್ಟ್ರೀಕರಣದ ಪರವಾಗಿ ಮಾಡಿದ ವಾದಗಳು:

ಕೆಲವರು ಬ್ಯಾಂಕ್ ರಾಷ್ಟ್ರೀಕರಣವು ಅತ್ಯಗತ್ಯವೆಂಬುದಾಗಿ ತಮ್ಮ
ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಅವುಗಳು ಕೆಳಕಂಡಂತಿವೆ.

(i) ಸಂಪತ್ತು ಮತ್ತು ಆರ್ಥಿಕ ಶಕ್ತಿಯ ಕೇಂದ್ರೀಕರಣ:

ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳು ಕೆಲವೇ ಜನ ಖಾಸಗಿ ಷೇರು~
ದಾರರ ಹಾಗೂ ಶ್ರೀಮಂತರ ಅಧೀನದಲ್ಲಿದ್ದರೆ, ಅವರು ತಮ್ಮ ಹಿತ
ಹಾಗೂ ಲಾಭಗಳ ದೃಷ್ಟಿಯಿಂದ ಬ್ಯಾಂಕಿನ ವ್ಯವಹಾರಗಳನ್ನು ನಡೆಸು~
ತ್ತಾರೆ. ವೈಯಕ್ತಿಕ ಅನುಕೂಲತೆಯ ದೃಷ್ಟಿಯಿಂದ ಹಣವನ್ನು ತೊಡಗಿ~
ಸುತ್ತಾರೆ. ಇದು ಆರ್ಥಿಕ ಶಕ್ತಿಯು ಅವರಲ್ಲಿ ಮಾತ್ರ ಕೇಂದ್ರೀಕೃತ~
ಗೊಳ್ಳಲು ಎಡೆಮಾಡಿಕೊಡುತ್ತದೆ. ಇದರಿಂದ ಆದಾಯದಲ್ಲಿ ವಿಷಮತೆ
ಕಂಡು ಬರುತ್ತದೆ. ರಾಷ್ಟ್ರದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ.
ಆದಕಾರಣ ಬ್ಯಾಂಕುಗಳನ್ನು ರಾಷ್ಟ್ರೀಕರಿಸಬೇಕು. ರಾಷ್ಟ್ರೀಕರಣದಿಂದ
ಸಾರ್ವಜನಿಕರು ಉಳಿತಾಯ ಮಾಡಿದ ಹಣವು ರಾಷ್ಟ್ರದ ಅಭಿವೃದ್ಧಿಗಾಗಿ
ವಿನಿಯೋಗಿಸಲ್ಪಡುತ್ತದೆ ಹಾಗೂ ಸಂಪತ್ತಿನ ಕೇಂದ್ರೀಕರಣವು ಕೆಲವೇ
ಜನರಲ್ಲಿ ಉಳಿಯದೆ ಸರ್ವರಿಗೂ ದೊರೆಯುವಂತಾಗುತ್ತದೆ.

(ii) ಹಣದ ದುರುಪಯೋಗ:

ಸಾಮಾನ್ಯವಾಗಿ ಠೇವಣಿದಾರರು ಹಣವನ್ನು ಬ್ಯಾಂಕುಗಳಲ್ಲಿಟ್ಟ
ನಂತರ ಆ ಹಣದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಮತ್ತು ಬ್ಯಾಂಕಿನ
ಆಡಳಿತದ ಬಗ್ಗೆಯೂ ವಿಚಾರ ಮಾಡುವುದಿಲ್ಲ. ಬ್ಯಾಂಕುಗಳಲ್ಲಿ ಶೇರುಗಳನ್ನು
Page 134
ಪಡೆದವರೂ ಸಹ ನಿರಾಸಕ್ತಿಯಿಂದ ಇರುತ್ತಾರೆ. ಇದರಿಂದ
ಅನೇಕ ಬಾರಿ ತೊಂದರೆಗಳಾಗುವುದುಂಟು. ಕೆಲವೊಮ್ಮೆ, ಬ್ಯಾಂಕುಗಳ
ಕಾರ್ಯಗಳನ್ನು ನಿರ್ವಹಿಸುವ ಡೈರೆಕ್ಟರುಗಳು ತಮಗೆ ಸೂಕ್ತವಾದ ರೀತಿ~
ಯಲ್ಲಿ ಬ್ಯಾಂಕುಗಳ ಹಣವನ಼್ನು ಬಳಸುವುದುಂಟು. ಅನೇಕ ವೇಳೆ ಬ್ಯಾಂಕು~
ಗಳಿಂದ ಡೈರೆಕ್ಟರುಗಳು ಯಾವ ಆಧಾರವೂ ಇಲ್ಲದೆ ಸಾಲಗಳನ್ನು ಪಡೆದು
ತಮ್ಮ ಉದ್ದಿಮೆಗಳಲ್ಲಿ ಬಳಸುವರು. ಅವರ ಸಂಬಂಧಿಗಳಿಗೆ ಬ್ಯಾಂಕುಗಳ
ಹಣವನ್ನು ಸಾಲವಾಗಿ ನೀಡುವರು. ಅಂದರೆ ಸಾರ್ವಜನಿಕರ ಹಣವು ಈ
ಬಗೆಯಲ್ಲಿ ಖಾಸಗಿ ವ್ಯಕ್ತಿಗಳ ಹಿತಸಾಧನೆಗೆ ಬಳಸಲ್ಪಡುತ್ತದೆ. ಕೆಲವು
ಬಾರಿ ಬ್ಯಾಂಕುಗಳ ಹಣದಿಂದ ಅತ್ಯಾವಶ್ಯಕ ವಸ್ತುಗಳನ್ನು ಕೊಂಡು
ಬಚ್ಚಿಡಲಾಗುವುದು. ಅ಩ೇಕ ಬಾರಿ ಸಮಾಜಘಾತಕ ಚಟುವಟಿಕೆಗಳಿಗೆ
ಹಣ ನೀಡಲಾಗುವುದು. ರಿಜರ್ವ್್ಬ್ಯಾಂಕ್ ಒಂದರಿಂದ ಬ್ಯಾಂಕುಗಳ
ಹಣದ ದುರುಪಯೋಗವನ್ನು ತಡೆಗಟ್ಟುವುದು ಕಷ್ಟಸಾಧ್ಯ. ಇದಕ್ಕಿರುವ
ಏಕೈಕ ಮಾರ್ಗವೆಂದರೆ ರಾಷ್ಟ್ರೀಕರಣ. ಇದರಿಂದ ಸಾರ್ವಜನಿಕರ ಹಣವು
ಸಾರ್ವಜನಿಕ ಕಾರ್ಯಗಳಿಗೇ ವಿನಿಯೋಗವಾಗಿ ಹಣದ ದುರುಪಯೋಗ~
ವಾಗುವುದು ತಪ್ಪುತ್ತದೆ.

(iii) ಕೃಷಿ ಸಣ್ಣ ಕೈಗಾರಿಕೆಗಳ ಬಗ್ಗೆ ಉಪೇಕ್ಷೆ:

ವಾಣಿಜ್ಯ ಬ್ಯಾಂಕುಗಳು ಬೃಹತ್ ಪ್ರಮಾಣದ ವ್ಯಾಪಾರಸ್ಥರಿಗೆ,
ಕೈಗಾರಿಕೋದ್ಯಮಿಗಳಿಗೆ ಮಾತ್ರ ಸಾಲಗಳನ್ನು ನೀಡಿ, ಸಣ್ಣ ಕೈಗಾರಿಕೆ~
ಗಳು ಹಾಗೂ ರೈತರನ್ನು ಉಪೇಕ್ಷೆ ಮಾಡಿದಲ್ಲಿ, ದೇಶದ ಅಭಿವೃದ್ಧಿಯ
ಮುಖ್ಯ ಅಡಿಗಲ್ಲಾಗಿರುವ ಕೃಷಿ ಮತ್ತು ಸಣ್ಣ ಉದ್ದಿಮೆಗಳ ಪ್ರಗತಿಯು
ಕುಂಠಿತಗೊಳ್ಳುತ್ತದೆ. ಸರಕಾರದ ಮುಖ್ಯ ನೀತಿ ಕೃಷಿ, ಸಣ್ಣ ಮತ್ತು
ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಕೊಡುವುದಾಗಿದೆ. ಆದ್ದರಿಂದ
ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಕೃಷಿ ಹಾಗೂ ಸಣ್ಣ ಕೈಗಾರಿಕೆ~
ಗಳಿಗೆ ಸಾಲವನ್ನು ಪೂರೈಸುವುದರ ಮೂಲಕ ಆ ರಂಗಗಳಲ್ಲಿ ಅಭಿವೃದ್ಧಿ~
ಯನ್ನು ತಂದು ದೇಶದ ಬೆಳವಣಿಗೆಗೆ ನೆರವಾಗುವುದು ಅಗತ್ಯ.

(iv) ಯೋಜನೆಗಳಲ್ಲಿ ಕೃಷಿಗೆ ಆದ್ಯತೆ:

ಪಂಚವಾರ್ಷಿಕ ಯೋಜನೆಗಳಲ್ಲಿ ನಮ್ಮ ದೇಶದ ಮೂಲ ಉದ್ದಿಮೆಯಾದ
Page 135
ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. ವಾಣಿಜ್ಯ ಬ್ಯಾಂಕುಗಳು
ರೈತರಿಗೆ ಸಾಲ ನೀಡುವಾಗ ಭದ್ರತೆ ಹಾಗೂ ಮರುಪಾವತಿ ಮಾಡುವ
ಶಕ್ತಿಯನ್ನು ಗಮನಿಸುವುದರಿಂದ ರೈತರಿಗೆ ಸಾಲ ದೊರೆಯದೆ, ಕೃಷಿ
ಕ್ಷೇತ್ರದಲ್ಲಿ ಸುಧಾರಣೆಯು ಕಂಡುಬರದೆ, ಉತ್ಪನ್ನವು ಕುಂಠಿತಗೊಳ್ಳುತ್ತದೆ.
ಇದರಿಂದ ವಾಣಿಜ್ಯ ಬ್ಯಾಂಕುಗಳು ರಾಷ್ಟ್ರದ ಅಭಿವೃದ್ಧಿಗೆ ವರವಾಗುವುದರ
ಬದಲು ಮಾರಕವಾಗಿ ಪರಿಣಮಿಸುತ್ತದೆ. ಆದುದರಿಂದ ಬ್ಯಾಂಕುಗಳನ್ನು
ರಾಷ್ಟ್ರೀಕರಣಗೊಳಿಸುವುದು ಒಳ್ಳೆಯದು. ಹಾಗಾದಲ್ಲಿ ಈ ಬ್ಯಾಂಕುಗಳು
ತಮ್ಮ ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಿ ರೈತರಿಗೆ
ಸಾಲ ನೀಡಲು ಅನುಕೂಲವಾಗುತ್ತದೆ. ಆಗ ಕೃಷಿ ಉತ್ಪನ್ನ ಹೆಚ್ಚಿ,
ದೇಶವು ಸ್ವಾವಲಂಬಿಯಾಗಲು ಸಾಧ್ಯ.

(v) ಜನರ ಉಳಿತಾಯ

ವಾಣಿಜ್ಯ ಬ್ಯಾಂಕುಗಳನ್ನು ನಗರಗಳಲ್ಲಿ, ಪಟ್ಟಣಗಳಲ್ಲಿ ಮಾತ್ರ
ಕೇಂದ್ರೀಕರಿಸಲ್ಪಟ್ಟರೆ ಗ್ರಾಮಾಂತರ ಪ್ರದೇಶಗಳನ್ನು ಕಡೆಗಣಿಸಿದಂತಾಗು~
ತ್ತದೆ. ಆದರೆ ಭಾರತ 5,67,338 ಗ್ರಾಮಗಳನ್ನು ಹೊಂದಿರುವ ವಿಶಾಲ
ರಾಷ್ಟ್ರ. ಆದ್ದರಿಂದ ಗ್ರಾಮೀಣ ಅಭಿವೃದ್ಧಿಯಿಂದ ಮಾತ್ರ ಭಾರತದ
ಅಭಿವೃದ್ಧಿ ಸಾಧ್ಯ. ಕೃಷಿ ವಸ್ತುಗಳನ್ನು ಮಾರಾಟ ಮಾಡಿದ ನಂತರ ಬಂದ
ಹಣ಼ವು ಗ್ರಾಮೀಣ ಪ್ರದೇಶಗಳಲ್ಲಿ ರೈತರ ಬಳಿ ಸಾಕಷ್ಟು ಇರುತ್ತದೆ.
ಆದರೆ ಬ್ಯಾಂಕುಗಳು ಗ್ರಾಮಗಳಲ್ಲಿ ಇಲ್ಲದಿದ್ದರೆ ಅವರಲ್ಲಿ ಉಳಿತಾಯ
ಮಾಡುವ ಪ್ರವೃತ್ತಿ ಬೆಳೆಯದೆ, ಹಣವು ಮದುವೆ, ಮುಂಜ಼ಿ ಮುಂತಾದ
ಅನುತ಼್ಪಾದಕ ಕಾರ್ಯಗಳಿಗೆ ವೆಚ್ಚವಾಗಿ ಅವರ ಕೈ ಬರಿದಾಗುತ್ತದೆ.
ಆದ್ದರಿಂದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದರಿಂದ, ಅವು
ಗ್ರಾಮಗಳಲ್ಲಿ ಶಾಖೆಗಳನ್ನು ತೆರೆದು, ರೈತರೂ ಉಳಿತಾಯ ಮಾಡಿ ದೇಶದ
ಆರ್ಥಿಕಾಭಿವೃದ್ಧಿಯ ಕಾರ್ಯಗಳಲ್ಲಿ ಪಾಲುಗೊಳ್ಳುವಂತೆ ಮಾಡಬಹುದು.
ಆದ್ದರಿಂದ ರಾಷ್ಟ್ರೀಕರಣವು ಅತ್ಯಗತ್ಯವಾಗಿದೆ.

ಇದಕ್ಕೆ ಪ್ರತಿಯಾಗಿ ಕೆಲವರು ಬ್ಯಾಂಕುಗಳ ರಾಷ್ಟ್ರೀಕರಣವು
ಅನಗತ್ಯ ಎಂದು ವಾದಿಸಿದರು. ಈಗ ಅವುಗಳ ಬಗ್ಗೆ ತಿಳಿಯೋಣ.

Page 136

ರಾಷ್ಟ್ರೀಕರಣದ ವಿರುದ್ಧ ಮಂಡಿಸಿದ ವಾದಗಳು:

1. ಬ್ಯಾಂಕುಗಳ ರಾಷ್ಟ್ರೀಕರಣ ರಾಜಕೀಯ ದುರುದ್ದೇಶಗಳಿಂದ
ಕೂಡಿದ್ದಾಗಿದೆ. ಹೇಗೆಂದರೆ, ರಾಷ್ಟ್ರೀಕೃತ ಬ್ಯಾಂಕುಗಳ ಹಣವನ್ನು
ಅಭಿವೃದ್ಧಿಯ ಕಾರ್ಯಗಳಿಗೆ ಬಳಸುವ ಬದಲು ರಾಜಕೀಯ ಉದ್ದೇಶ~
ಗಳಿಗೆ ಬಳಸಲಾಗುವುದು.

2. ಬ್ಯಾಂಕುಗಳು ಕೆಲವೇ ಜನ ಉದ್ದಿಮೆದಾರರ ಕೈಯ್ಯಲ್ಲಿದ್ದರೂ,
ಬ್ಯಾಂಕುಗಳ ಡೈರೆಕ್ಟರುಗಳು ಸಾರ್ವಜನಿಕರು ಠೇವಣಿ ರೂಪದಲ್ಲಿಟ್ಟ ಹಣ~
ವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆನ್ನುವುದು ಸುಳ್ಳು.
ಏಕೆಂದರೆ ರಿಜರ್ವ್ ಬ್ಯಾಂಕು ವಾಣಿಜ್ಯ ಬ್ಯಾಂಕುಗಳ ಸಾಲ ನೀಡಿಕೆಯ
ಮೇಲೆ ಸಾಕಷ್ಟು ಅಧಿಕಾರ ಹೊಂದಿರುತ್ತದೆ. ಆದ್ದರಿಂದ ಡೈರೆಕ್ಟರುಗಳು
ಕೊಡುವ ಸಾಲವನ್ನು ನಿಲ್ಲಿಸುವ ಅಧಿಕಾರ ರಿಜರ್ವ್್ ಬ್ಯಾಂಕಿಗಿದೆ.
ಶೇ. 10 ರಷ್ಟು ಹಣವನ್ನು ಡೈರೆಕ್ಟರುಗಳು ಸಾಲವಾಗಿ ಬಳಸಿದರೆ ಉಳಿದ
90% ಸಾಲವನ್ನು ಇತರರಿಗೆ ನೀಡಬಹುದು. ಆದ್ದರಿಂದ ಈ ಉದ್ದೇಶ
ಕ್ಕಾಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದು ಅನಗತ್ಯ.

3. ವಾಣಿಜ್ಯ ಬ್ಯಾಂಕುಗಳನ್ನು ಸರಕಾರವು ರಾಷ್ಟ್ರೀಕರಣಗೊಳಿ~
ಸಿದರೆ ಅವು ಸರಕಾರದ ಬ್ಯಾಂಕುಗಳಾಗುತ್ತವೆ. ಆಗ ಅಧಿಕಾರಿಗಳ
ಆಲಸ್ಯ, ಆಡಳಿತದಲ್ಲಿಯ ತೊಡಕುಗಳು, ಭ್ರಷ್ಠಾಚಾರ, ಕಾರ್ಯಗಳನ್ನು
ಕೈಗೊಳ್ಳಲು ಅನುಸರಿಸುವ ವಿಳಂಬ ನೀತಿ, ಇತ್ಯಾದಿಗಳಿಂದಾಗಿ
ಬ್ಯಾಂಕುಗಳು ಲಾಭದಾಯಕವಾಗಿ ಕಾರ್ಯಗಳನ್ನು ನಿರ್ವಹಿಸುವುದಿಲ್ಲ.

4. ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳಲ್ಲಿ ರಾಜಕಾರಣಿಗಳ
ಪ್ರವೇಶ ಹೆಚ್ಚಾಗಿರುವುದರಿಂದ ಜನತೆ ಹಾಗೂ ದೇಶಕ್ಕೆ ಯಾವ ರೀತಿಯ
ಅನುಕೂಲವೂ ಆಗುವುದಿಲ್ಲ.

5. ವಾಣಿಜ್ಯ ಬ್ಯಾಂಕುಗಳು ಮುಖ್ಯವಾಗಿ ಠೇವಣಿದಾರರ ಹಣದ
ಮೇಲೆ ತಮ್ಮ ಕಾರ್ಯಗಳನ್ನು ನಿರ್ವಹಿಸುವ ಸಂಸ್ಥೆಗಳಾದ್ದರಿಂದ ನಷ್ಟ~
ದಿಂದ ತುಂಬಿದ ಕೃಷಿ ಉದ್ದಿಮೆಗೆ ಸಾಲ ನೀಡಲು ಮುಂದೆ ಬರದಿರುವುದು
ಸಹಜವೇ ಆಗಿದೆ.

6. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೌಕರರು ಹೆಚ್ಚು ಸಂಬಳವನ್ನು,
Page 137
ತುಟ್ಟಿ ಭತ್ಯಗಳನ್ನು ಬೇಡುವರು. ಸರಕಾರ ಕೊಡದಿದ್ದರೆ ಮುಷ್ಕರಗಳನ್ನು
ಹೂಡುವರು. ಆ ಸಂದರ್ಭಗಳಲ್ಲಿ ಬ್ಯಾಂಕುಗಳು ಸುಗಮವಾಗಿ ಕೆಲಸ~
ಗಳನ್ನು ಮಾಡಲಾಗುವುದಿಲ್ಲ.

ಈ ರೀತಿ ಬ್ಯಾಂಕು ರಾಷ್ಟ್ರೀಕರಣದ ಬಗ್ಗೆ ಕೆಲವರು ಪರವಾಗಿಯೂ,
ಕೆಲವರು ವಿರೋಧವಾಗಿಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ~
ದ್ದಾರೆ. ಆದಾಗ್ಯೂ ರಾಷ್ಟ್ರೀಕರಣದಿಂದ ಹಾನಿಗಿಂತಲೂ ಪ್ರಯೋಜನ~
ಗಳೇ ಹೆಚ್ಚು ಎನ್ನುವುದರಲ್ಲಿ ಸಂಶಯವಿಲ್ಲ. ದೇಶದ ಆರ್ಥಿಕ ಭದ್ರ
ಭವಿಷ್ಯದ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ. ರಾಷ್ಟ್ರೀಕರಣವು ಸಮಾಜ~
ವಾದಿ ಸಮಾಜವನ್ನು ಸ್ಥಾಪಿಸಲು ಸರಕಾರವು ಕೈಗೊಂಡ ಒಂದು ಮಹತ್ವದ
ದಿಟ್ಟ ಹೆಜ್ಜೆ. ಆದಕಾರಣ ರಾಷ್ಟ್ರೀಕೃತಗೊಂಡಿರುವ ಬ್ಯಾಂಕುಗಳು ಜನ~
ರಲ್ಲಿರುವ ಅಧಿಕ ಹಣವನ್ನು ಉಳಿತಾಯದ ಮೂಲಕ ಸಂಗ್ರಹಿಸಿ, ಆ ಹಣ~
ವನ್ನು ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿ, ದೇಶದ ಆರ್ಥಿಕ
ಪ್ರಗತಿಯನ್ನು ತ್ವರಿತಗೊಳಿಸಲು ಶ್ರಮಿಸಬೇಕು.

ರಾಷ್ಟ್ರೀಕೃತ ಬ್ಯಾಂಕುಗಳ ಸಾಧನೆ:

ರಾಷ್ಟ್ರೀಕರಣದ ನಂತರ ಭಾರತದ ಅರ್ಥ ವ್ಯವಸ್ಥೆಯಲ್ಲಿನ ಹಲ~
ವಾರು ಕ್ಷೇತ್ರಗಳಲ್ಲಿ ಹೊಸ ಚೈತನ್ಯ ಮೂಡುತ್ತಿದೆ. ಅವು ಶಕ್ತಿ
ಸಾಮರ್ಥ್ಯ, ಧೈರ್ಯಗಳಿಂದ ಮೈದುಂಬಿ ಮುಂದುವರಿಯುತ್ತಿವೆ. ಸಣ್ಣ
ಪುಟ್ಟ ರೈತರ ಮತ್ತು ಗೇಣಿದಾರರ ಸಾಲ ಮತ್ತಿತರ ಬೇಡಿಕೆಗಳನ್ನು
ಈಡೇರಿಸುವಲ್ಲಿ ರಾಷ್ಟ್ರೀಕರಣಕ್ಕೆ ಮೊದಲು ಸಹಕಾರಿ ಸಂಘಗಳು ಮತ್ತು
ವಾಣಿಜ್ಯ ಬ್ಯಾಂಕುಗಳು ಯಶಸ್ವಿಯಾಗಲಿಲ್ಲ, ಆದರೆ ರಾಷ್ಟ್ರೀಕರಣದ
ನಂತರ ಸಾಲದ ಕ್ಷೇತ್ರದ ಈ ಅಂತರವನ್ನು ಸಾಧ್ಯವಾದಷ್ಟು ಮಟ್ಟಿಗೆ
ತುಂಬುವ ಕಾರ್ಯವನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಹಿಸಿಕೊಡ~
ಲಾಗಿದೆ. ಇದರಿಂದಾಗಿ ಸಣ್ಣ ಪುಟ್ಟ ರೈತರಿಗೆ ರಕ್ಷಣೆ ದೊರೆತಂತಾಗಿದೆ.

ರಾಷ್ಟ್ರೀಕರಣದ ಸಾಮಾಜಿಕ ಧ್ಯೇಯವನ್ನು ಸಾಧಿಸಲು ರಾಷ್ಟ್ರೀಕೃತ
ಬ್ಯಾಂಕುಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಖ್ಯವಾಗಿ ಎರಡು
ಭಾಗಗಳಿಗೆ ವಿನಿಯೋಗಿಸಿವೆ.

Page 138

1) ಶಾಖಾ ವಿಸ್ತರಣೆ
2) ದೇಶದ ವಿವಿಧ ಪ್ರದೇಶಗಳಿಗೆ ಮತ್ತು ವಿವಿಧ ಕ್ಷೇತ್ರಗಳಿಗೆ
ಆರ್ಥಿಕ ನೆರವನ್ನು ಒದಗಿಸುವುದು.

Page 141

ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಕೃಷಿಕ್ಷೇತ್ರ:

ಬ್ಯಾಂಕುಗಳ ರಾಷ್ಟ್ರೀಕರಣಕ್ಕೂ, ಕೃಷಿಕ್ಷೇತ್ರಕ್ಕೂ ಅತಿ ನಿಕಟ
ಸಂಬಂಧವಿದೆ. ರೈತರಿಗೆ ಸಣ್ಣಪುಟ್ಟ ಉದ್ಯಮಿಗಳಿಗೆ ಮತ್ತು ರಫ್ತು
ವ್ಯವಹಾರಕ್ಕೆ ಹೆಚ್ಚಿನ ಹಣ ದೊರೆಯುವಂತೆ ಮಾಡಬೇಕೆನ್ನುವುದೇ
ಬ್ಯಾಂಕುಗಳ ರಾಷ್ಟ್ರೀಕರಣದ ಪ್ರಮುಖ ಗುರಿಯಾಗಿದೆ. ಮುಖ್ಯ
ಬ್ಯಾಂಕುಗಳನ್ನು ರಾಷ್ಟ್ರೀಕರಣದ ಸಂದರ್ಭದಲ್ಲಿ, ಗ್ರಾಮಾಂತರ ಪ್ರದೇಶ~
ದಲ್ಲಿನ ದೊಡ್ಡ ಜಮೀನ್ದಾರರಿಗಾಗಲೀ, ಹಣದ ಶಕ್ತಿಯುಳ್ಳವರಿಗಾಗಲೀ
ಸಾಲವನ್ನು ಒದಗಿಸಬೇಕೆಂಬ ಉದ್ದೇಶವಿರಲಿಲ್ಲ. ಇದಕ್ಕೆ ಬದಲಾಗಿ
ರಾಷ್ಟ್ರದ ಕೃಷಿ ಅಭಿವೃದ್ಧಿಯಲ್ಲಿ ಎಲ್ಲಾ ರೈತರೂ ಸಕ್ರಿಯವಾಗಿ ಪಾತ್ರ
ವಹಿಸಬೇಕು. ಅಲ್ಪಾವಧಿ ಸಾಲವನ್ನು ಪೂರೈಸುವುದರ ಮೂಲಕ ಅವರು
142
ಆರ್ಥಿಕ ಸ್ವಾತಂತ್ರ್ಯವನ್ನು ಪಡೆದು, ಆಧುನಿಕ ರೀತಿಯಲ್ಲಿ ಕೃಷಿಯನ್ನು
ಕೈಗೊಂಡು ಕೃಷಿ ಉತ್ಪನ್ನವನ್ನು ಹೆಚ್ಚಿಸಬೇಕೆಂಬ ಅಭಿಲಾಷೆಯನ್ನು ಆಗ
ಇಟ್ಟುಕೊಳ್ಳಲಾಗಿತ್ತು. ಆದುದರಿಂದ ಸಾಲವನ್ನು ನೀಡುವಾಗ ಲಾಭದ
ಗುರಿಯನ್ನು ಇಟ್ಟುಕೊಳ್ಳದೆ ರೈತರಿಗೆ ಸೌಲಭ್ಯಗಳನ್ನು ನೀಡುವ ಉದ್ದೇಶ
ವನ್ನು ಮಾತ್ರ ಇಟ್ಟುಕೊಳ್ಳಲಾಗಿತ್ತು. ಈ ದಿಸೆಯಲ್ಲಿ ರಾಷ್ಟ್ರೀಕೃತ
ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ಕೇವಲ ಒಂದು ವರ್ಷದಲ್ಲೇ ಪ್ರಗತಿ~
ಯನ್ನು ಸಾಧಿಸಿದವು. ಈ ಅವಧಿಯಲ್ಲಿ ಸಾಲ ಪಡೆದವರ ಸಂಖ್ಯೆ
ಇಮ್ಮಡಿ ಏರಿತು. ಸಾಲ ನೀಡಿಕೆ ಮೂರುಪಟ್ಟು ಆಯಿತು. ಇತ್ತೀಚೆಗೆ
ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಾಗುತ್ತಿದೆ. ಮೊದಲಿಗೆ
ರೈತರು ಹಳ್ಳಿಯ ಸಾಹುಕಾರರ ಶೋಷಣೆಗೆ ಒಳಗಾಗಿದ್ದು 24% ಗಿಂತಲೂ
ಹೆಚ್ಚು ಬಡ್ಡಿಯನ್ನು ತೆರಬೇಕಾಗಿತ್ತು. ಆದರೆ ಇಂದು ರಾಷ್ಟ್ರೀಕೃತ
ಬ್ಯಾಂಕುಗಳು ರೈತರ ಅಗತ್ಯಗಳಿಗೆ ತಕ್ಕಂತೆ 10 ರಿಂದ 15% ಬಡ್ಡಿಯ
ದರದಲ್ಲಿ ಸಾಲವನ್ನು ನೀಡುತ್ತಿರುವುದರಿಂದ ಅವರ ಸುದೈವದ ಬಾಗಿಲು
ತೆರೆದಂತಾಗಿದೆ. ಕೃಷಿಗೆ ಸಾಲ ಒದಗಿಸುವಲ್ಲಿ ವಾಣಿಜ್ಯ ಬ್ಯಾಂಕುಗಳು
ಇಂದು ಮಹತ್ವದ ಪಾತ್ರ ವಹಿಸುತ್ತಿವೆ. ಈ ಉದ್ದೇಶದ ಪೂರೈಕೆಗಾಗಿ
ಅವು ಸಾಕಷ್ಟು ದ್ರವ್ಯಸಂಪತ್ತು, ಸಂಘಟಿತ ಮೇಲ್ವಿಚಾರಣೆ ಹಾಗೂ
ಸಮರ್ಪಕ ಆಡಳಿತ ವ್ಯವಸ್ಥೆ, ತಾಂತ್ರಿಕಜ್ಞಾನ ಮೊದಲಾದ ಸವಲತ್ತು~
ಗಳನ್ನು ಹೊಂದಿವೆ. ಆದಾಗ್ಯೂ ಕೃಷಿ ಸಾಲವನ್ನು ಪರಿಣಾಮಕಾರಿಯಾಗಿ
ಪೂರೈಸುವಲ್ಲಿ ಅವು ಕೆಲವೊಂದು ಅಡಚಣೆಗಳನ್ನು ಎದುರಿಸಬೇಕಾಗಿದೆ.
ಇದರಿಂದಾಗಿ, ವಾಣಿಜ್ಯ ಬ್ಯಾಂಕುಗಳು ಈಗ ಸಾಧಿಸುತ್ತಿರುವ ಪ್ರಗತಿ೟ು
ಮುಂದೆಯೂ ಹೀಗೆ ಸಾಗಬಹುದೇ? ಸಣ್ಣ ರೈತರು ಸಕಾಲದಲ್ಲಿ
ಸಾಕಷ್ಟು ಸಾಲವನ್ನು ಸೂಕ್ತ ಬಡ್ಡಿಯಲ್ಲಿ ಪಡೆಯಬಲ್ಲರೇ? ಎಂಬ ಬಗ್ಗೆ
ಸಂಶಯ ಮೂಡುವಂತಾಗಿದೆ.

ವಾಣಿಜ್ಯ ಬ್ಯಾಂಕುಗಳು ಪ್ರತಿ ಹಳ್ಳಿಯಲ್ಲಿಯೂ ತಮ್ಮ ಶಾಖೆ~
ಗಳನ್ನು ತೆರೆಯಲಾರವು. ಇದಕ್ಕೆ ಕಾರಣ ಹಲವಾರು. ಹಳ್ಳಿಗಳಲ್ಲಿ
ಬ್ಯಾಂಕಿಂಗ್ ವ್ಯವಹಾರಕ್ಕೆ ಯೋಗ್ಯವಾದ, ಬೆಲೆಬಾಳುವ ವಸ್ತು ಮತ್ತು
ಹಣ ಇಡುವ ಭದ್ರ ಕೋಣೆಯನ್ನೊಳಗೊಂಡ ಸುಸಜ್ಜಿತ ಕಟ್ಟಡಗಳು ಹಳ್ಳಿಗಳಲ್ಲಿ
Page 143
ದೊರೆಯುವುದು ವಿರಳ. ಜೊತೆಗೆ ಹಳ್ಳಿಗಳ ಶಾಖೆಗಳಲ್ಲಿ ಕೆಲಸ
ಮಾಡಬಯಸುವ ಸಿಬ್ಬಂದಿ ವರ್ಗದ ಕೊರತೆ ಇರುವುದು ಮುಖ್ಯ ತೊಡ~
ಕಾಗಿದೆ. ಇದರಿಂದಾಗಿ ಹಳ್ಳಿಯ ರೈತರು ತಮ್ಮ ಕೃಷಿ ಸಾಲದ ಅವಶ್ಯ~
ಕತೆಗಾಗಿ ಪೇಟೆಗೆ ತಿರುಗಿ ಸಮಯವನ್ನು ಹಾಳು ಮಾಡಿಕೊಳ್ಳಲು ಇಷ್ಟ~
ಪಡದೆ ಮನೆಯ ಬಾಗಿಲಿನಲ್ಲೇ ಸಾಲ ಒದಗಿಸುವ ಸಾಹುಕಾರರ ಮೊರೆ
ಹೋಗುತ್ತಾರೆ. ಇದರ ಜೊತೆಗೆ ಅಲ್ಪಪ್ರಮಾಣದ ಆದಾಯ ಮತ್ತು
ಹೆಚ್ಚಿನ ಆಡಳಿತ ಖರ್ಚುಗಳು ಗ್ರಾಮೀಣ ಶಾಖೆಗಳ ವಿಸ್ತರಣೆಯಲ್ಲಿ
ಆತಂಕ ತರುತ್ತವೆ. ಉದಾಹರಣೆಗೆ, ಕಟ್ಟಡದ ಬಾಡಿಗೆ, ಸಿಬ್ಬಂದಿ ವೇತನ
ಮತ್ತು ಇತರ ಖರ್ಚುಗಳನ್ನು ಸರಿತೂಗಿಸಲು ಒಂದು ಹಳ್ಳಿಯ ಶಾಖೆಯು
ಕನಿಷ್ಠ 10 ಲಕ್ಷ ರೂ. ಠೇವಣಾತಿ ಮತ್ತು 6 ಲಕ್ಷ ರೂ. ಸಾಲದ ವ್ಯವ~
ಹಾರ ನಡೆಸಬೇಕಾಗುತ್ತದೆ. ಆದರೆ ಹೆಚ್ಚಿನ ಗ್ರಾಮೀಣ ಶಾಖೆಗಳು
ಈ ಮಟ್ಟವನ್ನು ಮುಟ್ಟಲು ಸಮರ್ಥವಾಗಿಲ್ಲ.

ಬೇರೆ ಬೇರೆ ರಾಜ್ಯಗಳು ಅಳವಡಿಸಿಕೊಂಡ ಭೂ ಮಸೂದೆಗಳು
ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಕೃಷಿಗೆ ಸಾಲ ನೀಡುವಲ್ಲಿ ಎದುರಿಸ~
ಬೇಕಾದ ಇನ್ನೊಂದು ತೊಂದರೆ. ಗ್ರಾಮೀಣ ಜನಜೀವನದ ಪರಿಚಯ
ವಿದ್ದು, ಅವರಿಗೆ ಸಕಾಲದಲ್ಲಿ ಸಾಲ ಒದಗಿಸುವ ವ್ಯವಸ್ಥೆ ಮಾಡುವ,
ಒದಗಿಸಿದ ಸಾಲ ಸರಿಯಾಗಿ ಬಳಕೆಯಾಗಿದೆಯೇ ಎಂದು ತನಿಖೆ ನಡೆಸುವ,
ರೈತರ ಬೆಳೆಯ ಯಶಸ್ಸಿಗೆ ಸರಿಯಾದ ಮಾರ್ಗದರ್ಶನ ನೀಡುವ, ಬೆಳೆದ
ಬೆಳೆಯನ್ನು ಯೋಗ್ಯಬೆಲೆಗೆ ಮಾರಾಟ ಮಾಡುವಂತೆ ನೋಡಿಕೊಳ್ಳುವ
ಮೇಲ್ವಿಚಾರಣೆ ಸಿಬ್ಬಂದಿಯು ಸಾಕಷ್ಟು ಪ್ರಮಾಣದಲ್ಲಿ ದೊರೆಯದಿರುವುದು
ವಾಣಿಜ್ಯ ಬ್ಯಾಂಕುಗಳ ಕೃಷಿ ಸಾಲ ನೀಡಿಕೆಗೆ ಮತ್ತೊಂದು ತೊಂದರೆ~
ಯಾಗಿದೆ.

ಅನೇಕ ಹಳ್ಳಿಗಳಲ್ಲಿ ವಾಣಿಜ್ಯ ಬ್ಯಾಂಕು ದೊಡ್ಡ ಪ್ರಮಾಣದ ರೈತರ
ಸಹಾಯಕ ಎಂಬ ಭಾವನೆ ಬೇರೂರಿರುವುದು. ಸಾಮಾನ್ಯ ರೈತರು ಈ
ಬ್ಯಾಂಕುಗಳ ಸಹಾಯ ಪಡೆಯುವಲ್ಲಿ ಅಡ್ಡಿಯಾಗಿದೆ. ಇದೆಲ್ಲದರ ಜೊತೆಗೆ
ಬ್ಯಾಂಕಿನ ಮುಖ್ಯ ಕಚೇರಿ ಅಥವಾ ಪ್ರಾದೇಶಿಕ ಕಚೇರಿಗಳಿಂದ ಬಹು
ದೂರದ ಹಳ್ಳಿಗಳಲ್ಲಿರುವ ಶಾಖೆಗಳಿಗೆ ಸಂಪರ್ಕ ವ್ಯವಸ್ಥೆಯು ಇಲ್ಲದಿರುವುದು
ಒಂದು ಮುಖ್ಯ ತೊಡಕಾಗಿದೆ.

Page 144

ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ವ್ಯವಸ್ಥಿತ ರಚನೆಯ ಶಿಸ್ತು,
ಸಂಪ್ರದಾಯಗಳ ಭಂಡಾರಗಳಾಗಿವೆ. ಆದ್ದರಿಂದ ಸಾಮಾನ್ಯ ರೈತರಿಗೆ
ಕೃಷಿಗೆ ಅಗತ್ಯವಾದ ಸಾಲವನ್ನು ಒದಗಿಸುವ ರಾಷ್ಟ್ರೀಕೃತ ವಾಣಿಜ್ಯ
ಬ್ಯಾಂಕುಗಳಿಗೆ ಇರುವ ಮೇಲಿನ ತೊಡಕುಗಳನ್ನು ಪರಿಹರಿಸಿ ಅವರಿಗೆ
ದೇಶದ ಪ್ರಾಥಮಿಕ ಅವಶ್ಯಕತೆಗಳನ್ನು ಒದಗಿಸುವುದು ಅಗತ್ಯ ಹಾಗೂ
ಅನಿವಾರ್ಯವಾಗಿದೆ. ಹಾಗಾದಲ್ಲಿ ಅವು ಕೃಷಿ ಸಾಲವನ್ನು ಪೂರೈಸುವ
ಯೋಗ್ಯ ಸಂಸ್ಥೆಗಳಾಗುವುದರಲ್ಲಿ ಸಂಶಯವಿಲ್ಲ. ಈ ದಿಸೆಯಲ್ಲಿ ವಾಣಿಜ್ಯ
ಬ್ಯಾಂಕುಗಳು ಕೃಷಿ ಸಾಲದ ನೀಡಿಕೆಯ ಬಗ್ಗೆ ಕೆಲವು ಮುಖ್ಯ ಅಂಶ~
ಗಳನ್ನು ಗಮನಿಸಬೇಕು.

(i) ಮರುಪಾವತಿ:

ಸಾಲ ನೀಡುವುದು ಸುಲಭ. ಆದರೆ ಅದರ ಮರುಪಾವತಿಯಾಗು~
ವಂತೆ ನೋಡಿಕೊಳ್ಳುವುದು ಕಷ್ಟದ ಕಾರ್ಯ. ಆದ್ದರಿಂದ ಸರಿಯಾದ
ಸಮಯಕ್ಕೆ ಸಾಲದ ಮರುಪಾವತಿ ನಡೆಯುತ್ತಾ ಹೋಗುವಂತೆ ನೋಡಿ~
ಕೊಳ್ಳುವುದು ವಾಣಿಜ್ಯ ಬ್ಯಾಂಕುಗಳ ಮುಖ್ಯ ಕರ್ತವ್ಯವಾಗಿದೆ. ಮರು~
ಪಾವತಿಯ ಬಗ್ಗೆ ಈ ಬ್ಯಾಂಕುಗಳು ಸಡಿಲತೆಯನ್ನು ವ್ಯಕ್ತಪಡಿಸಿದಲ್ಲಿ,
ರೈತರು ಸಾಲವನ್ನು ದುರುಪಯೋಗಪಡಿಸಿಕೊಳ್ಳಬಹುದು.

(ii) ಠೇವಣಿ ಸಂಗ್ರಹಣೆ :

ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವುದರೊಂದಿಗೆ
ಅವರಲ್ಲಿ ಉಳಿಯಬಹುದಾದ ಅಧಿಕ ಹಣವನ್ನು ಠೇವಣಿ ರೂಪದಲ್ಲಿ
ಆಕರ್ಷಿಸಬೇಕು.

(iii) ಮೇಲ್ವಿಚಾರಣೆ:

ರಾಷ್ಟ್ರೀಕೃತ ಬ್ಯಾಂಕುಗಳು ತಾವು ರೈತರಿಗೆ ನೀಡಿದ ಸಾಲವು
ಉತ್ಪಾದನಾ ಕ್ರಿಯೆಯಲ್ಲಿ ಬಳಸಲಾಗುತ್ತಿದೆಯೇ ಇಲ್ಲವೇ ಎಂಬುದರ
ಬಗ್ಗೆ ಆಗಾಗ್ಗೆ ಮೇಲ್ವಿಚಾರಣೆ ನಡೆಸುವುದು ಅಗತ್ಯ.

ಇಂದು ವಾಣಿಜ್ಯ ಬ್ಯಾಂಕುಗಳು ರೈತರಿಗೆ ವೈಯಕ್ತಿಕವಾಗಿ ಸಾಲ
Page 145
ಕೊಡಲು ಮುಂದಾಗಿರುವುದರಿಂದ ಕೃಷಿ ಕ್ಷೇತ್ರದ ವ್ಯವಸ್ಥೆ ಅಗತ್ಯವಾಗಿದೆ.
ಇಂದಿನ ಸಮಾಜದಲ್ಲಿ ನಮ್ಮ ರೈತರು ಮುಖ್ಯವಾಗಿ ಸಣ್ಣ ರೈತರು ಒಂದು
ಪ್ರಮುಖ ಅಂಗವಾಗಿದ್ದಾರೆ. ಆದ್ದರಿಂದ ಅವರು ಭಾರತದಂತಹ ಹಿಂದುಳಿದ
ದೇಶಕ್ಕೆ ಹೊರೆಯಾಗದಂತೆ ನೋಡಿಕೊಳ್ಳುವುದು ಅವಶ್ಯ. ಇದಕ್ಕಾಗಿ
ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸಾಲದ ನೆರವನ್ನು ಅವರು ಪೂರ್ಣ~
ವಾಗಿ ಯುಕ್ತ ರೀತಿಯಿಂದ ಬಳಸಿಕೊಳ್ಳಲು ಸಾಧ್ಯವಾಗುವಂತೆ ಕೃಷಿ
ವ್ಯವಸ್ಥೆಯ್ನು ರೂಪಿಸಬೇಕು. ಕೃಷಿಯ ಈ ಪುನರ್್ವ್ಯವಸ್ಥೆಯಲ್ಲಿ
ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ಮಹತ್ವದ ಪಾತ್ರ ವಹಿಸಬಲ್ಲವು.
ಈ ದಿಸೆಯಲ್ಲಿ ಅವು ಮೂರು ಮುಖ್ಯ ಕಾರ್ಯಗಳನ್ನು ಕೈಗೊಳ್ಳಬೇಕಾಗು~
ತ್ತದೆ. ಅವು ಯಾವುವೆಂದರೆ

1. ನೈಸರ್ಗಿಕ ಅಡೆ-ತಡೆಗಳನ್ನು ನೀಗಲು ಸಾಧ್ಯವಾಗುವಂತಹ
ಪರಿಣಾಮಕಾರಕ ಯೋಜನೆಯನ್ನು ರೂಪಿಸಿ ಜಾರಿಗೆ ತರುವುದು.
2. ರಾಷ್ಟ್ರೀಯ ಮಟ್ಟದಲ್ಲಿ ಬೆಳೆ ಯೋಜನೆ ಕಾರ್ಯಕ್ರಮವನ್ನು
ಅನುಷ್ಠಾನಕ್ಕೆ ತರುವುದು.
3. ಶಿಕ್ಷಣದ ಮೂಲಕ ರೈತರ ಅಜ್ಞಾನ ನಿವಾರಣೆ ಮತ್ತು
ಸಹಕಾರದ ಮೂಲಕ ಅವರ ಆರ್ಥಿಕ ದೌರ್ಬಲ್ಯವನ್ನು ತೊಡೆದು
ಹಾಕುವುದು.

ಈ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಧಿಕ
ಪ್ರಮಾಣದ ಬಂಡವಾಳ ಬೇಕಾಗುತ್ತದೆ. ರಾಷ್ಟ್ರೀಕರಣಕ್ಕೆ ಮೊದಲು
ನಮ್ಮಲ್ಲಿ ಹಣದ ಅಭಾವವಿತ್ತು. ಆದರೆ ಈಗ ರಾಷ್ಟ್ರೀಕೃತ ವಾಣಿಜ್ಯ
ಬ್ಯಾಂಕುಗಳಿಂದ ಇದಕ್ಕೆ ಬೇಕಾಗುವ ಬಂಡವಾಳ ದೊರೆಯುತ್ತದೆ.
ಇದಕ್ಕಾಗಿ ಮೊದಲು ರಾಜ್ಯಗಳನ್ನು ವಿವಿಧ ಪ್ರದೇಶಗಳಾಗಿ ವಿಂಗಡಿಸ~
ಬೇಕು. ಭೂ ಅಭಿವೃದ್ಧಿ, ಪ್ರವಾಹನಿಯಂತ್ರಣ ನೀರಾವರಿ ಹಾಗೂ
ಕ್ರಿಮಿನಾಶಕಗಳ ಬಗೆಗೆ ಯೋಗ್ಯ ಯೋಜನೆ ಸಿದ್ಧಪಡಿಸಬೇಕು. ಇದಕ್ಕಾಗಿ
ವೆಚ್ಚಮಾಡಿದ ಹಣವನ್ನು ಆಯಾ ಪ್ರದೇಶದ ರೈತರಿಗೆ ಕೊಡಮಾಡಿದ
ಸಾಲವೆಂದು ಪರಿಗಣಿಸಿ ಅದನ್ನು ಅವರಿಂದ ದೀರ್ಘ ಕಾಲಾವಧಿಯಲ್ಲಿ
ಹಿಂದಕ್ಕೆ ಪಡೆಯಬಹುದು. ಇದು ಅಭಿವೃದ್ಧಿ ತೆರಿಗೆಯಂತಿರುತ್ತದೆ.
Page 146
ಈ ರೀತಿ ಕೃಷಿಗೆ ಒಂದು ಸಮರ್ಪಕವಾದ ವ್ಯವಸ್ಥೆ ಆದಾಗ, ರೈತರು ಆ
ಸೌಲಭ್ಯಗಳ ಪೂರ್ಣ ಬಳಕೆಗೆ ಮುಂದಾಗುತ್ತಾರೆ. ಇದರಿಂದ ಭೂಮಿಯ
ದುರುಪಯೋಗವಾಗುವುದು ನಿಲ್ಲುತ್ತದೆ. ಆದ್ದರಿಂದ ರಾಷ್ಟ್ರೀಯ ಮಟ್ಟ~
ದಲ್ಲಿ ಕೃಷಿ ನೀತಿಯನ್ನು ರೂಪಿಸುವುದರೊಂದಿಗೆ ಬೆಳೆ ಯೋಜನೆ ಕಾರ್ಯ~
ಕ್ರಮವನ್ನು ಜಾರಿಗೆ ತರಬೇಕು. ಉತ್ತಮ ತಳಿ, ಗೊಬ್ಬರ, ಸಲಕರಣೆ~
ಗಳನ್ನು ತಕ್ಕ ಕಾಲದಲ್ಲಿ, ಸೂಕ್ತ ಬೆಲೆಗೆ ರೈತರಿಗೆ ಒದಗಿಸಬೇಕು. ಈ
ಮೂಲಕ ರೈತರಿಗೆ ಉತ್ತಮ ಬೆಳೆ ಹಾಗೂ ಬೆಲೆಯ ಭರವಸೆಯನ್ನು
ಮೂಡಿಸಬೇಕು. ಕೃಷಿಯ ಸಫಲತೆಯ ಮೂಲ ರೈತರು; ಭೂಮಿಯಲ್ಲ.
ಅವರಿಂದು ಅಧಿಕ ಉತ್ಪಾದನೆಯ ಪ್ರಾಮುಖ್ಯವನ್ನು ಅರಿತಿದ್ದಾರೆ.
ಆದ್ದರಿಂದ ಶಿಕ್ಷಣ ಮತ್ತು ಸಹಕಾರದ ಮೂಲಕ ಅವರು ಸ್ವಯಂಪೂರ್ಣತೆ~
ಯನ್ನು ಸಾಧಿಸಲು ನೆರವಾಗಬೇಕು. ಆದರೆ ಈಗಿರುವ ಕೃಷಿಯ
ಅಸಮರ್ಪಕ ವ್ಯವಸ್ಥೆಯನ್ನು ತೊಡೆದು ಹಾಕಿ ಪುನರ್್ವ್ಯವಸ್ಥೆಯನ್ನು
ತರುವುದು ಸುಲಭವಾದ ಕೆಲಸವಲ್ಲ. ಸಮರ್ಥ ರಾಷ್ಟ್ರೀಕೃತ ವಾಣಿಜ್ಯ
ಬ್ಯಾಂಕುಗಳಿಂದ ಮಾತ್ರ ಈ ಹೊಣೆ ಹೊರಲು ಸಾಧ್ಯ. ಇಂದು ಬ್ಯಾಂಕು~
ಗಳ ರಾಷ್ಟ್ರೀಕರಣವು ಕೃಷಿ ಕ್ಷೇತ್ರದಲ್ಲಿ ಹೊಸ ಆಸೆಯನ್ನು ಮೂಡಿಸಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ರೈತರ ವಿಶ್ವಾಸವನ್ನು ಪಡೆಯುತ್ತಿವೆ. ಈ
ವಿಶ್ವಾಸ ಸಫಲವಾಗಬೇಕಾದರೆ ಬ್ಯಾಂಕುಗಳ ರಾಷ್ಟ್ರೀಕರಣದ ಎಲ್ಲಾ
ಲಾಭಗಳನ್ನು ಸಣ್ಣ ರೈತರಿಗೆ ಒದಗಿಸಬೇಕು. ಇಲ್ಲವಾದರೆ ಈ ಸೌಲಭ್ಯ~
ಗಳು ಕೇವಲ ದೊಡ್ಡ ರೈತರ ಪಾಲಾಗಿ ಸಣ್ಣ ರೈತರು ಕಣ್ಣೀರಿಡುತ್ತಾ
ಬಾಳಬೇಕಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಇದಕ್ಕೆ ಎಂದಿಗೂ
ಅವಕಾಶ ಕೊಡಬಾರದು. ಈ ದಿಸೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ
ಸದ್ಯದ ಸಾಲ ನೀತಿಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ. ಸಾಲ
ಸೌಲಭ್ಯಗಳನ್ನು ಒದಗಿಸುವಾಗ ಆಸ್ತಿಗಿಂತಲೂ ಆ ಸಾಲದ ಸರಿಯಾದ
ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಸಾಲ಼ದ ಮೇಲೆ ಕಟ್ಟು~
ನಿಟ್ಟಾದ ಮೇಲ್ವಿಚಾರಣೆಯಿಂದ ಕೃಷಿಯಲ್ಲಿ ಅಧಿಕ ಉತ್ಪಾದನೆಯನ್ನು
ಸಾಧಿಸಬಹುದು. ಬ್ಯಾಂಕುಗಳ ದಕ್ಷತೆ ಅಡಗಿರುವುದು ಇಲ್ಲಿಯೇ.
ಬ್ಯಾಂಕುಗಳು ಕೇವಲ ಸಾಲ ನೀಡುವ ಸಂಸ್ಥೆಗಳಷ್ಟೇ ಅಲ್ಲ, ಕಷ್ಟಕಾಲದಲ್ಲಿ
Page 147
ನೆರವು, ಸಲಹೆ, ಸಹಕಾರಗಳನ್ನು ನೀಡುವ ಸ್ನೇಹ ಬಂಧುಗಳು ಎಂಬುದರ
ಅರಿವು ರೈತರಲ್ಲಿ ಮೂಡಬೇಕು. ಕೃಷಿ ಸಾಲ ಕ್ಷೇತ್ರದಲ್ಲಿ ವಾಣಿಜ್ಯ
ಬ್ಯಾಂಕುಗಳ ಪಾತ್ರ ಚೈತನ್ಯದಾಯಕವಾಗಿದ್ದಲ್ಲಿ ಮಾತ್ರ ಇದನ್ನು ಸಾಧಿ
ಸಲು ಸಾಧ್ಯ. ಇದಕ್ಕಾಗಿ ಸಮರ್ಪಕವಾದ ಸಾಲ ಯೋಜನೆಯನ್ನು
ರೂಪಿಸಬೇಕು. ಕೃಷಿ ಸಾಲ ಕ್ಷೇತ್ರದಲ್ಲಿ ಅಪಾಯಗಳನ್ನು ಕಡಿಮೆ ಮಾಡಿ
ದಲ್ಲಿ ಕೃಷಿ ಸಾಲ ಯೋಜನೆಯು ಯಶಸ್ವಿಯಾಗಲು ಸಾಧ್ಯ. ಆದ್ದರಿಂದ
ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲದ ಆಡಳಿತಕ್ಕಾಗಿ ಯೋಗ್ಯ
ಸಿಬ್ಬಂದಿಯನ್ನು ಹೊಂದಿರಬೇಕು. ಈ ದಿಸೆಯಲ್ಲಿ ಸಿಂಡಿಕೇಟ್ ಬ್ಯಾಂಕು
ಕೃಷಿ ಸಾಲ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಸಾಧಿಸಿ, ರಾಷ್ಟ್ರೀಯ ಸಾಲ
ಸಂಸ್ಥೆಯು ನಿರ್ದಿಷ್ಟಪಡಿಸಿದ ಗುರಿ~
ಗಿಂತಲೂ ಹೆಚ್ಚಿನ ಮಟ್ಟವನ್ನು ತಲುಪಿದೆ. ಸರಕಾರದ ಉದ್ದೇಶದಂತೆ
ರಾಷ್ಟ್ರೀಕೃತ ಬ್ಯಾಂಕುಗಳು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಿದಲ್ಲಿ
ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಬಹುದು.

X

﻿
ಎಲ್.ಎಸ್. ಶೇಷಗಿರಿ ರಾವ್
03-05-21
Kannada
-13-
ಮಾಸ್ತಿ ವೆಂಕಟೇಶ ಅಯ್ಯಂಗಾರ್

ಒಮ್ಮೆ ಕಂಡರೆ ಮರೆಯಲಾಗದ ವ್ಯಕ್ತಿತ್ವ ಮಾಸ್ತಿಯವರದು.

ಒಮ್ಮೆ ಓದಿದರೆ ಮರೆಯಲಾಗದ ರಚನೆ `ಶ್ರೀನಿವಾಸ'ರ (ಮಾಸ್ತಿಯವರು
`ಶ್ರೀನಿವಾಸ' ಕಾವ್ಯನಾಮವನ್ನೇ ಬಳಸಿದರು) ಶ್ರೇಷ್ಠ ಸಾಹಿತ್ಯ ಕೃತಿಗಳು.

`ಶ್ರೀನಿವಾಸ'ರ ಬರಹದಲ್ಲಿ ಮಾಸ್ತಿಯವರ ಹಾಸ್ಯಪ್ರಜ್ಞೆ, ಮನುಷ್ಯ
ಸ್ವಭಾವದಲ್ಲಿನ ವಿಶ್ವಾಸ, ಸಾಮಾನ್ಯ ಮನುಷ್ಯನ ಘನತೆಯಲ್ಲಿ ಗೌರವ ಇವೆಲ್ಲವನ್ನೂ
ಕಾಣಬಹುದಾದರೂ, ನನಗೆ ಬಹುಬಾರಿ ಆಶ್ಚರ್ಯವನ್ನುಂಟು ಮಾಡಿರುವುದು
ಮಾಸ್ತಿಯವರಿಗೂ, `ಶ್ರೀನಿವಾಸ'ರಿಗೂ ಇರುವ ವ್ಯತ್ಯಾಸ.

ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಒಂದು ಇಂಗ್ಲಿಷ್ಟ ಪತ್ರಿಕೆಗಾಗಿ ನಾನು
ಅವರೊಡನೆ ಸಂದರ್ಶನ ನಡೆಸಿದೆ. ಆಗ ಅವರು ಹೇಳಿದರು : "ಜಗತ್ತೆಲ್ಲ
ನಡೆಯುವುದು ಭಗವಂತನ ಇಚ್ಛೆಯಂತೆ, ಮನುಷ್ಯರ ಇಚ್ಛೆಯಂತೆ ಏನೂ
ಆಗುವುದಿಲ್ಲ".

ನಾನು ಕೇಳಿದೆ. "ಎಂದರೆ, ನೀವು ಮನುಷ್ಯನ ನೈತಿಕ ಹೊಣೆಯ ಕಲ್ಪನೆಗೇ
ಪೆಟ್ಟು ಹಾಕಿದಂತಾಯಿತು. ಮನುಷ್ಯನ ಹೊಣೆ ಏನೂ ಇಲ್ಲವೆ ?"

ಅವರೆಂದರು. "ಮನುಷ್ಯ ಅವನ ಸಂಕಲ್ಪದ ಮಟ್ಟಿಗೆ ಹೊಣೆ ಎಂದೂ
ಹೇಳಲಾಗುವುದಿಲ್ಲ, ಅವನಿಗೆ ಯೋಚನೆ ಬರುವುದೂ ದೈವೇಚ್ಛೆಯಿಂದ. ಇವತ್ತು
ನಮ್ಮ ಮನೆಗೆ ಬರಬೇಕೆಂದು ನಿಮಗನ್ನಿಸಿದ್ದು ದೇವರ ಇಚ್ಛೆ"

ನಾನೆಂದೆ, "ಮನುಷ್ಯನ ಹೊಣೆ ಇಲ್ಲ ಎಂದರೆ, ಎಲ್ಲ ದೇವರ ಇಚ್ಛೆ ಎಂದರೆ,
ಶ್ರೇಷ್ಠ ಸಾಹಿತ್ಯವೇ ಸೃಷ್ಟಿಯಾಗುವಂತಿಲ್ಲ".

ಮಾಸ್ತಿಯವರು ತಮ್ಮ ನಿಲುವನ್ನು ಮಾರ್ಪಡಿಸಲಿಲ್ಲ.

ಅವರ ನೆನಪುಗಳ ಭಂಡಾರ `ಭಾವ'ದಲ್ಲಿ ಅವರು ಮೆಚ್ಚಿಕೆಯಿಂದ ಅವರ
ತಾತನ ಚಿಂತನೆಯನ್ನು ಸಂಗ್ರಹವಾಗಿ ಹೇಳಿದ್ದಾರೆ: ಜಗತ್ತಿನ ಎಲ್ಲ ವ್ಯಾಪಾರವೂ
ಒಂದು ಮಹಾ ಅದ್ಭುತವಾದ ಶಕ್ತಿಯ ಸಂಕಲ್ಪದಂತೆ ನಡೆಯುತ್ತಿದೆ. ಅದನ್ನು ಬಿಟ್ಟು
ಯಾವುದೂ ನಡೆಯುವಂತಿಲ್ಲ. ಮನುಷ್ಯ ತನ್ನನ್ನು ನಡೆಸುವ ದೈವ ಯಾವ ದಾರಿಯಲ್ಲಿ
ನಡೆಸುತ್ತದೆ ಆ ದಾರಿಯಲ್ಲಿ ನಡೆಯಬೇಕು. ದೈವ ನಡೆಸುತ್ತಿದೆ ಎಂದು ಧೈರ್ಯದಿಂದ
-14-
ಇರಬೇಕು. ಕಾಪಾಡು ಎಂದು ಬೇಡಿದವನನ್ನು ದೈವ ಕೈಬಿಡದೆ ಕಾಯುತ್ತದೆ. ಈ
ವಿಷಯದಲ್ಲಿ ಸಂದೇಹವಿಲ್ಲ.

ಹಾಗಾದರೆ `ಗೌತಮಿ ಹೇಳಿದ ಕತೆ,' `ಆಚಾರ್ಯರ ಪತ್ನಿ,' `ವೆಂಕಟಿಗನ
ಹೆಂಡತಿ,' `ನಮ್ಮ ಮೇಷ್ಟು', `ವಿಚಿತ್ರ ಪ್ರೇಮ,' `ಟಾಲ್್ಸ್ಟಾಯ್ ಮಹರ್ಷಿಯ
ಭೂರ್ಜ ವೃಕ್ಷಗಳು' ಎಲ್ಲ ಏನಾದವು? ವೀರಮ್ಮಾಜಿ, ಚಿಕವೀರ ರಾಜೇಂದ್ರ ಇವರ
ಹೊಣೆ ಏನು? ಯಶೋಧರೆಯ ನೋವಿಗೆ ಕಣ್ಣೀರೇಕೆ ಮಿಡಿಯಬೇಕು?

ಈ ಮಟ್ಟಿಗೆ ಮಾಸ್ತಿ ಬೇರೆ, `ಶ್ರೀನಿವಾಸ' ಬೇರೆ. ನಿಜಜೀವನದಲ್ಲಿ
ಮಾಸ್ತಿಯವರ ದೈವಶ್ರದ್ಧೆ, ಹಲವು ನೋವು ಕಷ್ಟಗಳನ್ನು, ಅನ್ಯಾಯಗಳನ್ನು ಸಹಿಸಲು
ಶಕ್ತಿಯನ್ನು ನೀಡಿರಬೇಕು. ಸಕಾರಣವಾಗಿ ಮಂತ್ರಿಯಾಗುವ ಭರವಸೆಯನ್ನು
ಇಟ್ಟುಕೊಂಡವರು ಅನಿರೀಕ್ಷಿತವಾಗಿ ತಮ್ಮ ಅಧಿಕಾರದಿಂದಲೇ ನಿವೃತ್ತಿಯನ್ನು
ಕೇಳಬೇಕಾದ ಪ್ರಸಂಗ ಬಂದಾಗ ತಮ್ಮ ಅನುಭವವನ್ನು ಹೇಳುತ್ತಾರೆ; "ನಾನು
ಹಾಸಿಗೆಯಲ್ಲಿ ಕುಳಿತು ಅತ್ತೆನು. ಎರಡು ನಿಮಿಷದ ನಂತರ ತಡೆದುಕೊಂಡೆನು.
`ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸ್ಥಾನವನ್ನು ಕೊಟ್ಟ ದೈವ ಇನ್ನು ಈ ಪದವಿಯ
ಹಂಬಲ ಸಾಕೆಂದು ಹೇಳಿದೆ. ಇದಕ್ಕೆ ವ್ಯಥೆಪಡುವುದು ಸರಿಯಲ್ಲ" (ಇಷ್ಟು
ಸುಲಭವಾಗಿ ಸಮಾಧಾನ ಬರಲಿಲ್ಲ ಎಂದೂ ಒಪ್ಪಿಕೊಳ್ಳುತ್ತಾರೆ: "ವ್ಯಥೆ ಪಡುವುದು
ಸರಿಯಲ್ಲ. ಸರಿ. ಆದರೆ ವ್ಯಥೆ ತಪ್ಪಿದ್ದಲ್ಲ. ಗೌರವ ಲಭಿಸಿದ ದಿನ ಸಂತೋಷಪಟ್ಟಂತೆ
ಅವಮರ್ಯಾದೆ ಆದ ದಿನ ದುಃಖ ಪಡಬೇಕು. ಅಂದು ನಗೆ ಹೇಗೆ. ಇಂದು ಅಳು
ಹಾಗೆ, ಸಹಜ")

ಆದರೆ ಶ್ರೀನಿವಾಸರು ಕಂಡದ್ದು ಮನುಷ್ಯನ ಸಾಧ್ಯತೆಯನ್ನು, ಅವನೊಳಗೆ
ಇರುವ ಶಕ್ತಿಯ ಸಾಧ್ಯತೆಯನ್ನು ಕೆಲವರು ಹೇಳುತ್ತಾರೆ. ಅವರು ಬದುಕಿನ ಸಮಸ್ಯೆಗಳ
ಪರಿಹಾರವನ್ನು ಪರಂಪರೆಯಲ್ಲಿ ಕಂಡರು, ಸಂಪ್ರದಾಯದಲ್ಲಿ ಕಂಡರು ಎಂದು.
ಸಾರ್ಥಕ ಜೀವನವನ್ನು ಸಾಧಿಸಿದ ಹಲವು ಚೇತನಗಳನ್ನು ಅವರು ಸೃಷ್ಟಿಸಿದರು.
ಮೂರು ಇಂತಹ ಚೇತನಗಳನ್ನು ಗಮನಿಸೋಣ. `ಮಂತ್ರೋದಯ'ದ ಮಹರ್ಷಿ
ವಾಮದೇವ ದ್ವೈಪಾಯನ ಆರುಣೇಯರು, ಹಿರಿಯರು `ನೂರು ವರ್ಷ ಲೋಕದ
ಕರ್ಮವನ್ನು ಮಾಡಿಕೊಂಡು ಬದುಕು' ಎಂದು ಹೇಳಿದಂತೆ ಬದುಕಿ ನೂರು ವರ್ಷ
ತುಂಬಿದಾಗ ಸ್ವಇಚ್ಛೆಯಿಂದ ಈ ಲೋಕವನ್ನು ಬಿಟ್ಟವರು. ತಮ್ಮ ಆಶ್ರಮದ
ಒಂದೊಂದು ಗಿಡವನ್ನೂ ಪ್ರೀತಿಯಿಂದ ಬೆಳೆಸಿದ್ದಾರೆ. ಒಂದೊಂದು ಗಿಡದ
ಚರಿತ್ರೆಯನ್ನೂ ಬಲ್ಲರು. ಕಡೆಯ ದಿನ ಅವರು ಮಾಡಿದ್ದೇನು ? ಬೆಳಿಗ್ಗೆ ಎಲ್ಲ
ಕರ್ಮಗಳನ್ನು ಮುಗಿಸಿ ಮಲ್ಲಿಗೆಯ ಬಳಿಯ ಪಾತಿ ಸರಿಮಾಡುತ್ತಿದ್ದಾರೆ. ಯಾರೋ
"ಇದೇನು ಈ ಕೆಲಸವನ್ನು ನೀವೇ ಮಾಡಬೇಕೆ" ಎಂದರೆ "ಹೌದಪ್ಪ ಇದು ನನ್ನ
ಕೆಲಸ. ತಾಯಿ ತನ್ನ ಮಗುವನ್ನು ತಾನೇ ನೋಡಿಕೊಳ್ಳುವಂತೆ ನನ್ನ ಈ ಎಲ್ಲ ಗಿಡವನ್ನು
-15-
ನಾನೇ ನೋಡಿಕೊಳ್ಳಬೇಕು" ಎನ್ನುತ್ತಾರೆ. "ಹೀಗೆ ಸಂಸಾರದಲ್ಲಿ ಲಿಪ್ತರಾಗುವುದು
ತಪ್ಪು, ಮಮತೆ ಸದ್ಗತಿಗೆ ಅಡ್ಡಿಯಾಗುತ್ತದೆ ಎನ್ನುವರಲ್ಲ ?" ಎಂದು ಕೇಳಿದರೆ
"ಮಮತೆ ತಪ್ಪು, ಅಭಿಮಾನ ತಪ್ಪಲ್ಲ. ಪ್ರೇಮದಿಂದ ದುಡಿಯುವುದೇ ಸದ್ಗತಿಗೆ
ಸಾಧನ. ಅದನ್ನು ಬಿಟ್ಟು ಸದ್ಗತಿಗೆ ಮಾರ್ಗವಿಲ್ಲ" ಇದೇ ರೀತಿ ಸಾವಿನ ಘಳಿಗೆಯಲ್ಲೆ
ಒಂದು ಇಡೀ ಬದದ಼ಕನ್ನು ಸಮೀಕ್ಷಿಸುತ್ತೇವೆ `ವಿಚಿತ್ರ ಪ್ರೇಮ'ದಲ್ಲಿ. ಇಲ್ಲಿ 
#ಕೇಂದ್ರ
ವ್ಯಕ್ತಿ ಚಾಟಲೈಟ್ ಪ್ರಭವಿ. ಅವಳು ಮಗುವನ್ನು ಹೆತ್ತು ಮರಣಶಯ್ಯೆಯಲ್ಲಿ
ಹೇಳಿಕಳುಹಿಸಿದ್ದಾಳೆ. ಅವನ ಪ್ರೇಯಸಿಯಾಗಿ ಅವನ ಜೀವನವನ್ನು ಸುಖದಿಂದ
ತುಂಬಿದ್ದವಳು. ಅನಂತರ ಸೆಯಿಂಟ್ ಲ್ಯಾಂಬರ್ಟ್ ಎನ್ನುವ ಸುಂದರ ಯುವಕನನ್ನು
ವರಿಸಿದಳು. ವಾಲ್ಟೇರ್ ತರುಣನೂ ಅಲ್ಲ. ಸುಂದರನೂ ಅಲ್ಲ. ಸುಂದರಿ ತನ್ನನ್ನು
ದೂರ ಮಾಡಿದಾಗ ಅವನಿಗೆ ದಿಗ್ಭ್ರಮೆಯಾಯಿತು. ನೋವಾಯಿತು. ಈಗ ಮತ್ತೆ
ಹೇಳಿಕಳುಹಿದ್ದಾಳೆ. ಅಲ್ಲಿ ಹೋದಾಗ ಲ್ಯಾಂಬರ್ಟನೂ ಬಂದಿದ್ದಾನೆ. ಅವಳ ಗಂಡ
ಚಾಟಲೈಟ್ ಪ್ರಭು ಇದ್ದಾನೆ. ಅವಳು ಯಾವುದನ್ನೂ ಗಂಡನಿಂದ ಬಚ್ಚಿಟ್ಟಿಲ್ಲ.
ಸಾಯುತ್ತಿರುವ ಚೆಲುವೆ ಹೇಳುತ್ತಾಳೆ, "ನಾನು ಬೇಗನೆ ತೀರಿಕೊಳ್ಳುತ್ತಿದ್ದೇನೆ ಎಂದು
ವ್ಯಥೆ ಇಲ್ಲ. ಹೆಣ್ಣುಜೀವ ಬಯಸಬಹುದಾದ ಒಳಿತನ್ನೆಲ್ಲ ನಾನು ಸವಿದು ಆಯಿತು.
ನನ್ನ ಪ್ರಭು ನನಗೆ ಪದವಿ ಕೊಟ್ಟರು. ನೀನು ಜಾಣನ ಒಲವನ್ನು ಕೊಟ್ಟೆ. ಸೆಯಿಂಟ್
ಲ್ಯಾಂಬರ್ಟ್ ರೂಪಿನ ಅನುಭವವನ್ನು ನೀಡಿದ" ತನ್ನ ಕಾಲದ ಅತ್ಯಂತ ಬುದ್ಧಿವಂತ
ಮನುಷ್ಯ ಎನ್ನಿಸಿಕೊಂಡವನು ವಾಲ್ಟೇರ್. "ಇವಳ ಜೀವನಕ್ಕೆ ಮುಚ್ಚು ಮರೆ, ಕಪಟ,
ಕುಟಿಲ, ವಂಚನೆ, ತಂತ್ರ ಇಂಥ ದೋಷಗಳ ಸಂಪರ್ಕವೇ ಇಲ್ಲ" ಎಂದು ಅವನಿಗೆ
ತೋರಿತು. ಮೂರನೆಯ ಜೀವ, `ಚಟ್ಟೆಕಾರ ತಾಯಿ' ಕಥೆಯ ತಾಯಿ. ಈಕೆ ಆಂಗ್ಲೋ
ಇಂಡಿಯನ್ ಪಂಡಗದವಳು. ಒಂದು ಸಂಸ್ಥೆಯಲ್ಲಿ ಮುಷ್ಕರವಾಗುವುದರಲ್ಲಿದ್ದಾಗ
ಅಧಿಕಾರಿಗೆ ಸ್ಪಷ್ಟವಾಗಿ ವಿವೇಕದ ದಾರಿ ಹೇಳಿ ಮುಷ್ಕರವನ್ನು ತಪ್ಪಿಸಿದ ಧೀರ
ಹೆಂಗಸು; ಹೆಂಡತಿಗೆ ತಾಯಿ ಗಟ್ಟಿ ಮಾತನ್ನಾಡಿದಗ ಮಗ `ನೀನು ಸುಮ್ಮನಿರಮ್ಮ
ಮುದುಕಿ' ಎಂದ; ಈಕೆ, "ನಾ ಮುದುಕಿ ಹೌದು.... ಮುದುಕಿ ಏಕೆ?" ಎಂದು,
ಕಂಚುಕವನ್ನು ಬಿಚ್ಚಿ ಸ್ತನಗಳನ್ನು ಕೈಯಲ್ಲಿ ಹಿಡಿದು "ಇದು ಜೋತು ಬಿದ್ದದ್ದು ಏಕೆ
ಕಾಣೆಯ? ನೀನು, ನಿನ್ನ ಕೂಡ ಹುಟ್ಟಿದ ಮಕ್ಕಳು ಈ ಎದೆ ಹಾಲಿನಿಂದ ಬೆಳೆದಿರಿ. ಇದು
ಜೋತು ಬಿದ್ದಿದೆ. ಇದಕ್ಕಾಗಿ ನೀನು, ನನಗೆ ಮರ್ಯಾದೆ ತೋರುತ್ತೀಯೋ, ಇದು
ಒಂದು ಅಪರಾಧ ಎಂದು ಅವಮಾನ ಮಾಡುತ್ತೀಯೊ ?" ಎಂದು ಕೇಳಿದ ಧೀಮಂತ
ತಾಯಿ. ಇವರೆಲ್ಲ ಯಾವ ಸಂಪ್ರದಾಯದಲ್ಲಿ ಸಮಾಧಾನ ಕಂಡುಕೊಂಡವರು ?
ಮಾಸ್ತಿಯವರು ಬೆಳೆದ ಸಂಪ್ರದಾಯದಲ್ಲೆ? ಮಹರ್ಷಿಗಳದು ಆ ಸಂಪ್ರದಾಯ.
ಚಾಟಲೈಟ್ ಪ್ರಭುವಿ ಯಾವುದಾದರೂ ಸಂಪ್ರದಾಯದ ಚೌಕಟ್ಟಿನಲ್ಲಿ ಬದುಕಿನ
-16-
ಒಗಟನ್ನು ಬಿಡಿಸಿಕೊಂಡವಳೇ? ಚಟ್ಟೆಕಾರ ತಾಯಿ?

1966ರಲ್ಲಿ ಕನ್ನಡದ ಶ್ರೇಷ್ಠ ಕಾದಂಬರಿಯೊಂದು ಹೊರಬಿತ್ತು. ಡಾ.
ಅನಂತಮೂರ್ತಿಯವರ `ಸಂಸ್ಕಾರ.' ವೈದಿಕ ಸಂಪ್ರದಾಯದಲ್ಲಿ ನಿಷ್ಠೆಯಿಂದ
ಬೆಳೆದು, ರೂಪವೆಲ್ಲ ಲಕ್ಷ್ಮಿದೇವಿಯದು ಶೃಂಗಾರವೆಲ್ಲ ಕೃಷ್ಣನದು ಎಂದು ಬದುಕಲು
ಹೊರಟ ಪ್ರಾಣೇಶಾಚಾರ್ಯರ ಮೌಲ್ಯದ ಮಹಡಿ ಒಂದು ರೂಪಸಿ ಹೆಣ್ಣಿನ ಕೈ
ಸ್ಪರ್ಶದಿಂದ ಉರುಳಿದ ಪ್ರಕ್ರಿಯೆಯ ಸುತ್ತ ರೂಪ ಕಂಡ ಕಾದಂಬರಿ. ಅನುಭವದ
ಅಗ್ನಿಪರೀಕ್ಷೆಗೆ ಒಳಗಾಗದ ಆದರ್ಶ ಆದರ್ಶವಲ್ಲ, ಮೌಲ್ಯ ಮೌಲ್ಯವಲ್ಲ; ತನ್ನ
ಅನುಭವದ ಅಗ್ನಿಯಲ್ಲೆ ತನ್ನ ಅರಿವಿನಿಂದಲೆ ಸಿದ್ಧವಾಗಬೇಕು ಬದುಕಿನ ಅರ್ಥದ
ಕಾಣ್ಕೆಯ ಮೂರ್ತಿ. ಇತರರ ಉಪದೇಶ, ಪರಂಪರಾಗತ ತಿಳಿವು ಇವೆಲ್ಲ ಗಟ್ಟಿಯಲ್ಲ.

1921ರಲ್ಲಿ ಪ್ರಕಟವಾದ ಮಾಸ್ತಿಯವರ ಮೊದಲ ಸಣ್ಣ ಕಥೆಗಳ
ಸಂಗ್ರಹದಲ್ಲಿ ಒಂದು ಕಥೆ ಇದೆ- `ಒಂದು ಹಳೆಯ ಕತೆ' ಸುಮಾರು ನಲವತ್ತೈದು
ವರ್ಷದ ಸಂನ್ಯಾಸಿ. ಒಂದು ಮಠದಲ್ಲಿದ್ದಾನೆ. ಶ್ರೇಷ್ಠ ಗುರವಿನ ನಿಷ್ಠ ಶಿಷ್ಯ. ಅವರು
ಹಾಕಿದ ಪಂಕ್ತಿಯಲ್ಲಿ ನಿಷ್ಕೃಷ್ಟವೂ ನಿಷ್ಕಲ್ಮಶವೂ ಆದ ಬದುಕನ್ನು ನಡೆಸಿ ಶಾಂತಿಯನ್ನು
ಕಂಡುಕೊಂಡವನು. ವ್ಯಾಸರ ವಾಕ್ಯ, `ಯಾವ ವೃದ್ಧನನ್ನೇ ಆಗಲಿ, ಜ್ಞಾನಿಯನ್ನೇ
ಆಗಲಿ, ಸಂನ್ಯಾಸಿಯನ್ನೇ ಆಗಲಿ ಸ್ತ್ರೀ ರೂಪವು ನಿಜವಾಗಿಯೂ ಸೆಳೆಯಬಲ್ಲುದು'
ಎನ್ನುವುದನ್ನು ಶಿಷ್ಯ ಓದಿದಾಗ, "ಸಂನ್ಯಾಸಿಯ ವಿಷಯ, ವ್ಯಾಸರಿಗೆ ತಿಳಿಯದು,
ಸಂನ್ಯಾಸಿಯನ್ನು ಸೆಳೆಯಲಾರದು ಎಂದು ತಿದ್ದಿ" ಎಂದು ಹೇಳಿದ. ರಾತ್ರಿ ಮಠಕ್ಕೆ
ಬಂದ ಹೆಣ್ಣಿನ ರೂಪಕ್ಕೆ ಸೋತು, ತಳಮಳಗೊಂಡು, ಬಲಾತ್ಕಾರವಾಗಿ ಅವಳಿದ್ದ
ಕೊಠಡಿಯ ಬಾಗಿಲನ್ನು ದೂಡಿ ಒಳಹೊಕ್ಕು, ಕಂಡದ್ದು ಚೆಲುವೆಯನ್ನಲ್ಲ.
ಗುರುಗಳನ್ನ, ವ್ಯಾಸರನ್ನ, ಗುರುಗಳಿಂದ ಮಾರ್ಗದರ್ಶನ ಪಡೆದ. ಮರುದಿನ
ಶಿಷ್ಯನಿಗೆ ವ್ಯಾಸರ ವಾಕ್ಯವನ್ನು ಮೊದಲಿನಂತೆಯೇ ತಿದ್ದಿಸಿದ. ಪ್ರಾಮಾಣಿಕವಾಗಿ ಶುದ್ಧ
ಜೀವನ ನಡೆಸುತ್ತಿದ್ದವನು, ಆದರೆ ತನ್ನ ಒಳಗೆ ಇರುವ ದೌರ್ಬಲ್ಯವನ್ನು
ಅರಿಯದವನು. ಒಬ್ಬ ಹೆಣ್ಣಿನ ರೂಪದಿಂದ ಸತ್ಯವನ್ನು ತಿಳಿದುಕೊಂಡ.

ಮಾಸ್ತಿಯವರ ಕಥೆಯಲ್ಲಿ ಅದ್ಭುತದ ಅಂಶವಿದ. ಅನಂತಮೂರ್ತಿಯವರ
ಕಾದಂಬರಿಯಲ್ಲಿ ಇಲ್ಲ. ಆದರೆ ಎರಡು ಕೃತಿಗಳ ಕೇಂದ್ರದಲ್ಲಿರುವುದು ಒಂದೇ ಸತ್ಯ
-ವಾಸ್ತವದ ಅಗ್ನಿಸ್ಪರ್ಶಕ್ಕೆ ಸಹ ಸುಡದ ಆದರ್ಶವೇ ಆದರ್ಶ. ಮೌಲ್ಯವೇ ಮೌಲ್ಯ.

ಮಾಸ್ತಿಯವರ ಸಾಹಿತ್ಯದಲ್ಲಿ ಸಮೃದ್ಧಿಯಾಗಿ ಕಾಣುವುದು ಈ ಒಳಗಿನ
ಶಕ್ತಿಯ ವಿಜಯ. ಅದು ತರುವ ಶಾಂತಿ. ಅವರ ಅತ್ಯುತ್ತಮ ಕೃತಿಗಳಲ್ಲಿ ಕಾಣುವುದು,
ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳುವ ಗಟ್ಟಿ ಜೀವವೊಂದು ಬದುಕಿನ ಒಂದು
ಕಠಿಣ ಸವಾಲನ್ನು ಎದುರಿಸುವುದು, ಎದುರಿಸಿ ತನ್ನ ಒಳಗಿನ ಶಕ್ತಿಯನ್ನು
ಕಂಡುಕೊಂಡು ಸವಾಲನ್ನು ಗೆಲ್ಲುವುದು. ಬದುಕಿನಲ್ಲಿ ಪ್ರೀತಿಯನ್ನು
-17-
ಉಳಿಸಿಕೊಳ್ಳುವುದು. `ಟಾಲ್್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳ'ಲ್ಲಿನಂತೆ
ಸವಾಲನ್ನು ಸ್ವೀಕರಿಸಲಾಗದೆ ವ್ಯಕ್ತಿ ಸೋತಾಗಲೂ ನಮ್ಮಲ್ಲಿ ಉಳಿಯುವುದು ಆ
ಶಕ್ತಿಯ ಅಸಾಧಾರಣತೆಯ ಅನುಭವ, ವ್ಯಕ್ತಿಯಲ್ಲಿ ಗಾಢವಾದ ಗೌರವ. ಈ
ಶಕ್ತಿಯನ್ನು ಇತಿಹಾಸದ ಅಥವಾ ಪುರಾಣ ಕಾಲದ ನಿಜವಾದ ಶ್ರೇಷ್ಠ ವ್ಯಕ್ತಿಗಳಲ಼್ಲಿ
ಅವರು ಕಂಡರು. ತಮ್ಮ ಸುತ್ತಮುತ್ತಲಿನ ಸಾಮಾನ್ಯ ಜನರಲ್ಲಿ - ಬೈಚೇಗೌಡನಲ್ಲಿ,
ವೆಂಕಟಿಗನಲ್ಲಿ, ಶಾಲೆಯ ಆಚಾರ್ಯರಲ್ಲಿ, ಚಟ್ಟೇಕಾರ ತಾಯಿಯಲ್ಲಿ - ಕಂಡರು.
`ನಮ್ಮ ಮೇಷ್ಟರು' ಕಥೆಯಲ್ಲಿ ಮೊದಲ ಭಾಗವಾದ ಹಾಸ್ಯಕ್ಕೆ ವಸ್ತುವಾಗಿ 
ತರಗತಿಯಲ್ಲಿ ಕಾಣಿಸಿಕೊಳ್ಳುವ `ಬಲಿತ ಹುಡುಗಿ', ಎರಡನೆಯ ಭಾಗದಲ್ಲಿ ಸತ್ತ
ಹೆಣ್ಣಾಗಿ ಕಾಣಿಸಿಕೊಳ್ಳುವ ಮೇಷ್ಟರ ಹೆಂಡತಿಯನ್ನು ನೆನಸಿಕೊಳ್ಳೋಣ. ಕಥೆಯ
ಹ್ರಸ್ವವಾದ ಎರಡನೆಯ ಭಾಗವನ್ನು ತೆಗೆದುಬಿಟ್ಟರೆ ಅದೊಂದು ಸೊಗಸಾದ
ಹಾಸ್ಯಭರಿತ ಕಥೆ. ಅಷ್ಟೆ. ಅದರ ಮಾನವೀಯ `ಗೌರವ'ವೆಲ್ಲ ಅಡಗಿರುವುದು
ಎರಡನೆಯ ಭಾಗದಲ್ಲಿ; ಇದಕ್ಕೆ ಬಹು ದೊಡ್ಡ ಕೊಡಿಗೆ, ಮನೆಯಲ್ಲಿ ಉಪ್ಪು ಸಹ
ಇಲ್ಲದ ಬಡತನವನ್ನು ಅನುಭವಿಸಿಯೂ ಸಾಯುವಾಗ ಗಂಡನಿಗೆ, "ನನ್ನ ಮೇಲೆ
ಏನೂ ಕೋಪವನ್ನು ಇಟ್ಟುಕೊಳ್ಳಬೇಡಿ. ನಾನು ಸುಖವಾಗಿಯೇ ಇದ್ದೆ" ಎನ್ನುವ ಈ
ಹೆಸರಿಲ್ಲದ ಹೆಣ್ಣಿನದು.

ಬದುಕನ್ನು ಎದುರಿಸಿ ಸ್ವೀಕರಿಸಿ, ಅದರ ಸಂಕೀರ್ಣತೆ ನೋವುಗಳ
ನಡುವೆಯೂ ಮನಶ್ಯಾಂತಿಯನ್ನು ತರಬಲ್ಲ ಶಕ್ತಿಯ ಸೆಲೆಗಳು ಹಲವು. ಒಂದು,
ಸತ್ಪರಂಪರೆ. ಮಾಸ್ತಿಯವರ ಹಲವು ಪಾತ್ರಗಳ ಶಕ್ತಿ, ಶಾಂತಿಗಳಿಗೆ ಮೂಲ
ಪರಂಪರೆಯಾದರೂ ಅದೊಂದೇ ಮೂಲವಲ್ಲ. ಮತ್ತೊಂದು ಸಹಜತೆ, ನಿಷ್ಕಾಪಟ಼್ಯ.
ತಾನು ತಾನಾಗಿ ಸೋಗಿಲ್ಲದೆ ಬದುಕುವುದು. ಚಾಟಲೈಟ್ ಪ್ರಭುವಿ ಸಾಮಾನ್ಯ
ಅಳತೆಗೋಲಿನಂತೆ ನೀತಿ ಇಲ್ಲದ ಹೆಣ್ಣು, ನಾಚಿಕೆ ಇಲ್ಲದ ಹೆಣ್ಣು. ಆದರೆ ಕಥೆಯಲ್ಲಿ,
ಅವಳನ್ನು ಅತ್ಯಂತ ಆತ್ಮೀಯವಾಗಿ ಬಲ್ಲ ಮೂವರ ಕಣ್ಣಲ್ಲೂ ಅಸಾಧಾರಣವಾದ,
ಗೌರವವನ್ನು ಗೆಲ್ಲುವ ಹೆಣ್ಣು. ಈ ಮೂವರಲ್ಲಿ ಒಬ್ಬ ಇಂದೂ ಜಗತ್ತು ಅತ್ಯಂತ
ಬುದ್ಧಿವಂತ. ಚಿಂತಕ ಎಂದು ಮೆಚ್ಚಿಕೊಳ್ಳುವ ವಾಲ್ಟೇರ್. ಅವಳು ಸಾಯುವಾಗ ತನ್ನ
ಪ್ರಿಯಕರನಿಗೆ ಹೇಳುತ್ತಾಳೆ; `ಸಮಾಜದ ಸರಿ, ಸಮಾಜಕ್ಕೆ ಸರಿ. ದೈವದ ಎದುರಿಗೆ
ಒಂದೇ ಸಾಧ್ಯ; ಅದು ನಿರ್ವಂಚನೆ.' `ಆಚಾರವಂತ ಅಯ್ಯಂಗಾರ್' ಕಥೆಯ ಗಂಡ.
ಹೆಂಡತಿ ಇಂತಹವರು; ತೋರಿಕೆ ಇಲ್ಲದೆ, ಕಾಪಟ್ಯವಿಲ್ಲದೆ ತಮ್ಮ ಸಮಾಧಾನದ
ಹಾದಿಯನ್ನು ಕಂಡುಕೊಂಡವರು. ಈ ಶಕ್ತಿ, ಶಾಂತಿಗಳ ಮತ್ತೊಂದು ಸೆಲೆ, ತಾನು
ಸೃಷ್ಟಿಯ ಒಂದು ಭಾಗ ಎಂದು ಕಂಡುಕೊಳ್ಳುವುದು. `ಯಶೋಧರಾ' ನಾಟಕದಲ್ಲಿ
ಇದು ಸೂಚಿತವಾಗುತ್ತದೆ. ಈ ನಾಟಕದಲ್ಲಿ ಮತ್ತೆ ಮತ್ತೆ ಮರದ ಚಿತ್ರ ಬರುತ್ತದೆ.
ಪ್ರಾರಂಭದಲ್ಲೇ ತಳಮಳಗೊಂಡ ಯಶೋಧರಾ ಕನಸಿನಲ್ಲಿ `ನನ್ನ ಬದಿಯಲಿ ವೃಕ್ಷ
-18-
ಒಂದು ಬಿಳಲನು ಬಿಟ್ಟು ದೂರ ಸರಿಯಿತು ತಾಯಿ' ಎನ್ನುತ್ತಾಳೆ; ಮಗ ತನ್ನಿಂದ
ದೂರವಾದಾನು ಎಂಬ ಆತಂಕ ಆಕೆಗೆ. ಬುದ್ಧನನ್ನು ನಾವು ಮೊದಲ ಬಾರಿ ಕಂಡಾಗ
ಚೇತ಩ದಲ್ಲಿ ಮರದ ಕೆಳಗೆ ಕುಳಿತು ಉಪದೇಶ ಮಾಡುತ್ತಿದ್ದಾನೆ. ಅವನ
ಉಪದೇಶದಲ್ಲಿ ಮರದ ಚಿತ್ರ ಎದ್ದು ಕಾಣುತ್ತದೆ. "ತಾನೆಂಬುದುಂಟು - ವಿಶ್ವದ
ಒಡವೆಯಾಗಿ. ತನ್ನೊಡವೆಯಾಗಿ ಅಲ್ಲ. ತಾನು ಎನ್ನುವುದು ವಿಶ್ವಜೀವನದ
ವಟವೃಕ್ಷದಾನಂತ್ವದಲಿ ಏನೊಂದು ಕಣವಾಗಿ, ಬೇರಿನಲಿ, ತಾಳಿನಲಿ, ಶಾಖೆ ಉಪ~
ಶಾಖೆಯಲಿ, ಕಾಂಡದಲಿ, ಎಲೆಗಳಲ್ಲಿ, ಎಲ್ಲಿಯೋ ಅಲ್ಲಿ ಬೆರೆತಿರುವುದು. ತಾ ತನ್ನ
ಅರಿತಿರುವುದು; ಅಂತೆ ಮರೆತಿರುವುದು. ನಾನು, ನಾನು ನಾನು ನಾನು; ನನ್ನದಿದು
ನನ್ನದದು ಎಂಬ ಅತಿ ಮಮತೆಯದು ಮರುಳುತನದಲಿ ಜೀವ ಈ ಮರದ ಶಾಖೆಯಲಿ
ಕಾಣ್ವ ಕರುಟಂತಹುದು". `ಸುಬ್ಬಣ್ಣ' ಕಿರು ಕಾದಂಬರಿಯ ನಾಯಕ ಜೀವನದ
ಸಂಜೆಯಲ್ಲಿ ಎಲ್ಲರಿಂದ ದೂರವಾಗುತ್ತಾರೆ. ಹಾಡುವುದು ದೇವಾಲಯದಲ್ಲಿ ಮಾತ್ರ.
ಯಾರ ಮನೆಗೂ ಹೋಗುವುದಿಲ್ಲ ಎಂದು ಹಠ. ಅವರಿಗೆ ಮನಸ್ಸಿಗೆ ಸಮಾಧಾನ
ಸಿಗುವುದು ಒಬ್ಬ ಹುಡುಗಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದಾಗಲೇ, ಮತ್ತೆ
ಮಾನವೀಯ ಸಂಬಂಧಗಳನ್ನು ಬದುಕಿಗೆ ತಂದುಕೊಂಡಾಗಲೇ, ಅಂತಃಕರಣ ಕೆಲಸ
ಮಾಡಲು ಅವಕಾಶ ಕೊಟ್ಟಾಗಲೇ. ಮಾಸ್ತಿಯವರು ತಮ್ಮ ಜೀವನದ ಸಂಧ್ಯಾಕಾಲವೂ
ಇಳಿಮುಖವಾಗಿದ್ದಾಗ ಬರೆದ `ಶ್ರೀಕೃಷ್ಣನ ಅಂತಿಮ ದರ್ಶನ'ದಲ್ಲಿ ಸಾವಿನ ಹೊಸ್ತಿಲ
ಮೇಲೆ ಕಾಲಿಟ್ಟ ಕೃಷ್ಣ ತಾನು ಗೀತೆಯನ್ನು ಬೋಧಿಸಿದ ಅರ್ಜುನನಿಗೆ (ಔನೂ ಈಗ
ವೃದ್ಧ) ಹೇಳುತ್ತಾನೆ: "ತನ್ನ ಗುರಿ ಲೋಕದ ಸುಖ ಎಂದುಕೊಂಡವನು ಲೋಕದ
ಸುಖವನ್ನೇ ಬಯಸುತ್ತಾನೆ. ಅದಕ್ಕಾಗಿ ದುಡಿಯುತ್ತಾನೆ. ಅದಕ್ಕಾಗಿ ತನ್ನ ಪ್ರಾಣವನ್ನು
ಬೇಕಾದರೂ ಒಪ್ಪಿಸಿಬಿಡುತ್ತಾನೆ. ಈ ಸ್ಥಿತಿಯನ್ನು ಮುಟ್ಟುವುದು ಮನುಷ್ಯಪ್ರಾಣಿಯ
ಅಪೇಕ್ಷೆ ಆಗಬೇಕು." ಇದು ಯಾವ ಒಂದು ಸಂಪ್ರದಾಯವಷ್ಟೇ ಉಪದೇಶಿಸುವ
ಮೌಲ್ಯವಲ್ಲ.

`ಶ್ರೀನಿವಾಸ'ರಿಗೆ ಬದುಕು ಇಂತಹ ಪರಿಪಕ್ವತೆಯನ್ನು ಸಾಧಿಸಲು ಒಂದು
ಅವಕಾಶ; ಬದುಕು ಪರಿಪಕ್ವತೆಯತ್ತ ಯಾತ್ರೆ. ಬುದ್ಧ, `ಭಟ್ಟರ ಮಗಳು' ನಾಟಕದ
ಭಟ್ಟರು, `ಗೌತಮಿ ಹೇಳಿದ ಕತೆ'ಯ ದತ್ತ, ಮಹರ್ಷಿ ವಾಮದೇವ ದ್ವೈಪಾಯನ,
`ಶಾಲೆಯ ಆಚಾರ್ಯರು' ಕಥೆಯ ಆಚಾರ್ಯರು ಇವರೆಲ್ಲ ಈ ಪರಿಪಕ್ವತೆಯನ್ನು
ಸಾಧಿಸಿರುವವರು; `ವೆಂಕಟಿಗನ ಹೆಂಡತಿ'ಯ ವೆಂಕಟಿಗ, `ಉಗ್ರಪ್ಪನ ಉಗಾದಿ'ಯ
ಉಗ್ರಪ್ಪ ಇಂತಹವರು ವಿದ್ಯಾವಂತರಲ್ಲದಿರಬಹುದು. ಶಾಸ್ತ್ರ ಓದಿಲ್ಲದಿರಬಹುದು.
ಚಿಂತನಶೀಲರಲ್ಲದಿರಬಹುದು. ಇವರೂ ಈ ಪಕ್ವತೆಯನ್ನು ಸಾಧಿಸಿರುವವರೇ.
ಮಾಸ್ತಿಯವರ ಸಾಹಿತ್ಯದಲ್ಲಿ ಈ ಒಳಗಿನ ಶಕ್ತಿ, ಈ ಪರಿಪಕ್ವತೆಗಳೊಡನೆ
ಯಾವಾಗಲೂ ಕಾಣುವುದು ಗಾಢವಾದ ಅನುಕಂಪ. ತ್ರೈಭುವನ್ಯ ಪೂಜ್ಯ ಧವಳ
-19-
ಕೀರ್ತಿಯಾದ ಬುದ್ಧ `ಕಾರುಣ್ಯ ಮೂರ್ತಿ'. ಅವನೊಬ್ಬನೇ ಅಲ್ಲ. ಪರಿಪಕ್ವತೆ
ಸಾಧಿಸಿದವರೆಲ್ಲ ಕಾರುಣ್ಯ ಮೂರ್ತಿಗಳೇ - `ಭಟ್ಟರ ಮಗಳಿ'ನ ಭಟ್ಟರು,
ನಿಷ್ಕಾರಣವಾಗಿ ತನ್ನನ್ನು ಬಿಟ್ಟು ಒಬ್ಬ ಷೋಕಿವಾಲನ ಪ್ರೇಯಸಿಯಾಗಿ ಮತ್ತೆ
ಹಿಂದಿರುಗಿದ ಹೆಂಡತಿಯನ್ನು ಒಂದು ಮಾತಿಲ್ಲದೆ ಸೇರಿಸಿಕೊಂಡ ವೆಂಕಟಿಗ (ಅವಳು
ಬರುತ್ತ ಎತ್ತಿಕೊಂಡು ಬಂದ ಮಗುವಿಗೆ ವಯಸ್ಸೆಷ್ಟು ಎಂದು ಕೇಳಿ ಅದು ತನ್ನದೇ
ಎಂದು ಖಚಿತಮಾಡಿಕೊಳ್ಳಲೂ ಒಲ್ಲದ ಅನಕ್ಷರಸ್ಥ ವೆಂಕಟಿಗ. ಕೇಳಿದರೆ
ನೊಂದುಕೊಳ್ಳುತ್ತಾಳೆ ಎಂದು ಮರುಕ) ಚನ್ನಬಸವ ನಾಯಕ ಕಾದಂಬರಿಯ ಅಯ್ಯ
ಎಲ್ಲ ಇಂತಹ ಕಾರುಣ್ಯದ ಮೂರ್ತಿಗಳು. (ಒಂದು ಘಟನೆಯನ್ನು ಇಲ್ಲಿ
ಸ್ಮರಿಸಿಕೊಳ್ಳಬಹುದು. ನಮ್ಮ ಹಿರಿಯ ಸಾಹಿತಿಯೊಬ್ಬರ ಬರಹಗಳ ವಿಷಯ
ಮಾತನಾಡುತ್ತಿದ್ದೆವು. ನಾನು ಅವರ ಹರಿತವಾದ ಬುದ್ಧಿಶಕ್ತಿಯನ್ನು ಮೆಚ್ಚಿಕೊಂಡೆ.
ಕೂಡಲೆ ಮಾಸ್ತಿಯವರೆಂದರು : But there is no pity in the man, how can
literature be great without compassion ? ಮಾಸ್ತಿಯವರ ಸಾಹಿತ್ಯದ ಒಂದು
ದೊಡ್ಡ ಗುಣವೆಂದರೆ, ನೈತಿಕ ಮೌಲ್ಯನಿರ್ಣಯ ಉಂಟು. ಜೊತೆಗೇ ಗಾಢವಾದ
ಅನುಕಂಪ ಉಂಟು. ನೈತಿಕ ನಿರ್ಣಯಗಳಿಗೆ ಯಾವ ಸಂಕುಚಿತ ಪಂಥ, ಅಮೂರ್ತ
ನಿಯಮ ಆಧಾರವಲ್ಲ. (ಚಾಟಲೈಟ್ ಪ್ರಭುವಿ ಒಪ್ಪಿಕೊಳ್ಳುವ ಮನಸ್ಸು ಬಹು
ಉದಾರವೇ ಇರಬೇಕು.) ಉದಾರವಾದ ನೈತಿಕ ಮೌಲ್ಯಗಳಿಗನುಗುಣವಾಗಿ ತಪ್ಪು
ಹಾದಿ ಹಿಡಿದವರೆಂದವರ ವಿಷಯದಲ್ಲಿ ಸಹ ಮಾನವೀಯ ಅನುಕಂಪ ಉಂಟು.
ಚಿಕವೀರ ರಾಜೇಂದ್ರ ದುಷ್ಟನಾಗಿ ಕಾಣುತ್ತಾನೆ. ಅವನ ಕಾಮುಕತೆ, ಅವಿವೇಕಗಳಿಂದ
ಒಂದು ಇಡೀರಾಜ್ಯ ಕಷ್ಟಪಡಬೇಕಾಯಿತು. ಸ್ವಾತಂತ್ರ್ಯವನ್ನು
ಕಳೆದುಕೊಳ್ಳಬೇಕಾಯಿತು. ಆದರೆ ಅವನಿಗೆ ಬಾಲ್ಯದಲ್ಲಿ ತಾಯಿಯ ಪ್ರೀತಿ ದಕ್ಕಲಿಲ್ಲ.
ತಂದೆ ಅವನಿಗೆ ಗಮನ ಕೊಡಲಿಲ್ಲ. ಮುಂದೆ ರಾಜ್ಯವಾಳುವವನಿಗೆ ಯಾವ ಶಿಕ್ಷಣ
ದೊರಕಬೇಕು ಅದು ಲಭ್ಯವಾಗಲಿಲ್ಲ. ಮನುಷ್ಯನಾಗಿ ಅಥವಾ ಭಾವೀ ರಾಜನಾಗಿ
ದೊರಕಬೇಕಾದ ಎಲ್ಲ ಭಾಗ್ಯಗಳಿಂದ - ತಾಯಿಯ ಪ್ರೀತಿ, ತಂದೆಯ ಮಾರ್ಗದರ್ಶನ,
ಯೋಗ್ಯ ಗುರುಗಳಿಂದ ಶಿಕ್ಷಣ, ಒಳ್ಳೆಯ ಸಹವಾಸ ಎಲ್ಲದರಿಂದ - ಅವನು
ವಂಚಿತನಾದ. ಮಾಸ್ತಿಯವರ ಸಮಗ್ರ ಸಾಹಿತ್ಯದಲ್ಲಿ ಎರಡು ಕುತೂಹಲಕರ
ಅಂಶಗಳು; ಅವರು ಎಲ್ಲಿಯೂ ವ್ಯಂಗ್ಯವನ್ನು ಬಳಸುವುದಿಲ್ಲ. ಭಾವಾತೀರೇಕಕ್ಕೆ
ವಶರಾಗುವುದಿಲ್ಲ. ಅವರ ಮೊದಲನೆಯ ಕಥಾ ಸಂಕಲನ 1921ರಲ್ಲಿ
ಪ್ರಕಟವಾಯಿತು. ಎರಡು ಕಥೆಗಳು ಅತಿ ಭಾವುಕತೆಯ ಅಂಚಿನಲ್ಲಿ ನಿಂತು ಹಿಂದಕ್ಕೆ
ಬರುತ್ತವೆ. ಒಂದು, `ನಮ್ಮ ಮೇಷ್ಟರು.' ಇಲ್ಲಿ ಕಥೆಯ ಬಹುಭಾಗದ ಮೇಲೆ ಹಾಸ್ಯ
ಹರಡಿಕೊಂಡಿದೆ. ಈ ಹಾಸ್ಯ ಎರಡು ರೀತಿಗಳಲ್ಲಿ ಪರಿಣಾಮಕಾರಿ. ಆ ಹಾಸ್ಯದ
ದಡವಿಲ್ಲದಿದ್ದರೆ ಮುಗ್ಧ ದಂಪತಿಗಳ ಬಡತನದ ಕಥೆ ನಮ್ಮಲ್ಲಿ ಉಕ್ಕಿಸುವ ಅನುಕಂಪ,
-20-
ನೋವೇ ಆಗುತ್ತಿತ್ತು. ಕಡೆಯ ಭಾಗದಲ್ಲಿ ಮುಗ್ಧ ಹೆಂಡತಿಯ ಸಾವಿನ ಕಥೆ
ಭಾವಾತಿರೇಕಕ್ಕೆ ದಾಟುತ್ತಿತ್ತು. ತಾನೇ ಬಡತನದಲ್ಲಿ ನವೆದು, ಸಾಯುತ್ತ ಗಂಡನಿಗೆ
"ನಾನು ಹೋಗುತ್ತೇನೆ. ನನ್ನ ಮೇಲೆ ಏನೂ ಕೋಪವನ್ನು ಇಟ್ಟುಕೊಳ್ಳಬೇಡಿ.
ನಿಮಗೆ ಕಷ್ಟವಾಗುವ ಹಾಗೆ ಮಾಡಿದೆ ಎಷ್ಟೋ ಸಲ" ಎಂದು ಕಾಲು ಹಿಡಿಯುವ
ಹೆಣ್ಣಿನ ಚಿತ್ರದೊಡನೆ ನಮ್ಮ ಮನಸ್ಸಿನಲ್ಲಿ, ಶಾಲೆಯ ತರಗತಿಯಲ್ಲಿ, ತರುಣ
ಇನ್್ಸ್ಪೆಕ್ಟರಿಗೆ, "ಬಲಿತ ಹುಡುಗಿಯಂತೆ ಬಲಿತ ಹುಡುಗಿ. ಯಾರೋ ಎಳೆ
ನಿಂಬೆಕಾಯಿ" ಎನ್ನುವ ಹೆಣ್ಣಿನ ಚಿತ್ರವೂ ಇದೆ. ಆ `ಕಾಮಿಕ್' ಚಿತ್ರ ನಮ್ಮ 
#ಭೂವುಕತೆಗೆ
ದಡ ಕಟ್ಟುತ್ತದೆ. `ಇಂದಿರೆಯೋ? ಅಲ್ಲವೋ?' ಇಂಥ ಇನ್ನೊಂದು ಕಥೆ.
ಮಾಸ್ತಿಯವರ ಅನುಕಂಪ ಯಾವಾಗಲೂ ಶಕ್ತಮನಸ್ಸಿನ, ಚಿಂತನಶೀಲ ಮನಸ್ಸಿನ
ಅನುಕಂಪ. ಎರಡನೆಯದಾಗಿ, ಮಾಸ್ತಿ ಎಲ್ಲೂ ವ್ಯಂಗ್ಯವನ್ನು ಬಳಸುವುದಿಲ್ಲ.

ಮಾಸ್ತಿಯವರ ಮೊದಲನೆಯ ಕಥಾಸಂಗ್ರಹವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.
ಇಂದಿಗೂ ನನಗೆ ಅದನ್ನು ಓದಿದಾಗ, ಒಬ್ಬ ಕಥೆಗಾರನ ಪ್ರಥಮ ಸಂಗ್ರಹ ಇದು.
ಎಂದು ನೆನೆದಾಗ, ಬೆರಗಾಗುತ್ತೇನೆ. ಅದರ ವಸ್ತು ವೈವಿಧ್ಯ, ಅದರ `ಟೋನ್'ನಲ್ಲಿನ
ವೈವಿಧ್ಯ, ಅದರ ಗಂಭೀರ ಚಿಂತನೆ - ತಿಳಿ ಹಾಸ್ಯ, ಅದರ ಗದ್ಯ ಇವುಗಳಲ್ಲದೆ ಅದರ
ತಂತ್ರ ವೈವಿಧ್ಯ ಆಶ್ಚರ್ಯಗೊಳಿಸುವಂಥದು. ಕಥೆಗೊಂದು ಚೌಕಟ್ಟು ನೀಡಿ
ಅದರಿಂದ ಕ್ರಿಯೆಯನ್ನು `ಡಿಸ್ಟಿನ್ಸ್ ಮಾಡುವುದು' (ಸಾಕಷ್ಟು ದೂರ ಇರಿಸುವುದು)
ಮತ್ತು ಕಥೆಯ ಕ್ರಿಯೆಯ ಮೇಲೆ ಹೊಸದೊಂದು ಕೋನದಿಂದ ಬೆಳಕು
ಹರಿಸುವುದು, ಇಲ್ಲಿಯೇ ಕಾಣುತ್ತದೆ. ಎರಡನೆಯ ಸಂಗ್ರಹದ `ಕೃಷ್ಣಮೂರ್ತಿಯ
ಹೆಂಡತಿ'ಯಲ್ಲಿ ಆಗತಾನೆ ಬದುಕಿಗೆ ಕಾಲಿಡುವ, ಹೂಗನಸುಗಳನ್ನು ಎದೆಯಲ್ಲಿ
ಹೊತ್ತ ಹುಡುಗಿ ಅವಳ ಸಹಾಯಹೀನ ತಾಯಿಯ ಮೇಲೆ ಬದುಕು ಕೆಂಡವನ್ನೇ
ಸುರಿಸುತ್ತದೆ. ಆ ಅನುಭವವನ್ನು ನಾವು ತಡೆ೟ಲು ಸಾಧ್ಯವಾಗುವುದು
ಚೌಕಟ್ಟಿನಲ್ಲಿರುವ ವೃತ್ತಾಂತಕಾರ, ಅವನ ಹೆಂಡತಿ ಇವರ ಕರುಣೆಯ ದೃಶ್ಯದಿಂದ.
ನಿಷ್ಕಾರಣ ನೋವನ್ನು ಸುರಿದ ಬದುಕೇ ನಿಷ್ಕಾರಣ ಅಂತಃಕರಣವನ್ನು ಉಣಿಸುತ್ತದೆ.
ಈ ಸಮತೋಲನ ಸೂಚಿತವಾಗುವುದು ಚೌಕಟ್ಟಿನಿಂದ. ಮಾಸ್ತಿಯವರ ಕಲೆಯನ್ನು
`ಆಚಾರ್ಯರ ಪತ್ನಿ'ಯಂತಹ ಕಥೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.
ರಾಮಾನುಜಾಚಾರ್ಯರ ಪತ್ನಿಯ ಪ್ರಸ್ತಾಪ ಕಥೆಯ ಮೊದಲ ಭಾಗದಲ್ಲಿ ಬರುತ್ತದೆ.
ಎರಡನೆಯ ಭಾಗದಲ್ಲಿ ಕಥೆ ಮುಗಿದಾಗ ನಮ್ಮ ಮನಸ್ಸನ್ನು ತುಂಬಿಬಿಡುವವರು ಈ
ದುರದೃಷ್ಟದ ಹೆಂಗಸು. ಇಡೀ ಕಥೆಯಲ್ಲಿ, ಕಟ್ಟ ಕಡೆಯವರೆಗೆ ಆಕೆಯ ಬಾಯಿಂದ
ಒಂದೇ ಒಂದು ಮಾತು ಬರುವುದಿಲ್ಲ. ಮಾಸ್ತಿಯವರ ಸಾಧನೆಯ ಮತ್ತೊಂದು
ಮುಖ ಅವರು ಪ್ರತಿಮೆಗಳನ್ನು ಸೃಷ್ಟಿಸಿದ್ದು. `ವೆಂಕಟಿಗನ ಹೆಂಡತಿ'ಯಲ್ಲಿ ಕಥೆಯ
ಅಂಶ ಎಷ್ಟು? ಹತ್ತು ವಾಕ್ಯಗಳಲ್ಲಿ ಮುಗಿಸಬುದಾದ್ದು. ಆದರೆ ಕಥೆ ನಮ್ಮ ಮೇಲೆ
-21-

ಪರಿಣಾಮವನ್ನು ಮಾಡುವುದು, ಹತ್ತಾರು ವಿವರಗಳಿಂದ, ಪ್ರತಿಮೆಗಳಿಂದ,
`ಧ್ವನಿ'ಯಿಂದ, ಅದು ಸೃಷ್ಟಿಸುವ ಅನುಭವದಿಂದ. ಪ್ರಾರಂಭದಲ್ಲಿ ಅರಳಿಮರ-
"ಯಾರೋ ಹಾಕಿದ ಮರದ ಸೊಪ್ಪನ್ನು ಧಾರಾಳವಾಗಿ ಕುಯಿದು ತಮ್ಮ ಆಡಿಗೆ
ಮೇಯಿಸುವ ಮಹನೀಯರು ಇದನ್ನು ತರಿತರಿದು ಹಾಕಿದ್ದರು. ಆದರೂ ಅದು
ಅವಕಾಶ ಇದ್ದಕಡೆ ನಾಲ್ಕು ತಳಿರನ್ನು ತೋರಿದ್ದಿತು. ಮರ ಬರಿದಾದರೂ ತಳಿರು
ತಳಿರೇ. ಅದರ ತೆಳುವೋ, ಅದರ ಬಣ್ಣವೊ, ಅದರ ಬೆಡಗೊ!" ಅನಂತರ ಗರುಡ,
ದೇವರ ವಾಹನ, ಅದು ಗಗನದಲ್ಲಿ ಸುತ್ತುಹಾಕುತ್ತ ತನ್ನ ಸಂಗಾತಿಯನ್ನು
ಕರೆಯುತ್ತದೆ. ಆ ಸಂಗಾತಿ ಮೇಲೆದ್ದು, ಹಾರಿ, ಅದನ್ನು ಸೇರಿಕೊಳ್ಳುತ್ತದೆ. ಅನತಂರ
ಹಾಳು ಹಳ್ಳಿ. ಆದರೆ ಅಲ್ಲಿ ಅಳಿದ ಊರಿನ ಅವಲಕ್ಷಣವಿಲ್ಲ. ಬಾವಿ, ಬಾವಿಯ ಹತ್ತಿರ
ದೇವಕಣಿಗಿಲೆ ಮರ. (ಕಥೆಯಲ್ಲಿ ಕಥೆಗಾರರೇ ವೆಂಕಟಿಗನನ್ನು ಈ ಹಳ್ಳಿಯ ಜೊತೆಗೆ,
ದೇವಕಣಗಿಲೆಯ ಜೊತೆಗೆ ಹೊಂದಿಸುತ್ತಾರೆ) ಯಾರು ಎಷ್ಟೇ ಶೋಷಿಸಲಿ,
ತರಿಯಲಿ, ಅನ್ಯಾಯ ಮಾಡಲಿ ತಾನು ಶುದ್ಧವಾಗಿ, ಕರುಣಾಮಯವಾಗಿ ನಿಲ್ಲುವ,
ಮತ್ತೊಂದು ಬದುಕಿಗೆ ಸಂತೋಷ ನೀಡುವ ಚೇತನದ ಸಾಮೀಪ್ಯದ ಅನುಭವವನ್ನು
ಕಥೆ ನೀಡುತ್ತದೆ. `ಟಾಲ್್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು' ಕಥೆಯಲ್ಲಿ
ಊರ್ಜ ಮರಗಳು ಬದುಕಿನ ಸಂಕೀರ್ಣತೆಯ ಸಂಕೇತವಾಗುತ್ತವೆ. ತಂತ್ರದ
ಅಬ್ಬರವಿಲ್ಲದೆ ಪರಿಪೂರ್ಣ ತಂತ್ರವನ್ನು ಮೆರೆಯುತ್ತವೆ ಮಾಸ್ತಿ ಕಥೆಗಳು.

ಇಂಥ ವಿಶಿಷ್ಟ ಪ್ರತಿಭೆಯು ಆಧುನಿಕ ಸಣ್ಣ ಕಥೆಯ ಚರಿತ್ರೆಯ ಪ್ರಾರಂಭದಲ್ಲೆ
ಲಭ್ಯವಾದದ್ದು ಕನ್ನಡದ ಸುಯೋಗ.

ಮಾಸ್ತಿಯವರು ಸುಮಾರು ಎಪ್ಪತ್ತೈದು ವರ್ಷಗಳ ಕಾಲ ಸಾಹಿತ್ಯ ರಚನೆ
ಮಾಡಿದರು. ಸಣ್ಣಕಥೆ, ಕಾದಂಬ಼ರಿ, ನಾಟಕ, ಕಾವ್ಯ, ವಿಚಾರಗದ್ಯ, ಸಾಹಿತ್ಯ ವಿಮರ್ಶೆ,
ಜೀವನಸ್ಮೃತಿಗಳು, `ಜೀವನ' ಪತ್ರಿಕೆಯ ಸಂಪಾದಕೀಯಗಳು, ಅನುವಾದಗಳು ಎಲ್ಲ
ಸೇರಿ ಸುಮಾರು ಇಪ್ಪತ್ತು ಸಾವಿರ ಪುಟಗಳಷ್ಟು ಕನ್ನಡ, ಇಂಗ್ಲಿಷ್ ಬರಹ ಅವರ
ಲೇಖನಿಯಿಂದ ಮೂಡಿ ಬಂತು. ಈ ಬರಹದ ಹಿಂದೆ ಪ್ರತಿಭೆಗೆ ಪ್ರೇರಣೆಯಾಗಿ
ವಿಶಾಲವಾದ ಲೋಕಾನುಭವವಿದೆ. ವಿಸ್ತಾರವಾದ ಅಧ್ಯಯನವಿದೆ.

ಮಾಸ್ತಿ ಬೆಳೆದದ್ದು ಎರಡು ಹಳ್ಳಿಗಳಲ್ಲಿ - ಮಾಸ್ತಿ ಮತ್ತು ಹೊಂಗೇನಹಳ್ಳಿ.
ಒಂದು ಕಾಲದಲ್ಲಿ ನೆಮ್ಮದಿಯಾಗಿದ್ದು ಆಗ ಬಡತನವನ್ನು ಅನುಭವಿಸುತ್ತಿದ್ದ
ಕುಟುಂಬದಲ್ಲಿ, ಹಳ್ಳಿಯಲ್ಲಿ ಗೌರವವನ್ನು ಉಳಿಸಿಕೊಂಡಿದ್ದ ಕುಟುಂಬದಲ್ಲಿ ಅವರ
ಬಾಲ್ಯ ಮತ್ತು ಕೌಮಾಱ್ಯ ಕಳೆದವು. ತಾತ, ಸೋದರಮಾವ, ಸ್ವತಃ
ಬಡತನದಲ್ಲಿದ್ದವರು. ಅವರನ್ನು ಓದಿಸಿದರು, ಮೈಸೂರಿಗೆ ಓದಲು ಬಂದಾಗ,
`ವಾರಾನ್ನದ ಹುಡುಗ' ಆದರು; ಅವರಿವರ ಮನೆಯಲ್ಲಿ ವಾರದಲ್ಲಿ ಒಂದೊಂದು ದಿನ
ಊಟ. ಹುಡುಗನನ್ನು ಮನೆಯವನೆಂದೇ ಕಾಣುವವರು ಕಾಣುವರು. ಎಷ್ಟೇ ಆಗಲಿ
-22-
ವಾರದ ಹುಡುಗ ಎಂದು ಕಾಣುವವರೂ ಉಂಟು. ಎಂಟಾಣೆ, ಒಂದು ರೂಪಾಯಿ
ಎಂದರೆ ಬಹು ದೊಡ್ಡ ಮೊತ್ತ. ಅವರ ಸೋದರ ಮಾವ ಪೋಲಿಸ್ ಇಲಾಖೆಯವರು.
ಅವರಿಗೆ ಹೊಸ ಕೋಟು ಬಂದಾಗ, ಸೋದರಳಿಯೆ ಮಾಸ್ತಿಯವರಿಗೆ ತಮ್ಮ ಹಳೆಯ
ಕೋಟನ್ನು ಅವರ ಗಾತ್ರಕ್ಕೆ ಮಾಡಿಸಿಕೊಟ್ಟರು. ಮಾಸ್ತಿ ಅದನ್ನು ಆರೇಳು ವರ್ಷ
ಬಳಸಿದರು. ಮಾಸ್ತಿಯವರಿಗೆ ಹದಿನೇಳು ವರ್ಷವಾಗಿದ್ದಾಗ, ಅವರ ತಾಯಿಗೆ
ಮೂವತ್ತಾರು ವರ್ಷವಾಗಿದ್ದಾಗ, ಒಂದೇ ವಾರದಲ್ಲಿ ಮಾಸ್ತಿಯವರ ಅಜ್ಜಿ, ತಂದೆ,
ತಮ್ಮ ಮೂವರೂ ಪ್ಲೇಗಿನಲ್ಲಿ ತೀರಿಕೊಂಡರು. ಈ ಎಲ್ಲ ಕಷ್ಟ ಉಂಡ ಮಾಸ್ತಿ
ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದರು. ಸವರನ್್ಗೆ
ದರಿಮೂರು ರೂಪಾಯಿ ಬೆಲೆ ಇದ್ದ ಕಾದಲ್ಲಿ ಇನ್ನೂರು ರೂಪಾಯಿ ಸಂಬಳದ ಕೆಲಸ
ಮಾಡಿದರು. ಹಿಂದಿನ ಮೈಸೂರು ಸಂಸ್ಥಾನದಲ್ಲಿ ಜಿಲ್ಲಾಧಿಕಾರಿಗಳಾದರು. ಎಕ್ಸೈಸ್
ಕಮೀಷನರ್ ಆದರು. `ರಾಜಸೇವಾಪ್ರಾಸಕ್ತ' ಬಿರುದು ಪಡೆದರು. ಮಂತ್ರಿಯಾಗುವ
ಅವಕಾಶ ಒದಗಿತು ಎಂದಾಗ ತಮ್ಮ ತಪ್ಪಿಲ್ಲದೆ ಕಳೆದುಕೊಂಡು ಸ್ವಇಚ್ಛೆಯಿಂದ ನಿವೃತ್ತಿ
ಪಡೆಯಬೇಕಾಯಿತು. ತಂದೆ, ತಾತ ಇವರು ಬಡತನದಲ್ಲಿ ನೊಂದವರು, ನನಗೊಂದು
ಕೆಲಸ ಸಿಕ್ಕರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಕನಸು ಕಂಡಿದ್ದರು.
ಒಳ್ಳೆಯ ಕೆಲಸವೇ ಸಿಕ್ಕಿತು. ಮಾಸ್ತಿಯವರಿಂದ ಒಂದು ಪಂಚೆಯನ್ನು ಪಡೆಯಲೂ
ಇಬ್ಬರು ಹಿರಿಯರೂ ಇರಲಿಲ್ಲ. ಈ ಮಾತನ್ನು ನೋವಿನಿಂದ ಮಾಸ್ತಿಯವರೇ
ಮತ್ತೆಮತ್ತೆ ಹೇಳಿದ್ದಾರೆ.

ಮಾಸ್ತಿಯವರ ಬಾಲ಼್ಯ ಕಳೆದದ್ದು ಸುಂದರವಾದ ಹಳ್ಳಿಗಳಲ್ಲಿ.
ಸೌಹಾರ್ದದಿಂದ ಬದುಕುತ್ತಿದ್ದ ಸಮುದಾಯಗಳ ನಡುವೆ. ಹಳ್ಳಿಯ ಜೀವನದ ನಿಕಟ
ಅನುಭವ ಅವರದು. ಮುಂದೆ ವಿದ್ಯಾರ್ಥಿಯಾಗಿ ಮೈಸೂರು, ಬೆಂಗಳೂರು,
ಮದರಾಸುಗಳ ಬದುಕನ್ನು ಕಂಡರು. ಅಧಿಕಾರಿಗಳು, ಶ್ರೀಮಂತರಿಂದ ಹಿಡಿದು
ಬಡಬಗ್ಗರವರೆಗೆ, ದೀನರವರೆಗೆ ಎಲ್ಲ ಸ್ತರಗಳ ಜನರ ಬದುಕನ್ನು ಕಂಡರು.
ಅಧಿಕಾರದಿಂದ, ಶ್ರೀಮಂತಿಕೆಯಿಂದ ಸೊಕ್ಕಿದವರನ್ನು ಕಂಡರು. ಅಧಿಕಾರ
ಶ್ರೀಮಂತಿಕೆಗಳಿದ್ದರೂ ಸುಸಂಸ್ಕೃತರಾಗಿ ಬದುಕಿದವರನ್ನು ಕಂಡರು. ಅಧಿಕಾರ
ಸ್ಥಾನವು ಚಿಂತನಶೀಲನಾದ ಮನುಷ್ಯನಿಗೆ, ಮಾನವ ಸ್ವಭಾವದಲ್ಲಿ ಕುತೂಹಲ ಇರುವ
ಮನುಷ್ಯನಿಗೆ ಅಪೂರ್ವ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಮಾಸ್ತಿ ತಮ್ಮ
ಸಾಹಿತ್ಯದಲ್ಲಿ ಒಂದು ಜಗತ್ತನ್ನೇ ನಿರ್ಮಿಸಿಬಿಟ್ಟರು. ಜ್ಞಾನದ ಶಿಖರದ ಮೇಲೆ
ನಿಂತವರಿಂದ, ಮಹಾನುಭಾವರಿಂದ ಹಿಡಿದು ಅತ್ಯಂತ ನೀಚರು ಕ್ಷುದ್ರರವರೆಗೆ
ಅಸಾಧಾರಣ ವೈವಿಧ್ಯದ ನೂರಾರು ಪಾತ್ರಗಳನ್ನು ಸೃಷ್ಟಿಸಿದರು. ಈ ಜಗತ್ತಿನ ಹಿಂದೆ
ಅವರ ಬಾಲ್ಯದ ಹಳ್ಳಿಯ ಬದುಕು, ಮೂವರ್ತು ವರ್ಷ ಹಿರಿಯ ಅಧಿಕಾರಿಯಾಗಿ
ಲಭ್ಯವಾದ ಜನಸಂಪರ್ಕ ಮತ್ತು ಒಳನೋಟಗಳು ಇವೆ.
-23-

ಮಾಸ್ತಿಯವರ ಸಾಹಿತ್ಯದ ಹಿಂದಿನ ಸಾಹಿತ್ಯದ ಪ್ರೇರಣೆಗಳು ಹಲವು.
ಬಾಲ್ಯದಲ್ಲಿ ಅವರು ಆಚಾರಸಂಪನ್ನ ಶ್ರೀವೈಷ್ಣವ ಕುಟುಂಬದಲ್ಲಿ, ಪರಂಪರಾಗತ
ಜೀವನ ವ್ಯವಸ್ಥೆಯ ಹಳ್ಳಿಯಲ್ಲಿ ಕಳೆದರು. ಈ ಆವರಣದಲ್ಲಿ ಸಹಜವಾಗಿ ಈ ನಾಡಿನ
ಪೌರಾಣಿಕ ಮತ್ತು ಸಾಹಿತ್ಯಕ ಸಂಪತ್ತಿನ ಪರಿಚಯ ಸಾಕಷ್ಟು ಆಯಿತು. ಕಾಲೇಜಿನಲ್ಲಿ
ಹಿರಿಯ ವಿದ್ವಾಂಸರಿಂದ ಕನ್ನಡ ಸಾಹಿತ್ಯದ ಬೋಧನೆಯಾಯಿತು. ಇಂಗ್ಲಿಷ್
ಸಾಹಿತ್ಯವನ್ನು ವಿಶೇಷವಾಗಿ ಆರಿಸಿಕೊಂಡು ಅದರಲ್ಲಿ ಎಂ. ಎ. ಪದವಿ ಪಡೆದರು.
ವಿಶ್ವವಿದ್ಯಾನಿಲಯಕ್ಕೇ ಪ್ರಥಮಸ್ಥಾನ ಪಡೆದರು. ಮುಂದೆ ತಾವೇ ಸಂಸ್ಕೃತವನ್ನು
ಅಭ್ಯಾಸಮಾಡಿ ಸಂಸ್ಕೃತ ಸಾಹಿತ್ಯ ಮತ್ತು ತತ್ವಚಿಂತನೆಯ ಭಂಡಾರದ ಬೀಗದ
ಕೈಯನ್ನೇ ಪಡೆದುಕೊಂಡರು. ಕನ್ನಡ ಸಾಹಿತ್ಯದ ಅಭ್ಯಾಸವನ್ನು ಮುಂದುವರೆಸಿದರು.
(ಮಾಸ್ತಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಇದನ್ನು ಬಸವ ಸಮಿತಿ, `ಸೇಯಿಂಗ್ಸ್ ಆಫ್ ಬಸವಣ್ಣ' ಎಂಬ ಶೀರ್ಷಿಕೆಯಲ್ಲಿ
ಪ್ರಕಟಿಸಿದೆ. (1983) ಇದಕ್ಕೆ ಮುನ್ನಡಿ ಬರೆಯುತ್ತ ಶ್ರೀ ಬಿ.ಡಿ. ಜತ್ತಿಯವರು,
ತಮಗೆ ನೆನಪಿರುವಂತೆ, ಬಸವಣ್ಣನವರ ವಚನಗಳನ್ನು ಮೊದಲು ಇಂಗ್ಲಿಷಿಗೆ
ಅನುವಾದಿಸಿದರು ಮಾಸ್ತಿಯವರು, ತಮ್ಮ ಗಾಢವಾದ ವಿದ್ವತ್ತು ಮತ್ತು
ಪರಿಪೂರ್ಣ ಕಲಾಕೌಶಲವನ್ನು ಈ ಕಾರ್ಯಕ್ಕೆ ಎರೆದಿದ್ದಾರೆ ಎಂದು ಹೇಳಿದ್ದಾರೆ).
ಇಂಗ್ಲಿಷಿನ ಮೂಲಕ ಅವರು ಯೂರೋಪಿನ ಮತ್ತು ಪರ್ಷಿಯಾದ ಸಾಹಿತ್ಯಗಳ
ಪರಿಚಯ ಮಾಡಿಕೊಂಡರು. ಇದೆಲ್ಲದರ ಜೊತೆಗೆ, ಜಾನಪದದಲ್ಲಿ ಅವರಿಗೆ
ನೈಜವಾದ ಪ್ರೀತಿ, ಅಧಿಕಾರಿಗಳಾಗಿ ಪ್ರವಾಸ ಹೋದಾಗ ಹಳ್ಳಿಯ ಜನರ ಮತ್ತು
ಕೆಲವು ಗುಡ್ಡಗಾಡು ಜನರ ಹಾಡುಗಳು, ನೃತ್ಯಗಳಲ್ಲಿ ವಿಶೇಷ ಆಸಕ್ತಿ ತೋರಿಸಿದರು.
ಅವರನ್ನು ಕರೆಸಿ ನೃತ್ಯಗಳನ್ನು ನೋಡಿ ಉಡುಗೊರೆಗಳನ್ನು ಕೊಟ್ಟರು. ಅವರ
ಹಾಡುಗಳನ್ನು ಬರೆದುಕೊಂಡು ಪ್ರಕಟಿಸಿದರು. ಅವನ ಮನಸ್ಸಿನ ಬೇರುಗಳು ಇಲ್ಲಿಯ
ನೆಲದಲ್ಲಿ ಇಳಿದವು; ಅದರ ರೆಂಬೆಗಳು ಮೇಲೆ ಸಾಗಿ ಹರಡಿ ಎಲ್ಲ ಕಡೆಗಳ ಬೆಳಕು
ಗಾಳಿಗಳನ್ನು ಕಂಡವು.

ಅವರ ಪ್ರತಿಭೆ ಅವರ ಓದನ್ನೂ ಲೋಕಾನುಭವವನ್ನೂ ಬದುಕಿನ
ಅನುಭವವನ್ನೂ ಅಮೂಲ್ಯ ಬಂಡವಾಳವನ್ನಾಗಿ ದುಡಿಸಿಕೊಂಡಿತು.

ಆಧುನಿಕ ಕನ್ನಡ ಸಾಹಿತ್ಯ ಯುಗದ ಶಿಲ್ಪಿಗಳಲ್ಲಿ ಒಬ್ಬರು ಮಾಸ್ತಿಯವರು.
ಕಥನ ಕವನ, ಸುನೀತ, ಭಾವಗೀತೆ, ಗೀತೆಗಳು ಖಂಡಕಾವ್ಯ ಇವು ಕಾವ್ಯ ಕ್ಷೇತ್ರದಲ್ಲಿ
ಅವರು ಆರಿಸಿದ ಪ್ರಕಾರಗಳು. ದಾಸಸಾಹಿತ್ಯದ ಪರಂಪರೆಯನ್ನು ಮುಂದುವರೆಸಿ
ಭಕ್ತಿಪ್ರಧಾನ ಗೀತೆಗಳನ್ನು ರಚಿಸಿದರು. ಹಲವಕ್ಕೆ ರಾಗಗಳನ್ನು ಸೂಚಿಸಿದರು.
ಇಂಗ್ಲಿಷಿನ ಬ್ಲ್ಯಾಂಕ್್ವರ್ಸಿಗೆ ಸಂವಾದಿಯಾದ ಛಂದಸ್ಸನ್ನು ಮಧುಗಿರಿಯಲ್ಲಿ
ಸಬ್್ಡಿವಿಷನ್ ಆಫೀಸರ್ ಆಗಿದ್ದ ದಿನಗಳಲ್ಲಿ ರೂಪಿಸಿದ್ದನ್ನು `ಭಾವ'ದಲ್ಲಿ
-24-
ವಿವರಿಸಿದ್ದಾರೆ. ಇದಕ್ಕೆ ವೆಂಕಣ್ಣಯ್ಯನವರು `ಸರಳ ರಗಳೆ' ಎನ್ನುವ ಹೆಸರನ್ನು
ಕೊಟ್ಟರು. `ನವರಾತ್ರಿ' ಕನ್ನಡದಲ್ಲಿ ವಿಶಿಷ್ಟವಾದ ಕಥನ ಕವನಗಳ ಮಾಲೆ.
`ಶ್ರೀರಾಮ ಪಟ್ಟಾಭಿಷೇಕ'ದಲ್ಲಿ ಶ್ರೀರಾಮನನ್ನು ಶ್ರೇಷ್ಠ ಮಾನವನನ್ನಾಗಿ ಕಂಡು
ರಾಮಾಯಣದ ಕಥೆಯನ್ನು ಹೊಸ ತಂತ್ರದಿಂದ ಬಿತ್ತರಿಸಿದ್ದಾರೆ; ಮನುಷ್ಯನ
ಸಂಸ್ಕೃತಿಯ ಗೌರೀಶಂಕರವನ್ನು ಇಲ್ಲಿ ಕಾಣಬಹುದು. ಮಾಸ್ತಿಯವರ ಕಾವ್ಯದಲ್ಲಿ
ಭಾವದ ಗಾಢತೆಯುಂಟು. ತೀವ್ರತೆ, ಉದ್ವೇಗ ಇಲ್ಲ. ಮಾಸ್ತಿಯವರ `ಸುಬ್ಬಣ್ಣ,'
ಕಿರುಕಾದಂಬರಿ, ಒಂದು ಚೇತನದ ಯಾತ್ರೆ. ಅವರ ಎರಡು ಐತಿಹಾಸಿಕ
ಕಾದಂಬರಿಗಳು, `ಚನ್ನಬಸವನಾಯಕ' ಮತ್ತು `ಚಿಕವೀರರಾಜೇಂದ್ರ' ನಮ್ಮ
ಭಾಷೆಯ ಐತಿಹಾಸಿಕ ಕಾದಂಬರಿಗಳಲ್ಲಿ ವಿಶಿಷ್ಟವಾದವು. ನಿಜವಾಗಿ ಪ್ರತಿ
ಕಾದಂಬರಿಯ ನಾಯಕ ಒಂದು ಸಮುದಾಯವೇ - ಬಿದನೂರಿನ
ಪ್ರಜಾಸಮುದಾಯ, ಕೊಡಗಿನ ಪ್ರಜಾಸಮುದಾಯ. ಎರಡು
ಸಮುದಾಯಗಳಲ್ಲಿಯೂ ವ್ಯವಸ್ಥೆ ಸಡಲಿ, ಏರುಪೇರಾಗಿ, ತನ್ನನ್ನು ತಾನೇ
ಸರಿಪಡಿಸಿಕೊಳ್ಳಲಾರದೆ ಹೊರಗಿನ ಆಕ್ರಮಣಕಾರನನ್ನು ಕೈಬೀಸಿ ಕರೆಯುತ್ತದೆ.
ಯಾವುದೇ ಸಮುದಾಯ ಇಂತಹ ಸ್ಥಿತಿಗೆ ಬರುವುದೇಕೆ? ಯಾವ ಶಕ್ತಿಗಳು ಮತ್ತು
ದೌರ್ಬಲ್ಯಗಳು ಒಂದು ಸಮುದಾಯವನ್ನೇ ಶಿಥಿಲಗೊಳಿಸುತ್ತವೆ? ಹೀಗೆ ಎಲ್ಲ
ಕಾಲಗಳಲ್ಲಿ, ಎಲ್ಲ ಜನಕ್ಕೆ ಮುಖ್ಯವಾದ ಪ್ರಶ್ನೆಗೆ ಉತ್ತರಗಳನ್ನು ಮಾಸ್ತಿ ಇತಿಹಾಸದ
ಚೌಕಟ್ಟಿನಲ್ಲಿ ಹುಡುಕುತ್ತಾರೆ. ಆಧುನಿಕ ಕನ್ನಡ ನಾಟಕ ಯುಗ ಪ್ರಾರಂಭವಾದ
ದಿನಗಳಲ್ಲಿ ಅವರ ಮೊದಲನೆಯ ನಾಟಕ `ಶಾನ್ತಾ' ಪ್ರಕಟವಾಯಿತು (1923).
ಅವರ `ಕಾಕನಕೋಟೆ'ಯ ರಂಗಭೂಮಿ ಪ್ರದರ್ಶನದ ಸತ್ವವನ್ನು ಈಚೆಗೆ
ಕಂಡುಕೊಂಡಿದ್ದೇವೆ. ಅವರು ಬಳಸುವ ಭಾಷೆ, ಅವರು ಎಷ್ಟರ ಮಟ್ಟಿಗೆ
ಕಾಡಕುರುಬರ ಬದುಕಿನ ರೀತಿಯನ್ನು ಒಳಹೊಕ್ಕು ಅರ್ಥ ಮಾಡಿಕೊಂಡಿದ್ದರು
ಎನ್ನುವುದಕ್ಕೆ ಕನ್ನಡಿ. ನಾನು ಒಮ್ಮೆ `೟ಶೋಧರಾ' ವಿಷಯ ಭಾಷಣ ಮಾಡಿದ
ನಂತರ ತರುಣರೊಬ್ಬರು `ಇದೊಂದು ನಾಟಕವೇ? ಇದರಲ್ಲಿ ಕಾನ್್ಫ್ಲಿಕ್ಟ್,
ಸಂಘರ್ಷ ಎಲ್ಲಿದೆ ?' ಎಂದು ಕೇಳಿದರು. ನಾಟಕದಲ್ಲಿ ಸಂಘರ್ಷವಿದ್ದೇ
ತೀರಬೇಕೆಂಬುದು ಪಾಶ್ಚಾತ್ಯ ನಾಟಕದ, ಮೀಮಾಸಂಕಾರರ ದೃಷ್ಟಿ.
`ಯಶೋಧರಾ'ದಲ್ಲಿ ಈ ಬಗೆಯ ಸಂಘರ್ಷವಿಲ್ಲ. ಅಲ್ಲಿರುವುದು ಒಂದು ವಿನ್ಯಾಸ.
ಒಂದು ಸೂಕ್ಷ್ಮವಾದ, ಮೃದುವಾದ, ಧೀರವಾದ, ಉದಾತ್ತ ಚೇತನ, ಯಾತನೆಯಲ್ಲಿ
ಸಿಲುಕಿ, ತನ್ನನ್ನು ಜಗತ್ತಿನ ಭಾಗವಾಗಿ ಕಂಡುಕೊಳ್ಳುವುದರ ಮೂಲಕ ಆ
ಯಾತನೆಯಿಂದ ಬಿಡುಗಡೆ ಪಡೆಯುತ್ತದೆ. ಬುದ್ಧ ಯಶೋಧರೆಯರ ಭೇಟಿಯ
ದೃಶ್ಯದ ಮಹತ್ವ ಇದೇ. ಯಶೋಧರೆಯ ಯಾತನೆಯಿಂದ ಬಿಡುಗಡೆ ತರುವುದು
ಬುದ್ಧನ ಮಾತುಗಳಿಂದ ಅಲ್ಲ. (ಅವನ ಉತ್ತರಿಂದ ತನಗೆ ಸಮಾಧಾನವಾಗಿಲ್ಲ
-25-
ಎಂದು ಸ್ಪಷ್ಟವಾಗಿ ಹೇಳುತ್ತಾಳೆ.) ಅವನ ದರ್ಶನದಿಂದ, ಅವನು
ಅವನಾಗಿರುವುದರಿಂದ, ಅವನ ಭವ್ಯತೆಯ ಸಾನಿಧ್ಯದ ಅನುಭವದಿಂದ,
ಮಾಸ್ತಿಯವರ ಪೀಳಿಗೆ ಹೊಸ ಮನೋಧರ್ಮದ, ಹೊಸ ಯುಗದಲ್ಲಿ ತುಡಿಯುವ
ಸಂವೇದನೆಗಳಿಗೆ ಅಭಿವ್ಯಕ್ತಿ ಕೊಡುವ ಹೊಸ ರೀತಿಯ ಸಾಹಿತ್ಯವನ್ನು ನಿರ್ಮಿಸಿತು.
ಆದರೆ ಹಿಂದಿನ ಸಾಹಿತ್ಯವನ್ನು ನಿರಾಕರಿಸದೆ ಪರಂಪರೆಯನ್ನು ಸಾಹಿತ್ಯವನ್ನು
ಉಳಿಸಿಕೊಂಡಿತು. ತಮ್ಮ ವಿಮರ್ಶೆಯ ಮೂಲಕ, ಭಾಷಣಗಳ ಮೂಲಕ ಮಾಸ್ತಿ ಈ
ಕೆಲಸ ಮಾಡಿದರು. 1927ರಲ್ಲೆ ಅವರು `ರೀಸೆಂಟ್ ಟ್ರೆಂಡ಼್ಸ್ ಇನ್ ಕನ್ನಡ
ಲಿಟರೇಚರ್' ಎಂಬ ವಿಷಯವಾಗಿ ಎರಡು ಉಪನ್ಯಾಸಗಳನ್ನು ಕೊಟ್ಟರು !

ಮಾಸ್ತಿಯವರ ಇಡೀ ಸಾಹಿತ್ಯವನ್ನು ಸಮೀಕ್ಷಿಸಲು ಒಂದು ಬೃಹತ್
ಗ್ರಂಥವನ್ನೇ ಬರೆಯಬೇಕು. ಈ ಸಾಹಿತ್ಯದಲ್ಲಿ ಚಂಡಮಾರುತದಂತಹ
ಭಾವಪ್ರಚಂಡತೆ, ಉದ್ವೇಗವಿಲ್ಲ, ಕೋಪತಾಪಗಳಿಲ್ಲ, ಮೈ ನಡುಗಿಸುವ ಮಾನವ
ಸ್ವಭಾವದ ಅನಾವರಣವಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಆವರಣಗಳಿಗೆ ಮುಂದಿನ
ಪೀಳಿಗೆಗಳು ಕೊಟ್ಟ ಪ್ರಾಧಾನ್ಯ ಇಲ್ಲಿ ಕಾಣುವುದಿಲ್ಲ. ಆದರೆ ಇದು ಮನುಷ್ಯ
ಸ್ವಭಾವದಲ್ಲಿ ಅಡಗಿರುವ ದುಷ್ಟತನ ಕ್ರೌರ್ಯ ನೀಚತನಗಳ ಅರಿವನ್ನು
ಉಳಿಸಿಕೊಂಡೂ, ವಾಸ್ತವಪ್ರಜ್ಞೆಯನ್ನು ಬಿಟ್ಟುಕೊಡದೆ, ಮನುಷ್ಯನಲ್ಲಿ
ಗೌರವವನ್ನು ಪ್ರೀತಿಯನ್ನು ಭರವಸೆಯನ್ನು ಉಳಿಸುವ ಸಾಹಿತ್ಯ; ಬಡತನ ನೋವು
ಅನ್ಯಾಯಗಳ ಅರಿವನ್ನು ಉಳಿಸಿಕೊಂಡೂ ಬದುಕಿನಲ್ಲಿ ಪ್ರೀತಿಗೌರವಗಳನ್ನು
ಉಳಿಸುವ ಸಾಹಿತ್ಯ.

ಮಾಸ್ತಿಯವರೆನ್ನು ಸ್ಮರಿಸುವಾಗ ಹೇಳಬೇಕಾದ ಮಾತೊಂದಿದೆ. ಅವರು ಆ
ದಿನಗಳಲ್ಲಿ ಕನ್ನಡಿಗರ ಆತ್ಮಗೌರವವನ್ನು ಎತ್ತಿ ಹಿಡಿದರು. ಶುದ್ಧ ಕನ್ನಡದಲ್ಲಿ
ಬರೆಯುವುದಕ್ಕಿಂತ, ಮಾತನಾಡುವುದಕ್ಕಿಂತ ತಪ್ಪು ಇಂಗ್ಲಿಂಷಿನಲ್ಲಿ ಬರೆಯುವುದು,
ಮಾತನಾಡುವುದು ಘನತೆ ಎಂದು ಹಲವರು ಭಾವಿಸಿದ್ದ ಕಾಲದಲ್ಲಿ, ಶೇಷಾದ್ರಿ
ಅಯ್ಯರ್ ಕಾಲದಲ್ಲಿ ಮತ್ತು ಅನಂತರ ಮದರಾಸಿನಿಂದ ಬಂದು ಇಲ್ಲಿ ಉನ್ನತ
ಸ್ಥಾನಗಳನ್ನು ಗಿಟ್ಟಿಸಿದ ತಮಿಳು ಅಧಿಕಾರಿಗಳು ಕನ್ನಡವನ್ನು ಕನ್ನಡಿಗರನ್ನು
ತಿರಸ್ಕಾರದಿಂದ ಕಾಣುತ್ತಿದ್ದ ಕಾಲದಲ್ಲಿ ಇಂಗ್ಲಿಷ್ ಎಂ. ಎ. ಯಲ್ಲಿ ಪ್ರಥಮ
ಸ್ಥಾನಗಳಿಸಿ ದೊಡ್ಡ ಹುದ್ದೆಯಲ್ಲಿ ಮಾಸ್ತಿ ಕನ್ನಡದಲ್ಲಿ ಮಾತನಾಡಿದರು, ಬರೆದರು,
ಕನ್ನಡಿಗನೆಂದು ಹೆಮ್ಮೆಪಟ್ಟರು. ಹತ್ತೊಂಬತ್ತು ಆಡಳಿತಗಳಿಗೆ ಹಂಚಿಹೋಗಿದ್ದ
ನಾಡಿನಲ್ಲೆಲ್ಲ ಸಂಚರಿಸಿ, ಅಂದಿನ ರಾಜ್ಯ-ಪ್ರಾಂತಗಳ ಎಲ್ಲೆಗಳನ್ನು ಬದಿಗೊತ್ತಿ,
ಕನ್ನಡಿಗರೆಲ್ಲ ಒಂದು ಎಂದು ಸಾರಿದರು. ಅಧಿಕಾರದಲ್ಲಿದ್ದಾಗ, ನಿವೃತ್ತರಾದ ಮೇಲೆ
ಇನ್ನೂ ಹೆಚ್ಚಿನ ಪ್ರಮಾಣದಲ್ಲಿ, ಕರ್ನಾಟಕದಲ್ಲೆಲ್ಲ ಸುತ್ತಾಡಿದರು. ಕನ್ನಡಿಗರನ್ನು
ಎಚ್ಚರಿಸಿದರು. ಕನ್ನಡಿಗರು ಒಂದಾಗಬೇಕೆಂದು ಬರೆದರು. ರಾಜಕೀಯವಾಗಿ
-26-
ಮಾತ್ರವಲ್ಲ, ಮಾನಸಿಕವಾಗಿ ಒಂದಾಗಬೇಕೆಂದು ಹೇಳಿದರು, ಬೇಡಿದರು. ತಮ್ಮ
ವೈಯಕ್ತಿಕ ಜೀವನದಲ್ಲಿ ಆತ್ಮಗೌರವವನ್ನು ಯಾವ ಪೀಠದ ಮುಂದೆಯೂ
ಬಲಿಕೊಡಲಿಲ್ಲ. ಮಹಾರಾಜರ ಮುಂದೆಯೂ ಒಪ್ಪಿಸಲಿಲ್ಲ. ಹಾಗೆಯೇ ಕನ್ನಡಿಗರು
ಆತ್ಮಗೌರವವನ್ನು ಬಲಿಕೊಡಲಾಗದೆಂದು ಎಚ್ಚರಿಸಿದರು. ದಾರಿ ತೋರಿದರು.

ನೀಜವಾಗಿ ಆತ್ಮಗೌರವ ಉಳ್ಳವರು ಇತರರ ಆತ್ಮಗೌರವವನ್ನು
ಗಾಯಗೊಳಿಸುವದಿಲ್ಲ. ಮಾಸ್ತಿ ಯಾರನ್ನೇ ಆಗಲಿ ಮಾತನಾಡಿಸುತ್ತಿದ್ದ ರೀತಿ,
ಕಾಣುತ್ತಿದ್ದ ರೀತಿ ಅಂತಃಕರಣದ ರೀತಿ, ವಾತ್ಸಲ್ಯದ ರೀತಿ ಅನುಪಮ. ಅವರಲ್ಲಿ
ಓರೆಕೋರೆಗಳಿರಲಿಲ್ಲ ಎಂದಲ್ಲ. ಎಲ್ಲ ಮನುಷ್ಯರಿಗಿರುವಂತೆ ಇದ್ದವು. ಆದರೆ, ಅವರ
ನಗೆ, ನಿರ್ಮಲ ಮನಸ್ಸಿನ ಹೊರ ರೂಪವಾದ ನಗೆ, ಅವರನ್ನು ಕಂಡವರ ಮನಸ್ಸಿನಲ್ಲಿ
ಎಂದೂ ಩ಿಲ್ಲುತ್ತಿತ್ತು. ಮಮತೆಯಿಂದ ಮಾತನಾಡಿಸಿ, ಅಂತಃಕರಣದಿಂದ ಪ್ರಶ್ನಿಸಿ,
ಕೆಲವೇ ನಿಮಿಷಗಳಲ್ಲಿ ನೀವು ಅವರ ಕುಟುಂಬದವರು ಎನ್ನಿಸುವಂತೆ ಮಾಡುತ್ತಿದ್ದರು.
ಅವರ ಜೀವನ ಸಂಧ್ಯೆಯಲ್ಲಿ ನೋಡಲು ಬರುತ್ತಿದ್ದವರು ಅವರಿಗಿಂತ ಇಪ್ಪತ್ತರಿಂದ
ಎಪ್ಪತ್ತು ವರ್ಷ ಚಿಕ್ಕವರು. ಆದರೆ ವರ್ಷಗಳ ಅಂತರ ಕೆಲವೇ ನಿಮಿಷಗಳಲ್ಲಿ ಕರಗಿ
ಹೋಗುತ್ತಿತ್ತು. ನಿಮ್ಮನ್ನು ನಗಿಸಿ ತಾವೂ ನಕ್ಕು, ನಗುನಗುತ್ತಲೇ ಅನುಭವದಿಂದ
ಮೂಡಿ ಬಂದ ಮಾತುಗಳನ್ನು ಹೇಳುತ್ತ, ನಿಮ್ಮ ಕುಟುಂಬದಲ್ಲಿ ನಿಮಗೆ ಪ್ರಿಯವಾದ
ಹಿರಿಯರೊಬ್ಬರ ಜೊತೆಗೆ ಮಾತನಾಡುತ್ತಿದ್ದೀರಿ ಎನ್ನಿಸಿಬಿಡುತ್ತಿದ್ದರು. ಅವರು ಹಠ
ಮಾಡಬಲ್ಲವರಾಗಿದ್ದರು. ಒಂದು ನಿರ್ಧಾರ ಕೈಗೊಂಡರೆ ಕಲ್ಲುಬಂಡೆಯಂತೆ
ಆಗಿಬಿಡಬಲ್ಲವರಾಗಿದ್ದರು. ಆದರೆ ಅವರ ಅಂತಃಕರಣ ಸದಾ ತುಡಿಯುತ್ತಿತ್ತು. ನಾನು
ಮಡಿಕೇರಿ ಕಾಲೇಜಿನಲ್ಲಿದ್ದಾಗ, ರಜೆಗೆ ಬೆಂಗಳೂರಿಗೆ ಬಂದೆ. ಮಾಸ್ತಿಯವರ ಮನೆಗೆ
ಹೋದೆ. ಏನೋ ಮಾತು ಬಂದು, ನನ್ನ ವಿದ್ಯಾರ್ಥಿನಿಯೊಬ್ಬಳು ಬಡತನದಿಂದ ಪಟ್ಟ
ಬವಣೆಯನ್ನು ಹೇಳಿ ಒಂದು ಸಂದರ್ಭದಲ್ಲಿ ಆಕೆ ತನ್ನ ಶೀಲವನ್ನು ಮಾರಿಕೊಳ್ಳಲು
ಸಿದ್ಧಳಾಗಿದ್ದುದನ್ನು ಹೇಳಿದೆ. ನಾನು ಸುಮಾರು ಒಂದು ಗಂಟೆ ಅವರ ಮನೆಯಲ್ಲಿದ್ದೆ.
ಹೊರಡಲು ಎದ್ದಾಗ ಅವರು, "ಶೇಷಗಿರಿ ರಾವ್, ನಿಮ್ಮ ವಿದ್ಯಾರ್ಥಿನಿಯ ವಿಷಯ
ಹೇಳಿದಿರಲ್ಲ. ಆಕೆಯ ಸಹಾಯಕ್ಕೆ ನಿಮ್ಮ ಕೈಗೆ ಒಂದಿಷ್ಟು ಹಣ ಕೊಡಲೆ? ಮತ್ತೆ
ಬೇಕಾದರೆ ಬರೆಯಿರಿ" ಎಂದರು. ಅವರು ನೋಡಿಯೇ ಇರದಿದ್ದ, ಅವರ ಪಾಲಿಗೆ
ಹೆಸರೂ ಅಲ್ಲದ ಹುಡುಗಿಯ ವಿಷಯಕ್ಕೆ!

ತಾವು ಕಾಣದವರ ವಿಷಯದಲ್ಲಿ ಅಷ್ಟೊಂದು ಅನುಕಂಪವಿದ್ದ
ಮಾಸ್ತಿಯವರು ತಮ್ಮ ಸೋದರ ಲೇಖಕರ ವಿಷಯದಲ್ಲಿ ಉದಾರವಾಗಿದ್ದದ್ದು
ಆಶ್ಚರ್ಯವಲ್ಲ. ಬೇಂದ್ರೆಯವರು ಸ್ವಾತಂತ್ರ್ಯಸಂಗ್ರಾಮಕ್ಕೆ ಸಂಬಂಧಿಸಿದಂತೆ
`ನರಬಲಿ' ಕವಲವನ್ನು ಬರೆದು, ಕೆಲಸ ಕಳೆದುಕೊಂಡರು. ಕೆಲಕಾಲ ಸೆರೆಮನೆಯನ್ನು
ಕಂಡರು. ಸೆರೆಮನೆಯಿಂದ ಹೊರಬಂದಮೇಲೆ ಅವರ ಹಣದ ಸ್ಥಿತಿ
-27-
ಚಿಂತೆಗೀಡುಮಾಡುವಂತೆ ಇದ್ದಿತು. ಈ ಕಾಲದಲ್ಲಿ ಮಾಸ್ತಿಯವರು ಅವರಿಗೆ
ನೆರವಾದರು, ಹಣಕೊಟ್ಟರು. ಮಾಸ್ತಿಯವರು `ಭಾವ'ದ ಸಂಪುಟದಲ್ಲಿ ಈ
ಸಂದರ್ಭವನ್ನು ಪ್ರಸ್ತಾಪಿಸಿ ಹೀಗೆ ಬರೆಯುತ್ತಾರೆ. "ದಿಟದಲ್ಲಿ ನಾನು ಈ
ಸಂಗತಿಯನ್ನು ಹೇಳಬಾರದು. ಆದರೆ ನಾನು ಕೆಲವು ಕಾಲ ಬೇಂದ್ರೆಯವರಿಗೆ ನಾಲ್ಕು
ಕಾಸು ಕೊಟ್ಟೆ ಎಂಬ ಮಾತು ನಮ್ಮ ಜನದಲ್ಲಿ ಹರಡಿದೆ. ಅವರು ಅದನ್ನು ಹತ್ತುಬಾರಿ
ಹೇಳಿದ್ದಾರೆ. ತನ್ನ ನೆರವಿಗೆ ನಿಂತ ಅಣ್ಣ ಎಂದು ನನ್ನನ್ನು ಹೊಗಳಿದ್ದಾರೆ. ಈ
ಬಾಂಧವ್ಯದ ಸ್ವರೂಪವನ್ನು ತಿಳಿಯಲಾರದೆ ಕೆಲವು ಮಿತ್ರರು ತಪ್ಪು ಮಾತನ್ನಾಡಿ
ಬೇಂದ್ರೆಯವರ ಮನಸ್ಸನ್ನು ನೋಯಿಸಿದ್ದಾರೆ. ನನಗೆ
ಬೇಸರವನ್ನುಂಟುಮಾಡಿದ್ದಾರೆ. ಇಂಥ ತಪ್ಪು ತಿಳುವಳಿಕೆ ಅಳಿಯಲಿ ಎಂದು ನಾನು ಈ
ಮಾತನ್ನು ಹೇಳಿದ್ದೇನೆ. ಬೇಂದ್ರೆಯವರಿಗೆ ನನ್ನಿಂದ ಸಂದ ಕಾಸು ನಾನು ದೂರದ
ಒಬ್ಬ ಪರಿಚಯಸ್ಥರಿಗೆ ಮಾಡಿದ ಸಹಾಯ ಅಲ್ಲ. ಜೊತೆಗಾರನಾದ ಶ್ರೇಷ್ಠ ಕವಿಗೆ
ನೀಡಿದ ಕಾಣಿಕೆ." ಜಿ.ಪಿ. ರಾಜರತ್ನಂ ಅವರು ಎಂ.ಎ. ಪಾಸು ಮಾಡಿದನಂತರ ಕೆಲಸ
ಸಿಕ್ಕದೆ ಬವಣೆಪಟ್ಟರು. ಆಗ ಮಾಸ್ತಿಯವರು ಸೆನ್ಸಸ್ ಸೂಪರಿಂಟೆಂಡಂಟರು.
ತಿಂಗಳಿಗೆ ಇಪ್ಪತ್ತೈದು ರೂಪಾಯಿ ಸಂಬಳದ ಮೇಲೆ ಗುಮಾಸ್ತರನ್ನು ನೇಮಕ
ಮಾಡಿಕೊಳ್ಳಬಹುದಾಗಿತ್ತು. ರಾಜರತ್ನಂ ಮಾಸ್ತಿಯವರ ಬಳಿಗೆ ಹೋಗಿ `ಏನಾದರೂ
ಕೆಲಸ ಕೊಡುತ್ತೀರಾ?' ಎಂದರು. ರಾಜರತ್ನಂ ಜೀವನಕ್ಕೆ ಒಂದು ಕೆಲಸಬೇಕು
ಎಂದರು. ಮಾಸ್ತಿ, "ನಿಮಗೆ ಬೇರೆ ಒಂದು ಯೋಚನೆ ಹೇಳುತ್ತೇನೆ. ನಾನು
ಫಾಹಿಯಾನ್, ಹುಯಿಯೆನ್ ತ್ಸಾಂಗ್ ನಮ್ಮದೇಶದಲ್ಲಿ ಪ್ರಯಾಣಮಾಡಿ ಬರೆದ
ವರದಿಗಳನ್ನು ಕನ್ನಡಕ್ಕೆ ತರಬೇಕೆಂದು ಎಂದೋ ಯೋಚಿಸಿದೆ. ಲೋಕದ ಬೇರೆ
ಭಾಷೆಗಳ ಉತ್ತಮ ಗ್ರಂಥಗಳನ್ನು ಕನ್ನಡಕ್ಕೆ ತರುವ ಕೆಲಸ ಆಗಬೇಕಾಗಿದೆ. ಈಚೆಗೆ
ನಾನು ವಾಲ್ಟೇರನ `ಕ್ಯಾಂಡಿಡೆ' ಪುಸ್ತಕವನ್ನು ಓದಿದೆನು. ಅದನ್ನು ಕನ್ನಡಕ್ಕೆ ತಂದರೆ
ಚೆನ್ನ ಆದೀತು ಎನ್ನಿಸಿತು. ನೀವು ಮನೆಯಲ್ಲಿ ಕುಳಿತು ಈ ಭಾಷಾಂತರ ಕೆಲಸವನ್ನು
ಮಾಡಿ. ನಾನು ನಿಮಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಕೊಡುತ್ತೇನೆ" ಎಂದರು.
ರಾಜರತ್ನಂ ಒಪ್ಪಿದರು. ಹೀಗೆ ಆರು ತಿಂಗಳು ನಡೆಯಿತು. ಆ ಹೊತ್ತಿಗೆ ರಾಜರತ್ನಂ
ಅವರಿಗೆ ಬೇರೆ ಪರಿಹಾರ ದೊರಕಿತು.

ಮಾಸ್ತಿಯವರು ತಮ್ಮ ಸಹಲೇಖಕರನ್ನು ಹೇಗೆ ಕಾಣುತ್ತಿದ್ದರು ಎನ್ನುವುದು
ಮತ್ತೆ ಮತ್ತೆ ನನ್ನ ಅನುಭವಕ್ಕೆ ಬಂದಿದೆ. ಸುಮಾರು ವರ್ಷಗಳ ಹಿಂದಿನ
ಮಾತು. ನಾನು ನನ್ನ ಸ್ನೇಹಿತರೊಬ್ಬರೂ ಒಬ್ಬ ಹಿರಿಯ ಸಾಹಿತಿಗಳ ಮನೆಗೆ
ಹೋದೆವು. ಅವರಿಗೆ ಆರೋಗ್ಯವಿರಲಿಲ್ಲ. ಮನೆಯಲ್ಲಿ ಕಾಸಿಲ್ಲ. ಡಾಕ್ಟರು,
ಹಣ್ಣುಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಔಷಧಗಳನ್ನು ಬರೆದುಕೊಟ್ಟರು. ಆ
-28-
ಹಿರಿಯರು ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿದರು. ತಮ್ಮ ಕಷ್ಟದ ವಿಷಯ
ಬಾಯಿ ಬಿಡಲಿಲ್ಲ. ಅವರ ಶ್ರೀಮತಿಯವರನ್ನು ಮಾತನಾಡಿಸಿದಾಗ ದುಃಖದ ಕಟ್ಟೆ
ಒಡೆದು, ವಾಸ್ತವಾಂಶ ಹೊರಕ್ಕೆ ಬಂತು. ಎರಡು ದಿನಗಳ ನಂತರ ಆಕಸ್ಮಾತ್ತಾಗಿ ನಾವು
ಮಾಸ್ತಿಯವರ ಮನೆಗೆ ಹೋದೆವು. ಈ ಸಂಗತಿಯನ್ನು ಪ್ರಸ್ತಾಪಿಸಿದೆವು. ನಾವು
ಹೊರಡುವಾಗ ಅವರು ಒಳಕ್ಕೆ ಹೋಗಿ, ಒಂದು ಲಕೋಟೆಯನ್ನು ತಂದುಕೊಟ್ಟು,
"ನೀವು ಅವರ ಮನೆಗೆ ಹೋಗಿ ದೇವರ ಮನೆಯಲ್ಲಿ ಇದನ್ನಿಟ್ಟು ಬಂದುಬಿಡಿ. ನನ್ನ
ಹೆಸರನ್ನು ಹೇಳಬೇಡಿ," ಎಂದರು. 1950 ರಲ್ಲಿ ನನ್ನ ತಂದೆ ಸ್ವಾಮಿರಾಯರು
ಇದ್ದಕ್ಕಿದ್ದಂತೆ ತೀರಿಹೋದರು. ಮಾಸ್ತಿಯವರಿಗೆ ಅವರ ಪರಿಚಯ ಇತ್ತು. ಅವರೂ
ಇನ್ನೂ ಹಲವಾರು ಹಿರಿಯ ಸಾಹಿತಿಗಳೂ ರುದ್ರಭೂಮಿಗೆ ಬಂದು ಸಾಂತ್ವನ
ಹೇಳಿದರು. ಕೆಲವು ದಿನಗಳ ನಂತರ ಮಾಸ್ತಿಯವರು ಹೇಳಿ ಕಳುಹಿಸಿದರು. ಅವರ
ಮನೆಗೆ ಹೋದಾಗ ಸ್ವಾಮಿರಾಯರ ಹಣಕಾಸಿನ ಸ್ಥಿತಿ ನನಗೆ ತಿಳಿಯದು. ಆದರೂ
ಅವರ ಪೆನ್್ಷನ್ ಬರುತ್ತಿದ್ದುದು ನಿಲ್ಲುತ್ತದೆ. ಮನೆಯಲ್ಲಿ ಹಿರಿಯರು ಹೋದವರ್ಷ
ಅನೇಕ ಖರ್ಚುಗಳಿರುತ್ತವೆ. ನೀವು ನಿಮಗೆ ಸಾಧ್ಯವಾದಾಗ `ಜೀವನ' ಪತ್ರಿಕೆಗೆ ಬರುವ
ಲೇಖನಗಳನ್ನೂ ಕಥೆಗಳನ್ನೂ ನೋಡಿ. ಪ್ರಕಟಣೆಗೆ ಅರ್ಹವಾದುದನ್ನು ಆರಿಸಿಡಿ.
ಪತ್ರಿಕೆಯ ಕೆಲಸದಲ್ಲಿ ನನಗೆ ಸಹಾಯಮಾಡಿ. ತಿಂಗಳಿಗೆ ಐವತ್ತು ರೂಪಾಯಿ
ಕೊಡಬಲ್ಲೆ" ಎಂದರು. (ಆಗಿನ ಕಾಲದಲ್ಲಿ ಕಾಲೇಜು ಉಪನ್ಯಾಸಕರ ಸಂಬಳ 75
ರೂಪಾಯಿ, ನಾನು ನೂರಕ್ಕೆ ತಲುಪಿದ್ದೆ). ಅವರು `ಜೀವನ'ದಲ್ಲಿ ನೆರವಾಗಲು ಬೇರೆ
ಒಬ್ಬರನ್ನು ಹಲವು ವರ್ಷಗಳಿಂದ ನೇಮಿಸಿಕೊಂಡಿದ್ದು ನನಗೆ ತಿಳಿದಿತ್ತು. ಅವರು ನನಗೆ
ನೆರವಾಗಬೇಕಿತ್ತು. ಆದರೆ ನನ್ನ ಆತ್ಮಾಭಿಮಾನಕ್ಕೆ ಕುಂದಾಗದಂತೆ ನೆರವಾಗಲು
ಬಯಸಿದರು. ನಾನು ನನ್ನದೇ ಕಾರಣಗಳನ್ನು ಹೇಳಿ, ಆ ಕೆಲಸವನ್ನು ಒಪ್ಪಲು ನನಗೆ
ಕಾಲಾವಕಾಶವಿಲ್ಲ ಎಂದು ಅವರಿಗೆ ಮನದಟ್ಟುಮಾಡಿ, ವಂದನೆ ಹೇಳಿ ಬಂದೆ. ಅನೇಕ
ವರ್ಷಗಳನಂತರ ನಡೆದ ಮತ್ತೊಂದು ಸಂಗತಿ. ನಾನು ಮಡಿಕೇರಿ ಕಾಲೇಜಿನಲ್ಲಿ
ಕೆಲಸಮಾಡಿತ್ತಿದ್ದೆ. ಬೇಸಿಗೆ ರಜಕ್ಕೆ ಬೆಂಗಳೂರಿಗೆ ಬಂದಿದ್ದೆ. ಒಂದು ದಿನ ಬೆಳಿಗ್ಗೆ
ಚಾಮರಾಜ ಪೇಟೆ ರಾಮೇಶ್ವರನ ಗುಡಿ ಬೀದಿಯಲ್ಲಿ ಸಾಹಿತ್ಯ ಪರಿಷತ್ತಿನ ಕಡೆ ಸೈಕಲ್
ಮೇಲೆ ಹೋಗುತ್ತಿದ್ದೆ. ಆ ರಸ್ತೆ ತೀರ ಏರು. ಸೈಕಲ್ ತುಳಿಯುವುದು ಪ್ರಯಾಸ. ಆದರೆ
29-30 ವರ್ಷದ ನನಗೆ ಅದು ತೋರಲಿಲ್ಲ. ಎದುರಿಗೆ ಮಾಸ್ತಿಯವರು
ಬರುತ್ತಿದ್ದರು. ಸೈಕಲ್ ಇಳಿದು ನಮಸ್ಕಾರ ಮಾಡಿದೆ. ಸ್ವಲ್ಪ ಹೊತ್ತು
ಮಾತನಾಡುತ್ತಿದ್ದರು, ಅನಂತರ ಹೊರಟು ಹೋದರು. ನಾನು ಮಡಿಕೇರಿಗೆ
ಹೋದಮೇಲೆ ಅವರಿಂದ ಒಂದು ಕಾರ್ಡ್ ಬಂತು. ಇದೇ ಶಬ್ದಗಳಲ್ಲ. ಆದರೆ ಈ
ಅರ್ಥ ಬರುವಂತೆ ಬರೆದಿದ್ದರು : "ನಿಮ್ಮನ್ನು ಅಂದು ನೋಡಿದ್ದು ಸಂತೋಷ.
ರಾಮೇಶ್ವರನ ಗುಡಿಬೀದಿಯ ಏರಿನಲ್ಲಿ ಸೈಕಲ್ ತುಳಿಯುತ್ತಿದ್ದಿರಿ. ಇದರಿಂದ
-29-
ಹೃದಯಕ್ಕೆ ಶ್ರಮವಾಗುತ್ತದೆ. ಸೈಕಲ್ ಇಳಿದು ತಳ್ಳಿಕೊಂಡು ಹೋಗುವುದು
ಅವಮಾನವಲ್ಲ."

ಮಾಸ್ತಿಯವರು ಎಷ್ಟು ಕಟ್ಟುನಿಟ್ಟಾಗಿರಬಲ್ಲರು ಎನ್ನುವುದೂ ನನಗೆ
ಅನುಭವಕ್ಕೆ ಹಲವು ಬಾರಿ ಬಂದಿತ್ತು.

1949ರಲ್ಲಿ ನಾನು ಸಾಹಿತ್ಯ ಪರಿಷತ್ತಿನ ಕಾಱ್ಯದರ್ಶಿಯಾಗಿದ್ದೆ. ಭಾರತ
ಸರಕಾರವು ಭಾಷಾವಾರು ಸೂತ್ರಗಳ ಪ್ರಶ್ನೆಯನ್ನು ಅಧ್ಯಯನ ಮಾಡಿ ವರದಿ
ಮಾಡಲು ಧಾರ್ ಆಯೋಗವನ್ನು ನೇಮಕ ಮಾಡಿತ್ತು. ಸಾಹಿತ್ಯ ಪರಿಷತ್ತು ಮತ್ತು
ಹಲವಾರು ಸಂಘಸಂಸ್ಥೆಗಳೂ, ವ್ಯಕ್ತಿಗಳೂ ಕರ್ನಾಟಕ ಏಕೀಕರಣವನ್ನು ಸಮರ್ಥಿಸಿ
ಆಯೋಗಕ್ಯ ಮನವಿಗಳನ್಩ು ಕಳುಹಿಸಿ ಆಗಿತ್ತು.

ಪರಿಷತ್ತಿನ ಮನವಿಯನ್ನು ಸಿದ್ಧಗೊಳಿಸುವಾಗ ನಾವು ಮಾಸ್ತಿಯವರನ್ನೂ
ಇತರ ಹಲವು ಹಿರಿಯರನ್ನೂ ಕಂಡು ಸಮಾಲೋಚನೆ ಮಾಡಿದ್ದೆವು. ಆಗ ಈ
ವಿಷಯವಾಗಿ ಮಾಸ್ತಿಯವರು ಮಾಹಿತಿಯನ್ನು ಸಂಗ್ರಹಿಸಿ ಸಿದ್ಧ ಮಾಡಿದ್ದ
ಫೈಲುಗಳನ್ನು ಕೊಟ್ಟಿದ್ದರು. ಎಷ್ಟು ವರ್ಷಗಳ ಕಾಲ, ಎಷ್ಟು ಮೂಲಗಳಿಂದ
ಮಾಹಿತಿಯನ್ನು ಸಂಗ್ರಹಿಸಿದ್ದರು, ತಾವೇ ಎಷ್ಟು ಟಿಪ್ಪಣಿಗಳನ್ನು ಸಿದ್ಧಮಾಡಿದ್ದರು,
ಎಷ್ಟು ವಿಷಯಗಳು ಅವರ ಬೆರಳ ತುದಿಯಲ್ಲಿದ್ದವು ಎಂದು ನೋಡಿ ನಾನು
ಬೆರಗಾಗಿದ್ದೆ.

1949ರ ದಸರಾದಲ್ಲಿ ಒಂದು ದಿನ ನಮಗೊಂದು ತಂತಿ ಬಂದಿತು. ಧಾರ್
ಆಯೋಗ ಧಾರವಾಡಕ್ಕೆ ಬರುತ್ತಿದೆ, ಬೆಂಗಳೂರಿನಿಂದ ಮಾಸ್ತಿಯವರು, ಬಿ.
ಶಿವಮೂರ್ತಿಶಾಸ್ತ್ರಿಗಳು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು (ತಿರುಮಲೆ ತಾತಾಚಾರ್ಯ
ಶರ್ಮರು) ಮತ್ತು ಕಾರ್ಯದರ್ಶಿ (ನಾನು) ನಿಗದಿತ ದಿನಾಂಕದಂದು
ಧಾರವಾಡದಲ್ಲಿ ಆಯೋಗದ ಮುಂದೆ ಸಾಕ್ಷ್ಯ ನೀಡಬೇಕು ಎಂದು. ಇದ್ದದ್ದು ಇನ್ನು
ಮೂರು ದಿನ. ಆಗ ದಸರಾ ಎಂದರೆ ಅಸಾಧ್ಯ ಜನಜಂಗುಳು, ಮೈಸೂರಿನ ದಸರಾ
ಇನ್ನೂ ಜಗತ್ಪ್ರಸಿದ್ಧವಾಗಿದ್ದ ದಿನಗಳು. ನಾನು ಅಧ್ಯಕ್ಷರು ತಾತಾಚಾರ್ಯ ಶರ್ಮರ
ಮನೆಗೆ ಹೋದೆ. ಅವರು, ತಾವು ಮುಖ್ಯಮಂತ್ರಿಗಳಿಗೆ ಹೇಳಿ ರೈಲ್ವೆಯಲ್ಲಿ ಸ್ಥಳ
ಕಾದಿರಿಸುವ ಪ್ರಯತ್ನ ಮಾಡುವುದಾಗಿ ಹೇಳಿ, "ಶಿವಮೂರ್ತಿ ಶಾಸ್ತ್ರಿಗಳಿಗೂ
ಮಾಸ್ತಿಯವರಿಗೂ ಹೇಳಿಬಿಡಿ, ಒಟ್ಟಿಗೆ ಪ್ರಯಾಣ ಮಾಡೋಣ" ಎಂದರು.

ಶಿವಮೂರ್ತಿ ಶಾಸ್ತ್ರಿಗಳ ಮನೆಗೆ ದೂರವಾಣಿ ಸೌಕರ್ಯ ಇತ್ತು.
ಮಾಸ್ತಿಯವರ ಮನೆಗೆ ಇರಲಿಲ್ಲ. ಶಾಸ್ತ್ರಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ
ಮಾಸ್ತಿಯವರ ಮನೆಗೆ ಹೋದೆ. ಅವರಿಗೂ ತಂತಿ ಬಂದಿತ್ತು. ನಾನು ಶರ್ಮರು
ಹೇಳಿದ ಮಾತನ್ನು ತಿಳಿಸಿದೆ.

ಮಾಸ್ತಿಯವರ ಉತ್ತರ ನನ್ನನ್ನು ದಿಗ್ಭ್ರಮೆಗೊಳಿಸಿತು. "ನಾನು
ಹೋಗುತ್ತಿಲ್ಲ, ನನಗೆ ಸ್ಥಳ ಕಾದಿರಿಸಬೇಡಿ."
-30-

ನಾನೆಂದೆ : "ತಾವು ಹೋಗದಿದ್ದರೆ ಹೇಗೆ ಸರ್! ಮಾಸ್ತಿಯವರ ಮಾತು
ಎಂದರೇ ತೂಕವಿರುತ್ತದೆ. ಏಕೀಕರಣಕ್ಕಾಗಿ ಹಲವು ವರ್ಷಗಳಿಂದ ತಾವು
ಶ್ರಮಿಸಿದ್ದೀರಿ."

"ಆಯೋಗವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೂ ಕಾರ್ಯದರ್ಶಿ~
ಗಳನ್ನೂ ಆಹ್ವಾನಿಸಿದೆ. ಅದು ಸರಿಯಾದ ಮಾರ್ಗ. ಕನ್ನಡಿಗರ ಪರವಾಗಿ ಸಾಹಿತ್ಯ
ಪರಿಷತ್ತು ಮಾತನಾಡಬೇಕು. ಈ ವಿಷಯದಲ್ಲಿ ಕನ್ನಡನಾಡಿನಲ್ಲಿ ಪರಿಷತ್ತಿನ
ಧ್ವನಿಯಲ್ಲದೆ ಬೇರೆ ಧ್ವನಿ ಇಲ್ಲ."

"ಪರಿಷತ್ತಿನ ನಿಲುವಿಗೆ ಬೆಂಬಲವಾಗಿಯೇ ತಾನು ಬಂದು
ಮಾತನಾಡಬೇಕು."

"ಅಗತ್ಯವಿಲ್ಲ, ಶರ್ಮರೂ ನೀವೂ ಹೋಗಿಬನ್ನಿ."

"ತಮ್ಮ ಮುಂದೆ ನಾನು ಹುಡುಗ. ನಾನು ಹೋಗದಿದ್ದರೆ ನಷ್ಟವಿಲ್ಲ. ತಾವು
ಹೋಗದಿದ್ದರೆ ಕರ್ನಾಟಕದ ಪಕ್ಷಕ್ಕೆ ನಷ್ಟ ಆಗಬಹುದು."

"ಇಲ್ಲಿ ವಯಸ್ಸಿನ ಪ್ರಶ್ನೆ ಇಲ್ಲ. ನೀವು ಶೇಷಗಿರಿ ರಾವ್ ಆಗಿ ಹೋಗುತ್ತಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಹೋಗುತ್ತಿದ್ದೀರಿ. ಈ ವಿಷಯದಲ್ಲಿ
ಶರ್ಮರು, ನೀವು ನಮ್ಮ ನಾಯಕರು."

"ನಾನು ಈ ವಿಷಯವನ್ನು ಅಧ್ಯಯನ ಮಾಡಿಲ್ಲ. ತಾವು ಅನೇಕ
ವರ್ಷಗಳನ್ನೇ ಇದಕ್ಕೆ ಧಾರೆ ಎರೆದಿದ್ದೀರಿ. ಕನ್ನಡ ನಾಡಿನಲ್ಲೆಲ್ಲ ಸಂಚಾರ
ಮಾಡಿದ್ದೀರಿ."

"ನನ್ನ ಫೈಲುಗಳಿವೆ. ತೆಗೆದುಕೊಂಡು ಹೋಗಿ. ಪರಿಷತ್ತಿನಲ್ಲೂ ಮಾಹಿತಿ
ಇದೆ. ಅಭ್ಯಾಸಮಾಡಿ, ನಾಳೆ ಬನ್ನಿ. ಈ ವಿಷಯವನ್ನು ಚರ್ಚೆ ಮಾಡೋಣ. ನನ್ನ
ಅಭಿಪ್ರಾಯಗಳನ್ನೂ ಕಾರಣಗಳನ್ನೂ ಹೇಳುತ್ತೇನೆ. ನಿಮಗೆ ಅನುಮಾನಗಳಿದ್ದರೆ
ಕೇಳಿ. ತಾತಾಚಾರ್ಯ ಶರ್ಮರೂ ಬರುತ್ತಾರಲ್ಲ. ನಿಮಗೇಕೆ ಅಧೈರ್ಯ ?"

ನಾನು ಎಶ್ಚೋ ವಾದಿಸಿದೆ, ಬೇಡಿದೆ. ಅವರದು ಒಂದೇ ಉತ್ತರ. "ನನ್ನ
ಅಭಿಪ್ರಾಯಗಳನ್ನೂ ಕನ್ನಡಿಗರ ಅಭಿಪ್ರಾಯಗಳನ್ನೂ ಆಯೋಗದ ಮುಂದೆ
ಸಮರ್ಥವಾಗಿ ಇಡುವವರಿಲ್ಲ ಎಂದು ನನಗೆ ತೋರಿದರೆ ನಾನು ಬರಬೇಕು. ಕನ್ನಡ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಕಾರ್ಯದರ್ಶಿಗಳೂ ಆಯೋಗದ ಮುಂದೆ ಸಾಕ್ಷ್ಯ
ಕೊಡುವಾಗ ಅಂತಹ ಸಂದೇಹಕ್ಕೆ ಅವಕಾಶವಿದೆ ಎನ್ನುವ ಭಾವನೆಯನ್ನು
ಉಂಟುಮಾಡಲಾರೆ. ಈ ವಿಷಯದಲ್ಲಿ ಕನ್ನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು,
ಕಾರ್ಯದರ್ಶಿಗಳು ನನ್ನ ನಾಯಕರು."

ಮಾಸ್ತಿಯವರೇ ಗೆದ್ದರು.
-31-

ಮಾಸ್ತಿಯವರು ಪರಿಪೂರ್ಣ ಮನುಷ್ಯ, ದೇವತಾಮನುಷ್ಯ ಎಂದೇನೂ
ನಾನು ಭಾವಿಸಿಲ್ಲ. ಅವರಲ್ಲಿ ಗೌರವವಿದ್ದವರು ವಿವರಿಸಿದ ಪ್ರಸಂಗಗಳನ್ನು ಕೇಳಿ
ನಾನು, `ಮಾಸ್ತಿಯವರು ಹೀಗೇಕೆ ಮಾಡಿದರು ?' ಎಂದು ಕೊಂಡಿದ್ದೇನೆ. ನಾನೇ
ಹಲವೊಮ್ಮೆ ಪೇಚಿನ ಪ್ರಸಂಗಗಳಿಗೆ ಸಿಕ್ಕಿಕೊಂಡಿದ್ದವನು. ಒಂದನ್ನು ಮಾತ್ರ ಇಲ್ಲಿ
ನಿದರ್ಶನವಾಗಿ ಹೇಳುತ್ತೇನೆ. ಒಮ್ಮೆ ಅವರೊಡನೆ ಮಾತನಾಡುವಾಗ ಟಿ.ಎಸ್.
ಎಲಿಯೆಟ್್ನ ಕಾವ್ಯವನ್ನು ಕಟುವಾಗಿ ಟೀಕಿಸಿದರು. ಯಾರಿಗೆ ಅರ್ಥವಾಗುತ್ತದೆ, ಕವಿ
ಅರ್ಥವಾಗುವ ಹಾಗಗ ಬರೆಯದಿದ಼್ದರೆ ಏನು ಪ್ರಯೋಜನ ಎಂದರು. ನಾನು
ಎಲಿಯೆಟ್್ನ ಕಾವ್ಯವನ್ನು ಸಮರ್ಥಿಸಿದೆ. ಇದಾದ ಕೆಲವು ದಿನಗಳನಂತರ ಅವರು
ಒಂದು ಪುಸ್ತಕ ಬೇಕೆಂದು ತಿಳಿಸಿದರು. ನಾನು ಬೆಂಗಳೂರು ವಿಶ್ವವಿದ್ಯಾಲಯದ
ಕೆಂಗೇರಿ ಬಳಿಯ ಕ್ಯಾಂಪಸ್ ಜ್ಞಾನಭಾರತಿಯಿಂದ ಮನೆಗೆ ಹಿಂದಿರುಗುತ್ತ, ಅವರ
ಮನೆಯ ಹತ್ತಿರ ಬಸ್ ಇಳಿದು ಹೋದೆ ಪುಸ್ತಕ ಕೊಡಲು. ಅಂದು
ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ಪ್ರಸಂಗದಿಂದ ನನ್ನ ಮನಸ್ಸು ತೀರ ಕೆಟ್ಟಿತ್ತು.
ಯಾರನ್ನು ನೋಡುವುದೂ ಬೇಕಿರಲಿಲ್ಲ, ಯಾರೊಡನೆಯೂ ಮಾತು ಬೇಕಿರಲಿಲ್ಲ.
ಮಾಸ್ತಿಯವರಿಗೆ ಪುಸ್ತಕ ತಲುಪಿಸಿ ಹೊರಟು ಬಿಡುವುದು ನನ್ನು ಉದ್ದೇಶವಾಗಿತ್ತು.
ಮಾತನಾಡುತ್ತ ಕುಳಿತರು. ಅನಂತರ ಒಳಕ್ಕೆ ಹೋಗಿ ಎಲಿಯೆಟ್್ನ
ಕವನಸಂಗ್ರಹವನ್ನು ತಂದು, `ಸ್ವೀನಿ ಅಗನಿಸ್ಟಿಸ್' ಕವನದ ಪುಟವನ್ನು ತೆರೆದು,
"ಇದರ ಅರ್ಥ ಹೇಳಿ" ಎಂದರು. ನನಗೆ ಏನೂ ಬೇಕಿರಲಿಲ್ಲ. ಎಲಿಯೆಟ್ ಕೆಲಸಕ್ಕೆ
ಬಾರದ ಕವಿ ಎಂದಿದ್ದರೂ `ಹೂಂ' ಎಂದು ಹೇಳಿ ಎದ್ದು ಬರುವ ಸ್ಥಿತಿಯಲ್ಲಿದ್ದೆ. ಆ
ಕವನ ನಾನು ಇಂಗ್ಲಿಷ್ ಐಚ್ಛಿಕವಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದ
ಕವನ. ಅದರ ವಿಷಯ ನಾಲ್ಕು ವಾಕ್ಯ ಹೇಳಿ ಎದ್ದೆ. ಒತ್ತಾಯ ಮಾಡಿದರು. `ಈ
ಪಂಕ್ತಿಯನ್ನು ನನಗೆ ತಿಳಿಸಿಕೊಡಿ' ಎಂದರು. ನಾನು ಹೇಗೋ ಎದ್ದು ಬಂದೆ. ಅದಾದ
ಕೆಲವು ದಿನಗಳ ನಂತರ ನಾನು ವೇದಿಕೆಯ ಮೇಲೆ ಅವರೊಡನಿದ್ದ ಸಭೆಯಲ್ಲಿ ಕಾವ್ಯದ
ವಿಷಯ ಮಾತನಾಡುತ್ತ, ಟಿ.ಎಸ್. ಎಲಿಯೆಟ್್ನ ಕಾವ್ಯ ಅರ್ಥವಾಗುವುದಿಲ್ಲ,
ಇಂತಹ ಕಾವ್ಯದಿಂದ ಯಾರಿಗೆ ಪ್ರಯೋಜನ ಎಂದು ಹೇಳುತ್ತ, "ಇಂಗ್ಲಿಷ್
ಫ್ರಫೆಸರರಿಗೂ ಅವನ ಕವನಗಳನ್ನು ವಿವರಿಸಲು ಬರುವುದಿಲ್ಲ, ನಾನು
ಕೇಳಿಕೊಂಡಿದ್ದೇನೆ - ನನಗೆ ವಿವರಿಸಿ ಅಂತ, ಅವರಿಂದ ಸಾಧ್ಯಾಗಲಿಲ್ಲ" ಎಂದರು!

ಆದರೆ ಎಂದೂ ಉದ್ದೇಶಪೂರ್ವಕವಾಗಿ ವ್ಯಂಗ್ಯ ಬಳಸಿದವರಲ್ಲ. (ಅವರ
ಇಡೀ ಸಾಹಿತ್ಯದಲ್ಲಿ, ಒಟ್ಟಿನಲ್ಲಿ ವ್ಯಂಗದ ಬಳಕೆ ಇಲ್ಲ ಎನ್ನಬಹುದು.) ದೊಡ್ಡವರು,
ಹೃದಯವಂತರು.

ನಾನು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾಗಲೇ ಒಂದು ಪ್ರಸಂಗ
ನಡೆಯಿತು. ಒಂದು ದಿನ ನಮ್ಮ ಕಾಲೇಜಿಗೆ ರಜೆ ಇತ್ತು. ನಾನು ಪರಿಷತ್ತಿನಲ್ಲಿ ನನ್ನ
-32-
ಕೊಠಡಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದೆ. ಮಟ ಮಟ ಮಧ್ಯಾಹ್ನ, ಹೊರಗೆ
ಪ್ರಖರವಾದ ಬಿಸಿಲು, ಆಳು ಬಂದು ಮಾಸ್ತಿಯವರು ಬರುತ್ತಿದ್ದಾರೆ ಎಂದು ಹೇಳಿದ.
ನಾನು ಎದ್ದು ಹೋಗಿ ಬರಮಾಡಿಕೊಂಡೆ. ಅವರಿಗೆ ಕೆಲವು ವಿಳಾಸಗಳು ಬೇಕಾಗಿದ್ದವು
(ಅವರ ಮಗಳ ಮದುವೆಗೆ ಆಹ್ವಾನಪತ್ರ ಕಳಿಹಿಸುವ ಸಂದರ್ಭದಲ್ಲಿ ಎಂದು ನನ್ನ
ನೆನಪು). ಕೆಲಸ ಮುಗಿದ ಮೇಲೆ ನಾನು ಹೇಳಿದೆ, "ಇದಕ್ಕೆ ತಾವು ಬಿಸಿಲಿನಲ್ಲಿ
ಬರಬೇಕಾಗಿತ್ತೆ? ಹೇಳಿಕಳುಹಿಸಿದ್ದರೆ ನಾನು ತಮ್ಮ ಮನೆಗೆ ಬರುತ್ತಿದ್ದೆ."
ಅವರೆಂದರು, "ನನಗೆ ಶೇಷಗಿರಿ ರಾಯರಿಂದ ಕೆಲಸ ಆಗಬೇಕಾದರೆ ಹೇಳಿ
ಕಳುಹಿಸುತ್ತೇನೆ. ತಪ್ಪಲ್ಲ. ಆದರೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಿಂದ
ಆಗಬೇಕಾದರೆ ನಾನೇ ಪರಿಷತ್ತಿಗೆ ಬರಬೇಕು." ಮತ್ತೊಂದು ಬಾರಿ ಅವರು ಒಂದಿಷ್ಟು
ಹಣ ಕಳುಹಿಸಿಕೊಟ್ಟರು. ಆ ದಿನಗಳಲ್ಲಿ `ಜೀವನ' ಪತ್ರಿಕೆ ಪರಿಷತ್ತಿನ
ಅಚ್ಚುಕೂಟದಲ್ಲಿ ಪ್ರಕಟವಾಗುತ್ತಿತ್ತು. ಅದರ ಸಂಬಂಧ ಹಣ ಪಾವತಿ ಮಾಡಿರಬೇಕು
ಎಂದು ನಾನು ಭಾವಿಸಿದೆ. ಆದರೆ ಲೆಖ್ಖ ತೆಗೆಸಿನೋಡಿದಾಗ ಮಾಸ್ತಿಯವರಿಂದ
ಪರಿಷತ್ತಿಗೆ ಹಣ ಯಾವುದೂ ಬರಬೇಕಾಗಿರಲಿಲ್ಲ. ನಾನೇ ಅವರ ಮನೆಗೆ ಹೋಗಿ
ಕೇಳಿದೆ, "ಇದು ಯಾವ ಲೆಖ್ಖಕ್ಕೆ ಕಳುಹಿಸಿದ್ದೀರಿ ?" ಅವರು ಹೇಳಿದರು, "ನನ್ನನ್ನ
ಅರಸೀಕರೆ (ಅರಸೀಕೆರೆಯೇ ಇರಬೇಕು, ನನಗೆ ಖಚಿತವಾಗಿ ನೆನಪಿಲ್ಲ) ಕರ್ನಾಟಕ
ಸಂಘದವರು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಹೋಗಿ ಬಂದೆ. ಅವರು
ಪ್ರಯಾಣದ ಖರ್ಚು ಕೊಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ಕೊಟ್ಟರು, ಹಣ
ಕನ್ನಡದ ಕೆಲಸಕ್ಕೆ ಖರ್ಚಾಗಲಿ ಅಂತ ನಿಮಗೆ ಕಳುಹಿಸಿದೆ."

ಬದುಕು ಚೆಲುವಾದದ್ದು, ಅರ್ಥಪೂರ್ಣವಾದದ್ದು.
ಮಾಸ್ತಿ ವ್ಯಕ್ತಿತ್ವ, ಮಾಸ್ತಿ ಸಾಹಿತ್ಯ ಎರಡೂ ಈ ಅನುಭವವನ್ನು ನಮ್ಮ
ಹೃದಯಕ್ಕೆ ಮುಟ್ಟಿಸುತ್ತವೆ.
-64-

ಎಸ್.ವಿ. ರಂಗಣ್ಣ

1972ನೆ ಇಸವಿ. ನನ್ನ `ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ'
ಗ್ರಂಥವನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿತ್ತು. 74 ವರ್ಷ ವಯಸ್ಸಿನ ನನ್ನ
ಗುರುಗಳಿಗೆ ಒಂದು ಪ್ರತಿಯನ್ನು ಕೊಡಲು ಹೋದೆ.

ತುಂಬಾ ವಿಶ್ವಾಸದಿಂದ ಮಾತನಾಡಿಸಿದರು, ಪುಸ್ತಕ ನೋಡಿ
ಸಂತೋಷಪಟ್ಟರು. ಅನಂತರ ಒಂದು ಮಾತು ಹೇಳಿದರು; "ನೀನು ಟಿ.ಎಸ್.
ಇಲಿಯೆಟ್್ನಿಂದ ಈಚೆಗಿನ ಸಾಹಿತ್ಯ ವಿಮರ್ಶೆ ವಿಷಯ ಬರೆದಿದ್ದೀ. ನಾನು ಪಾಶ್ಚಾತ್ಯ
ವಿಮರ್ಶೆ ಅಷ್ಟನ್ನೂ ಕುರಿತು ಬರೆಯಬೇಕು ಅಂತ ಇದೀನಿ. ನೋಟ್ಸ್ ಮಾಡಿದ್ದು
ಬೇಕಾದಷ್ಟಿವೆ. ಇನ್ನೂ ಕೆಲವು ಪುಸ್ತಕಗಳನ್ನು ನೋಡಬೇಕು".

ನನ್ನ ಪುಸ್ತಕವೇ 225 ಪುಟಗಳಷ್ಟಾಗಿತ್ತು. ಇನ್ನು ಇಡೀ ಪಾಶ್ಚಾತ್ಯ ವಿಮರ್ಶ
ಎಂದರೆ!

ನಾನು ಕೇಳಿದೆ, "ಎಷ್ಟು ಪುಟ ಆಗಬಹುದು ಸಾರ್ ?"

"ಆಗತ್ತೆ, 1300-1400 ಪುಟ ಆಗತ್ತೆ".

ನಾನು ಬೆರಗಾದೆ. 1971ರಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ
ಮಾಡಿದ ಮೂರು ಉಪನ್ಯಾಸಗಳ ಟಿಪ್ಪಣಿ ಇದ್ದೂ ನನಗೆ ಪುಸ್ತಕ ಬರೆಯಲು ಒಂದು
ವರ್ಷ ಹಿಡಿಯಿತು. 74 ವರ್ಷ ವಯಸ್ಸಿನ ನನ್ನ ಗುರುಗಳು ಇನ್ನೂ ಕೆಲವು
ಪುಸ್ತಕಗಳನ್ನು ಓದಿ 1300-1400 ಪುಟಗಳ ಪುಸ್ತಕ ಬರೆಯುವ ಯೋಜನೆ ಹಾಕಿ~
ಕೊಂಡಿದ್ದರು.

ಎಸ್. ವಿ. ರಂಗಣ್ಣನವರಿಗೆ ಇಂತಹ ಬೃಹತ್ ಯೋಜನೆಗಳು
ಸಹಜವಾಗಿದ್ದವು.

1987 ರ ಫೆಬ್ರವರಿ 17 ರಂದು ತೀರಿಕೊಂಡ ರಂಗಣ್ಣನವರು
ಕನ್ನಡನಾಡಿನಲ್ಲಿ ಆಧುನಿಕ ಯುಗದ ದೈತ್ಯ ವಿದ್ವಾಂಸರಲ್ಲಿ ಒಬ್ಬರು.

ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮೂರು ವರ್ಷ ಇಂಗ್ಲಿಷ್ ಆನರ್ಸ್
ತರಗತಿಯಲ್ಲಿ ನಾನು ಅವರ ವಿದ್ಯಾರ್ಥಿ. ನಮ್ಮ ಹಿರಿಯ ಪ್ರಾಧ್ಯಾಪಕರಲ್ಲಿ ಇಬ್ಬರು
ಒಬ್ಬರಿಂದೊಬ್ಬರು ತೀರ ಭಿನ್ನರಾಗಿದ್ದರು, ಇಬ್ಬರೂ ಒಳ್ಳೆಯ ಪ್ರಾಧ್ಯಾಪಕರೇ.
ಒಬ್ಬರು ರಂಗಣ್ಣ, ಮತ್ತೊಬ್ಬರು ಕೆ. ಅನಂತರಾಮಯ್ಯ. ಅನಂತರಾಮಯ್ಯನವರು
-65-
ಉಡುಪಿಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಹೆಚ್ಚು ಹೊಸ ಬಟ್ಟೆ ಹೊಲಿಸುತ್ತಿರಲಿಲ್ಲ.
ರಂಗಣ್ಮನವರು ಯಾವಾಗಲೂ ವರಪೂಜೆಗೆ ಹೊರಟ ವರನಂತೆ ಶಿಸ್ತಾಗಿರುತ್ತಿದ್ದರು.
ಒಳ್ಳೆಯ ಅಭಿರುಚಿಯಿಂದ ಆರಿಸಿದ ಬಟ್ಟೆಯ ಸೂಟು, ಅದಕ್ಕೆ ಒಪ್ಪುವ ನೆಕ್್ಟೈ,
ಜರತಾರಿ ರುಮಾಲು, ಒಂದಿಷ್ಟೂ ಧೂಳಿಲ್ಲದ ಷೂಗಳು - ರಂಗಣ್ಣನವರು
ಇದರಲ್ಲಿಯೂ ಬಿ.ಎಂ.ಶೀ. ಯವರ ಶಿಷ್ಯರೇ. ರಂಗಣ್ಣನವರು ಸ್ಫೂರ್ತಿದಾಯಕ
ಪ್ರಾಧ್ಯಾಪಕರು ಎಂದು ಹೇಳಲಾರೆ. ಎಲ್ಲ ವಿಷಯಗಳ ಆನರ್ಸ್ ವಿದ್ಯಾರ್ಥಿಗಳಿಗೆ
`ಹ್ಯಾಮ್ಲೆಟ್' ಪಾಠ ಮಾಡಿದರು. ಅನಂತರಾಮಯ್ಯನವರಂತೆ ಅವರು `ಥ್ರಿಲ್'
ಮಾಡುತ್ತಿದ್ದುದು, ಪಾಠದಲ್ಲಿ ನಾವು ಮೈಮರೆಯುವಂತೆ ಮಾಡುತ್ತಿದ್ದುದು ಕಡಿಮೆ.
ಪ್ರಾಯಶಃ ಇದಕ್ಕೆ ಕಾರಣ, ಅವರು ಪಾಠದಲ್ಲಿ ಮೈಮರೆಯುತ್ತಿರಲಿಲ್ಲ.
ಭಾವಪರವಶತೆ ಅವರಿಂದ ದೂರ. ಆದ್ದರಿಂದ ಅವರು ನಾಟಕ, ಕಾವ್ಯ ಪಾಠ
ಹೇಳಿದಾಗ ವಿಶೇಷ ಅನುಭವ ಆಗುತ್ತಿರಲಿಲ್ಲ - ಅನಂತರಾಮಯ್ಯನವರು ನಾಟಕ,
ಕಾವ್ಯ ಪಾಠಮಾಡಿದಾಗ ಆಗುತ್ತಿದ್ದಂತೆ. ಆದರೆ ರಂಗಣ್ಣನವರು ಪಾಠಮಾಡಿದ
ವಿಷಯಕ್ಕೆ ನಾವು ಮತ್ತೆ ಯಾವ ಪುಸ್ತಕವನ್ನೂ ಮುಟ್ಟುವ ಅಗತ್ಯ ಇರುತ್ತಿರಲಿಲ್ಲ.
ಅನಂತರಾಮಯ್ಯನವರು ಒಬ್ಬ ಕವಿಯನ್ನು ಪಾಠ ಹೇಳುವಾಗ ಪ್ರಾರಂಭದಲ್ಲೆ ನಾವು
ಓದಬೇಕಾದ ವಿಮರ್ಶನ ಗ್ರಂಥಗಳ ಪಟ್ಟಿಕೊಟ್ಟು ಪ್ರತಿ ವಿಮರ್ಶನ ಗ್ರಂಥವನ್ನೂ
ವಿಷಯವನ್ನು ಕುರಿತ ಮುಖ್ಯ ವಿಮರ್ಶಕ ಅಭಿಪ್ರಾಯಗಳನ್ನೆಲ್ಲ ಹೇಳಿ ಅವನ್ನು
ವಿಮರ್ಶಿಸುತ್ತಿದ್ದರು. ಆದ್ದರಿಂದ ತರಗತಿಯಲ್ಲಿ ನಾವು ಸರಿಯಾಗಿ ನೋಟ್ಸ್
ಬರೆದುಕೊಂಡರೆ, ನಮ್ಮ ಕೆಲಸ ತುಂಬಾ ಸುಲಭವಾಗುತ್ತಿತ್ತು.

ಪಾಠದಲ್ಲಿ ಶ್ರದ್ಧೆಯಿದ್ದ ವಿದ್ಯಾರ್ಥಿಯನ್ನು ಕಂಡರೆ ರಂಗಣ್ಣನವರಿಗೆ
ವಾತ್ಸಲ್ಯ. ಅವರು ಒಬ್ಬ ವಿದ್ಯಾರ್ಥಿಯನ್ನು ಕನ್ನಡದಲ್ಲಿ ಏಕವಚನದಲ್ಲಿ
ಮಾತನಾಡಿಸಿದರೆ ಅವನು ಅವರಿಗೆ ಮೆಚ್ಚಿಕೆಯಾದ ಎಂದರ್ಥ. ಇಲ್ಲವಾದರೆ
ಇಂಗ್ಲಿಷಿನಲ್ಲಿ ಮಾತನಾಡಿಸುವರು, ಕನ್ನಡದಲ್ಲಿ ಮಾತನಾಡಿಸಿದರೂ `ಮಾಡೋಣ',
`ನೋಡೋಣ' ಎಂದು ಮಾತನಾಡುತ್ತಿದ್ದರು. ನನ್ನ ವಿದ್ಯಾರ್ಥಿದೆಸೆಯ ಒಂದು
ಪ್ರಸಂಗ ನನಗೆ ನೆನಪಿದೆ. ಇಂಗ್ಲಿಷ್ ಆನರ್ಸ್ ಅಂತಿಮ ವರ್ಷದ ಪರೀಕ್ಷೆ
ಆನರ್ಸ್್ನಲ್ಲಿ ಪ್ರಥಮ ತರಗತಿ ಗಿಟ್ಟಿಸುವುದೆಂದರೆ ಹಿಮಾಲಯವನ್ನು ಎತ್ತಿಟ್ಟಹಾಗೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಆನರ್ಸ್ ಪ್ರಾರಂಭವಾದಾಗಿನಿಂದ
ನಾನು ಪರೀಕ್ಷೆಗೆ ಕುಳಿತು ಕೊಳ್ಳುವವರೆಗೆ ಇಬ್ಬರು ಮಾತ್ರ ಫಸ್ಟ್ ಕ್ಲಾಸ್ 
#ಸಾಧಿಸಿದ್ದರು.
ನನ್ನ ಸಿದ್ಧತೆ ಸಾಲದು ಎಂದು ಹೆದರಿ ನಾನು ಆ ವರ್ಷ ಪರೀಕ್ಷೆಗೆ ಕುಳಿತುಕೊಳ್ಳುವುದು
ಬೇಡ ಎಂದೇ ತೀರ್ಮಾನಿಸಿ ನನ್ನ ಸಹಪಾಠಿಯೊಬ್ಬರಿಗೆ ಹೇಳಿದೆ. ಅವರು ಅದನ್ನು
-66-
ನಮ್ಮ ಪ್ರೊಫೆಸರ್ ಬಿ.ನಾಗೇಶರಾಯರಿಗೆ ಹೇಳಿದರು. ಅದೇ ಒಂದು ಕಥೆ. ನನ್ನ
ತಂದೆಯ ಬುದ್ಧಿವಾದದಂತೆ ನಾನು ಪರೀಕ್ಷೆಗೆ ಹೋದೆ. ಮೊದಲನೆಯ ದಿನ ಪರೀಕ್ಷೆ
ಮುಗಿಸಿಕೊಂಡು ಬರುವ ಹೊತ್ತಿಗೆ ಜವಾನ ಬಂದು ಪ್ರೊಫೆಸರ್ ನಾಗೇಶರಾಯರು
ಕರೆಯುತ್ತಾರೆ ಎಂದ. ಅವರು ತುಂಬಾ ಪ್ರೀತಿಯಿಂದ ಬುದ್ಧಿ ಹೇಳಿ ಧೈರ್ಯ ಕೊಟ್ಟರು
ಅನಂತರ ರಂಗಣ್ಣ, ಅನಂತರಾಮಯ್ಯ ಹೇಳಿಕಳಿಸಿದರು. (ಇಬ್ಬರೂ ಒಂದೇ
ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದರು.) ಗಡಸು ಹೊರ ರೂಪದ, ಗಡಸುಮಾತಿನ
ಅನಂತರಾಮಯ್ಯನವರಲ್ಲಿ ಅಷ್ಟು ಮೃದುತ್ವ ಇದೆ ಎಂದು ಗೊತ್ತಾದದ್ದು ಅವತ್ತೆ.
ಅವರೂ ಬುದ್ಧಿ ಹೇಳಿದರು. ಅನಂತರ ರಂಗಣ್ಣ ಹೇಳಿದರು, `ನಿನಗಿರುವ ತೊಂದರೆ
ಎಂದರೆ ಎಷ್ಟು ಓದಬೇಕೊ ಅದಕ್ಕಿಂತ ಹೆಚ್ಚು ಓದಿಬಿಟ್ಟಿದ್ದೀಯ. ಈಗ ಮನೆಗೆ ಹೋಗಿ
ನಿದ್ರೆ ಮಾಡು, ಸಂಜೆ ಒಂದು ಸಿನಿಮಾ ನೋಡು, ನಾಳೆ ಹೆಚ್ಚು ಓದದೆ ಪರೀಕ್ಷೆಗೆ ಬಾ'
ಆ ವರ್ಷ ನನಗೆ ಫಸ್ಟ್ ಕ್ಲಾಸ್ ಬಂದೇ ಬಂತು (ಮರು ವರ್ಷ ಎಚ್.ವೈ
ಶಾರದಾಪ್ರಸಾದ್ ಫಸ್ಟ್ ಕ್ಲಾಸ್ ಪಡೆದರು.)

ಈ ಪರೀಕ್ಷೆಗೇ ಸಂಬಂಧಿಸಿದ ಒಂದು ಪ್ರಸಂಗ ನನಗೆ ನೆನಪಿದೆ. ಸೆಂಟಲ್
ಕಾಲೇಜಿನಲ್ಲಿ ಇಂಗ್ಲಿಷ್ ಬಿ.ಎ. (ಆನರ್ಸ್)ನ ಮೊದಲ ತಂಡ ನಮ್ಮದು. ಮೈಸೂರಿನ
ಮಹಾರಾಜ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಬಿ.ಎ. ಆನರ್ಸ್ ತರಗತಿಗಳು
ನಡೆದುಕೊಂಡು ಬಂದಿದ್ದವು. ನಮಗೆ ಹೆದರಿಕೆ - ಮೈಸೂರಿನ ವಿದ್ಯಾರ್ಥಿಗಳೊಂದಿಗೆ
ನಾನು ಸ್ಪರ್ಧಿಸುತ್ತಿದ್ದೇವೆ ಎಂದು. ಆಗಿನ ದಿನಗಳಲ್ಲಿ ಇಂಗ್ಲಿಷ್ ಆನರ್ಸ್
ಪರೀಕ್ಷೆಯಲ್ಲಿ ದ್ವಿತೀಯ ತರಗತಿ ಲಭ್ಯವಾದರೇ ಪುಣ್ಯ. ಅಂತಿಮ ಪರೀಕ್ಷೆಯ
ಫಲಿತಾಂಶಗಳ ಪರಿಶೀಲನೆಗೆ ಮೈಸೂರಿನಲ್ಲಿ ಪರೀಕ್ಷಕರ ಸಭೆ ಎಂದು ಸೇರುತ್ತದೆ
ಎಂದು ನಮಗೆ ತಿಳಿಯಿತು. ಮರುದಿನ ಅವರನ್ನು ಯಾವುದೋ ವಿಷಯಕ್ಕಾಗಿ
ಬೇಟಿಯಾಗುವಂತೆ ರಂಗಣ್ಣನವರು ನನಗೆ ಮತ್ತೊಬ್ಬರಿಗೆ ತಿಳಿಸಿದ್ದರು. ಫಲಿತಾಂಶದ
ವಿಷಯ ಅವರು ಮಾತನಾಡಬಹುದೆಂದು, ಕೊನೆಯ ಪಕ್ಷ ಸುಳಿವು
ಕೊಡಬಹುದೆಂದು, ನಮ್ಮ ನಿರೀಕ್ಷೆ, ಒಂದು ಗಂಟೆ ಅವರ ಮನೆಯಲ್ಲಿದ್ದೆವು. ಆ
ವಿಷಯ ಅವರು ಬಾಯಿ ಬಿಡಲಿಲ್ಲ. ಕಡೆಗೆ ನಾವೇ ನಮ್ಮ ಆತಂಕವನ್ನು
ತಡೆಯಲಾರದೆ, "ನಾಳೆ ನಮ್ಮ ಫಲಿತಾಂಶ ಪ್ರಕಟವಾಗುತ್ತದೆ, ನಮಗೆ ತುಂಬಾ
ಗಾಬರಿಯಾಗಿದೆ" ಎಂದೆವು. ಅವರು, "ಏನೂ ಯೋಚಿಸಬೇಡಿ ಯಾರಿಗೂ
ಅನ್ಯಾಯವಾಗುವುದಿಲ್ಲ" ಎಂದು ಬಿಟ್ಟರು, ಅಷ್ಟೆ!

ರಂಗಣ್ಣನವರದು ಅಪೂರ್ವ ವಿದ್ವತ್ತು. ತಮಗೆ ಆಸಕ್ತಿ ಇದ್ದ ವಿಷಯಗಳಲ್ಲಿ
ಕೆಲವೇ ದಿನಗಳ ಹಿಂದೆ ಪ್ರಕಟವಾದ ಪುಸ್ತಕಗಳನ್ನು ಸಹ ಅವರು ಓದಿರುತ್ತಿದ್ದರು.
ಅವರು ಓದದಿದ್ದ ಪುಸ್ತಕವನ್ನು ನಾನು ಓದಿದ್ದೆನೆಂದು ಒಮ್ಮೆಯಾದರೂ
ತೋರಿಸಬೇಕೆಂದು ನಾನು ಮಾಡಿದ ಪ್ರಯತ್ನ ನನಗೆ ನೆನಪಿದೆ. ಮೈಸೂರಿನಲ್ಲಿ ನಾನು
-67-
ಎಂ. ಎ. ಓದುತ್ತಿದ್ದಾಗ ಡೆನಿಸ್ ಸೌರ ಎಂಬಾತನ `ಮಿಲ್ಟನ್, ಮ್ಯಾನ್ ಅಂಡ್
ಥಿಂಕರ್' ಪುಸ್ತಕ ಕೆಲವೇ ದಿನಗಳ ಹಿಂದೆ ಪ್ರಕಟವಾಗಿ ತುಂಬಾ ಚರ್ಚೆಯಾಗುತ್ತಿತ್ತು.
ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಆ ಪುಸ್ತಕ ಇರಲಿಲ್ಲವಾದ್ದರಿಂದ
ನಾಗಪುರ ವಿಶ್ವವಿದ್ಯಾನಿಲಯದ ಗ್ರಂಥಾಲಯದಿಂದ ಅದನ್ನು ಎಂ.ಎ.
ವಿದ್ಯಾರ್ಥಿಗಳಿಗಾಗಿ ಕೆಲವು ದಿನಗಳಮಟ್ಟಿಗೆ ತರಿಸಿದ್ದರು. ನಾನು ಅದನ್ನು ಓದಿದೆ.
ಬೆಂಗಳೂರಿಗೆ ಬಂದಾಗ ಎಸ್. ವಿ. ಆರ್. ಅವರನ್ನು ಭೇಟಿಮಾಡುವ ಪದ್ಧತಿ. ಅವರಿಗೆ
ಆ ಪುಸ್ತಕ ಸಿಕ್ಕಿರುವುದಿಲ್ಲ ಎಂದು ನನಗೆ ಖಾತರಿ. ಮಾತನಾಡುತ್ತ
ಉದ್ದೇಶಪೂರ್ವಕವಾಗಿ ಮಿಲ್ಟನನ ವಿಷಯ ಎತ್ತಿ ಆ ಪುಸ್ತಕದಲ್ಲಿ ವ್ಯಕ್ತವಾದ
ಅಭಿಪ್ರಾಯ ಒಂದರೆಡನ್ನು ಹೇಳಿದೆ. ಅವರು, ಪುಸ್ತಕದಲ್ಲಿ ವ್ಯಕ್ತವಾದ ಇತರ
ಅಭಿಪ್ರಾಯಗಳನ್ನು ಹೇಳಿ, ಅವೆಲ್ಲವನ್ನೂ ವಿಶ್ಲೇಷಿಸಿಬಿಟ್ಟರು!

ಅವರ ವಿದ್ವತ್ತಿಗೆ ನೆರವಾದದ್ದು ಅವರ ಅಸಮಾನ ಜ್ಞಾಪಕ ಶಕ್ತಿ. ಅವರ
ವಿದ್ಯಾರ್ಥಿಗಳೆಲ್ಲ ಅವರ ನೆನಪಿನಲ್ಲಿ ಇರುತ್ತಿದ್ದರು. ಓದಿದುದೆಲ್ಲ ಸ್ಪಷ್ಟವಾಗಿ
ನೆನಪಿರುತ್ತಿತ್ತು. ಮಾತನ್ನು ಉದಹರಿಸಿದರೆ, ಖಚಿತವಾಗಿ ಉದಹರಿಸುತ್ತಿದ್ದರು.
ಒಮ್ಮೆ ನಾನು ಉತ್ತರ ಪತ್ರಿಕೆಯಲ್ಲಿ ಒಬ್ಬ ವಿಮರ್ಶಕನ ಒಂದು ವಾಕ್ಯವನ್ನು
ಉದಹರಿಸುವಾಗ ಒಂದು ಕಾಮ ಬಿಟ್ಟುಹೋಯಿತು. ರಂಗಣ್ಣನವರು ಅದನ್ನು
ಸೇರಿಸಿ, ಅಂಚಿನಲ್ಲಿ ಬರೆದರು, "Quote accurately" ಅನಂತರ ನನಗೆ ಹೇಳಿದರು,
`ಒಂದು ಕಾಮದಿಂದ ಅರ್ಥದಲ್ಲಿ ವ್ಯತ್ಯಾಸವಾಗಬಹುದು.'

ಬಿ.ಎಂ.ಶ್ರೀ. ಅವರ ಅಚ್ಚು ಮೆಚ್ಚಿನ ಶಿಷ್ಯರಾದ ರಂಗಣ್ಣನವರು
ಅವರಂತೆಯೇ ಇಂಗ್ಲಿಷ್ ಪ್ರೊಫೆಸರಾಗಿ ಕನ್ನಡದ ಕೆಲಸ ಮಾಡಿದ್ರು. ತಮ್ಮ ಕಾಲದ
ವಿಮರ್ಶಕರಲ್ಲಿ ಪ್ರಥಮ ಪಂಕ್ತಿಗೆ ಸೇರಿದರು. ಮುದ್ದಣನನ್ನು ಕುರಿತು ಬರೆದ,
`ಸಾಮಾನ್ಯ ಚಿತ್ರಕ್ಕೆ ಸುವರ಼್ಣ ಚೌಕಟ್ಟು' ಪ್ರಸಿದ್ಧ ಪ್ರಬಂಧ. ಅನೇಕರಿಗೆ ಅದರಿಂದ
ಅಸಮಾಧಾನವೂ ಆಯಿತು. ಮುದ್ದಣನ ವಿಷಯ ರಂಗಣ್ಣನವರ ಅಭಿಪ್ರಾಯವನ್ನು
ನಾವು ಒಪ್ಪಲಿ ಬಿಡಲಿ, ವಿಮರ್ಶೆಯಲ್ಲಿ ಅತ್ಯಭಿಮಾನ ಸಲ್ಲದು, ನಮಗೆ ಯಾವುದೇ
ಸಾಹಿತ್ಯೇತರ ಕಾರಣದಿಂದ ಪ್ರಿಯವಾದ ಕೃತಿಯ ಮೌಲ್ಯಮಾಪನ ಮಾಡುವಾಗ
ನಿರ್ಲಿಪ್ತತೆ, ಎಚ್ಚರಿಗೆ ಅಗತ್ಯ ಎಂಬ ಅವರ ನಿಲುವನ್ನು ಒಪ್ಪಬೇಕು. ನಮ್ಮಲ್ಲಿ
ಶೈಲಿಯನ್ನು ಅಭ್ಯಾಸಮಾಡಿದ ಪ್ರಾರಂಭದ ವಿಮರ್ಶಕರಲ್ಲಿ ಅವರೊಬ್ಬರು. ಅವರ
ಬೃಹತ್ ವಿಮರ್ಶನಾಕೃತಿ, `ಪಾಶ್ಚಾತ್ಯ ಗಂಭೀರ ನಾಟಕಗಳು' ಒಂದು ಆಕರಗ್ರಂಥ.
ಸುಮಾರು 1350 ಪುಟಗಳ ಈ ಕೃತಿಯಲ್ಲೂ ವಿವರವಾದ ವಿಮರ್ಶೆ ಕೊಡಲು
ಅವರಿಗೆ ಸಾಧ್ಯವಾಗಿಲ್ಲ. ಆದರೆ ಇಡೀ ಯೂರೋಪಿನ ಗಂಭೀರ ನಾಟಕದ
ಬೆಳವಣಿಗೆಯ ವಿಷಯ, ಇಷ್ಟೊಂದು ಮಾಹಿತಿ ಎಲ್ಲಿ ಸಿಕ್ಕುತ್ತದೆ? ಅವರು ಮೈಸೂರು
ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಪ್ರಾರಂಭವಾದಾಗ
-68-
ಮುಖ್ಯ ಸಂಪಾದಕರಾಗಿದ್ದರು. ಕಾಳಿದಾಸನ ಮೂರು ನಾಟಕಗಳ ವಿವರವಾದ
ವಿಮರ್ಶೆಯನ್ನು ಮೂರು ಕೃತಿಗಳಲ್ಲಿ ಕೊಟ್ಟಿದ್ದಾರೆ. ಅವರು ಇದ್ದಷ್ಟು ದಿನ
ಇಂಗ್ಲಿಷ್, ಕನ್ನಡ, ಸಂಸ್ಕೃತಿ ಯೂರೊಪಿಯನ್ ಸಾಹಿತ್ಯಗಳ ಬಗ್ಗೆ ಏನೇ ತಿಳುವಳಿಕೆ
ಬೇಕಾದರೂ ಒಂದು ಜೀವಂತ ಗ್ರಂಥಾಲಯ ಇದ್ದಂತಾಗಿತ್ತು. ಕೆಲವು ದಿನಗಳ ಹಿಂದೆ
ಮೈಸೂರಿನಲ್ಲಿ ಪ್ರೊ. ಜವರೇಗೌಡರು ಸ್ಮರಿಸಿಕೊಂಡರು, "ನಾವು ಭಾಷಾಂತರ
ಡಿಪ್ಲೊಮಾ ಪ್ರಾರಂಭಿಸಿದಾಗ ಅಧ್ಯಾಪಕರೇ ಇರಲಿಲ್ಲ. ರಂಗಣ್ಣನವರನ್ನು
ಕೇಳಿಕೊಂಡೆ. ಮೂರು ಕಾಸು ಸಂಬಳ ತೆಗೆದುಕೊಳ್ಳದೆ ಬಂದು ಪಾಠ ಹೇಳಿದರು."

ವಿದ್ವತ್ತಿನ ಶಿಸ್ತನ್ನು ನಾನು ರಂಗಣ್ಮನವರಿಂದ ಕಲಿತೆವು. ಅವರು ಆಗಿನ
ಕಾಲದಲ್ಲಿ `ರೆಟಿರಿಕ್' ಎಂದು ಕರೆಯುತ್ತಿದ್ದ ಅಲಂಕಾರ ಶಾಸ್ತ್ರವನ್ನೂ ಸಾಹಿತ್ಯ
ವಿಮರ್ಶೆಯನ್ನೂ ಸಾಹಿತ್ಯ ಚರಿತ್ರೆಯನ್ನೂ ಕಲಿಸಿದರು. ಯಾವ ವಿಷಯಗಳಲ್ಲಿ
ಎಲ್ಲ ಮುಖ್ಯ ವಾದಗಳ ಕ್ರಮವಾದ ಅಧ್ಯಯನ, ಮುಖ್ಯ ವಿಮರ್ಶಕರ ಮಾತುಗಳಲ್ಲಿ
(Quote accurately ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು) ಅವರ
ಅಭಿಪ್ರಾಯಗಳ ಪರಿಚಯ, ಅನಂತರ ತಮ್ಮ ಅಭಿಪ್ರಾಯದ ಮಂಡನೆ. ಅಲ್ಲೂ
ಅಗತ್ಯವಾದ qualification, modification ಗಳ ಬಗ್ಗೆ ಎಚ್ಚರ. ಆದರೆ ಅಭಿಪ್ರಾಯ
ತಪ್ಪು ಎಂದು ಅವರಿಗೆನ್ನಿಸಿದಾಗ ಮಾತು ಖಾರ. ಒಮ್ಮೆ ಅಮೆರಿಕದಿಂದ ಬಂದ
ವಿದ್ವಾಂಸನೊಬ್ಬ ಷೇಕ್ಸ್್ಪಿಯರ್ ಎನ್ನು ನಾಟಕಕಾರ ಇರಲಿಲ್ಲ, ಬೇರೊಬ್ಬರು
ಅವನ ಹೆಸರಿನಲ್ಲಿ ಬರೆದರು ಎಂದು ವಾದಿಸಿ ಎರಡು ಗಂಟೆ ಭಾಷಣ ಮಾಡಿದ.
ಅಧ್ಯಕ್ಷತೆ ವಹಿಸಿದ್ದ ರಂಗಣ್ಣನವರು ಎರಡು ಗಂಟೆ ಮಾತನಾಡಿ ಅವನ ಹೇಳಿಕೆಗಳನ್ನು
ಕೊಚ್ಚಿಹಾಕಿದರು. `ಇದೆಲ್ಲ ತೋರಿಕೆಯ ವಿದ್ವತ್ತು' ಎಂದು ಖಂಡಿಸಿದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಮೈಸೂರಿನ ಮಹಾರಾಜ ಕಾಲೇಜಿಗೆ
ವರ್ಗವಾದಾಗ ಅವರು ಅದನ್ನು ಸ್ವಾಗತಿಸಿದರು ಎಂದು ನನ್ನ ಭಾವನೆ. ನನಗೆ ಆಗಾಗೆ
ಹೇಳುತ್ತಿದ್ದರು, "ಬೆಂಗಳೂರಿನದು ಅಡಾಉಡಿ ಜೀವನ. ಮೈಸೂರಿನಲ್ಲಿ ಈಗಲೇ
ಒಂದು ಸೈಟ್ ಕೊಂಡುಕೊ. ರಿಟೈರ್ ಆಗುವುದಕ್ಕೆ ಸ್ವಲ್ಪ ಮೊದಲು ಮನೆ ಕಟ್ಟಿಸಿ
ಆಮೇಲೆ ಇಲ್ಲಿಗೇ ಬಂದುಬಿಡು. ಗಟ್ಟಿ ಕೆಲಸ ಮಾಡಬೇಕು ಎನ್ನುವವರಿಗೆ ಮೈಸೂರೇ
ಸರಿ."

ಅವರನ್ನು ಕೊನೆಯ ಬಾರಿ ನೋಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅವರು
ತೀರಿಕೊಳ್ಳುವುದಕ್ಕೆ ಎರಡು ತಿಂಗಳು ಮೊದಲು ನಾನು ಮೈಸೂರಿಗೆ ಯಾವುದೋ
ಕಾರ್ಯಕ್ರಮಕ್ಕೆ ಹೋದೆ. ನನ್ನ ಸ್ನೇಹಿತರು ಹೇಳಿದರು, ರಂಗಣ್ಣನವರು ಬಿದ್ದು
ಸೊಂಟ ಫ್ರ್ಯಾಕ್ಚರ್ ಆಗಿದೆ, ಮಲಗಿದ್ದಾರೆ ಎಂದು. ಬೆಳಿಗ್ಗೆ ಬೇಗ ಅವರ ಮನೆಗೆ
ಹೋದೆ. ಒಳಗೆ ಕೊಠಡಿಯಲ್ಲಿ ಮಲಗಿದ್ದರು. ಮನೆಯಲ್ಲಿದ್ದ ಮೊಮ್ಮಗಳನ್ನು
-69-
ಕರೆದು ನನ್ನ ಪರಿಚಯ ಮಾಡಿಕೊಟ್ಟರು. ಕಾಫಿ ತರಿಸಿದರು. ಮಾತಿನ ಮಧ್ಯೆ ನಾನು
ಕುತೂಹಲದಿಂದ ಕೇಳಿದೆ, "ಸರ್, ನೀವು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ
ಚರಿತ್ರೆಯನ್ನು ಬರೆಯಬೇಕಿಂದಿದ್ದಿರಲ್ಲ, ಆ ಕೆಲಸ ಎಲ್ಲಿಗೆ ಬಂತು ?" ಎಂಬತ್ತಾರು
ವರ್ಷದ ಹಿರಿಯರು ಹೇಳಿದರು, "ಬರೆಯಬೇಕು ಅಂತ ಇದ್ದೀನಿ. ನಾನು ಹೋದಸಲ
ಮಾತನಾಡಿದ ಮೇಲೆ ಇನ್ನು ಕೆಲವು ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡಿಕೊಂಡಿದ್ದೀನೆ.
I know what to write. ಈ ಸಲ ಎದ್ದಮೇಲೆ ಅದೇ ಕೆಲಸ". ನಾನೆಂದೆ, "ನೀವೇ ಏಕೆ
ಕಷ್ಟಪಡಬೇಕು? ಡಿಕ್ಟೇಟ್ ಮಾಡಿ. ಯಾರಾದರೂ ಬರೆದುಕೊಳ್ಳಲಿ." ಅವರೆಂದರು,
"ಉಹುಂ, ಆಗೋದಿಲ್ಲ. ಈಗ ಎಂ.ಎ. ಪಾಸ್ ಮಾಡಿಱ್ತಾರೆ, ಅನೇಕ ಹೆಸರುಗಳು
ಪಾರಿಭಾಷಿಕ ಶಬ್ದಗಳು ಅವರಿಗೆ ಗೊತ್ತಿರುವುದಿಲ್ಲ. ತಪ್ಪು ತಪ್ಪು ಬರೆದುಕೊಂಡು
ಬಿಡ್ತಾರೆ." ನನಗೆ ಹೇಳಿದರು, "ನೀನು ಇಂಗ್ಲಿಷ್ ಸಾಹಿತ್ಯ ಚರಿತ್ರೆಯನ್ನು ಕನ್ನಡದಲ್ಲಿ
ಬರೆಯುವ ಯೋಚನೆ ವಿಷಯ ಹೇಳಿದ್ದೆ. ರಿಟೈರಾಗಿ ಎರಡು ವರ್ಷ ಆಯಿತಲ್ಲ ?
ಯಾಕೆ ಮುಗಿಸಲಿಲ್ಲ ?" ನಾನು ಎದ್ದು ಹೊರಡುವಾಗ ಹೇಳಿದರು, "The next time
you come it must be to give me a copy of your History of English
Literature. Don't get idle."

ರಂಗಣ್ಣನವರ ಬರಹ, ಇಂಗ್ಲಿಷಿನಲ್ಲಿ ಆಗಲಿ ಕನ್ನಡದಲ್ಲಿ ಆಗಲಿ,
ಮುತ್ತಿನಂತಹ ಬರಹ. ದೊಡ್ಡ ಸ್ಫುಟವಾದ ಗುಂಡು ಅಕ್ಷರಗಳು. ಅವರು ಬರೆದ
ಕಾಗದ ಓದುವಾಗ, ಕುಳಿತು ಅವರೊಡನೆ ಮಾತನಾಡುವಾಗ ಅವರು ಎಷ್ಟು
ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತಾರೆ, ನುಡಿಕಟ್ಟುಗಳು, ಪದಗುಚ್ಛಗಳು ಎಷ್ಟು
ಸಹಜವಾಗಿ ಬಂದು ಸೇರಿಕೊಳ್ಳುತ್ತವೆ ಎಂದು ಅಚ್ಚರಿಯಾಗುತ್ತಿತ್ತು.

1960 ರ ಸುಮಾರಿಗೆ ಅವರು ನನಗೆ ಪಿ ಎಚ್.ಡಿ. ಗೆ ಕೆಲಸ ಮಾಡಲು ಒತ್ತಾಯ
ಮಾಡಿದರು. ನಾನು ಮಡಿಕೇರಿಯಲ್ಲಿದ್ದೆ. ಅಲ್ಲಿ ಈ ಸಾಹಸಕ್ಕೆ ಅಗತ್ಯವಾದ ಪುಸ್ತಕ
ಭಂಡಾರ ಇರಲಿಲ್ಲ. ನಾನು ಹಿಂಜರಿದೆ. ಅವರೇ ಒತ್ತಾಯಮಾಡಿದರು. "ನೀವು ಗೈಡ್
ಆಗುವುದಾದರೆ ಪ್ರಯತ್ನಿಸುತ್ತೇನೆ," ಎಂದೆ. ಒಪ್ಪಿದರು. "ವಿಷಯವನ್ನು ನೀನೇ
ಆರಿಸಿಕೋ" ಎಂದರು. ನಾನು "The Hero in Victorian and Modern Fiction"
ಎಂದು ಆರಿಸಿಕೊಂಡೆ. `ಚೆನ್ನಾಗಿದೆ' ಎಂದರು. ಸಂಗ್ರಹರೂಪಕ (ಸಿನಾಪ್ಸಿಸ಼್)
ತಯಾರು ಮಾಡುವಾಗ ಮತ್ತೆ ನನಗೆ ಅವರ ಅಪೂರ್ವ ವಿದ್ವತ್ತು, ಜ್ಞಾಪಕಶಕ್ತಿಗಳ
ಅನುಭವ ಆಯಿತು (ನಮ್ಮ ಇಲಾಖೆಯ ಆಗಿನ ನಿರ್ದೇಶಕರು ಅನುಮತಿಯನ್ನು
ನಿರಾಕರಿಸಿದ್ದರಿಂದ, ಈ ಪ್ರಯತ್ನವನ್ನು ಕೈಬಿಡಬೇಕಾಯಿತು).

ರಂಗಣ್ಣನವರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದದ್ದು `ರಂಗಬಿನ್ನಪ' ವಚನ
ಸಂಕಲನಕ್ಕೆ. ತಮ್ಮ ವಚನಗಳ ಬಗ್ಗೆ ಅವರು ಹೇಳಿದ್ದಾರೆ : "ಭಾವಭಾವನೆಗಳ
ಯೋಜನೆ, ದೃಷ್ಟಾಂತ ಹೋಲಿಕೆ, ಅಂತರಗಳ ವಿನ್ಯಾಸ, ಪದಗಳ ಜೋಡಣೆ, ಲಯದ
-70-
ಉರ್ಮಿಮಾಲೆ, ನಾದಸಂಚಾರ, ಉಕ್ತಿಯ ಏರಿಳಿತ, ರಂಗೇಶ ಸಂಬೋಧನೆ, ಆವರಣ
ಪ್ರಭೆ ಎಲ್ಲವೂ ಕೂಡಿಕೊಂಡು ಒಂದು ಬಗೆಯ ಏಕವರ್ಚಸ್ಸಿನ `ಶಬ್ದಚಿತ್ರ'ವನ್ನೊ
`ಶಬ್ದವಿಗ್ರಹ'ವನ್ನೊ ಮನಸ್ಸಿಗೆ ಶಿಲ್ಪಗೈಯಲೆಂದೇ ನನ್ನನೋಂಪಿ." ಅವರ ಯಶಸ್ವೀ
ವಚನಗಳಲ್ಲಿ ಜೀವನಾನುಭವ, ವಿದ್ವತ್ತು, ಸೂಕ್ಷ್ಮ ಚಿಂತನೆ, ಹಾಸ್ಯಪ್ರಜ್ಞೆ ಎಲ್ಲ
ಹದವಾಗಿ ಬೆರೆತು ಸಾಹಿತ್ಯ ಸೃಷ್ಟಿಯಾಗುತ್ತದೆ. ವಚನವನ್ನು ಅವರು `ಕಾವ್ಯ ಕನ್ನಿಕೆಯ
ಬೆರಳಿನುಂಗುರ' ಎಂದು ಕರೆದರು. `ಬಿನ್ನಪ'ದಲ್ಲಿ ವಿಸ್ತಾರವಾದ ವಚನಗಳಿವೆ. ಕೆಲವೇ
ವಾಕ್ಯಗಳಲ್ಲಿ ಬೆಳಕನ್ನು ಬೀರುವ ವಚನಗಳಿವೆ. ಒಂದು `ಸ್ಯಾಂಪಲ್: `ಸುಧಾರಿತ
ರಾಷ್ಟ್ರದಲ್ಲಿ ಹೆಣ್ಣಿನ ಕಣ್ಣಿನಿಂದ ಹನಿಯೊಂದು ಬಿದ್ದಲ್ಲಿ ನಾಚಿಕೊಳ್ಳುವನಂತೆ ಗಂಡು.
ಮಕ್ಕಳ ಮುಖದಿಂದ ಅಳು ಉಕ್ಕಿದಲ್ಲಿ ಹೆಣ್ಣು ಗಂಡುಗಳಿಬ್ಬರೂ ನಾಚಿ ಕೊಳ್ಳುವರಂತೆ,
ರಂಗಯ್ಯ.'

ಡಾಕ್ಟರ್ ಎಸ್.ವಿ. ರಂಗಣ್ಣನವರು ಇಂದು ನಮ್ಮೊಡನಿಲ್ಲ. ಮರಣದ
ವಿಷಯ ಅವರು ಯೋಚಿಸಿದ್ದರು, ಬರೆದಿದ್ದರು : "ಮರಣವೆಂಬುದು ಬಾಳಿನ ಕಟ್ಟ
ಕಡೆ ಸಾಫಲ್ಯ. ಅಂಜುವುದೇಕೆ ಜವರಾಯನಿಗೆ? ಅಂಜಬೇಕಯ್ಯ ಜೀವನಕ್ಕೆ."
"ಜನನಕ್ಕೆ ಒಂದೇ ಮಾರ್ಗ, ಮರಣಕ್ಕೆ ಹತ್ತೆಂಟು. ಇದರ ಗೂಡಾರ್ಥವೇನು, ಶಾಶ್ವ
ರಂಗ? ಬಾಳುವುದು ದೊಡ್ಡ ಹೊಣೆಗಾರಿಕೆ, ಸಾಯುವುದು ಅತಿ ಸುಲಭ."

ಕನ್ನಡಕ್ಕಾಗಿ ಬದುಕಿದ ಒಂದು ಚೇತನ ಈಗ ಕಣ್ಮರೆಯಾಗಿದೆ. ಆ ಚೇತನದ
ಜ್ಞಾನದಾಹ, ನಿಷ್ಕೃಷ್ಪತೆಯ ಹಂಬಲ, ತನಗೆ ತಿಳಿದದ್ದನ್ನು ಇತರರೊಂದಿಗೆ ಹಂಚಿ~
ಕೊಳ್ಳುವ ನಿಷ್ಠೆ, ಶಿಷ್ಯ ವಾತ್ಸಲ್ಯ, ಕನ್ನಡಪ್ರೇಮ ಐದು ದೀಪಗಳ ಸ್ತಂಭವಾಗಿ ನಮ್ಮ
ದಾರಿಯನ್ನು ಬೆಳಗಲಿ.

﻿
ಸು. ರುದ್ರಮೂರ್ತಿಶಾಸ್ತ್ರ
03-05-21
Kannada
-1-
ಪಾಠಕ ಮಹನೀಯರೇ, ಪುಸ್ತಕದ ತಲೆಬರೆಹ ನೋಡಿ ದಯ~
ವಿಟ್ಟು ತಲೆಬಿಸಿ ಮಾಡಿಕೊಳ್ಳಬೇಡಿ. `ನಮಗೆಲ್ಲಾ ಗೊತ್ತಿರೋ ಹಾಗೆ,
ಮಹಾವಿಷ್ಣುವಿಗೆ ಹತ್ತು ಅವತಾರಗಳು. ಇವನ್ಯಾರಪ್ಫ ಬೃಹಸ್ಪತಿ
ಹನ್ನೊಂದು ಅವತಾರಗಳ ಬಗ್ಗೆ ಹೇಳುವವನು' ಅಂತ ಮೂಗು
ಮುರಿಯಬೇಡಿ. ಭಾಗವತರಾದರೆ ಪುಣ್ಯಪ್ರದವಾದ, ಅಷ್ಟು ಅವತಾರ~
ಗಳನ್ನೆತ್ತಿದರೂ ಧರ್ಮವನ್ನು ಪರ್ಮನೆಂಟಾಗಿ ನೆಲೆಗೊಳಿಸಲಾಗದ
ಹರಿಯ ಜನ್ಮಾಂತರಗಳ ಬಗ್ಗೆ, ಒಂದೊಂದು ಅವತಾರಕ್ಕೆ ಒಂದೊಂದು
ವಾರದಂತೆ ಬಹಳ ಸ್ವಾರಸ್ಯವಾಗಿ ಬಣ್ಣಿಸಬಲ್ಲರು. ಅವರ ಆ ವಾಕ್ಚಾ~
ತುರ್ಯ, ಉಸಿರುಕಟ್ಟಿ ಕೂಗಿಕೊಳ್ಳುವ ಹಾಡುಗಾರಿಕೆ, ಪುರಾಣ
ಕೇಳುತ್ತಲೇ ತೂಕಡಿಸಿ ಪುಣ್ಯದ ಪ್ರಮಾಣವನ್ನು ಶ್ರಾವಕರು ಕಡಿಮೆ
ಮಾಡಿಕೊಂಡಾರೆಂಬ ಭೀತಿಯಿಂದ ಮಧ್ಯೆ ಮಧ್ಯೆ ಉಪ್ಪು ಖಾರ
ಹಚ್ಚಿ ಉಪಕಥೆಗಳನ್ನು ಹೇಳುವ ಶೈಲಿ ನನಗೆ ಎಲ್ಲಿಂದ ಬರಬೇಕು!

ಆ ಸಾಮರ್ಥ್ಯ ನನ್ನಲ್ಲಿಲ್ಲವೆಂದು ಏಕೆ ಪಶ್ಚಾತ್ತಾಪ ಪಡಬೇಕು?
ನಾನೇನು ಪುರಾಣಪ್ರವಚನ ಮಾಡಲು ಹೊರಟಿಲ್ಲ. ಧರ್ಮ ಸಂಸ್ಥಾ~
ಪನೆ ಮಾಡಲು ಯುಗ ಯುಗಗಳಲ್ಲೂ ಸಂಭವಿಸಿದ ವಿಷ್ಣುವಿನ ಪವಿತ್ರ
ಪುರಾಣವನ್ನು ಕೇಳಿ, ಓದಿ, ಮತ್ತೆ ಅಧರ್ಮವನ್ನೇ ಸಮೃದ್ಧವಾಗಿ
ಆಚರಿಸುವುದು ನಮ್ಮ ಕಾಲದ ಸಂಪ್ರದಾಯವಾಗಿರುವುದರಿಂದ ಅದರ
ಅವಶ್ಯಕತೆಯೂ ಇಲ್ಲ, ಬಿಡಿ. ಎಷ್ಟು ಅವತಾರವೆತ್ತಿದರೂ ಮತ್ತೆ
ಮತ್ತೆ ಅಧರ್ಮದ ಕುದುರೆಯನ್ನೇ ಓಡಿಸಲು ಆತುರಪಡುವ ಈ
ಮನುಷ್ಯರ ಮೊಂಡುತನಕ್ಕೆ ಹೇಸಿ ಮತ್ತೆ ಅವತಾರವೆತ್ತಲೇ ಬಾರ~
ದೆಂದು ಆ ಶ್ರೀಹರಿ ನಿರ್ಧರಿಸಿದ್ದಾನೆಂದು ನನ್ನ ಅಭಿಪ್ರಾಯ.

ಆದರೆ ನಮ್ಮ ಕಾಲದ ಎಲ್ಲಕ್ಕಿಂತ ಮುಖ್ಯವಾದ ಸ್ವಾರಸ್ಯ~
ವೆಂದರೆ, ನಮ್ಮ ಜನ ಒಮ್ಮೆ ಸತ್ತು ಮತ್ತೆ ಅವತಾರವೆತ್ತುವ
ಕಾರಣವೇ ಇಲ್ಲ. ಒಬ್ಬೊಬ್ಬರೂ ಸಾಯುವ ಮೊದಲೇ ತಮ್ಮ ತಮ್ಮ
ಅವತಾರಗಳ ಖೋಟಾ ಮುಗಿಸುತ್ತಾರೆ. ಅಪಘಾತಗಳಿಂದ, ಆಕಸ್ಮಿಕ~
-2-
ಗಳಿಂದ ಅಕಾಲ ಮರಣಕ್ಕೆ ತುತ್ತಾಗುವವರ ವಿಷಯದಲ್ಲಿ ಒಂದೆರಡು
ಅವತಾರಗಳು ಕಡಿಮೆ ಬೀಳಬಹುದು, ಅಷ್ಟೆ.

ಇನ್ನು ಕೆಲವು ಪ್ರಳಯಾಂತಕರಿರುತ್ತಾರೆ. ಅರ್ಧ ವಯಸ್ಸು
ಮುಗಿಯುವ ಮೊದಲೇ ಒಂದು ಜೀವಮಾನದ ಅವತಾರಗಳನ್ನೆಲ್ಲಾ
ಮುಗಿಸಿ ತೆಪ್ಪಗಾಗಿಬಿಡುತ್ತಾರೆ. ಆಮೇಲೆ ಅವರ ಅವತಾರಗಳ
ಅವಾಂತರಗಳೆಲ್ಲಾ ನೆನಪಿನಲ್ಲಿ ಮಾತ್ರ ಉಳಿದುಕೊಳ್ಳುತ್ತವೆ. ಅವರೆಲ್ಲಾ
ನೋಡುವ ಜನರಿಗೆ, ಕೈಕಾಲು ಮುರಿದುಕೊಂಡು ಯಾರಿಗೂ ಬೇಡ~
ವಾಗಿ ಬಿದ್ದಿರೋ ಒಂದು ಕಲ್ಲು ವಿಗ್ರಹವಾಗ್ತಾರೆ, ಅಂತಿಟ್ಕೊಳ್ಳಿ.
ವಿಗ್ರಹವೂ ಆಗದೆ ಬರೀ ಒಂದು ಒಡ್ಡರ ಕಲ್ಲಿನಂತೆ, ಏನೋ ಮಹಾ
ಮಾಡಿಬಿಡುತ್ತೇನೆನ್ನುವ ಭ್ರಮೆಯಿಂದ ಅಲ್ಲಿಂದಿಲ್ಲಿಗೆ ಉರುಳಾಡಿ,
ಕಡೆಗೆ ಯಾವುದೋ ಕೊಚ್ಚೆಯಲ್ಲಿ ಬಿದ್ದು ಕೊಳೆತುಹೋಗುವಂಥ~
ವರೂ ಇರುತ್ತಾರೆ. ಇಂಥವರು ಹನುಮಂತ ಸಮುದ್ರ ಹಾರಿದಾ
ಅಂತ, ಇವರೂ ಹಾರಬಾರದ್ದನ್ನು ಹಾರೋದಿಕ್ಕೆ ಹೋಗಿ ಕೈಕಾಲು
ಮುರಿದುಕೊಳ್ಳೋ ಜನ! ಆದರೂ ಬೆಟ್ಟ ಹತ್ತೇ ಬಿಡುವ ಸಾಹಸದ
ಚಪಲಚಿತ್ತರು. ತಮ್ಮಿಂದ ಏನಾಗುತ್ತೆ, ಏನಾಗಲ್ಲ ಅನ್ನೋ
ಯೋಚನೇನೇ ಮಾಡೋದಿಲ್ಲ. ಈ ಜಾತಿಗೆ ಸೇರಿದವನು ನಮ್ಮ
ಹಯಗ್ರೀವ.

ನಮ್ಮ ಹಯಗ್ರೀವ ಗೊತ್ತಲ್ಲ ನಿಮಗೆ? ಗೊತ್ತಿಲ್ಲದಿದ್ದರೆ ಚಿಂತೆ~
ಯಿಲ್ಲ. ಏಕೆಂದರೆ ಅವನ ಅವತಾರಗಳ ಅವಾಂತರದ ಬಗ್ಗೆ ನಾನೇ
ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಈಗ ಅವನು ನಿಜವಾದ
ಅರ್ಥದಲ್ಲಿ `ಗೃಹಸ್ಥ' ನಾಗಿಬಿಟ್ಟಿದ್ದಾನೆ. ಅಂತೂ ಅವನು ತನ್ನ
ಮೂವತ್ತೆಂಟನೇ ವಯಸ್ಸಿನಲ್ಲಿ ಮದುವೆ ಆಗಿಬಿಟ್ಟ! ಗಂಡನೆನಿಸಿ~
ಕೊಂಡ ತಪ್ಪಿಗೆ ಸದ್ಯಕ್ಕೆ ಒಂದು ಮಗುವಿನ ತಂದೆಯೂ ಆಗಿದ್ದಾನೆ!
ಗಂಡನಾದ ಮೇಲೆ ಅಪ್ಪನಾಗೋದ್ರಲ್ಲಿ ಯಾವ ಮಹಾಸಾಹಸವಿದೆ
ಅಂತ ನೀವು ತಮಾಷೆ ಮಾಡಬೇಡಿ.

ಮೊನ್ನೆ ಹಯಗ್ರೀವ ದಾರೀಲಿ ಸಿಕ್ಕಿಬಿಟ್ಟ. ಮೊದಲಿಗಿಂತ
ಆರೋಗ್ಯವಾಗಿ ಲಕ್ಷಣವಾಗಿದ್ದಾನೆ. ಮದುವೆಗೆ ಮುಂಚೆ ಬಿಟ್ಟಿದ್ದ ದಪ್ಪ
-3-
ಮೀಸೆಯನ್ನು ಈಗ ಸಂಪೂರ್ಣವಾಗಿ ಬೋಳಿಸಿರೋದ್ರಿಂದ ಹಾಗೆ
ಕಾಣ್ತಾ ಇದ್ದನೇನೋ, ನನಗೆ ನಿಜವಾಗಲೂ ಗೊತ್ತಿಲ್ಲ಼! ಅವನ
ಕೈಯಲ್ಲಿ ಐದಾರು ಚೀಲಗಳ ತುಂಬ ಅಕ್ಕಿ, ಬೇಳೆ, ಗೋಧಿ ಇತ್ಯಾದಿ
ಪದಾರ್ಥಗಳು ತುಂಬಿದ್ದವು.

"ಏನಯ್ಯಾ, ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋಗಿದ್ದೆ ?" ನಾನು
ಕೇಳಿದೆ.

"ರೇಷನ್ ಅಂಗಡಿಗೆ ಹೋಗಿದ್ದೆನಯ್ಯ, ಚೆನ್ನಾಗಿದ್ದೀಯಾ ?"
ಅಂದ.
"ನಾನು ಚೆನ್ನಾಗಿರೋದಿರಲಿ, ಇದೇನಯ್ಯ ನಿನ್ನ ಅವತಾರ ?
ಒಂದು ಆಟೋನೋ, ಅಥವಾ ಕೂಲಿನೋ ಮಾಡಿಕೊಳ್ಳದೆ ಹೊರ~
ಲಾರದೆ ಹೊತ್ತು ದಾರಿ ತುಂಬ ಸರ್ಕಸ್ ಯಾಕೆ ಮಾಡಬೇಕು ?"

"ಸುಮ್ಮನೆ ಅದಕ್ಯಾಕಯ್ಯ ದಂಡ. ಅದೇ ಕಾಸು ಉಳಿಸಿ
ಕೊಂಡ್ರೆ ಒಂದು ದಿನದ ಸಿಗರೇಟಿನ ಕತೆ ಕಳೆಯುತ್ತೆ."

"ಅಂತೂ, ನೀನು ಬಹಳ ಬುದ್ಧಿವಂತನಾಗಿಬಿಟ್ಟೆ ಅನ್ನು"
ನಾನೆಂದೆ. "ಹೋಗಲಿ ಬಾ, ಆ ಡಬ್ಬದ ಆಂಗಡೀಲಿ ಒಂದು ಸಿಗರೇಟ್
ಸೇದೋಣ."

"ಈಗ ಬೇಡಪ್ಪ, ವಾಸನೆ ಬಂದ್ರೆ ಬಹಳ ಕಷ್ಟ. ಅದೆಲ್ಲಾ
ಅವಳು ಆಫೀಸಿಗೆ ಹೋದ ಮೇಲೆ."

"ಏನು, ಯಾವ ಹೊಸಾ ಸಾಹಸವೂ ಇಲ್ಲವೋ ?"

"ಸದ್ಯಕ್ಕೆ ಯಾವುದೂ ಇಲ್ಲಪ್ಪ. ಎರಡು ವರ್ಷದಿಂದ ಒಂದೇ
ಥರ ಜೀವನ ಮಾಡಿ ಬೋರೇನೋ ಆಗಿದೆ ಅಂತಿಟ್ಕೊ. ಹಾಗೂ
ಒಂದೊಂದು ಸಲ ಯಾಕೆ ಹೆಂಡತೀನ ಡೈವೋಱ್ಸ್ ಮಾಡಿ ನೋಡ~
ಬಾರದು ಅಂತ ಅನ್ನಿಸುತ್ತೆ. ಆದರೇ...." ಹಯಗ್ರೀವ ರಾಗ
ಎಳೆದ.

ನನಗೆ ಆಶ್ಚರ್ಯವಾಯ್ತು. "ಅಲ್ಲಯ್ಯ, ನಿನ್ನ ಬಾಯಲ್ಲಿ
ಆದರೇ ಅನ್ನೋ ರಾಗ! ಆದರೆ ಗೀದರೆ ಅಂತ ಹಿಂದೆ ಮುಂವೆ
ನೋಡೋ ಜಾಯಮಾನವೇ ಅಲ್ಲವಲ್ಲ ನಿಂದು ?"
-4-

"ಹೌದಯ್ಯಾ, ಅದೇನೋ ಸರಿ. ಆದರೆ ಯಾವಾಗಲೂ ಹಾಗೆ
ಅನ್ನಿಸೊಲ್ಲ. ಮಗು ಮನೇಲಿ ಬಿಟ್ಟು ಅವಳು, ಅದೇ ನನ್ನ ಹೆಂಡತಿ
`ಮಿನಿ' ಆಫೀಸಿಗೆ ಹೋಗ್ತಾಳಲ್ಲಾ, ಆ ಮಗು ಒಂದೇ ಸಮನೆ ಪೀಡೆ
ಹಾಗೆ! ಕಾಟ ಕೊಡುತ್ತಲ್ಲಾ ಆಗೆಲ್ಲಾ ಅನ್ನಿಸುತ್ತೆ. ಅವಳು ಮನೆಗೆ
ಬಂದಕೂಡಲೇ ಎಲ್ಲ ಮರೆತು ಹೋಗುತ್ತೆ. ಅಂದ್ರೆ ಕಾಫಿ ಮಾಡಿ,
ಅಡಿಗೆ ಮಾಡಿ, ಬಡಿಸಿ, ಪಾತ್ರೆ ತೊಳೆಯೋ ಸಂಭ್ರಮದಲ್ಲಿ ಯಾವುದು
ತಾನೆ ನೆನಪಿಗೆ ಬರುತ್ತೆ ಹೇಳು" ಹಯಗ್ರೀವ ಹಲ್ಲು ಕಿರಿದ.

"ಅಂದ್ರೆ, ನೀನು ನಿಜವಾದ ಅರ್ಥದಲ್ಲಿ ಹೆಂಡತಿ ಗುಲಾಮನಾಗಿ
ಬಿಟ್ಟೆ ಅನ್ನು" ಅಂದೆ ನಾನು ಬೇಕೆಂದೇ ಚೇಷ್ಟೆಯಿಂದ.

"ನೀನು ಏನು ಬೇಕಾದ್ರೂ ಅನ್ನು. ಆದರೆ ಹೆಂಡತಿ ಹೇಳಿದ
ಹಾಗೆ ಕೇಳಿಕೊಂಡು ಜೀವನ ಮಾಡೋದೂ ಒಂದು ಸಾಹಸವೇ ಅಂತ
ನನ್ನ ಅಭಿಪ್ರಾಯ.... ಬಱ್ತೀನಯ್ಯ. ಅವಳು ಬರೋ ಹೊತ್ತಾಯ್ತು
ತಡವಾದ್ರೆ ಬೆಂಡ್ ಎತ್ತಾಳೆ" ಎಂದು ಹಯಗ್ರೀವ ಆತುರಾತುರವಾಗಿ
ಓಡಿದ.

ಪಾಠಕ ಮಹಾಶಯ, ನಮ್ಮ ಈ ಮೇಲಿನ ಸಂಭಾಷಣೆಯಿಂದ
ಹಯಗ್ರೀವನ ಸದ್ಯದ ಸ್ಥಿತಿಯ ಬಗ್ಗೆ ನಿಮಗೆ ಒಂದಷ್ಟು ಮಾಹಿತಿ
ಸಿಕ್ಕಿರಬಹುದೂ ಅಂತ ನನ್ನ ನಂಬಿಕೆ. ಅವನು `ಮಿನಿ' ಅಂತ ಹೇಳಿ~
ದನಲ್ಲ, ಅದೇ ಅವನ ಹೆಂಡತಿ, ಅದು ಮೀನಾಕ್ಷಿ ಅನ್ನೋ ಅವಳ ಹೆಸ~
ರಿನ ಸಂಕ್ಷಿಪ್ತ ರೂಪ ಅಷ್ಟೆ! ಆದರೆ ಮಿನಿ ಅನ್ನೋ ಹೆಸರು ಅವಳಿಗೆ
ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತೆ. ಯಾಕೇಂದ್ರೆ, ಅವಳು ಮಹಾ
ಕುಳ್ಳಿ! ಒಂದಡಿ ಎತ್ತರದ ಹೈಹೀಲ್ಡ್ ಚಪ್ಪಲಿ ಹಾಕಿದರೂ ಅವಳ
ಎತ್ತರ ನಾಲ್ಕೂವರೆ ಅಡಿ ಮೀರೋದಿಲ್ಲ. ಗಾತ್ರ ಕೂಡ ಎತ್ತರಕ್ಕೆ
ತಕ್ಕ ಹಾಗೆ ಅಲ್ಪವೇ! ನಿಜ ಹೇಳಬೇಕೆಂದರೆ ಫ್ಯಾನ್ ಗಾಳಿಗೇ ಹಾರಿ
ಹೋಗಬಹುದಾದಂಥ ನರಪೇತಲಿ! ಬೆಳ್ಳಗೆ ಲಕ್ಷಣವಾಗೇನೋ
ಇದ್ದಾಳೆ. ಆದರೆ ಮೂಗು ಮಾತ್ರ ಅವಳ ಮುಖದ ಅಳತೆಗೆ ಭಾರಿ
ಅನ್ನಿಸುತ್ತೆ!

ಅಲ್ಲಾ, ಇಂಥ ಒಂದು ಅಲ್ಪಪ್ರಾಣಿ, ಅದೂ ಹೆಣ್ಣು, ಐದೂ
-5-
ವರೆ ಅಡಿ ಎತ್ತರದ, ಎಪ್ಪತ್ತು ಕೆ.ಜಿ. ತೂಗುವ, ಮೂಗು ಮೂತಿ
ನೆಟ್ಟಗಿರುವ ಹಯಗ್ರೀವನ ಕೊರಳಿಗೆ ಹೇಗೆ ಬಿದ್ದಳು ? ಅಂಥ ಒಂದು
ಸಣ್ಣ ವ್ಯಕ್ತಿ ಹೇಳಿದಂತೆ ಕೇಳಿಕೊಂಡು ಬಿದ್ದಿರುವಂಥ ಕರ್ಮ ಅವನಿ~
ಗೇನು ಬಂದಿತ್ತು? ಇತ್ಯಾದಿ ನೀವು ಕುತೂಹಲಗೊಳ್ಳುವುದು ಸಹಜ.
ಮದುವೆಯಾದ ಮೇಲೆ ಅವನ ಮನೇಲಿ, ಮೊದಲನೇ ಸಲ ನೋಡಿ,
ಹೆಂಡತಿ ಮುಂದೆ ಕೈಕಟ್ಟಿ ಡ್ರಿಲ್ಲು ಮಾಡೋದನ್ನು ಕಂಡು, ನಾನೇ
ಹತ್ತಿರ ಹತ್ತಿರ ಮೂರ್ಛೆ ಬೀಳೋ ಸ್ಥಿತಿಗ಼ೆ ಮುಟ್ಟಿದ್ದೆ ಸ್ವಾಮಿ!

ಎಲ್ಲದಕ್ಕೂ ಒಂದು ಕಾರಣವಿರಲೇ ಬೇಕು, ಎಂಬ ಸಾಮಾನ್ಯ
ಸೂತ್ರದಂತೆ ಇದಕ್ಕೂ ಒಂದು ಕಾರಣವಿದೆ. ಅಂಥ ದೊಡ್ಡದೇನಲ್ಲ,
ಸಣ್ಣದು! ಹಯಗ್ರೀವ ನಿರುದ್ಯೋಗಿ. ಅವರಪ್ಪನ ಆಸ್ತಿಯೆಂದರೆ
ಅವನೇ! ಅಮ್ಮ ಸಾಯೋವರೆಗೂ ಯಾವುದೋ ಗೂಡಿನಲ್ಲಿ, ಹೇಗೋ
ಜೀವನ ನಡೀತಾ ಇತ್ತು. ಅಮ್ಮ ಗೊಟಕ್ ಅಂದ ಕೂಡಲೇ ಇವ಩ು
ಬೀದೀಲಿ. ಇವನ ಡಿಗ್ರಿ ಕೂಡ ಬ್ರಾಕೆಟ್್ನಲ್ಲೇ ಭದ್ರವಾಗಿತ್ತು.
ಅವಳಾದರೋ ಬಿ.ಎಸ್.ಸಿ. ಫಸ್ಟ್್ಕ್ಲಾಸ್, ಕೇಂದ್ರ ಸರ್ಕಾರದ
ಕಛೇರಿಯಲ್ಲಿ ಕೆಲಸ. ಸಂಬಳ ಒಂದೂವರೆ ಸಾವಿರ! ವಯಸ್ಸು
ಇವನಿಗಿಂತ-ಹೆಚ್ಚೇನಲ್ಲ-ಎರಡು ವರ್ಷ ಜಾಸ್ತಿ, ಅಷ್ಟೆ.

ಅವನು ಆಗಬೇಕೂಂತ ಅಂದುಕೊಂಡಿದ್ದರಲ್ಲಿ ಯಾವುದೇ
ಒಂದಾದ್ರೂ ಈಡೇರಿದ್ರೆ ಹಯಗ್ರೀವ ಈ ಹೊತ್ತು ಮುಖ್ಯಮಂತ್ರಿ~
ಯಾಗಿಱ್ತಾ ಇದ್ದ, ಇಲ್ಲವೇ ದೊಡ್ಡ ನಟನಾಗ್ತಾ ಇದ್ದ ಅಥವಾ....

ಅದೆಲ್ಲಾ ಯಾಕೆ? ಅವನು ಏನೇನೋ ಆಗಬೇಕೂಂತ, ಹೇಗೆ
ಹೇಗೋ ಪ್ರಯತ್ನಪಟ್ಟ ಪುರಾಣ ಮುಂದೆ ಕಾದಿದೆ.............
-6-
ಒಂದನೇ ಅವತಾರ

ಪಾಠಕ ಮಹಾಶಯರು ಕ್ಷಮಿಸಬೇಕು. ನಾವು ಈಗ ಇಪ್ಪತ್ತು ವರ್ಷ~
ಗಳಷ್ಟು ಹಿಂದಕ್ಕೆ ಹೋಗಬೇಕಾಗಿದೆ.... ಆಗ ಹಯಗ್ರೀವ ಎರಡನೇ ಬಿ.ಕಾಂ.
ವಿದ್ಯಾರ್ಥಿ. ಚಿಗುರು ಮೀಸೆಯ ಎಳೆಯ ತರುಣ!

ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ. ಪರೀಕ್ಷೆಗಳನ್ನು ಎರಡೆ~
ರಡೇ ಪ್ರಯತ್ನದಲ್ಲಿ ಪಾಸು ಮಾಡಿ ಮುಗಿಸಿದ್ದ. ಆದರೆ ಕಾಲೇಜಿಗೆ ಬಂದ
ಕೂಡಲೇ ಇದ್ದಬದ್ದ ಸ್ವಾತಂತ್ರ್ಯವನ್ನೆಲ್ಲಾ ಒಟ್ಟಿಗೇ ಉಪಯೋಗಿಸಿ~
ಕೊಳ್ಳೋ ಪ್ರಯತ್ನದಲ್ಲಿ ಪಾಪ, ಅವನಿಗೆ ತರಗತಿಗಳಿಗೆ ಹಾಜರಾಗಲೇ ಪುರು~
ಸೊತ್ತಿರಲಿಲ್ಲ. ಹಾಜರಾದರೆ ಅದು ತರಗತಿಯದೇ ಅದೃಷ್ಟ!

ಇದಕ್ಕೆ ಮುಖ್ಯ ಕಾರಣ ರಿಟೈರಾದ ಆರು ತಿಂಗಳಿಗೇ ಅವರಪ್ಪ ಹೃದಯಾ~
ಘಾತವಾಗಿ ತೀರಿಕೊಂಡಿದ್ದು. ಹೇಳೋರು ಕೇಳೋರು ಯಾರೂ ಇಲ್ಲ,
ತಾಯಿ ಮಾತು ಲೆಕ್ಕಕ್ಕಿಲ್ಲ. ಅವರಮ್ಮ ಗಂಡ ಸತ್ತದ್ದಕ್ಕಿಂತ ಹೆಚ್ಚಾಗಿ,
ಮಗ ಬದುಕಿದಾನಲ್ಲಾ, ಅಂತ ಅಳಬೇಕಾಯ್ತು. ಮನೆ ಬಿಡೋದಿಕ್ಕೂ,
ಮ಩ೆ ಸೇರೋದಿಕ್ಕೂ ಹಯಗ್ರೀವ ಗಡಿಯಾರವನ್ನು ಪರಿಗಣಿಸುತ್ತಿರಲಿಲ್ಲ.

ಅವನ ಊಟದ ಸಂಭ್ರಮ ಕೂಡ ಅದ್ಭುತ! ಬರಗಾಲದ ಪ್ರದೇಶ~
ದಲ್ಲೇನಾದರೂ ಇದ್ದಿದ್ರೆ, ಇಷ್ಟೊತ್ತಿಗೆ ಅವನು ಸತ್ತು ಬಹಳ ಕಾಲವಾಗ್ತಾ
ಇತ್ತು. ಆಸಾಮಿ ನೋಡೋದಿಕ್ಕೆ ಸುಮಾರಾಗಿ ಕಂಡರೂ ತಟ್ಟೆ ಮುಂದೆ
ಕೂತರೆ ಮಾತ್ರ ಮಹಾವೀರ! ಅನ್ನವಾದರೆ ಮೂರು ಒಬ್ಬೆ ಮುಗಿದ ಹೊರತು
ಅವನ ಮುಖದಲ್ಲಿ ಸಮಾಧಾನ ಕಾಣ್ತಾ ಇರಲಿಲ್ಲ. ದೋಸೆಯಾದರಂತೂ
ಒಂದು ಡಜನ್ ಲೆಕ್ಕ ಮುಗಿಯಲೇಬೇಕಿತ್ತು.

"ಏನೋ ಹಯಗ್ರೀವ, ದಿನಾ ಇಷ್ಟು ಹೊತ್ತಿಗೆ ಮನೆಗೆ ಬಱ್ತೀಯಲ್ಲ,
ಎಲ್ಲಿ ಹೋಗ್ತೀಯೋ? ಏನು ಮಾಡ್ತೀಯೋ? ಹೀಗಾದ್ರೆ ನೀನು ಓದಿ ಪಾಸು
ಮಾಡಿದ ಹಾಗೆ ಇದೆ ? ಒಂದು ದಿನ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ
ಬಂದ ಮಗನನ್ನು ತಾಯಿ ವಿಚಾರಿಸಿಕೊಂಡಳು.

"ಫ್ರೆಂಡ್ಸ್ ಜೊತೇಲಿ ಓದ್ತಾ ಇದ್ದೆ. ಕಂಬೈನ್ಡ್ ಸ್ಟಡೀ ಮಾಡ್ತಾ
ಇದೀವಿ." ಅವನು ನಿಜವನ್ನೇ ಹೇಳಿದ್ದ. ಏಕೆಂದರೆ ಎಲ್ಲ ಒಟ್ಟಿಗೆ ಸೇರಿ
ಇಸ್ಪೀಟ್ ಆಡುವುದು ಕಂಬೈ಩್ಡ್ ಸ್ಟಡಿಯೆಂದೇ ಅವನ ಅಭಿಪ್ರಾಯ.
-7-

"ನಾನಂತೂ ನಂಬೋದಿಲ್ಲ.":
"ಬೇಡ."
"ಏನೋ ಹಾಗೆಂದ್ರೆ ?" ತಾಯಿಗೆ ಸ್ವಲ್ಪ ಕೋಪ ಬಂತು.
"ನಂಬದೇ ಇದ್ರೆ ಬೇಡ ಅಂದೆ. ನೀನು ನಂಬಿದರೆಷ್ಟು ಬಿಟ್ಟರೆಷ್ಟು."
ಅಮ್ಮನ ಕೋಪಕ್ಕಿಂತ ಇವನ ಕೋಪ ಜಾಸ್ತಿಯಾಯ್ತು.

"ಏನೋ, ಈ ವಯಸ್ಸಿಗೇ ಇಷ್ಟು ಒರಟಾಗಿ ಮಾತಾಡಬಹುದೇನೋ ?"
ತಾಯಿ ಪೇಚಾಡಿಕೊಂಡಳು.

"ಅದೆಲ್ಲಾ ನನಗೆ ಗೊತ್ತಿಲ್ಲ. ನೋಡಮ್ಮ ನನ್ನ ಹೊಟ್ಟೆ ಸಿಕ್ಕಾಪಟ್ಟೆ
ಹಸೀತಾ ಇದೆ. ಮೊದಲು ಊಟ, ಆಮೇಲೆ ಎಷ್ಟು ಬೇಕಾದ್ರೂ
ಮಾತಾಡ್ಕೊ."

ತಿಂದ ತಕ್ಷಣ ಹಾಸಿಗೆಗೆ ಬಿದ್ರೆ, ನಾಳೆ ಒಂಬತ್ತು ಗಂಟೆ ದಾಟಿದ ಮೇಲೇ
ಅವನಿಗೆ ಎಚ್ಚರವಾಗೋದೂ ಅಂತ ಅವರಮ್ಮನಿಗೆ ಗೊತ್ತಿತ್ತು. ಮತ್ತೆ
ಯಥಾಪ್ರಕಾರ ಗಡದ್ದಾಗಿ ತಿಂದು ಮನೆ ಬಿಟ್ರೆ ರಾತ್ರಿ ಹನ್ನೊಂದಕ್ಕೆ ಅವನ
ದರ್ಶನವಾಗೋದು !" ನೋಡು, ನಾಳೆಯಿಂದ ಬೇಗ ಮನೆಗೆ ಬರಬೇಕು,
ಇಲ್ಲಾಂದ್ರೆ ನಾನು ಊಟಾನೇ ಹಾಕೋಲ್ಲ." ಸ್ವಲ್ಪ ಧೈರ್ಯವಹಿಸಿ ಹೇಳಿದಳು.
ಇಲ್ಲೀವರೆಗೂ ಗಂಡನಿಗೆ ಹೆದರಿ ಸಾಯ್ತಾ ಇದ್ದ ಹಾಗೆ, ಇನ್ನು ಮುಂದೆ ಮಗ~
ನಿಗೆ ಹೆದರಿ ಸಾಯೋ ಸ್ಥಿತಿ ಬಂದು ಬಿಟ್ಟೀತು, ಅನ್ನೋ ಭಯ ಅವಳಿಗೆ.

ಹಯಗ್ರೀವನಿಗೆ ಸಿಟ್ಟು ನೆತ್ತಿಗೇ ಏರಿ ಜುಟ್ಟು ಅಲ್ಲಾಡಿತು. "ಯಾರಿಗೆ
ಬೇಕು ನಿನ್ನ ಊಟ ?" ಎಂದು ಕೂಗಿ ಕೈಲಿದ್ದ ಕೊಳೆ ಹಿಡಿದ ಒಂದು ನೋಟ್
ಬುಕ್ಕನ್ನು ಅಲ್ಲೇ ಒಗೆದು, ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡ.

ತಾಯಿ ನೋಟ್್ಬುಕ್ ತೆಗೆದು ನೋಡಿದಳು. ಅದರಲ್ಲಿ ನಾಲ್ಕಾರು
ವ್ಯಂಗ್ಯ ಚಿತ್ರಗಳಿದ್ದವು. ಹಯಗ್ರೀವ ಕಲಾವಿದನಾಗುವ ಪ್ರಯತ್ನದಲ್ಲೇನಿರ~
ಲಿಲ್ಲ! ಅವನು ಆಕಸ್ಮಿಕವಾಗಿ ತರಗತಿಗಳಿಗೆ ಹಾಜರಾದ ದಿನ, ಆ ದಿನ ಪಾಠ
ಮಾಡಿದ ಮೇಷ್ಟ್ರನ್ನು ತನ್ನ `ಪ್ರತಿಭೆ'ಯಿಂದ ಚಿತ್ರಿಸಲು ಪ್ರಯತ್ನಿಸಿದ್ದ.
ಅವನ ದಿವ್ಯ ದೃಷ್ಟಿಗೆ ತೋಚಿದ ಹಾಗೆ ಒಬ್ಬರಿಗೆ ಬಾಲ ಬೆಳೆದಿತ್ತು, ಇನ್ನೊ~
ಬ್ಬರಿಗೆ ಜುಟ್ಟು ಬೆಳೆದಿತ್ತು, ಮತ್ತೊಬ್ಬರು ಚಡ್ಡಿಯ ಮೇಲೇ ಕೋಟು ಟೈ
ಧಱಿಸಿದ್ದರು, ಮಗದೊಬ್ಬರ ಮುಖದಲ್ಲಿ ಒಂದೇ ಕಣ್ಣು, ಒಂದೇ ಗಾಜಿನ
-8-
ಕನ್ನಡಕವಿತ್ತು! ಅವುಗಳ ಕೆಳಗೆಲ್ಲ ಶುಕ್ರಾಚಾರಿ, ಬಬೂನ್, ಬುರುಡೇಶಾಸ್ತ್ರಿ,
ಅರ್ಧಹುಚ್ಚ ಇತ್ಯಾದಿ ಶೀರ್ಷಿಕೆಗಳೂ ಇದ್ದವು. ನಿಜವಾಗಲೂ ಆ ಮೇಷ್ಟ್ರು~
ಗಳು ಹಾಗೇ ಇದ್ದರೋ, ಅಥವ ಅವರು ಹಾಗಿರಬೇಕೆಂದು ಹಯಗ್ರೀವ ಆಸೆ
ಪಟ್ಟು ಬರದದ್ದೋ, ಪಾಪ ಆ ತಾಯಿಗೆ ಹೇಗೆ ಅರ್ಥವಾಗಬೇಕು! ಅಲ್ಲದೆ
ಒಂದೊಂದು ಕಡೆ "ಇದೊಂದು ಪ್ರಾರಬ್ಧ, ಆಮೇಲೆ ಸಿಗರೇಟು ಕೊಡಿ~
ಸ್ತೀಯಾ?, ಆ ಶುಕ್ರಾಚಾರಿ ಎಗರಿ ಬೀಳ್ತಾನೆ. ಮುಚ್ಕೊಂಡು ಸುಮ್ಮನೆ
ಕೂತ್ಕಳಲೇ" ಇತ್ಯಾದಿ ನುಡಿ ಮುತ್ತುಗಳೂ ಇದ್ದವು.

ಮಗನ ಓದು ಯಾವ ರೀತಿಯಲ್ಲಿ, ಯಾವ ದಾರಿಯಲ್ಲಿ ಸಾಗುತ್ತಿದೆ~
ಯೆಂಬುದು ಅವಳಿಗೆ ಚೆನ್ನಾಗಿಯೇ ಅರ್ಥವಾಯಿತು. ಈ ದಿನ ಅವನು
ಮಾತಾಡಿದ ಧಾಟಿಯಿಂದ ಮುಂದೆ ಯಾವ ಸ್ಥಿತಿಗೆ ಮುಟ್ಟಬಹುದೆಂಬು~
ದನ್ನೂ ಸುಲಭವಾಗಿ ಊಹೆ ಮಾಡಿಕೊಂಡಳು. ಗಂಡ ಸತ್ತರೂ ಪಿ. ಎಫ್,
ಗ್ರಾಚುಯಿಟಿ ಇತ್ಯಾದಿ ಜೀವನ ನಡೆಯುವ ದಾರಿಯಾದರೂ ಇದೆ. ಆದರೆ
ಮಗನನ್ನು ನಂಬಿದರೆ ದೊಡ್ಡ ಚಿಪ್ಪೇಗತಿ, ಅಂದುಕೊಂಡಳು. ದುಃಖ~
ವಾಯಿತು. ಅಳಬೇಕು ಅಂದುಕೊಂಡಳು. ಆದರೆ ತಕ್ಷಣ, ಪಾಪ ಮಗ
ಹಸಿದು ಮಲಗಿದನಲ್ಲಾ ಎಂಬ ಸಂಕಟವಾಯಿತು ಸದ್ಯಕ್ಕೆ ಅಳುವನ್ನು
ಹಿಂದಕ್ಕೆ ಕಳಿಸಿ, ಮಗನನ್ನು ಸಮಾಧಾನಪಡಿಸಿ ಊಟ ಹಾಕಬೇಕೆಂದು
ಮೇಲೆದ್ದಳು.

ಅಷ್ಟರಲ್ಲಿ ಅಡಿಗೆ ಮನೆಯಲ್ಲಿ ಪಾತ್ರೆಗಳು ಮಾತಾಡಿದವು. ಬೆಕ್ಕು
ಗಿಕ್ಕು ಒಳಗೆ ನುಗ್ಗಿರಬಹುದೆಂದುಕೊಂಡು, ಒಂದು ಕೋಲು ಹಿಡಿದು, ಕಳ್ಳ
ಹೆಜ್ಜೆಯಿಡುತ್ತಾ ಅಡಿಗೆ ಮನೆ ಬಾಗಿಲಲ್ಲಿ ನಿಂತು ಇಣಿಕಿ ನೋಡಿದಳು.
ಒಳಗೆ `ದೊಡ್ಡ ಬೆಕ್ಕು' ತಟ್ಟೆಗೆ ಅನ್ನು ಸುರಿದುಕೊಂಡು ಒಂದೇ ಉಸುರಿಗೆ ಬಲಿ
ಹಾಕುತ್ತಿತ್ತು! ಅವಳಿಗೆ ಆಶ್ಚರ್ಯವೇನೂ ಆಗಲಿಲ್ಲ. ಒಪ್ಪತ್ತು ಊಟವಿಲ್ಲ~
ದಿದ್ದರೆ ಸತ್ತೇ ಹೋಗಬಹುದಾದಷ್ಟು ಬಕಾಸುರನಾದ ಮಗ, ಊಟ ಮಾಡದೆ
ಮಲಗಿದನೆಂದು ಚಿಂತಿಸಿ ಸಂಕಟಪಟ್ಟದ್ದು ವ್ಯರ್ಥವಾಯಿತೆಂದು ಬೇಸರ~
ವಾಯಿತು. "ತಿಂದು ಹಾಳಾಗಿ ಹೋಗಲಿ" ಎಂದು ಬೈದುಕೊಂಡು, ಹೋಗಿ
ತನ್ನ ಪಾಡಿಗೆ ತಾನು ಬಿದ್ದುಕೊಂಡಳು.

ಕಾಲೇಜಿನಲ್ಲಿ ಹಯಗ಼್ರೀವ ಮತ್ತು ಅವನ ಸಹಪಾಟಿಗಳೆಲ್ಲಾ ಒಬ್ಬೊ~
-9-
ಬ್ಬರೇ ಇದ್ದಾಗ ಬಾಲ ಮುದುರಿದ ಕುನ್ನಿಗಳಂತಿರುತ್ತಿದ್ದರು. ಗುಂಪು
ಸೇರಿದ ಕೂಡಲೇ ಇವರ ಬಾಲ ಬೆಳೆಯುತ್ತಿತ್ತು. ಕಾಲೇಜಿನ ಮುಂಭಾಗದ
ಕಟ್ಟೆಯ ಮೇಲೆ ಇವರಿಗೆಲ್ಲಾ ಫುಲ್ ಟೈಂ ಡ್ಯೂಟಿ. ಅಲ್ಲಲ್ಲಿ ಎಂದರೆ ಕ್ಯಾಂ~
ಟೀನು. ಇವೂ ಬೇಸರವಾದರೆ ರಿಲ್ಯಾಕ್ಸ್ ಮಾಡಿಕೊಳ್ಳಲು ಮಾತ್ರ ತರಗತಿಗೆ
ಹಾಜರಾಗುತ್ತಿದ್ದರು. ಕಟ್ಟೆಯ ಮೇಲಿನ ಅವರ ಸಂಭಾಷಣೆಯೂ ಕೇಳು~
ವಂಥದ್ದೇ!

"ಏನಮ್ಮಾ, ಇವೊತ್ತು ಬಾಳ ಸ್ಮಾರ್ಟ್ ಆಗಿ ಬಂದು ಬಿಟ್ಟಿ~
ದ್ದೀಯಾ ?" ಒಂದು ಹುಡುಗಿಯನ್ನು ಕಂಡು ಜೊತೆಯವನಿಗೆ ಹೇಳಿದಂತೆ
ಪರೋಕ್ಷ ಮಾತು.

ಲೇ, ಕ್ಲಾಸಿನಲ್ಲಿ ಆ ಇಂಗ್ಲಿಷ್ ಕೋತಿ ಬಾಳ ಡವ್ ಹಾಕ್ತಾನಂತೆ
ಕಣೋ."

"ಅವನೇ ಬೇಕಾ? ನಾವಿಲ್ವಾ? ಅವನಿಗಿಂತ ಚೆನ್ನಾಗಿಲ್ಲವಾ? ಬತ್ತೀಯ
ಸಾಯಂಕಾಲ ಕಂಟೋನ್ಮೆಂಟಿಗೆ ಹೋಗೋಣ? ಬೊಂಬಾಟ್ `ಎ' ಸರ್ಟಿ~
ಫಿಕೇಟಿನ ಇಂಗ್ಲಿಷ್ ಪಿಕ್ಟರ್ ಬಂದಿದೆ."

ಆಕೆಗೆ ಆ ಸಂಭಾಷಣೆ ಮಾಮೂಲು, ಸುಮ್ಮನೆ ಹೊರಟು ಹೋಗು~
ತ್ತಾಳೆ.

ಇನ್ನೊಬ್ಬ ಸಿಗರೇಟು ತೆಗೆಯುತ್ತಾನೆ. ಅವನ ಬಳಿ ಒಂದೇ ಸಿಗರೇಟ್
ಇರುತ್ತದೆ. ಆದರೆ ಜೊತೆಯಲ್ಲಿರುವ ನಾಲ್ಕೈದು ಜನರಿಗೆ ಆಗಲೇ ತಾವೂ ಸಿಗ~
ರೇಟು ಸೇದಬೇಕೆಂಬ ತೆವಲಾಗುತ್ತದೆ. ಸರಿ ಒಂದರಲ್ಲೇ ಒಬ್ಬರಾದ ಮೇಲೊ~
ಬ್ಬರಂತೆ ದಮ್ಮೆಳೆಯುತ್ತಾರೆ.

"ಬಲೇ ರೋಪ್ ಮಾಡ್ತಾನೆ ಕಣೊ, ಏನಾದ್ರೂ ಮಾಡಿ ಬೆವರಿಳಿಸ~
ಬೇಕು." ಎದುರಿನಿಂದ ಹೋದ ಒಬ್ಬ ಅಧ್ಯಾಪಕರನ್ನು ಕುರಿತು ಒಬ್ಬ ತನ್ನ
ಸಲಹೆ ಕೊಡುತ್ತಾನೆ.

"ಕ್ಲಾಸಿಗೆ ಹೋದರಲ್ಲೇನೋ ಅವನು ರೋಪ್ ಹಾಕೋದು. ಅವನ
ಕ್ಲಾಸು, ಅವನ ಪಾಠ, ಅವನ ರೋಪು ಅವನಿಗೇ ಇರಲಿ" ಎಂದು ಇನ್ನೊಬ್ಬ
ಆ ಸಲಹೆಯನ್ನು ತಿರಸ್ಕರಿಸಿದಾಗ ಅದು ಎಲ್ಲರ ನಗುವಿನಲ್ಲಿ ಕರಗಿ ಹೋಗು~
ತ್ತದೆ.
-10-

ಚೆನ್ನಾಗಿ ಓದುವ ವಿದ್ಯಾರ್ಥಿಯೆಂದು ಅಧ್ಯಾಪಕರ ಮೆಚ್ಚುಗೆ ಗಳಿಸಿದ್ದ
ಒಬ್ಬ ವಿದ್ಯಾರ್ಥಿ ಬಂದಾಗ "ಏನೋ ಚಂದ್ರ ಕ್ಲಾಸಿಗೆ ಹೊರಟೆಯಾ ?" ಎಂದ
ಒಬ್ಬ.

"ಅದಕ್ಕೇ ತಾನೇ ಕಾಲೇಜಿಗೆ ಬರೋದು ?" ಎಂದ ಆತ.

"ಅಂದ್ರೆ, ನೀನು ಮಾತ್ರ ಕ್ಲಾಸಿಗೆ ಹೋಗೋನು, ನಾವೆಲ್ಲಾ ಬೀದೀ
ಸುತ್ತೋ ಪೋಕರಿಗಳೂ ಅಂತನಾ ನಿನ್ನ ಅರ್ಥ ?" ಇನ್ನೊಬ್ಬ ರೇಗಿದ.

"ಬಹಳಾ ಬುದ್ಧಿವಂತ ಅಂತ ಜಂಬ ಅವನಿಗೆ" ಅಂತ ಒಬ್ಬ.

"ಲೇ, ಈಸಲ ಪರೀಕ್ಷೆ ಟೈಮಿಗೆ ಸರಿಯಾಗಿ ಇವನ್ನ ಕಿಡ್್ನ್ಯಾಪ್
ಮಾಡಿದ್ರೆ ಹೇಗೆ ?" ಮತ್ತೊಬ್ಬನ ಸಲಹೆ.

"ಲೇ ಬಿಡ್ರೋ, ಪಾಪ ಅವನ್ನ ಯಾಕೆ ಕಾಡಿಸ್ತೀರಾ? ಅವನ ಪಾಡಿಗೆ
ಅವನಿದ್ರೆ ನಿಮಗೇನು ತೊಂದರೆ ?" ಎಂದು ಹೇಳಿ ಗುಂಪಿನವನೇ ಒಬ್ಬ ಚಂದ್ರ~
ನನ್ನು ಅವರ ಕೀಟಲೆಯಿಂದ ಬಿಡಿಸಿದ.

ಇದು ಕಾಲೇಜಿನ ಆವರಣದಲ್ಲಿ ನಿತ್ಯ ನಡೆಯುವ ಮಾಮೂಲು ದೃಶ್ಯ.
ಇದು ಬಹಳ ಸ್ವಾರಸ್ಯವಾಗಿ ಕಂಡು ಹಯಗ್ರೀವ ಮೊದಲ ವರ್ಷವೇ ಗುಂಪಿನ
ಮುಖ್ಯ ಸದಸ್ಯನಾಗಿದ್ದ. ಹಯಗ್ರೀವ ಮೊದಲನೇ ವರ್ಷದ ಪರೀಕ್ಷೆಯಲ್ಲಿ
ಒಂದು ಬಿಟ್ಟು ಎಲ್ಲ ಪೇಪರ್್ಗಳನ್ನೂ ಹಾಗೇ ಉಳಿಸಿಕೊಂಡಿದ್ದ. ಕನ್ನಡದ
ಅದೃಷ್ಟ, ಅದೊಂದು ಪೇಪರ್ ಹೇಗೋ ಪಾಸಾಗಿಬಿಟ್ಟಿತ್ತು. ಅದು
ಪಾಸಾದಾಗ ನಿಜವಾಗಲೂ ಹಯಗ್ರೀವನಿಗೇ ಭಯಂಕರ ಆಶ್ಚರ್ಯ~
ವಾಗಿತ್ತು.

ಸಪ್ಲಿಮೆಂಟರಿ ಪರೀಕ್ಷೆಗೆ ಕಟ್ಟಿದ್ದರೂ ಏನೂ ಓದಿರಲಿಲ್ಲ. ಗುಂಪಿನ
ಬೆಂಬಲದ ಬ಼ಲದಿಂದ ಕಾಪಿ ಹೊಡೆದು ಪಾಸಾಗಬಹುದೆಂಬ ಆಸೆಯಿಟ್ಟು~
ಕೊಂಡಿದ್ದ ಹಯಗ್ರೀವ. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಱಾಘವನೇ
ಖುದ್ದಾಗಿ ಅವನಿಗೆ ಭರವಸೆ ಕೊಟ್ಟಿದ್ದ. ಆ ನಂಬಿಕೆಯ ಮೇಲೆ ರಾಘವ
ಮತ್ತು ಅವನ ತಂಡದವರು ಚುನಾವಣೆಯಲ್ಲಿ ಗೆಲ್ಲಲ್ಲು, ಹಯಗ್ರೀವ ಮತ್ತು
ತಂಡದವರು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದರು. ಹೆಚ್ಚು ಹೆಚ್ಚು
ಸುಳ್ಳು ಓಟುಗಳನ್ನು ಹಾಕಿದ್ದರು. ಜೊತೆಗೆ ಅವರ ಖರ್ಚಿನಲ್ಲಿ ತಮ್ಮ ಶಕ್ತಿ
ಮೀರಿ ತಿಂದು ಕುಡಿದು ಮಜಾ ಕೂಡ ಮಾಡಿದ್ದರು. ರಾಘವನ ಗುಂಪಿಗೆ
-11-
ರಾಜಕೀಯ ಮುಖಂಡನ ಮೂಲಕ ಪಾರ್ಟಿಯ ಹಣ, ಕಾರು, ದೊರಕಿತ್ತು.
ರಾಘವ ಮುಂದಿನ ತನ್ನ ರಾಜಕೀಯ ಜೀವನಕ್ಕೆ ಕಾಲೇಜಿನಿಂದಲೇ ಬಹಳ
ಪರಿಣಾಮಕಾರಿಯಾಗಿ ಪ್ರವೇಶ ಮಾಡಿದ್ದ.

ರಾಘವನನ್ನು ಕಂಡರೆ ಕೆಲವು ಮೇಷ್ಟ್ರುಗಳೂ ಗೌರವ ಕೊಡ್ತಾ ಇದ್ರು.
ಅದಕ್ಕೆ ಬಹುಶಃ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮೆಮೋಕೊಟ್ಟು ತರಲೆ
ಮಾಡುವ ಪ್ರಿನ್ಸಿಪಾಲನನ್ನು ಅವನು ಬಾಯಿಗೆ ಬಂದಂತೆ ಬೈಯುವನೆಂಬ
ಕಾಣವಿರಬಹುದು! ಅದನ್ನು ಕಂಡು ಹಯಗ್ರೀವನಿಗೆ ಆಶ್ಚರ್ಯ, ತಾನೂ
ರಾಘವನಂಥ ಒಬ್ಬ ನಾಯಕನಾಗಬೇಕೆಂಬ ಆಸೆ! ಅವನ ಹಾಗೆ ತಾನೂ
ಪ್ರಿನ್ಸಿಪಾಲನ ಕೊಠಡಿಗೆ ಹೋಗಿ "ಏನಲೇ, ಅಧಿಕಾರ ಚಲಾಯಿಸ್ತಿಯಾ?
ಅದೆಲ್ಲಾ ನಡೆಯೋದಿಲ್ಲ. ಇರೋಷ್ಟು ದಿನ ನೆಟ್ಟಗಿರಬೇಕು ಅಂದ್ರ ಹುಷಾರಾ~
ಗಿರು. ಈ ಮೆಮೋ ಕೋಡೋದು, ರಿಪೋರ್ಟ್ ಬರೆಯೋದು ಎಲ್ಲ ಬಿಟ್ಟು
ಬಿಡು. ಬಿಡಲಿಲ್ಲಾಂದ್ರೆ ನೀನೇ ಜಾಗ ಖಾಲಿ ಮಾಡಬೇಕಾಗುತ್ತೆ. ಅದಕ್ಕೆ
ಮುಂಚೆ ಬರೀ ಚಡ್ಡಿ ಹಾಕ್ಕೊಂಡು ಕಾಲೇಜ್ ಪ್ರದಕ್ಷಿಣೆ ಹಾಕಬೇಕಾಗುತ್ತೆ,
ಹುಷಾರ್ !" ಹೀಗೆ ಮಾತಾಡಬೇಕೆಂಬ ಚಪಲವಾಗ್ತಾ ಇತ್ತು.

ಈ ವರ್ಷವಲ್ಲ ಮುಂದಿನ ವರ್ಷ ವಿದ್ಯಾರ್ಥಿ ನಾಯಕನಾಗುವ ತನ್ನ
ಮಹತ್ವಾಂಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಹಯಗ್ರೀವ ಸಿದ್ದತೆಯನ್ನು
ಮಾಡಿಕೊಳ್ಳತೊಡಗಿದ. ತನ್ನ ಆದರ್ಶನಾಯಕನಾದ ರಾಘವನಂತೆ ಸಿಗ~
ರೇಟು, ಕುಡಿತ, ಇಸ್ಪೀಟು, ಹೊಲಸು ಬೈಗುಳ ಇತ್ಯಾದಿಗಳನ್ನು ಚೆನ್ನಾಗಿ
ಕಲಿಯಲು ಶ್ರದ್ಧೆವಹಿಸಿದ. ಉಳಿದಂತೆ ಪರೀಕ್ಷಗೆ ಓದಲು, ತರಗತಿಗಳಿಗೆ ಹಾಜ~
ರಾಗಿ ಪಾಠಕಲಿಯಲು ಈಗ ಅವನ ಬಳಿ ಶ್ರದ್ಧೆಯ ದಾಸ್ತಾನು ಉಳಿ~
ದಿರಲಿಲ್ಲ.

ಇದೇ ಉತ್ಸಾಹದಲ್ಲಿ ಹಯಗ್ರೀವ ರಾಘವ ಸಂಘಟಿಸಿದ ಒಂದು ಸ್ಟ್ರೈಕ್~
ನಲ್ಲಿ ಭಾಗವಹಿಸಿ ಕೆಲವರು ಮೇಷ್ಟ್ರುಗಳಿಗೆ ಬಹಿಷ್ಕಾರ ಹಾಕಿದ. ಕಿರುಚಿ
ಕಿರುಚಿ ಒಂದು ವಾರ ಕಾಲ ಅವನ ಗಂಟಲು ಕಟ್ಟಿತ಼್ತು. ಒಂದು ವಾರದ
ಚಳುವಳಿಯಲ್ಲಿ ಕಾಲೇಜಿನ ಕಿಟಕಿ ಬಾಗಿಲುಗಳು ಬೆತ್ತಲಾದವು. ಪೋಲೀಸಿ~
ನವರು ಬಂದು ಅಮಾಯಕ ವಿದ್ಯಾರ್ಥಿಗಳು ಲಾಠಿ ಏಟುಗಳ ರುಚಿ
ನೋಡಿದರು.
-12-

ಇದ್ದಕ್ಕಿದ್ದಂತೆ ಒಂದು ದಿನ ಸ್ಟ್ರೈಕ್ ನಿಂತು ಹೋಯ್ತು. ಇವರ ದೆಸೆ~
ಯಿಂದ ಪಾಠ ಹಾಳುಮಾಡಿಸಿಕೊಂಡು ನೂರಾರು ವಿದ್ಯಾರ್ಥಿಗಳು ಖುಷಿಯಿಂದ
ತರಗತಿಗಳಿಗೆ ಹಾಜರಾದರು. ಹಾಳು ಮಾಡಿದ ನಾಲ್ಕಾರು ಮುಖಂಡರ
ತಂಡ ಬಾರಿನಲ್ಲಿ ಭರ್ಜರಿಯಾಗಿ ಕುಡಿದು, ತಿಂದು, ಕೂಗಿ, ಕಿರುಚಿ, ವಾಂತಿ~
ಮಾಡಿ, ಗದ್ದಲ ಮಾಡಿ ಗಬ್ಬೆಬ್ಬಿಸಿದರು! ಇಷ್ಟೆಲ್ಲಾ ಖರ್ಚು ಮಾಡಿದ
ರಾಘವನ ಓದಾಱ್ಯವನ್ನು ದಡ್ಡ ಹಯಗ್ರೀವ ಮೆಚ್ಚಿಕೊಂಡ. ಸ್ಟ್ರೈಕ್
ಮಾಡಿಸಲು ಮತ್ತು ನಿಲ್ಲಿಸಲು ರಾಘವ ಯಾರು ಯಾರಿಂದಲೋ ದುಡ್ಡು
ತಿಂದಿರುವುದು ಅವನಿಗೆ ಗೊತ್ತಾಗಲೇ ಇಲ್ಲ.

ಆ ದಿನ ರಾತ್ರಿ ಬಾರಿನಿಂದ ಹೊರಟ ಹಯಗ್ರೀವ ಅದೇ ಅವಸ್ಥೇಲಿ ಮನೆ
ಕಡೆ ಹೊರಟಿದ್ದ. ಅವೊತ್ತಿನ ಕುಡಿತ ಅವನ ಸಾಮರ್ಥ್ಯದ ಮಿತಿಮೀರಿ
ಬಿಟ್ಟಿತ್ತು. ರಸ್ತೆಯೆಲ್ಲ ಸಮುದ್ರದ ಅಲೆಗಳ ಹಾಗೆ ಉರುಳಾಡ್ತಾ ಇತ್ತು!
ಇವನೂ ನೆಲದಿಂದ ಎರಡಡಿ ಮೇಲೆ ತೇಲ್ತಾ ಇರೋ ಭ್ರಮೆಯಲ್ಲಿದ್ದ !
ಎಷ್ಟು ಭದ್ರವಾಗಿ ಕಾಲಿಟ್ಟರೂ ಉರುಳಿ ಬೀಳೋ ಹಾಗೆ ಆಗ್ತಾ ಇತ್ತು!
ಅಬದ್ಧಕ್ಕೆ ಅಪ್ಪಣೇನೇ? ಅಂತ ಹಿಂದಿ ಕನ್ನಡ ಸಿನಿಮಾ ಹಾಡುಗಳನ್ನೆಲ್ಲಾ
ಒಟ್ಟೊಟ್ಟಿಗೇ ಹಾಡ್ತಾ ಇದ್ದ. ಎದುರುಗಡೆಯಿಂದ ಒಂದು ಲಾರಿ ಬಱ್ತಾ
ಇತ್ತು. ಅದರ ಎರಡು ಹೆಡ್ ಲೈಟುಗಳು ನಾಲ್ಕಾದವು! ಎರಡು ಲಾರಿ
ಒಟ್ಟಿಗೇ ಬಱ್ತಾ ಇವೆ ಅನ್ನಿಸಿ ಭಯವಾಯ್ತು! ಅದೇ ಸ್ಥಿತೀಲೆ, ಹೋಗೋ
ಕಷ್ಟ ಪಟ್ಟು ಒಂದೇ ಏಟಿಗೆ ಪಕ್ಕಕ್ಕೆ ಹಾರಿದ ! ಮರು ಕ್ಷಣದಲ್ಲಿ ಪಕ್ಕದ
ಮೋರಿ ನೀರು ಛಿಲ್ಲಂತ ಮೇಲೆ ಹಾರಿತು!

ಆಮೇಲೆ ಅವನು ಎದ್ದಿದ್ದು, ಬಟ್ಟೆಯೆಲ್ಲಾ ಗಲೀಜಾದದ್ದು, ಒಂದೆ~
ರಡು ಗಾಯಗಳ ಪ್ರಸಾದ ದೊರಕಿದ್ದು, ಅದೇ ಸ್ಥಿತೀಲಿ ಮನೆಗೆ ಹೋದಾಗ
ಅವರಮ್ಮ ಉಗಿದು ಉಪ್ಪಿನಕಾಯಿ ಹಾಕಿದ್ದು-ಇತ್ಯಾದಿಗಳೆಲ್ಲಾ ಎಷ್ಟು
ಸ್ವಾರಸ್ಯವಾಗಿದ್ದಿರಬಹುದೆಂಬುದನ್ನು ಮಾನ್ಯ ಪಾಠಕಮಹಾಶಯರು ಖಂಡಿತ
ಊಹೆ ಮಾಡಿಕೊಳ್ಳಬಲ್ಲರೆಂದು ಅದನ್ನೆಲ್ಲ ಇಲ್ಲಿ ವರ್ಣಿಸಿಲ್ಲ. ಆದರೆ ಕೆಲವು
ದಿವಸಗಳ ಮೇಲೆ ಹಯಗ್ರೀವ ನನ್ನೊಂದಿಗೆ ಆ ಘಟನೆಯನ್ನು ವರ್ಣಿಸಿ
ಬಿದ್ದು ಬಿದ್ದು ನಕ್ಕಾಗ ಮಾತ್ರ `ಇವನಿಗೆ ನಾಚಿಕೆ, ಮಾನ ಮರ್ಯಾದೆ
ಇದೆಯಾ ?' ಅಂತ ನನಗೆ ಪ್ರಬಲವಾದ ಸಂದೇಹ ಬಂದಿತ್ತು.
-13-

ಅಕ್ಟೋಬರ್ ಪರೀಕ್ಷೆ ಹಯಗ್ರೀವ ಅಂದುಕೊಂಡ ಹಾಗಾಗಲಿಲ್ಲ.
ರಾಘವ ತನಗೆ ಕೃಪೆ ತೋರಿಸೋ ಅಧ್ಯಾಪಕರನ್ನು ತನ್ನ ನಂಬರು ಇರುವ
ಕೊಠಡಿಗೆ ಹಾಕಿಸಿಕೊಂಡು, ಎರಡು ಮೂರು ಪೇಪರ್ ಆದ್ರೂ ಪಾಸಾಗು~
ವಂತೆ ಬರೆದ. ಹಯಗ್ರೀವನಿಗೆ ಆ ಸೌಲಭ್ಯ ಒದಗಲಿಲ್ಲ. ಸ್ಟ್ರಿಕ್ಟ್ ಅನಿಸಿ
ಕೊಂಡಿದ್ದ ಮೇಷ್ಟ್ರೇ ಬೀಳ್ತಾ ಇದ್ರು. ಸ್ವಲ್ಪ ಮಾಲುಗಣ್ಣಿನ ರಾಮಾ~
ಚಾರ್ ಉರುಫ಼್ ವಿದ್ಯಾರ್ಥಿಗಳ ಅಡ್ಡಹೆಸರಿನ ಶುಕ್ರಾಚಾರಿ ಬಂದ ದಿನ ಹಯ~
ಗ್ರೀವ ಕಾಪಿ ಮಾಡೋದಿಕ್ಕೆ ಪ್ರಯತ್ನಪಟ್ಟ. ಆ ದಿನ ನಡೆದ ಸಂಭಾಷಣೆ
ಹೀಗಿತ್ತು:

"ಎಲ್ಲಿ, ಎಲ್ಲಿ, ನಿಮ್ಮ ಹತ್ರ ಏನೇನಿದೆಯೋ ಅದೆಲ್ಲಾ ಕೊಟ್ಟುಬಿಡಿ.
ನನ್ನ ಕೈಗೆ ಸಿಕ್ಕಿಹಾಕ್ಕೊಂಡ್ರೆ ಚೆನ್ನಾಗಿರೊಲ್ಲ."

"ಎಲ್ಲ ಕೊಡಿ ಅಂದ್ರೆ ಏನ್ಸಾರ್ ಅರ್ಥ. ಪ್ಯಾಂಟು, ಷರ್ಟು ಎಲ್ಲ
ಬಿಚ್ಚಿಕೊಟ್ಟು ಬರಿಮೈಯಲ್ಲಿ ಪರೀಕ್ಷೆಗೆ ಬರೆಯೋಕಾಗುತ್ತ ?"

ಎಲ್ಲರೂ ನಕ್ಕರು. ತನ್ನ ಮಾತಿನ ಜಾಣತನಕ್ಕೆ ಹಯಗ್ರೀವ ತಾನೇ
ಮೆಚ್ಚಿದ. ಮೇಷ್ಟ್ರೂ ನಕ್ಕರು. ದಾರಿಗೆ ಬರಬಹುದು ಅಂದುಕೊಂಡ.
ಆದರೆ ಹಾಗಾಗಲಿಲ್ಲ. ಮೇಷ್ಟ್ರು ನಗುತ್ತಲೇ ಹೇಳಿದರು : "ಹೌದ್ರೀ, ಕಾಪಿ
ಮಾಡೋ ಸರಕನ್ನೆಲ್ಲಾ ನೀವಾಗೇ ಕೊಡದೇ ಇದ್ರೆ, ನಾನೇ ಷರ್ಟು, ಪ್ಯಾಟು
ಬಿಚ್ಚಿಸಿ ಶೋಧಿಸಬೇಕಾಗುತ್ತೆ. ಆ ಅದೃಷ್ಟ ನಿಮ್ಮದೇ ಆಗಬಹುದು."

" ಏನೋ ಒಂದು ಚೂರು ಬರೆದುಕೊಂಡ್ರೆ ನಿಮ್ಮ ಗಂಟು ಏನ್ಸಾರ್
ಹೋಗುತ್ತೆ ?"

"ನನ್ನ ಗಂಟೇನೂ ಹೋಗೋದಿಲ್ಲ, ನಿಮ್ಮ ಈ ಸಲದ ಪರೀಕ್ಷೆ ಮಾತ್ರ
ಖಂಡಿತ ಹೋಗೇ ಹೋಗುತ್ತೆ."

ಮತ್ತೆ ವಿದ್ಯಾರ್ಥಿಗಳು ನಕ್ಕಾಗ ಹಯಗ್ರೀವನ ಮುಖದಲ್ಲಿ ಇಂಗು
ತಿಂದ ಮಂಗನ ಕಳೆ ಬಂತು. ಸ್ವಲ್ಪ ಕೋಪ ಕೂಡ ಬಂತು. "ಕೊಡದೇ
ಇದ್ರೆ ಏನು ಮಾಡ್ತೀರಾ ?" ಅಂದ.

"ಏನೂ ಮಾಡೊಲ್ಲ. ಇದ್ರೆ ಜೇಬಲ್ಲೇ ಭದ್ರವಾಗಿರಲಿ,"
"ಜೇಬಿಂದ ತೆಗೆದು ಬರೆದೇ ಬರೀತೀನಿ, ಏನು ಮಾಡ್ತೀರಾ ?"

"ತೆಗೆದು ಬರೀರಿ, ಆಮೇಲೆ ಹೇಳ್ತೀನಿ."
-14-

ಹುಚ್ಚು ಧೈರ್ಯ ಮಾಡಿ ತೆಗೆದು ಬರೆಯತೊಡಗಿದ. ಮೇಷ್ಟ್ರು
ಕಿತ್ತುಕೊಂಡು ಪ್ರಿನ್ಸಿಪಾಲರನ್ನು ಕರೆಸಿ ಅಚ್ಚುಕಟ್ಟಾಗಿ ರಿಪೋರ್ಟ್ ಬರೆದರು.
ಸಿಕ್ಕಾಪಟ್ಟೆ ಬೈದುಬಿಡಬೇಕು, ಕಾಲರ್ ಹಿಡಿದು ಒಂದೆರಡು ಬಾರಿಸೇಬಿಡ~
ಬೇಕೆಂಬ ಪ್ರೇರಣೆಯಾಯಿತು. ಆದರೆ ಶುಕ್ರಾಚಾರಿ ತನಗಿಂತ ಬಲವಾಗಿದ್ದು
ಅವರೇ ತಿರುಗಿಸಿ ಎರಡು ಬಿಟ್ರೆ ತನ್ನ ಮೂತಿ ಹನುಮಂತ ಆಗುತ್ತೆ ಅನ಼್ನೊ
ಭಯವಾಯಿತು. ಎಲ್ಲ ತಮ್ಮ ಪಾಡಿಗೆ ತಾವು ಬರೆಯುವುದರಲ್ಲಿ ಮಗ್ನರಾಗಿ~
ದ್ದರು. ಯಾರಾದರೂ ತನ್ನ ಸಹಾಯಕ್ಕೆ ಬರುವ ಸೂಚನೆ ಕಂಡುಬರಲಿಲ್ಲ.
`ಮುಂದಿನ ವರ್ಷ ನಾನು ಸ್ಟೂಡೆಂಟ್ ಲೀಡರ್ ಆದಾಗ ನಿಮ್ಮನ್ನೆಲ್ಲಾ
ಒಂದು ಕೈ ನೋಡ್ಕೊಳ್ತೀನಿ' ಎಂದು ಮನಸ್ಸಿನಲ್ಲೇ ಅಂದುಕೊಂಡು ಹೊರಗೆ
ಬಂದ.

ಹೊರಗೆ ಬಂದು ಕಟ್ಟೆಯ ಮೇಲೆ ಕುಳಿತು ಒಂದು ಸಿಗರೇಟ್ ಹೊಡೆದು.
ತಲೆ ಇನ್ನಷ್ಟು ಬಿಸಿಯಾಯಿತು. `ನಿಜವಾಗಲೂ ರಿಪೋರ್ಟ್ ಯೂನಿ~
ವರ್ಸಿಟಿಗೆ ತಲಪಿ ಡಿಬಾರ್ ಆದ್ರೆ ಅವಮಾನವಾಗುತ್ತಲ್ಲಾ ?' ಎಂಬ
ಯೋಚನೆ ಆ ಬಿಸಿಯಲ್ಲೇ ತಲೆಯಲ್ಲಿ ಸುಳಿಯಿತು. `ಒಳ್ಳೆ ಎಡವಟ್ಟು ಕೆಲಸ~
ವಾಯ್ತಲ್ಲಾ' ಎಂದು ಪೇಚಾಡಿಕೊಂಡ. ಹೀಗಾದ್ರೆ ತನ್ನ ಹಿಂಬಾಲಕರ
ಎದುರಿನಲ್ಲಿ ತಲೆಯೆತ್ತಿ ತಿರುಗುವುದು ಹೇಗೆಂದು ಚಿಂತೆಯಾಯಿತು.

`ಏನು ಮಾಡಲಿ, ಏನು ಮಾಡಲಿ? ಈ ಅಪಮಾನಕ್ಕೆ ಯಾವ ರೀತಿ
ಸೇಡು ತೀರಿಸಿಕೊಳ್ಳಲಿ ?' ಎಂದು ದುರಂತನಾಯಕನಂತೆ ಹಳಹಳಿಸುತ್ತಿರು~
ವಾಗ, ರಾಘವ ಪರೀಕ್ಷೆ ಮುಗಿಸಿ ಹೊರಗೆ ಬರುವುದು ಕಂಡಿತು. ತನ್ನ
ಆದರ್ಶನಾಯಕ ಇದಕ್ಕೇನಾದರೂ ಗತಿಕಾಣಿಸಬಹುದೆಂಬ ಧೈರ್ಯದ ಮೇಲೆ
ತಾನೇ ಮಾತಾಡಿಸಲು ಹೋದ.

"ಏನೋ ಮರಿ ಪರೀಕ್ಷೆಗೆ ಹೇಗೆ ಮಾಡಿದೆ ?" ರಾಘವ ಕೇಳಿದ.

"ಕಳ್ಳನನ್ನ ಮಗ ಆ ಶುಕ್ರಾಚಾರಿ ಕಾಪಿ ಮಾಡೋದಿಕ್ಕೆ ಬಿಡಲಿಲ್ಲ
ಕಣೊ."

"ಬಿಡದೇ ಹೋದ್ರೆ ಇನ್ನೊಂದು ಪರೀಕ್ಷೆಗೆ ಕೂತರಾ೟್ತು ಬಿಡೋ."
ರಾಘವ ನಿಸೂರಾಗಿ ಹೇಳಿದ.

`ಎಲಾ ಇವನಾ! ನನ್ನ ಆದರ್ಶನಾಯಕ ಹೀಗೆ ಮಾತಾಡಬಹುದೇ ?"
-15-
ಎಂದು ಒಂದು ಕ್ಷಣ ಕಕಮಕವಾಯಿತು, ಹಯಗ್ರೀವನಿಗೆ. ತಮಾಷೆ ಮಾಡು~
ತ್ತಿರಬಹುದೆಂದುಕೊಂಡು ಹೇಳಿದ : "ಅಷ್ಟೇ ಅಲ್ಲವೋ, ನನ್ನ ಮೇಲೆ
ರಿಪೋರ್ಟ್ ಕೂಡ ಬರೆದು ರೆಡಿ ಮಾಡಿದಾನೆ. ಅದೇನಾದ್ರೂ ಯೂನಿವರ್ಸಿಟಿಗೆ
ಹೋದ್ರೆ ಡಿಬಾರ್್ಗಿಬಾರ್ ಆಗುತ್ತಾ ?"

"ಅಂದ್ರೆ ನೀನು ಮೇಷ್ಟ್ರಿಗೆ ರೋಪ್ ಹಾಕಿದ್ದಿ ಅಂತಾಯ್ತು ?"

"ಬಿಡ್ತೀನಾ ? ಆದರೆ ಜಾಸ್ತಿ ಇಲ್ಲ."

"ಅದಕ್ಕೇ ನಿನ್ನ ಎಳೆ ನಿಂಬೆಕಾಯಿ ಅನ್ನೋದು. ಸಮಯ ಸಂದರ್ಭ
ನೋಡಿಕೊಂಡು ಕಾಪಿ ಮಾಡೋದು ಬಿಟ್ಟು ತರಲೆ ಮಾಡಿಕೊಂಡ್ರೆ ಹೀಗೇ
ಆಗೋದು."

"ಏನು ಗುರೂ ನೀನೂ ಹೀಗೆ ಹೇಳ್ತಿ? ನೀನು ಎಲೆಕ್ಷನ್್ನಲ್ಲಿ ಗೆಲ್ಲೋಕೆ
ಎಷ್ಟು ಕಷ್ಟಪಟ್ಟಿದೀನಿ. ನೀನೂ ಪ್ರಾಮಿಸ್ ಮಾಡಿದ್ದೆ ಅಲ್ಲವಾ ? ಅಲ್ಲದೆ
ನಿನಗೆ ಕಾಪಿ ಹೊಡೆಯೋಕೆ ಬಿಡಬಹುದು ನನಗೆ ಬಿಡಬಾರದಾ ? ಯಾಕೆ
ತಾರತಮ್ಯಮಾಡಬೇಕು ?"

ಹಯಗ್ರೀವನ ಪ್ರಶ್ನೆಗೆ ರಾಘವ ಸಿಡಿದು ಸೀಗೇಕಾಯಾದ !"ಮುಚ್ಚಲೇ
ಕಂಡಿದ್ದೀನಿ. ಆಗಲೇ ನನ್ನ ಜೊತೆ ಹೋಲಿಸಿಕೊಳ್ತಿಯಾ ? ಎಷ್ಟಲೇ
ಪೊಗರು ನಿನಗೆ? ನನ್ನ ನೀನೇನಾ ಗೆಲ್ಲಿಸಿದ್ದು? ಉಳಿದ ವಿದ್ಯಾರ್ಥಿಗಳೆಲ್ಲಾ
ಓಟುಕೊಟ್ಟಿಲ್ಲವಾ ? ಅವರೆಲ್ಲ ಮೂರ್ಖರಾ ? ನೀನು ಮಹಾ ತೋಳಣ್ಣ~
ರಾಯ ಅಂತ ನಿನಗೆ ಮಾತ್ರ ಕಾಪಿ ಹೊಡೆಯೋಕೆ ಬಿಡಿಸಬೇಕಾ? ಇನ್ನೂ
ಸರಿಯಾಗಿ ಮೀಸೆ ಬರಲಿಲ್ಲ, ಆಗಲೇ ನನಗಿಂತ ದೊಡ್ಡೋನು ಆಗಬೇಕಾ?
ಎಷ್ಟೋ ನಿನ್ನ ಧೈರ್ಯ? ಕಾಲೇಜೇನು ನಿಮ್ಮಪ್ಪಂದಾ? ಮೇಷ್ಟ್ರುಗಳಿಗೆಲ್ಲಾ
ನಿಮ್ಮಪ್ಪ ಸಂಬಂಳ ಕೊಡ್ತಾನೇನೋ? ಮೇಷ್ಟ್ರುಗಳು ನನಗೆ ಸಪೋರ್ಟ್
ಮಾಡ್ತಾರೆ ಅಂತ ಅಪಪ್ರಚಾರ ಮಾಡ್ತಾ ಇದೀಯೇನೋ ? ಯಾವ ಸೂಳೆ
ಮಗನೋ ಹೀಗೆ ಮಾಡು ಅಂತ ನಿನಗೆ ಹೇಳಿಕೊಟ್ಟಿದ್ದು ? ಎಷ್ಟರಲ್ಲಿರ~
ಬೇಕೋ ಅಷ್ಟರಲ್ಲಿರಬೇಕು. ಇಲ್ಲಾಂದ್ರೆ ನಾನೇ ನಿನ್ನ ಹದ ಮಾಡಿಬಿಡ್ತೀನಿ!"

ಬಾಯಿನ ಉಗುಳು ತನ್ನ ಮೇಲೆ ಬೀಳುವಂತೆ ರಾಘವ ಒಂದೇ ಸಮನೆ
ಬೊಂಬಡ ಬಜಾಯಿಸಿದ್ದರ ತಲೆ ಬುಡವೇ ಹಯಗ್ರೀವನಿಗೆ ಅರ್ಥವಾಗಲಿಲ್ಲ.
ಇವನಾರು, ರಾಘವನೋ, ರಾವಣನೋ ? ಎಂಬ ಪ್ರಶ್ನೆಮೂಡಿತು ಒಂದು
-16-
ಕ್ಷಣ. ತನ್ನ ಆದರ್ಶನಾಯಕ ತನ್ನೆದುರಿಗೇ ಭಯಂಕರ ಬ್ರಹ್ಮರಾಕ್ಷಸನಂತೆ
ಕಂಡ! ಯಾವ ನಾಯಕ ಕಾಪಿ ಹೊಡೆಯಲು ಬೆಂಬಲ ಕೊಡುವುದಾಗಿ
ನಂಬಿಸಿ ಚುನಾವಣೆಯಲ್ಲಿ ತನ್ನ ಬೇಳೆ ಬೇಯಿಸಿಕೊಂಡಿದ್ದನೋ, ಅದೇ
ನಾಯಕ ಈಗ, ಅದೂ ಮುಂದಿನ ವರ್ಷ ಕಾಲೇಜಿನಲ್ಲಿ ಅವನ ಸ್ಥಾನವನ್ನು
ಅಲಂಕರಿಸಲು ಆತುರದಿಂದಿರುವ ಹಯಗ್ರೀವನಿಗೆ ಹೀಗೆ ಹೇಳಿದ್ದು, ವಿಚಿತ್ರ~
ವಲ್ಲದಿದ್ದರೂ ನಿಜವಾಗಿತ್ತು!

ಹಯಗ್ರೀವನಿಗೆ ಕೋಪವೇನೋ ಬಂತು. ಆದರೆ ಅದನ್ನು ಹೇಗೆ
ವ್ಯಕ್ತಪಡಿಸಬೇಕೆಂಬುದು ಗೊತ್ತಾಗಲಿಲ್ಲ. ಅಂಥ ಕೆಟ್ಟಮಾತನ್ನೇನೂ ಆಡದೆ
ಇಷ್ಟೊಂದು ಬೈದಿರುವ ರಾಘವ, ಏನಾದರೂ ಆಕ್ಷೇಪಣೆ ಮಾಡಿದರೆ
ತಗೆದು ಎರಡು ಬಿಗಿಯೋದಕ್ಕೂ ಹೇಸೋದಿಲ್ಲ, ಎಂಬುದು ಗೊತ್ತಿದ್ದರಿಂದ
ಮರು ಮಾತಾಡದೆ ಅರೆಮರುಳರಂತೆ ಮೇಲೆ ಕೆಳಗೆ, ಅಕ್ಕಪಕ್ಕ ನೋಡಿದ!

"ನೋಡು ನನ್ನ ಮಾತು ಕೇಳು" ರಾಘವನೇ ಹೇಳಿದ. "ಕೊಬ್ಬು
ಮಾಡಿಕೊಂಡು ಎಲ್ಲ ಹಾಳುಮಾಡಿಕೋಬೇಡ. ಡಿಬಾರ್ ಆದ್ರೆ ಕಾಲೇಜಿಗೇ
ಬರೋಹಾಗಿಲ್ಲ, ಜ್ಞಾಪಕವಿರಲಿ. ನಡಿ, ಅಪಾಲಜಿ ಕೇಳಿಕೊ, ರಿಪೋರ್ಟ್
ಕಳಿಸಬೇಡಿ ಅಂತ ನಾನು ಹೇಳ್ತೀನಿ."

"ಅಪಾಲಜೀ......?" ಹಯಗ್ರೀವ ರಾಗ ಎಳೆದ.

"ಮುಚ್ಕಂಡ್ ನಡಿಯಲೇ ಕಂಡಿದ್ದೀನಿ. ಅಪಾಲಜಿ ಕೇಳಿದ್ರೆ ಅವ~
ಮಾನವಾಗಿಬಿಡುತ್ತೆ ಪಾಪ! ಮಹಾ ದೊಡ್ಡ ಮನುಷ್ಯ ಇವನು!" ಎಂದು
ರಾಘವ ಅವನನ್ನು ದರದರ ಎ಴ೆದುಕೊಂಡೇ ಪ್ರಿನ್ಸಿಪಾಲರ ಕೊಠಡಿಗೆ ಕರೆದು
ಕೊಂಡು ಹೋದ. ನಾಯಕನ ದಬ್ಬಾಳಿಕೆಯನ್ನು ಪ್ರತಿಭಟಿಸುವ ತಾಖತ್ತಿ~
ಲ್ಲದೆ, ಹೋಗಿ "ತಪ್ಪಾಯಿತು, ಇನ್ನು ಮುಂದೆ ಹೀಗೆ ಮಾಡುವುದಿಲ್ಲ"
ಎಂದು ಬರೆದುಕೊಟ್ಟು ಹಯಗ್ರೀವ ಹ್ಯಾಪ್ ಮೋರೆ ಹಾಕಿಕೊಂಡು ಹೊರಗೆ
ಬಂದ!

ರಾಘವ ಹೊರಟುಹೋದ ನಂತರ ಶೋಕ, ಕೋಪ ಎರಡೂ ಒಟ್ಟಿಗೇ
ಉಂಟಾದವು ಹಯಗ್ರೀವನಿಗೆ. ಕುದಿಯುತ್ತ ಹೊರಗೆ ಬಂದ. ರಾಘವನಿಗೆ
ಒದ್ದು ಬಿಡಬೇಕಾಗಿತ್ತೆನಿಸಿತು. ಅದೇ ಭರದಲ್ಲಿ ದಾರಿಯಲ್ಲಿ ಮಲಗಿದ್ದ ಒಂದು
ಬೀದಿ ನಾಯಿಗೆ ಜಾಡಿಸಿ ಒದ್ದ! ಅದು ರೇಗಿ ಅಟ್ಟಿಸಿಕೊಂಡು ಬಂತು! ಭಯ~
-17-
ವಾಗಿ ಬಿದ್ದಂಬೀಳಾ ಓಡಿದ. ಓಡಿ ಓಡಿ ಸುಸ್ತಾದಾಗಲೇ ಅವನು ಹಿಂತಿರುಗಿ
ನೋಡಿದ್ದು! ನಾಯಿ ಯಾವಾಗಲೋ ಹೊರಟು ಹೋಗಿತ್ತು!

`ಬೀದಿ ನಾಯಿ ಅಟ್ಟಿಸಿಕೊಂಡು ಬಂದರೇ ನನಗೆ ಇಷ್ಟು ಭಯವಾ~
ಗುತ್ತೆ. ಇನ್ನು ರಾಘವನಂಥ ಪಳಗಿದ ಖದೀಮನನ್ನು ಎದುರಿಸೋದು ಹೇಗೆ
ಸಾಧ್ಯ! ಇಲ್ಲ, ಏನೇ ಆದರೂ ಬಿಡಬಾರದು, ಧೈರ್ಯ ತಗೋಬೇಕು,
ಯಾವ ಬೋಳೀಮಗನಿಗೂ ಹೆದರಬಾರದು. ಕೆಣಿಕಿದವರ ಮೂತಿಗೆ ಬಾರಿಸ~
ಬೇಕು' ಇತ್ಯಾದಿ ಅಂದುಕೊಂಡ.

ಅಂತೂ ಅಕ್ಟೋಬರ್ ಪರೀಕ಼್ಷೆ ಮುಗಿದು ಹೋಯಿತು. ಅಲ್ಲಿಂದಾ~
ಚೆಗೆ ಹಯಗ್ರೀವ ಸೊನ್ನೆಯಾಗಿಬಿಟ್ಟ. "ಏನಮ್ಮಾ, ನೀನು ನಮ್ಮ
ಗುರೂಗೇ ರೋಪ್ ಹಾಕಿದೆಯಂತೆ ?" ಎಂದು ಇವನ ಸುತ್ತ ಇರುತ್ತಿದ್ದ ಪುಡಿ
ಪುಂಡರು ಆಕ್ಷೇಪಿಸಿದರು. ತನ್ನನ್ನು ತಾನು ಸಮರ್ಥಿಸಿಕೊಳ್ಳು ಧೈರ್ಯ
ಸಾಲಲಿಲ್ಲವೋ, ಅಥವಾ ಸಮಯ ಸರಿಯಿಲ್ಲವೆಂದೋ ಹಯಗ್ರೀವ ತಟಸ್ಥ~
ನಾದ. ಅವರೆಲ್ಲ ಒಂದು ರೀತಿಯಲ್ಲಿ ಇವನನ್ನು ಕೈಬಿಟ್ಟರು. ಕಾಫಿ ಸಿಗ~
ರೇಟು ಕೊಡಿಸುವವರೆಗೂ ಸುಮ್ಮನಿದ್ದು ಆಮೇಲೆ ಮೆಲ್ಲಗೆ ಕಳಚಿಕೊಳ್ಳು~
ತ್ತಿದ್ದರು. `ಮಕ್ಕಳ್ರಾ ಎಲ್ಲಿ ಹೋಗ್ತೀರಾ? ಈ ವರ್ಷ ಕಳೀಲಿ. ನನ್ನ
ಹಿಂದೆ ಸುತ್ತೋ ಹಾಗೆ ಮಾಡದೆ ಇದ್ರೆ ನನ್ನ ಹೆಸರು ಹಯಗ್ರೀವನೇ ಅಲ್ಲ'
ಎಂದು ಮನಸ್ಸಿನಲ್ಲೇ ಬೈದುಕೊಂಡ.

ಆದರೆ ಆಗಲಾದರೂ ಪಾಠ, ಪರೀಕ್ಷೆ ಅಂತ ಯೋಚನೆ ಮಾಡಲಿಲ್ಲ.
ವರ್ಷಾಂತ್ಯದ ಕಾಲೇಜಿನ ಸಮಾರಂಭಗಳಲ್ಲಿ ರಾಘವನ ಆಟಾಟೋಪವನ್ನು
ಸುಮ್ಮನೆ ನೋಡುತ್ತಾ ಇರಬೇಕಾಯಿತು. ಕಾಲೇಜ್್ಡೇ, ಸ್ಪೋರ್ಟ್ಸ್್ಡೇ,
ಕರ್ನಾಟಕ ಸಂಘ, ಎಲ್ಲದರಲ್ಲೂ ರಾಘವ ನಾಯಕನಾಗಿ ಮೆರೆದ. ತನಗೆ
ಬೇಕಾದ ರಾಜಕೀಯ ನಾಯಕರನ್ನು, ಸಿನಿಮಾನಟರನ್ನು ಕರೆದು ತಂದು
ಸಮಾರಂಭಗಳಿಗೆ ಕಳೆ ಕಟ್ಟಿಸಿದ್ದಲ್ಲದೆ, ತನ್ನ ಭಾಷಣದ ವೈಖರಿಯನ್ನೂ
ಪ್ರದರ್ಶಿಸಿದ. ಬರೀ ಬಾಯಿಬಡಿದುಕೊಳ್ಳುವುದೇ ಭಾಷಣವೆಂದು ಅವನಿ~
ಗಾರು ಹೇಳಿದರೋ ಗೊತ್ತಿಲ್ಲ !

ಯಥಾಪ್ರಕಾರ ಏಪ್ರಿಲ್ ಪರೀಕ್ಷೆಗಳೂ ಮುಗಿದು ಫಲಿತಾಂಶಗಳೂ
ಬಂದವು. ರಾಘವ ಹೇಗೋ ಸಂಪೂರ್ಣವಾಗಿ ಡಿಗ್ರಿಯನ್ನೇ ಮುಗಿಸಿ
-18-
ಬಿಟ್ಟಿದ್ದ. ಹಯಗ್ರೀವನಿಗೆ ಒಂದು ಪೇಪರ್್ನಲ್ಲಾದರೂ ಹತ್ತಕ್ಕಿಂತ ಹೆಚ್ಚು
ಅಂಕಗಳು ಬಂದಿರಲಿಲ್ಲ. `ಆ ಬಡ್ಡೀಮಗ ಏನೋ ಖರಾಮತ್ ಮಾಡಿ
ಗೆದ್ದು ಬಿಟ್ಟ' ಎಂದು ರಾಘವನನ್ನು ಬೈದುಕೊಂಡರೂ, ಕಾಲೇಜಿನಿಂದ ಅವನು
ತೊಲಗಿಹೋಗುತ್ತಾನೆಂದು ಸಮಾಧಾನಪಟ್ಟುಕೊಂಡ.

ರಜೆ ಕಳೆದು ಮತ್ತೆ ಕಾಲೇಜು ಆರಂಭವಾಯಿತು. ಹಯಗ್ರೀವನಲ್ಲಿ
ಹೊಸ ಉತ್ಸಾಹದ ಚಿಲುಮೆ ಚಿಮ್ಮಿತು! ಕಾಲೇಜಿನ ಫೀಜಿನ ನೆಪದಲ್ಲಿ ಅವ~
ರಮ್ಮನಿಂದ ಒಂದಕ್ಕೆ ಹತ್ತರಷ್ಟು ದುಡ್ಡು ಕಿತ್ತು ಕೈಬಿಟ್ಟು ಹೋಗಿದ್ದ ತನ್ನ
ಪುಡಿಪುಂಡರನ್ನು ಮತ್ತೆ ತನ್ನ ಕಡೆ ಸೇರಿಸಿಕೊಳ್ಳಲು ಬಲೆ ಬೀಸಿದ. ಸಿಗರೇಟು,
ಕಾಫಿ, ದೋಸೆ, ಆಗಾಗ ಗುಂಡು, ಇವುಗಳ ಬೆಂಬಲದಿಂದ, ದಿನ ಕ್ರಮೇಣ
ಅವನೇ ಆಶ್ಚರ್ಯ ಪಡುವಷ್ಟು ಸಂಖ್ಯೆಯ ಹಿಂಬಾಲಕರು ಅವನ ಹಿಂದೆ
ಬಿದ್ದರು. ಸಾವಿರಾರು ಜನವೇನಲ್ಲ, ಎಲ್ಲ ಸೇರಿ ಒಟ್ಟು ಇಪ್ಪತ್ತು ಜನವಾಗ~
ಬಹುದು.? ಆದರೆ ಹಯಗ್ರೀವನ ದೃಷ್ಟಿಯಲ್ಲಿ ಅದೇ ಒಂದು ಅಕ್ಷೋಹಿಣಿ
ಸೈನ್ಯಕ್ಕೆ ಸಮನಾಯಿತು! ಪುಸ್ತಕಗಳನ್ನು ಕೊಳ್ಳುವ ನೆಪದಲ್ಲಿ ಅವರಮ್ಮನಿಂದ
ಇನ್ನಷ್ಟು ದುಡ್ಡು ಕಿತ್ತು ಅವನು ತನ್ನ ಸುತ್ತಣ ಕೀಟಗಳಿಗೆ ಖರ್ಚು
ಮಾಡಬೇಕಾಯಿತು.

ತರಗತಿಗಳು ಶುರುವಾದವು. ಹಳೆಯ ಪ್ರಿನ್ಸಿಪಾಲರು ಹೋಗಿ, ಹೊಸ~
ಬರು ಬಂದಿದ್ದು ಎಲ್ಲ ಸುಸೂತ್ರವಾಗಿಯೇ ಆರಂಭವಾಯಿತು. ಅವರ ಕಟ್ಟು~
ನಿಟ್ಟಿನ ಆದೇಶದ ಪ್ರಕಾರ ಓತ್ಲಾ ಹೊಡೆಯುವ ಮೇಷ್ಟ್ರುಗಳೂ ಮೊದಲ
ದಿನವೇ ತರಗತಿಗೆ ಹೋಗಿ ಪಾಠ ಆರಂಭಿಸಬೇಕಾಯಿತು. ಓದಲೆಂದೇ ಬಂದ
ವಿದ್ಯಾರ್ಥಿಗಳಿಗೆ ಖುಷಿಯಾಯಿತು.

ಹಯಗ್ರೀವ ಮತ್ತು ಪಾರ್ಟಿ ಮಾಮೂಲಿಯಾಗಿ ಕಟ್ಟೆಯ ಮೇಲೆ
ಕುಳಿತು, ಹೋಗುವ ಬರುವ ಎಲ್ಲರ ಮೇಲೂ ಕೆಟ್ಟದಾಗಿ ಟೀಕೆ ಟಿಪ್ಪಣಿ
ಮಾಡುತ್ತಾ ಹಲ್ಲು ಕಿರಿಯುವ, ಜೊಲ್ಲು ಸುರಿಸುವ ರೂಢಿಯನ್ನು ಅದ್ದೂರಿ~
ಯಾಗಿ ಮುಂದುವರಿಸಿದರು. ಈ ಅದ್ಭುತ ಕಾರ್ಯವನ್ನು ಹೆಚ್ಚು ಹೆಚ್ಚಾಗಿ
ಮಾಡಿದಷ್ಟೂ, ತನ್ನ ಜನಪ್ರಿಯತೆ ಹೆಚ್ಚಿ, ಚುನಾವಣೆಯಲ್ಲಿ ಸುಲಭವಾಗಿ
ಗೆಲ್ಲಬಹುದೆಂದು ಮೂರ್ಖ ಹಯಗ್ರೀವ ಲೆಕ್ಕ ಹಾಕಿದ. ಅದೃಷ್ಟವಶಾತ್
ಇದರಿಂದ ರೋಸಿ ಹೋದ ವಿದ್ಯಾರ್ಥಿಗಳೂ, ಅಧ್ಯಾಪಕರೂ ಒಟ್ಟಿಗೆ
-19-
ಪ್ರಿನ್ಸಿಪಾಲರಿಗೆ ದೂರು ಕೊಟ್ಟರು. ಇಂಥವರಿಗೆ ಬೆಂಬಲಕೊಟ್ಟು ತಮಾಷೆ
ನೋಡುವ ಕೆಲವು ತರಲೆ ಅಧ್ಯಾಪಕರೂ `ಈ ಪ್ರಿನ್ಸಿಪಾಲ ನಮ್ಮ ಮೇಲೆ
ಶಿಸ್ತು ಹೇರೋದಿಕ್ಕೆ ಬಱ್ತಾನಲ್ಲಾ, ಈಗ ಏನು ಕಿಸಿತಾನೊ ನೋಡೋಣ'
ಎಂದುಕೊಂಡು ಗುಂಪಿನ ಜೊತೆ ಸೇರಿದರು.

ಪ್ರಿನ್ಸಿಪಾಲರು ಹಯಗ್ರೀವ ಮತ್ತು ತಂಡದವರನ್ನು ತಮ್ಮ ಕೊಠಡಿಗೆ
ಕರೆಸಿದರು. ಎಲ್ಲ ಅಧ್ಯಾಪಕರನ್ನು ಬೇಕೆಂದೇ ಮೊದಲೇ ಕರೆದು ಕೂಡಿ~
ಸಿದ್ದರು.

"ಏನ್ರೀ, ನೀವು ಕಾಲೇಜು ವಿದ್ಯಾರ್ಥಿಗಳೋ, ಹೊರಗಿನವರೋ ?"
ಪ್ರಿನ್ಸಿಪಾಲರು ನಿಧಾನವಾಗಿ ಕೇಳಿದರು.

"ನಾವೆಲ್ಲಾ ಫೀಜು ಕೊಟ್ಟಿದ್ದೀವಿ" ಹಯಗ್ರೀವ ತನ್ನ ನಾಯಕತ್ವದ
ಪ್ರದರ್ಶನ ಮಾಡಲು ತಾನೇ ಉತ್ತರ ಕೊಟ್ಟ.

"ಫೀಜು ಕೊಟ್ಟು ಕಾಲೇಜಿಗೆ ಬರೋದು ಓದೋದಿಕ್ಕೋ, ಅಥವಾ
ಪೋಕರಿಗಳ ಥರ ಕಟ್ಟೆ ಮೇಲೆ ಕೂತು ತಲೆಹರಟೆ ಮಾಡೋದಿಕ್ಕೋ ?" ಪ್ರಿನ್ಸಿ~
ಪಾಲರು ನಗುತ್ತಲೇ ಪ್ರಶ್ನೆ ಮಾಡಿದರು.

ಅವರ ನಗುವನ್ನು ಹಯಗ್ರೀವ ಅಪಾರ್ಥ ಮಾಡಿಕೊಂಡ. "ನೀನ್ಯಾ~
ವೋನೋ ಅದನ್ನೆಲ್ಲಾ ಕೇಳೋದಿಕ್ಕೆ ?" ಅವನ ಮಾತು ತುಟಿ ಮೀರಿತು.

"ನಾನು ಈ ಕಾಲೇಜಿನ ಪ್ರಿನ್ಸಿಪಾಲ್" ಅವರು ತಾಳ್ಮೆ ಕಳೆದುಕೊಳ್ಳ~
ಲಿಲ್ಲ. "{ಈ ಕಾಲೇಜಿನ ಶಿಸ್ತು, ಪಾಠ ಪ್ರವಚನ, ಇತ್ಯಾದಿಗಳನ್ನೆಲ್ಲಾ
ನೋಡಿಕೊಳ್ಳೋ ಜವಾಬ್ದಾರಿ ನಂದು......ಸರಿ, ನಿಮ್ಮಂಥ ಕ್ರ್ಯಾಕ್್ಗಳ
ಜೊತೆ ಮಾತಾಡ್ತಾ ಕೂರುವಷ್ಟು ಪುರುಸೊತ್ತಿಲ್ಲ ನನಗೆ. ಇಷ್ಟವಿದ್ರೆ ಕ್ಲಾಸಿಗೆ
ಬನ್ನಿ, ಇಲ್ಲಾಂದ್ರೆ ಕಾಂಪೌಂಡ್ ಆಚೆ ಹೋಗಿಬಿಡಿ. ನಾಳೆಯಿಂದ ಆ ಕಟ್ಟೆ
ಮೇಲೆ ಕೂಡಬೇಡಿ...ಈಗ ಹೋಗಿ."

"ಹೋಗದೆ ಇದ್ರೆ ಏನೋ ಮಾಡ್ತೀಯಾ ?" ಹಯಗ್ರೀವನಿಗೆ ಒಂದು
ರೀತಿಯ ಹುಚ್ಚು ಆವೇಶ ಬಂದಿತ್ತು.

"ನೋಡಿ ನಾನು ನಿಮಗಿಂತ ವಯಸ್ಸಿನಲ್ಲಿ, ವಿದ್ಯೇಲಿ, ಅಧಿಕಾರದಲ್ಲಿ,
ಯೋಗ್ಯತೇಲಿ ದೊಡ್ಡೋನು. ನಾನೇ ಇಲ್ಲೀವರೆಗೂ ನಿಮ್ಮನ್ನ ಬಹುವಚನ~
ದಲ್ಲಿ ಮಾತಾಡಿಸ್ತಾ ಇದ್ರೂ, ನೀವು ಏಕವಚನ ಬಳಸೋದು ನ್ಯಾಯವಲ್ಲ."
-20-

"ನಿನಗೆ ಬಹುವಚನ ಬೇರೆ ಕೇಡು."

ಪ್ರಿನ್ಸಿಪಾಲರು ನಿಧಾನವಾಗಿ ಕುರ್ಚಿಯಿಂದ ಮೇಲೆದ್ದು, ನಗುತ್ತಲೇ
ಹಯಗ್ರೀವನ ಹತ್ತಿರ ಬಂದರು. "ನಿಮ್ಮ ನಡತೆ ತಿದ್ದಿಕೊಳ್ಳೋದಿಲ್ವ ?"

"ಇಲ್ಲ."

"ನೋಡಿ, ಯೋಚನೆ ಮಾಡಿ."

"ಇಲ್ಲಾಂದ್ರೆ ಇಲ್ಲ."

ಪ್ರಿನ್ಸಿಪಾಲರ ಮುಖ ಗಂಟಿಕ್ಕಿತು. ಕೈಗಳು ಬಿಗಿದುವು. ಕ್ಷಣಮಾತ್ರ~
ದಲ್ಲಿ ಅವನ ಎರಡು ಕೆನ್ನೆಗಳಿಗೂ ಒಂದೊಂದು ಬಲವಾಗಿ ಬಾರಿಸಿದರು. ಸಿಡಿಲು
ಬಡಿದಂಥ ಶಬ್ದವಾಗಿ ಹಯಗ್ರೀವ ಕೆಲವು ಕ್ಷಣ ಚಂದ್ರಲೋಕಕ್ಕೆ ಹೋಗಿ
ಬಂದ! ಅವನ ಹಿಂಬಾಲಕರು ಯಾವಾಗಲೋ ಓಡಿಹೋಗಿದ್ದರು.

ಮತ್ತೆ ತಮ್ಮ ಕುರ್ಚಿಯಲ್ಲಿ ಬಂದು ಕುಳಿತು ಪ್ರಿನ್ಸಿಪಾಲರು ಹೇಳಿ~
ದರು :"ನೀನೇನು ಮನುಷ್ಯನಿಗೆ ಹುಟ್ಟಿದೋನೋ, ಕತ್ತೆಗೆ ಹುಟ್ಟಿ~
ದೋನೋ, ಱ್ಯಾಸ್ಕಲ್! ಒಳ್ಳೆ ಮಾತ್ನಲ್ಲಿ ಹೇಳ್ತಾ ಇದ್ರೆ ತಲೆಯೆಲ್ಲಾ
ಮಾತಾಡ್ತಾನೆ. ಏನಂತ ತಿಳಕೊಂಡಿದ್ದೀಯ ? ಜ್ಞಾಪ್ಕ ಇಟ್ಕೊ, ನಾನು
ನಿನ್ನಂಥ ಕ್ರಿಮಿಗಳಿಗೆಲ್ಲಾ ಹೆದರೋನಲ್ಲ, ತೊಲಗಾಚೆ. ಇನ್ನೊಂದು ಸಾರಿ
ಕಟ್ಟೆ ಮೇಲೆ ಕೂತ್ರೆ ನಾನೇನು ಮಾಡ್ತೀನಿ ಅನ್ನೋದನ್ನ ಪರೀಕ್ಷೆ ಮಾಡೋ
ಪ್ರಯತ್ನ ಪಡಬೇಡ.... ಗೆಟ್್ಔಟ್ !"

ಹಯಗ್ರೀವನ ಕೆನ್ನೆ ರಂಗೇರಿತ್ತು. ಎರಡು ಕೆನ್ನೆಗಳ ಮೇಲೂ ಬೆರಳು~
ಗಳು ಮೂಡಿ ಮುಖಕ್ಕೆ ವಿಶೇಷ ಕಳೆ ಬಂದಿತ್ತು. ದಿಕ್ಕು ತೋಚದವನಂತೆ
ಎರಡು ಕ್ಷಣ ಅಲ್ಲೇ ನಿಂತಿದ್ದ.

"ಹೋಗೋ ಆಚೆ, ಕತ್ತು ಹಿಡಿದು ಆಚೆಗೆ ನೂಕಿಸಬೇಕಾ ?" ಪ್ರಿನ್ಸಿ~
ಪಾಲರು ಮತ್ತೆ ಗುಡುಗಿದರು.

ಹಯಗ್ರೀವ ಮರೆತುಹೋಗಿದ್ದ ಮಾತುಗಳನ್ನು ಮತ್ತೆ ಕಷ್ಟಪಟ್ಟು
ಜೋಡಿಸಿಕೊಂಡ. "ಈ ಸಾರಿ ಎಲೆಕ್ಷನ್್ನಲ್ಲಿ ಗೆದ್ದು ಬಂದು, ಆಮೇಲೆ
ನೋಡ್ಕೋತೀನಿ" ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಗೆ ಓಡಿದ. ಅಲ್ಲೇ ನಿಂತರೆ
ಮತ್ತೆ ಇನ್ನೊಂದು ಜೊತೆ ಒದೆ ಬೀಳಬಹುದೆಂದು ಭಯ ಪಾಪ!

ಆದರೆ ಹಯಗ್ರೀವನ ಆ ಆಸೆಯೂ ಖಾಲಿದೋಸೆಯಾಯಿತು. ಆ
-21-
ವರ್ಷ ಕಾಲೇಜಿನ ಯೂನಿಯನ್ ರದ್ದು ಮಾಡಿದ ಪ್ರಕಟಣೆ ಹೊರಬಿತ್ತು.
`ಬಡ್ಡೀಮಗ ಪ್ರಿನ್ಸಿಪಾಲ್ ಅಸಾಧ್ಯ !' ಎಂದು ಹಯಗ್ರೀವ ಒಳಗೆ ಮೆಚ್ಚಿ~
ದರೂ ಮೇಲೆ ಭಯಂಕರ ಕೋಪ ಬಂತು. ತನಗೆ ಅವನು ಹೊಡೆದ ಸೇಡು
ತೀರಿಸಿಕೊಳ್ಳಬೇಕೆಂದು ಅಟ್ಟ ಹತ್ತಿ ಘಟ್ಟಕ್ಕೆ ಬಿದ್ದ! ಅವನಿಗೆ ಬೆಂಬಲ
ಕೊಡಲು ಒಬ್ಬನಾದರೂ ಮುಂದೆ ಬರಲಿಲ್ಲ.

ನಾಯಕನಿಗಾಗಿ ಹಿಂಬಾಲಕರು ಒದೆ ತಿನ್ನುವುದು ಯಾವ ನ್ಯಾಯ?
ಚಿಗುರೊಡೆಯುತ್ತಿದ್ದ ನಮ್ಮ ಪುಡಿನಾಯಕನ ಅವತಾರ ಅಲ್ಲಿಗೇ ಮುಗಿದು
ಹೋಯಿತು.

ಎರಡನೇ ಅವತಾರ

ಪಾಠಕ ಮಹಾಶಯರೆ, ಅಂದಿನಿಂದ ಹಯಗ್ರೀವ ಮತ್ತೆ ಕಾಲೇಜಿಗೇ
ಹೋಗಲಿಲ್ಲ, ಅಂದಮೇಲೆ ಪರೀಕ್ಷೆ, ಡಿಗ್ರಿ, ಎಲ್ಲಾ ಮರೆತು ಹೋದ ಮಾತು
ತಾನೆ? ತಾನು ನಾಯಕನಾಗಿ ಮೆರೀಬೇಕಾದ ಅವಕಾಶ ತಪ್ಪಿ ಹೋಯಿತೇ ?
ಎಂದು ಚಿಂತೆ ಮಾಡಿದನೇ ವಿನಹ, ಅದರ ಕಾರಣವಾಗಿ ತನ್ನ ಓದು ಹಾಳಾ~
ಯಿತೆಂಬ ಪಶ್ಚಾತ್ತಾಪದ ಭಾವನೆ ಕಿಂಚಿತ್ತು ಅವನ ಮನಸ್ಸಿನಲ್ಲಿ ಸುಳಿಯ~
ಲಿಲ್ಲ.

ಇದರಿಂದಾದ ಪರಿಣಾಮವೆಂದರೆ ಸಂಜೆ ಬೇಗ ಮನೆಗೆ ಬರೋದಿಕ್ಕೆ
ಆರಂಭಿಸಿದ. ಮಗನ ಸ್ವಭಾವದಲ್ಲಿ ಇಂಥ ಕ್ರಾಂತಿಕಾರಿ ಪರಿವರ್ತನೆಯಾದ~
ದನ್ನು ಕಂಡು ಅವರಮ್ಮ ಹಿಗ್ಗಿದಳು. ಸದ್ಯ, ಹೀಗೇ ಸರಿಹೋದರೆ ಸಾಕೆಂದು
ಮಗ ಬೈದರೂ ತಾನೇ ತಗ್ಗಿ ನಡೆದಳು. ಆದರೆ ಸ್ವಲ್ಪ ದಿನ ಕಳೆದ ನಂತರ
ಕಾಲೇಜಿನಲ್ಲಿ ನಿಜವಾಗಿ ನಡೆದ ಘಟನೆಯನ್ನು ಕೇಳಿ ಕುಗ್ಗಿ ಕುಸಿದು
ಹೋದಳು.

"ಬೇವಾರ್ಸಿ ಮುಂಡೇದೆ. ನಿನ್ನ ಕಾಲ ಮೇಲೆ ನೀನೇ ಕಲ್ಲುಹಾಕಿ
ಕೊಂಡೆಯಲ್ಲೋ, ಪಾಪಿ! ಬುದ್ಧಿ ಎಲ್ಲೋಗಿತ್ತೋ? ಹೊಟ್ಟೆಗೆ ಏನು ತಿಂತಾ
ಇದ್ದೆ ?" ಹೊಟ್ಟೆಯುರಿ ತಡೆಯಲಾರದೆ ಬೈದಳು.
-22-

"ನೀನು ಹಾಕಿದ್ದೇ ತಿಂದಿದ್ದು." ಹಯಗ್ರೀವ ಸ್ವಲ್ಪ ಕೂಡ ನಾಚಿಕೆ~
ಯಿಲ್ಲದೆ ಹೇಳಿದ.

"ಅದೇ ನಾನು ಮಾಡಿದ ತಪ್ಪು. ನಾಲ್ಕು ಜನರ ಅನ್ನ ಒಬ್ಬನೇ
ತಿಂದು ತಿಂದು ಕೊಬ್ಬು ಹೆಚ್ಚಾಗಿದೆ."

"ನಿಮ್ಮಪ್ಪನ ಮನೆಯಿಂದ ತಂದು ಹಾಕಿದ್ದಾ? ನಮ್ಮಪ್ಪಂದೇ ತಾನೆ ?"

"ನಿಮ್ಮಪ್ಪಂದೇ ಕಣೋ ಗಡವ ! ಎಲ್ಲ ತಿಂದು ಮುಗಿದ ಮೇಲೆ
ಮಣ್ಣು ತಿಂತಿಯಾ ? ಮಾತಾಡೋದು ನೋಡು."

"ನನಗೇನು ಗ್ರಾಚಾರ ಮಣ್ಣು ತಿನ್ನೋಕೆ."

"ನಾನು ಸತ್ರೆ ಅದೂ ಸಿಕ್ಕಲ್ಲ ನಿನ್ನ ಯೋಗ್ಯತೇಗೆ ?"

"ಸತ್ತ ಮೇಲೆ ತಾನೆ ಆ ಮಾತು? ನೀನು ಯಾವಾಗ ಸಾಯ್ತೀಯಾ ?"

ಆಯಮ್ಮನ ಕಣ್ಣಲ್ಲಿ ದುಃಖ ಉಕ್ಕಿತು. "ಹೆತ್ತ ತಾಯೀನ ಯಾವಾಗ
ಸಾಯ್ತಿ ಅಂತ ಕೇಳೋ ಅಪರೂಪದ ಮಗ ನೀನೇನಪ್ಪ! ಒಟ್ಟಿನಲ್ಲಿ ನಿನ್ನಂಥ
ಮಗನನ್ನು ಹೆತ್ತದ್ದು ನನ್ನ ತಪ್ಪು."

"ಸರಿ ಮತ್ತೆ, ನೀನು ಮಾಡಿದ ತಪ್ಪಿಗೆ ನಾನು ಯಾಕೆ ಶಿಕ್ಷೆ ಅನುಭವಿಸ~
ಬೇಕು? ನಾನೇನಾದ್ರೂ ನಿನ್ನ ಮಗನಾಗಿ ಹುಟ್ಟಬೇಕು ಅಂತ ಅರ್ಜಿ
ಹಾಕ್ಕೊಂಡಿದ್ದೆನಾ ?"

ಇಂಥ ಭಂಡ ಮಗನಿಗೆ ಉತ್ತರ ಕೊಡುವಷ್ಟು ಬುದ್ಧಿವಂತಿಕೆ ಆಕೆ~
ಯಲ್ಲಿರಲಿಲ್ಲ. "ಎಲ್ಲಾದ್ರೂ ಹಾಳಾಗಿ ಹೋಗು, ನನಗೇನಾಗಬೇಕು. ಬುದ್ಧಿ~
ಯಿದ್ರೆ ಅನ್ನ ತಿಂತಿ, ಇಲ್ಲಾಂದ್ರೆ.... ನಾನ್ಯಾಕೆ ಹೊಲಸು ಮಾತಾಡಲಿ" ಎಂದು
ಸುಮ್ಮನಾದಳು.

ಅಂದಿನಿಂದ ಅವನನ್ನು ಮಾತಾಡಿಸುವುದನ್ನು ಬಿಟ್ಟು ಬಿಟ್ಟಳು. ಏನೊ
ಒಂದನ್ನು ಮನಸ್ಸಿಗೆ ಬಂದಂತೆ ಮಾಡಿ ಬಡಿಯುತ್ತಿದ್ದಳು. ರುಚಿ ರುಚಿಯಾಗಿ
ಅಡಿಗೆ ಮಾಡಿ ಪ್ರೀತಿಯಿಂದ ಬಡಿಸುವಂಥ ಮಾತೃಭಕ್ತ ಹಯಗ್ರೀವ~
ನಾಗಿರಲಿಲ್ಲ.

ಆದರೂ ಅವನು ತನ್ನ ಚರ್ಮದ ಚೀಲಕ್ಕೆ ತುಂಬುವ ಆಹಾರದ 
ಪ್ರಮಾಣವೇನೂ ಕಡಿಮೆಯಾಗಲಿಲ್ಲ. ಉಪ್ಪು ಹುಳಿ ಇರಲಿ ಇಲ್ಲದಿರಲಿ,
ಅನ್ನ ಬೆಂದಿರಲಿ ಇಲ್ಲದಿರಲಿ, ಕತ್ತೆ ಕಾಗದ ತಿನ್ನುವಂತೆ ಪರಪರ ಮೇದು
-23-
ಬಿಡುತ್ತಿದ್ದ! ಅವನಿಗೆ ರುಚಿಗಿಚಿ ಬೇಕಿರಲಿಲ್ಲ. ಅಳತೆಯ ಪ್ರಮಾಣ ಸರಿ~
ಯಿದ್ದರಾಯಿತು !

ಮೂರು ನಾಲ್ಕು ವಾರಗಳ ನಂತರ ಮತ್ತೆ ಅವನ ಸಂಚಾರ ಮಾಮೂ~
ಲಿಯಾಯಿತು 1 ಕಾಲೇಜು ಬಿಟ್ಟ ಮೇಲೆ ಖರ್ಚಿಗೆ ಕಾಸಿಲ್ಲದೆ ಲಾಟರಿ ಹೊಡೆಯ
ಬೇಕಾಯಿತು. ಪರಿಚಯವಿರುವವರ ಬಳಿಯಲ್ಲೆಲ್ಲಾ ಐದು ಹತ್ತನ್ನು
ಧಾರಾಳವಾಗಿ ಕೇಳುತ್ತಿದ್ದ. ನಂತರ ಕೊಟ್ಟವರನ್ನು, ಸಂಸಾರವನ್ನು ಮರೆತ
ಮಹಾಯೋಗಿಯಂತೆ ಮರೆತುಬಿಡುತ್ತಿದ್ದ! ಪಾಪ, ಅವನು ಹಿಂದಿರುಗಿಸುವ
ಉದ್ದೇಶದಿಂದ ಸಾಲ ಮಾಡುತ್ತಿರಲಿಲ್ಲ. ಅವನು ಕೇಳುವ ಧೋರಣೆ ಕೂಡ
`ನಿನ್ನ ಹತ್ರ ಇದೆಯಲ್ಲ, ಕೊಡು, ಯಾರಪ್ಪನ ತೀಟೆಗೆ ಕೊಡ್ತಿಯಾ ? ಎಂಬ
ಧಾಟಿಯಲ್ಲಿರುತ್ತಿತ್ತು.

ನನ್ನ ಬಳಿಗೂ ಒಮ್ಮೆ ಬಂದಿದ್ದ. "ಗುಂಡು ಹಾಕಿ ಬಾಳ ದಿನ
ಆಯ್ತು ಎಲ್ಲಯ್ಯ ಒಂದಿಪ್ಪತ್ತು ತಳ್ಳಯ್ಯ ಈ ಕಡೆ" ಎಂದ.

ನನಗೆ ರೇಗಿದರೂ ತಡೆದುಕೊಂಡೆ. "ಏನಯ್ಯ ತಳ್ಳೋದು, ಬಂದೂ~
ಕಿನ ಗುಂಡುಗಳಾ ? ನನ್ನ ಹತ್ರ ಇಲ್ಲವಲ್ಲ ?" ಎಂದೆ.

ತಮಾಷೆ ಮಾಡ್ತಾ ಇದೀಯಾ ?" ಅವನು ಹಲ್ಲುಕಿರಿದ.

"ತಮಾಷೆ ಅಲ್ಲ, ಸೀರಿಯಸ್ಸಾಗೇ ಹೇಳ್ತಾ ಇದೀನಿ. ಅದೇನು ಸರಿಯಾಗಿ
ಹೇಳು" ಎಂದೆ ಗೊತ್ತಾಗದವನಂತೆ ನಟಿಸಿ.

"ಆಗಲಯ್ಯ ಸರಿಯಾಗೇ ಹೇಳ್ತೀನಿ. ಒಂದಿಪ್ಪತ್ತೈದು ರೂಪಾಯಿ
ಕೊಟ್ಟಿರು ಅರ್ಜೆಂಟ್ ಬೇಕಾಗಿದೆ."

"ಓಹೋ ರೂಪಾಯಾ ?" ನಾನು ಆಶ್ಚರ್ಯ ವ್ಯಕ್ತಪಡಿಸಿದೆ, "ನೋಡು
ಮೊದಲು ಇಪ್ಪತ್ತು ಅಂದೆ, ಈಗ ಇಪ್ಪತ್ತೈದು ಅಂತಾ ಇದ್ದಿ. ಮೊದಲು
ಗುಂಡು ಹಾಕೋದಿಕ್ಕೆ ಅಂದೆ, ಈಗ ಅರ್ಜೆಂಟ್ ಬೇಕಾಗಿದೆ ಅಂತಾ ಇದ್ದಿ.
ಹೀಗೆ ಒಂದೇ ಕ್ಷಣದಲ್ಲಿ ಮಾತು ಬದಲಾಯಿಸೋ ಜನಗಳಿಗೆ ದುಡ್ಡು ಕೊಟ್ರೆ
ಹಿಂದೆ ಬರೋದಿಲ್ಲ ಅನ್ನೋದನ್ನ ನೀನೂ ಒಪ್ಪೇ ಒಪ್ತಿ. ಯಾಕೇಂದ್ರೆ ಹಿಂದಿನ
ಹತ್ತು ರೂಪಾಯಿ, ಆಮೇಲಿನ ಐದು ರೂಪಾಯಿ ನಿನ್ನಿಂದ ನನಗೆ ವಾಪಸ್
ಬರಲಿಲ್ಲ. ಹಿಂದೆ ಬರದೇ ಇರೋ ಸ್ಮಶಾನಕ್ಕೆ ಮತ್ತೆ ಮತ್ತೆ ಕಳಿಸೋದಿಕ್ಕೆ
-24-
ನನ್ನ ದುಡ್ಡೇನೂ ಹೆಣ ಅಲ್ಲ! ಅಥವಾ ಹೀಗೆ ಕೊಟ್ಟು ಕೋಡಂಗಿಯಾಗು~
ವಷ್ಟು ಹೆಚ್ಚುವರಿ ದುಡ್ಡು ಕೂಡ ನನ್ನ ಹತ್ರ ಇಲ್ಲ" ಅವನ ಮನಸ್ಸಿಗೆ
ಚೆ಩್ನಾಗಿ ನಾಟಲೆಂದು ವ್ಯಂಗ್ಯವನ್ನು ಬೆರೆಸಿ ಸ್ವಲ್ಪ ದೀರ್ಘವಾಗಿಯೇ ಮಾತಾ~
ಡಿದೆ. 
ಆದರೆ, ಹಯಗ್ರೀವ ಬೇಸರ ಮಾಡಿಕೊಳ್ಳಬಹುದು, ನಿರಾಶೆಯಿಂದ
ಮುಖ ಜೋಲುಬಿಡಬಹುದು, ಅಥವಾ ಒಂದೆರಡು ಬೈಗುಳವನ್ನಾದರೂ
ಪ್ರಯೋಗಿಸಬಹುದೆಂದು ನಿರೀಕ್ಷಿಸಿದ್ದು ಸುಳ್ಳಾಯಿತು. "ವಾಹ್, ವಾಹ್!
ಎಂದು ಉತ್ಸಾಹದಿಂದ ಮೇಲೆದ್ದ. ಈ ಮೊದಲು ಏನು ಮಾತಾಡಿದನೆಂದು
ನಾನೇ ಪರೀಕ್ಷಿಸಿಕೊಳ್ಳುವಂತಾಯಿತು.

"ನಿನ್ನ ಭಾಷಣದ ಮುಂದೆ ರಾಜಕಾರಣಿ ಭಾಷಣ ಸುಡಬೇಕು.
ಅವನು ಹೇಳಿದ. "ಇಷ್ಟು ಸಾವಧಾನವಾಗಿ ವಿಷಯವನ್ನು ಬಿಡಿಸಿ ಬಿಡಿಸಿ
ಹೋಲಿಕೆ ಕೊಟ್ಟು ವಿವರಿಸೋ ಜಾಣ್ಮೆಯನ್ನು ಎಲ್ಲಯ್ಯ ಕಲಿತೆ ?"

ಅಟ್ಟ ಹತ್ತಿಸುತ್ತಿರುವನೆಂಬುದು ನನ್ನ ಮಂದ ಬುದ್ಧಿಗೆ ಸಧ್ಯ, ಬೇಗನೆ
ಹೊಳೆಯಿತು. ಆದರೂ ಒಳಗೇ ಸ್ವಲ್ಪ ಖಶಿಯಾದುದ್ದು ಸುಳ್ಳಲ್ಲ! ಜೊತೆಗೆ
ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ ಹಯಗ್ರೀವ ದುಡ್ಡು ಕಿತ್ತುಕೊಂಡು
ಹೋದಾನೆಂದು ಎಚ್ಚರಗೊಂಡೆ. "ನೋಡಯ್ಯ ನೀನು ಹೊಗಳಲಿ ಅಂದು
ನಾನು ಭಾಷಣ ಮಾಡಲಿಲ್ಲ. ಮೊದಲನೆಯದಾಗಿ, ಭಾಷಣ ಮಾಡೋಕೆ
ನಿನ್ನ ಹಾಗೆ ನಾಯಕನಾಗೋ ಚಪಲ ನನಗಿಲ್ಲ. ಎರಡನೆಯದಾಗಿ ಚೆನ್ನಾಗಿ
ಭಾಷಣ ಬರೋ ವ್ಯಕ್ತಿ ಎಂದಿಗೂ ರಾಜಕಾರಣಿಯಾಗಲ್ಲ."

"ಆಹಾ, ನಿ಩್ನ ಮಾತು ನೂರಕ್ಕೆ ನೂರು ನಿಜ. ರಾಜಕಾರಣಿಗಳಿಗೆ
ಭಾಷಣ ಮಾಡೋಕೆ ಬರಲ್ಲ, ಅನ್ನೋ ನಿನ್ನ ಅಭಿಪ್ರಾಯಾನ ಅಖಿಲ
ಕರ್ನಾಟಕದ ಸಕಲ ಪ್ರಜಾಕೋಟಿ ಒಪ್ಪೇ ಒಪ್ತಾರೆ !" ಎಂದ ಹಯಗ್ರೀವ
"ಇದೊಂದು ಸಲ ಕೊಡಯ್ಯ, ಇನ್ನೊಂದು ಸಲ ನಿನ್ನಾಣೆಗೂ ಕೇಳೊಲ್ಲ
ಹಾಗೆ ಕೇಳಿದ್ರೂ ಹಳೆ ಸಾಲ ಪೂರ್ತಿ ತೀರಿಸಿದ ಮೇಲೆ." ಅಳು ಮುಖ ಮಾಡಿ~
ಕೊಂಡ.

ಎರಡು ಕ್ಷಣ ಏನೂ ತೋಚದೆ ಅವನ ಭಂಡತನವನ್ನು ಮೆಚ್ಚುತ್ತಾ
ಕುಳಿತೆ. ಮತ್ತೆ ಅವನೇ ಮುಂದುವರಿಸಿದ : "ನನಗೆ ಗೊತ್ತಯ್ಯ, ನಿನ್ನ
ಮನಸ್ಸು. ಆದರೆ ಕೊಟ್ಟದ್ದು ಹಿಂದಿರುಗಿಸದೇ ಇದ್ದದ್ದು ನನ್ನದೇ ತಪ್ಪು."
-25-

"ನನ್ನ ಹತ್ರ ಅಷ್ಟಿಲ್ಲಪ್ಪ, ಬರೀ ಐದು ರೂಪಾಯಿದೆ." ಎಂದೆ ತಪ್ಪಿ~
ಸಿಕೊಳ್ಳಲು.

ಅವನು ಎರಡು ಕ್ಷಣ ಯೋಚಿಸುವವನಂತೆ ಕುಳಿತಿದ್ದು "ಏನು
ಮಾಡೋದು, ಅದನ್ನೇ ಕೊಡು" ಎಂದು ಕೈಚಾಚಿದ.

`ಹಾಳಾಗಿ ಹೋಗಲಿ' ಎಂದು ಮನಸ್ಸಿನಲ್ಲೇ ಅಂದುಕೊಂಡು ಕೊಟ್ಟು
"ಇನ್ನೊಂದು ಸಲ ನನ್ನ ಹತ್ರ ದಯವಿಟ್ಟು ಬರಬೇಡ" ಎಂದು ಒರಟಾ~
ಗಿಯೇ ಹೇಳಿಕಳಿಸಿದೆ. ಅವನು ಹೋದ ಮೇಲೆ ಮತ್ತೆ ನನ್ನ ಅಮೂಲ್ಯವಾದ
ಐದುರೂಪಾಯಿ ಹಾಳಾಗಿ ಹೋಯಿತೆಂದು ಸಂಕಟವಾಯಿತು.

ಅವನು ಎರಡನೇ ಅವತಾರಕ್ಕೆ ಬರೆದ ನಮ್ಮ ಸಂಭಾಷಣೆಯನ್ನೇ ಬೆಳಸಿ
ಬಿಟ್ಟೆ, ಪಾಠಕ ಮಹನಿಯರು ದಯವಿಟ್ಟು ಕ್ಷಮಿಸಬೇಕು.

ಹಯಗ್ರೀವನ ಮನೆಯ ರಸ್ತೆಯಲ್ಲೇ ಕಪ್ಪು ಹಣದ ದೊಡ್ಡ ಶ್ರೀಮಂತ~
ರೊಬ್ಬರು ಅದ್ಭುತವಾದ ಒಂದು ಮನೆ ಕಟ್ಟಿಸಿದ್ದಾರೆ. ಖರ್ಚು ಮಾಡಿ~
ದ್ದದ್ದು ಕಪ್ಪು ಹಣವಾದರೂ, ಆ ಮನೆ-ಕ್ಷಮಿಸಿ-ಮಹಲು ತಾಜಮಹಲಿ~
ನಂತೆ ಬೆಳ್ಳೆಗ ಫಳ ಫಳ ಹೊಳೆಯುತ್ತಿತ್ತು ! ಒಳಗೆ ಏನೇನು, ಎಂಥೆಂಥ
ಸೌಕಱ್ಯಗಳಿದ್ದವೆಂದು ಯಾರು ನೋಡಿದವರು? ಬಾಗಿಲಲ್ಲಿ ಪೊರಕೆ ಮೀಸೆ
ಭಾರಿ ಕಾವಲುಗಾರ, ಕೈಗೆ ಸಿಕ್ಕರೆ ಮನುಷ್ಯರ ಮಾಂಸವನ್ನೇ ಚಾಕಲೇಟಿನಂತೆ
ಜಗಿದು ನುಂಗಬಲ್ಲ ಎರಡು ರಾಕ್ಷಸ ನಾಯಿಗಳಿರುವಾಗ ಒಳಗೆ ಹೋಗುವ
ಧೈರ್ಯ ಯಾರಿಗಿದೆ !

ಒಂದು ದಿನ ಹಯಗ್ರೀವ ಆ ದಾರಿಯಲ್ಲಿ ತನ್ನ ನಿತ್ಯಸಂಚಾರವನ್ನು
ಆರಂಭಿಸುತ್ತಿರುವಾಗ ಆ ಮನೆಯ ಗೇಟಿನ ಬಳಿ ಜನ ಘೇರಾಯಿಸಿದ್ದರು.
ಒಳಗೆ ಯಾಱ್ಯಾರೋ ಗಡಿಬಿಡಿಯಿಂದ ಓಡಾಡುತ್ತಿದ್ದರು. `ಏ ಅದು ತೊಗೊಂಡು
ಬಾ, ಇದು ತಗೊಂಡು ಬಾ, ಅಲ್ಲಿ ನೋಡು, ಇದು ಮಾಡು, ಅವರನ್ನ ಕರಿ'
ಇತ್ಯಾದಿ ಏರು ದನಿಯ ಮಾತುಗಳು ಕೇಳಿ ಬರುತ್ತಿದ್ದವು. `ಯಾರಾದರೂ
ದೊಡ್ಡ ಮಹನೀಯರು ವೈಕುಂಠವಾಸಿಗಳಾದರೇ ?' ಎಂದು ಹಯಗ್ರೀವ~
ನಿಗೆ ಅನ್ನಿಸಿತು. ಆ ಮನೆಯ ಯಜಮಾನ ಇಷ್ಟೊಂದು ಜನ ಸೇರುವಷ್ಟು
ಮಹಾತ್ಮನಲ್ಲವೆಂದು, ತನ್ನ ಅನಿಸಿಕೆಗೆ ತಾನೇ ಅಮೆಂಡ್ ಮಾಡಿ ಪಕ್ಕದವ~
ರನ್ನು ವಿಚಾರಿಸಿದ. ಪ್ರಖ್ಯಾತ ನಟನೊಬ್ಬನ ಪ್ರಖ್ಯಾತ ನಟಿಯೊಬ್ಬಳ ಪ್ರಖ್ಯಾತ
-26-
ನಿರ್ದೇಶಕನ ಚಿಲನಚಿತ್ರವೊಂದಕ್ಕೆ ಶೂಟಿಂಗ್ ನಡೆಯುತ್ತಿರುವ ವಿಷಯ
ತಿಳಿಯಿತು.

ಶೂಟಿಂಗ್ ನೋಡುವ ಅವಕಾಶ ಹಯಗ್ರೀವನಿಗೆ ಈವರೆಗೆ ದೊರೆತಿರಲಿಲ್ಲ.
ಎಷ್ಟು ಸಲ ಗುಂಡು ಹಾಕಿದ್ದನೋ, ಅಷ್ಟು ಸಂಖ್ಯೆಯ ಚಿತ್ರಗಳನ್ನೇನೋ
ನೋಡಿದ್ದ. ಕುತೂಹಲ ಕೆರಳಿ ಗುಂಪಿನ ನಡುವೆ ನುಸುಳಿ ಮುಂದೆ ಹೋಗಿ
ಗಮನಿಸಿದ. ಡೈರೆಕ್ಟರ್ ಬ಼್ರಹ್ಮ ಕ್ರಿಕೆಟ್ ಆಟಗಾರನಂತೆ ಒಂದು ಬಿಳಿಯ ಟೋಪಿ
ಹಾಕಿಕೊಂಡು, ಕುರ್ಚಿಯ ಮೇಲೆ ಕುಳಿತು ಸ್ಕ್ರಿಷ್ಕ ಹಿಡಿದು ಸಹ ನಿರ್ದೇಶಕ~
ನೊಂದಿಗೆ ಚರ್ಚೆಯಲ್ಲಿ ತೊಡಗಿದ್ದ. ಇನ್ನೊಂದು ಕಡೆ ಕ್ಯಾಮರಾ ಇರಿಸಿದ್ದು
ಛಾಯಾಗ್ರಾಹಕ ಅತ಼್ತ ಇತ್ತ ತಿರುಗಿಸಿ ಏನೋ ಮಾಡುತ್ತಿದ್ದ. ಲೈಟಿನವರು,
ಅವರು ಇವರು ಎಂದು ಬಹಳ ಜನ ಚಟುವಟಿಕೆಯಲ್ಲಿ ತೊಡಗಿದ್ದರು.
`ಶೂಟಿಂಗ್ ಮಾಡೋದಿಕ್ಕೆ ಇಷ್ಟೊಂದು ಜನ ಬೇಕಾ ?' ಎಂದು ಹಯ~
ಗ್ರೀವನಿಗೆ ಸಖತ್ ಆಶ್ಚರ್ಯವಾಯಿತು!

ಅಂತೂ ಇಂತೂ ಅರ್ಧ ಗಂಟೆಯ ನಂತರ ಒಂದು ಘಟ್ಟಕ್ಕೆ ಮುಟ್ಟಿ
ಎಲ್ಲ ಅಣಿಯಾಯಿತು. ಬಾಗಿಲಲ್ಲಿ ಜನ ಕಾತರದಿಂದ ನಿರೀಕ್ಷಿಸುತ್ತಿದ್ದ ನಟ
ನಟಿ೟ರು ಕಡೆಗೂ ಮುಖ ತೋರಿಸಿದರು. ಎಲ್ಲ `ಹೇ' ಎಂದು ಕೂಗಿದರು.
ಗದ್ದಲ ಮೇರೆ ಮೀರಿ ಕನ್ನಡ ಚಿತ್ರದ ನಿರ್ದೇಶಕ `ಸೈಲೆನ್ಸ್, ಸೈಲೆನ್ಸ್,
ಎಂದು ಇಂಗ್ಲಿಷಿನಲ್ಲಿ ಹಲವು ಬಾರಿ ಕಿರುಚಿಕೊಂಡ. ಕ್ಷಣ ಮಾತ್ರವೂ
ಗುಂಪಿನ ಗದ್ದಲ ನಿಲ್ಲಲಿಲ್ಲ. ಬೆಳಗಿನಿಂದ ಗಂಟೆಗಟ್ಟಲೆ ಕಾದು, ಬಹುಶಃ
ಸಂಜೆಯವರೆಗೂ ಕಾಯಬಹುದಾದ ಆ ಅಭಿಮಾನಿಗಳ ತಂಡ, ತಮ್ಮ ಉತ್ಸಾ~
ಹದ ಮಾತುಕತೆಯನ್ನು ಸಂಜೆಯವರೆಗೂ ಇದೇ ರೀತಿಯಲ್ಲಿ ಮುಂದುವರಿಸು~
ವುದರಲ್ಲಿ ಅನುಮಾನವಿರಲಿಲ್ಲ. ಹೊಳೆ ಹೊಳೆಯುವ ಕೆಂಪು ಬಣ್ಣದಲ್ಲಿ ಶೋಭಾ~
ಯಮಾನವಾಗಿ, ಬಿಗಿ ಉಡುಪಿನಲ್ಲಿ ಝಗ ಝಗಿಸುವ ನಾಯಕಿಯನ್ನು
ಕಂಡು ಹಯಗ್ರೀವನಿಗೆ ಬಾಯಲ್ಲಿ ನೀರೂರಿತೆಂದಮೇಲೆ, ಶೂಟಿಂಗ್
ನೋಡುವ ಮಹತ್ವದ ಕಾರ್ಯಕ್ಕೇ ಊಟ ತಿಂಡಿ, ಕೆಲಸ ಕಾರ್ಯಗಳನ್ನು
ಮರೆತ ಅಭಿಮಾನಿಗಳು, ತಮ್ಮ ಪ್ರಿಯ ನಟ-ನಟಿಯರನ್ನು ಕಂಡು ಕೋತಿ~
ಗಳಂತೆ ಕೂಗುವುದರಲ್ಲಿ ಏನಾಶ್ಚರ್ಯ !

ನಾಯಕ, ನಾಯಕಿಯರು ತಾವೇ ಸ್ವತಃ ಕೈ ಮುಗಿದು ಕೇಳಿಕೊಂಡ
ಮೇಲೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂತು. ಆದರೂ ಕೆಲವರು
-27-
ಒಳಗೆ ನುಗ್ಗಿ ನಾಯಕನ ಕೈ, ಸಾಧ್ಯವಾದರೆ ನಾಯಕಿಯ ಮೈ ಮುಟ್ಟಲು
ಆತುರಿಂದ ಪ್ರಯತ್ನಿಸಿದರು. ಚಿತ್ರತಂಡದವರೇ ಕೆಲವರು ಈಗ ಅವರನ್ನು
ತಡೆಯಲು ಮುಂದೆ ಬರಬೇಕಾಯಿತು.

ಅವರಲ್ಲಿ, ಕಾಲೇಜಿನಲ್ಲಿ ತನಗಿಂತ ಎರಡು ವರ್ಷ ಸೀನಿಯರ್ ಆಗಿದ್ದು,
ಇವನ ಹಾಗೇ ಪರೀಕ್ಷೆಗೆ ಕೂಡದೆ ಹೊರಬಿದ್ದ ಚಂದ್ರಕಾಂತನಿದ್ದ. "ಏ,
ಚಂದ್ರಕಾಂತ" ಎಂದು ಹಯಗ್ರೀವ ತನ್ನ ಇರುವಿಕೆಯನ್ನು ಪ್ರದರ್ಶಿಸಿದ.
ಅವನೂ ಸದ್ಯ, ಬೇಗ ಗುರುತುಹಿಡಿದು ಮಾತಾಡಿಸಿದ. ಅಭಿಮಾನಿಗಳನ್ನು
ನಿಯಂತ್ರಿಸುವ ಕಾರ್ಯಕ್ಕೆ ತನಗೆ ಸಹಾಯ ಮಾಡಲು ಹಯಗ್ರೀವನನ್ನು
ಕರೆದುಕೊಂಡ. ಹಯಗ್ರೀವನಿಗೆ ಭಯಂಕರ ಖುಶಿಯಾಯಿತು. ಚಂದ್ರ~
ಕಾಂತ ತಂಡದಲ್ಲಿ ಬಹಳ ಮುಖ್ಯವಾದ ವ್ಯಕ್ತಿಯಗ಼ಿರಬೇಕೆಂದುಕೊಂಡು,
ಅವನು ಮನಸ್ಸು ಮಾಡಿದರೆ ತನಗೂ ಒಂದು ಚಾನ್ಸ್ ಕೊಡಿಸಬಹುದೆಂದು
ಚಪಲವಾಯಿತು.

ಎರಡು ಗಂಟೆಯವರೆಗೂ ಶೂಟಿಂಗ್ ನಡೆದ ನಂತರ ತಂಡದವರ ಜೊತೆ~
ಯಲ್ಲೇ ಹಯಗ್ರೀವನಿಗೆ ಪುಷ್ಕಳ ಊಟ ದೊರೆಯಿತು. ಪ್ರಸಿದ್ಧ ನಟ ನಟಿ~
ಯರೊಂದಿಗೆ ಕುಳಿತು ಊಟ ಮಾಡಿದ ತನ್ನ ಅಪರೂಪದ ಅದೃಷ್ಟವನ್ನು
ಯಾರಿಗೆ ಬೇಕಾದರೂ ಹೇಳಿಕೊಂಡು ಹೆಮ್ಮೆ ಪಡಬಹುದೆಂದುಕೊಂಡ.

ಬೀಡ ಜಡಿದು ಸಿಗರೇಟು ಸೇದುತ್ತಾ ಕುಳಿತಾಗ "ಏನಯ್ಯ, ಕಾಲೇಜು
ಎಲ್ಲಿಗೆ ಬಂತು ?" ಚಂದ್ರಕಾತ ಕೇಳಿದ.

"ಕಾಲೇಜಿಗೆ ನಾನೇ ತಿಥಿ ಮಾಡಿಬಿಟ್ಟೆ."

"ಈಗೇನು ಮಾಡ್ತಾ ಇದ್ದೀ ? ಕೆಲಸಕ್ಕೆ ಸೇರಿದೀಯಾ ?"

"ಏನೂ ಮಾಡ್ತಾ ಇಲ್ಲಯ್ಯ, ಇನ್ನೂ ಏನೂ ಮಾಡಬೇಕು ಅಂತ
ತೀರ್ಮಾನ ಮಾಡಿಲ್ಲ. ಚಿಲ್ರೆಪಲ್ರೆ ನೌಕರಿ ಮಾಡೋಕೆ ಇಷ್ಟವಿಲ್ಲ. ದುಡಿ~
ದರೆ ಲಕ್ಷ ದುಡೀಬೇಕು, ಇಲ್ಲಾಂದ್ರೆ ಉಪವಾಸ ಸಾಯಬೇಕೂಂತ ನನ್ನ ಅಭಿ~
ಪ್ರಾಯ." ಇವನಿಗೆ ಕೆಲಸ ಕೊಡಲು ಎಲ್ಲ ಆತುರದಿಂದ ಕಾದಿದ್ದಾರೆ, ಇವ~
ನಿಗೇ ಇಷ್ಟವಿಲ್ಲವೆಂಬ ಧೋರಣೆಯಲ್ಲಿ ಹಯಗ್ರೀವ ಹೇಳಿದ. ಇನ್ನು ಉಪ~
ವಾಸದ ವಿಷಯ, ಉಂಡು ತೇಗಿದ ನಂತರ ಉಪವಾಸದ ವಿಷಯ ಮಾತಾಡು~
ವುದು ಸುಲಭ ತಾನೆ?
-28-

ಚಂದ್ರಕಾಂತ ಪರೀಕ್ಷಿಸುವವನಂತೆ ಅವನ ಮುಖ ನೋಡಿದ. ತಾನೂ
ಓದಿಗೆ ಶರಣು ಹೊಡೆದು, ದೊಡ್ಡ ನಟನಾಗಿ ಲಕ್ಷಾಂತರ ಸೂರೆಮಾಡ~
ಬೇಕೆಂದು ಚಲನ ಚಿತ್ರರಂಗಕ್ಕೆ ಬಂದ ಹಳೆಯ ಉತ್ಸಾಹ ನೆನಪಾಗಿ ಒಂದು
ಕಿರು ನಗು ಮೂಡಿತು.

"ನೀನು ಇಲ್ಲಿ ಏನು ಮಾಡ್ತಾ ಇದೀಯಾ ?" ಹಯಗ್ರೀವನೇ ಮತ್ತೆ
ಕೇಳಿದ.

"ನಾನಾ ? ನಾನು ಈಗ ಅಸಿಸ್ಟೆಂಟ್ ಡೈರೆಕ್ಟರ್. ಇನ್ನು ಸ್ವಲ್ಪ ದಿವಸ
ಅಷ್ಟೆ. ಆಮೇಲೆ ನಾನೇ ಸ್ವತಂತ್ರವಾಗಿ ಡೈರೆಕ್ಟ್ ಮಾಡ್ತೀನಿ. ಒಬ್ರು
ಪ್ರೊಡ್ಯೂಸರ್ ಅವಕಾಶ ಕೊಡ್ತೀನಿ ಅಂತ ಹೇಳಿದ್ದಾರೆ.".

ನಿಜ ಹೇಳಬೇಕೆಂದರೆ ಚಂದ್ರಕಾಂತ ಆ ತಂಡದಲ್ಲಿ ನಾಲ್ಕನೇ
ಅಸಿಸ್ಟೆಂಟ್, ಅಂದರೆ, ಗಲಭೆ ಮಾಡುವ ಜನಗಳನ್ನು ಸುಮ್ಮನಿರಿಸುವುದು,
ಬೀಡಿ ಸಿಗರೇಟು, ತಂದುಕೊಡುವುದು, ಸಮಯಬಿದ್ದರೆ ಡೈರೆಕ್ಟರ್ ಮೈ
ಮಾಲೀಸು ಮಾಡುವುದು, ಇತ್ಯಾದಿ ಅವನ ಕೆಲಸಗಳು. ಇದೇ ಕ್ರಮದಲ್ಲಿ
ಮುಂದುವರಿದರೆ ಅವನು ನಾಲ್ಕರಿಂದ, ಮೂರಕ್ಕೆ, ಎರಡಕ್ಕೆ, ಒಂದಕ್ಕೆ
ಮುಟ್ಟಿ ಸ್ವತಂತ್ರ ನಿರ್ದೇಶಕನಾಗುವ ವೇಳೆಗೆ ಬಹುಶಃ ಅವನ ಆಯುಸ್ಸು
ಮುಗಿದಿರುತ್ತದೆ. ಆದರೆ ಹಾಗೆಂದು ಹಯಗ್ರೀವನಿಗೆ ಇದ್ದ ಸಂಗತಿಯನ್ನೇ
ಹೇಳಿ ಸಣ್ಣವನಾಗುವುದುಂಟೆ?

ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಜನರನ್ನು ಅಂಕೆಯಲ್ಲಿಡಲು ಪ್ರಯತ್ನಿ~
ಸುವುದೇ? ಎಂಬ ಸಂದೇಹ ಮೂಡಿದರೂ, ಹೊಸದಾಗಿ ತಲೆಯಲ್ಲಿ ಸುಳಿದ
ಚಪಲಕ್ಕೆ ಅವನಿಂದ ಸಹಾಯವಾಗಬಹುದೆಂದು ಹಯಗ್ರೀವ ಆ ಸಂದೇಹ~
ವನ್ನು ಕಿತ್ತೆಸೆದ. "ನನಗೂ ಒಂದು ಚಾನ್ಸ್ ಕೊಡಿಸಯ್ಯ." ಎಂದು ತನ್ನ
ಮಾಮೂಲಿ ಧೋರಣೆಯಲ್ಲಿ ಕೇಳಿದ.

ಇದನ್ನು ನಿರೀಕ್ಷಿಸಿದ್ದರೂ ಚಂದ್ರಕಾಂತ "ಏನು ಚಾನ್ಸ್, ಅಸಿಸ್ಟೆಂಟಾ~
ಗೋದಿಕ್ಕಾ ?" ಎಂದ ಗೊತ್ತಿಲ್ಲದವನಂತೆ.

"ಅಲ್ಲಯ್ಯ, ಆಕ್ಟಿಂಗ್ ಮಾಡೋದಿಕ್ಕೆ, ಹೈಸ್ಕೂಲಿನಲ್ಲಿದ್ದಾಗ ನಾಟ~
ಕದಲ್ಲಿ ಮಾಡಿ ಅನುಭವ ಇದೆ."

"ಹಾದಾ ? ವೆರಿಗುಡ್" ಎಂದು ಚಂದ್ರಕಾತ ಅವನ ಮುಖವನ್ನೇ
ದುರುಗುಟ್ಟಿ ನೋಡಿದ.
-29-

"ಯಾಕಯ್ಯ ಹಾಗೆ ನೋಡ್ತಿ? ನಾನು ಚೆನ್ನಾಗಿಲ್ವಾ? ಕೆಟ್ಟ ಮೂತಿಯ~
ವರೆಲ್ಲ ಎಷ್ಟೋ ಜನ ಪ್ರಸಿದ್ಧರಾಗಿದಾರೆ. ನನ್ನ ಮುಖ ಸ್ಕ್ರೀನ್ ಮೇಲೆ
ಬಂದ್ರೆ ಜನ ಕಣ್ಣಿಗೊತ್ತಿಕೋತಾರೆ. ನೀನು ಹು ಅನ್ನು. ಒಂದೇ ತಿಂಗಳಲ್ಲಿ
ಕನ್ನಡಿ ಮುಂದೆ ನಿಂತು ನವರಸಗಳಲ್ಲೂ ಎಕ್ಸ್್ಪರ್ಟ್ ಆಗಿಬಿಡ್ತೀನಿ."

`ಎಲಾ ಇವನಾ !' ಎಂದು ಚಂದ್ರಕಾಂತ ಅವನ ಪ್ರತಾಪಕ್ಕೆ ದಿಗ್ಭ್ರಾಂ~
ತನಾದ. `ಎಲ್ಲಾ ನನ್ನ ಹಾಗೇ ಇದಾನಲ್ಲಾ! ನಾನೂ ಮೊದಲು ಹೀಗೆ ಅಂದು~
ಕೊಳ್ತಾ ಇದ್ದೆ. ಆದರೆ ಬೇರೆಯವರ ಮುಂದೆ ಹೇಳಿಕೊಳ್ಳೋ ಧೈರ್ಯ
ಇರಲಿಲ್ಲ. ನಾನೂ ಪ್ರಸಿದ್ಧನಾಗಲಿಲ್ಲ, ಇವನೂ ಆಗೋಲ್ಲ ಅಂತಾನೆ ಅರ್ಥ!
ಸುಮ್ಮನೆ ಯಾಕೆ ನಿರಾಶೆ ಮಾಡ್ಲಿ' ಎಂದುಕೊಂಡ. ಈ ರೀತಿ ಮಾತಾಡುವ
ವ್ಯಕ್ತಿಯನ್ನು ಯಾರಾದರೂ ಪ್ರೊಡ್ಯೂಸರ್, ಅಥವಾ ಡೈರೆಕ್ಟರ್ ಬಳಿ
ಕರೆದುಕೊಂಡು ಹೋದರೆ ತನ್ನ ಮುಖಕ್ಕೆ ಮಂಗಳಾರತಿಯಾಗುವುದೆಂದು
ಅವನಿಗೆ ಗೊತ್ತಿತ್ತು.

"ನೋಡಯ್ಯ" ಚಂದ್ರಕಾಂತ ಹೇಳಿದ. "ಸದ್ಯಕ್ಕೆ ನನಗೆ ಅಷ್ಟೊಂದು
ಇನ್್ಫ್ಲೂಯೆನ್ಸ್ ಇಲ್ಲ. ನಾನು ನನ್ನದೇ ಪಿಕ್ಚರ್ ಮಾಡೋವಾಗ ಧೈರ್ಯ~
ವಾಗಿ ಹೇಳಬಹುದು. ಈಗ ಈ ಪಿಕ್ಟರ್್ನಲ್ಲಿ ಒಂದು ಬಹಳ ಸಣ್ಣ ಪಾತ್ರ
ಇದೆ ಮಾಡ್ತೀಯಾ ?"

"ಓಹೋ ಅದಕ್ಕೇನಂತೆ" ಹಯಗ್ರೀವ ನೆಗೆದು ನಿಂತ. "ಯಾವಾಗ
ಶೂಟಿಂಗ್ ಹೇಳು. ಒಂದೇ ಒಂದು ಚಾನ್ಸ್ ಕೊಡಿಸು. ಆಮೇಲೆ ನೋಡು
ನನ್ನ ವರಸೆ. ಮುಂದೆ ನಾನು ಹೀರೋ ಆದಮೇಲೆ ನಿನ್ನೇ ಡರೆಕ್ಟರ್ ಆಗಿ
ತಗೋಬೇಕೂಂತ ನಾನು ಪ್ರೊಡ್ಯೂಸರ್್ಗಳನ್ನು ಒತ್ತಾಯಿಸಬಹುದು.

"ಆಗಲಿ ಆಗಲಿ. ನಿನ್ನ ಅದೃಷ್ಟ ನೀನು ಆಸೆ ಪಡೋ ಹಾಗೆ ರಾಕೆಟ್
ಥರ ಆಕಾಶಕ್ಕೆ ಹಾರಿದ್ರೆ ಯಾರು ಬೇಡ ಅಂತಾರೆ! ನೀನು ಶೂಟಿಂಗ್ ಮುಗಿ~
ಯೋವರೆಗೂ ನನ್ನ ಜೊತೆ ಬಱ್ತಾ ಇರು. ಆ ಸಣ್ಣ ಪಾತ್ರದ ವಿಷಯ
ಡೈರೆಕ್ಟರ್ ಸಾರ್ ಹತ್ರ ಮಾತಾಡಿ ಒಪ್ಪಿಸ್ತೀನಿ."

"ಓ.ಕೆ. ದಿನಾ ಬರೋದಷ್ಟೇ ಅಲ್ಲಯ್ಯ, ನಿನ್ನ ಉಪಕಾರಕ್ಕೆ ಪ್ರತಿಯಾಗಿ
ನೀನು ಹೇಳಿದ ಕೆಲಸ ಕೂಡ ಮಾಡ್ತೀನಿ. ಆಯ್ತಾ ?" ಹಯಗ್ರೀವ ನೆಲ~
ದಿಂದ ಅರ್ಧ ಅಡಿ ಮೇಲಿದ್ದ.
-30-

"ಅಲ್ಲದೆ, ನನ್ನ ಉಪಕಾರಕ್ಕೆ ಸಣ್ಣ ಬಹುಮಾನ ಕೂಡ ಕೊಡಬೇಕಾ~
ಗುತ್ತೆ" ಚಂದ್ರಕಾಂತ ನರಿಯಂತೆ ನಕ್ಕ.

"ಏನು ಕೊಡಬೇಕು ಹೇಳು"

"ಏನಿಲ್ಲ ಒಂದು ತ್ರಿಬ್ಬಲ್ ಫೈವ್ ಸಿಗರೇಟ್ ಪ್ಯಾಕು, ಒಂದು
ಬಾಟಲ್ ವಿಸ್ಕಿ, ಆಗುತ್ತಾ ?"
"ಆಗಬಹುದು. ನಾಳೇನೇ ತಂದುಕೊಡ್ತೀನಿ."

"ನಾಳೆ ಬೇಡ. ಶನಿವಾರ ಸಾಯಂಕಾಲ ತಂದುಕೊಡು. ಭಾನುವಾರ
ಶೂಟಿಂಗ್ ಇರೋದಿಲ್ಲ. ಅಲ್ಲೀವರೆಗೂ ಪ್ರೊಡ್ಯೂಸರ್ ಖರ್ಚಿನಲ್ಲೇ ಩ಡೆ~
ಯುತ್ತೆ."

ಹಯಗ್ರೀವ ಒಪ್ಪಿದ. ಬುದ್ಧಿವಂತನಾದ ಚಂದ್ರಕಾಂತ ಕೆಲಸಕ್ಕೆ ಕೂಲಿ~
ಯಿಲ್ಲದ ಆಳೊಂದನ್ನು ಒದಗಿಸಿಕೊಂಡ. ಜೊತೆಗೆ ತನ್ನ ಚಟದ ಖರ್ಚಿಗೂ
ದಾರಿ ಮಾಡಿಕೊಂಡ. ಇನ್ನೇನು ತಾನು ನಟವಾಗಿ ಬೆಳ್ಳಿ ತೆರೆಯ ಮೇಲೆ
ರಾರಾಜಿಸಬಹುದೆಂದು ಹಯಗ್ರೀವ ಸ್ವಲ್ಪವೂ ಅನುಮಾನವಿಲ್ಲದೆ ನಂಬಿದ.

ಅಂದು ರಾತ್ರಿ ಮನೆಗೆ ಬಂದಾಗ ಅವನು ಅವನಾಗಿರಲಿಲ್ಲ; ಅವನು
ಆಗಬೇಕೆಂದುಕೊಂಡಿದ್ದ ಭ್ರಮೆ ಮೈಮೇಲೆ ಸವಾರಿ ಮಾಡಿತ್ತು. ಹೊಟ್ಟೆ
ತುಂಬಾ ಗದುಕಿದ ಕೂಡಲೇ ನಿತ್ಯದಂತೆ ಅವನಿಗೆ ನಿದ್ರೆ ಬರಲಿಲ್ಲ. ಅಂದಿನ
ಶೂಟಿಂಗ್, ಬಣ಼್ಣ ಬಳಿದುಕೊಂಡ ನಟನಟಿಯರು, ಚಂದ್ರಕಾಂತ ಜೊತೆ
ನಡೆದ ಮಾತುಕತೆಗಳೇ ಮತ್ತೆ ಮತ್ತೆ ಸುಳಿಯುತ್ತಿದ್ದವು. ಪ್ರಸಿದ್ಧ ನಟ~
ನಾಗಿ ವಿದೇಶಿ ಕಾರಿನಲ್ಲಿ ಕುಳಿತು ತಾನು ತಿಥಿ ಮಾಡಿದ ಕಾಲೇಜಿಗ ಭಾಷಣ
ಮಾಡಲು ಹೋಗಿ ಪ್ರಿನ್ಸಿಪಾಲನ ಹೊಟ್ಟೆ ಉರಿಸಬೇಕೆಂದುಕೊಂಡ. ಈ
ಸಂಭ್ರಮದ ಮಧ್ಯದಲ್ಲೇ, ತನ್ನ ಕೆನ್ನೆಗೆ ಬಿಗಿದ ಹಳೆಯ ಪ್ರಿನ್ಸಿಪಾಲ್ ಹೋಗಿ
ಹೊಸಬ ಬಂದಿರಬಹುದೆನ್ನಿಸಿತು. ಆದರೆ ಚಲನಚಿತ್ರದ ಪ್ರಖ್ಯಾತ ನಾಯಕ
ಮಣಿಯಾಗಲಿರುವ ತಾನು ದರಿದ್ರ ಕಾಲೇಜಿನ ಬಗ್ಗೆ ಯೋಚಿಸುವುದೇ ಸರಿಯಲ್ಲ~
ವೆಂದುಕೊಂಡು ಅದನ್ನು ತಲೆಯಿಂದ ಕಿತ್ತೆಸೆದ. ಎಸೆಯುವಾಗ ಐದಾರೂ
ತಲೆಗೂದಲೂ ಬೆರಳಿನಲ್ಲಿ ಕಾಣಿಸಿದವು. ಹೋದರೆ ಪೀಡೆ ಹೋಯಿತೆಂದು
ಕೊಂಡು ಕೈಕೊಡವಿದ!
-31-

ಹದಿನೈದು ದಿನಗಳ ಕಾಲ ಹಯಗ್ರೀವ ಶೂಟಿಂಗ್ ತಂಡದಲ್ಲಿ ಐದನೇ
ಅಸಿಸ್ಟೆಂಟಾಗಿ ದುಡಿದ. ಆದರೆ ಚಂದ್ರಕಾಂತನಿಗೆ ಸಹಾಯಕನಾಗಿ ಅವನು
ಮಾಡಲಾಗದ, ಮಾಡಬಾರದ ಕೆಲಸಗಳನ್ನೆಲ್ಲಾ ಇವನು ಮಾಡಿದ. ಒಂದೆ~
ರಡು ಸಲ ನಟ ನಟಿಯರಿಗೆ ಕಾಫಿ ತಿಂಡಿ ಸಪ್ಲೈ ಮಾಡಿದ್ದೂ ಉಂಟು. ಅವ~
ನಿಗೇನೂ ಅದರಿಂದ ಹೀನಾಯವೆನಿಸಲಿಲ್ಲ. ತನಗೆ ಚಾನ್ಸ್ ಕೊಡಿಸಲಿರುವ
ಚಂದ್ರಕಾಂತನಿಗೆ ಅಷ್ಟೂ ಸಹಾಯ ಮಾಡದಿದ್ದರೆ ಹೇಗೆ ? ಅಲ್ಲದೆ ಅಲ್ಲಿ
ಮನೆಯ ಊಟಕ್ಕಿಂತ ರುಚಿರುಚಿಯಾದ, ಹಲವು ಬಗೆಯ ಊಟ ತಿಂಡಿಗಳು
ದೊರಕುತ್ತಿದ್ದವು. ಅದರಿಂದಲೇ ಅವನು ಮನೆಯಲ್ಲಿ ತಿನ್ನುವುದಕ್ಕಿಂತ
ಹೆಚ್ಚಿನ ಪ್ರಮಾಣದಲ್ಲೇ ಹೇಗೋ ಕಷ್ಟಪಟ್ಟು ಇಳಿಸಿಬಿಡುತ್ತಿದ್ದ!

ಅವನ ಭೋಜನ ವೈಭವವನ್ನು ಕಂಡು ಚಂದ್ರಕಾಂತನೇ ಗಾಬರಿ~
ಗೊಂಡ. ಪ್ರೊಡ್ಯೂಸರ್ ನೋಡಿದರೆ ಈ ಪಾಟಿ ತಂದುಹಾಕುವ ಅನ್ನರಾಕ್ಷಸ~
ನನ್ನ ಕರೆದುಕೊಂಡು ಬಂದ ತಪ್ಪಿಗೆ ತನಗೇ ಗೇಟ್್ಪಾಸ್ ಕೊಟ್ಟರೇನು~
ಗತಿಯೆಂದು ಭಯವಾಯಿತು. ಆದ್ದರಿಂದ ಹಯಗ್ರೀವನನ್ನು ಎಲ್ಲರ ಜೊತೆ
ಊಟಕ್ಕೆ ಕೂಡಿಸುತ್ತಿರಲಿಲ್ಲ.

ಅಂತೂ ಆ ದಿನ ಬಂತು. ಅದು, ಹಯಗ್ರೀವನ ಭವಿಷ್ಯವನ್ನು
ಅಖಂಡಕರ್ನಾಟಕದ ಉದ್ದಗಲಕ್ಕೂ ಹರಡಬಲ್ಲ ಸುದಿನ! ಅದು, ಸಮೃದ್ಧವಾಗಿ
ಹಣ, ಬಂಗಲೆ, ಕಾರು ಇತ್ಯಾದಿ ಸಕಲ ಸೌಕಱ್ಯಗಳನ್ನು ಅವನಿಗೆ ಒದಗಿಸ~
ಬಹುದಾದ ಮಹಾದಿನ!

.... ಅದೊಂದು ಚಳುವಳಿಯ ದೃಶ್ಯ. ಅದಕ್ಕೆಂದೇ ನೂರಕ್ಕಿಂತ ಹೆಚ್ಚು
ಜನರನ್ನು ಕಲೆಹಾಕಲಾಗಿತ್ತು. ಎಲ್ಲ ಹಯಗ್ರೀವನಂಥ ತಿಕ್ಕಲುಗಳೇ!
ಎಲ್ಲರೂ ಹೀರೋಗಿಂತಲೂ ಹೆಚ್ಚು ಸ್ಮಾರ್ಟಾಗಿ ಡ್ರೆಸ್ ಮಾಡಿಕೊಂಡು ಬಂದಿ~
ದ್ದರು. ಹಯಗ್ರೀವನೇನೂ ಕಡಿಮೆಯಿರಲಿಲ್ಲ! ಆದರೆ ಅಷ್ಟು ಜನರ ನಡುವೆ
ತಾನೂ ಒಬ್ಬ ಚಳುವಳಿಖೋರನಾದರೆ ಜನ ತನ್ನನ್ನು ಗುರುತಿಸುವುದು
ಹೇಗೆ? ಎಂಬ ಪ್ರಬಲವಾದ, ಹಾಗೂ ಉಚಿತವಾದ ಸಂದೇಹ ಬಂದು ಚಂದ್ರ~
ಕಾಂತನನ್ನು ಕೇಳಿದ.

"ನೀನೇನೂ ಯೋಚನೆ ಮಾಡಬೇಡ಼. ನಿಂದೇ ಪ್ರತ್ಯೇಕವಾಗಿ ಎರಡು
-32-
ಮೂರು ಕ್ಲೋಸ್್ಅಪ್ ಶಾಟ್ಸ್ ತೆಗೆಯೋದಿಕ್ಕೆ ಕ್ಯಾಮರಾಮನ್್ಗೆ
ಹೇಳ್ತೀನಿ."

﻿
ಕೆ.ಎನ್. ಶಿವಶಂಕರರಾವ್
03-05-21
Kannada
ಪ್ರಾಚೀನ ಮಾನವ ಎಂದು ತನ್ನ ದಾರಿಗೆ ಅಡ್ಡವಾದ ಹಳ್ಳ~
ವೊಂದನ್ನು ದಾಟಲು ಮರದ ದಿಮ್ಮಿಯನ್ನೋ ಕಲ್ಲು ಬಂಡೆಯನ್ನೋ
ಉರುಳಿಸಿದನೋ ಅಂದೇ ಮೊದಲ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭ~
ವಾಯಿತೆನ್ನಬಹುದು. ಹಳ್ಳಕ್ಕೆ ಅಡ್ಡಲಾಗಿ ಬಿದ್ದ ಮರದ ಕೊಂಬೆಯೋ
ಮುನ್್ಚಾಚಿಕೊಂಡಿರುವ ಕಲ್ಲು ಬಂಡೆಯೋ ಆತನಲ್ಲಿ ಸೇತುವೆಯ
ಕಲ್ಪನೆಯನ್ನುಂಟು ಮಾಡಿರಬೇಕು.

ಸೇತುವೆಯ ನಿರ್ಮಾಣದ ಬಗ್ಗೆ ಪ್ರಾಚೀನ ಭಾರತೀಯರಿಗೆ ತಿಳುವಳಿಕೆ~
ಯಿತ್ತೆಂದು ಪುರಾತನ ಸಾಹಿತ್ಯಗಳಿಂದ ತಿಳಿದುಬರುತ್ತದೆ. ಸೀತಾನ್ವೇಷಣೆಯ
ನಂತರ ರಾವಣ ಸಂಹಾರಕ್ಕೆ ಹೊರಟ ಶ್ರೀರಾಮ ಕಪಿಸೈನ್ಯದ ಸಹಾಯದಿಂದ
ಸೇತುವೆ ನಿರ್ಮಿಸಿ ಸಮುದ್ರ ದಾಟಿದನೆಂಬುದು ರಾಮಾಯಣದ ಕಥೆ.
(ಎರಡು ದಂಡೆಗಳಲ್ಲಿ ಹುಗಿದ ಸ್ಥಂಬ ಮುಂತಾದುವುಗಳಿಗೆ, ಸರಪಳಿಗಳನ್ನು
ಕಟ್ಟಿ ತೂಗು ಸೇತುವೆಗಳನ್ನು ಭಾರತೀಯರು ನಿರ್ಮಿಸುತ್ತಿದ್ದರೆಂದು)
ಹ್ಯೂಯೆನ್್ತ್ಸಾಂಗ್ ಕ್ರಿ.ಶ. ಏಳನೆಯ ಶತಮಾನದಲ್ಲಿ ಬರೆದಿದ್ದಾನೆ.

ಗೋಡೆಯಿಂದ ಹೊರಚಾಚಿ ಮೇಲಿನ ಭಾರವನ್ನು ಹೊತ್ತುಕೊಂಡಿ~
ರುವ ಕಲ್ಲು ಅಥವಾ ಮರದ ಭಾಗಗಳಿಂದಲೇ ಸೇತುವೆಯ ಮೊದಲ
ಅವತರಣಿಕೆಯಾಗಿರಬೇಕು. ಕಮಾನು ಕಟ್ಟಡದ ಬೆಣೆಯಾಕಾರದ ಕಲ್ಲು
ನಂತರದ ಬೆಳವಣಿಗೆ. ಇಟ್ಟಿಗೆಯ ಉಪಯೋಗ ಮುಂದಿನ ಹೆಜ್ಜೆ. ಅಂತೂ
ಕಮಾನು ಕಟ್ಟು ಇನ್ನೂ ಗುಣವೃದ್ಧಿಗೊಳ್ಳುತ್ತಲೇ ಇದೆಯೆಂಬುದು ಅದರ
ಮಹತ್ವಕ್ಕೆ ನಿದರ್ಶನ.

ಸುಮಾರು ಹದಿನೆಂಟನೆಯ ಶತಮಾನದಲ್ಲಿ ದೊಡ್ಡ ದೊಡ್ಡ ನದಿಗಳಿಗೆ
ಅಡ್ಡಲಾಗಿ ಸೇತುವೆಗಳನ್ನು ಕಟ್ಟಲು ಪ್ರಾರಂಭವಾದದ್ದರಿಂದ ಕಮಾನು ಕಟ್ಟಿನ
ವಿನ್ಯಾಸ ಹೆಚ್ಚು ವೃದ್ಧಿಯಾಗತೊಡಗಿತು. ಉಕ್ಕಿನ ಸಂಶೋಧನೆಯಿಂದಾಗಿ
ಸೇತುವೆ ಕಟ್ಟುವುದರಲ್ಲಿ ಹೆಚ್ಚಿನ ಬೆಳವಣಿಗೆಯಾಯಿತು. ಇದೀಗ ಪ್ರಬಲಿತ
ಕಾಂಕ್ರೀಟಿನ ಸೇತುವೆಗಳು ಸಾಮಾನ್ಯ. ಇನ್ನೂ ಮುಂದೆ
-140-
ಹೋಗಿ ಪೂರ್ವ ಪೀಡಿತ ಕಾಂಕ್ರೀಟಿನಿಂದಲೂ
ಸೇತುವೆಗಳು ಕಟ್ಟಲ್ಪಡುತ್ತಿವೆ.

ಸೇತುವೆಯ ಭಾಗಗಳು

ಸೇತುವೆಯ ಎರಡು ಪ್ರಮುಖ ಭಾಗಗಳು - ಮೇಲ್ಕಟ್ಟಡ ಮತ್ತು
ಅಡಿಕಟ್ಟಡ. ವಾಹನಗಳು ಹರಿದಾಡುವ ರಸ್ತೆ ಮತ್ತು ಅದನ್ನು ಹೊತ್ತಿರುವ
ತೊಲೆಗಳು ಅಥವಾ ಕಮಾನು ಮತ್ತು ಹಿಡಿಗಂಬಿ ಇವುಗಳ ಸಮುದಾಯವು
ಮೇಲ್ಕಟ್ಟಡವೆಂದು ಕರೆಯಲ್ಪಡುವುದು. ಈ ಮೇಲ್ಕಟ್ಟಡವನ್ನು ಹೊತ್ತಿ~
ರುವ ಗುದ್ದುಕಂಬಗಳು, ಅವುಗಳಿಗೆ ಅಂಟಿರುವ ರೆಕ್ಕೆ
ಗೋಡೆಗಳು, ನಡುಗಂಬಗಳು ಮತ್ತು ಅಡಿ~
ಪಾಯಗಳು - ಇವೆಲ್ಲವನ್ನೂ ಒಟ್ಟಿಗೆ ಅಡಿಕಟ್ಟಡವೆನ್ನುವರು. ಸೇತುವೆಯ
ಭಾಗಗಳನ್ನು ಚಿತ್ರ 24 ರಲ್ಲಿ ನೋಡಬಹುದು.
-141-

ಸೇತುವೆಯು ನದಿಯ ನೀರಿನ ಗರಿಷ್ಟ ಮಟ್ಟದಿಂದಾಗಿ ಅನೇಕ ಬಾರಿ
ಪಕ್ಕದ ರಸ್ತೆಗಿಂತ ಎತ್ತರವಾಗಿರಬೇಕಾಗುತ್ತದೆ. ಆಗ ಸೇತುವೆಯ ಎರಡೂ
ಪಾರ್ಶ್ವಗಳಲ್ಲಿ ರಸ್ತೆಯನ್ನು ಸೇತುವೆಯ ಮಟ್ಟಕ್ಕೆ ತರಬೇಕಾಗುತ್ತದೆ.
ಕೆಲವೊಮ್ಮೆ ಸೇತುವೆಯ ನಿರ್ಮಾಣದಿಂದಾಗಿ ರಸ್ತೆಯ ಗತಿಯನ್ನೇ
ಬದಲಾಯಿಸಿ ತೀವ್ರ ತಿರುವು ಮುಂತಾದುವುಗಳನ್ನು ನಿವಾರಿಸಬೇಕಾಗುತ್ತದೆ.
ಅಂತಹ ಸಮಯದಲ್ಲಿ ಸೇತುವೆಗೆ ಎರಡೂ ಕಡೆಗಳಲ್ಲಿ ಕೊಂಚದೂರ
ರಸ್ತೆಯ ಮಾರ್ಪಾಟಾಗಬೇಕಾಗುತ್ತದೆ. ಇದಕ್ಕೆ ಏರಿಸಬೇಕೋ, ಇಳಿಸ~
ಬೇಕೋ ಎಂಬುದರ ಮೇಲೆ ನಿರ್ಧರಿಸಿ ಏರುದಾರಿಗಳು ಅಥವಾ ತೋಡು~
ದಾರಿಗಳು ಎನ್ನಬಹುದು.

ಕೆಲವು ನದಿಗಳಲ್ಲಿ ಸಾಮಾನ್ಯವಾಗಿ, ಅಂದರೆ ವರ್ಷದ ಬಹುಭಾಗ
ನೀರಿನ ಮಟ್ಟ ಬಹಳ ಕಡಿಮೆಯಿರುತ್ತದೆ. ಯಾವಾಗಲಾದರೂ ಒಂದೆರಡು
ಬಾರಿ, ಸ್ವಲ್ಪಕಾಲ ಹೆಚ್ಚು ಪ್ರವಾಹ ಬರುವುದುಂಟು. ಈ ಪರಿಸ್ಥಿತಿಗಳಲ್ಲಿ
ಮತ್ತು ಹಣದ ಕೊರತೆಯಿರುವಾಗ ಮೇಲ್ಕಟ್ಟಡವನ್ನು ತುಂಬ ಎತ್ತರದಲ್ಲಿ
ಕಟ್ಟದೆ, ಪ್ರವಾಹ ಬಂದಾಗ ಮುಳುಗಿರುವಂತೆ ಕಟ್ಟುತ್ತಾರೆ. ಈ ರೀತಿಯ
ಸೇತುವೆಯನ್ನು ಮುಳುಗುವ ಸೇತುವೆಯೆಂದು
ಕರೆಯಬಹುದು.

ಮೇಲ್ಕಟ್ಟಡಕ್ಕೆ ದಡಗಳಲ್ಲಿ ಆಧಾರವಾಗಿರುವ ಕಟ್ಟಡದ ಭಾಗಕ್ಕೆ ಗುದ್ದು
ಕಂಬವೆನ್ನಬಹುದು. ಇದು ಮೇಲ್ಕಟ್ಟಡಕ್ಕೆ ಆಧಾರವಾಗಿರುವುದಲ್ಲದೆ ಅದರ
ಹಿಂದಿರುವ ಮಣ್ಣನ್ನು ತಡೆಹಿಡಿಯುವುದರಲ್ಲೂ ಸಹಾಯಕವಾಗುತ್ತದೆ.
ಇದಕ್ಕೆ ಸೇರಿದಂತೆಯೇ ಇರುವ ರೆಕ್ಕೆ ಗೋಡೆಗಳು
ನದಿಯ ಪಾರ್ಶ್ವಗಳನ್ನು ಗುದ್ದುಕಂಬದ ಬಳಿ ನೀರಿನ ಹೊಡೆತದಿಂದ ರಕ್ಷಿಸು~
ವುದಲ್ಲದೆ ನೀರನ್ನು ಒಂದೇ ಗತಿಯಲ್ಲಿ ಹೋಗುವಂತೆ ನಿಯಂತ್ರಿಸುತ್ತದೆ. ಈ
ರೆಕ್ಕೆ ಗೋಡೆಗಳು ಹಿಮ್ಮುಖವಾಗಿದ್ದು ಗುದ್ದುಕಂಬಗಳಿಗೆ ಸಹಾಯಕ ಹಾಗೂ
ಪೂರಕವಾಗಿರುತ್ತದೆ.

ನದಿಯ ಅಗಲ ಹೆಚ್ಚಾದಾಗ ಎರಡು ಗುದ್ದುಕಂಬಗಳ ನಡುವೆಯೇ
ನೇರವಾಗಿ ಮೇಲ್ಕಟ್ಟಡವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಆಗ ಮಧ್ಯೆ
ಮಧ್ಯೆ ನಡುಗಂಬಗಳನ್ನು ಕಟ್ಟಿ ಇವುಗಳ ಸಹಾಯದಿಂದ ಮೇಲಿನಿಂದ
-142-
ಬರುವ ಭಾರವನ್ನು ಪಾಯಗಳಿಗೆ, ಅ಩ಂತರ ಭೂಮಿಗೂ ರವಾನಿಸು~
ವುದು ಪದ್ಧತಿ. ಇವು ನದಿಯ ಮಧ್ಯಭಾಗಗಳಲ್ಲಿರುವುದರಿಂದ ನದಿಯ
ನೈಸರ್ಗಿಕ ಚಲನೆಗೆ ತಡೆಯುಂಟಾಗುತ್ತದೆ. ಆದ್ದರಿಂದ ನೀರು ಮೇಲೆ
ಏರುತ್ತದೆ. ಆದರೆ ನಡುಗಂಬಗಳಿಂದ ಸೇತುವೆ ನಿರ್ಮಾಣದಲ್ಲಿ ವೆಚ್ಚ
ಕಡಿಮೆಯಾಗುತ್ತದೆ.

ಕೆಲವೊಮ್ಮೆ ಕಮಾನಿನಾಕಾರದ ಸೇತುವೆಗಳಲ್ಲಿ ಅಲ್ಲಲ್ಲಿ ಒಂದೊಂದು
ನಡುಗಂಬಗಳನ್ನು ಇತರವುಗಳಿಗಿಂತ ಹೆಚ್ಚು ಬಲವಾಗಿ ಕಟ್ಟುತ್ತಾರೆ. ಇವು
ಮಣ್ಣಿನ ಏರಿಯ ತೂಕವನ್ನು ತಡೆಯುವುದಿಲ್ಲವಾದರೂ ಗುದ್ದುಕಂಬಗಳ
ಇತರ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತವೆ. ಇಂತಹವುಗಳಿಗೆ ಗುದ್ದು
ನಡುಗಂಬ ಎನ್ನಬಹುದು.

ಯಾವುದೇ ಕಟ್ಟ಼ಡದಲ್ಲಾದರೂ ಅಡಿಪಾಯ ಬಹುಮುಖ್ಯಭಾಗ.
ಸೇತುವೆಯ ಗುದ್ದುಗಂಬ ಮತ್ತು ನಡುಗಂಬಗಳಿಗೆ ಸೂಕ್ತ ಅಡಿಪಾಯ~
ವಿರಬೇಕು. ಮೇಲಿನಿಂದ ಬರುವ ಎಲ್ಲ ತೂಕವನ್ನು ಭೂಮಿಗೆ ಸಮನಾಗಿ,
ಭೂಮಿಯು ತಡೆಯುವ ಮಟ್ಟದಲ್ಲಿ ಅಂದರೆ ಭೂಮಿಯು ಕುಸಿಯದಂತೆ
ವರ್ಗಾಯಿಸುವುದೇ ಅಡಿಪಾಯದ ಕೆಲಸ. ಭೂಮಿಯ ರೂಪುರೇಷೆ,
ಸಾಮರ್ಥ್ಯಗಳಿಗನುಸಾರವಾಗಿ ತಜ್ಞರು ಅಡಿಪಾಯದ ವಿನ್ಯಾಸವನ್ನು
ತಯಾರಿಸುತ್ತಾರೆ. ಕಾಂಕ್ರೀಟಿನ, ಮೆಟ್ಟಿಲುಗಳಂತಿರುವ ಅಡಿಪಾಯ
ಸಾಮಾನ್ಯವಾದರೂ ಸಂದರ್ಭಕ್ಕನುಸಾರವಾಗಿ ಕೆಲವು ಸಾರಿ ಇದರ ಕೆಳಗೆ
ಆಳಕ್ಕೆ ಹೂತದೂಲ ಅಥವಾ ಆಸರೆದಿಮ್ಮಿಯನ್ನೂ ಉಪಯೋಗಿ~
ಸುವುದುಂಟು. ಈ ದೂಲವನ್ನು ಪ್ರಬಲಿತ ಕಾಂಕ್ರೀಟನಿಂದಾಗಲೀ, ಮರ~
ದಿಂದಲಾಗಲೀ ಮಾಡುತ್ತಾರೆ.

ಸೇತುವೆ ನಿರ್ಮಿಸಲು ಸ್ಥಳವನ್ನು ನಿರ್ಧರಿಸುವುದೊಂದು ಮುಖ್ಯ
ಕೆಲಸ. ನದಿಯು ನೇರವಾಗಿ ಹೆಚ್ಚಿನ ಇಳಿಜಾರಿಲ್ಲದೆ ಹರಿಯುತ್ತಿರುವ ಸ್ಥಳ
ಹೆಚ್ಚು ಸೂಕ್ತ. ಸೇತುವೆಯ ಮೇಲ್ಭಾಗದಲ್ಲಿ ಯಾವುದೇ ಉಪನದಿಯ
ಸೇರ್ಪಡೆಯಿಂದಾಗಲೀ ಮತ್ತಾವುದೇ ಕಾರಣದಿಂದಾಗಲೀ ಉಂಟಾಗುವ
ವಿವಿಧ ದಿಕ್ಕಿನ ಚಲನೆ ಮತ್ತು ತನ್ಮೂಲಕ ಒದಗುವ ಸುಳಿಗಳು ಇರುವುದು
ಅನಪೇಕ್ಷಣೀಯ. ದಡಗಳು ಆದಷ್ಟು ಹತ್ತಿರವೂ ನಿಖರವೂ ಆಗಿದ್ದು
ಸುಲಭವಾಗಿ ಪ್ರವಾಹದ ಭರಕ್ಕೆ ತುತ್ತಾಗದಂತಿರಬೇಕು. ಸೇತುವೆಯ
-143-
ಗುದ್ದುಕಂಬ ನಡುಗಂಬಗಳಿಗೆ ಸೂಕ್ತವಾದ ಅಡಿಪಾಯ ನಿರ್ಮಿಸಲು
ಬೇಕಾಗುವ ಗಟ್ಟಿಯಾದ ನೆಲ ಅಥವಾ ಬಂಡೆ ಸ್ಥಳದಲ್ಲಿ ಆದಷ್ಟು ಮೇಲ್ಮಟ್ಟ~
ದಲ್ಲಿ ಸಿಕ್ಕುವಂತಿರಬೇಕಾದುದು ಮುಖ್ಯ. ಸೇತುವೆಯ ನಿರ್ಮಾಣವಾದ
ಮೇಲೆ ಅದು ನದಿಯಗತಿಯ ದಿಕ್ಕಿಗೆ ಸಮಕೋನದಲ್ಲಿದ್ದರೆ ವಾಸಿ (ನದಿಯ
ಗರಿಷ್ಟ ಪ್ರವಾಹವು ಯಾವ ತಡೆಯೂ ಇಲ್ಲದೆ, ಮೇಲ್ಕಟ್ಟಡಕ್ಕೆ ಯಾವ
ರೀತಿಯ ಹಾನಿಯೂ ಆಗದಂತೆ, ಹರಿದು ಹೋಗುವಂತಿರಬೇಕು). ಸೇತು~
ವೆಯ ನಿರ್ಮಾಣದಿಂದ ಉಂಟಾಗುವ ನೀರಿನಮಟ್ಟದ ಏರಿಕೆಯೂ ಕಡಿಮೆ~
ಯಿರಬೇಕು. ಇಲ್ಲದಿದ್ದರೆ ಬೇಕಾಗುವ ಮಟ್ಟಕ್ಕೆ ಸೇತುವೆಯನ್ನು ಏರಿಸಿದರೆ
ಏರುದಾರಿಗಳ ನಿರ್ಮಾಣಕ್ಕೆ ವೆಚ್ಚ ಬಹು ಹೆಚ್ಚಾಗುತ್ತದೆ.

ಈ ಮೇಲೆ ಹೇಳಿದ ಎಲ್ಲ ವಿವರಗಳೂ ಸೇತುವೆಯ ನಿರ್ಮಾಣಕ್ಕೆ
ಅತ್ಯವಾಶ್ಯಕವಾದವು. ಇವಲ್ಲದೆ ಬೇಕಾಗುವ ಇತರ ವಿಷಯಗಳೆಂದರೆ,
ಅಗತ್ಯ ವಸ್ತುಗಳ ದೊರೆಯುವಿಕೆ, ಜಲಾನಯನ ಪ್ರದೇಶದ ಬಗ್ಗೆ ಮಾಹಿತಿ,
ಹತ್ತಿರದ ಜನಜೀವನಕ್ಕೆ ಉಂಟಾಗುವ ಅನುಕೂಲ, ಅನಾನುಕೂಲ, ರಸ್ತೆ~
ಯಲ್ಲಿ ಓಡಾಡುವ ವಾಹನಗಳ ಸಂಖ್ಯೆ, ಅವುಗಳ ಸಾಮಾನ್ಯ ತೂಕ ಮತ್ತು
ವೇಗ ಮುಂತಾದುವು. ನದಿಯಲ್ಲಿ ನೌಕಾ ಸಂಚಾರವಿದ್ದರೆ ಅದರ ಬಗ್ಗೆ ಹೆಚ್ಚು
ಗಮನ ಕೊಡಬೇಕಾಗುತ್ತದೆ. ಸೇತುವೆಯ ವಿನ್ಯಾಸದಲ್ಲಿ ಈ ಎಲ್ಲ ಅಂಶ~
ಗಳನ್ನು ಗಮನಿಸಿ ಎಲ್ಲಕ್ಕೂ ಸೂಕ್ತವಾಗುವಂತೆ ರಚಿಸಬೇಕು. ಕಟ್ಟಡದ
ಉಪಯುಕ್ತತೆ, ಅದರ ಬಾಳಿಕೆ ಮುಖ್ಯವಾದರೂ, ಸಾಧ್ಯವಿದ್ದಷ್ಟು ಮಟ್ಟಿಗೆ
ಅಗ್ಗವಾಗಿ ಅದರ ಸೌಂದರ್ಯಾಭಿವೃದ್ಧಿಗೆ ಪ್ರಯತ್ನಿಸಬೇಕು.

ವಿವಿಧ ಬಗೆಯ ಸೇತುವೆಗಳು:

ಸೇತುವೆಗಳು ನಿರ್ವಹಿಸುವ ಕಾರ್ಯ, ಉಪಯೋಗಿಸಲಾದ ಸಾಮಗ್ರಿ,
ರೂಪ ಮುಂತಾದುವುಗಳಿಂದ ವಿಂಗಡಣೆ ಸಾಧ್ಯ. ಮರದ ಸೇತುವೆಗಳು,
ಕಲ್ಕಟ್ಟಡದವು, ಇಟ್ಟಿಗೆಯವು, ಕಾಂಕ್ರೀಟನವು, ಬಲಪಡಿಸಿದ ಕಾಂಕ್ರೀಟಿನವು,
ಕಬ್ಬಿಣವು ಮತ್ತು ಉಕ್ಕಿನವು ಇತ್ಯಾದಿ. ಸುಲಭವಾಗಿ ಸಿಕ್ಕುವ ವಸ್ತುಗಳು
ಮತ್ತು ಸೇತುವೆಯ ಪ್ರಾಮುಖ್ಯತೆ ಇವುಗಳನ್ನು ಗಮನಿಸಿ ನಿರ್ಮಾಣ
ವಿಧಾನವನ್ನು ನಿರ್ಧರಿಸುವರು. ವೈಜ್ಞಾನಿಕ ಜ್ಞಾನ ಹೆಚ್ಚಾದಂತೆಲ್ಲ ಹೊಸ
ಹೊಸ ವಸ್ತುಗಳ ಸಂಶೋಧನೆಯಾಗಿ ಹೊಸ ಹೊಸ ಕ್ರಮಗಳು ಜಾರಿಗೆ
ಬರುತ್ತಿವೆ.
-145-

ಈ ಬೆಳವಣಿಗೆಯ ಒಂದು ಸಮೀಕ್ಷೆ ಉಪಯುಕ್ತ.
ಸೇತುವೆಗೆ ಉಪಯೋಗಿಸಲಾಗುವ ವಿವಿಧ ವಸ್ತುಗಳ
ಗುಣಾವಗುಣಗಳನ್ನು ನೋಡೋಣ. ತಾತ್ಕಾಲಿಕ ಹಾಗೂ ಸಣ್ಣಸೇತುವೆಗಳಿಗೆ
ಮರದ ಉಪಯೋಗ ಹೆಚ್ಚು. ಇದು ಎಲ್ಲೆಲ್ಲೂ ದೊರೆಯುವುದಲ್ಲದೆ
ಸಾಮಾನ್ಯ ಕೆಲಸಗಾರರೂ ರೂಪಿಸಬಹುದು. ಬೆಲೆಯೂ ಕಡಿಮೆ. ಆದರೆ
ಇದರ ಸಾಮರ್ಥ್ಯ ಕಡಿಮೆ ಮತ್ತು ಬೆಂಕಿ ಅನಾಹುತವೂ ಹೆಚ್ಚು.

ಕಲ್ಲಿನ ಕಟ್ಟಡದ ಸಾಮರ್ಥ್ಯ ಸ್ವಾಭಾವಿಕವಾಗಿ ಹೆಚ್ಚು. ಇದಲ್ಲದೆ
ಒಮ್ಮೆ ಕಟ್ಟಿ ಮುಗಿಯಿತೆಂದರೆ ದುರಸ್ತಿ ಕಾರ್ಯದ ಅಗತ್ಯ ಬಹು ಕಡಿಮೆ.
ನೋಡಲು ಅಂದವೂ ಹೆಚ್ಚು.

ಆದರೆ ಕಲ್ಲುಗಣಿ ದೂರವಿದ್ದರೆ ಅಥವಾ ಅದನ್ನು ಬೇಕಾದ ರೂಪಕ್ಕೆ
ಪರಿವರ್ತಿಸುವುದು ಹೆಚ್ಚು ಶ್ರಮವಾದರೆ ನಿರ್ಮಾಣ ಕಾರ್ಯದ ವೆಚ್ಚ
ಜಾಸ್ತಿಯಾಗುತ್ತದೆ. ಅಲ್ಲದೆ ಕಲ್ಲಿನ ಕಟ್ಟಡದ ಸ್ವಭಾವವೂ ಹೆಚ್ಚು,
ಸಾಮಾನ್ಯವಾಗಿ ಕಲ್ಲಿನಲ್ಲಿ ನಡುಗಂಬ ಮತ್ತು ಗುದ್ದು ಕಂಬಗಳನ್ನು
ನಿರ್ಮಿಸಿ ಚಪ್ಪಡಿಗಳಿಗಾಗಿ ಪ್ರಬಲಿತ ಕಾಂಕ್ರೀಟನ್ನು ಉಪಯೋಗಿಸುತ್ತಾರೆ.

ಇಟ್ಟಿಗೆಯಿಂದ ಸೇತುವೆಯ ಕಮಾನುಗಳನ್ನು ಮಾಡಿ ಮೇಲೆ
ಸಿಮೆಂಟಿನ ಗಿಲಾವು ಮಾಡುವುದೂ ಉಂಟು. ಸುಣ್ಣದ
ಗಾರೆಯನ್ನೂ ಉಪಯೋಗಿಸುವರು, ಸಂದರ್ಭಕ್ಕನುಸಾರವಾಗಿ.

ಬೇಕಾದ ಅಳತೆಗೆ ಮತ್ತು ಬೇಕಾದ ರೂಪಕ್ಕೆ ತಿರುಗಿಸಿ ಹೆಚ್ಚಿನ ವ್ಯರ್ಥ~
ವನ್ನು ತಪ್ಪಿಸಲು ಕಬ್ಬಿಣ ಮತ್ತು ಉಕ್ಕಿನ ಭಾಗಗಳನ್ನು ಉಪಯೋಗಿಸ~
ಬಹುದು. ಏಕೆಂದರೆ ಇವುಗಳಲ್ಲಿ ಪೂರ್ಣಗುಣ ನಿಯಂತ್ರಣ ಸಾಧ್ಯ. ಅಲ್ಲದೆ
ಈ ವಸ್ತುಗಳಿಂದ ತಯಾರಾದ ಭಾಗಗಳು ಹೆಚ್ಚಿನ ಶಕ್ತಿಯನ್ನೂ ಗುಣಮಟ್ಟ~
ವನ್ನೂ ಹೊಂದಿರುತ್ತವೆ. ಬೇಕೆನಿಸಿದಾಗ ಇವುಗಳನ್ನು ತೆಗೆದು ಬೇರೆಯ ವಸ್ತು~
ಗಳಿಂದಲೂ ಇದೇ ಭಾಗಗಳನ್ನು ತಯಾರಿಸಬಹುದು. ಇವುಗಳು ಮಾರಾಟ~
ದಿಂದಲೂ ಹೆಚ್ಚು ಬೆಲೆ ದೊರೆಯುತ್ತದೆಂಬುದು ಒಂದು ಮುಖ್ಯ ಅಂಶ.

ಈಚಿನ ದಿನಗಳಲ್ಲಿ ಹೆಚ್ಚು ಉಪಯುಕ್ತವಾಗುತ್ತಿರುವುದು ಪ್ರಬಲಿತ
ಕಾಂಕ್ರೀಟು. ಚಪ್ಪಡಿಗಳು, ಕಮಾನುಗಳು, ತೊಲೆಗಳು ಅಲ್ಲದೆ ಗುದ್ದು~
ಕಂಬಗಳು ಮತ್ತು ನಡುಗಂಬಗಳನ್ನೂ ಇದರಿಂದ ನಿರ್ಮಿಸುವರು. ಈಚಿನ
-146-
ದಿನಗಳಲ್ಲಿ ಪೂರ್ವಪೀಡಿತ ಕಾಂಕ್ರೀಟನ್ನು ಉಪಯೋಗಿಸುವುದರಿಂದ ವಿವಿಧ
ಭಾಗಗಳ ಗಾತ್ರವನ್ನು ಕಡಿಮೆ ಮಾಡುವುದೂ ಅತಿ ಹೆಚ್ಚು ವಿಸ್ತಾರದ
ಸೇತುವೆಗಳ ನಿರ್ಮಾಣವೂ ಸಾಧ್ಯವಾಗಿದೆ.

ಸೇತುವೆಯ ರೂಪಕ್ಕನುಗುಣವಾಗಿ ವಿಂಗಡಣೆ ಹೀಗಿದೆ:

1. ಕಮಾನು ಸೇತುವೆ

2. ಬಿಲ್ಲಿನಾಕಾರದ ಸರಕಟ್ಟು ಸೇತುವೆ
3. ಚಾಚುತೊಲೆ ಸೇತುವೆ
4. ತೂಗು ಸೇತುವೆ ಮುಂತಾದವು.

ಕಮಾನು ಸೇತುವೆ: ನಡುಗಂಬಗಳಿಗೂ ಗುದ್ದು ಕಂಬಗಳಿಗೂ ಮಧ್ಯೆ
ಕಮಾನಿನಾಕಾರದಲ್ಲಿ ಮರದಿಂದಲಾಗಲೀ, ಕಲ್ಲಿನಿಂದಾಗಲೀ, ಕಾಂಕ್ರೀಟಿನಿಂದಾ~
ಗಲೀ, ಉಕ್ಕಿನಿಂದಾಗಲಿ ಕಟ್ಟಲ್ಪಟ್ಟ ಈ ಸೇತುವೆಗಳು ಕೆಲವೊಮ್ಮೆ ಅರ್ಧ
ವರ್ತುಲಾಕಾರವಾಗಿಯೊ, ಅರ್ಧ ಅಂಡವತ್ತಾಕಾರವಾಗಿಯೊ, ಜ್ಯಾವೃತ್ತ
ಖಂಡಾಕೃತಿಯಾಗಿಯೊ, ಪರವಲಯೊಕೃತಿಯಾಗಿಯೊ ಇರುತ್ತವೆ. ಕೆಲವೊಮ್ಮೆ
ಅನೇಕ ಕೇಂದ್ರಗಳುಳ್ಳದ್ದಾಗಿಯೂ ಇರಬಹುದು. ಕಮಾನಿನ ಭುಜಕ್ಕೂ ಅದರ
ಸುತ್ತಲ ಆಯತಾಕಾರದ ಕಟ್ಟಡಕ್ಕೂ ನಡುವಣ ತ್ರಿಕೋನಾಕಾರದ ಸ್ಥಳ
ಅಥವಾ ಕಮಾನು ಮೂಲೆಕಟ್ಟು ತೆರೆದದ್ದಾಗಿರಲೂ ಬಹುದು.
-147-

ಬಿಲ್ಲಿನಾಕಾರದ ಸರಕಟ್ಟು ಸೇತುವೆ: ಕಾಂಕ್ರೀಟಿನಿಂದಾಗಲೀ, ಉಕ್ಕಿ~
ನಿಂದಾಗಲಿ, ಕಟ್ಟಿದ ಈ ಸೇತುವೆಯ ಕಟ್ಟು ತೊಲೆಯನ್ನು ಕಮಾನಿಗೆ
ಸಮಕೋನದ ಅಥವಾ ಇಳಿಜಾರುಳ್ಳ ಕಟ್ಟುಗಳಿಂದ ಕಟ್ಟಲಾಗಿರುತ್ತದೆ.
ಉಪ ಸರಕಟ್ಟುಗಳಿಂದ ಅಥವಾ ಮುಖ್ಯ ಸರಕಟ್ಟಿನ ಮಧ್ಯೆಯಿರುವ ಚಪ್ಪಡಿ~
ಗಳಿಂದ ರಸ್ತೆಯನ್ನು ರೂಪಿಸಲಾಗುತ್ತದೆ. "ಒಂಟೆ ಸರಕಟ್ಟು"
ಮತ್ತು `ಬಿಲ್ಲಿನ ಸರಪಳಿ ಸರಕಟ್ಟು' ಎಂದು ಎರಡು ವಿಧಗಳುಂಟು.
-148-

ಮೇಲೆ ಹೇಳಿದವಲ್ಲದೆ ಇತರ ಸರಕಟ್ಟುಗಳೆಂದರೆ (1) ವಾರನ್
ಸರಕಟ್ಟು (2) ಪ್ರಾಟ್ ಸರಕಟ್ಟು ಅಥವ ಸರಕಟ್ಟು (3) ಹೊವೇ
ಸರಕಟ್ಟು (4) ಲಿನ್್ವಿಲ್ಲೇ ಸರಕಟ್ಟು. (5) ಬಾಲ್ಟಿಮೋರ್ ಸರಕಟ್ಟು
(6) K ಸರಕಟ್ಟು ಮುಂತಾದವು. ಇವುಗಳೆಲ್ಲ ಸೇತುವೆಯು ಹೊರ~
ಬೇಕಾದ ಭಾರವನ್ನು ಯಾವ ರೀತಿ ತಮ್ಮಲ್ಲೇ ಹಂಚಿಕೊಳ್಴ುತ್ತವೆಯೆಂಬುದ~
ರಲ್ಲಿ ಮಾತ್ರ ಒಂದಕ್ಕಿಂತ ಮತ್ತೊಂದು ಪ್ರತ್ಯೇಕವಾಗಿರುತ್ತವೆಯಷ್ಟೆ.

ಚಾಚುತೊಲೆ ಸೇತುವೆಗಳು: ಒಂದೇ ಕೊನೆಯಲ್ಲಿ ಆಧಾರ ಹೊಂದಿ
ಮತ್ತೊಂದು ಕೊನೆಯಲ್ಲಿ ಸ್ವತಂತ್ರವಾಗಿರುವ ಚಾಚುತೊಲೆ ಸೇತುವೆಗಳಲ್ಲಿ
ಮೂರು ವಿಧಗಳುಂಟು. (1) ಒಂದೇ ಚಾಚುತೊಲೆಯುಳ್ಳದ್ದು; (2) ಒಂದೇ
ಆಧಾರದಿಂದ ಹೊರಟ ಎರಡು ಚಾಚುತೊಲೆಗಳು; (3) ಎರಡು ಆಧಾರ~
ಗಳ ಮೇಲಿರುವ ಸರಕಟ್ಟುಗಳಿಂದ ಹೊರಟ ಚಾಚು ಸರಕಟ್ಟು. ಈ
ಕೊನೆಯವು ಬಹು ಉಪಯುಕ್ತವಾದವೆಂದು ತಿಳಿದು ಬಂದಿದೆ. ಅಂತೆಯೇ
ಇವುಗಳನ್ನು ಕೆಲವೊಮ್ಮೆ ಬಲಪಡಿಸಿದ ಕಾಂಕ್ರೀಟಿನಿಂದಲೂ ಕಟ್ಟುತ್ತಾರೆ.

ಮೇಲೆ ಹೇಳಿದ ವಿಧಾನಗಳಲ್ಲದೆ ನಿರಂತರ ಸರಕಟ್ಟು ಸೇತುವೆಗಳು
ಗಡುಸಾದ ಅಥವಾ ಬಳುಕದ ಚೌಕಟ್ಟಿನ ಸೇತುವೆಗಳು ಮುಂತಾದವುಗಳು
ಸಾಮಾನ್ಯ.

ತೂಗು ಸೇತುವೆಗಳು: ಇಲ್ಲಿಯ ರಸ್ತೆಯ ಭಾಗವನ್ನು ಎರಡು
ಸರಪಣಿಗಳ ಅಥವ ತಂತಿಗಳ ಸಹಾಯದಿಂದ ಒಂದು ಆಧಾರದಿಂದ
ಮತ್ತೊಂದು ಆಧಾರದವರೆಗೆ ರಜ್ಜು ರೇಖಾಕೃತಿಯಲ್ಲಿ ತೂಗುಹಾಕಿ
ರಚಿಸಿರುತ್ತಾರೆ. ಒಂದೇ ಲಂಬ ರೇಖೆಯಲ್ಲಿರುವ ಎರಡು
ಬಿಂದುಗಳಿಂದ ತೂಗುಬಿಟ್ಟ ಸಮಸೂತ್ರವಾದ ಸರಪಣಿಯ ಅಥವಾ ರಜ್ಜು~
ವಿನ ವಕ್ರರೇಖೆಗೆ ರಜ್ಜುರೇಖೆ ಎನ್ನುತ್ತಾರೆ. ಇಂಥ ಸರಪಣಿಗಳ ಆಸರೆಯುಳ್ಳ
ತೂಗು ಸೇತುವೆಗೆ ತೂಗು ಸರಪಣಿ ಸೇತುವೆ ಎನ್ನಬಹುದು.

ಈ ತರಹೆಯ ಸೇತುವೆಯನ್ನು ಸಾಮಾನ್ಯವಾಗಿ ಯಾವ ನದಿಯಲ್ಲಿ
ನಡುಗಂಬಗಳನ್ನೇ ಕಟ್ಟುವುದು ದುಸ್ಸಾದ್ಯವಾಗುವುದೊ ಅಂತಹ ಕಡೆಗಳಲ್ಲಿ
ಕಟ್ಟುತ್ತಾರೆ. ಕಲ್ಕತ್ತೆಯ ಹೌರಾ ಸೇತುವೆ ಇಂತಹುದೇ. ಅಲ್ಲಿಯ ನದಿಯ
ಪಾತ್ರದಲ್ಲಿ ನಡುಗಂಬಗಳಿಗೆ ಸೂಕ್ತ ಅಡಿಪಾಯ ಕಟ್ಟುವುದೇ ಕಷ್ಟವಾದ್ದರಿಂದ
-149-
ಈ ತೂಗುಸೇತುವೆಯನ್ನು ಕಟ್ಟಿದ್ದಾರೆ. ಇದಲ್ಲದೆ ಮತ್ತೊಂದು ಮುಖ್ಯ
ಕಾರಣವೆಂದರೆ ಸೇತುವೆ ಕೆಳಗೆ ಹಡಗುಗಳು ಸುಲಭವಾಗಿ ಮುನ್ನಡೆಯ~
ಬಹುದು. ಆದರೆ ಈ ಬಗೆಯ ಸೇತುವೆಗಳಲ್ಲಿ ಹೆಚ್ಚಿನ ತೂಕಗಾಡಿಗಳು
ಹೋಗುವಾಗ ಇಡೀ ಸೇತುವೆ ಅಳ್ಳಾಡುತ್ತಿರುತ್ತದೆ.

ಒಡ್ಡು ದಾರಿಗಳು: ನದಿಗಳಲ್ಲಿ ಪ್ರವಾಹವಿದ್ದಾಗ ಮುಳುಗಿದ್ದು ಇತರ
ವೇಳೆಗಳಲ್ಲಿ ಸೇತುವೆಗಳಂತೆ ವರ್ತಿಸುವ ಒಂದು ಬಗೆಯ ಕಟ್ಟಡವುಂಟು.
ಇದಕ್ಕೆ "ಮುಳುಗುವ ಸೇತುವೆ" ಎಂದು ಕರೆಯಬಹುದು. ಕೆಲವೊಮ್ಮೆ
ನದಿಯ ಪಾತ್ರದಲ್ಲಿ ಇದು ನದಿಯ ಎಲ್ಲ ಪ್ರವಾಹಕ್ಕೂ ಮುಳುಗುತ್ತದೆ.
ಆಗ ಇದನ್ನು ಕೆಳಮಟ್ಟದ ಒಡ್ಡುದಾರಿ ಎನ್ನುತ್ತಾರೆ. ಮತ್ತೊಮ್ಮೆ ಮೇಲೆ
ಹೇಳಿದಂತೆ ಪ್ರವಾಹ ಒಂದು ಮಟ್ಟಕ್ಕಿಂತ ಹೆಚ್ಚಾದಾಗ ಮಾತ್ರ ಮುಳುಗು~
ತ್ತದೆ. ಆಗ ಅದನ್ನು ಮೇಲ್ಮಟ್ಟದ ಒಡ್ಡುದಾರಿ ಎನ್ನುತ್ತಾರೆ.
-150-

ತಾತ್ಕಾಲಿಕ ಸೇತುವೆಗಳು: ಪ್ರವಾಹದ ಹಾವಳಿಯಿಂದ ಇದ್ದ ಖಾಯಂ
ಸೇತುವೆ ಕೊಚ್ಚಿ ಹೋದಾಗಲೋ, ಯುದ್ಧ ಮುಂತಾದ ವೇಳೆಗಳಲ್ಲಿ
ಸೇತುವೆಗಳಿಲ್ಲದ ಸ್ಥಳಗಳಲ್ಲಿ ಮುನ್ನಡೆಯ ಬೇಕಾದಾಗಲೋ, ಮತ್ತಾವ
ಕಾರಣದಿಂದಲೋ ತಾತ್ಕಾಲಿಕ ಸೇತುವೆಗಳನ್ನು ಕಟ್ಟುತ್ತಾರೆ. ಹಾರು~
ಸೇತುವೆಗಳು, ತೇಲು ಸೇತುವೆಗಳು ತೂಗು ಸೇತುವೆಗಳು, ಊರೆಕಟ್ಟೆ
ಸೇತುವೆಗಳು, ಒಡ್ಡುದಾರಿಗಳು ಮುಂತಾದವು, ಸಾಮಾನ್ಯ ಬಗೆಗಳು. ಇವು~
ಗಳಲ್ಲಿ ಹೆಚ್ಚಿ಩ವು ದೋಣಿಗಳೇ. ಆದರೆ ತೂಗು ಸೇತುವೆಗಳು, ಈ ದಿಸೆಯಲ್ಲಿ
ಬಹು ಉಪಯುಕ್ತವಾಗಿವೆ. ತಳದಲ್ಲಿ ಆಧಾರವಿಲ್ಲದೆ ಎರಡು ಕೊನೆಯಗಳಲ್ಲೂ
ಸ್ತಂಭ ಮೊದಲಾದವಕ್ಕೆ ಬಿಗಿದು ಕಟ್ಟಿ ಹೊಳೆ ಮೊದಲಾದವುಗಳಿಗೆ ಅಡ್ಡಲಾಗಿ
ತಂತಿ ಹೊರಜಿಗಳಿಂದ ಜೋಲು ಹಾಕಿರುವ ಸೇತುವೆ ನಿರ್ಮಾಣ ಸಾಮಾನ್ಯ.

ತೆರೆದುಕೊಳ್ಳುವ ಸೇತುವೆಗಳು: ಕೆಲವೊಮ್ಮೆ ನದಿಯ ನೌಕಾಯಾನಕ್ಕೆ
ಉಪಯೋಗವಾಗುವಂತೆ ಅಂದರೆ ನೌಕೆಗಳ ಗಮನಕ್ಕೆ ಬೇಕಾಗುವಷ್ಟು
ಎತ್ತರಕ್ಕೆ ಸೇತುವೆ ಕಟ್ಟುವುದು ಅಸಾಧ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ
ಎತ್ತು ಸೇತುವೆಗಳನ್ನು ಕಟ್ಟುತ್ತಾರೆ. ತಮಿಳುನಾಡಿನಲ್ಲಿರುವ ಪಾಂಬನ್
ಸೇತುವೆ ಇದಕ್ಕೆ ಒಂದು ಒಳ್ಳೆಯ ನಿದರ್ಶನ. ನೌಕೆ ಹೋಗ~
ಬೇಕಾದಾಗ ಇದು ಎತ್ತಿಕೊಳ್ಳುತ್ತದೆ. ನಂತರ ಯಥಾಸ್ಥಿತಿಯಲ್ಲಿ ಸೇತುವೆಯಾಗುತ್ತದೆ.
-151-
ಈ ಎತ್ತುವಿಕೆಯನ್ನು ಒಂದೇ ಸ್ತಂಭದಿಂದಲೋ ಅಥವಾ
ಎರಡು ಕಡೆಗಳಿಂದಲೋ ನಡೆಸುತ್ತಾರೆ. ಪಾಂಬನ್ ಸೇತುವೆಯಲ್ಲಿ ಎರಡೂ
ಕಡೆಗಳಿಂದಲೂ ಎತ್ತಲಾಗುತ್ತದೆ. ಇದಕ್ಕೆ ವಿದ್ಯುಚ್ಛಕ್ತಿಯ ಬಳಕೆ ಸಾಮಾನ್ಯ~
ವಾದರೂ ಆಗಾಗ ಸರಿದೂಗುವ ಪ್ರತಿಭಾರದಿಂದಲೂ ಚಲನೆಯುಂಟಾಗು~
ತ್ತದೆ.

ಇದಲ್ಲದೆ ಇಡೀ ಸೇತುವೆಯನ್ನು ಮೇಲಕ್ಕೆ ಎತ್ತುವ ಒಂದು ಪದ್ಧತಿ~
ಯುಂಟು. ಸೇತುವೆಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ
ಗಾಲಿಗಳ ಮೂಲಕ ತಳ್ಳಿಕೊಂಡು ಉಪಯೋಗಿಸುವುದು ಸಾಧ್ಯ.

ರಸ್ತೆಗಳಲ್ಲಾಗಲೀ, ರೈಲುದಾರಿಗಳಲ್ಲಾಗಲೀ ಅತಿ ಮುಖ್ಯವಾದ ಆದರೆ
ಅತಿ ಅಪಾಯಕಾರಿಯಾದ ಸ್ಥಳವೇ ಸೇತುವೆಗಳು. ಇವುಗಳನ್ನು ಸರಿಯಾಗಿ
ನಿಯೋಜಿಸಿ ಬಲವಾಗಿ ಕಟ್ಟುವುದು ಮತ್ತು ಸುರಕ್ಷಿತವಾಗಿರುವುದು ಸಾರಿಗೆ
ಸೌಲಭ್ಯದ ಕ್ಷೇಮಕ್ಕೆ ಅತಿಮುಖ್ಯ.

ಸೇತುವೆಗಳ ಸುರಕ್ಷಿತತೆ ಬಹಳ ಮುಖ್ಯವಾದ ಅಂಶವಾದ್ದರಿಂದ ಇದರ
ಯೋಜನೆ, ಸಂವಿಧಾನ ಅಥವಾ ವಿನ್ಯಾಸ ಮತ್ತು ನಿರ್ಮಾಣಕ್ಕೆ
ತಜ್ಞರು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುವರು.

ನಿರ್ಮಾಣದಲ್ಲಿ ಜಾಗರೂಕತೆ ಎಷ್ಟು ಮುಖ್ಯವೋ ಅದರ ಉಸ್ತು~
ವಾರಿಯಲ್ಲಿಯೂ ಜಾಗರೂಕತೆ ಅಷ್ಟೇ ಮುಖ್ಯ. ಇದರ ಬಗ್ಗೆಯೂ ತಜ್ಞರು
ಅಧ್ಯಯನ ನಡೆಸಿ ಹೊಸ ಹೊಸ ವಿಧಾನಗಳನ್ನೂ, ಕ್ರಮಗಳನ್ನೂ ರೂಪಿಸು~
ತ್ತಿರುವರು.
-152-
ಸುರಂಗ ಮಾರ್ಗಗಳು

ಸುರಂಗ ಮಾರ್ಗಗಳ ನಿರ್ಮಾಣ ಪ್ರಾಚೀನ ಮಾನವನ ಮೊಟ್ಟ
ಮೊದಲ ಎಂಜಿನಿಯರಿಂಗ್ ಕಾರ್ಯಗಳಲ್ಲೊಂದೆನ್ನಬಹುದು. ಹರಿಯು~
ತ್ತಿರು ಹಳ್ಳವನ್ನು ದಾಟಲು ಮರದ ದಿಮ್ಮಿಯೊಂದನ್ನು ಇಟ್ಟುಕೊಂಡಾ~
ಗಲೇ ಮೊದಲ ಸೇತುವೆಯ ನಿರ್ಮಾಣವಾಯಿತೆನ್ನುವಂತೆ ಮಾನವ ವನ್ಯ~
ಮೃಗಗಳಿಂದ ಆತ್ಮ ಸಂರಕ್ಷಣೆಗಾಗಿ ಪೊಟರೆಗಳನ್ನೋ, ಗುಹೆಗಳನ್ನೋ
ಮಾರ್ಪಡಿಸಿಕೊಂಡು ಉಪಯೋಗಿಸಿದಾಗಲೇ ಸುರಂಗಗಳ ನಿರ್ಮಾಣ ಕಲ್ಪನೆ
ಮೂಡಿತು.

ಭಾರತದ ಮಹಾಕಾವ್ಯಗಳಲ್ಲೊಂದಾದ "ಮಹಾಭಾರತ"ದಲ್ಲಿ
ಸುರಂಗದ ಬಗ್ಗೆ ಉಲ್ಲೇಖವಿರುವುದು ಸರ್ವವಿದಿತ. ಅಸಾಮಾನ್ಯ ಶಿಲ್ಪಿ ವಿಶ್ವ~
ಕರ್ಮನಿಂದ ನಿರ್ಮಿತವಾದ ಇಂದ್ರಪ್ರಸ್ತನಗರದ ಅರಮನೆಗೆ ಕೌರವರು
ಸಂಚಿನಿಂದ ಬೆಂಕಿ ಹಚ್ಚಿದಾಗ ಪಾಂಡವರು ತಪ್ಪಿಸಿಕೊಂಡುದೇ ಸುರಂಗ
ಮಾರ್ಗದಿಂದಷ್ಟೆ. ಅಂತೆಯೇ ಪ್ರಾಚೀನ ಭಾರತದ ವಿವಿಧ ಅರಮನೆಗಳಲ್ಲಿ
ದೇವಸ್ಥಾನಗಳಲ್ಲಿ ಸುರಂಗ ಮಾರ್ಗಗಳೂ ಒಂದು ಪ್ರಮುಖ ಪಾತ್ರ ವಹಿಸು~
ತ್ತಿದ್ದವು. ಈಗಲೂ ಕೆಲವು ಪ್ರಾಚೀನ ದೇವಾಲಯಗಳಲ್ಲಿ ಇಂತಹ ಸುರಂಗ~
ಗಳ ಅವಶೇಷಗಳನ್ನು ನಾವು ಕಾಣಬಹುದು. ಭಾರತದ ಇತರ ಪ್ರಾಚೀನ
ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ.

ಕ್ರಿ.ಪೂ. 700 ರಲ್ಲಿ ಸುಮಾರು 1740 ಅಡಿಗಳಷ್ಟು ಉದ್ದದ ಸುರಂಗ
ಮಾರ್ಗವೊಂದನ್ನು ಹೆಜೆಕ್ಯಾ ಎಂಬಾತ ಕಟ್ಟಿಸಿದನೆಂದೂ ಅದರ ಹೆಸರು
"ಶಿಲೋ ಸುರಂಗ"ವೆಂದು ರೋಲ್ಟ್ ಹ್ಯಾಯಂಕರ ಅಭಿಪ್ರಾಯ.
ಗೊತ್ತಿರುವ ಚರಿತ್ರೆಯಂತೆ ಇದೇ ವಿಶ್ವದ ಅತಿ ಪ್ರಾಚೀನ ಸುರಂಗ ಮಾರ್ಗ.

ನೀರನ್ನು ಬೇಕಾದಲ್ಲಿಗೆ ಸಾಗಿಸಲೂ ಸುರಂಗ ಮಾರ್ಗಗಳ ಉಪಯೋಗ
ಪ್ರಾಚೀನ ಮಾನವರಿಗೆ ಗೊತ್ತಿತ್ತೆಂದು ತಿಳಿದು ಬರುತ್ತದೆ. ಸುಮಾರು
-153-
ಕ್ರಿ.ಪೂ. 600ರಲ್ಲಿ ಎಂಟು ಅಡಿ ಚದುರದ ಸುರಂಗವೊಂದರ ಮೂಲಕ
ಸಮಾಸ್ ನಗರಕ್ಕೆ ನೀರಿನ ಸರಬರಾಜಾಗುತ್ತಿತ್ತಂತೆ. ಯೂಪಾಲಿನಸ್
ಎಂಬ ಎಂಜಿನಿಯರು ಇದನ್ನು ಕಟ್ಟಿಸಿದನಂತೆ.

ರೋಮನ್ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ
ಸುರಂಗ ನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ಪ್ರಗತಿಯಾಯಿತೆನ್ನಬಹುದು.
ಇತ್ತೀಚಿನ ದಿನಗಳಲ್ಲಿ ಎಂಜಿನಿಯರರು ಮಾಡುವಂತೆ ಸಮೀಕ್ಷೆ (ಸರ್ವ),
ನಕ್ಷೆಗಳ ನಿರ್ಮಾಣ ಮತ್ತು ಅಗೆಯುವಿಕೆ ಇವೆಲ್ಲವನ್ನೂ ಪ್ರಾಚೀನ ರೋಮನ್
ಎಂಜಿನಿಯರರೇ ಮಾಡುತ್ತಿದ್ದರೆನ್ನುವುದಕ್ಕೆ ದಾಖಲೆಯಿದೆ. ಪ್ಲಾನು,
ಕತ್ತರಿಸಿದ ಭಾಗದ ದೃಶ್ಯ ಇವುಗಳನ್ನು ತಯಾರಿಸಿದ ನಂತರ ಸುರಂಗದ
ಅಕ್ಷರೇಖೆಯನ್ನು ಭೂಮಿಯ ಮೇಲೆ ಗುರುತಿಸಲಾಗುತ್ತಿತ್ತು. ನಂತರ
ಯೋಜಿತ ಸುರಂಗದ ಎರಡೂ ಕಡೆಗಳಲ್ಲಿ ಕಾರ್ಯಾರಂಭವಾಗುತ್ತಿತ್ತು.
ಹೆಚ್ಚು ಕಡಿಮೆ ಈಗಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ.

ಹೀಗೆ ಎರಡೂ ಕಡೆಗಳಲ್ಲಿ ಪ್ರಾರಂಭವಾದ ಸುರಂಗವು ಮಧ್ಯ ಮಾರ್ಗ~
ದಲ್ಲಿ ಸಂಧಿಸದಿರುವ ಸಾಧ್ಯತೆಯೂ ಇದ್ದು ಅನೇಕ ವೇಳೆ ನಿರಾಶೆಯಾಗು~
ತ್ತಿದ್ದುದ್ದೂ ಉಂಟು.

ಜೇಮ್ಸ್್ವ್ಹಾಟನ ಹಬೆಯಂತ್ರದಿಂದ ಆರಂಭವಾದ ಕೈಗಾರಿಕಾ
ಕ್ರಾಂತಿಯ ಪರಿಣಾಮವಾಗಿ ರೈಲ್ವೆಗಳ ನಿರ್ಮಾಣವಾದ ಮೇಲೆ ಸುರಂಗ
ಮಾರ್ಗಗಳ ಆವಶ್ಯಕತೆ ಈ ದಿಕ್ಕಿನಲ್ಲಿ ಹೆಚ್ಚಾಯಿತು. ಸುಮಾರು ಕ್ರಿ. ಶ.
1830ರಲ್ಲಿ ಇಂಗ್ಲೆಂಡಿನ ಲಿವರ್್ಪೂಲ್-ಮಾಂಚೆಸ್ಟರ್ ರೈಲ್ವೆಯಲ್ಲಿ ಮೊದಲ
ರೈಲ್ವೆ ಸುರಂಗ ಮಾರ್ಗದ ನಿರ್ಮಾಣವಾಯಿತೆನ್ನಲಾಗಿದೆ.

ನಂತರದ ದಿನಗಳಲ್ಲಿ ನದಿಗಳ ಕೆಳಗೆ ಸುರಂಗಗಳನ್ನು ಕೊರೆಯ~
ಲಾಯಿತು. ಇಂತಹವುಗಳಲ್ಲಿ ಇಂಗ್ಲೆಂಡಿನ ಮರ್ಫಿ ರೈಲ್ವೇ ಸುರಂಗ,
ಸೆವರನ್ ಸುರಂಗ ಮುಂತಾದವು ಮೊದಲನೆಯವು. ಥೇಮ್ಸ್ ನದಿಯ
ಕೆಳಗೆ ಕೊರೆದ ಸುರಂಗದ ಇತಿಹಾಸ ನಿಜಕ್ಕೂ ಕುತೂಹಲಕಾರಿ. ಇದಕ್ಕೆ
ಮಾರ್ಕ್ ಇಸಂಬರ್ಡ್ ಬ್ರೂನಲ್ ಎಂಬ ಇಂಜಿ಩ಿಯರನ ಅದ್ಭುತ ಮೇಧಾ~
ಶಕ್ತಿಯೇ ಕಾರಣ.

ಜಲವಾಹಕ ಸುರಂಗಗಳ ನಿರ್ಮಾಣ ಪ್ರಾಚೀನ ಕಾಲದಿಂದ ಇದ್ದರೂ
-154-
ನೆಪೋಲಿಯನ್ನನ ಕಾಲದಲ್ಲಿ (ಕ್ರಿ.ಶ. 1802) ಫ್ರೆಂಚ್ ಇಂಜಿನಿಯರನೊಬ್ಬ
ಇದನ್ನು ಮೊಟ್ಟ ಮೊದಲ ಬಾರಿಗೆ ಶಾಸ್ತ್ರೀಯ ರೀತಿಯಲ್ಲಿ ಅಭ್ಯಾಸಿಸಿ
ಹೊಸ ರೂಪು ಕೊಟ್ಟನೆನ್ನಬಹುದು. ಆದರೂ ಭಾರತದಲ್ಲಿ ಮೊಗಲರ
ಕಾಲದಲ್ಲಿ ದೊಡ್ಡ ದೊಡ್ಡ ಮಹಲುಗಳನ್ನ ತಂಪಾಗಿಸಲು ಇಂತಹ ವಿಧಾನ
ಉಪಯೋಗಿಸುತ್ತಿದ್ದರೆನ್ನಲಾಗಿದೆ.

ಯುದ್ಧ ಕೈದಿಗಳು ಹಲವು ವೇಳೆ ತಮ್ಮನ್ನು ಬಂಧಿಸಿರುವ ಬಂದೀಖಾನೆ~
ಯಿಂದ ಸುರಂಗಗಳನ್ನು ಗುಟ್ಟಾಗಿ ತೋಡಿ ಪಾರಾದ ದಾಖಲೆಗಳಿವೆ. ಇದು
ನಿಜಕ್ಕೂ ಕುತೂಹಲಕಾರಿ. ಹಾಗೆಯೇ ಯುದ್ಧಸಾಮಗ್ರಿಗಳನ್ನು ಶತ್ರುವಿನಿಂದ
ಮುಚ್ಚಿಡಲೋ, ದಾಳಿಯ ಸಮಯದಲ್ಲಿ ಅರಮನೆಯಿಂದ ಪಾರಾಗಲೋ
ಕಟ್ಟುತ಼್ತಿದ್ದ ಸುರಂಗಗಳ ಬಗ್ಗೆಯೂ ತಿಳಿದುಬರುತ್ತದೆ. ಈಗಲೂ
ಹಲವು ಹಳ್ಳಿಗಳಲ್ಲಿ ಆಹಾರ ಧಾನ್ಯಗಳ ಶೇಖರಣೆಗೆ ಕಟ್ಟಿಕೊಳ್ಳುವ "ಹಗೇವು"~
ಗಳನ್ನು ನೋಡಬಹುದು.

ಸುರಂಗ ನಿರ್ಮಾಣ ಕಾರ್ಯದಲ್ಲಿ ಅತಿ ಕಠಿಣವಾದ ಅಡಚಣೆಯೆಂದರೆ
ಭೂಮ್ಯಾಂತರ್ಗತ ಜಲ. ಅಗಮ್ಯ, ಅಪಾರಗಮ್ಯವಾದ ಬಂಡೆಗಳಲ್ಲಿ
ಸುರಂಗಮಾರ್ಗದ ಕಾರ್ಯ ಸುಲಭವಾಗುತ್ತದೆ. ಆದರೆ ಅಂತಹ ಅಪಾರ
ಗಮ್ಯ ಬಂಡೆಯಲ್ಲಾದರೂ ಬಿರುಕು, ಕೊರಕಲುಗಳಿದ್ದರೆ, ನೀರು ಅದರ
ಮೂಲಕ ಸ್ರವಿಸಬಹುದಾದ್ದರಿಂದ ಅವುಗಳನ್ನು ಮುಚ್ಚಲು ತ್ರಾಸಪಡ~
ಬೇಕಾಗುತ್ತದೆ. ಅಂತೆಯೇ ಪ್ರಾಚೀನ ಕಾಲದ ಎಂಜಿನಿಯರರು ಸುರಂಗ
ನಿರ್ಮಾಣಕ್ಕೆ ಯೋಜಿಸುವ ಮೊದಲು ಅಲ್ಲಿನ ಭೂಮಿಯ ಭದ್ರತೆಯನ್ನು
ಪರಿಶೀಲಿಸುತ್ತಿದ್ದಿರಬೇಕು.

ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ನೀರಾವರಿ ಮತ್ತು ಜಲ
ವಿದ್ಯುದುತ್ಪಾದನೆಗಾಗಿ ಭಾರಿ ಭಾರೀ ನದೀ ಯೋಜನೆಗಳಾಗುತ್ತಿರುವುದ~
ರಿಂದ ಇವುಗಳಿಗೆ ಸಂಬಂಧಿಸಿದಂತೆ ಭಾರೀ ಸುರಂಗಮಾರ್ಗಗಳ ನಿರ್ಮಾಣ~
ವಾಗುತ್ತಿದೆ. ಅಂತೆಯೇ ರಸ್ತೆ ಮತ್ತು ರೈಲುಮಾರ್ಗಗಳಿಗೂ, ದೊಡ್ಡ
ದೊಡ್ಡ ನಗರಗಳಲ್ಲಿ ಪಾದಚಾರಿಗಳು ಹೆದ್ವಾರಿಗಳನ್ನು ದಾಟಲೂ ಸುರಂಗಗಳು
ಬೇಕಾಗುತ್ತಿವೆ. ಇವುಗಳ ನಿರ್ಮಾಣ ಸಿವಿಲ್ ಎಂಜಿನಿಯರರಿಗೆ ಒಂದು
ದೊಡ್ಡ ಸವಾಲಿನಂತೆಯೇ, ಅದರಲ್ಲೂ ಹಿಮಾಲಯ ಪರ್ವತ ಪ್ರದೇಶಗಳಲ್ಲಿ
-155-
ನಿರ್ಮಾಣವಾಗುತ್ತಿರುವ ಕೆಲವು ಜಲವಾಹಕ ಸುರಂಗಗಳ ನಿರ್ಮಾಣ ಒಂದು
ಎಂಜಿನಿಯರಿಯ ಅದ್ಭುತವೇ ಸರಿ.

ಮೆದುವಾದ ಮಣ್ಣು ಸುರಂಗವನ್ನು ಕೊರೆಯುತ್ತಿರುವಾಗ ಮೇಲಿ~
ನಿಂದ ಮತ್ತು ಪಾರ್ಶ್ವಗಳಿಂದ ಬೀಳದಂತೆ ತಡೆಯೆವುದಕ್ಕೋಸ್ಕರ ತಡೆಪಟ್ಟಿ~
ಗಳನ್ನು ಕಟ್ಟಿಕೊಳ್ಳುವುದು ಸಾಮಾನ್ಯವಿಧಾನ. ನಂತರ
ಕಾಂಕ್ರೀಟನ್ನು ರಭಸವಾಗಿ ಪಂಪುಗಳ ಮೂಲಕ ಸುರಂಗದ ಮೇಲ್ಮೈಗೆ
ಬಿಡುವುದು ಒಂದು ವಿಧಾನ. ಇದಕ್ಕೆ `ಶಾಟ್್ಕ್ರೀಟು'
ಎನ್ನುತ್ತಾರೆ. ಇದು ಗಟ್ಟಿಯಾದ ನಂತರ ರೂಪಕಟ್ಟು~
ಗಳನ್ನು ತೆಗೆದುಬಿಡುತ್ತಾರೆ.

ಇತ್ತೀಚೆಗೆ ಸುರಂಗವನ್ನು ಅದರ ಪೂರ್ಣರೂಪದಲ್ಲಿ ಕೊರೆಯುವ
ಯಂತ್ರವೊಂದನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ಸಣ್ಣ ತೂತುಗಳನ್ನು
ಮಾಡಿಕೊಂಡು ಹಂತ ಹಂತವಾಗಿ ಅದನ್ನು ದೊಡ್ಡದು ಮಾಡಿ ಸುರಂಗದ
ಪೂರ್ಣರೂಪವನ್ನು ಪಡೆಯುವುದು ಪದ್ಧತಿಯಷ್ಟೆ. ಈ ಯಂತ್ರದಲ್ಲಿ
ಹೀಗಾಗದೇ ಒಂದು ಬಾರಿಗೆ ಸುರಂಗದ ಪೂರ್ಣ ಅಳತೆಯನ್ನು ಪಡೆಯ~
ಬಹುದು. ಇದರಿಂದ ನಿರ್ಮಾಣಕಾರ್ಯಕ್ಕೆ ಬಹು ಅನುಕೂಲವಾಗುತ್ತದೆ.
ಮತ್ತು ವೇಳೆಯು ಕಡಿಮೆ ಹಿಡಿಯುತ್ತದೆ. ಇದೀಗ ಇದನ್ನು ಉತ್ತರ
ಪ್ರದೇಶದ `ಮನೇರಿ ಭಾಲಿ' ಯೋಜನೆಯಲ್ಲಿ ಉಪಯೋಗಿಸುತ್ತಿದ್ದಾರೆ.

ಸುರಂಗಗಳ ನಿರ್ಮಾಣ ದಕ್ಷಿಣ ಭಾರತದಲ್ಲಿರುವ ಗಟ್ಟಿಯಾದ ಪ್ರದೇಶ~
ಗಳಲ್ಲಿ ಅಷ್ಟೇನೂ ಕಷ್ಟವಾಗದಿದ್ದರೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ,
ಮುಖ್ಯವಾಗಿ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ತ್ರಾಸದಾಯಕ
ಸವಾಲಾಗಿಯೇ ಉಳಿದಿದೆಯಾದರೂ ನಮ್ಮ ತಜ್ಞರು ಅನೇಕ ಸುರಂಗಗಳನ್ನು
ಯಶಸ್ವಿಯಾಗಿ ನಿರ್ಮಿಸಿದ್ದಾರೆಂಬುದು ಹೆಮ್ಮೆಯ ವಿಷಯ.
-156-

ಜನಾರೋಗ್ಯ ಎಂಜಿನಿಯರಿಂಗ್

ಮನುಷ್ಯ ಆರೋಗ್ಯವಂತನಾಗಿರಲು ವಾಸಮಾಡುವ ವಾತಾವರಣ
ಮತ್ತು ಕುಡಿಯುವ ನೀರು ಉನ್ನತ ಮಟ್ಟದ್ದಾಗಿರಬೇಕು. ಇದಕ್ಕಾಗಿ
ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ ಜನರಿಂದ ವಿಸರ್ಜಿತವಾದ ಮಲ~
ಮೂತ್ರಗಳ ಸಾಗಾಣಿಕೆಯ ವ್ಯವಸ್ಥೆ. ಇದರ ಜೊತೆಗೆ ಸ್ವಚ್ಛವಾದ ಕುಡಿ~
ಯುವ ನೀರನ್ನು ಒದಗಿಸುವುದು ಅವಶ್ಯಕ.

ಅಂತೆಯೇ ವಾಸಿಸುವ ಮನೆಗಳಿಗೆ ಸಾಕಷ್ಟು, ಗಾಳಿ, ಬೆಳಕು, ನೀರಿನ
ಸರಬರಾಜು ಮತ್ತು ಮಲಮೂತ್ರಗಳ ಸಾಗಾಣಿಕೆಯ ವ್ಯವಸ್ಥೆ ಇರ~
ಬೇಕೆಂಬುದು ಸ್ಪಷ್ಟ. ಇವಕ್ಕೆ ಅನುಕೂಲವಾಗುವಂತೆ ಹಳ್ಳಿ, ಪಟ್ಟಣ ಮತ್ತು
ನಗರಗಳನ್ನು ವೈಜ್ಞಾನಿಕ ರೀತಿಯಲ್ಲಿ ಯೋಜಿಸಿ ಕಟ್ಟುವುದು ಮುಖ್ಯ.

ನಗರ ಯೋಜನೆ: ನಗರ ಯೋಜನೆ ಇನ್ನೂ ನಮ್ಮ ದೇಶದಲ್ಲಿ
ಬೆಳೆಯ ಬೇಕಾಗಿದೆಯಾದರೂ ನಮ್ಮ ಪ್ರಾಚೀನರಿಗೆ ಇದರ ಜ್ಞಾನವಿತ್ತೆಂದು
ಮನಸಾರ, ಶಿಲ್ಪಶಾಸ್ತ್ರ, ವಾಸ್ತುವಿದ್ಯಾಶಾಸ್ತ್ರ ಮತ್ತು ಮಯಮತ
ಮುಂತಾದ ಗ್ರಂಥಗಳಿಂದ ತಿಳಿದುಬರುತ್ತದೆ. ಮತ್ಸ್ಯ, ವಾಯು, ಗರುಡ.
ಸ್ಕಂದ, ದೇವಿ ಪುರಾಣಗಳಲ್ಲೂ, ಕೌಟಿಲ್ಯನ ಅರ್ಥ ಶಾಸ್ತ್ರ, ಶುಕ್ರನೀತಿ,
ನಾರದ ಸೂತ್ರ ಮುಂತಾದ ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ,
ಅನೇಕ ಪ್ರಾಚೀನ ನಗರಗಳ ಹೊರವಲಯ ಚಚ್ಚೌಕದಾಕಾರದಲ್ಲಿರುವುದನ್ನು
ಮನೆಗಳು ಚದುರಂಗದ ಚೌಕಗಳಂತಿರುವುದನ್ನು ಆಧುನಿಕ `ಗ್ರೀಡ್ ಮಾದರಿ'~
ಯನ್ನು ಹೋಲುವ ರಸ್ತೆಗಳನ್ನೂ ನೋಡಬಹುದು. ನಗರ ಯೋಜಕರು
ಮೊದಲು ಮಾಡುತ್ತಿದ್ದ ಕೆಲಸವೇ ಸ್ಥಳ ಪರೀಕ್ಷೆ. ಆರೋಗ್ಯ ರಕ್ಷಣೆಗೆ ಅಗತ್ಯ~
ವಾದ ಚರಂಡಿಗಳ ನಿರ್ಮಾಣ, ಮತ್ತು ನಗರ ರಕ್ಷಣೆ ಕಾರ್ಯಕ್ಕೆ ಬೇಕಾಗುವ
ಕೋಟೆ ಮುಂತಾದ ಸೌಲಭ್ಯಗಳ ನಿರ್ಮಾಣ. ಸಮಚತುರಸ್ರ ಚಚ್ಚೌಕ,
ವರ್ತುಲ ಅಂಡಾಕೃತಿಯ ವಿನ್ಯಾಸಗಳು ಸಾಮಾನ್ಯವಾಗ಼ಿದ್ದವು. ಚಚ್ಚೌಕದ
ನಗರಗಳಲ್ಲಿ ರಾಜನಿಗೆ ಅಭಿವೃದ್ಧಿಯೆಂದೂ, ತ್ರಿಕೋಣಾಕೃತಿಯಲ್ಲಿ ಕಟ್ಟಿದ
-157-
ನಗರ ವಿನಾಶಕಾರಿಯೆಂದೂ, ವೃತ್ತಾಕಾರದಲ್ಲಿರುವ ಪಟ್ಟಣಗಳಲ್ಲಿ ಸಾಂಕ್ರಾ~
ಮಿಕ ರೋಗಗಳ ಭಯವಿರುವುದೆಂದೂ ಆಗಿನ ನಂಬಿಕೆಯಾಗಿತ್ತು. ತಕ್ಷಶಿಲ,
ಮೊಹೆಂಜೋದಾರೋ, ಹರಪ್ಪ, ವಿಜಯನಗರ ಮತ್ತು ಕಾವೇರಿ ಪಟ್ಟಣ
ಪ್ರಾಚೀನ ಯೋಜಿತ ನಗರಗಳಿಗೆ ಉದಾಹರಣೆಗಳು. ಅಂದಿನ ಪ್ರುಮುಖ~
ನಗರ ಯೋಜಕರೆಂದು ಭೃಗು, ಅನಿರುದ್ಧ, ವಸಿಷ್ಠ, ವಿಶ್ವಕರ್ಮ, ಮಯ,
ಶುಕ್ರ, ಬೃಹಸ್ಪತಿ, ವರಾಹಮಿಹಿರ, ಚ್ಯವನ, ಉತ್ಪಲ, ವಾಸ್ತುವಿದ್ಯಾಪತಿ
ಮುಂತಾದವರು. ಆಧುನಿಕ ಕಾಲದಲ್ಲಿ ಸಾಧಾರಣವಾಗಿ ಅನುಸರಿಸಬೇಕಾದ
ಕೆಲವು ನಿಯಮಗಳನ್ನು ಈಗ ವಿವೇಚಿಸೋಣ.

1. ನಗರದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು ಅರ್ಧದಷ್ಟು ಮಾತ್ರ
ಮನೆಗಳಿಗಾಗಿರಬೇಕು.
2. ರಸ್ತೆಗಳಿಗಾಗಿ ಶೇ. 30 ರಿಂದ 40 ರಷ್ಟಿರಬೇಕು.
3. ಆಟದ ಮೈದಾನ+ ಉದ್ಯಾನವನಗಳಿಗೆ ಶೇ. 5 ರಿಂದ 10ರಷ್ಟಿರ~
ಬೇಕು.
4. ಸಾರ್ವಜನಿಕ ಕಟ್ಟಗಳಿಗಾಗಿ ಶೇ. 10 ಱಷ್ಟು, ಸಾಮಾನ್ಯ.
5. ಮಹಡಿ ಮನೆಗಳನ್ನು ಕಟ್ಟುವಾಗ ಮೇಲಿನ ಅಂತಸ್ತುಗಳ
ವಿಸ್ತೀರ್ಣ ಕಡಿಮೆಯಾದರೆ ಗಾಳಿ, ಬೆಳಕುಗಳ ಸಂಚಾರಕ್ಕೆ
ತೊಂದರೆಯಾಗುವುದಿಲ್ಲ.
6. ಸಾರ್ವಜನಿಕ ಪ್ರದೇಶಗಳಲ್ಲಿ ಬೇಕಾದಷ್ಟು ಶೌಚಗೃಹಗಳ
ವ್ಯವಸ್ಥೆ ಇರಬೇಕು.
7. ಕೊಳೆ ನೀರು, ಮಳೆ ನೀರನ್ನು ಸಾಗಿಸಲು ಮತ್ತು ಕಸಕಡ್ಡಿ~
ಗಳನ್ನು ಶೇಖರಿಸಿ ಸಾಗಿಸಲು ಬೇಕಾಗುವ ವ್ಯವಸ್ಥೆಯಿರಬೇಕು.
8. ರಸ್ತೆಗಳು ಅಗಲವಾಗಿಯೂ, ನೀಳವಾಗಿಯೂ ಇರಬೇಕು.
9. ಕುಡಿಯುವ ನೀರಿನ ಸರಬರಾಜಿಗೆ ಬೇಕಾದ ವ್ಯವಸ್ಥೆಯಿರಬೇಕು.

ಹಳ್ಳಿಗಳಲ್ಲಿ ಶೌಚಗೃಹಕ್ಕೆ ಬೇಕಾಗುವ ಅಗೇವು ಕಕ್ಕಸ್ಸು ಅಥವ
ಸೆಪ್ಟಿಕ್ ಟ್ಯಾಂಕುಗಳನ್ನು ಕಟ್ಟುವುದು ಒಳ್ಳೆಯದು. ಜನರು ದನಗಳ ಜೊತೆ
ಸದಾವಾಸ ಮಾಡದೆ ದನದ ಕೊಟ್ಟಿಗೆಯನ್ನು ಮನೆಯ ಹಿಂದೆ ಕಟ್ಟಿಕೊಳ್ಳ~
ಬೇಕು.
-158-

ನೀರು ಸರಬರಾಜು

ಆಧುನಿಕ ಕಾಲದಲ್ಲಿ ನೀರು ಕುಡಿಯುವುದಕ್ಕೆ ಆವಶ್ಯಕವಾಗಿರು~
ವಂತೆಯೇ ಅಡಿಗೆ, ಸ್ನಾನ ಮುಂತಾದವಕ್ಕೂ ಮುಖ್ಯವಾಗಿದೆ. ಜನಜೀವನದ
ಮಟ್ಟವನ್ನು ಜನರು ಉಪಯೋಗಿಸುವ ನೀರಿನ ಪ್ರಮಾಣದಿಂದ ಅಳೆಯು~
ವುದುಂಟು. ಆರೋಗ್ಯ ರಕ್ಷಣೆಗೆ ನೀರು ಶುದ್ಧವಾಗಿರಬೇಕಾದುದು ಅನಿ~
ವಾರ್ಯ. ಸಾರ್ವಜನಿಕರಿಗೆ ಸರಬರಾಜಾಗುವ ನೀರನ್ನು ಒದಗಿಸುವ
ಯೋಜನೆ ಹೇಗಿರಬೇಕೆಂದರೆ :-

1. ನೀರಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿಗಳಿರ~
ಬಾರದು.
2. ನೀರು ಹೊತ್ತು ತರುವ ದೂರ ಕಡಿಮೆಯಿರಬೇಕು.
3. ಪೈಪುಗಳನ್ನು ಹಾಕುವಾಗ ಮುಂದಿನ ಇಪ್ಪತ್ತು ಮೂವತ್ತು
ವರ್ಷಗಳವರೆಗಾದರೂ ಆ ನಗರಕ್ಕೆ ಸಾಕಾಗುವಷ್ಟು ನೀರು
ದೊರೆಯುವಂತಿರಬೇಕು.
4. ಆಳವಾದ ಕೊಳವೆ ಬಾವಿಗಳಿಂದ ಬಂದ ನೀರನ್ನು ಬಿಟ್ಟು
ಮಿಕ್ಕೆಲ್ಲ ನೀರನ್ನು ಶೋಧಿಸಿ, ಕ್ಲೋರಿನ್ ಮೊದಲಾದವುಗಳ
ಜೊತೆ ಬೆರೆಸಿ ಸಾಂಕ್ರಾಮಿಕ ಕ್ರಮಗಳನ್ನು ನಾಶಪಡಿಸಬೇಕು.
ಶುದ್ಧಪಡಿಸಲು `ಸೆಟ್ಲಿಂಗ್ ಟ್ಯಾಂಕು'ಗಳಲ್ಲದೆ `ಫಿಲ್ಟರು'
ಯಂತ್ರಗಳನ್ನು ಉಪಯೋಗಿಸುತ್ತಾರೆ.
5. ನೀರಿನ ಕ್ಷಾರತೆ, ಪಿ.ಹೆಚ್. ಬೆಲೆ, ದ್ರಾವಕತೆ, ಅದರಲ್ಲಿರುವ
ರಾಸಾಯನಿಕ ವಸ್ತುಗಳ ಪ್ರಮಾಣ ಮುಂತಾದವುಗಳನ್ನೆಲ್ಲ
ಪರೀಕ್ಷಿಸಲು ಬೇಕಾದ ಯಂತ್ರೋಪಕರಣಗಳನ್ನುಳ್ಳ ಸಂಶೋ~
ಧನಾಲಯಗಳನ್ನು ಅಲ್ಲಲ್ಲಿ ಸ್ಥಾಪಿಸಿರುವುದು ಸಾಮಾನ್ಯ.

ಒಂದು ಪಟ್ಟಣದ ನೀರಿನ ಸರಬರಾಜು ವ್ಯವಸ್ಥೆಗೆ ಬೇಕಾಗುವ
ಸಾಮಗ್ರಿಗಳೆಂದರೆ:-

1. ಕಬ್ಬಿಣದ ಪೈಪುಗಳು ಮತ್ತು ಅವುಗಳ ಜೋಡಣೆಗೆ ಬೇಕಾಗುವ
ವಿಶೇಷ ಜೋಡಣೆ ಸಾಮಗ್ರಿಗಳು.
2. ನೀರನ್ನೆತ್ತಲು ಬೇಕಾಗುವ ಪಂಪುಗಳು.
-159-
3. ಸಿಮೆಂಟು ಅಥವಾ ಸುಣ್ಣದ ಗಾರೆ ಮತ್ತು ಕಾಂಕ್ರೀಟು.
4. ಇಟ್ಟಿಗೆ.
5. ಉಕ್ಕು.
6. ಪಟಿಕ, ಕ್ಲೋರಿನ್ ಮುಂತಾದ ರಾಸಾಯನಿಕ ವಸ್ತುಗಳು.

ಸರಬರಾಜು ವ್ಯವಸ್ಥೆಗೆ ತಗಲುವ ಒಟ್ಟು ವೆಚ್ಚದಲ್ಲಿ ಸುಮಾರು ಶೇ.
75ರಷ್ಟು ಪೈಪುಗಳಿಗೇ ಆಗುತ್ತವೆ.

ವಿಸರ್ಜಿತ ವಸ್ತುಗಳ ಸಾಗಾಣಿಕೆ

ಶುದ್ಧವಾದ, ಆರೋಗ್ಯಕರವಾದ ವಾತಾವರಣವನ್ನುಂಟುಮಾಡ~
ಬೇಕಾದರೆ ಎಲ್ಲಿಯೂ ಕಸದ ರಾಶಿಯಾಗಲಿ, ಮಲಮೂತ್ರಗಳಾಗಲೀ, ನಿಲ್ಲ~
ಬಾರದೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದಕ್ಕಾಗಿ ಒಳಚರಂಡಿ
ವ್ಯವಸ್ಥೆ ಅತಿ ಉಪಯುಕ್ತವಾಗುತ್ತದೆ.
ಮಳೆನೀರನ್ನು ಒಯ್ಯುವ ಒಳ ಚರಂಡಿ ಮತ್ತು ಮಲಮೂತ್ರಗಳನ್ನು ಸಾಗಿ~
ಸುವ ಚರಂಡಿಗಳು ಪ್ರತ್ಯೇಕವಾಗಿರುವುದು ಒಳ್ಳೆಯದು.

ಹೀಗೆ ಪಟ್ಟಣದಿಂದ ಹೊರಗೆ ತಂದ ಕೊಳಚೆಯನ್ನು ಅಂತಿಮವಾಗಿ
ಎಲ್ಲಿಗೆ ಕಳಿಸಬೇಕು ಎಂಬುದನ್ನು ಸಂದರ್ಭಕ್ಕನುಗುಣವಾಗಿ ತಜ್ಞರು
ನಿರ್ಧರಿಸುತ್ತಾರೆ. ಹತ್ತಿರದ ಸಮುದ್ರಕ್ಕೋ, ಸದಾ ಹರಿಯುವ ಭಾರೀ
ನದಿಗೋ ಇದನ್ನು ಬಿಡುವುದು ಸುಲಭ. ಹೀಗೆ ಬಿಡುವುದಕ್ಕೆ ಮುಂಚೆ
ಗಲೀಜು ನೀರಿನಲ್ಲಿರುವ ಬಟ್ಟೆ, ಕಾಗದ ಕಡ್ಡಿ ಮುಂತಾದವುಗಳನ್ನು ಬೇರ್ಪ~
ಡಿಸಬೇಕು. ಆದರೆ ಸಮುದ್ರ ಅಥವಾ ಭಾರೀ ನದಿಗಳು ಹತ್ತಿರದಲ್ಲಿಲ್ಲದ
ನಗರಗಳಲ್ಲಿ ಈ ವಿಧಾನ ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ವಿಶಾಲವಾದ
ಮೈದಾನದ ಮೇಲೆ ಇದನ್ನು ಬಿಟ್ಟು ಹೀರಿಕೊಳ್ಳುವಂತೆ ಮಾಡುತ್ತಾರೆ.
ಇಂತಹ ನೆಲದಲ್ಲಿ ಹುಲ್ಲುಗಾವಲು, ಅಥವಾ ತೋಟವನ್ನೂ ಬೆಳೆಸುವುದುಂಟು
ಇದಕ್ಕೆ ಬಿಡುವುದಕ್ಕಿಂತ ಮುಂಚೆ ಸೆಟ್ಲಿಂಗ್ ಟ್ಯಾಂಕಿನಲ್ಲಿ ಕೊಂಚ ಹೊತ್ತು
ನಿಲ್ಲಿಸುವುದರಿಂದ ಬಟ್ಟೆ, ಕಸ, ಕಡ್ಡಿ ಮುಂತಾದವುಗಳ ತಳದಲ್ಲಿನಿಲ್ಲುತ್ತವೆ.
ಇದಕ್ಕೆ `ಕ಼ೊಳಚೆಗಸ್ಟು' (ಸ್ಲಡ್ಜ್-ಚರಂಡಿ ರೊಚ್ಚು) ಎನ್ನುತ್ತಾರೆ. ಇದರಿಂದ
ಮೀಥೇನ್ ಅನಿಲವನ್ನು ತೆಗೆದು ಅದನ್ನು ಇಂಧನವಾಗಿ ಉಪಯೋಗಿಸುವ
ಒಂದು ವಿಧಾನವೂ ಇದೆ.
-160-

ಒಳ ಚರಂಡಿ ವ್ಯವಸ್ಥೆ ಇಲ್ಲದಿರುವ ಕಡೆ "ಸೆಪ್ಟಿಕ್ ಟ್ಯಾಂಕು" ಉಪ~
ಯೋಗಿಸುತ್ತಾರೆ. ಈ ಟ್ಯಾಂಕಿಗೆ ಮಲಮೂತ್ರಗಳಿಂದ ಕೂಡಿದ ಗಲೀಜು
ನೀರನ್ನು ಬಿಟ್ಟು ಅಲ್ಲಿರುವ ನೊರಜುಗಲ್ಲಿನ ಮೂಲಕ ಹರಿದು ತಿಳಿಯಾದ
ಮೇಲೆ ನದಿಗೋ, ತೋಟಗಾರಿಕೆಗೋ ಬಿಡಬಹುದು. ಕೊನೆಯಲ್ಲಿ
ಉಳಿಯುವ ಗಸ್ಟನ್ನು ಆಗಾಗ ತೆಗೆದು ಕಾಂಪೋಸ್ಟ ಗೊಬ್ಬರದ ತಯಾರಿಕೆಗೆ
ಉಪಯೋಗಿಸಬಹುದು.

ಕಾಂಪೋಸ್ಟ್ ಗೊಬ್ಬರದ ತಯಾರಿಕೆಯಲ್ಲಿ ಕಸಕಡ್ಡಿಗಳನ್ನು ಗಸ್ಟಿ~
ನೊಂದಿಗೆ ಸೇರಿಸಿ ಭೂಮಿಯಲ್ಲಿ ತೋಡಿದ ಗುಂಡಿಯಲ್ಲಿ ಮುಚ್ಚಿ ಅದರ
ಮೇಲೆ ಮಣ್ಣು ಮುಚ್ಚುತ್ತಾರೆ. ಹೀಗೆ ಸುಮಾರು ಮೂರು ತಿಂಗಳು
ಬಿಟ್ಟರೆ ಗೊಬ್ಬರವಾಗುತ್ತದೆ. ಇಂತಹ ಗುಂಡಿಗಳಲ್ಲಿ ಇಲಿ, ನೊಣಗಳಿಗೆ ಆಸರೆ
ಸಿಕ್ಕರೆ ಅದರಿಂದ ಜನರ ಆರೋಗ್ಯಕ್ಕೆ ಧಕ್ಕೆ ಕಟ್ಟಿಟ್ಟಿದ್ದೇ. ಆದ್ದರಿಂದ ಇಂತಹ
ಗುಂಡಿಗಳು ಹಳ್ಳಿಯಿಂದ ಕೊನೆಯ ಪಕ್ಷ ಒಂದು ಕಿಲೋಮೀಟರು ದೂರ~
ದಲ್ಲಿರುವುದು ಒಳ್ಳೆಯದು.

ಮೇಲೆ ಹೇಳಿದ ಎಲ್ಲ ಅಂಶಗಳಲ್ಲದೆ ಜನಾರೋಗ್ಯಕ್ಕಾಗಿ ಮುಖ್ಯವಾಗಿ
ಗಮನಿಸಬೇಕಾದ ಇತರ ಅಂಶಗಳೆಂದರೆ ಪ್ರಾಣಿವಧೆ, ಮಾಡುವ ಸ್ಥಳಗಳಲ್ಲಿ
ಹೊಟೇಲುಗಳಲ್ಲಿ, ಹಾಲಿನ ಡೈರಿಗಳಲ್ಲಿ, ಆಹಾರ ಪದಾರ್ಥಗಳನ್ನು ಶೇಖಱಿ~
ಸಿಡುವ ಮತ್ತು ಮಾರುವ ಸ್ಥಳಗಳಲ್ಲಿ ಹೆಚ್ಚಿನ ಶ್ರದ್ಧೆಯಿಂದ ವಿಸರ್ಜಿತ~
ವಸ್ತುಗಳ ಸಾಗಾಣಿಕೆಯನ್ನು ನಿರ್ವಹಿಸಬೇಕು. ಪಾಠಶಾಲೆಗಳು, ಜಾತ್ರೆ-
ಸಂತೆಗಳು, ಜನರ ಮನರಂಜನಾ ಗೃಹಗಳು (ನಾಟಕ-ಸಿನಿಮಾ ಮಂದಿರಗಳು)
ಇಲ್ಲೆಲ್ಲ ಸ್ವಚ್ಛತಾ ಕಾರ್ಯ ಮುಖ್ಯ.

ವಾತಾವರಣದ ರಕ್ಷಣೆ

ಕೈಗಾರಿಕೆಗಳಿಂದ ಹೊರಬರುವ ಗಲೀಜು ನೀರು, ನದಿ ಸರೋವರ
ಮತ್ತು ಸಮುದ್ರ ತೀರಗಳಲ್ಲಿ ರಾಸಾಯನಿಕ ವಸ್ತುಗಳಿಂದ ಕಲುಷಿತ~
ಗೊಳಿಸುವುದನ್ನು ತಡೆಗಟ್ಟಬೇಕಾದುದು ಮುಖ್ಯವೇ. ಇಲ್ಲದಿದ್ದರೆ ರಾಸಾ~
ಯನಿಕ ಸಂಯೋಗದಿಂದ ನೀರನ್ನು ಉಪಯೋಗಿಸಿದ, ಪಶು-ಪಕ್ಷಿಗಳಿಗೆ,
ಜನರಿಗೆ ಆರೋಗ್ಯ ಹಾನಿಯಾಗುವುದು ಸಹಜ. ಕೈಗಾರಿಕೆಗಳಿಂದ ವಾತಾವರಣ
-161-
ಕಲುಷಿತಗೊಳ್ಳದಂತೆ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ವಾತಾರವಣದ ನೈರ್ಮಲ್ಯ ರಕ್ಷಣೆ ಜನಾರೋಗ್ಯ
ಎಂಜಿನಿಯರಿಯಲ್ಲಿ ಅತ್ಯಂತೃಮುಖ್ಯವಾದ ಒಂದು ಭಾಗವಾಗಿದೆ. ಅಷ್ಟೇ
ಏಕೆ, ಇಡಿಯ `ಸಿವಿಲ್ ಎಂಜಿನಿಯರಿ' ಯಿಂದಲೇ ಪ್ರತ್ಯೇಕವಾದ ಸ್ಥಾನ
ಪಡೆಯುತ್ತಿದೆ.

ನೀರಿನ ತೊಟ್ಟಿಗಳನ್ನು ಕಟ್ಟುವುದು

ನಗರ, ಪಟ್ಟಣ ಅಥವಾ ಹಳ್ಳಿಗಳಿಗಾಗಿ ನೀರು ಸರಬರಾಜು ಮಾಡಲು
ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ಕಟ್ಟುವುದು ಸಹಜವಷ್ಟೆ.
ಇವುಗಳಿಗೇ ಅಲ್ಲದೆ ಪ್ರತ್ಯೇಕ ಮನೆಗಳ ಉಪಯೋಗಕ್ಕೂ ಒಂದು ಎತ್ತರ~
ವಾದ ಸ್ಥಳದಲ್ಲಿ ನೀರಿನ ಟ್ಯಾಂಕು ಕಟ್ಟಿಕೊಳ್ಳುವುದು ಸಾಮಾನ್ಯವಾದ್ದರಿಂದ
ಅವುಗಳ ನಿರ್ಮಾಣದ ಬಗ್ಗೆ ಒಂದೆರಡು ವಿಶೇಷ, ಅಂಶಗಳನ್ನು ವಿವೇಚಿ~
ಸೋಣ.

ನೀರಿನ ತೊಟ್ಟಿಗಳನ್ನು ಸಾಮಾನ್ಯವಾಗಿ ವರ್ತುಲಾಕಾರವಾಗಿಯೂ,
ಚತುರಸ್ರವಾಗಿಯೂ ಕಟ್ಟುತ್ತಾರೆ. ವರ್ತುಲಾಕಾರವಾಗಿದ್ದರೆ ಅತಿ ಕಡಿಮೆ
ವಸ್ತುಗಳ ಉಪಯೋಗವಾಗಿ ವೆಚ್ಚವೂ ಕಡಿಮೆಯಾಗುತ್ತದೆ. ಆದರೆ ದೀರ್ಘ
ಚತುರಸ್ರಾಕಾರದಲ್ಲಿದ್ದರೆ ಕಡಿಮೆ ಜಾಗ ಬೇಕಾಗುತ್ತದೆ.
ಮತ್ತು ಇದಕ್ಕಾಗಿ ಕಟ್ಟುವ ರೂಪಕಟ್ಟು ಕೂಡ ಸುಲಭ.

ತೊಟ್ಟಿಗಾಗಿ 1:1 1/2: 3 ಪರಿಮಾಣದ ಸಿಮೆಂಟು ಕಾಂಕ್ರೀಟನ್ನು
ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ತೇವ ನಿರೋಧಕ ವಸ್ತುಗಳನ್ನೂ
ಕಾಂಕ್ರೀಟಿನಲ್ಲಿ ಸೇರಿಸುವುದೊಳ್ಳೆಯದು. ತೊಟ್ಟಿಯ ಅಳತೆಯನ್ನು ಈ
ಕೆಳಕಂಡ ನಿಬಂಧನೆಗಳಿಗನುಸಾರವಾಗಿ ನಿರ್ಧರಿಸಬೇಕು.

1. ಪ್ರಬಲಿತ ಕಾಂಕ್ರೀಟಿನ ಗೋಡೆಯ ಗಾತ್ರ [2.5
ಸೆಂ.ಮೀ.+ನೀರಿನ ಆಳ/40] ಇರಬೇಕು. ಆದರೆ ಇದು
10 ಸೆಂ. ಮೀ. ಗಿಂತ ಕಡಿಮೆ ಇರಬಾರದು.
2. ಉಕ್ಕು ಶೇ. 0.6 ರಷ್ಟಕ್ಕಿಂತ ಹೆಚ್ಚಿರಬೇಕು ಮತ್ತು ಉಕ್ಕಿನ
ಸರಳಿನ ಗಾತ್ರ ಅತಿ ಚಿಕ್ಕದಾಗಿರಬೇಕು.
-162-

3. ಶಾಖವನ್ನು ತಡೆಯಲು ಮಣ್ಣಿನಿಂದಾಗಲೀ, ಮರದಿಂದ~
ಲಾಗಲೀ ಮುಚ್ಚಬಹುದು.

4. ತೊಟ್ಟಿಯ ಒಳಮೈ ನಯವಾಗಿರಬೇಕು. ಇಲ್ಲಿಗೆ ತೇವವನ್ನು
ಹೀರದಂತಹ ವಸ್ತುಗ಼಴ನ್ನು ಅಂದರೆ ಚಪ್ಪಟೆ ಹೆಂಚು,
ಡಾಂಬರು ಮುಂತಾದವುಗಳನ್ನು ಬಳಸಬಹುದು.

5. ತೊಟ್ಟಿಯ ಗಾತ್ರ ಈ ಕೆಳಕಂಡಂತೆ ಅವಶ್ಯಕತೆಗನುಗುಣವಾಗಿರ~
ಬೇಕು.

ತೊಟ್ಟಿಯ ವಿಸ್ತೀರ್ಣವನ್ನು ಪಡೆಯಲು ಈ ಸೂತ್ರವನ್ನು ಉಪ~
ಯೋಗಿಸಬಹುದು.

ಸಿಮೆಂಟಿನ ಗಾರೆ (1:6)ಯನ್ನು ಮಾಡುವಾಗ ಸೋಪಿನ ನೀರನ್ನು
ಉಪಯೋಗಿಸಿದ್ದರೆ ನಂತರ ನೀರನ್ನು ಅದು ಬಿಡುವುದಿಲ್ಲವೆಂದು ಈಚಿನ
ಸಂಶೋಧನೆಯಿಂದ ತಿಳಿದುಬಂದಿದೆ.
-163-

ಪ್ರಕೃತಿಯ ವಿಕೋಪ ಪ್ರಕರಣಗಳು
ಮತ್ತು ಉಪಾಯಗಳು

ಭೂಕಂಪಗಳು

ಭೂಕಂಪದ ಹೆಸರೆತ್ತಿದರೆ ಅವರ್ಣನೀಯ ದುಃಖ, ನೋವು ಮತ್ತು
ಭಯ ನಮ್ಮ ಸ್ಮೃತಿಪಟಲಕ್ಕೆ ಬರುತ್ತದೆ. ಅದು ಕೊಯ್ನಾ, ಅಸ್ಸಾಂ,
ಜಪಾನ್, ಇರಾನ್ ಅಥವಾ ಇನ್ನೆಲ್ಲೇ ಆಗಲಿ, ನೂರಾರು ಜನರ ದುರ್ಮರಣ,
ಅಸಂಖ್ಯಾತರಿಗೆ ಮನೆ-ಮಠಗಳ ನಾಶ, ಅಂಗಹೀನತೆ ಉಂಟಾಗುತ್ತದೆ.
ಪ್ರಕೃತಿಯ ಕೋಪದ ಫಲವೋ ಎಂಬಂತಿರುವ ಈ ಭೂಕಂಪಗಳನ್ನು ಮಾನವ
ಇನ್ನೂ ಜಯಿಸಲಾಗಿಲ್ಲ. ಆದರೆ ಅಣುಬಾಂಬು ಮುಂತಾದವುಗಳಂತೆ
ಇವೇನೂ ಹೊಸ ಅನಿಷ್ಟವಲ್ಲ. ವೇದಗಳಂತಹ ಪ್ರಾಚೀನ ಗ್ರಂಥಗಳಲ್ಲಿ
ಇವುಗಳ ವರ್ಣನೆಯಿದೆ.

ಕ್ರಿ.ಶ. 740ರಲ್ಲಿ ನಡೆದ ಭೂಕಂಪದಿಂದ ಕಾನ್್ಸ್ಟಾಂಟಿನೋಪಲ್
ನಗರದ ರಾಜ ಹಾಗೂ ಪ್ರಜೆಗಳು ಹೇಗೆ ತಮ್ಮ ತಮ್ಮ ಹೊಲಗಳಲ್ಲಿ
ಗುಡಾರಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು ಎಂಬುದನ್ನು ಸೆನೆಕ ವರ್ಣಿಸಿ~
ದ್ದಾನೆ. ಶೇಕ್ಸ್್ಪಿಯರ್, ಥಾಮಸ್ ಟ್ವೈನ್ ಮುಂತಾದವರೂ ಇಂತಹ
ಅನೇಕ ಘಟನೆಗಳನ್ನು ವರ್ಣಿಸಿದ್ದಾರೆ.

ಆದರೆ ಹಿಂದಿನ ದಿನಗಳ ಭೂಕಂಪದಲ್ಲೆಲ್ಲ ಅತಿ ಘೋರವಾದದ್ದು
ಪೋರ್ಚುಗಲ್ಲಿನ ಲಿಸ್ಟನ್ ನಗರದ್ದು. ಕ್ರಿ.ಶ.1755ರಲ್ಲಿ ಅಜೋರಿಸ್್ನಿಂದ
ಇಟಲಿಯವರೆಗೂ, ಇಂಗ್ಲೆಂಡಿನಿಂದ ಉತ್ತರ ಆಫ್ರಿಕದವರೆಗೂ ಭೂಮಿ
ನಡುಗಿತು. ಇದರ ಫಲವಾಗಿ ಸುಮಾರು ಮೂವತ್ತು ಸಾವಿರ ಜನರು
ಸತ್ತರೆಂದು ಅಂದಾಜು ಮಾಡಲಾಗಿದೆ. ಗಾಯಗೊಂಡವರೆಷ್ಟು ಮಂದಿಯೋ
ಬಲ್ಲವರಾರು? ಆಶ್ಚರ್ಯ ಹಾಗೂ ಹಾಸ್ಯಾಸ್ಪದ ವಿಷಯವೆಂದರೆ ಸತ್ತವರಲ್ಲಿ
ಬಹುಪಾಲು "ಸಕಲ ಸಂತರ ದಿನಾಚರಣೆ'ಯ (ಆಲ್ ಸೈಂಟ್ಸ್್ಡೇ)
ಅಂಗವಾಗಿ ಚರ್ಚುಗಳಲ್ಲಿ ಪ್ರಾರ್ಥಿಸುತ್ತಿದ್ದಾಗ ಛಾವಣಿಗಳು ಕುಸಿದು
ಸತ್ತವರೇ!
-164-

ಕ್ರಿ.ಶ. 1906ರಲ್ಲಿ ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ
ಭೂಕಂಪದಲ್ಲಿ ಇಪ್ಪತ್ತೆಂಟು ಸಾವಿರ ಮನೆಗಳು ನಾಶವಾಗಿ ಸುಮಾರು
44 ಕೋಟಿ ರೂಪಾಯಿಗಳಷ್ಟು ನಷ್ಟವಾಯಿತು. ಜಗತ್ತಿನ ಇತರ ಅತಿ
ಮುಖ್ಯವಾದ ಭೂಕಂಪಗಳು, ಆಘ್ಘಾನಿಸ್ಥಾನ 1905 ಜುಲೈ 6: ಸಿಸಿಲಿ
1509 ಫೆಬ್ರುವರಿ 25: ಕಛ್, ಭಾರತ 1819 ಜೂನ್ 16: ಚಿಲಿ 1819
ಮತ್ತು 1822: ನ್ಯೂಜಿಲೆಂಡ್ 1848, 1868, 1877, 1955, ಯೊಕೋ~
ಹಾಮ, ಜಪಾನ್ 1880 ಫೆಬ್ರವರಿ 22: ಮಿನೋ-ಓವಾರಿ, ಜಪಾನ್
1891 ಅಕ್ಟೋಬರ್ 28: ಸಾನ್ರಿಕು, ಜಪಾನ್ 1896 ಜೂನ್ 15:
ಅಸ್ಸಾಮ್, ಭಾರತ 1897 ಜೂನ್ 12.

ಕಾಂಗ್ರ, ಭಾರತ 1905 ಏಪ್ರಿಲ್ 4: ಹೋನ್ಷು, ಜಪಾನ್ 1906
ಜನವರಿ 21: ಕ್ಯಾಲಿಫೋಱ್ನಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ 1906
ಏಪ್ರಿಲ್ 18: ಸಿಂಕಿಯಾಂಗ್, ಚೈನ 1906 ಡಿಸೆಂಬರ್ 22: ಮೆಕ್ಸಿಕೊ,
1907 ಏಪ್ರಿಲ್ 15: ಭಾರತದ ನಾನಾ ಪ್ರದೇಶಗಳು 1934 ಜನವರಿ 15:
ಅಸ್ಸಾಮ್, ಭಾರತ 1950 ಆಗಸ್ಟ್ 15; ಇವು ಈ ಶತಮಾನದ
ಪ್ರಮುಖ ಭೂಕಂಪಗಳೆನ್ನಬಹುದು. ಕೊಯ್ನಾ ದುರಂತವಿನ್ನೂ ನಮ್ಮ
ಜ್ಞಾಪಕದಲ್ಲಿ ಹಸಿರಾಗೇ ಇದೆಯಷ್ಟೆ!

ಮೊಟ್ಟ ಮೊದಲು ಭೂಕಂಪಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಗೆ
ತೊಡಗಿದವನು ಐರಿಶ್ ಎಂಜಿನಿಯರ್ ರಾಬಱ್ಟ್ ಮ್ಯಾಲೆಟ್, ಕ್ರಿ.ಶ.
1857ರಲ್ಲಿ ಸಂಭವಿಸಿದ ಇಟಾಲಿಯನ್ ಭೂಂಕಪದಿಂದ ಉಂಟಾದ
ಅನಾಹುತವನ್ನು ವರ್ಣಿಸುವುದರಲ್ಲೇ ಆತನಿಗೆ ತೃಪ್ತಿ ದೊರೆಯದೆ ಭೂಕಂಪ
ತರಂಗಗಳು ಭೂಮಿಯಲ್ಲಿ ಹೇಗೆ ಚಲಿಸುತ್ತವೆ ಎಂಬುದನ್ನು ಹಾರು ಮದ್ದಿನ
(ಗನ್ ಪೌಡರ್) ಸಹಾಯದಿಂದ ಪರೀಕ್ಷಿಸಿದನು. ಹೀಗಾಗಿ ಭೂಕಂಪಶಾಸ್ತ್ರ
(ಸಿಸ್ಮಾಲಜಿ) ಎಂಬ ಪದಕ್ಕೆ ಈತನೇ ಜನಕನೆನ್ನಲೂಬಹುದು.

ಭೂಕಂಪಗಳು ಮಾನವನ ಹತೋಟಿಗೆ ಒಳಪಡದಿದ್ದರೂ ಮಾನವ
ಸೃಷ್ಟಿಸಿದ ಕಟ್ಟಗಳೇ ಅನಾಹುತದಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎನ್ನು~
ವುದು ಖೇದದ ಸಂಗತಿ. ಮನೆಗಳು, ಅಣೆಕಟ್ಟುಗಳು ಮುಂತಾದುವೆಲ್ಲ
ಮಾನವ ತನ್ನ ಹಿತಕ್ಕಾಗಿ ಮಾಡಿಕೊಂಡವೇ. ಆದರೆ ಎಲ್ಲ ಭೂಕಂಪದಲ್ಲಿಯೂ
-165-
ಮನೆಗಳು ಮುರಿದುಬಿದ್ದು, ಕಟ್ಟೆಗಳುರುಳಿ ಪ್ರಾಣಹಾನಿ ಧನಹಾನಿಯಿಂದ
ಆದಷ್ಟು ನಷ್ಟ ಬೇರಾವುದರಿಂದಲೂ ಆಗಿಲ್ಲ.

ಎಂತಹ ಭೂಕಂಪವಾದರೂ ನಾಶವಾಗದಂತಹ ಕಟ್ಟಡಗಳನ್ನು ಇಂದಿನ
ಎಂಜಿನಿಯರರು ಕಟ್ಟಬಲ್ಲರು. ಆದರೆ ಇದಕ್ಕೆ ವಿಪರೀತ ಖರ್ಚು. ಜೊತೆಗೆ
ಇಂತಹ ಕಟ್ಟಡಗಳು ನೋಡಲು ಅಂದವಿರದವುಗಳಾಗುತ್ತವೆ. ಬೇರೆ ದಾರಿ~
ಯೇನು ಎಂಬ ಪ್ರಶ್ನೆಗೆ ಸಧ್ಯಕ್ಕೆ ಸರಿಯಾದ ಉತ್ತರವಿಲ್ಲ. ಆದರೂ ಇಂತಹ
ಸಮಯಗಳಲ್ಲಿ ಕೆಲವು ಸುಲಭೋಪಾಯಗಳನ್ನು ಉಪಯೋಗಿಸಿದರೆ ಅನಾ~
ಹುತಗಳನ್ನು ಬಹುಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

ಇವುಗಳಲ್ಲಿ ಮುಖ್ಯವಾದುದು ಭೂಕಂಪ ಸಂದರ್ಭದಲ್ಲಿ ಭಯ,
ಘಾಬರಿಗಳನ್ನು ತ್ಯಜಿಸಬೇಕು. "ಭೂಕಂಪನವಾದ ಕೂಡಲೇ, ನಾವು
ಒಂದೆಡೆ ನಿಂತು ಒಂದರಿಂದ ನಲವತ್ತರ ವರೆಗೆ ಸಂಖ್ಯೆ ಎಣಿಸಬೇಕು. ನಂತರ
ಏನನ್ನಾದರೂ ಮಾಡಬಹುದು!" ಎಂಬುದು ಡಾ।। ಬೇಲಿ ಎಲ್ಲಿಸ್
ಅಭಿಪ್ರಾಯ.

ಮನೆಗಳಿಂದ ಓಡಾಡಬಾರದೆನ್ನುವುದು ಇನ್ನೊಂದು ಮುಖ್ಯ
ನಿಯಮ. ಬಾಗಿಲವಾಡದಂತಹ ಮನೆಯ ಯಾವುದಾದರೂ ಬಲವಾದ
ಭಾಗದಲ್ಲಾಗಲಿ, ಶಕ್ತಿಯುತವಾದ ಮೇಜಿನ ಕೆಳಗಾಗಲಿ ಆಶ್ರಯ ಪಡೆಯು~
ವುದು ಉತ್ತಮ. ಇದರಿಂದ ಬೀಳುವ ವಸ್ತುಗಳಿಂದ ರಕ್ಷಣೆ ಪಡೆಯ~
ಬಹುದು. ಮುಖ್ಯವಾದ ವಿಷಯವೆಂದರೆ ಮನೆಯ ಒಳಭಾಗಕ್ಕಿಂತ
ಹೊರಗಡೆಯೇ ಹೆಚ್ಚು ವಸ್ತುಗಳು ಬೀಳುವುದು ಸಹಜ.

ಉಕ್ಕಿನ ಚೌಕಟ್ಟಿನಿಂದಾಗಲೀ, ಬಲಪಡಿಸಿದ ಕಾಂಕ್ರೀಟಿನಿಂದಾಗಲೀ,
ಕಟ್ಟಿದ ಕಟ್ಟಡಗಳಲ್ಲಿ ಭೂಕಂಪದ ಭಯ ಸ್ವಲ್ಪ ಕಡಿಮೆ. ಆದರೆ ಇಂತಹ
ಕಟ್ಟಡಗಳಲ್ಲೂ ವಿಂಗಡಣಾ ಗೋಡೆ (ಪಾರ್ಟೆಷನ್ ವಾಲ್ಸ್)ಗಳ ಭಯ~
ವಿದ್ದೇ ಇದೆ.

ಕಟ್ಟಡಗಳು ಲಂಬಕದಂತೆ ಒಂದು ಬಗೆಯ ಚಲನೆ ಹೊಂದಿರುತ್ತವೆ.
ಇದರ ಚಲನಾವೇಗಕ್ಕೆ (ಫ್ರೀಕ್ವೆನ್ಸಿ) ಭೂಕಂಪದ ಚಲನಾವೇಗ ಸಮನಾದರೆ
ಪ್ರತಿ ಕಂಪನ (ರೆಸೋನನ್ಸ್) ವೆಂಬ, ಒಂದು ಬಗೆಯ ಕ್ರಿಯೆಯಿಂದ ಕಟ್ಟಡ
ಬಹು ಹೆಚ್ಚಿನ ಅನಾಹುತಕ್ಕೆ ಸಿಕ್ಕಿಕೊಳ್ಳುತ್ತದೆ. ಆದ್ದರಿಂದ ಕಟ್ಟಡಗಳನ್ನು
-166-
ಕಟ್ಟುವಾಗ ಭೂಕಂಪದ ವೇಗಕ್ಕೆ ಕಟ್ಟಡದ ವೇಗ ಸಮನಾಗುವ ಸ್ಥಿತಿ ಬರದಂತೆ
ಕಟ್ಟಬೇಕಾದುದು ಬಹು ಮುಖ್ಯ ವಿಷಯ. ಇದನ್ನು ಗಮನಿಸಬೇಕಾ~
ದವರು ಎಂಜಿನಿಯರರು. ಈ ಕೆಲಸಕ್ಕೆ "ಭೂಕಂಪಮಾಪಿ" (ಸಿಸ್ಮೋ
ಗ್ರಾಫ್) ಎಂಬ ಸಲಕರಣೆಯೊಂದು ಉಪಯೋಗಕ್ಕೆ ಬರುತ್ತದೆ.

ಕಟ್ಟಡದ ಹದಿ (ಫೌಂಡೇಶನ್)ಯೊಂದು ಮುಖ್ಯ ಭಾಗ. ಇದನ್ನು
ಕಟ್ಟುವಾಗ ಕಲ್ಲಿನ ನೆಲ (ರಾಕ್ ಬೆಡ್)ದ ಮೇಲೆ ಕಟ್ಟಿದರೆ ಉತ್ತಮ.
ಕಟ್ಟಡದ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆ ತರಹೆಯ ಮಣ್ಣಿರುವ ನೆಲದ
ಮೇಲೆ ಕಟ್ಟುವುದು ಅಪಾಯ ಎಂಬುದು ಶತಸಿದ್ಧ. ನೀರ ನೆರೆ ಮರಳಿನ
(ಅಲೂವಿಯಮ್) ಮೇಲೆ ಕಟ್ಟುವ ಕಟ್ಟಡಗಳು ಆಶ್ಚರ್ಯಕರವಾಗಿರುತ್ತವೆ.
ಇವು ಸಣ್ಣ ಸಣ್ಣ ಭೂಕಂಪಗಳನ್ನು ಸಂಪೂರ್ಣವಾಗಿ ನುಂಗಿಕೊಂಡರೆ ದೊಡ್ಡ~
ವನ್ನು ಇನ್ನೂ ದೊಡ್ಡವನ್ನಾಗಿಸುತ್ತವೆ.

ಭೂಕಂಪ ಎಂಜಿನಿಯರಿಂಗ್ ಇನ್ನೂ ಬೆಳೆಯುತ್ತಿರುವ ಶಾಸ್ತ್ರ.
ಅಹಂಕಾರ ಮದದಲ್ಲಿ ಆಕಾಶದಿಂದ ಧುಮುಕಿದ ಗಂಗೆಯನ್ನು ತನ್ನ ಜಟೆಯಲ್ಲಿ
ಗಂಗಾಧರನಂತೆ ಇಂದಿನ ಮಾನವ ಜಲಶಕ್ತಿಯನ್ನು ತನ್ನ ಹತೋಟಿಯಲ್ಲಿಟ್ಟು
ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರೂ ಭೂಕಂಪ ನಿಯಂತ್ರಿಸಲು ಶಕ್ತನಾಗಿಲ್ಲ.
ಆದರೂ ಜಗತ್ತಿನಾದ್ಯಂತ ಈ ವಿಷಯದಲ್ಲಿ ಸಂಶೋಧನೆಗಳು ನಡೆಯುತ್ತಿವೆ.
ಭೂಕಂಪ ಶಕ್ತಿಯನ್ನೂ ನಿಯಂತ್ರಿಸಿ ಅದನ್ನೇ ಮಾನವನ ಪ್ರಗತಿ ಕಾರ್ಯಕ್ಕೆ
ಸಹಾಯಕವಾಗುವಂತೆ ಮಾಡಿಕೊಂಡರೆ ಅದೊಂದು ಅದ್ಭುತ! ಆ ದಿನವೂ
ಬಹಳ ದೂರವಿಲ್ಲ.

ಪ್ರವಾಹಗಳು

"ನೀರಿಗಿಂತ ಮೃದುವಾದ ವಸ್ತುವಿಲ್ಲ. ಆದರೆ ಅದಕ್ಕಿಂತ ಬಲಯುತ~
ವಾದುದೂ ಇಲ್ಲ" ಎಂಬ ಮಾತು ಅಕ್ಷರಶಃ ಸತ್ಯವಾದ ವಿಷಯ.

ಅನಾದಿ ಕಾಲದಿಂದಲೂ ಪ್ರವಾಹದ ಹಾವಳಿಯಿಂದ ಮಾನವ
ಜನಾಂಗ ಕಷ್ಟನಷ್ಟಗಳನ್ನು ಅನುಭವಿಸುತ್ತಲೇ ಬಂದಿದೆ. ಉತ್ತರ ಪ್ರದೇಶ,
ಬಿಹಾರ, ಪಂಜಾಬು, ಪಶ್ಚಿಮ ಬಂಗಾಳ, ಒರಿಸ್ಸಾ, ಆಂಧ್ರಪ್ರದೇಶ, ಜಮ್ಮು
ಮತ್ತು ಕಾಶ್ಮೀರಗಳಲ್ಲಿ ಪ್ರತಿವರ್ಷ ಪ್ರವಾಹದ ಹಾವಳಿ ಇದ್ದೇ ಇರುವುದೆನ್ನ~
ಬಹುದು. ಉತ್ತರ ಪ್ರದೇಶದಲ್ಲಿ ಪ್ರವಾಹದ ಹಾವಳಿ ಹೆಚ್ಚು.
-167-

ಪ್ರವಾಹದಿಂದ ಅತಿ ಹೆಚ್ಚು ನಾಶವಾಗುವುದು ಕೃಷಿ ಸಂಪತ್ತು.
ಒಟ್ಟು ಉಂಟಾಗುವ ನಷ್ಟದಲ್ಲಿ ಶೇ. 70-80 ರಷ್ಟು ಕೃಷಿ ಉತ್ಪನ್ನಗಳು
಩ಷ್ಟವಾಗುವುವು. ಜನರ ಆಸ್ತಿಪಾಸ್ತಿ ಜಾನುವಾರುಗಳೂ ಕೊಚ್ಚಿಹೋಗು~
ವುವು.

ಮಹಾಪೂರದಿಂದಾಗುವ ಹಾನಿಯನ್ನು ಕೇವಲ ಹಣದಿಂದಲೇ
ಅಳೆಯುವುದು ಶಕ್ಯವಲ್ಲ. ಒಂದು ಸಮೀಕ್ಷೆಯಂತೆ ಪ್ರವಾಹಗಳಿಂದ ಭಾರತ~
ದಲ್ಲಿ 1961ರಲ್ಲಿ ಸುಮಾರು 3,241 ಲಕ್ಷ ರೂ, 1962ರಲ್ಲಿ 9,077 ಲಕ್ಷ
ರೂ, 1963, 64, 65 ಮತ್ತು 66ರಲ್ಲಿ ಕ್ರಮವಾಗಿ 3,808, 6,724,
561 ಮತ್ತು 5000 ಲಕ್ಷ ರೂಪಾಯಿಗಳಷ್ಟು ಹಾನಿಯಾಗಿದೆಯೆಂದು
ಅಂದಾಜು ಮಾಡಲಾಗಿದೆ.

1906ರಲ್ಲಿ ಉತ್ತರ ಪ್ರದೇಶವೊಂದರಲ್ಲೇ ಪ್ರವಾಹದಿಂದ
52,41,223 ಎಕರೆ ಭೂಮಿಯಲ್ಲಿ ಬೆಳೆದಿದ್ದ ಫಸಲು ನಾಶವಾಯಿತಂತೆ!
ಸುಮಾರು 3,115 ಲಕ್ಷರೂ ಬೆಳೆಯೂ ಸುಮಾರು 4,34,565 ಮನೆಗಳೂ
ಹಾಳಾದವು! ಸುಮಾರು 313 ಜನ, 2,715 ದನಗಳೂ ಪ್ರವಾಹದಿಂದ
ಸತ್ತವು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟಾಗಿ ಈ ಪ್ರವಾಹ ಪೀಡೆಯಿಲ್ಲ.
ಆದರೂ 1961 ರಲ್ಲಿ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಮುಂತಾದ
ನದಿಗಳಲ್ಲಿ ಪ್ರವಾಹ ಬಂದು ಸಾಕಷ್ಟು ನಷ್ಟವಾಗಿದೆ.

ಪ್ರವಾಹ ನಿಯಂತ್ರಣ: ಪ್ರಾಚೀನ ಕಾಲದಲ್ಲಿ ಜನರು ತಮ್ಮ
ತಮ್ಮ ಜಮೀನು, ಮನೆಗಳನ್ನು ಪ್ರವಾಹದ ಹಾವಳಿಯಿಂದ ರಕ್ಷಿಸಿಕೊಳ್ಳಲು
ಒಡ್ಡುಗಳನ್ನು ಕಟ್ಟಿಕೊಳ್ಳುತ್ತಿದ್ದರೆಂದು ತಿಳಿದು ಬರುತ್ತದೆ. ಪ್ರತಿಯೊಬ್ಬ
ವ್ಯಕ್ತಿಯೂ ತನಗೆ ಬೇಕಾದಂತೆ ಇವುಗಳನ್ನು ಕಟ್ಟುತ್ತಿದ್ದುದರಿಂದ ಇವು
ಸಾಧಾರಣವಾಗಿ ಅಯೋಜಿತ ಹಾಗೂ ನಿರುಪಯುಕ್ತವಾಗುತ್ತಿದ್ದವು. ನಮ್ಮ
ರಾಷ್ಟ್ರಕ್ಕೆ ಸ್ವಾತಂತ್ರ್ಯ ಬರುವ ಮೊದಲು ದೇಶದಾದ್ಯಂತ ಕೇವಲ ಮೂರು
ಸಾವಿರ ಮೈಲಿ ಉದ್ದದಷ್ಟು ಒಡ್ಡುಗಳಿದ್ದುವೆಂದು ಅಂದಾಜು ಮಾಡಿದ್ದಾರೆ.
ಇದರಲ್ಲಿ ಹೆಚ್ಚು ಭಾಗ ಸ್ವಾತಂತ್ರ್ಯ ಪೂರ್ವದ ಒಂದು ಶತಮಾನದಲ್ಲಿಯೇ
ಕಟ್ಟಿದುದು.
-178-

1872ರಲ್ಲಿಯೇ ಆರ್. ಎನ್. ಱ್ಹಿಂಡ್, ಒರಿಸ್ಸಾ ರಾಜ್ಯದ ಮಹಾ~
ಪೂರಗಳ ಬಗ್ಗೆ ಒಂದು ವರದಿಯನ್ನು ತಯಾರಿಸಿದ್ದಾರಾದರೂ, 1954ರ
ಪ್ರವಾಹದಿಂದಾಗಿಯೇ, ಈ ಪೀಡೆಯ ವಿರುದ್ಧದ ಕಾರ್ಯಕ್ರಮಕ್ಕೆ ಮಹತ್ವ
ದೊರೆಯಿತೆನ್ನಬಹುದು. ಪ್ರವಾಹದ ಹತೋಟಿ ಆಯಾ ರಾಜ್ಯಗಳ
ಜವಾಬ್ದಾರಿಯಾದರೂ ರಾಷ್ಟ್ರದಾದ್ಯಂತ ಒಂದು ವಿವೇಕಯುಕ್ತ ಯೋಜನೆ~
ಯನ್ನು ರೂಪಿಸಲಾಯಿತು. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ
ಪ್ರವಾಹ ನಿಯಂತ್ರಣಕ್ಕೆ 1,315 ಲಕ್ಷ ರೂಪಾಯಿಗಳು ಖರ್ಚಾಗಿದ್ದುದು
ಎರಡನೆಯ ಮತ್ತು ಮೂರನೆಯ ಯೋಜನೆಗಳಲ್ಲಿ 4,712 ಮತ್ತು
8,585 ಲಕ್ಷಗಳಿಗೆ ಏರಿತು.

ಹತೋಟಿ ಕಾರ್ಯಕ್ರಮಗಳಲ್ಲಿ ಅಸ್ಸಾಮಿನ ದಿಬ್ರೂಘರ್ ನಗರದ
ರಕ್ಷಣಾ ಕಾರ್ಯ ಬಹು ಮುಖ್ಯವಾದುದು. 1954ರಲ್ಲಿ ಬ್ರಹ್ಮಪುತ್ರಾ
ನದಿಯ ಪ್ರವಾಹದಿಂದಾಗಿ ನದಿಯ ಮುಖ್ಯಭಾಗದಲ್ಲಿದ್ದ ಸುಮಾರು ಎಂಟು
ಮೈಲಿ ಫಾಸಲೆಯಲ್ಲಿ ಬಹಳ ಕಷ್ಟ ನಷ್ಟವಾಯಿತು. ಪೂರ್ಣ ನಗರಕ್ಕೆ
ಅಪಾಯವೊದಗಿತ್ತು. ಮುಳ್ಳು, ಹಿಮ್ಮಡಿಯಾಕಾರದ ಕಟ್ಟೆಗಳನ್ನೂ ಒಡ್ಡು~
ಗಳನ್ನೂ ಬೇಗ ಕಟ್ಟಲಾಯಿತು. ಇವುಗಳಿಗಾಗಿ ಸುಮಾರು ಮೂರು ಕೋಟಿ
ರೂ. ಖರ್ಚು ಮಾಡಲಾಗಿದೆ.

ಜಲವಿದ್ಯುತ್ ಯೋಜನೆಗಳು: ದಾಮೋದರ್ ಕಣಿವೆಯಿಂದಾಗಿ
ಪಶ್ಚಿಮ ಬಂಗಾಳದ ಆಂಡರ್್ಸನ್ ಅಣೆಕಟ್ಟಿನ ಕೆಳಭಾಗದಲ಼್ಲಿರುವ ಜಮೀನಿನ
ರಕ್ಷಣೆಯಾಗಿದೆ. ಕೋಸಿ ನಿಯಂತ್ರಣ ಯೋಜನೆ ಬಿಹಾರದ ಭಾಗಮತಿ
ಪ್ರವಾಹ ನಿಯಂತ್ರಣ ಕಟ್ಟೆಗಳು, ಹಿರಾಕುಡ್ ಯೋಜನೆ, ಒರಿಸ್ಸಾದ
ದಲೈಗೈ ಯೋಜನೆ, ರಾಜಾಸ್ಥಾನದ ಘಗ್ಗರ್ ಯೋಜನೆ, ಇವು ಕೆಲವು
ಮುಖ್ಯವಾದ ಕಾರ್ಯಗಳು. ಉತ್ತರ ಪ್ರದೇಶದಲ್ಲೂ ಪಂಜಾಬಿನಲ್ಲೂ
ಅನೇಕ ಇತರ ನಿಯಂತ್ರಣ ಕೆಲಸಗಳೂ ನಡೆದಿವೆ. ರಾಷ್ಟ್ರದಾದ್ಯಂತ ಇಂಥ
ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.

ಪ್ರವಾಹ ನಿಯಂತ್ರಣ ಕಾರ್ಯಗಳಲ್ಲಿ ಮಾದರಿಗಳ ಪಾತ್ರ ನಿಜಕ್ಕೂ
ಕುತೂಹಲಕಾರಿ. ಪ್ರವಾಹದ ಅನೇಕ ಚರ್ಯೆಗಳು ಇನ್ನೂ ಸಂಪೂರ್ಣವಾಗಿ
ಸಾಮಾನ್ಯ ವರ್ಗಕ್ಕೆ ಸೇರಿಸುವಷ್ಟು ಮಟ್ಟಿಗೆ ತಿಳಿದಿಲ್ಲ. ಆದ್ದರಿಂದ ಯೋಜಿತ
-169-
ಕಾರ್ಯಗಳನ್ನು ನದಿಯ ಒಂದು ಚಿಕ್ಕ ಮಾದರಿಯಲ್ಲಿ ಮೊದಲು ಪರೀಕ್ಷೆ
ಮಾಡಿ, ಏನಾದರೂ ಹೆಚ್ಚು ಕಡಿಮೆಗಳಾಗಬೇಕಾದರೆ ಅವನ್ನೂ ಮಾಡ~
ಬಹುದು. ಇದರಿಂದಾಗಿ ಅನೇಕ ವೇಳೆ ಎಷ್ಟೋ ಉಳಿತಾಯವಾಗುತ್ತದೆ.
ಇತ್ತೀಚೆಗೆ ವಿಶ್ವದಾದ್ಯಂತ ಇಂತಹ ಮಾದರಿಗಳ ಉಪಯೋಗ ಹೆಚ್ಚಾಗು~
ತ್ತಿದೆ.

ಪ್ರವಾಹಗಳು ಪ್ರಕೃತಿ ವಿಕೋಪದ ಫಲವೋ ಎಂಬಂತೆ ಮಾನವನಿಗೆ
ಅನಾದಿಕಾಲದಿಂದಲೂ ತೊಂದರೆ ಕೊಡುತ್ತಿವೆ. ಆದರೆ ಮಾನವನ ಜೀವನ
ಪ್ರಕೃತಿಯ ಶಕ್ತಿಯನ್ನು ತನ್ನ ಉಪಯೋಗಕ್ಕೆ ಬಳಸಿ ಕೊಳ್ಳುವುದರಲ್ಲಿದ್ದ.
ಆತನ ಬುದ್ಧಶಕ್ತಿ, ಯಾವಾಗಲೂ ಶ್ರಮಿಸುತ್ತಿದೆ. ಇಂದಿನ ಎಂಜಿ಩ಿಯರರು
ತಮ್ಮ ಪ್ರಕೃತಿ ಜ್ಞಾನದಿಂದ ಪ್ರವಾಹವನ್ನು ಮೊದಲೇ ನಿರೀಕ್ಷಿಸುವುದ~
ರಲ್ಲಾಗಲೀ, ಅದನ್ನು ನಿಯಂತ್ರಿಸುವುದರಲ್ಲಾಗಲೀ, ಅದರ ಪ್ರಬಲ ಶಕ್ತಿ~
ಯನ್ನು ಜನತೆಯ ಉಪಕಾರಕ್ಕಾಗಿ ಪರಿವರ್ತಿಸುವುದರಲ್ಲಾಗಲೀ ಹಿಂದುಳಿ~
ದಿಲ್ಲ. ಸಾಕಷ್ಟು ಪರಿಶ್ರಮದಿಂದ ಪ್ರವಾಹದ ಶಾಪವನ್ನು ವರವಾಗಿ
ಪರಿವರ್ತಿಸಿಕೊಳ್ಳಲು ಸಧ್ಯದಲ್ಲೇ ಸಾಧ್ಯವಾಗಬಹುದು.

ಪ್ರವಾಹದ ಮುನ್ಸೂಚನೆ

ಗಂಗೇ ಚ ಯುಮುನೇಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ ಸನ್ನಿದಿಂ ಕುರಂ।।

ಎಂದು ಪ್ರತಿದಿನ ಪ್ರಾರ್ಥಿಸುವ ಭಾರತದಲ್ಲಿ ನೀರಿನ ಅಭಾವದಿಂದ ಹಾಹಾ~
ಕಾರ ಒಂದು ಕಡೆಯಿದ್ದರೆ ಮತ್ತೊಂದೆಡೆಯಲ್ಲಿ ಅದೇ ನೀರು ಬಹು ಜಾಸ್ತಿ~
ಯಾಗಿ ಅಪ್ರತಿಮ ಶೌರ್ಯದಿಂದ ನಾಶಕ್ರಿಯೆಯಲ್ಲಿ ತೊಡಗಿರುವುದು
ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಟ್ಟೆಗಳನ್ನು ಕಟ್ಟುವುದೇ ಮುಂತಾದ
ಕಾರ್ಯಗಳಿಂದ ಮಹಾಪೂರವನ್ನು. ತಡೆಯುವುದು ಸಾಮಾನ್ಯವಾದರೂ
ಭೋರ್ಗರೆದು ಬರುವ ಅಪಾರ ಜಲರಾಶಿಯನ್ನು ನಿಯಂತ್ರಿಸಲು ಅಥವಾ
ಅದಕ್ಕೆ ಅನುವು ಮಾಡಿಕೊಟ್ಟು ಆಗಬಹುದಾದ ದನ, ಜನ, ನಷ್ಟ ಕಡಿಮೆ
ಮಾಡುವುದಕ್ಕಾಗಿ ಬರುತ್ತಿರುವ ಮಹಾಪೂರದ ರೂಪುರೇಷೆಗಳನ್ನು
ಮೊದಲೇ ತಿಳಿದುಕೊಳ್ಳುವುದು ಒಳ್ಳೆಯದು.
-170-

ನದಿ ಉಕ್ಕೇರುತ್ತಿರುವ ಸಮಾಚಾರ ಮೊದಲೇ ತಿಳಿದಾಗ ಅದರ
ಇಕ್ಕೆಲಗಳಲ್ಲೂ ವಾಸಿಸುವ ಜನರು ತಮ್ಮ ಚರ ಆಸ್ತಿಗಳೊಡನೆ ಬೇರೊಂದು
ವಾಸಸ್ಥಳಕ್ಕೆ ಹಂಗಾಮಿಯಾಗಿ ವಲಸೆ ಹೋಗಬಹುದು. ಸ್ಥಿರ ಸ್ವತ್ತುಗಳಿಗೆ
ಹೆಚ್ಚಿನ ನಷ್ಟವಾಗದಂತೆ ಒಂದಿಲ್ಲೊಂದು ಕಾರ್ಯಕ್ರಮ ಕೈಗೊಳ್ಳಬಹುದು.
ಇಷ್ಟೇ ಅಲ್ಲದೆ, ನದಿಯ ಪಾರ್ಶ್ವಗಳಲ್ಲಿ ಕಟ್ಟಿರುವ ಒಡ್ಡುಗಳಿಗೆಲ್ಲಾದರೂ
ದುರಸ್ತಿಕಾರ್ಯ ಬೇಕಾಗಿದ್ದರೆ ತುರ್ತಾಗಿ ನಡೆಸಿಕೊಳ್ಳಬಹುದು. ಕಟ್ಟೆ~
ಗಳಲ್ಲೂ ಹೆಚ್ಚು ನೀರನ್ನು ಹೊರಕ್ಕೆ ಬಿಡಲು ಸಿದ್ಧತೆಗಳನ್ನು ನಡೆಸಿಕೊಂಡಿರ~
ಬಹುದು.

ಹವಾಮಾನದಲ್ಲಾಗುವ ಬದಲಾವಣೆ ವೀಕ್ಷಿಸಿ ಮುಂದಾಗಬಹುದಾದ
ಮಳೆ ಮುಂತಾದವುಗಳನ್ನು ರೇಡಿಯೋಗಳಲ್ಲೂ, ವಾರ್ತಾ ಪತ್ರಿಕೆಗಳಲ್ಲೂ
ತಿಳಿಸಿರುವುದು ಸರ್ವವಿದಿತ. ಇದರಿಂದ ಬರಬಹುದಾದ ಮಹಾಪೂರದ
ಗಾತ್ರವೆಷ್ಟೆಂದು ತಿಳಿಯುವುದಿಲ್ಲವಾದರೂ ಎಲ್ಲೆಲ್ಲಿ ಸುಮಾರು ಎಷ್ಟೆಷ್ಟು
ಮಳೆ ಬರಬಹುದೆಂದು ತಿಳಿಯುತ್ತದೆ.

ಜಾರಿಯಲ್ಲಿರುವ ಮತ್ತೊಂದು ಪದ್ಧತಿಯೆಂದರೆ ನದಿಯ ಮೇಲ್ಭಾಗ~
ದಲ್ಲಿ ಗೊತ್ತಾದ ಕೆಲವೆಡೆಗಳಲ್ಲಿ ವೀಕ್ಷಣಾಲಯಗಳನ್ನು ನಿರ್ಮಿಸಿ, ಅಲ್ಲಿ
ಸತತವಾಗಿ ನೀರಿನ ಮಟ್ಟವನ್ನು ನದಿಯ ಕೆಳಭಾಗದ ಪ್ರದೇಶಗಳಿಗೆ ಸೂಚಿಸು~
ವುದು, ನದಿಯ ನೀರಿನ ಮಟ್ಟ ಏರುತ್ತಿದೆಯೋ, ಅಪಾಯದ ಮಟ್ಟವನ್ನು
ಮೀರಿದೆಯೋ ಇತ್ಯಾದಿ ವಿಷಯಗಳನ್ನು ಮುಖ್ಯವಾದ ಕಡೆಗಳಿಗೆ ಪ್ರವಾಹ
ಬರುವುದಕ್ಕೆ ಮುಂಚೆ ತಂತಿ ಸಂದೇಶದಿಂದಾಗಲೀ, ದೂರವಾಣಿಯಿಂದಾಗಲೀ,
ರೇಡಿಯೋ ತರಂಗಗಳಲ್ಲಾಗಲೀ, ತಿಳಿಸುವುದುಂಟು. ಸಂಬಂಧಪಟ್ಟ ಅಧಿಕಾರಿ~
ಗಳು ಸಾರ್ವಜನಿಕರಿಗೂ ಈ ಸುದ್ಧಿಯನ್ನು ಸಕಾಲಕ್ಕೆ ಮುಟ್ಟಿಸುತ್ತಾರೆ.

ಹಿರಾಕುಡ್, ದಾಮೋದರ್ ಕಣಿವೆ, ಭಾಕ್ರಾ-ನಂಗಲ್ ಮುಂತಾದ
ಅನೇಕ ಕಟ್ಟೆಗಳನ್ನು ಕಟ್ಟಿದ ನಂತರ ಅಲ್ಲಲ್ಲಿ ಮಳೆಯ ಹಾಗೂ ಪ್ರವಾಹದ
ಮಟ್ಟವನ್ನು ಕಟ್ಟೆಯ ಬಳಿ ಇರುವ ಎಂಜಿನಿಯರಿಂಗ್ ಕಛೇರಿಗೆ ಶೀಘ್ರವಾಗಿ
ಸೂಚಿಸುವಂತೆ ಯೋಜಿಸಲಾಗಿದೆ. ನಮ್ಮ ರಾಜ್ಯದ ಕೃಷ್ಣರಾಜಸಾಗರದಲ್ಲೂ
ಇಂತಹ ವಿಧಾನ ಅನುಸರಿಸಲಾಗಿದೆ.

ವೈಜ್ಞಾನಿಕ ರೀತಿಯಲ್ಲಿ ಈ ಕೆಲಸ ಮಾಡುವ ಉದ್ದೇಶದಿಂದ
-171-
ಪ್ರಾಯೋಗಿಕವಾಗಿ ಯಮುನಾನದಿಯ ಜಲಾನಯನ ಪ್ರದೇಶದಲ್ಲಿ ಆಗಿರುವ
ಮಳೆಯ ಬಗ್ಗೆ ಮತ್ತು ಅದೇ ಸಮಯಗಳಲ್ಲಿ ಅಲ್ಲಿ ಬಂದಿರುವ ಪ್ರವಾಹ~
ವನ್ನು ಸಮೀಕ್ಷೆನಡೆಸಲಾಗಿದೆ. ದೆಹಲಿಯ ಬಳಿ ಇರುವ ಓಕ್ಲಾ ಅಣೆಕಟ್ಟು
ಬಹು ಹಳೆಯದಾದ್ದರಿಂದ ಅಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ.
ಇದರಂತೆಯೇ ತಪತಿ, ನರ್ಮದ, ಗಂಗಾ, ಬ್ರಹ್ಮಪುತ್ರ, ಸವರ್ಣರೇಖೆ
ಮುಂತಾದ ನದಿಗಳಲ್ಲೂ ಸಮೀಕ್ಷೆ ನಡೆಸಲಾಗುತ್ತಿದೆ. ಇಂತಹ ಯೋಜನೆ~
ಗಳನ್ನು ಇನ್ನೂ ಅನೇಕ ಇತರ ನದಿಗಳಲ್ಲೂ ರೂಪಿಸಲಾಗುತ್ತಿದೆ.

ಹೀಗೆ ಸಂಗ್ರಹಿಸಿದ ವಿಷಯಗಳನ್ನು ಕೂಲಂಕ಼ುಷವಾಗಿ, ಸಮಗ್ರವಾಗಿ
ಅಭ್ಯಸಿಸಿದಾಗ ಇಂತಿಷ್ಟು ಮಳೆಯಾದಾಗ ಇಂತಿಷ್ಟು ಪ್ರವಾಹ ಬಂದೀತು
ಎಂಬುದನ್ನು ಖಚಿತವಾಗಿ ಕಂಡುಹಿಡಿಯಲು ಸಾಧ್ಯವಾಗಬಹುದು. ಮುಂದೆ
ಇಂತಹ ದಿನ, ಇಂತಿಷ್ಟೇ ಮಳೆಯಾಗುವುದೆಂದು ಅರಿಯಲು ಹವಾಮಾನ
ವಿಜ್ಞಾನದಿಂದ ಸಾದ್ಯವಾಗುವುದರಿಂದ ಮುಂದೆ ಬರಬಹುದಾದ ಪ್ರವಾಹ~
ವನ್ನು ಮೊದಲೇ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.

ಹೀಗಾದಾಗ ಮಾನವನನ್ನು ಅನಾದಿಕಾಲದಿಂದಲೂ ಆಗಾಗ್ಗೆ ಪೀಡಿಸು~
ತ್ತಿರುವ ಪಿಡುಗು, ಈ ಮಹಾಪೂರವನ್ನು ಅಂಕಿತದಲ್ಲಿಟ್ಟುಕೊಂಡು ಅದನ್ನೇ
ಮಾನವನ ಉಪಯೋಗಕ್ಕೆ ಉಪಯೋಗಿಸಿಕೊಳ್ಳುವುದೂ ಸಾಧ್ಯವಾಗ~
ಬಹುದು.

ಅಣೆಕಟ್ಟುಗಳಲ್ಲಿ ನೀರು ಹೆಚ್ಚಾದಾಗ:

ಭಾರೀ ಅಣೆಕಟ್ಟುಗಳು ತುಂಬಿರುವಾಗ ನದಿಗಳಲ್ಲಿ ಪ್ರವಾಹ ಬಂದರೆ
ಉದ್ಭವಿಸುವ ತೊಂದರೆಗಳು ಅಷ್ಟಾಗಿ ಎಲ್ಲರ ಗಮನಕ್ಕೂ ಬಂದಿಲ್ಲವಾದರೂ
ನೀರಾವರಿ ಹಾಗೂ ಜಲವಿದ್ಯುದ್ಯೋಜನೆಯ ಎಂಜಿನಿಯರರಿಗೆ ಒಂದು ಅತಿ
ಮುಖ್ಯ ಸಮಸ್ಯೆಯಾಗುಳಿದಿದೆ.

ಕಟ್ಟೆಗಳು ನದಿಯಲ್ಲಿ ಹರಿಯುತ್ತಿರುವ ನೀರನ್ನು ಹಿಡಿದಿಟ್ಟುಕೊಂಡು
ಒಮ್ಮೆ ತುಂಬಿಕೊಂಡವೆಂದರೆ ಮುಂದೆ ಹೆಚ್ಚಿಗೆ ಬರುವ ಪ್ರವಾಹವನ್ನು
ಅಡಗಿಸಿಟ್ಟುಕೊಳ್ಳಲಾರವು. ಭೋರ್ಗರೆದು ಮುನ್ನುಗ್ಗುವ ಈ ಅಪಾರ
ಜಲರಾಶಿಯನ್ನು ಹಾಗೆಯೇ ನದಿಯ ಪಾತ್ರಕ್ಕೆ ಬಿಟ್ಟುಬಿಟ್ಟರೆ ದಂಡೆಗಳೆರಡೂ,
-172-
ನದಿಯ ತಳದ ನೆಲವೂ ಕೊಟ್ಟಿಹೋಗುವುದು ಸಹಜ. ಅಲ್ಲದೆ ಇದರಿಂದ
ಕಟ್ಟೆಯ ಅಡಿಪಾಯದಲ್ಲಿ ಒಂದು ದೊಡ್ಡ ಕಂದಕ ಅಥವಾ ಗುಂಡಿಯಾಗಿ
ಅದು ದಿನದಿನಕ್ಕೆ ಮತ್ತಷ್ಟು ದೊಡ್ಡದಾಗುತ್ತಾ ನಡೆದು ಕೊನೆಗೆ ಕಟ್ಟೆಯ
ಅಡಿಪಾಯವನ್ನೇ ಅಪಾಯದಲ್ಲಿ ಸಿಲುಕಿಸುತ್ತದೆ. ಇದು ಹೀಗೆಯೇ ಮುಂದು~
ವರೆದರೆ ಇಡೀ ಕಟ್ಟೆಯೇ ಕೊಚ್ಚಿಹೋಗಬ಼ಹುದು.

ಈ ಸಮಸ್ಯೆಯನ್ನೆದುರಿಸಬೇಕಾದರೆ ಧುಮ್ಮಿಕ್ಕವ ನೀರಿನ ಪ್ರವಾಹದ
ಶಕ್ತಿಯನ್ನೂ ಕಡಿಮೆ ಮಾಡಿ ನದಿಯು ತಡೆದುಕೊಳ್ಳಬಹುದಾದಷ್ಟು ರಭಸ~
ದಿಂದ ನೀರು ಹರಿದು ಹೋಗುವಂತೆ ನಿಯಂತ್ರಿಸಬೇಕು. ಇದಕ್ಕೆ ತಜ್ಞರು
"ಜಲಶಕ್ತಿ ನಿರೋಧಕ"ಗಳನ್ನು
ಯೋಜಿಸುತ್ತಾರೆ. ಇವುಗಳಲ್ಲಿ ಅನೇಕ ವಿಧಗಳಿದ್ದರೂ ಮುಖ್ಯವಾದವು
ಸ್ತಬ್ದ ಬೋಗುಣಿಗಳು ಮತ್ತು ಬಕೆಟ್ಟುಗಳು.

ಸ್ತಬ್ದ ಬೋಗುಣಿಗಳಲ್ಲಿ ರಭಸದಿಂದ ಬೀಳುತ್ತಿರುವ ನೀರು ಒಂದು
ನಿರ್ದಿಷ್ಟ ಪ್ರಮಾಣದಲ್ಲಿ ಹಿಡಿದಿಟ್ಟ ನೀರಿನ ಮೇಲೆ ಬಿದ್ದು ತನ್ನ ಶಕ್ತಿಯನ್ನು
ಕಳೆದುಕೊಳ್ಳುತ್ತದೆ. ಒಂದು ಮಾದರಿಯ ಬಕೆಟ್ಟುಗಳಲ್ಲಿ ನೀರು ತಿರುತಿರುಗಿ
ತನ್ನ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳುತ್ತದೆ. 
ಮತ್ತೊಂದು ಮಾದರಿಯ ಬಕೆಟ್ಟುಗಳು ನೀರನ್ನು ಕಟ್ಟೆಯಿಂದ ಬಹುದೂರ
ಎಸೆಯುತ್ತವೆ.

ಪ್ರತ್ಯೇಕ ಕಟ್ಟೆಯೊಂದಕ್ಕೆ ಬೇಕಾಗುವ ಜಲಶಕ್ತಿ ನಿರೋಧಕವನ್ನು
ಆರಿಸುವಾಗ ಕಟ್ಟೆಯ ಹಾಗೂ ನದಿಯ ಅನೇಕ ಗುಣಗಳನ್ನು ಪರೀಕ್ಷೆ ಮಾಡ~
ಬೇಕಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಮಾದರಿಗಳ ಪರೀಕ್ಷೆ
ಬೇಕಾಗುತ್ತದೆ. ಜಲವಿಜ್ಞಾನಿಗಳು ತಮ್ಮ
ಪುಸ್ತಕಜ್ಞಾನ ಹಾಗೂ ಅನುಭವದಿಂದ ಮಾದರಿಗಳನ್ನುಪಯೋಗಿಸಿ ಯಾವುದೇ
ಕಟ್ಟೆಗೆ ಬೇಕಾಗುವ ಜಲಶಕ್ತಿ ನಿರೋಧಕವನ್ನು ರೂಪಿಸುತ್ತಾರೆ.

ಈಗ ಭಾರತದಲ್ಲಿರುವ ಅನೇಕ ಕಟ್ಟೆಗಳಲ್ಲಿ ಅಳವಡಿಸಿರುವ ನಿಯಂತ್ರ~
ಣೋಪಕರಣಗಳನ್ನು ನೋಡಿದರೆ ಸ್ತಬ್ದ ಬೋಗುಣಿಗಳನ್ನೇ ಬಹು ಹೆಚ್ಚಾಗಿ
ಉಪಯೋಗಿಸಿರುವುದು ಕಂಡುಬರುತ್ತದೆ. ಮಣಿಮುತ್ತಾರ್, ಸಾತನೂರು,
-173-
ಪೈಕಾರ, ತುಂಗಭದ್ರ, ಭದ್ರಾ, ಮಲಪ್ರಭಾ, ಘಟಪ್ರಭಾ, ಅಮರಾವತಿ,
ಗಂಡಿಕೋಟಾ ಮುಂತಾದ ಕಟ್ಟೆಗಳು ಇದಕ್ಕೆ ಉದಾಹರಣೆಗಳು. ಬಕೆಟ್ಟಿ~
ನಂತಹ ನಿರೋಧಕವನ್ನು ಶರಾವತಿ ಯೋಜನೆಯ ಲಿಂಗನಮಕ್ಕಿ ಕಟ್ಟೆ.
ನುಗು, ಮಲಂಪುಳಾ, ಮೈಥಾನ್ ಮೊದಲಾದ ಕಟ್ಟೆಗಳಲ್ಲಿ ಅಳವಡಿಸಲಾಗಿದೆ.

ಈ ಜಲಶಕ್ತಿ ನಿರೋಧಕಗಳ ಬಗ್ಗೆ ಹೆಚ್ಚು ಗೊತ್ತಿಲ್ಲದ ಹಳೆಯ
ಕ಼ಾಲದಲ್ಲಿ ಕಾಂಕ್ರೀಟಿನಲ್ಲಿ ಅಥವಾ ಕಲ್ಲಿನಲ್ಲಿ ಇಳಿಜಾರಾದ ನೆಲವನ್ನು
ನಿರ್ಮಿಸಿ ನೀರನ್ನು ಹರಿಯಲು ಬಿಡುತ್ತಿದ್ದರು.
ಕೃಷ್ಣರಾಜಸಾಗರ, ಬೈರಮಂಗಲ, ಅಂಜನಾಪುರ ಮುಂತಾದ ಹಳೆಯ ಕಟ್ಟೆ~
ಗಳಲ್ಲಿ ಇದನ್ನು ಉಪಯೋಗಿಸಲಾಗಿದೆ.

ಮೇಲೆ ಹೇಳಿದ ಯಾವುದೇ ಒಂದು ವಿಧಾನವನ್ನು ಕೆಲವೊಮ್ಮೆ
ಉಪಯೋಗಿಸಲಾಗುವುದಿಲ್ಲ. ಅಂತಹ ವೇಳೆಯಲ್ಲಿ ಆ ಕಟ್ಟೆಗೆಂದೇ ಒಂದು
ವಿಶೇಷ ಮಾದರಿಯನ್ನು ರೂಪಿಸಲಾಗುತ್ತದೆ. ಭಾಕ್ರಾ ಕಟ್ಟೆಯಲ್ಲಿ ಕೋಡಿಯ
ಕೊನೆಗೂ ಸ್ತಬ್ದ ಬೋಗುಣಿಯ ಮೊದಲಿಗೂ ಮಧ್ಯದಲ್ಲಿ ಒಂದು ವಿರುದ್ಧ
ಬಾಗಿನ ಫಿಲೆಟ್ ನಿಱ್ಮಿಸಲಾಗಿದೆ.
ದಾಮೋದರ್ ನಾಲೆಯ ಇಳಿತದಲ್ಲಿ ಒಂದು ಗೋಡೆ~
ಯನ್ನು ಕೋಡಿಯಿಂದ ಸುಮಾರು 14 ಅಡಿ ದೂರದಲ್ಲಿ ಕಟ್ಟಲಾಗಿದೆ.
ಕೋಯಿಲ್ ಸಾಗರದ ಕಟ್ಟೆಯಲ್ಲಿ "ಅಂತರಕ್ರಿಯಾ ನಿರೋಧಕ"~
ವೆಂಬ ನವೀನ ಬಗೆಯನ್ನು ಅಳವಡಿಸ~
ಲಾಗಿದೆ. ಬೊಂಬಾಯಿ ನಗರದ ಹತ್ತಿರವಿರುವ ವೈತರಣಾ ಕಟ್ಟೆಯಲ್ಲಿ
ಸೀಳುಮಾದರಿಯ ಬಕೆಟ್ಟನ್ನು ಉಪ~
ಯೋಗಿಸಲಾಗಿದೆ.

ವ್ಯರ್ಥವಾಗಿ ಕಟ್ಟೆಯಿಂದ ಹೊರ ಹೋಗುವ ನೀರಿನ ವಿತರಣೆಯಲ್ಲಿ
ಒಂದು ಯೋಜನೆಯಲ್ಲೇ ಬಹು ಹೆಚ್ಚಿನ ಹಣ ಖರ್ಚಾಗುವುದಲ್ಲದೆ ಅದು
ಎಂಜಿನಿಯರರ ತಾಂತ್ರಿಕ ಜ್ಞಾನಕ್ಕೊಂದು ಸವಾಲಾಗುತ್ತದೆ. ದಿನದಿನಕ್ಕೆ ಈ
ದಿಸೆಯಲ್ಲಿ ಜ್ಞಾನ ಸಂಪಾದನೆ ಹೆಚ್ಚುತ್ತಿದೆಯಾದರೂ ಮಾನವ ಇದರ ಬಗ್ಗೆ
ಎಲ್ಲವನ್ನೂ ತಿಳಿದುಕೊಂಡಿಲ್ಲವೆಂಬುದು ಸತ್ಯ. ವಿಶ್ವದಾದ್ಯಂತ ಜಲವಿಜ್ಞಾನಿ~
ಗಳು ತೀವ್ರ ಸಂಶೋಧನೆಯಲ್ಲಿ ತೊಡಗಿದ್ದಾರೆಂಬುದು ಸಮಾಧಾನದ
-174-
ವಿಷಯ. ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಇರುವ ನೀರಾವರಿ
ಸಂಶೋಧನಾಲಯಗಳಲ್ಲೂ ಇಂತಹ ಕೆಲಸ ನಡೆಯುತ್ತಿದೆ.

ಮಾದರಿಗಳ ಪಾತ್ರ: 
ಮೊದಲೇ ತಿಳಿಸಿದಂತೆ ನದಿಯಲ್ಲಿ ಬರುವ ಪ್ರವಾಹದ ಲಕ್ಷಣಗಳು,
ಕಟ್ಟೆಯ ಬಳಿ ಇರುವ ಮಣ್ಣಿನ ಲಕ್ಷಣಗಳು, ಕಟ್ಟೆಯ ಪ್ರಾಮುಖ್ಯತೆ
ಮುಂತಾದುವುಗಳನ್ನು ಗಮನದಲ್ಲಿಟ್ಟುಕೊಂಡು ಬೇಕಾಗುವ ಜಲಶಕ್ತಿ
ನಿರೋಧಕವನ್ನು ಕಟ್ಟಬೇಕು. ತಂತ್ರಶಾಸ್ತ್ರ ಬಹುವಾಗಿ ಬೆಳೆದಿದ್ದರೂ ಇಂತಹ
ಸಂದರ್ಭಗಳಲ್ಲಿ ಇಂತಹುದೇ ನಿರೋಧಕವನ್ನು ಉಪಯೋಗಿಸಬೇಕೆಂದು
ಸಾಮಾನ್ಯವಾಗಿ ತಿಳಿಸುವುದು ಅಸಾಧ್ಯ. ಪ್ರಕೃತಿಯ ವೈಚಿತ್ರ್ಯವೆಂದರೆ
ಒಂದೆಡೆ ಇದ್ದ ಲಕ್ಷಣಗಳೇ ಮತ್ತೊಂದೆಡೆ ಇರುವುದಿಲ್ಲವಷ್ಟೆ. ಹೀಗಾಗಿ ಪ್ರತಿ~
ಯೊಂದು ದೊಡ್ಡ ಕಟ್ಟೆಯನ್ನು ಕಟ್ಟುವಾಗಲೂ ತಮ್ಮ ಊಹೆಯ ಮತ್ತು
ಸಾಮಾನ್ಯ ನಿಯಮಗಳ ಮೇರೆಗೆ ಒಂದು ಸಾಮಾನ್ಯ ಯೋಜನೆಯನ್ನು ಹಾಕಿ~
ಕೊಂಡು ಅದರಂತೆಯೇ ಒಂದು ಚಿಕ್ಕ ಮಾದರಿಯನ್ನು ತಜ್ಞರು ಕಟ್ಟುತ್ತಾರೆ.
ಈ ಮಾದರಿ ಕಟ್ಟೆಗೆ ತಕ್ಕಷ್ಟು ನೀರನ್ನು ಹಾಯಿಸಿ ಉಂಟಾಗಬಹುದಾದ
ತೊಂದರೆಗಳೇನು ಎಂಬುದನ್ನು ಪರಿಶೀಲಿಸುತ್ತಾರೆ. ಬೇಕಾದಲ್ಲಿ ಸೂಕ್ತ
ಬದಲಾವಣೆ ಮಾಡುತ್ತಾರೆ. ಇದನ್ನು ಮತ್ತೆ ಮತ್ತೆ ಮಾದರಿಯಲ್ಲಿ ಪರೀಕ್ಷಿಸು~
ತ್ತಾರೆ. ಎಲ್ಲ ದೃಷ್ಟಿಯಿಂದಲೂ ಸರಿಕಂಡು ಬರುವವರೆಗೆ ಪರೀಕ್ಷಿಸಿ
ಕಟ್ಟೆಯನ್ನು ಹೇಗೆ ಕಟ್ಟಬೇಕು ಎಂಬುದನ್ನು ನಿರ್ಧಿರಿಸುತ್ತಾರೆ.

ದೊರೆತಿರುವ ಪುರಾವೆಗಳಿಂದ ನಮಗೆ ತಿಳಿದು ಬಂದಿರುವ ಅಂಶ~
ವೆಂದರೆ ಈ ಬಗೆಯ ಮಾದರಿಗಳ ಪ್ರಯೋಗದಿಂದ ಅನೇಕಬಾರಿ ಲಕ್ಷಾಂತರ
ರೂಪಾಯಿಗಳ ಲಾಭವಾಗುತ್ತದೆ. ಕೆಲವು ವೇಳ ಈ ಪರೀಕ್ಷೆಯಿಲ್ಲದೆ
ನಡೆಸಿದ ಕಟ್ಟಡಗಳು ನಾಶವಾಗುವುದೂ ಸಾಧ್ಯ. ಮಾದರಿಗಳ ಮಹತ್ವವನ್ನು
ಈಗ ವಿಶ್ವದಾದ್ಯಂತ ಎಲ್ಲ ತಜ್ಞರೂ ಒಪ್ಪುತ್ತಾರೆ. ಇದಕ್ಕೆ ಬೇಕಾದ
ಸಂಶೋಧನಾ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ನಮ್ಮ ರಾಜ್ಯದ
ಕೃಷ್ಣರಾಜಸಾಗರದಲ್ಲೂ ಇಂತಹ ಒಂದು ಕೇಂದ್ರವಿದೆ.
-175-

ಕರ್ನಾಟಕದ ಕೊಡುಗೆ ಸುಳಿ ಇಳಿಗೊಳವೆ:

ಮಹಾ ಮೇಧಾವಿ. ಅಪ್ರತಿಮ ಸಾಹಸಿ, ಅದ್ವಿತೀಯ ಎಂಜಿನಿಯರ್,
ರಾಜತಂತ್ರಜ್ಞ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ನೀಲಿ~
ಯಾಕಾಶದಲ್ಲಿ ಪ್ರಜ್ವಲಿಸುವ ದಿನಕರನಂತೆ ಸರ್ವರಿಗೂ ಸುಪರಿಚಿತರೇ ಸರಿ.
ಅಂತೆಯೇ ಅವರು ರೂಪಿಸಿದ ಅನೇಕ ಕೈಗಾರಿಕೆಗಳು, ಸೌಲಭ್ಯಗಳೂ ಚಿರ~
ಪರಿಚಿತ. ಕನ್ನಂಬಾಡಿಯ ಕಟ್ಟೆಯಲ್ಲಿ ಅವರು ರೂಪಿಸಿದ ಸ್ವಯಂಚಾಲಿತ
ಬಾಗಿಲುಗಳನ್ನು ಈಗಲೂ ನೋಡಬಹುದು.
ಇಂತಹ ಸುಪ್ರಸಿದ್ಧ ಪುರುಷರ ಬಗ್ಗೆ ಇಲ್ಲಿ ಬರೆಯುವುದು ಅನವಶ್ಯಕವೇ.

ಆದರೆ ಎಲೆಯ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿದ
ಮತ್ತೊಬ್ಬ ಪ್ರತಿಭಾಶಾಲಿ ಎಂಜಿನಿಯರಿಗೆ ಕರ್ನಾಟದ ಜನ್ಮವಿತ್ತಿದೆಯೆಂದು
ಅನೇಕರಿಗೆ ತಿಳಿದಿರಲಾರದು. ಮೈಸೂರು ರಾಜ್ಯದ ಲೋಕೋಪಯೋಗೀ
ಇಲಾಖೆಯಲ್ಲಿ ಸೇವೆ ಸಲ್ಲಿಸಿದ ದಿವಂಗತ ವಿ. ಗಣೇಶ ಅಯ್ಯರ್ ಅವರೇ
ಆ ಮಹನೀಯರು. ಅವರಿಗೆ ಈಗಿನ ಕರ್ನಾಟಕ ಇಂಜಿನಿಯರಿಂಗ್
ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಕೀರ್ತಿ ಸಲ್ಲುತ್ತದೆ. ಅವರು
ರೂಪಿಸಿದ ಉಪಕರಣವೇ `ಸುಳಿ ಇಳಿಗೊಳವೆ'

ಕ್ರಿ.ಶ. 1866ರಲ್ಲಿ ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ ಇಳಿ~
ಗ಼ೊಳವೆ (ಸೈಫನ್)ಯನ್ನು ಉಪಯೋಗಿಸಿಕೊಂಡು ಕಟ್ಟೆಗಳಿಂದ ಹೆಚ್ಚಾದ
ನೀರನ್ನು ಹೊರಗೆ ಸಾಗಿಸಲು ಸ್ವಯಂಚಾಲಿತ ನಿಯಂತ್ರಣವೊಂದನ್ನು
ಉಪಯೋಗಿಸಲಾಯಿತು. ಇದರಿಂದ ಮಾನವ ಸಹಜ ಲೋಪಗಳನ್ನು
ದೂರೀಕರಿಸುವುದು ಸಾಧ್ಯವಾಯಿತು. ಬೇಕಾದ ಮಟ್ಟಕ್ಕಿಂತ ನೀರು
ಹೆಚ್ಚಾದಾಗ ಇಳಿಗೊಳವೆಯೊಳಗೆ ನೀರು ಇಳಿದು ಗಾಳಿಯ ಚಲನೆಯನ್ನು
ತಡೆಗಟ್ಟುವುದರಿಂದ ನೀರು ರಭಸವಾಗಿ ಎಳೆಯಲ್ಪಡುತ್ತದೆ. ಮತ್ತೆ ನೀರಿನ
ಮಟ್ಟ ಕಡಿಮೆಯಾದಾಗ ಗಾಳಿಯ ಚಲನೆ ಪ್ರಾರಂಭವಾಗುವುದರಿಂದ
ಮುಂದೆ ನೀರು ಹರಿಯುವುದಿಲ್ಲ.

ಭಾರತದಲ್ಲಿ 1921ರಲ್ಲಿ ಇಂಡೋರ್ ನಗರದ ಬಳಿ ಕಟ್ಟಲಾದ
ಯಶವಂತ ಸಾಗರ ಜಲಾಶಯದಲ್ಲಿ ಈ ವಿಧಾನವನ್ನು ಮೊದಲಬಾರಿಗೆ
-176-
ಅಳವಡಿಸಲಾಯಿತು. ಸೆಕೆಂಡಿಗೆ 80,000 ಘನ ಅಡಿ ಪ್ರವಾಹ~
ಕ್ಕಾಗಿ 34 ಇಳಿಗೊಳವೆಗಳನ್ನು ಕಟ್ಟಲಾಗಿದೆ.

ಈ ವಿಧಾನವನ್ನು ಗಾಳಿಯ ಉಚ್ಛಾಟನೆ ಸರಾಗವಾಗಿ
ಮತ್ತು ಯಶಸ್ವಿಯಾಗಿ ನಡೆಯುವುದಿಲ್ಲವೆಂಬುದೊಂದು ಅನಾನು~
ಕೂಲತೆಯಾಗಿತ್ತು. ಇದನ್ನು ನಿವಾರಿಸಲು ಮೈಸೂರು ಲೋಕೋಪಯೋಗಿ
ಇಲಾಖೆಯ ಶ್ರೀ ಗಣೇಶ ಅಯ್ಯರರು ಪ್ರಯತ್ನಿಸಿದರು. ಮುಖ್ಯವಾಗಿ
ಇದಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಎಂಜಿನಿಯರಿಂಗ್ ಪ್ರಯೋಗಾಲಯ~
ವೊಂದನ್ನು ಸ್ಥಾಪಿಸಲು ಕಾರಣಕರ್ತರಾದರು.

ನದಿಗಳಲ್ಲಿ ಅಲ್ಲಲ್ಲಿ ಚಲಿಸುವ `ಸುಳಿ'ಗಳಿಂದ
ಪ್ರೇರಿತವಾಗಿ ಇಳಿಗೊಳವೆಗಳಲ್ಲಿ ಇಂತಹ ಸುಳಿಗಳ ನಿರ್ಮಾಣ ಮಾಡಿದರು.
1933-34ರಲ್ಲಿ ಸಣ್ಣ ಪ್ರಮಾಣದ ಮಾದರಿಗಳ ಕಾರ್ಯ
ವಿಧಾನದಿಂದ ಉತ್ತೇಜಿತರಾದ ಅಂದಿನ ಮುಖ್ಯ ಎಂಜಿನಿಯರ್ ಎನ್. ಎನ್.
ಅಯ್ಯಂಗಾರ್ಯರು ಮಂಡ್ಯ ಜಿಲ್ಲೆಯ ಕೆರೆಯೊಂದಕ್ಕೆ ಈ ಹೊಸ ಸಲಕರಣೆ~
ಯನ್ನು ಅಳವಡಿಸಲು ಆಜ್ಞೆ ಮಾಡಿದರು. ನಂತರ ಮಾರ್ಕೋನ ಹಳ್ಳಿ
ಜಲಾಶಯದಲ್ಲೂ ಇಂತಹುದೇ ಇಳಿಗೊಳವೆಯನ್ನು ಕಟ್ಟಿದರು.

1940ರಲ್ಲಿ ಒಂದು ಪ್ರವಾಹವನ್ನು ನಿಯಂತ್ರಿಸುವಲ್ಲಿ ಬೇಕಾದ
ಮಟ್ಟಕ್ಕಿಂತ ಕೇವಲ 8 ಅಂಗುಲ ಹೆಚ್ಚಳದಲ್ಲಿ ಪ್ರವಾಹದ ನೀರು ಕೊಳವೆಗಳಲ್ಲಿ
-177-
ದೂರ ಹೋದುದನ್ನು ನೋಡಿ ಮತ್ತೂ ಧೈರ್ಯಗೊಂಡು ಶರಾವತೀ
ನದಿಗೆ ಅಡ್ಡಲಾಗಿ ಕಟ್ಟಿದ ಹಿಲೇಭಾಸ್ಕರ ಜಲಾಶಯದಲ್ಲೂ ಇದನ್ನೇ
ಅಳವಡಿಸಿದರು. ನಂತರದ ದಿನಗಳಲ್ಲಿ ಕಣವ ಮುಂತಾದ ಜಲಾಶಯಗಳಲ್ಲೂ
ಇದನ್ನು ಉಪಯೋಗಿಸಿದ್ದಾರೆ.

ವಿಶ್ವದ ಇತರ ರಾಷ್ಟ್ರಗ಴ಲ್ಲೂ ಇಂತಹ "ಸುಳಿಗೊಳವೆ"~
ಗಳನ್ನು ಕಟ್ಟಿದ್ದಾರೆ. ಇಟಲಿಯ ಮೋಲಾರೆ, ಬಹಾನಾ
ಜಲಾಶಯಗಳು, ಫ್ರಾನ್ಸ್ ದೇಶದ ಚಾಟಿಲ್ ಮಾಂಟೆಗೊ ಜಲಾಶಯ,
ಇಂಗ್ಲೆಂಡಿನ ಲಗ್ಗಾನ್ ಜಲಾಶಯ, ಸ್ಪೇಯಿನ್ ದೇಶದ ಕಾಲಾ ಜಲಾಶಯ
ಮತ್ತು ಅಮೇರಿಕೆಯ ಸಂಯುಕ್ತ ಸಂಸ್ಥಾನದ ಹೆಚ್. ಹೆಚ್. ಜಲಾಶಯ
ಮುಂತಾದುವು ಕೆಲವು ಉದಾಹರಣೆಗಳು.

ಈ ಸುಳಿ ಇಳಿಗೊಳವೆಯಲ್ಲಿ ಇನ್ನೂ ಹಲಕೆಲವು ತೊಂದರೆಗಳಿದ್ದು
ವಿಶ್ವದಾದ್ಯಂತ ಅನೇಕ ಸಂಶೋಧನಾಲಯಗಳಲ್ಲಿ ಸತತವಾಗಿ ಸಂಶೋಧನೆ~
ಗಳು ನಡೆಯುತ್ತಿದೆಯಾದರೂ ಇದರ ಮಹತ್ವವನ್ನು ಎಲ್ಲರೂ ಮನಗಂಡಿ~
ದ್ದಾರೆ.
﻿
ಪಿ. ರಾಧಾ ಮತ್ತು ಪಿ. ಗೀತಾ
03-05-21
Kannada
-1-

ಪರಿಮಳ ಗೈಡ
to
ಭೋಗೋಲ ಬೋಧನೆ
for
(B. Ed. as per new Syllabus)

ಪ್ರಶ್ನೆ. 1. ಭೂಗೋಲ ಎಂದರೇನು ಹೇಳಿ, ಅದರಲ್ಲಿ ಅಡಕವಾಗಿರುವ ವಿಷಯಗಳ
ಕುರಿತು ಚರ್ಚಿಸಿರಿ. (ವಿವಿಧ ವಾಖ್ಯೆಗಳನ್ನು ಕುರಿತು ಚರ್ಚಿಸಿರಿ)

ಉತ್ತರ :- ಭೂಗೋಲ ಇದು ಒಂದು ಸಾಮಾಜಿಕ ವಿಜ್ಞಾನವಾಗಿದ್ದು, ವಿಜ್ಞಾ~
ನದ ಭಾಗದಂತೆ ಪರಿವರ್ತನೆ ಹೊಂದುತ್ತಿರುವ ವಿಷಯವಾಗಿದೆ. ಪ್ರಕೃತಿಯ
ಕೊಡುಗೆಯಾದ ಮಾನವನು ನಿರಂತರ ಬದಲಾವಣೆ ಹೊಂದುತ್ತಿರುವುದರಿಂದ, ಅವ~
ನಿಗೆ ಸಂಬಂಧಿಸಿದ ಭೂಗೋಲವು ಬದಲಾವಣೆಗಳನ್ನು ಹೊಂದುತ್ತ ಸಾಗಿದೆ 1905~
ರಿಂದ ಭೂಗೋಲವು ಪಠ್ಯಕ್ರಮದ ಒಂದು ಮಹತ್ವದ ಅಂಗವಾಗಿ ಪರಿಣಮಿಸಿದೆ.
ಪ್ರೊ. ಹರಬಾರ್ಸಿಯನ್ ಎಂಬುವವರು ಇದನ್ನು ಕುತೂಹಲಕಾರಕ ಹಾಗೂ ವೈಜ್ಞಾ~
ನಿಕ ದೃಷ್ಟಿಕೋನವುಳ್ಳದ್ದನ್ನಾಗಿ ಮಾಡಿದರೆಂದರೆ ತಪ್ಪಾಗಲಾರದು. ವೈಜ್ಞಾನಿಕ
ಸಂಶೋಧನೆಗಳು ಮಾನವನನ್ನು ಪ್ರಕೃತಿಯ ರಹಸ್ಯಗಳ ಸಮೀಪಕ್ಕೆ ತಂದವೆನ್ನ~
ಬಹುದು. ಇದರಿಂದ ಮಾನವ ಪ್ರಕೃತಿಯನ್ನು ಅಭ್ಯಸಿಸುವಂತಾಯಿತು. ಇದ~
ರಿಂದ ಭೂಗೋಲದ ಅಭ್ಯಾಸಕ್ಕೆ ಮಹತ್ವ ಬಂದು, ಅದೊಂದು ಮಹತ್ವದ ವಿಷಯ~
ವಾಗಿ ಪರಿಣಮಿಸಿತು. ಇದರಿಂದ ಸಹಜವಾಗಿಯೇ ಭೂಗೋಲ ಎಂದರೇನು ?
ಎಂಬುದನ್ನು ಪರೀಕ್ಷಿಸಬೇಕಾಗಿ ಬಂದಿತು.

ಭೂಗೋಲ ಎಂದರೆ ಶಬ್ದಷಃ ಭೂಮಿಯ ಬಗ್ಗೆ ವಿವರಣೆ ಎಂದು ಹೇಳ~
ಬಹುದು. ಆದರೆ ಭೂಮಿಯು ಅನೇಕ ಸಂಗತಿಗಳನ್ನೊಳಗೊಂಡಿರುವುದರಿಂದ, ಅದರ
ಬಗ್ಗೆ ಇಡೀಯಾಗಿ ಅಭ್ಯಸಿಸುವದು ಅತ್ಯಂತ ಕಠಿಣವಾದ ಕೆಲಸ. ಭೂಮಿಯ
ಮೇಲಿನ ಎಲ್ಲ ಸಂಗತಿಗಳ ಬಗ್ಗೆ ತಿಳಿಯುವದೆಂದರೆ ಹಾಸ್ಯಾಸ್ಪದವೇ ಸೈ. ಕಾರಣ
ಭೂಮಿಯ ಮೇಲಿನ ಕೆಲವು ಸಂಗತಿಗಳನ್ನು ಮಾತ್ರ ಆರಿಸಿ ಅವುಗಳ ಬಗ್ಗೆ ಅಭ್ಯಸಿ~
ಸುವದು ಸೂಕ್ತವಾದದ್ದು. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾದದ್ದು
-2-
ಅತ್ಯಂತ ಅವಶ್ಯ. ಆದಕಾರಣ ಭೂಗೋಲದ ವ್ಯಾಖ್ಯೆಯನ್ನು ಕೆಳಗಿ~
ನವರು ಹೇಳಿದಂತೆ ಮಾರ್ಪಡಿಸುವದು ಅವಶ್ಯ.

1) ಪ್ರೊ. ಮಾಕ್ನಿಯ ಮೇರೆಗೆ "ಭೂಗೋಲ ಎಂದರೆ ಮಾನವನ ಮನೆಯಾದ
ಭೂಮಿಯ ಬಗ್ಗೆ ಅಭ್ಯಾಸ ಅಥವಾ ಭೂಗೋಲ ಎಂದರೆ ಮಾನವನ ಪರಿಸರದ ಬಗ್ಗೆ
ಅಭ್ಯಾಸ" (ಪರಿಸರ ಎಂದರೆ ಭೌತಿಕ, ಸಾಮಾಜಿಕ ಮುಂತಾದವು)

2) ಪ್ರೊ. ಫೆರ್್ಗ್ರೀವನ ಪ್ರಕಾರ ಭೂಗೋಲ ಎಂದರೆ ಭೂಮಿಯ ಬಗ್ಗೆ ವಿವ~
ರಣೆ ಇದನ್ನೇ ಇನ್ನಷ್ಟು ವಿಶ್ಲೇಷಿಸಿ ಕೆಳಗಿನಂತೆ ವ್ಯಾಖ್ಯೆಯಿಸಿದ್ದಾನೆ.

"ಭೂಗೋಲದ ಕೆಲಸವೆಂದರೆ ಮುಂದಿನ ಜನಾಂಗವನ್ನು, ರಾಜಕೀಯ ಹಾಗೂ
ಸಾಮಾಜಿಕ ಸಮಸ್ಯೆಗಳನ್ನು ಕುರಿತು ಅರ್ಥವತ್ತಾದ ರೀತಿಯಲ್ಲಿ ಯೋಚಿಸುವಂತೆ
ಮಾಡುವುದೇ ಆಗಿದೆ. ಪ್ರೊ. ಫೆರಗ್ರೀವ್್ನ ವ್ಯಾಖ್ಯೆಯೇ ಹೆಚ್ಚು ಸಮಂಜಸವೆಂದು
ಹೇಳಬಹುದು. ಹೇಗೆಂದರೆ ಅವನು ಹೇಳಿದ ಭೂಮಿಯ ಬಗ್ಗೆ ವಿವರಣೆ ಎನ್ನುವದೇ
ಭೂಗೋಲದ ಅಭ್ಯುದಯಕ್ಕೆ ಹಾಗೂ ಅದರ ತತ್ವಗಳನ್ನು ಅರಿಯುವದಕ್ಕೆ ಪ್ರೇರೇಪಿ~
ಸಿತೆನ್ನಬಹುದು. ಪುರಾತನ ಕಾಲದಲ್ಲಿ ಜನರು ಭೂ ಮಾರ್ಗ ಹಾಗೂ ಜಲ ಮಾರ್ಗ~
ಗಳ ಮೂಲ಼ಕ ಜಗತ್ತಿನ ಪರ್ಯಟನ ಮಾಡುತ್ತಿದ್ದರು. ಆ ಕಾಲಕ್ಕೆ ಬಂದ ಜಲ,
ಹಾಗೂ ಭೂಮಿಯ ಬಗ್ಗೆ ತಮಗೆ ಉಂಟಾದ ತೊಂದರೆಗಳ ಬಗ್ಗೆ ಬರೆದಿಡುತ್ತಿ~
ದ್ದರು. ಅಲ್ಲದೆ ಮಾರ್ಗದಲ್ಲಿ ಬಂದ ನದಿ, ಗುಡ್ಡ, ಮರುಭೂಮಿ, ಅರಣ್ಯ ಮುಂತಾ~
ದವುಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದರು. ಅವುಗಳ ಚಿತ್ರಗಳನ್ನೂ ಕೂಡಾ
ತಯಾರಿಸುತ್ತಿದ್ದರು. ಈ ರೀತಿ ಅವರುಗಳು ತಯಾರಿಸಿದ ಎಲ್ಲ ಮಾಹಿತಿಯೇ ಇಂದಿನ
ಭೂಗೋಲದ ವಿಷಯವಾಗಿದೆ ಎಂದರೆ ತಪ್ಪಿಲ್ಲ. ಆದರೆ ಇಷ್ಟು ವಿವರಣೆಯೇ
ಭೂಗೋಲ ಅಲ್ಲ. ಇದು ಅದರ ಭಾಗ ಮಾತ್ರ. ಇದು ಕೇವಲ ಒಳ್ಳೆಯ ನಾಗರಿಕ~
ರನ್ನು ಮಾತ್ರ ತಯಾರಿಸಬಲ್ಲದು. ಕಾರಣ ಭೂಗೋಲ ಎಂದರೆ ಇದಕ್ಕಿಂತ ಇನ್ನು
ಹೆಚ್ಚಿನದೆಂದು ಹೇಳಬಹುದು.

ಪ್ರಾರಂಭದಲ್ಲಿ ಭೂಗೋಲಿಗೆ ಅಷ್ಟೊಂದು ವ್ಯಾಪಕತೆ ಇರಲಿಲ್ಲ. ಕೇವಲ ವಿಷಯ
ಜ್ಞಾನಕ್ಕಾಗಿ ಸೀಮಿತಗೊಂಡಿತ್ತು. ಪ್ರವಾಸಿಗರು ಅನೇಕ ಸ್ಥಳಗಳನ್ನು, ಅಲ್ಲಿಯ
ಜನರನ್ನು ಸಂಪರ್ಕಿಸ ತೊಡಗಿದ ಮೇಲೆ, ಆಯಾ ಜನರ ಜನ ಜೀವನ,
ಅಲ್ಲಿಯ ಹಳ್ಳ, ಹೊಳೆ, ಗುಡ್ಡ ಹಾಗೂ ಪರಿಸರಗಳ ಬಗ್ಗೆ ತಿಳುವಳಿಕೆ ಉಂಟಾಗ~
ತೊಡಗಿತು. ಹೀಗೆ ಅವರಿಗೆ ದೊರೆತ ಅನುಭವಗಳಿಂದ ಭೂಗೋಲ ಬೆಳೆಯುತ್ತ~
ಬಂದಿತು. ವರ್ಣನೆಯೂ ಭೂಗೋಲದ ಒಂದು ಅವಿಭಾಜ್ಯ ಅಂಗವಾಯಿತು. ಇದನ್ನ~
ರಿತ ಪ್ರೊ. ಫ್ರೆರಗ್ರಿವರು ತಮ್ಮ ವ್ಯಾಖ್ಯೆಯನ್ನು ಕೆಳಗಿನಂತೆ ಬದಲಾಯಿಸಬೇಕಾಯಿತು.
"ಭೂಗೋಲವು ಮಾನವ ಹಾಗೂ ಭೂಮಿಯ ನಡುವಿನ ಸಂಬಂಧವನ್ನು ತಿಳಿಸುವ
ವಿಜ್ಞಾನವಾಗಿದೆ.
-3-

ಮೇಲಿನ ಎಲ್ಲ ವ್ಯಾಖ್ಯೆಗಳಿಂದ ಮಾನವ ಪರಿಸರವನ್ನು ನಿರ್ಮಿಸಬಲ್ಲ ಎಂಬ
ಅಂಶ ಬಳಕಿಗೆ ಬಂದಿತು. ಕಾರಣ ಭೂಗೋಲವು ಮಾನವನ ನಿತ್ಯ ಜೀವನದಲ್ಲಿಯ
ಬೇಕು ಬೇಡಗಳ ಬಗ್ಗೆ ತಿಳಿಸುತ್ತದೆ ಮಾನವನ ಅನೇಕ ಇಚ್ಛೆಗಳನ್ನು ಪ್ರಕೃತಿಯು
ಪೂರೈಸುತ್ತದೆ. `ಸಮುದ್ರ ತೀರದಲ್ಲಿರುವವರು ಉತ್ತಮ ನಾವಿಕರು' ಈ ಅಂಶವು
ಪರಿಸರದ ಮಾನವನ ಮೇಲಿನ ಪರಿಣಾಮವನ್ನು ಸೂಚಿಸುತ್ತದೆ.

ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರೊ. ಡಡ್ಲೆ ಸ್ಟ್ಯಾಂಪ
ಎಂಬುವವರು ಭೂಗೋಲವನ್ನು ಕೆಳಗಿನಂತೆ ವ್ಯಾಖ್ಯಿಸಿದ್ದಾರೆ. "ಭೂಗೋಲ ಇದು
ಜಗತ್ತು ಹಾಗೂ ಅದರ ವಾಸಿಗಳ ಬಗ್ಗೆ ಇರುವ ವಿವರಣೆಯೇ ಆಗಿದೇ" ಇವರ ಪ್ರಕಾರ
ಮಾನವ ಭೂಗೋಲದ ಒಂದು ಮುಖ್ಯ ಅಂಗ. ಅಂದರೆ ಭೂಗೋಲ ಇದು ಕೇವಲ
ಭೌತಿಕ ಅಂಶಗಳು ಮತ್ತು ಪರಿಸರದ ಬಗ್ಗೆ ಅಭ್ಯಸಿಸುವದಾಗಿರದೆ ಪರಿಸರದೊಂದಿಗೆ
ಇರುವ ಮಾನವನ ಚಟುವಟಿಕೆಗಳನ್ನು ಕೂಡಿದೆ ಎಂಬುದನ್ನು ತಿಳಿಸುತ್ತದೆ ಮಾನವ
ಜಗತ್ತಿನ ಚಟುವಟಿಕೆಗಳ ಕೇಂದ್ರವಾಗಿದ್ದು ತನ್ಮೂಲಕ ಭೂಗೋಲ ವಿಷಯವ
ಕೇಂದ್ರವೂ ಆಗಿದ್ದಾನೆ. ಭೂಗೋಲ ಇದು ಬದಲಾವಣೆಗಳ ಹಾಗೂ ಅಭಿವೃದ್ಧಿ~
ಗಳ ಅಭ್ಯಾಸವಾಗಿದೆ." ಈ ವ್ಯಾಖ್ಯೆಯು ನಿರಂತರವಾಗಿ ಜರುಗುತ್ತಿರುವ ಬದಲಾವಣೆ
ಹಾಗೂ ಅಭಿವೃದ್ಧಿಗಳ ಕುರಿತಾಗಿದೆ ಜಗತ್ತಿನಲ್ಲಿ ಮಾನವ ಹಾಗೂ ಪ್ರಾಣಿಗಳು
ತಮ್ಮ ಉಳಿವಿಗಾಗಿ ಪ್ರಕೃತಿಯ ಪ್ರಕೋಪಗಳೊಂದಿಗೆ ಸೆಣೆಸಾಡಬೇಕಾದದ್ದು ಅನಿ~
ವಾರ್ಯ. ಆಗ ಉಂಟಾಗುವ ಬದಲಾವಣೆಗಳು ಅಭಿವೃದ್ಧಿಗಳ ಕುರಿತು ಅಭ್ಯಸಿಸುವದು
ಅವಶ್ಯ ಎಂಬುದನ್ನು ಮೇಲಿನ ವ್ಯಾಖ್ಯೆ ಸ್ಪಷ್ಟಪಡಿಸುತ್ತದೆ.

"ಭೂಗೋಲ ಇದು ಜಗತ್ತಿನ ಬೇರೆ ಬೇರೆ ಭಾಗಗಳ ತುಲನಾತ್ಮಕ ಅಭ್ಯಾಸ~
ವಾಗಿದೆ. ಏಕೆಂದರೆ ಪ್ರಕೃತಿಯ ಅನೇಕ ಅಂಶಗಳು ಕಲೆ, ಭಾಷೆ, ಧರ್ಮ, ಇತಿಹಾಸ
ಹಾಗೂ ತತ್ವಜ್ಞಾನಗಳು ಬೆಳೆಯಲು ಪೂರಕವಾಗಿವೆ. ಆದ್ದರಿಂದ ಭೂಗೋಲ ಇದು
ಕೇವಲ ಅಜೈವಿಕಗಳಿಗೆ ಸಂಬಂಧಿಸಿರದ ಜೈವಿಕಗಳಿಗೂ ಸಂಬಂಧಿಸಿದೆ.

ಎಡ್ಮಂಡ ಬ್ರೂಕರ ಪ್ರಕಾರ " ಭೂಗೋಲ ಇದು ಭೌತಿಕ ವಿಷಯವಾಗಿದ್ದು
ಅಂತರೀಕ್ಷ ವಿಜ್ಞಾನವಾಗಿದೆ. " ಅಂದರೆ ಭೂಗೋಲ ಇದು ಆಕಾಶ ಕಾಯಗಳಾದ
ಸೂಱ್ಯ ಚಂದ್ರರ ಬಗ್ಗೆ ತಿಳಿದುಕೊಳ್ಳವದಾಗಿದೆ. ಭೂಮಿಯ ಮೇಲೆ ಇದ್ದುಕೊಂಡು
ಗ್ರಹಗಳ ಚಲನೆ ಬಗ್ಗೆ ಮಳೆ, ಮೋಡ, ತಾಪಮಾನ ಹಾಗೂ ಹವೆಯ ಬಗ್ಗೆ ಅಭ್೟ಸಿ~
ಸುವದು ಅತ್ಯಂತ ಅವಶ್ಯಕ ಸಂಗತಿ. ಆದಕಾರಣ ಭೂಗೋಲವನ್ನು ಭೋತಿಕ ವಿಷಯ
ಹಾಗೂ ಅಂತರೀಕ್ಷ ವಿಜ್ಞಾನ ಎಂದು ಹೇಳುವದು ಅತ್ಯಂತ ಸೂಕ್ತವಾಗಿದೆ.

ಇಂದಿನ ಜಗತ್ತಿನಲ್ಲಿ ವಿಷಯಗಳ ಗೊತ್ತಿರದ ಸಂಗತಿಗಳ ಬಗ್ಗೆ ತಿಳಿಯುವದು
ಮಹತ್ವದ್ದಾಗಿದೆ. ಮಾನವನಿಗೆ ಅನೇಕ ಸಂಗತಿಗಳ ಬಗ್ಗೆ ಪರಿಪೂರ್ಣವಾದ ಜ್ಞಾನವಿಲ್ಲ.
-4-
ಭೂಗೋಲದ ಸಹಾಯದಿಂದ ಇಂಥ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ಬರ~
ತ್ತದೆ. ಅಂದರೆ ಭೂಗೋಲ ಇದು ಗೊತ್ತಿರದ ಸಂಗತಿಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ~
ವಾಗಿದೆ.

ಇ. ಜಿ. ಸ್ಟೀಲರ ಪ್ರಕಾರ " ಭೂಗೋಲ ಇದು ಪ್ರಾರಂಭಿಕ ವಿಜ್ಞಾನವಾಗಿದ್ದು
ಇದರಿಂದ ಜಗತ್ತಿನೊಂದಿಗೆ ನಿಕಟ ಸಂಬಂಧ ಹೊಂದಬಹುದಾಗಿದೆ. ಇದಿಲ್ಲದೆ ಪ್ರಗತಿ
ಕುಂಠಿತಗೊಳ್ಳುವದು. " ಈ ವ್ಯಾಖ್ಯೆಯಿಂದ ಭೂಗೋಲವು ಅಭಿವೃದ್ಧಿಗೆ ಅತ್ಯಂತ
ಸಹಾಯಕ ಎಂಬುದು ತಿಳಿದು ಬರುತ್ತದೆ. ಭೂಗೋಲದ ಜ್ಞಾನವಿಲ್ಲದೆ ಸರಿಯಾದ
ಬೆಳವಣಿಗೆ ಅಸಾಧ್ಯ. ಈ ವ್ಯಾಖ್ಯೆ ಸ್ವಲ್ಪ ಮಟ್ಟಿಗೆ ಸಂಕುಚಿತವಾಗಿದೆ. ಹೇಗೆಂದರೆ
ಇದು ಸಾಮಾಜಿಕ, ಭೌತಿಕ, ರಾಜಕೀಯ, ಐತಿಹಾಸಿಕ ವಿಷಯಗಳ ಪ್ರಗತಿ ಕುರಿತು
ಸ್ಪಷ್ಟ ವಿವರಣೆ ನೀಡುವದಿಲ್ಲ. ಆದರೂ ಕೂಡ ಪ್ರಗತಿಯ ಬಗ್ಗೆ ತಿಳುವಳಿಕೆ ನೀಡುವ~
ದರಿಂದ ಇದನ್ನು ಒಳ್ಳೆಯ ವ್ಯಾಖ್ಯೆ ಎಂದು ತಿಳಿಯಬಹುದಾಗಿದೆ.

ಜೇಮ್ಸ ಫ್ರೇರಗ್ರೀವರು " ಭೂಗೋಲ ಇದು ಭೌತಿಕ ಅಜೈವಿಕ ಅಂಶಗಳೊಂ~
ದಿಗೆ ಜೈವಿಕ ಸಿದ್ಧಾಂತಗಳ ಸಂಬಂಧವನ್ನು ಸೂಚಿಸುತ್ತದೆ " ಎಂದು ಹೇಳಿದರು.
ಇದರ ಅರ್ಥ ಮಾನವ ಹಾಗೂ ಪರಿಸರಗಳ ನಡುವಿನ ಪ್ರತಿಕ್ರಿಯೆಯೇ ಆಗಿದೆ.
ಹೇಗೆಂದರೆ ಮಾನವನ ಜೀವನದ ಅನೇಕ ಅಂಶಗಳನ್ನು ನದಿ, ಗುಡ್ಡ, ಮಳೆ, ಹವಾ~
ಮಾನಗಳು ನಿಯಂತ್ರಿಸುತ್ತಿವೆ. ಕೆಲವು ಸಲ ಇವುಗಳ ಪರಿಣಾಮ ಕಂಡು ಬರುವಂ~
ತಹದಿದ್ದು ಕೆಲವು ಸಲ ಗಮನಕ್ಕೆ ಬರದೇ ಹೋಗಬಹುದು, ಆದರೆ ಇಷ್ಟು ಮಾತ್ರ
ಸತ್ಯ ಮಾನವನ ಮೇಲೆ ಅಜೈವಿಕ ಸಂಗತಿಗಳು ಅವಶ್ಯವಾಗಿ ಪರಿಣಾಮ ಬೀರುತ್ತವೆ.
ಅನೇಕ ಸಲ ಇದು ಅವನ ಗಮನಕ್ಕೆ ಬರುತ್ತದೆ. ಇಂಥ ಸಂಗತಿಗಳನ್ನು ತಿಳಿಸಲು
ಭೂಗೋಲ ಸಹಾಯಕ಼ವಾಗಿದೆ. ಅಂದರೆ ಇದೇ ಭೂಗೋಲ ಆಗಿರದೆ ಇದು ಅದರ
ಒಂದು ಭಾಗ ಮಾತ್ರ.

ಭೂಗೋಲದ ಬಗ್ಗೆ ಇನ್ನೊಂದು ವ್ಯಾಖ್ಯೆ ಹೀಗಿದೆ "ಭೂಗೋಲವು ಸೂಕ್ಷ್ಮಾಣು~
ಜೀವಿಗಳ ಸ್ಥಿತಿಯನ್ನು ಕಂಡು ಹಿಡಿಯುವ ಹಾಗೂ ಬಾಹ್ಯಾಂತರಿಕ್ಷದೊಂದಿಗಿರುವ
ಅವುಗಳ ಸಂಬಂಧವನ್ನು ಸೂಚಿಸುವ ವಿಜ್ಞಾನವಾಗಿದೆ. ಅಂದರೆ ಭೂಗೋಲವು
ಜಗತ್ತಿನ ಜೀವಿಗಳ ವಿವಿಧ ಹಂತವನ್ನು ಆಯಾ ಪರಿಸ್ಥಿತಿಗಳಿಗನುಗುಣವಾಗಿ ಇರುವಿ~
ಕೆಯನ್ನು ಸೂಚಿಸುತ್ತದೆಂದಾಯಿತು. ಇನ್ನೊಂದು ಹೇಳಿಕೆಯ ಪ್ರಕಾರ" ಭೂಗೋ~
ಲವು ಜಲಗೋಳದ ಕ್ರಿಯೆ-ಪ್ರತಿಕ್ರಿಯೆಗಳನ್ನು ತಿಳಿಸುವ ಶಾಸ್ತ್ರವಾಗಿದೆ' ಇದು
ಅಷ್ಟೊಂದು ಸಮಂಜಸವೆನಿಸಲಾರದು. ಏಕೆಂದರೆ ಭೂಮಿಯ ಮೇಲೆ ಕೇವಲ ನೀರಿನ
ಪ್ರಭಾವ ಮಾತ್ರವಿರದೆ ಇನ್ನು ಅನೇಕ ಸಂಗತಿಗಳ ಪ್ರಭಾವವೂ ಇದೆ. ಭೂಗೋಲದ
ಅಭ್ಯಾಸದಲ್ಲಿ ಅವುಗಳನ್ನು ಪರಾಮರ್ಶಿಸುವದು ಅವಶ್ಯವಾಗಿದೆ ಎಲ್ ಡಡ್ಲ್ ಸ್ಟ್ಯಾಂಪರ
-5-
ಪ್ರಕಾರ" ಹಳೇ ಭೂಗೋಲವು ಪರಿಣಾಮದಿಂದ ಕಾರಣಕ್ಕೆ ಹೋಗುತ್ತಿದ್ದರೆ ಹೊಸ
ಭೂಗೋಲವು ಕಾರಣದಿಂದ ಪರಿಣಾಮಕ್ಕೆ ಹೋಗುತ್ತದೆ. ಈ ವ್ಯಾಖ್ಯೆಯು ಪರಿ~
ಣಾಮ ಕಾರಣಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತದೆ. ಏಕೆಂದರೆ ಯಾವುದೇ ಸಂಗತಿ
ಜರಗಬೇಕಾದರೆ ಅದರ ಹಿಂದೆ ಕಾರಣ ಇರಲೇ ಬೇಕು. ಹಾಗೂ ಯಾವುದೇ ಕಾರಣ
ಪರಿಣಾಮವಿಲ್ಲದೆ ಇರಲು ಸಾಧ್ಯವೇ ಇಲ್ಲ. ಪ್ರತಿಯೊಂದು ಕಾರಣಕ್ಕೂ ಪರಿಣಾಮ~
ವಿರಲೇ ಬೇಕು. ಆಧುನಿಕ ಭೂಗೋಲದಲ್ಲಿ ಈ ಅಂಶವನ್ನು ಸರಿಯಾಗಿ ಮನಗಾಣ~
ಲಾಗಿದೆ.

ಭೂಗೋಲವು ವಿಜ್ಞಾನಗಳ ವಿಜ್ಞಾನವಾಗಿದೆ. ಸಸ್ಯಶಾಸ್ತ್ರವು ಸಸ್ಯಗಳ ಜೀವಿಕೆ
ಬಗ್ಗೆ ಪ್ರಾಣಿಶಾಸ್ತ್ರ ಪ್ರಾಣಿಗಳ ಜೀವನಕ್ಕೆ ಅಂತರೀಕ್ಷವಿಜ್ಞಾನ ಆಕಾಶಕಾಯಗಳ
ಬಗ್ಗೆ ಭೂಗರ್ಭಶಾಸ್ತ್ರ ಭೂಮಿಯ ರಚನೆ ಬಗ್ಗೆ ತಿಳಿಸಿಕೊಡುತ್ತವೆ. ಆದರೆ ಭೂಗೋ~
ಲವು ಇವೆಲ್ಲವುಗಳನ್ನು ಮೇಳೈಸಿಕೊಂಡು ಹೋಗುತ್ತದೆ. ಉಳಿದೆಲ್ಲ ಶಾಸ್ತ್ರಗಳು ತಮ್ಮ
ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡಿದ್ದು. ಭೂಗೋಲವು ಇವುಗಳಲ್ಲಿಯ ಎಲ್ಲ
ಅಂಶಗಳನ್ನು ತನ್ನಲ್ಲಿ ಅಳವಡಿಸಿ ಕೊಂಡಿರುತ್ತದೆ. ಹೀಗಾಗಿ ಭೂಗೋಲವು ವಿಜ್ಞಾನ~
ಗಳ ವಿಜ್ಞಾನವಾಗಿದೆ.

ಈಗಿರುವ ಭೂಗೋಲವು ಆಧುನಿಕ ಭೂಗೋಲ ಎಂದು ಕರೆಸಿಕೊಳ್ಳಲ್ಪಡು~
ತ್ತದೆ. ಏಕೆಂದರೆ ಈ ಭೂಗೋಲವು ಕೆಲವೊಂದು ಬೆಳವಣಿಗೆಗಳ ಪರಿಣಾಮವಾಗಿದೆ.
ಇದು ಬಾಯಿ ಪಾಠ ಮಾಡುವದನ್ನು ಪ್ರಚೋದಿಸುವದಿಲ್ಲ. ಇದರ ಅದ್ಯಯನವು
ವೈಜ್ಞಾನಿಕ ಮಾರ್ಗವನ್ನೇ ಸೂಚಿಸುತ್ತದೆ. ಅಂದರೆ ಇಂದಿನ ಭೂಗೋಲವು ವಿಜ್ಞಾನ
ಹಾಗೂ ಕಲೆಗಳ ಸಮ್ಮಿಶ್ರಣವೆನ್ನಬಹುದು. ಇದಲ್ಲದೆ ಉಳಿದ ಸಾಮಾಜಿಕ ವಿಜ್ಞಾನ~
ಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಇದರ ವಿಸ್ತಾರ ಹೆಚ್ಚೆ ಅನೇಕ
ಭೂಮಿಯೇತರ ವಿಷಯಗಳ ಬಗ್ಗೆಯೂ ಇದು ಚಿಂತನೆ ಮಾಡುತ್ತದೆ.

ಆಧುನಿಕ ಭೂಗೋಲವು ಒಳ್ಳೇಯ ನಾಗರಿಕರನ್ನು ತಯಾರಿಸುವಲ್ಲಿ ಹಾಗೂ
ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಬಿಡಿಸುವಲ್ಲಿ ಅತ್ಯಂತ ಸಹಾಯಕವಾಗಿದೆ.
ಒಳ್ಳೇಯ ನಾಗರಿಕರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಲು ಇದು
ಸಹಾಯಕವಾಗಿದೆ.

ಪ್ರಶ್ನೆ 2. ಭೂಗೋಲ ಅಭ್ಯಾಸದ ಪ್ರಯೋಜನಗಳನ್ನು ಹೇಳಿರಿ.

ಉತ್ತರ : - ಭೂಗೋಲವೆಂದರೆ ಕೇವಲ ಭೂಮಿಯ ಬಗ್ಗೆ ಹಾಗೂ ಅಲ್ಲಿ
ವಾಸಿಸುವವರ ಬಗ್ಗೆ ವಿವರಣೆಯಾಗಿರದೆ, ಅದು ಅದಕ್ಕಿಂತಲೂ ಹೆಚ್ಚು ವಿಸ್ತಾರವನ್ನು
ಹೊಂದಿದೆ. ಭೂಗೋಲವು ವಿವರಣಾತ್ಮಕವಾಗಿಯೂ ಅಭಿವೃದ್ಧಿ ಹೊಂದಿದೆ. ಒಂದು
ಕಾಲಕ್ಕೆ ಭೂಗೋಲ ಎಂದರೆ ಕೆಲವು ನದಿಗಳನ್ನು ಹಾಗೂ ಕೆಲವು ಪರ್ವತಗಳ ಹೆಸರನ್ನು
-6-
ಕಂಠಪಾಠ ಮಾಡುವದಾಗಿತ್ತು. ಆದರೆ ಇಂದಿನ ಭೂಗೋಲವು ಪೂರ್ಣ
ವೈಜ್ಞಾನಿಕ ತಳಹದಿಯ ಮೇಲೆ ರೂಪಿತಗೊಂಡಿದೆ. ಭೂಗೋಲದ ಅನೇಕ ಅಂಶಗಳನ್ನು
ಕಾರಣ ಪರಿಣಾಮಗಳ ಮೂಲಕ ಬಿಂಬಿಸಲು ಪ್ರಯತ್ನ ಮಾಡಲಾಗುತ್ತಿದೆ. ಇಂದಿನ
ಭೂಗೋಲವು ಮಾನವನ ಅನೇಕ ಚಟುವಟಿಕೆಗಳನ್ನು ಭೌತಿಕ ಹಾಗೂ ಪ್ರಾಕೃತಿಕ
ಪರಿಸರದ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸುತ್ತದೆ. ಮಾನವನ ಪ್ರತಿಯೊಂದು
ಚಟುವಟಿಕೆಯೂ ಭೌಗೋಲಿಕ ಅಂಶದೊಂದಿಗೆ ಸಂಬಂಧ ಹೊಂದಿರಲೇಬೇಕು. ಇದು
ಒಳ್ಳೆಯ ನಾಗರಿಕರನ್ನು ತಯಾರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವದರಿಂದ
ಇದರ ಬಗ್ಗೆ ಕಾಳಜಿ ವಹಿಸುವದು ಸಮಾಜದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ನಿರಂ~
ತರವಾಗಿ ಬದಲಾಗುತ್ತಿರುವ ಮಾನವನ ಚಟುವಟಿಕೆಗಳ ಹಾಗೂ ಪರಿಸರದಲ್ಲಿಯ
ಬದಲಾವಣೆಗಳ ಭೂಗೋಲದ ಪ್ರಯೋಜನಗಳನ್ನು ಹೆಚ್ಚಿಸಿವೆ. ಕಾರಣ ಭೂಗೋಲ
ಅಭ್ಯಾಸದ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೂಗೋಲದ ಅಭ್ಯಾಸ ಕೆಳಗಿನ
ಅಂಶಗಳನ್ನು ಗಮನಿಸಬೇಕಾದುದು. ಅತ್ಯವಶ್ಯವಾಗಿದೆ.

1) ನೈಸರ್ಗಿಕ ಪರಿಸರ :- ಭೂಗೋಲದಲ್ಲಿ ನೈಸರ್ಗಿಕ ಪರಿಸರಗಳಾದ
ಭೂಮಿಯ ಕವಚದ ರಚನೆ, ನದಿಗಳು, ಅವುಗಳ ಹರಿಯುವಿಕೆ ಮರುಭೂಮಿಗಳ
ನಿರ್ಮಾಣ ಸಮುದ್ರ ಪರ್ವತ ಮುಂತಾದವುಗಳ ಬಗ್ಗೆ ಅಭ್ಯಸಿಸಬೇಕಾದುದು ಅವಶ್ಯ.
ಇದಸ್ಲದೇ ಕಲ್ಲು, ಹವಾಮಾನ, ಮಣ್ಣು ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುವದು
ಅವಶ್ಯವಾಗಿದೆ. ಅದೇ ಕಾಲಕ್ಕೆ ಮಾನವನೊಂದಿಗೆ ಅವುಗಳ ಸಂಬಂಧವನ್ನು ಅರಿಯ~
ಬೇಕು.

2) ಭೌತಿಕ ಪರಿಸರದೊಂದಿಗೆ ಮಾನವನ ಸಂಬಂಧ :- ಭೂಗೋಲದಲ್ಲಿ
ಮಾನವನ ಚಟುವಟಿಕೆಗಳನ್ನು ಭೌತಿಕ ಹಾಗೂ ಭೂಗೋಲಿಕ ಪರಿಸರದಲ್ಲಿ ಅಭ್ಯಸಿ~
ಸುತ್ತೇವೆ. ಭೌತಿಕ ಪರಿಸರವು ಮಾನವನ ಚಟುವಟಿಕೆಗಳನ್ನು ನಿರಂತರವಾಗಿ ನಿಯಂ~
ತ್ರಿಸುತ್ತಿರುತ್ತದೆ. ಉದಾಹರಣೆಗೆ ಶೀತ ಪ್ರದೇಶದಲ್ಲಿ ವಾಸಿಸುವವರು ಯಾವಾಗಲೂ
ಶ್ರಮದ ದುಡಿಮೆಯುಳ್ಳವರಾಗಿರಬೇಕು. ಅದೇ ರೀತಿ ವಿಷ್ಣು ಪ್ರದೇಶದಲ್ಲಿರುವವರು
ಕಡಿಮೆ ಶ್ರಮದ ಹಾಗೂ ಆಲಸಿಗಳಾಗಿರುವರು. ಆದಕಾರಣ ಭೂಗೋಲದಲ್ಲಿಯ
ಸಂಗತಿಗಳನ್ನು ಹಾಗೇ ಅಭ್ಯಸಿಸದೆ ಅವುಗಳನ್ನು ಮಾನವನ ಚಟುವಟಿಕೆಗಳೊಂದಿಗೆ
ಅಭ್ಯಸಿಸಿದಾಗ ಮಾತ್ರ ಒಳ್ಳೆಯ ನಾಗರಿಕರನ್ನು ತಯಾರಿಸಲು ಸಾಧ್ಯ ಕೆಲವು ದೇಶದ
ಜನರು ಕಚ್ಚಾ ಸಾಮಗ್ರಿ ತಯಾರಿಸುವದನ್ನು ಕೆಲವು ದೇಶದ ಜನರು ಪಕ್ಕ ಸಾಮ~
ಗ್ರಿಗಳನ್ನು ತಯಾರಿಸುವದನ್ನು ಭೂಗೋಲದಲ್ಲಿ ಅಭ್ಯಸಿಸುತ್ತೇವೆ. ಜನರಿಂದ ಮಾನ~
ವನ ಚಟುವಟಿಕೆಯ ಅಭ್ಯಾಸ ಎಷ್ಟೊಂದು ಮಹತ್ವಪೂರ್ಣ ಎಂಬುದು ತಿಳಿದುಬರು~
ತ್ತದೆ.
-7-

3) ಮಾನವನ ಸಾಮಾಜಿಕ ಚಟುವಟಿಕೆಗಳು : - ಮಾನವನು ಏಕಾಂಗಿ~
ಯಾಗಿ ಜೀವಿಸದೆ ಸಮಾಜದ ಒಂದು ಅಂಗವಾಗಿ ಜೀವಿಸುತ್ತಾನೆ. ಸಮಾಜದ ನೆರಳಿ~
ನಲ್ಲಿಯೇ ತನ್ನ ಎಲ್ಲ ಚಟುವಟಿಕೆಗಳನ್ನು ನಡೆಸುತ್ತಿರುತ್ತಾನೆ. ಮಾನವನ ಯಾವುದೇ
ಚಟುವಟಿಕೆಯೂ ಭೌತಿಕ ಅಥವಾ ಯಾವುದೇ ಪರಿಸರಕ್ಕೆ ಸಂಬಂಧಿಸಿದ್ದಾದರೂ ಅದು
ಸಾಮಾಜಿಕ ಸಂಗತಿಗಳಿಂದ ಪ್ರೇರಿತವಾದದ್ದಿರುತ್ತದೆ. ಮಾನವ ಮಾಡುವ ಯಾವುದೇ
ಬದಲಾವಣೆಯು ಅವನ ಸಾಮಾಜಿಕ ಪ್ರಜ್ಞೆಯಿಂದಾಗಿರುತ್ತದೆ. ಅದೇ ವೇಳೆಗೆ ಈ
ಎಲ್ಲ ಚಟುವಟಿಕೆಗಳು ಭೌಗೋಲಿಕ ಸಂಗತಿಯಿಂದ ಪ್ರೇರಿತ ಗೊಂಡಿರುತ್ತವೆಂಬುದನ್ನು
ಮಾತ್ರ ಮರೆಯಲಿಕ್ಕಾಗದು.

4) ರಾಜಕೀಯ ಚಟುವಟಿಕೆಗಳು : - ರಾಜಕೀಯ ಚಟುವಟಿಕೆ ಹಾಗೂ
ರಾಜಕೀಯ ಸ್ಥಿತಿಗಳೆರಡೂ ಭೌಗೋಲಿಕ ಸಂಗತಿಗಳಿಂದ ಪ್ರೇರೇಪಿಸಲ್ಪಟ್ಟಿರುತ್ತವೆ.
ಭೂಗೋಲದ ಅಭ್ಯಾಸದಲ್ಲಿ ಈ ಸಂಗತಿಗಳನ್ನು ಗಮನಿಸಬೇಕಾದದ್ದು ಅತೀ ಅವಶ್ಯ.

ಮೇಲಿನ ಎಲ್ಲ ಸಂಗತಿಗಳನ್ನು ಒಳಗೊಂಡಾಗ ಮಾತ್ರ ಭೂಗೋಲದ ಅಭ್ಯಾಸವು
ಪರಿಪೂರ್ಣ಼ವೆನಿಸುವದು.

ಪ್ರಶ್ನೆ 3. ಭೂಗೋಲದ ವಿವಿಧ ವಿಭಾಗಗಳನ್ನು ಹೇಳಿ ಅವುಗಳನ್ನು ಕುರಿತು
ಚರ್ಚಿಸಿರಿ.

ಉತ್ತರ - ಭೂಗೋಲನ್ನು ಅದರ ವಿಷಯ ಹಾಗೂ ಅಭ್ಯಸಿಸುವ ಕ್ರಮದ
ಮೇಲಿಂದ ಅದರಲ್ಲಿ ಕೆಳಗಿನ ವಿಭಾಗಗಳನ್ನು ಮಾಡಿದ್ದಾರೆ. (1) ಭೌತಿಕ ಭೂಗೋಲ
(2) ಮಾನವನ ಭೂಗೋಲ (3) ಆರ್ಥಿಕ ಭೂಗೋಲ (4) ರಾಜಕೀಯ ಭೂಗೋಲ
(5) ಐತಿಹಾಸಿಕ ಭೂಗೋಲ.

1) ಭೌತಿಕ ಭೂಗೋಲ :- ಭೂಗೋಲದ ಈ ಭಾಗದಲ್ಲಿ ಅನೇಕ ಭೌತಿಕ
ಸಂಗತಿಗಳನ್ನು ಕುರಿತು ಅಭ್ಯಸಿಸಲ್ಪಡುತ್ತದೆ. ಇದರಲ್ಲಿ ಭೂಮಿಯ ಬಗ್ಗೆ ಸಮುದ್ರ
ಹವಾಮಾನದ ಬಗ್ಗೆ ಹಾಗೂ ಅವುಗಳಿಗೆ ಸಂಬಂಧಿಸಿದ ಇನ್ನಿತರ ವಿಷಯ ಬಗ್ಗೆ
ಅಭ್ಯಾಸವಿರುತ್ತದೆ. ಭೂಮಿಯ ರಚನೆ, ಸಮುದ್ರ ಹಾಗೂ ಅದರಲ್ಲಿಯ ನೀರಿನ
ಪ್ರಮಾಣ. ಹವಾಮಾನ ಹಾಗೂ ಬೆಳೆಗಳು ಕೆಲವೊಂದು ಪ್ರಮುಖವಾದ ಭೌತಿಕ
ನಿಯಮಗಳಿಗನುಸಾರವಾಗಿ ನಿಯಂತ್ರಿಸಲ್ಪಡುತ್ತವೆ. ಈ ಎಲ್ಲ ಸಂಗತಿಗಳನ್ನೇ ಭಾಗ~
ದಲ್ಲಿ ಅಡಕವಾಗಿವೆ.

2. ಮಾನವನ ಭೂಗೋಲ : - ಇತ್ತೀಚೆಗೆ ಭೂಗೋಲದಲ್ಲಿ ಸೇರ್ಪಡೆಯಾ~
ಗಿರುವ ಭಾಗ ಇದಾಗಿದೆ. ಭೂಮಿಯ ಮೇಲೆ ನಡೆಯುವ ಅನೇಕ ಚಟುವಟಿಕೆಗಳು
ಮಾನವನನಿಂದ ನಿಯಂತ್ರಿಸಲ್ಪಡುತ್ತವೆ. ಅಂದರೆ ಇಲ್ಲಿ ಮಾನವನ ಪಾತ್ರ ಅತ್ಯಂತ
ಪ್ರಮುಖವಾದದ್ದು. ಮಾನವ ಕೈಕೊಳ್ಳುವ ಕೃಷಿ, ಪ್ರಾಣಿ ಸಾಕಾಣಿಕೆ, ದೊಡ್ಡ
-8-
ದೊಡ್ಡ ಕೈಗಾರಿಕೆಗಳ ಸ್ಥಾಪನೆ, ಗಣಿ ಮುಂತಾದವುಗಳು ಭೌತಿಕ ಸಂಗತಿಗಳನ್ನು
ಅವಲಂಬಿಸಿರುತ್ತದೆ. ಆದ್ದರಿಂದ ಈ ಭಾಗದಲ್ಲಿ ಮಾನವನ ಚಟುವಟಿಕೆಗಳನ್ನು ಭೌತಿಕ
ಸಂಗತಿಗಳ ಸಹಯೋಗದೊಂದಿಗೆ ಅಭ್ಯಸಿಸಲ್ಪಡುತ್ತದೆ.

3) ಆರ್ಥಿಕ ಭೂಗೋಲ :- ಇದೂ ಕೂಡ ಭೂಗೋಲದ ಹೊಸ ವಿಭಾಗ~
ವಾಗಿದ್ದು, ಇದರಲ್ಲಿ ಮಾನವನ ಆರ್ಥಿಕ ಚಟುವಟಿಕೆಗಳನ್ನು ಭೂಗೋಲ ಸಂಗತಿಗಳ
ಆಶ್ರಯದಲ್ಲಿ ಅಭ್ಯಸಿಸುವದಾಗಿದೆ. ಇದರಲ್ಲಿ ಮುಖ್ಯವಾಗಿ, ವಸ್ತುಗಳ ತಯಾರಿಕೆ,
ಕೃಷಿ ಉತ್ಪಾದನೆ, ಸಾರಿಗೆ ಸಂಪರ್ಕಗಳನ್ನು ಕುರಿತು ಅಭ್ಯಾಸ ವಿರುತ್ತದೆ. ಗಣಿ
ಸಂಪತ್ತನ್ನು ಇದೇ ವಿಭಾಗದಲ್ಲಿ ಸೇರಿಸಿರುತ್ತಾರೆ. ಮಾನವನ ಜೀವನದಲ್ಲಿ ಆರ್ಥಿಕ
ಉತ್ಪಾದನೆ ಅತ್ಯಂತ ಮಹತ್ವದ ಪಾತ್ರವಾದುದರಿಂದ ಭೂಗೋಲದ ಈ ವಿಭಾಗವು
ಅತ್ಯಂತ ಮಹತ್ವದ್ದಾಗಿದೆ. ಈ ವಿಭಾಗದ ಅಭ್ಯಾಸದಿಂದ ಮಾನವನು ತನ್ನ ಆರ್ಥಿಕ
ಅಭಿವೃದ್ಧಿ ಹಾಗೂ ಬದಲಾವಣೆಗಳನ್ನು ಸಮರ್ಪಕವಾಗಿ ಮಾಡಬಹುದಾಗಿದೆ.

4) ರಾಜಕೀಯ ಭೂಗೋಲ :- ಸಾಮಾನ್ಯವಾಗಿ ವಿಭಾಗವನ್ನು
ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ತಂದಿದ್ದಾರೆ. ಈ ವಿಭಾಗದ ಎದ್ದೇಳಿ ಮಾನವನ
ಬೌದ್ಧಿಕ ಬೆಳೆವಣಿಗೆ ಕುರಿತದ್ದಾಗಿದೆ. ಇದರಲ್ಲಿ ವಿವಿಧ ರಾಜಕೀಯ ವಿಭಾಗಗಳನ್ನು
ಭೌತಿಕ ಸಂಗತಿಗಳೊಂದಿಗೆ ವಿಷದೀಕರಿಸಲಾಗಿರುತ್ತದೆ. ಇಡೀ ಜಗತ್ತನೇ ರಾಜಕೀಯ~
ವಾಗಿ ದೇಶಗಳರೂಪದಲ್ಲಿ ವಿಭಾಗಿಸಲ್ಪಟ್ಟಿದೆ. ಕಾರಣ ಈ ವಿಭಾಗದಲ್ಲಿ ವಿವಿಧ ದೇಶಗಳ
ಬೆಳವಣಿಗೆ, (ಕೈಗಾರಿಕಾ ಮುಂ) ಪಟ್ಟಣಗಳ ಕುರಿತು ಅಭ್ಯಾಸವಿರುತ್ತದೆ.

5) ಐತಿಹಾಸಿಕ ಭೂಗೋಲ : - ಒಂದು ದೃಷ್ಟಿಯಿಂದ ಈ ವಿಭಾಗ ಭೂಗೋ~
ಲದ ಇತಿಹಾಸವಾಗಿದೆ. ಅನೇಕ ವರ್ಷಗಳಿಂದ ಮಾನವನ ಮೇಲೆ ಉಂಟಾದ ಭೌತಿಕ
ಸಂಗತಿಗಳ ಪರಿಣಾಮ ಕುರಿತು ಚರ್ಚಿಸುವ ವಿಭಾಗ ಇದೆಂದರೂ ತಪ್ಪಾಗಲಾರದು.
ಅಂದರೆ ಮಾನವನ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಪ್ರೇರೇಪಣೆ ನೀಡುವ
ಭೌತಿಕ ಅಂಶಗಳ ಅಭ್ಯಾಸವೆಂದರೂ ಅಡ್ಡಿ ಇಲ್ಲ.

ಮೇಲೆ ಹೇಳಿದ ಎಲ್ಲ ವಿಭಾಗಗಳ ಬಗ್ಗೆ ಸರಿಯಾದ ಜ್ಞಾನವಾದರೆ ಉತ್ತಮ
ನಾಗರಿಕರನ್ನು ತಯಾರಿಸುವಲ್ಲಿ. `ದೇಶದ ಆರ್ಥಿಕ' ಸಾಮಾಜಿಕ ಬದಲಾವಣೆ ಉಂಟು
ಮಾಡುವಲ್ಲಿ ಯಾವುದೇ ತೊಂದರೆ ಉದ್ಭವಿಸಲಾರದೆಂಬುದು ನಿರ್ವಿವಾದ
ವಿಷಯ. ಆದಕಾರಣ ಭೂಗೋಲ ವಿಷಯದ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ
ಇವೆಲ್ಲವುಗಳ ಬಗ್ಗೆ ಜ್ಞಾನ ಇರಬೇಕಾದದ್ದು ಅವಶ್ಯ.

ಪ್ರಶ್ನೆ 4) ಪಠ್ಯಕ್ರಮ ಹಾಗೂ ಪಠ್ಯವಸ್ತುವಿನಲ್ಲಿ ಭೂಗೋಲ ಬೋದನೆಗಿರುವ
ಮಹತ್ವವೇನು? ಚರ್ಚಿಸಿರಿ.

ಉತ್ತರ :- ಭೂಗೋಲ ವಿಷಯವು ಅನೇಕ ಮಹತ್ವದ ವಿಷಯ ಹಾಗೂ ಮಹ~
ತ್ವದ ಉಪಯೋಗಗಳನ್ನು ಹೊಂದಿರುವಂಥ ವಿಷಯವಾಗಿದೆ. ಒಂದು ಕಡೆಗೆ ಗಣಿತ,
-9-
ಸಮಾಜಶಾಸ್ತ್ರ, ಜೀವಶಾಸ್ತ್ರ ಲೋಹಗಳ ಶಾಸ್ತ್ರ ಹಾಗೂ ಇನ್ನಿತರ ವೈಜ್ಞಾನಿಕ ಶಾಸ್ತ್ರ~
ಗಳಿದ್ದು ಇನ್ನೊಂದೆಡೆಗೆ ಮಾನವಶಾಸ್ತ್ರವನ್ನೇ ಪ್ರೇರೇಪಿಸುವ ಭೂಗೋಲ ವಿಷಯವಿದೆ.
ಮಾನವನ ಅನೇಕ ಚಟುವಟಿಕೆಗಳು ಭೌಗೋಲಿಕ ಸಂಗತಿಗಳಿಂದ ನಿರ್ಧರಿಸಲ್ಪಡುತ್ತವೆ.
ಈ ಎಲ್ಲ ಕಾರಣಗಳಿಂದ ಭೂಗೋಲದ ಮಹತ್ವವು ಸಾಕಷ್ಟು ಹೆಚ್ಚಿದೆ. ಈ ವಿಷಯದ
ಅಭ್ಯಾಸದಲ್ಲಿ ಒಂದೆಡೆಗೆ ಮಾನವನ ಮೇಲಿನ ನೈಸರ್ಗಿಕ ಪರಿಸರದ ಪರಿಣಾಮ ಅಭ್ಯಸಿಸಿ~
ದರೆ ಇನ್ನೊಂದೆಡೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರಗಳ ಬಗ್ಗೆ ಅಭ್ಯಸಿಸುತ್ತವೆ
ಹೀಗೆ ಅನೇಕ ಸಂಗತಿಗಳನ್ನು ಒಳಗೊಂಡಿರುವ ವಿಷಯಗಳು ವಿರಳವೆನ್ನಬಹುದು. ಆದರೆ
ಭೂಗೋಲ ವಿಷಯವು ನೈಸರ್ಗಿಕ ಹಾಗೂ ಸಾಮಾಜಿಕ ವಿಜ್ಞಾನಗಳ ನಡುವಿನ ಕೊಂಡಿ
ಎಂದು ಹೇಳಬಹುದು. ಸಮಾಜದ ಅನೇಕ ರಾಜಕೀಯ ಹಾಗೂ ಸಮಾಜದ
ಸಮಸ್ಯೆಗಳನ್ನು ಅಭ್ಯಸಿಸಲು ಈ ವಿಷಯವು ಅತ್ಯಂತ ಉಪಯುಕ್ತವಾಗಿದೆ.

ಭೂಗೋಲ ವಿಷಯವು ವಿಜ್ಞಾನ ಹಾಗೂ ಕಲೆಯ ಘಟಕನ್ನು ಅಳವಡಿಸಿ ಕೊಂ~
ಡಿರುವಂತಹ ವಿಷಯವು ಆದ ಕಾರಣ ಇದರ ಅಭ್ಯಾಸ ವಿಲ್ಲದೆ ಪೂರ್ಣತೆ ಪಡಿಯು~
ವದು ಅಸಾಧ್ಯ. ಇದು ಅನೇಕ ಭೌತಿಕ ನಿಯಮಗಳಿಗೆ ಉತ್ತರವನ್ನು ನಿಡುತ್ತದೆ. ಆ
ಎಲ್ಲ ಉತ್ತರಗಳ ನಿರ್ದಿಷ್ಟ ನಿಯಮಗಳಿಂದ ಕೂಡಿದ್ದು ಸತ್ಯದ ಅರಿವು ಉಂಟು ಮಾಡು~
ತ್ತವೆ.

ಇಂದಿನ ಆಧುನಿಕ ಯುಗದಲ್ಲಿ ಅನೇಕ ವಿಷಯಗಳ ಬೆಳವಣಿಗೆಗೆ ಭೂಗೋಲ ವಿಷ~
ಯವು ಸಹಾಯಕವಾಗಿದೆ. ಭಾಷೆ, ಇತಿಹಾಸಗಳಂತಹ ವಿಷಯಗಳ ಬೆನ್ನೆಲುಬಾಗಿದೆ.
ಭೂಗೋಲವು ವೈಜ್ಞಾನಿಕ ವಿಷಯಗಳು ಬೆಳೆದು ಸಮೃದ್ಧಿ ಹೊಂದುವಲ್ಲಿ ಹೆಚ್ಚಿನ ಪಾತ್ರ~
ವಹಿಸಿದೆ. ಈ ಎಲ್ಲ ಕಾರಣಗಳಿಂದ ಅದು ಪಠ್ಯ ಕ್ರಮದಲ್ಲಿ ಅತೀ ಮಹತ್ವದ ಸ್ಥಾನ~
ವನ್ನು ಆಕ್ರಮಿಸಿದೆ.

ಮಾನವನ ಜೀವನ ಹಾಗೂ ಅನೇಕ ಘಟನೆಗಳು ಅಂದರೆ, ವಿಚಾರ ಮಾಡುವದು
ಮುಂತಾದವುಗಳು ಭೂಗೋಲ಼ದಿಂದ ಪರಿಣಾಮಿತವಾಗಿವೆ. ಮಾನವ ಜನಾಂಗದ
ಸಂಸ್ಕೃತಿಯ ಬೆಳವಣಿಗೆಯಲ್ಲಿಯೂ ಇದು ಅತ್ಯಂತ ಪರಿಣಾಮ ಕಾರಿಯಾದ ಪಾತ್ರವನ್ನು
ವಹಿಸಿದೆ. ಇದರ ಜ್ಞಾನ ವಿಲ್ಲದೆ ಉಳಿದ ಯಾವುದೇ ವಿಷಯದ ಬಗ್ಗೆ ಜ್ಞಾನ ಪಡೆಯು~
ವದು ಅಸಾಧ್ಯದ ಮಾತಾಗಿದೆ. ಇಂದಿನ ದಿನಗಳಲ್ಲಿ ವಾಸಿಸಲು ಭೂಮಿಯ ಕೊರತೆ~
ಯುಂಟಾಗುತ್ತಿದೆ. ಮಾನವನು ಅಂತರರಾಷ್ಟ್ರೀಯ ಯುಗದಲ್ಲಿ ಜೀವಿಸುತ್ತಿದ್ದಾನೆ.
ಕಾರಣ ಜಗತ್ತಿನ ಎಲ್ಲ ಸಂಸ್ಕೃತಿಗಳ ಪರಿಚಯ ಹೊಂದಿರ ಬೇಕಾದದ್ದು ಅತೀ ಅವಶ್ಯವಾ~
ಗಿದೆ. ಈ ಎಲ್ಲ ಸಂಗತಿಗಳನ್ನು ದೊರಕಿಸಿ ಕೊಡುವಂಥ ಏಕಮೇವ ವಿಷಯ ಇದಾಗಿದೆ.

ಒಂದು ವೇಳೆ ನಾವು ಯಾವುದಾದರೊಂದು ದೇಶದ ಇತಿಹಾಸವನ್ನು ಅರಿಯಬೇ~
ಕೆಂದು ಇಚ್ಛಿಸಿದಲ್ಲಿ ನಮಗೆ ಸಾಕಷ್ಟು ವಿಷಯಗಳನ್ನು ಒದಗಿಸುವಂಥಹದು ಭೂಗೋಲ
ವಿಷಯವಾಗಿದೆ. ಅನೇಕ ಭೌಗೋಲಿಕ ಸಂಗತಿಗಳ ವಿವರಣೆಯು ಭಾಷಾಶಾಸ್ತ್ರದಲ್ಲಿ
-10-
ಅಡಕವಾಗಿರುವದರಿಂದ ಭಾಷಾಶಾಸ್ತ್ರವು ಅತ್ಯಂತ ಶ್ರೀಮಂತಗೊಂಡಿದೆ. ಇದರಿಂದಲೇ
ಭೂಗೋಲ ವಿಷಯವು ಪಠ್ಯಕ್ರಮ ಹಾಗೂ ಪಠ್ಯವಸ್ತುವಿನಲ್ಲಿ ಮಹತ್ವದ ಸ್ಥಾನವನ್ನು
ಆಕ್ರಮಿಸಿದೆ.

ಯಾವುದೇ ದೇಶವು ತನ್ನ ಶೈಕ್ಷಣಿಕ ಯೋಜನೆಯನ್ನು ಸಾಮಾಜಿಕ ಗುರಿಗಳ
ಮೇಲೆ ಕಣ್ಣಿಡದೆ ರೂಪಿಸಲು ಸಾಧ್ಯವಿಲ್ಲ. ಈ ಸಾಮಾಜಿಕ ಗುರಿಗಳು ಮುಖ್ಯವಾಗಿ
ಭೂಗೋಲಿಕ ಸಂಗತಿಗಳಿಂದ ನಿಯಂತ್ರಿಸಲ್ಪಡುತ್ತವೆ. ಆದ್ದರಿಂದಲೇ ಭೂಗೋಲವು
ದೇಶದ ಆರ್ಥಿಕ - ಸಾಮಾಜಿಕ ಮೌಲ್ಯಗಳನ್ನು ನಿರ್ಧರಿಸಿ ಪರಿಣಾಮಕಾರಿಯಾಗುವಂತೆ
ಮಾಡುತ್ತವೆ. ಆದ್ದರಿಂದ ಭೂಗೋಲಿಗೆ ಪಠ್ಯಕ್ರಮದಲ್ಲಿ ಪ್ರಮುಖ ಸ್ಥಾನ ಕೊಡಬೇ~
ಕಾದದ್ದು ಅವಶ್ಯ.

ಭೂಗೋಲದ ಮಹತ್ವ :- ಇದು ಮಾನವ ಜನಾಂಗಕ್ಕೆ ಅತ್ಯವಶ್ಯವಾಗಿರುವದ~
ರಿಂದ ಪಠ್ಯಕ್ರಮದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಬೇರೆ ಬೇರೆ ಲೇಖಕರು ಇದರ ಮಹ~
ತ್ವದ ಬಗ್ಗೆ ಬೇರೆ ಬೇರೆಯಾಗಿ ಹೇಳಿದ್ದಾರೆ. ಅವರಲ್ಲಿ ಪಿ. ಇ. ಜೋನ್ಸನ ಪ್ರಕಾರ
ಕೆಳಗಿನ ಕಾರಣಗಳಿಂದ ಅದರ ಮಹತ್ವ ಹೆಚ್ಚಿದೆ. (1) ಭೂಗೋಲ ಇದು ಮಾನವನ
ಪರಿಸರ ಹಾಗೂ ಮಾನವನ ವ್ಯಕ್ತಿತ್ವದ ಬಗ್ಗೆ ನಿಜವಾದ ಚಿತ್ರವನ್ನು ನೀಡಬಲ್ಲದು.
ಅಲ್ಲದೆ ನಮ್ಮ ನೈಜ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಅನೇಕ ಸಂಗತಿಗಳ ಜ್ಞಾನ~
ವನ್ನು ಒದಗಿಸಿಕೊಡುವದು.

2) ಅನೇಕ ದೇಶಗಳ ಬೇರೆ ಬೇರೆ ಹವಾಮಾನ ನೈಸರ್ಗಿಕ ಸಂಗತಿಗಳ ಗಣಿ~
ಸಂಪತ್ತು ಮುಂಗಳ ಬಗ್ಗೆ ಜ್ಞಾನ ಮಾಡಿಕೊಡುತ್ತದೆ. ಹಾಗೂ ಬೇರೆ ಬೇರೆ ದೇಶಗಳ
ನಡುವಿರುವ ಅಂತರವನ್ನು ತಿಳಿಸುತ್ತದೆ.

3) ಭೂಗೋಲ ವಿಷಯವು ನಕಾಶ ಚಿತ್ರಗಳನ್ನು ಓದಿ ಅರ್ಥಮಾಡಿಕೊಳ್ಳಲು
ಕಲಿಸುತ್ತದೆ.

4) ಬೇರೆ ಬೇರೆ ದೇಶಗಳ ಅಭ್ಯಾಸ ಮಾಡುವಾಗ ಅಲ್ಲಿಯ ಮಾನವನ ಚಟುವಟಿಕೆ~
ಗಳು ಹಾಗೂ ನೈಸರ್ಗಿಕ ಸಂಗತಿಗಳ ಬಗ್ಗೆ ವಿಚಾರ ಮಾಡುತ್ತಿವೆ. ಈ ವಿಚಾರ ಮಾಡು~
ವದರಿಂದ ಮಾನವನ ನಿರೀಕ್ಷಣಾ ಸಾಮರ್ಥ್ಯ ಬೆಳೆಯುತ್ತದೆ ಆದ್ದರಿಂದ ಇದು ನಿರೀ~
ಕ್ಷಣಾ ಸಾಮರ್ಥ್ಯವನ್ನು ಬೆಳೆಸುವ ವಿಷಯವಾಗಿದೆ.

ಫೆರ್್ಗ್ರೀವ್ಹರ ವಿಚಾರದಲ್ಲಿ ಭೂಗೋಲ ವಿಷಯವು ಕೆಳಗಿನ ಸಂಗತಿಗಳಿಂದ
ಮಹತ್ವ ಪಡೆದಿದೆ. (1) ನಮ್ಮ ಜೀವನದ 2/3 ಭಾಗವು ನಮ್ಮ ನೆರೆಹೊರೆಯವರೊಂ~
ದಿಗೆ ನಮ್ಮ ದೇಶದ ಜನರೊಂದಿಗೆ ಸಂಪರ್ಕಿಸುವದರಲ್ಲಿಯೇ ಕಳೆಯುತ್ತದೆ. ಅಂದರೆ
ಜೀವನ 2/3 ಭಾಗವನ್ನು ನಾಗರಿಕರ ಕರ್ತವ್ಯವನ್ನು ನಿಭಾಯಿಸುವಲ್ಲಿ ಕಳೆಯು~
ತ್ತದೆ. ಭೂಗೋಲದಿಂದ ಬೇರೆ ಬೇರೆ ದೇಶಗಳ ಜನರ ಜೀವನವನ್ನು ಅರಿಯಲು ಸಾಧ್ಯವಾಗುತ್ತದೆ.
-11-
ಈ ಜ್ಞಾನವು ನಮ್ಮ ಕರ್ತವ್ಯಗಳನ್ನು ಪೂರೈಸುವದಲ್ಲಿ ಅತ್ಯಂತ
ಸಹಾಯಕವಾಗಿ ಪರಿಣಮಿಸುತ್ತವೆ.

2) ಆರ್ಥಿಕ ದೃಷ್ಟಿಯಿಂದಲೂ ಭೂಗೋಲ ವಿಷಯವು ಅತ್ಯಂತ ಮಹತ್ವದ್ದಾಗಿದೆ.
ಈ ವಿಷಯವು ಬೇರೆ ಬೇರೆ ದೇಶದ ಜನರ ಆರ್ಥಿಕ ಬೇಕು ಬೇಡಗಳನ್ನು ತಿಳಿಸುತ್ತದೆ.
ಇದರ ಮೂಲಕವೇ ರಾಜಕೀಯ ವ್ಯಕ್ತಿಗಳು. ಕೈಗಾರಿಕೆ ತಜ್ಞರು ಕೃಷಿಕಾರರು ತಮ್ಮ
ಕೆಲಸದ ಬಗ್ಗೆ ಅರಿಯಲು ಸಾಧ್ಯ.

ಭೂಗೋಲದ ಮಹತ್ವವನ್ನು ಕೆಳಗಿನ ತಲೆಬರಹಗಳ ಅಡಿಯಲ್ಲಿ ಅಭ್ಯಸಿಸು~
ವದು ಅತ್ಯಂತ ಯೋಗ್ಯವೆನಿಸುತ್ತದೆ.

1) ಪ್ರಾಯೋಗಿಕ ಮಹತ್ವ :- ನಮ್ಮ ಜೀವನದಲ್ಲಿ ಭೂಗೋಲವು ಅತ್ಯಂತ
ಮಹತ್ವದ ಸ್ಥಾನಹೊಂದಿದೆ. ಇದು ವಿದ್ಯಾರ್ಥಿಗಳು ತಮ್ಮ ಜೀವನ ಅನೇಕ ಸಮಸ್ಯೆ~
ಗಳನ್ನು ಎದುರಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಪ್ರಾಯೋಗಿಕ ಮಹತ್ವದ
ಬಗ್ಗೆ ಯಾರೂ ಎರಡು ಮಾತನ್ನಾಡಲಾರರು. ಭೂಗೋಲದ ವಿದ್ಯಾರ್ಥಿಗಳು ದೇಶದ
ಸಮಗ್ರ ಸ್ಥಿತಿ, ಅಂದರೆ ಹವಾಮಾನ, ಕೃಷಿ, ನೈಸರ್ಗಿಕ ಸಂಪನ್ಮೂಲಗಳು ಗಣಿಸಂಪತ್ತು
ಮುಂತಾದವುಗಳ ಬಗ್ಗೆ ಸರಿಯಾದ ಜ್ಞಾನ ಪಡೆಯ ಬಲ್ಲರು. ಇದು ಕೈಗಾರಿಕೆ ಹಾಗೂ
ವ್ಯಾಪಾರ ಬಗ್ಗೆಯೂ ತಿಳುವಳಿಕೆ, ನೀಡುತ್ತದೆ. ಈ ಎಲ್ಲ ಜ್ಞಾನವು ಯುವ ಜನರಿಗೆ
ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿ ಪರಿಣಮಿಸು~
ತ್ತದೆ. ಹೇಗೆಂದರೆ ಒಬ್ಬ ಯುವಕನು ತನ್ನ ವಿದ್ಯಾ ಅಭ್ಯಾಸದ ನಂತರ ಯಾವುದಾ~
ದರೊಂದು ಕೈಗಾರಿಕೆಯನ್ನು ಸ್ಥಾಪಿಸಲು ಯೋಚಿಸಿದರೆ ಮೊದಲು ಅವನಿಗೆ ಅದಕ್ಕೆ
ಬೇಕಾದ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಬೇಕು. ಇದು ಭೂಗೋಲದ
ಅಭ್ಯಾಸದಿಂದ ಮಾತ್ರ ದೊರೆಯಲು ಸಾಧ್ಯ.

ಇದು ನಾವು ಜೀವಿಸುವ ಭೂಮಿಯ ಬಗ್ಗೆಯೂ ಜ್ಞಾನವನ್ನು ಒದಗಿಸುತ್ತದೆ.
ನಾವು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬೇರೆ ದೇಶದೊಂ~
ದಿಗೆ ಸಂಪರ್ಕಿಸ ಬೇಕಾದರೆ ಅದರ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ.

2) ರಾಜಕೀಯ ವ್ಯಕ್ತಿಗಳಿಗೆ ಹಾಗೂ ಆಡಳಿತಗಾರರಿಗೆ ಇದರ ಜ್ಞಾನದ
ಉಪಯುಕ್ತತೆ :- ರಾಜಕೀಯ ವ್ಯಕ್ತಿಗಳಿಗೆ ಹಾಗೂ ಆಡಳಿತಗಾರರಿಗೆ ತಮ್ಮ
ದೇಶದ ಆಡಳಿತವನ್ನು ತಮ್ಮ ದೇಶದ ಭೌಗೋಲಿಕದ ಸಂಗತಿಗಳ ಬಗ್ಗೆ ಅರಿವಿಲ್ಲದೆ
ನಡೆಸುವದು ಅಸಾಧ್ಯ. ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಜೀವನವು
ಮುಖ್ಯವಾಗಿ ಭೌಗೋಲಿಕ ಸಂಗತಿಗಳನ್ನು ಅವಲಂಬಿಸಿದೆ. ಇದರ ಜ್ಞಾನವಿಲ್ಲದೆ
ಬೇರೆ ಬೇರೆ ದೇಶಗಳ ಜನರು ಹೇಗೆ ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆಂಬುದನ್ನು
ತಿಳಿಯುವದು ಕಠಿಣ. ಒಂದು ದೇಶ ಇನ್ನೊಂದು ದೇಶದ ಸಹಕಾರ ವಿಲ್ಲದೆ ಮುಂದುವರೆಯುವದು
-12-
ಅಶಕ್ಯ. ಹೇಗೆಂದರೆ ಒಂದು ದೇಶ ಕೆಲವು ಒಳ್ಳೆಯ ವಸ್ತುಗಳನ್ನು ಉತ್ಪಾ~
ದಿಸುತ್ತದೆಂದು ತಿಳಿಸಿದರೆ ಅದಕ್ಕೆ ಬೇರೆ ದೇಶದಲ್ಲಿ ಸರಿಯಾದ ಮಾರುಕಟ್ಟೆ ದೊರೆತರೆ
ಮಾತ್ರ ಆ ದೇಶ ಮುಂದುವರೆಯಬಲ್ಲದು. ಅಂದಾಗ ಆಡಳಿತಗಾರರು ಭೂಗೋಲ
ವಿಷಯ ಜ್ಞಾನ ಹೊಂದಿದ್ದರೆ ಮಾತ್ರ ಬೇರೆ ದೇಶಗಳೊಂದಿಗೆ ಒಳ್ಳೆಯ ಸಂಬಂಧ
ಹೊಂದಿ ತಮ್ಮ ದೇಶ ಮುಂದುವರೆಯುವಂತೆ ಮಾಡಬಲ್ಲರು. ಆದಕಾರಣ ದೇಶದ
ಮುಂದುವರೆಯುವಿಕೆಯಲ್ಲಿ ಭೂಗೋಲ ವಿಷಯ ಅತ್ಯಂತ ಮಹತ್ವದ ಪಾತ್ರವನ್ನಾ~
ಡುತ್ತದೆ.

3) ನೈಸರ್ಗಿಕ ಕುತೂಹಲ :- ಪ್ರತಿಯೊಬ್ಬನೂ ಇತರೆ ದೇಶದ ಜನರ ಬಗ್ಗೆ
ಅರಿಯುವಲ್ಲಿ ಕುತೂಹಲ ಹೊಂದಿರುವದು ಸಾಮಾನ್ಯ. ಈ ಕೂತೂಹಲವನ್ನು
ಭೂಗೋಲ ಮಾತ್ರ ತಣಿಸಬಲ್ಲದು. ಮಾನವನೂ ಕೂಡ ತನ್ನ ಜೀವದ ಮೇಲೆ ಪರಿ~
ಣಾಮ ಬೀರುವ ಅಂಶಗಳನ್ನು ಅಳಿಯುವಲ್ಲಿ ಅತ್ಯಂತ ಕುತೂಹಲ ಹೊಂದಿರುತ್ತಾನೆ
ಇದನ್ನು ಭೂಗೋಲ ಮಾತ್ರ ತಣಿಸಬಲ್ಲದು ಹೀಗೆ ಕುತೂಹಲ ತಣಿಸುವದರ ಮೂಲಕ
ಭೂಗೋಲ ಅತ್ಯಂತ ಮಹತ್ವವನ್ನು ಪಡೆದಿದೆ.

4) ಆರ್ಥಿಕ ದೃಷ್ಟಿಯಿಂದ :- ಆರ್ಥಿಕ ದೃಷ್ಟಿಯಿಂದಲೂ ಭೂಗೋಲ ಮಹ~
ತ್ವವನ್ನು ಪಡೆದಿದೆ. ಭೂಗೋಲದ ಜ್ಞಾನದಿಂದ ಸ್ವಾಭಾವಿಕ ಸಂಪನ್ಮೂಲಗಳು ಗಣಿ
ಸಂಪತ್ತು, ಕೃಷಿ ಸಂಪತ್ತು ಅಲ್ಲದೆ ಜೀವನದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ
ಸಂಗತಿಗಳ ಸರಿಯಾದ ತಿಳುವಳಿಕೆ ಉಂಟಾಗುತ್ತದೆ. ಯಾವುದೇ ವ್ಯಕ್ತಿ ಅಥವಾ
ದೇಶ ಆರ್ಥಿಕವಾಗಿ ಸಬಲ಼ವಾಗಿದ್ದರೆ ಮಾತ್ರ ಅದು ಫಲಭರಿತವಾಗಲು ಸಾಧ್ಯ. ಈ
ದೃಷ್ಟಿಯಿಂದ ಭೂಗೋಲ ಒಂದು ಅವಶ್ಯಕ ವಿಷಯವಾಗಿದೆ.

5) ರಾಜಕೀಯ ದೃಷ್ಟಿಯಿಂದ :- ಯಾವುದೊಂದು ದೇಶವು ರಾಜಕೀಯವಾಗಿ
ಮುಂದುವರೆಯಬೇಕಾದರೆ ಅದಕ್ಕೆ ಬೇರೆ ದೇಶಗಳ ಬಗ್ಗೆ ಸರಿಯಾದ ತಿಳುವಳಿಕೆ
ಅವಶ್ಯ. ಇದು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ. ಭೂಗೋಲದ ಜ್ಞಾನವು
ಬೇರೆ ದೇಶದ ಜನರೊಂದಿಗೆ ಸೌಹಾರ್ದ್ರಯುತ ದೃಷ್ಟಿಕೋನ ಬೆಳೆಸಿಕೊಳ್ಳಲು
ಸಹಾಯ ಮಾಡುತ್ತದೆ. ಅಲ್ಲದೆ ಬೇರೆ ದೇಶದ ಜನರ ಸಮಸ್ಯೆ ಹಾಗೂ ಸ್ಥಿತಿಯನ್ನು
ಅರಿತುಕೊಂಡು ಅವರ ಸಮಸ್ಯೆ ಹಾಗೂ ತೊಂದರೆಗಳನ್ನು ಸಹಾನುಭೂತಿ ಪರವಾಗಿ
ಪರಿಹರಿಸಲು ಸಾಧ್ಯವಾಗುತ್ತದೆ. ಸಮೃದ್ಧಿ ಹೊಂದಿದ ದೇಶದಲ್ಲಿಯ ಜನರು ಬಡದೇ~
ಶದ ಜನರು ಸಮಸ್ಯೆಗಳನ್ನು ತಿಳಿದಲ್ಲಿ ಒಬ್ಬರಿಗೊಬ್ಬರು ಸಹಾಯಕರಾಗಿ ಎರಡೂ
ರಾಷ್ಟ್ರಗಳು ಸಮನ್ವಯ ಸಾಧಿಸಬಹುದು. ಹೀಗೆ ಭೂಗೋಲ ವಿಷಯವು ರಾಜಕೀಯ
ದೃಷ್ಟಿಯಿಂದಲೂ ಮಹತ್ವ ಪಡೆದಿದೆ.

6) ವಿವಿಧ ವಿಜ್ಞಾನಗಳನ್ನು ಅರಿಯುವ ದೃಷ್ಟಿಯಿಂದ :- ವಿವಿಧ ಸಾಮಾ~
ಜಿಕ ವಿಜ್ಞಾನಗಳನ್ನು ಸರಿಯಾಗಿ ತಿಳಿಯುವಲ್ಲಿ ಭೂಗೋಲ ಅತ್ಯಂತ ಮಹತ್ವದ್ದಾಗಿದೆ.
-13-
ಇದರ ಸರಿಯಾದ ಜ್ಞಾನವಿಲ್ಲದೆ ಇತಿಹಾಸವನ್ನು ಅರಿಯುವದು ಕಠಿಣಕೆಲಸ. ಅನೇಕ
ಐತಿಹಾಸಿಕ ಸಂಗತಿಗಳು ಭೂಗೋಲಿಕ ಅಂಶಗಳಿಂದ ಪ್ರೇರೇಪಿಸಲ್ಪಟ್ಟಿವೆ. ಈಜಿಪ್ತ
ಹಾಗೂ ಭಾರತದಲ್ಲಿಯ ಸಂಸ್ಕೃತಿಯ ಬೆಳವಣಿಗೆಗೆ ಭೌಗೋಲಿಕ ಅಂಶಗಳೇ ಕಾರಣ
ಅವುಗಳನ್ನು ಸರಿಯಾಗಿ ತಿಳಿದುಕೊಂಡಾಗ ಇತಿಹಾಸದ ಬಗ್ಗೆ ಸರಿಯಾದ ತಿಳುವಳಿಕೆ~
ಯುಂಟಾಗುತ್ತದೆ. ಇದೇ ರೀತಿ ಒಂದು ದೇಶದ ರಾಜಕೀಯ ಜೀವನವೂ ಭೌಗೋಲಿಕ
ಅಂಶಗಳಿಂದ ನಿರ್ಧರಿಸಲ್ಪಟ್ಟಿದೆ. ಇದಕ್ಕೆ ಬೇರೆ ಬೇರೆ ದೇಶಗಳಲ್ಲಿ ಇರುವ ಬೇರೆ ಬೇರೆ
ರಾಜಕೀಯ ವ್ಯವಸ್ಥೆಗಳೇ ಉತ್ತಮ ಉದಾಹರಣೆಗಳೆನ್ನಬಹುದು. ಕಾರಣ ರಾಜಕೀಯ
ವ್ಯವಸ್ಥೆಗಳನ್಩ು ಅರಿಯಬೇಕಾದರೆ ಭೌಗೋಲಿಕ ಜ್ಞಾನ ಅತೀ ಅವಶ್ಯ. ಸಾಮಾಜಿಕ
ವಿಜ್ಞಾನವನ್ನೂ ಭೌಗೋಲಿಕ ಅಂಶಗಳು ಹೆಚ್ಚಾಗಿ ನಿರ್ಧರಿಸುತ್ತವೆ. ನಮ್ಮ ದೇಶದ
ನೈಸರ್ಗಿಕ ಸಂಪನ್ಮೂಲಗಳೇ ನಮ್ಮ ಸಮಾಜ ರಚನೆಯ ಅಡಿಪಾಯಗಳಾಗಿವೆ.
ಕಾರಣ ಯಾವ ದೇಶದ ನೈಸರ್ಗಿಕ ಸಂಪನ್ಮೂಲಗಳು ಸಮೃದ್ಧವಾಗಿರುತ್ತವೆಯೋ
ಆ ದೇಶವು ಸಿರಿವಂತಿಕೆ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತವೆ. ಸಮಾಜ ಶಾಸ್ತ್ರವನ್ನೇ
ಸರಿಯಾಗಿ ತಿಳಿಯಬೇಕಾದರೆ ಭೌಗೋಲಿಕ ಜ್ಞಾನ ಅವಶ್ಯ. ಇತಿಹಾಸ ರಾಜಕೀಯ~
ಶಾಸ್ತ್ರ ಹಾಗೂ ಸಮಾಜ ಶಾಸ್ತ್ರಗಳ ಮಟ್ಟಿಗೆ ಭೌಗೋಲಿಕ ಜ್ಞಾನ ಹೇಗೆ ಅವಶ್ಯವೊ
ಅದೇ ರೀತಿ ಧಾರ್ಮಿಕ ಶಾಸ್ತ್ರಕ್ಕೂ ಅವಶ್ಯ. ಧಾರ್ಮಿಕ ಶಾಸ್ತ್ರವು ಆಯಾ ದೇಶದ
ಭೌಗೋಲಿಕ ಅಂಶಗಳನ್ನು ಅವಲಂಬಿಸಿರುತ್ತದೆ.

7. ಬೌದ್ಧಿಕ ಮತ್ತು ಸಾಂಸ್ಕೃತಿಕ ಮಹತ್ವ :- ಭೂಗೋಲದ ಜ್ಞಾನದಿಂದ
ಯಾವದೊಂದು ದೇಶದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಮಟ್ಟವನ್ನು ಸುಲಭವಾಗಿ
ತಿಳಿಯಬಹುದು. ಈ ಜ್ಞಾನದಿಂದಲೇ ಜಗತ್ತಿನ ಸಾಂಸ್ಕೃತಿಕ ಜೀವನವನ್ನು ಅಭ್ಯಸಿಸ~
ಬಹುದು ಇದೇ ರೀತಿ ಭೌಗೋಲಿಕ ಜ್ಞಾನವು ವಿದ್ಯಾರ್ಥಿಗಳ ಕಲ್ಪನಾ ಶಕ್ತಿಯನ್ನು
ಬೆಳೆಸಲು ಸಹಾಯಕವಾಗಿದೆ. ಇದರಿಂದ ಅವರು ಪ್ರತಿಯೊಂದು ಸಂಗತಿಯ ಹಿಂದೆ
ಇರುವ ಕಾರಣ-ಪರಿಣಾಮಗಳನ್ನು ತಿಳಿಯಬಲ್ಲರು. ಇದರಿಂದ ಅವರು ಅರ್ಥಿಸುವ
ಶಕ್ತಿ ಹೆಚ್ಚುತ್ತವೆ. ಹೇಗೆಂದರೆ ವಿದ್ಯಾರ್ಥಿಗಳು ಪರ್ವತ, ನದಿ, ಕಾಡುಗಳ ಬಗ್ಗೆ 
#ಅಭ್ಯ~
ಸಿಸಿದಾಗ ಅವುಗಳ ಮಹತ್ವವನ್ನು ತಿಳಿದುಕೊಳ್ಳಬಲ್ಲ ಅಲ್ಲದೇ ಜಗತ್ತಿನ ಸಾಂಸ್ಕೃತಿಯ
ಬಗ್ಗೆಯೂ ಅರಿಯಬಲ್ಲರು. ಭೂಗೋಲದ ಜ್ಞಾನದಿಂದ ಒಂದು ದೇಶದ ಬೌದ್ಧಿಕ
ಮಟ್ಟವನ್ನು ಸುಲಭವಾಗಿ ತಿಳಿಯಬಹುದು. ಅದನ್ನೆ ಪ್ರೊ. ಫೆರ್್ಗ್ರೀವ್ಹರು ಕೆಳಗಿನಂತೆ
ವ್ಯಾಖ್ಯಿಸಿದ್ದಾರೆ.

"ಭೂಗೋಲದ ನಿಜವಾದ ಪೊಲ್ಯವೆಂದರೆ ಮಾನವ ಜಗತ್ತಿನಲ್ಲಿ ತನ್ನ ಸ್ಥಾನ
ಹಾಗೂ ಕರ್ತವ್ಯವನ್ನು ಅರಿಯುವದೇ ಆಗಿದೆ"

8) ಸಾಮಾಜಿಕ ದೃಷ್ಟಿಕೋನದ ಮಹತ್ವ :- ನಮ್ಮ ಜೀವನದ ಬಗ್ಗೆ ತಿಳುವ~
ಳಿಕೆ ಪಡೆಯಲು ಭೂಗೋಲದ ಜ್ಞಾನವು ಅತ್ಯವಶ್ಯವಾಗಿದೆ. ಇದರಿಂದ ಸಾಮಾಜಿಕ
-14-
ದೃಷ್ಟಿಕೋನದ ಬೆಳವಣಿಗೆ ಯಾಗುತ್ತವೆ. ಪ್ರತಿಯೊಬ್ಬ ಬೇರೆ ಬೇರೆ ದೇಶದ ಜನರ
ಬಗ್ಗೆ ಅರಿತು ಅವರನ್ನು ಅಣ್ಣ ತಮ್ಮಂದಿರಂತೆ ನೋಡಿಕೊಳ್ಳುವ ದೃಷ್ಟಿಕೋನ
ಬೆಳೆಸಿಕೊಂಡಾಗ ಸಂಕುಚಿತ ದೃಷ್ಟಿಕೋನ ಬದಲಾಗಿ ವಿಶಾಲವಾದ ದೃಷ್ಟಿಕೋನ
ಹೊಂದಿ ಸಮಾಜದ ಸುಧಾರಣೆ ಯಾಗಬಲ್ಲದು. ಅದರಿಂದ ವಿಶ್ವದೃಷ್ಟಿಕೋನ ಬೆಳೆಯು~
ವದರಲ್ಲಿ ಸಂಶಯವಿಲ್ಲ.

9) ಜೀವನದ ಮಹತ್ವ :- ಜೀವನದ 1/3 ಭಾಗವು ಜೀವನವನ್ನು ಗಳಿಸುವದ~
ರಲ್ಲಿಯೇ ಹೋಗುತ್ತದೆ. ಇದರ ನಡುವೆ ವಿಶ್ರಾಂತಿ ಇದ್ದು ಕೆಲವು ಸಲ ಅದನ್ನು ಹೇಗೆ
ಕಳೆಯಬೇಕೆಂಬ ಸಮಸ್ಯೆ ಉಂಟಾಗುತ್ತದೆ. ಆ ವಿಶ್ರಾಂತಿ ಸಮಯವನ್಩ೇ ಸರಿಯಾದ
ಹಾಗೂ ಉಪಯುಕ್ತವಾದ ಮಾರ್ಗದಲ್ಲಿ ಕಳೆದರೆ ಆಗ ಬರುವ ಹಾಗೂ ಜ್ಞಾನ ನಮ್ಮ
ದೃಷ್ಟಿಕೋನವನ್ನು ವಿಶಾಲಗೊಳಿಸುವದರಲ್ಲಿ ಸಂದೇಹವೇ ಇಲ್ಲ. ನಮ್ಮ ಸುತ್ತಲಿನ
ಪರಿಸರದ ಜ್ಞಾನವಿಲ್ಲದೆ ನಾವು ನಮ್ಮ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಲಾ~
ರವು. ಕಾರಣ ಭೂಗೋಲದ ಅಭ್ಯಾಸವು ನಮ್ಮ ಸುತ್ತಲಿನ ಪರಿಸರದ ಬಗ್ಗೆ ತಿಳಿದುಕೊ~
ಡುವದರಿಂದ ನಾವು ನಮ್ಮ ಜೀವನವನ್ನು ಅತ್ಯಂತ ಯೋಗ್ಯವಾದ ರೀತಿಯಲ್ಲಿ ರೂಪಿ~
ಸಿಕೊಳ್ಳ ಬಲ್ಲೆವು.

10) ಸಮಾನ ದೃಷ್ಟಿಕೋನ ಹೊಂದುವಲ್ಲಿ ಮಹತ್ವ :- ಸಮಾನ ದೃಷ್ಟಿ~
ಕೋನ ಜೀವನದಲ್ಲಿ ಅವಶ್ಯ. ಇದು ಬರಬೇಕಾದರೆ ನಮ್ಮ ಸುತ್ತು ಮುತ್ತು ಇರುವ
ಸಂಗತಿಗಳ ಬಗ್ಗೆ ಜ್ಞಾನ ಅವಶ್ಯ. ಈ ಜ್ಞಾನ ಭೂಗೋಲದಿಂದ ಮಾತ್ರ ದೊರೆಯ~
ಬಲ್ಲದು. ಪರಿಸರ ಹಾಗೂ ಸಂಪನ್ಮೂಲಗಳ ಬಗ್ಗೆ ನಿರ್ದಿಷ್ಟ ಜ್ಞಾನ ವಿದ್ದಾಗ ಅವುಗ~
ಳನ್ನು ಉಪಯೋಗಿಸುವ ಹಾಗೂ ನಮ್ಮ ಸಾಮರ್ಥ್ಯಗಳ ಬಗ್ಗೆ ಸರಿಯಾದ ಕಲ್ಪನೆ
ಉಂಟಾಗುತ್ತದೆ. ಇದರಿಂದ ಜೀವನದ ಬಗ್ಗೆ ಸಮಾನ ದೃಷ್ಟಿಕೋನ ಬೆಳೆಸಿಕೊಳ್಴ಲು
ಸಹಾಯ ವಾಗುತ್ತದೆ.

11) ರಾಷ್ಟ್ರಭಕ್ತಿ ಹಾಗೂ ಅಂತರರಾಷ್ಟ್ರೀಯತೆ ಬೆಳೆಸುವಲ್ಲಿ ಮಹತ್ವ :-
ಭೂಗೋಲದಿಂದ ಪ್ರತಿಯೊಬ್ಬನು ತನ್ನ ತಾಯ್ನಾಡಿನ ಬಗ್ಗೆ ತಿಳುವಳಿಕೆ ಪಡೆಯು~
ತ್ತಾನೆ. ತಿಳುವಳಿಕೆ ಪಡೆಯುವದೆಂದರೆ ಅದನ್ನು ಪ್ರೀತಿಸುವದು ಹೇಗೆ ಭೂಗೋಲ~
ದಿಂದ ರಾಷ್ಟ್ರಪ್ರೇಮ ಉಂಟಾಗುತ್ತದೆ.

ಅದೇ ರೀತಿ ಭೂಗೋಲ ಬೇರೆ ಬೇರೆ ದೇಶಗಳ ಹಾಗೂ ಅವುಗಳ ಜನರ ಬಗ್ಗೆ
ತಿಳುವಳಿಕೆ ಉಂಟುಮಾಡುವದರಿಂದ ಅವರ ಬಗ್ಗೆ ಆಸಕ್ತಿ ಹೆಚ್ಚು ಭೂಗೋಲದ
ವಿದ್ಯಾರ್ಥಿಯಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನ ಬೆಳೆಯುತ್ತದೆ.

12) ವೃತ್ತಿ ಹಾಗೂ ಸಾಂಸ್ಕೃತಿಕ ಜೀವನದ ಮಹತ್ವ : - ಭೂಗೋಲ ವಿಷ~
ಯವು ಮಾನವನ ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ
-15-
ಉಂಟುಮಾಡುವುದರಿಂದ ಅದು ಮಾನವನ ವೃತ್ತಿ ಹಾಗೂ ಜೀವನವನ್ನು ನಿರ್ಧರಿಸು~
ವಲ್ಲಿ ಮಹತ್ವ ಪಾತ್ರವಹಿಸುತ್ತಿದೆಂದಾಯಿತು. ಇದೇ ಕಾರಣಕ್ಕಾಗಿ ಅದು ಪಠ್ಯವಸ್ತು~
ವಿನಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇದಕ್ಕಾಗಿಯೇ ಅಮೇರಿಕೆಯ ಹಿಂದಿನ
ಅಧ್ಯಕ್ಷರಾದ ಐಸನ್್ಹಾವರರು ಭೂಗೋಲನ್ನು "ಮಾನವೀಯತೆಯ ಅಡಿಪಾಯ"~
ವೆಂದು ಕರೆದಿದ್ದಾರೆ. ಭೂಗೋಲವು ಮಾನವನ ಜೀವನವನ್ನು ಹಾಗೂ ಅವನ ಸಮಸ್ಯೆ~
ಯನ್ನು ಅರಿಯಲು ಸಹಾಯಕವಾದುದು ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಆದ್ದರಿಂದ ಈ ಗುರಿಯನ್ನು ಹೊಂದಲು ಭೂಗೋಲನ್ನು ಪರಿಣಾಮಕಾರಿಯಾಗುವಂತೆ
ಆಯ್ಕೆ ಮಾಡುವದು ಅವಶ್ಯವಾಗಿದೆ. ಇದು ಪಠ್ಯಕ್ರಮದಲ್ಲಿ ಮಹತ್ವದ ಸ್ಥಾನ ಪಡೆ~
ಯಬೇಕು. ಇದರಲ್ಲಿಯ ಅಧ್ಯಾಯಗಳನ್ನು ಅಳವಡಿಸುವಾಗ ಸರಿಯಾಗಿ ವೀಕ್ಷಿಸಿ,
ಚಿಂತಿಸಿ ನಿರ್ಧರಿಸಬೇಕು. ಆಗ ಮಾತ್ರ ಭೂಗೋಲವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ
ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಕ ವಾಗಬಲ್ಲದು.

ಪ್ರಶ್ನೆ 5. ಭೂಗೋಲ ಬೋಧನೆಯ ವಿವಿಧ ಗುರಿಗ಴ನ್ನು ಕುರಿತು ಚರ್ಚಿಸಿರಿ.

ಉತ್ತರ :- ಭೂಗೋಲದ ಮಹತ್ವವನ್ನು ಸರಿಯಾಗಿ ಅರಿತ ಮೇಲೆ ಅದರ
ಬೋಧನೆಯ ಗುರಿ ಹಾಗೂ ಉದ್ದೇಶಗಳ ಬಗ್ಗೆ ಸರಿಯಾದ ಕಲ್ಪನೆ ಇರಬೇಕು. ಇಲ್ಲ~
ದಿದ್ದರೆ ಭೂಗೋಲ ಶಿಕ್ಷಕನಿಗೆ ಭೂಗೋಲವನ್ನು ಸರಿಯಾಗಿ ಬೋಧಿಸಲು ಸಾಧ್ಯವಾ~
ಗಲಾರದು. ಗುರಿ ಹಾಗೂ ಉದ್ದೇಶಗಳಿಗನುಸಾರವಾಗಿ ಅನೇಕ ಬೋಧನಾ ಪದ್ಧತಿ~
ಗಳು ಬಳಕೆಯಲ್ಲಿವೆ. ಯಾವದೊಂದು ವಿಷಯದ ಬೋಧನೆಯು ಉದ್ದೇಶವು ಅದರ
ಉಪಯುಕ್ತತೆ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವದನ್ನು ಅವಲಂಬಿಸಿರುತ್ತದೆ
ನಮ್ಮ ಜೀವನವು ಭೌತಿಕ ಹಾಗೂ ಆಧ್ಯಾತ್ಮಿಕ ಸಂಗತಿಗಳಿಂದ ಕೂಡಿದೆ. ನಮ್ಮ
ಭೌತಿಕ ಜೀವನ ಸರಿಯಾಗಿ ನೆಲೆಯಾಗದೇ ಆಧ್ಯಾತ್ಮಿಕ ಜೀವನವು ಯಶಸ್ವಿಯಾಗಲಾ~
ರದು. ಅದೇ ರೀತಿ ಆಧ್ಯಾತ್ಮಿಕ ಜೀವನ ಸರಿಯಾಗಿರದಿದ್ದರೆ ಭೌತಿಕ ಜೀವನವು
ಯಶಸ್ವಿಯಾಗಲಾರದು ಅಂದರೆ ಅವು ಒಂದನ್ನೊಂದು ಬಹಳಷ್ಟು ಅವಲಂಬಿಸಿವೆ.
ಕಾರಣ ವಿಷಯದ ಮಹತ್ವವನ್ನು ಅವಲಂಬಿಸಿ ಅದರ ಗುರಿ ಹಾಗೂ ಉದ್ದೇಶಗಳು
ನಿರ್ಧರಿಸಲ್ಪಡುತ್ತವೆ. ಸಾಮಾನ್ಯವಾಗಿ ಪ್ರತಿಯೊಂದು ವಿಷಯಕ್ಕೂ ಬೋಧನಾ ಗುರಿ
ಹಾಗೂ ಉದ್ದೇಶಗಳು ಶಿಕ್ಷಣದ ಗುರಿ ಹಾಗೂ ಉದ್ದೇಶಗಳಂತೆಯೇ ಇರುತ್ತವೆ. ಶಿಕ್ಷ~
ಣದ ಗುರಿ ಹಾಗೂ ಉದ್ದೇಶಗಳು ಸಮಾಜದ ಸಾಮಾಜಿಕ ಉದ್ದೇಶ ಹಾಗೂ ಆರ್ಥಿಕ
ಅಂಶಗಳನ್ನು ಅವಲಂಬಿಸಿರುತ್ತದೆ.

ನಮ್ಮ ಜೀವನದ ಆಗು ಹೋಗುಗಳನ್ನು ನಿರ್ಧರಿಸುವ ವಸ್ತು ಹಾಗೂ ಸಂಗತಿ~
ಗಳೊಡನೆ ಭೂಗೋಲವು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ. ಆದ್ದ~
ರಿಂದ ಭೂಗೋಲದ ಗುರಿ ಹಾಗೂ ಉದ್ದೇಶಗಳು ಬೇರೆ ಯಾಗಿರದೆ ಶಿಕ್ಷಣದ ಹಾಗೂ
ಸಮಾಜದ ಗುರಿ ಉದ್ದೇಶಗಳೇ ಆಗಿವೆ ಎಂದರೆ ತಪ್ಪಾಗಲಾರದು. ಬೇರೆ ಬೇರೆ ಲೇಖಕರು
-16-
ಭೂಗೋಲ ಬೋಧನೆಯ ವಿವಿಧ ಉದ್ದೇಶಗಳನ್ನು ವಿವಿಧ ದೃಷ್ಟಿಕೋನಗಳಿಂದ
ವೀಕ್ಷಿಸಿದ್ದಾರೆ.

ಪ್ರೊ ಹೊಲ್ಡ್ಝರ ಅಭಿಪ್ರಾಯದ ಮೇರೆಗೆ ಭೂಗೋಲ ಬೋಧನೆಯ ಉದ್ದೇಶ~
ಗಳು ಎರಡು ವಿಧದಲ್ಲಿ ಗುರಿಗಳನ್ನು ಪ್ರೊ ಹೊಲ್ಡ್ಝರು ಕೆಳಗಿನಂತೆ ವರ್ಗೀಕರಿಸಿದ್ದಾರೆ

ಅ) ಭೂಗೋಲದ ಮೂಲಕ ಭೂಮಿಯ ಪರಿಚಯ
ಬ) ಭೂಗೋಲದ ಜ್ಞಾನದ ಮೂಲಕ ಕೃಷಿ ಹಾಗೂ ಕೈಗಾರಿಕೆಯ ಬೆಳವಣಿಗೆ
ಕ) ಭೂಗೋಲದ ಮೂಲಕ ನಮ್ಮ ಜೀವನವನ್ನು ನಿರ್ಧರಿಸುವ ಅಂಶಗಳ ಬಗ್ಗೆ
ಜ್ಞಾನ
ಡ) ಭೂಗೋಲದ ಮೂಲಕ ವೃತ್ತ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಬರುವ ಭೌಗೋ~
ಲಿಕ ಅಂಶಗಳ ಬಗ್ಗೆ ಸರಿಯಾದ ಜ್ಞಾನ.
ಇ) ಭೂಗೋಲದಿಂದ ವಿದ್ಯಾರ್ಥಿಗಳಲ್ಲಿ ಪ್ರವಾಸ ಹಾಗೂ ಪ್ರವಾಸೋದ್ಯಮದ ಬಗ್ಗೆ
ಇಚ್ಛೆ ಬೆಳೆಸುವದು.

ಸಾಂಸ್ಕೃತಿಕ ಗುರಿಗಳನ್ನು ಕೆಳಗಿನಂತೆ ವರ್ಗೀಕರಿಸಿದ್ದಾರೆ.

ಅ) ರಾಷ್ಟ್ರಪ್ರೇಮ ಬೆಳೆಸುವದು.
ಬ) ಪ್ರಕೃತಿಯ ಬಗ್ಗೆ ಪ್ರೀತಿ ಪ್ರಕೃತಿ ಸೌಂದಱ್ಯವನ್ನು ಮೆಚ್ಚುವ ಗುಣ ಅಲ್ಲದೆ
ಭೌತಿಕ ಶಕ್ತಿ ಮುಂತಾದವುಗಳ ಬಗ್ಗೆ ತಿಳವಳಿಕೆ ಪಡೆಯುವಂತೆ ಮಾಡುವದು.
ಕ) ಜಗತ್ತಿನ ನಾಗರೀಕತೆ ವಿಶ್ವ ಭಾತೃತ್ವ ಮಾನವ - ಮಾನವರಲ್ಲಿಯ ಸಹಕಾರ
ಸಾಹಾನುಭೂತಿ ಪರ ದೃಷ್ಟಿಕೋನ ಬೆಳೆಸುವದು.
ಡ) ಭೂಮಿ ಹಾಗೂ ಮಾನವನಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಮೌಲ್ಯಗಳ ಪರಿ~
ಚಯ ಮಾಡಿಸುವದು.
ಇ) ಭೌಗೋಲಿಕ ಪರಿಸರದೊಂದಿಗೆ ಮಾನವನ ಜೀವನದ ಹೊಂದಾಣಿಕೆ ಕುರಿತು
ತಿಳುವಳಿಕೆ.

ಪ್ರೊ. ಫೆರ್್ಗ್ರೀವ್ಹರು ಭೂಗೋಲ ಬೋಧನೆಯ ಉದ್ದೇಶಗಳನ್ನು ಕೆಳಗಿನಂತೆ
ಹೇಳಿದ್ದಾರೆ. ಭೂಗೋಲದ ಮುಖ್ಯ ಉದ್ದೇಶವು ಅಗಾಧ ವಿಶ್ವದ ಅನೇಕ ಸಂಗತಿಗಳ
ಬಗ್ಗೆ ಸರಿಯಾಗಿ ಕಲ್ಪನೆ ಮಾಡುವಂತೆ ಭವಿಷ್ಯದ ನಾಗರಿಕರನ್ನು ತಯಾರಿಸುವದಾ~
ಗಿದೆ ಇದಲ್ಲದೆ ಆ ನಾಗರಿಕರೂ ತಮ್ಮ ಸುತ್ತ ಮುತ್ತಲಿನ ವಿಶ್ವದ ರಾಜಕೀಯ ಹಾಗೂ
ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನ ಶೀಲರಾಗುವಂತೆ ಮಾಡುವದೇ ಆಗಿದೆ".

1) ಬೌದ್ಧಿಕ ಬೆಳವಣಿಗೆ :- ಮಗುವಿನ ಸರ್ವತೋಮುಖ ಬೆಳವಣಿಗೆ ಆಗಿ,
ಮಗುವಿನ ವ್ಯಕ್ತಿತ್ವವನ್ನು ರೂಪಿಸುವದೇ ಶಿಕ್ಷಣದ ಮಹದೋದ್ದೇಶವಾಗಿದೆ. ಈ ಬೆಳವ~
ಣಿಗೆಯ ಬೌದ್ಧಿಕ ಬೆಳವಣಿಗೆಯನ್ನು ಒಳಗೊಂಡಿದೆ. ಬೌದ್ಧಿಕ ಬೆಳವಣಿಗೆ ಇಲ್ಲದೆ
ಶಿಕ್ಷಣದ ಉದ್ದೇಶ ಅಪೂರ಼್ಣ ಬೌದ್ಧಿಕ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗದಿದ್ದರೆ
-17-
ಸಾಂಸ್ಕೃತಿಕ ಜಾಗೃತಿ ಯಾಗಲಾರದು. ಕೇವಲ ಜೀವನವನ್ನು ರೂಪಿಸಿಕೊಳ್ಳು~
ವದು ಶಿಕ್ಷಣದ ಉದ್ದೇಶವಲ್ಲ. ಜೀವನದಲ್ಲಿ ವಿಶ್ರಾಂತಿಗೂ ಅವಕಾಶವಿದೆ. ಇದನ್ನು ಸರಿ~
ಯಾದ ರೀತಿಯಲ್ಲಿ ರೂಪಿಸಬೇಕಾದದ್ದು ಅವಶ್ಯ. ಒಂದು ವೇಳೆ ವಿಶ್ರಾಂತಿಯನ್ನು ಸರಿ~
ಯಾಗಿ ಉಪಯೋಗಿಸಿದ್ದೆ ಆದರೆ (ಅಂದರೆ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಬೆಳವಣಿಗೆ)
ಮಾನವ ಜನಾಂಗವು ಸಮತೋಲನವಾಗಿ ಬೆಳೆಯುತ್ತದೆ. ಬೌದ್ಧಿಕ ಬೆಳವಣಿಗೆಯಿಂದಲೇ
ಒಳ್ಳೆಯದು ಹಾಗೂ ಕೆಟ್ಟದ್ದನ್ನು ತಿಳಿಯುವ ಗುಣದ ಬೆಳವಣಿಗೆ ಕೊಳ್ಳಲಾರನು.
ಈ ಬೌದ್ಧಿಕ ಬೆಳವಣಿಗೆಗೆ ಭೂಗೋಲದ ಉದ್ದೇಶಗಳು ಅತ್ಯಂತ ಸಹಾಯಕವಾಗಿವೆ.

2) ಜಗತ್ತಿನ ಬಗ್ಗೆ ಜ್ಞಾನ ಹಾಗೂ ವಿಶಾಲ ದೃಷ್ಟಿಕೋನದ ಬೆಳವ~
ಣಿಗೆ :- ಭೂಗೋಲದ ಬಗ್ಗೆ ಜ್ಞಾನ ವೆಂದರೆ ವಿಶಾಲ ಅರ್ಥದಲ್ಲಿ ಜಗತ್ತಿನ ಬಗ್ಗೆ 
#ಜ್ಞಾನ~
ವೆಂದಾಗುತ್ತದೆ. ಜಗತ್ತಿನ ಬಗ್ಗೆ ಜ್ಞಾನ ಉಂಟಾದರೆ ವಿಶಾಲ ದೃಷ್ಟಿಕೋನ ತನ್ನಷ್ಟಕ್ಕೆ
ತಾನೇ ಉಂಟಾಗುತ್ತದೆ. ಭೂಗೋಲದಲ್ಲಿ ಬೇರೆ ಬೇರೆ ದೇಶಗಳ ಬೇರೆ ಬೇರೆ ಜನರ
ಬಗ್ಗೆ ಅಭ್ಯಿಸಿಸುತ್ತೇವೆ. ಇದರಿಂದ ಅವರ ಜೀವನ ಮಟ್ಟ ರೀತಿ ನೀತಿಗಳು ತಿಳಿದು~
ಬರುತ್ತವೆ. ಇದರಿಂದ ಅವರ ಬಗ್ಗೆ ಸಹಾನುಭೂತಿ ಪರ ದೃಷ್ಟಿಕೋನ ಬೆಳೆಯುತ್ತದೆ.
ಇದರಿಂದ ವಿಶ್ವ ಭ್ರಾತೃತ್ವ ಉಂಟಾಗಿ, ವಿಶ್ವ ನಾಗರಿಕತೆ ದೃಷ್ಟಿಕೋನ ಉಂಟಾಗುತ್ತದೆ.
ಭೂಗೋಲದ ಉದ್ದೇಶವೂ ಇದೇ ಆಗಿದೆ.

ವಿದ್ಯಾರ್ಥಿಗಳು ಬೇರೆ ಬೇರೆ ದೇಶಗಳ ಜೀವನ, ಹಾಗೂ ಪರಿಸರಗಳ ಬಗ್ಗೆ
ಅಭ್ಯಸಿಸುವದರಿಂದ, ಆಯಾ ದೇಶಗಳ ಭೂಗೋಲಿಕ ಪರಿಸರವನ್ನು ಅಭ್ಯಸಿಸುತ್ತಾರೆ.
ಈ ಜ್ಞಾನ ಅವರ ಜೀವನದ ಮೇಲೆ ಪ್ರಭಾವ ಬೀರುವ ಸಂಗತಿಗಳ ಬಗ್ಗೆ ತಿಳಿಸಿಕೊ~
ಡುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಂತರ ರಾಷ್ಟ್ರೀಯ ದೃಷ್ಟಿಕೋನ ಬೆಳೆಯು~
ತ್ತದೆ. ಇದೂಕೂಡ ಭೂಗೋಲದ ಉದ್ದೇಶವೇ ಆಗಿದೆ.

3) ಸಹಕಾರ ಮನೋಭಾವ, ಉದಾರತೆ, ಹಾಗೂ ಸಹಾನುಭೂತಿ
ಪರ ದೃಷ್ಟಿಕೋನದ ಬೆಳವಣಿಗೆ : ಭೂಗೋಲದಲ್ಲಿ ಅನೇಕ ಬಗೆಯ ಸಂಸ್ಕೃತಿ ಹಾಗೂ
ಕೈಗಾರಿಕೆಗಳ ಬಗ್ಗೆ ಅಭ್ಯಿಸಿಸುತ್ತೇವೆ. ಇದರಿಂದ ಬೇರೆ ಬೇರೆ ದೇಶಗಳ ಜನರ ಸಂಸ್ಕೃ~
ತಿ ಹಾಗೂ ಜೀವ಩ದ ಬಗ್ಗೆ ತಿಳಿದುಕೊಳ್ಳುವ ದೃಷ್ಟಿಕೋನ ಬೆಳೆಯುತ್ತದೆ. ಇದರಿಂದ ಬೇರೆ~
ಯವರ ಬಗ್ಗೆ ಹಾಗೂ ಅವರ ಸಂಸ್ಕೃತಿಯ ಬಗ್ಗೆ ಸಹಾನುಭೂತಿಪರ ದೃಷ್ಟಿಕೋನ
ಬೆಳೆಯುತ್ತದೆ. ಇದು ಕೇವಲ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಾಗರಿಕರಾಗುವಂತೆ ಮಾಡದೆ
ಅವರು ವಿಶ್ವನಾಗರಿಕರಾಗುವಂತೆ ಮಾಡುತ್ತದೆ. ಇದರಿಂದ ಅವರ, ಸಹಜೀವನ,
ಸಹಕಾರ ಮತ್ತು ಉದಾರ ಭಾವನೆಗಳನ್ನು ಬೆಳೆಸುತ್ತದೆ. ಒಂದು ವೇಳೆ ಜನರು ಈ
ಎಲ್ಲ ಗುಣಗಳನ್ನು ಹೆಚ್ಚು ಹೆಚ್ಚಾಗಿ ಪಡೆದುಕೊಂಡಲ್ಲಿ ವಿಶ್ವ ಪ್ರಜಾಪ್ರಭುತ್ವ, ವಿಶ್ವ
-18-
ಸಹಕಾರಗಳು ಯಶಸ್ವಿಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ವಿಶ್ವ~
ಶಾಂತಿ ಎಂಬುದು ಕೇವಲ ಕನಸಾಗಿ ಉಳಿಯಲಾರದು.

4) ಪರಿಸರದೊಂದಿಗೆ ಹೊಂದಿಕೊಳ್ಳುವ ಗುಣ :- ಭೂಗೋಲದ
ಅಭ್ಯಾಸ ದಿಂದ ಜನರು ಬೇರೆ ಬೇರೆ ದೇಶದ ಜನರ ಜೀವನ ಹಾಗೂ ಸಂಸ್ಕೃತಿಗಳ ಬಗ್ಗೆ
ಅರಿಯುತ್ತಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಗೂ ಕಠಿಣತೆಯೊಂದಿಗೆ ಹೊಂ~
ದಿಕೊಳ್ಳುವ ಗುಣ ಬೆಳೆಯುತ್ತದೆ. ಇದರಿಂದ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ.

5) ಆರ್ಥಿಕ ಸಬಲತೆ : - ಭೂಗೋಲದ ಅಭ್ಯಾಸದಿಂದ ಆರ್ಥಿಕ
ಸಬಲತೆಯ ಜ್ಞಾನ ಬೆಳೆದು ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು
ಬರುತ್ತದೆ. ಈ ದಿಶೆಯಲ್ಲಿ ಭೂಗೋಲ ಸ್ವಾವಲಂಬನೆಯನ್ನು ಕಲಿಸುತ್ತದೆ.

6) ಮಾನಸಿಕ ವಿಭಾಗಗಳಾದ ಚಿಕಿತ್ಸಕ ಬುದ್ದಿ, ಶೋಧನಾ ಬುದ್ಧಿ
ಮುಂತಾದವುಗಳ ಬೆಳವಣಿಗೆ :- ಭೂಗೋಲ ಬೋಧನೆಯ ಉದ್ದೇಶವು ಕೆಲವು
ಮಾನಸಿಕ ವಿಭಾಗಗಳನ್ನು ಬೆಳೆಸುವದೇ ಆಗಿದೆ. ಭೂಗೋಲದಲ್ಲಿ ವಿದ್ಯಾರ್ಥಿಗಳು
ಕೆಲವು ಸಂಗತಿಗಳನ್ನು ದಿನಾಂಕಗಳಿಗನುಗುಣವಾಗಿ ನಿರ್ಧರಿಸಬೇಕಾಗುತ್ತದೆ. ಇದರಿಂ~
ದ ಅವರಲ್ಲಿ ಕಾರಣ ಕಂಡುಹಿಡಿಯುವ ಗುಣದ ಬೆಳವಣಿಗೆ ಆಗುತ್ತದೆ. ಇದೇ ರೀತಿ
ಭೂಗೋಲದ ಅಭ್ಯಾಸದಿಂದ ಅವರು ಅನೇಕ ನಿಸರ್ಗದ ನಿಗೂಢ಼ಗಳೊಂದಿಗೆ ಸಂಬಂಧ~
ಪಡೆಯುತ್ತಾರೆ. ಇದರಿಂದ ಅವರಲ್ಲಿ ಶೋಧನಾ ಹಾಗೂ ಸಂಶೋಧನಾ ದೃಷ್ಟಿಕೋನ
ಬೆಳೆಯುತ್ತದೆ. ಭೂಗೋಲವು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವದರಿಂದ
ಉದ್ದೇಶ ಹಾಗೂ ಪರಿಣಾಮಗಳ ನಡುವೆ ಸಂಬಂಧ ಸ್ಥಾಪಿಸಲು ಬರುತ್ತದೆ. ಇದರಿಂ~
ದ ಚಿಕಿತ್ಸಕ ಭಾವನೆ ಬೆಳೆಯುತ್ತವೆ.

7) ಸಮತೋಲನ ವ್ಯಕ್ತಿತ್ವದ ಬೆಳವಣಿಗೆ :- ಪ್ರತಿಯೊಬ಼್ಬ಼ ವ್ಯಕ್ತಿಗೂ
ತನ್ನದೆ ಆದ ಗುಣ ಲಕ್ಷಣಗಳಿರುತ್ತವೆ. ಪ್ರಸಿದ್ಧ ಸಮಾಜ ತತ್ವಜ್ಞಾನಿಯಾದ ರೂಸೊ
"ಒಂದು ವೇಳೆ ಒಬ್ಬ ವ್ಯಕ್ತಿಗೆ ಅವನ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸಿಕೊಳ್ಳಲು
ಅವಕಾಶ ಕೊಡದಿದ್ದರೆ, ಅವನ ಮೂಲ ವ್ಯಕ್ತಿತ್ವವನ್ನು ಸಾಯಿಸಿದಂತೆ ಸಹಿ' ಎಂದು
ಹೇಳಿದ್ದಾನೆ. ಭೂಗೋಲದಲ್ಲಿ ಭೌತಿಕ ಸಂಗತಿಗಳು ಹಾಗೂ ಪರಿಸರದ ಬಗ್ಗೆ ಅಭ್ಯಾಸ~
ವಿರುವದರಿಂದ ವಿದ್ಯಾರ್ಥಿಗಳಿಗೆ ಸಮತೋಲನದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಾ~
ಯ ವಾಗುತ್ತವೆ.

8) ನಿಸರ್ಗ ಪ್ರೇಮ, ಬೇರೆ ದೇಶಗಳ ಪರಿಚಯ ಹಾಗೂ ಪ್ರವಾಸ :-
ಭೂಗೋಲದ ಅಭ್ಯಾಸವು ನಿಸರ್ಗ ಪ್ರೇಮವನ್ನು ಬೆಳೆಸುತ್ತದೆ. ಹೇಗೆಂದರೆ ಅವನಿಗೆ
ಹಿಮಾಚ್ಛಾದಿತ ಪರ್ವತ ಶಿಖರಗಳು, ಹಸಿರು ಕಾಡುಗಳು, ಪ್ರಾಣಿಸಂಪತ್ತು ಮುಂತಾ~
ದವುಗಳ ಬಗ್ಗೆ ಕಲಿಸಿದಾಗ ಅವನು ಕೂಡಾ ನಿಸರ್ಗದೆಡೆಗೆವಾಲುತ್ತಾನೆ. ಮತ್ತು ಬೇರೆ
-19-
ಬೇರೆ ದೇಶಗಳ ಬಗ್ಗೆ ತಿಳಿಯಲು ಉತ್ಸುಕನಾಗುತ್ತಾನೆ. ಇದರಿಂದ ಆ ಸ್ಥಳಗಳಿಗೆ 
#ಭೆಟ್ಟಿ~
ಕೊಡಬೇಕೆಂಬ ಗುಣವನ್ನು ಬೆಳೆಸಿಕೊಳ್ಳುತ್ತಾನೆ.

9) ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಜ್ಞಾನ ಮಾಡಿಕೊಳ್ಳುವದು :-
ಇಂದಿನ ವಿದ್ಯಾರ್ಥಿಗಳು ನಾಳಿನನಾಗರಿಕರು. ಭೂಗೋಲದ ಜ್ಞಾನವು ಅವರಿಗೆ
ದೇಶದ ಆರ್ಥಿಕ ಸ್ಥಿತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಜ್ಞಾನ ಮಾಡಿಕ಼ೊ~
ಡುತ್ತದೆ. ಇದರಿಂದ ತಮ್ಮ ದೇಶದ ಆಡಳಿತದಲ್ಲಿ ಹಾಗೂ ಆರ್ಥಿಕ ಕಾರ್ಯ ಕ್ರಮದಲ್ಲಿ
ಯಶಸ್ವಿಯಾಗಿ ಭಾಗವಹಿಸಲು ಅನುಕೂಲ ವಾಗುತ್ತದೆ.

10) ಅಂತರರಾಷ್ಟ್ರೀಯ ದೃಷ್ಟಿಕೋನದ ಬೆಳವಣಿಗೆ :- ಭೂಗೋ~
ಲದ ಇನ್ನೊಂದು ಮುಖ್ಯ ಉದ್ದೇಶವೆಂದರೆ ಅಂತರರಾಷ್ಟ್ರೀಯ ದೃಷ್ಟಿಕೋನ ಬೆಳೆಸುವ~
ದೇ ಆಗಿದೆ. ಯುನೆಸ್ಕೊ ಪ್ರಕಾಶನವು ಭೂಗೋಲ ಬೋಧನೆಯ ಬಗ್ಗೆ ಕೆಲವು ಸಲಹೆಗ~
ಳನ್ನಿತ್ತಿದೆ. ಭೂಗೋಲದ ಅಭ್ಯಾಸದಿಂದ ಯಾವನೂ ತನ್ನಷ್ಟಕ್ಕೆ ತಾನೇ ಜೀವಿಸಲಾರ~
ನೆಂಬುದು ತಿಳಿದು ಬರುತ್ತದೆ. ಮಾನವನ ಹಾಗೂ ದೇಶದ ಒಬ್ಬರನ್ನೊಬ್ಬರು ಅವಲಂ~
ಬಿಸಿರುವದು ಇತ್ತೀಚೆಗೆ ಅತೀ ಹೆಚ್ಚಾಗಿದೆ. ದೇಶ ಸಣ್ಣದೇ ಆಗಲಿ, ದೊಡ್ಡದೇ ಆಗಲಿ.
ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಂದನ್ನೊಂದು ಅವಲಂಬಿಸಿವೆ.
ಸಂಬಂಧವು ಮಾನವನ ಕರ್ತವ್ಯಗಳ ಬಗ್ಗೆ ಜಾಗೃತಿಯನ್ನುಂಟು ಮಾಡುತ್ತವೆ ಇದರಿಂದ
ಪ್ರತಿಯೊಬ್ಬನಲ್ಲಿ ಅಂತರರಾಷ್ಟ್ರೀಯ, ತಿಳುವಳಿಕೆ, ಹಾಗೂ ದೃಷ್ಟಿಕೋನ ಬೆಳೆಯುತ್ತದೆ.

11) ಮಾನವನ ಮೇಲೆ ಭೌಗೋಲಿಕ ಅಂಶಗಳ ಪರಿಣಾಮದ ಜ್ಞಾನ :-
ಭೂಗೋಲದ ಉದ್ದೇಶಗಳಲ್ಲಿ ಮಾನವನ ಮೇಲೆ ಭೌಗೋಲಿಕ ಅಂಶಗಳ ಪರಿಣಾಮ~
ವೂ ಒಂದಾಗಿದೆ. ಭೂಗೋಲದ ಅಭ್ಯಾಸದಿಂದ ಭೌಗೋಲೀಕ ಹಾಗೂ ನೈಸರ್ಗಿಕ ಸಂಗ~
ಗಳ ಮಾನವನ ಮೇಲೆ ಪರಿಣಾಮ ತಿಳಿದು ಬರುತ್ತದೆ. ಟಂಡ್ರಾ ಪ್ರದೇಶದ ಜನರು ಕಡ್ಡಾ~
ಯವಾಗಿ ಮಾಂಸಾಹಾರಿಗಳಾಗಬೇಕೆಂಬುದು ಭೌಗೋಲಿಕ ಅಂಶಗಳನ್ನು ಗಮನಿಸಿದಾ~
ಗ ತಿಳಿದು ಬರುವದು. ಅಲ್ಲದೆ ಅವರು ಒಂದೆಡೆ ನೆಲಿಸಲಾರರು ಹಾಗೂ ತೊಗಲಿನ ಬಟ್ಟೆ~
ಗಳನ್ನು ಧರಿಸಬೇಕಾಗುವದು. ಈ ಜ್ಞಾನ ಜೀವನದಲ್ಲಿ ಅತೀ ಉಪಯುಕ್ತ ವೆನಿಸುವದು.

12) ಭೌಗೋಲಿಕ ಸಂಗತಿಗಳ ಬೆಳಕಿನಲ್ಲಿ ಮಾನವ ನಾಗರಿಕತೆಯ
ಬೆಳವಣಿಗೆ :- ಕೆಲವೊಂದು ಭೌಗೋಲಿಕ ಅಂಶಗಳ ನಾಗರಿಕತೆಯ ಮತ್ತು
ಸಂಸ್ಕೃತಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ನಾಗರಿಕತೆಯ ಏಳು-
ಬೀಳುಗಳ ಭೌಗೋಲಿಕ ಕಾರಣಗಳನ್ನು ಅವಲಂಬಿಸಿರುವದು ಭೂಗೋಲದ ಅಭ್ಯಾಸದಿಂ~
ದ ತಿಳಿದು ಬರುತ್ತದೆ. ಭೂಗೋಲದ ಭೋಧನೆಯು ಇವುಗಳ ಬಗ್ಗೆ ತಿಳಿಸಿಕೊಡುತ್ತದೆ.

ಈ ಜ್ಞಾನ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಹಾಗೂ ತನ್ನ ಪರಿಸರದೊಂದಿಗೆ ಇತರರು
ಹಾಗೂ ಅದರ ಪರಿಸರದೊಂದಿಗೆ ಹೋಲಿಸಿ ನೋಡಲು ಅನುಕೂಲ ವಾಗುತ್ತದೆ.
-20-
ಇದರಿಂದ ತನ್ನ ಹಾಗೂ ತನ್ನ ದೇಶದ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಲು ಅನುಕೂಲ~
ವಾಗುತ್ತದೆ.

13) ದೇಶದ ಬೆಳವಣಿಗೆಯಲ್ಲಿ ಪಾತ್ರ : ಭೂಗೋಲದಿಂದ ಪಡೆದ ಜ್ಞಾನದಿಂದ
ದೇಶದ ಬೆಳವಣಿಗೆಯಲ್ಲಿ ತುಂಬಾ ಸಹಾಯವಾಗಬಹುದು. ಇಂದಿನ ವಿಜ್ಞಾನ ಯುಗ~
ದಲ್ಲಿ ಯಾವುದೇ ದೇಶ ತನ್ನಷ್ಟಕ್ಕೆ ತಾನು ನಿರ್ಲಿಪ್ತವಾಗಿ ಉಳಿಯಲಾರದು. ಪ್ರತಿಯೊಂ~
ದೇಶ ನೈಸರ್ಗಿಕ ಸಂಪನ್ಮೂಲ ಹಾಗೂ ತಾಂತ್ರಿಕತೆಗಾಗಿ ಮತ್ತೊಂದು ದೇಶವನ್ನು
ಅವಲಂಬಿಸಲೇ ಬೇಕು. ಇಂಥ ಸಂದರ್ಭದಲ್ಲಿ ಭೂಗೋಲದ ಅಭ್ಯಾಸವು ದೇಶದ ಬೆಳ~
ವಣಿಗೆಯಲ್ಲಿ ತುಂಬಾ ಸಹಾಯಕಾರಿಯಾಗಿದೆ. ಹೀಗೆ ಭೂಗೋಲಕ್ಕೆ ಸಾಂಸ್ಕೃತಿಕ
ನೈತಿಕ ತಾತ್ವಿಕ, ಆರ್ಥಿಕ ಗುರಿಗಳಿವೆ. ಈ ಎಲ್ಲ ಗುರಿಗಳು ಸಾಧಿಸಲ್ಪಟ್ಟರೆ ಮಾನವನ
ಜೀವನ ಫಲಭರಿತ ವಾಗುವದರಲ್ಲಿ ಯಾವುದೇ ಸಂಶಯವಿಲ್ಲ.

ಪ್ರಶ್ನೆ 6. ಭೂಗೋಲ ಬೋಧನೆಯ ತತ್ವಗಳನ್ನು ಕುರಿತು ಚರ್ಚಿಸಿರಿ.

ಉತ್ತರ - ಯಾವುದೇ ವಿಷಯದ ಗುರಿಗಳನ್ನು ಸಾಧಿಸಬೇಕಾದರೆ ಕೆಲವು
ತತ್ವಗಳು ಅವಶ್ಯ. ಈ ತತ್ವಗಳ ಆಧಾರದಿಂದಲೇ ಬೋಧನಾ ಯೋಜನೆಯನ್ನು ತಯಾ~
ರಿಸಿ ಅದನ್ನು ಕಾರ್ಯಗತ ಗೊಳಿಸಲಾಗುತ್ತದೆ. ಈ ತತ್ವಗಳು ಶಿಕ್ಷಕನಿಗೆ ಮಾರ್ಗ~
ಸೂಚಿಗಳಾಗಿವೆ. ಏಕೆಂದರೆ ಶಿಕ್ಷಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೇರವಾಗಿ
ಮುಟ್ಟಿಸಬೇಕಾಗಿರುತ್ತದೆ. ಬೋಧನೆ ಒಂದು ಕಲೆ ಆದಕಾರಣ ಶಿಕ್ಷಕನ ಸಾಧನೆ
ಅವನು ಯಾವ ರೀತಿಯಾಗಿ ವಿಷಯವನ್ನು ಸುಲಭೀಕರಿಸಿ ವಿದ್ಯಾರ್ಥಿಗಳಿಗೆ ಜ್ಞಾನ~
ವಾಗುವಂತೆ ಮಾಡುತ್ತಾನೋ ಅದನ್ನು ಅವಲಂಬಿಸಿದೆ. ಒಂದೇ ವೇಳೆ ಶಿಕ್ಷಕ ಇದರಲ್ಲಿ
ಅಯಶಸ್ವಿಯಾದರೆ ಅವನು ಶಿಕ್ಷಕನಾಗಿ ಮುಂದುವರೆ೟ುವದೇ ಕಠಿಣ. ಭೂಗೋಲ
ಬೋಧನೆ ಇಂತಹ ಅನೇಕ ತೊಂದರೆಗಳಿಂದ ಕೂಡಿದೆ. ಇಲ್ಲಿ ಶಿಕ್ಷಕ ವಿಜ್ಞಾನ ಶಿಕ್ಷಕನ
ಹಾಗೂ ಸಮಾಜ ಶಿಕ್ಷಕನ ಪಾತ್ರವನ್ನು ವಹಿಸಬೇಕಾಗುತ್ತದೆ ಆದ್ದರಿಂದ ಭೂಗೋಲ
ಬೋಧನೆಯಲ್ಲಿ ಅಳವಡಿಸಬೇಕಾದ ತತ್ವಗಳ ಕುರಿತು ಚರ್ಚಿಸೋಣ.

1) ಸುಲಭದಿಂದ ಕಠಿಣದೆಡೆಗೆ :- ಇದೊಂದು ಅತ್ಯಂತ ಮಹತ್ವದ ತತ್ವ~
ವಾಗಿದ್ದು ಶಿಕ್ಷಕ ಬೋಧನೆಯನ್ನು ಸುಲಭ ಸಂಗತಿಗಳನ್ನು ಕಠಿಣ ಸಂಗತಿಗ಼ಳನ್ನು
ತಿಳಿಸುವ ಕ಼ುರಿತಾಗಿದೆ. ಒಂದು ವೇಳೆ ಶಿಕ್ಷಕ ಸುಲಭ ಸಂಗತಿಗಳನ್ನು ವಿದ್ಯಾರ್ಥಿಗಳು
ಮನಗಾಣುವಂತೆ ಮಾಡುವಲ್ಲಿ ಯಶಸ್ವಿಯಾದರೆ ಕಠಿಣ ಸಂಗತಿಗಳನ್ನು ತಿಳಿಸುವಲ್ಲಿ
ಯಶಸ್ವಿಯಾಗುತ್ತಾನೆ. ವಿದ್ಯಾರ್ಥಿಗಳು ಸುಲಭದಿಂದ ಕಠಿಣವನ್ನು ಸುಲಭವಾಗಿ
ಅರಿಯಬಲ್ಲರೆಂಬುದನ್ನು ಮಾನಶಾಸ್ತ್ರವೂ ಧೃಡೀಕರಿಸುತ್ತದೆ. ಉದಾಹರಣೆಗೆ ಶಿಕ್ಷಕನು
ಸಮುದ್ರ ಅಥವಾ ಮಹಾಸಾಗರದ ಬಗ್ಗೆ ಹೇಳುವಾಗ ಮೊದಲು ಅವರ ಪರಿಸರದ~
ಲ್ಲಿದ್ದು ನೀರಿನ ಹೊಂಡ ಅಥವಾ ಜಲಾಶಯವನ್ನು ತೋರಿಸಿ ಹೇಳಿದಾಗ ಸಮುದ್ರದ
ಬಗ್ಗೆ ವಿದ್ಯಾರ್ಥಿ ಸುಲಭವಾಗಿ ಗ್ರಹಿಸಬಲ್ಲ. ಇದೇ ರೀತಿ ಪರ್ವತದ ಮಾದರಿ 
-21-
ತೋರಿಸುವದರಿಂದ ಪರ್ವತದ ಬಗ್ಗೆ ತಿಳಿಯಬಲ್ಲನು. ಈ ದಿಶೆಯಲ್ಲಿ ಶಿಕ್ಷಕನು ಅತ್ಯಂತ
ಜಾಗರೂಕನಾಗಿರಬೇಕು. ವಿದ್ಯಾರ್ಥಿಗಳಿಗೆ ಬೇಸರ ಬಾರದಂತೆ ನೋಡಿಕೊಳ್ಳಬೇಕು.
ಬಾಯಿಪಾಠ ಮಾಡುವದನ್ನು ತಪ್ಪಿಸಬೇಕು ಬಾಯಿಪಾಠ ಮಾಡುವದು. ಒಂದು
ಅತೀಕೆಟ್ಟ ಅಭ್ಯಾಸ. ಇದು ವಿದ್ಯಾರ್ಥಿಗಳಲ್ಲಿ ಸರ್ವಥಾ ಬೆಳೆಯಕೂಡದು.

2) ತಿಳಿದದ್ದರಿಂದ ತಿಳಿಯದರೆಡೆಗೆ :- ವಿದ್ಯಾರ್ಥಿಗಳಿಗೆ ಗೊತ್ತಿರುವ ಸಂಗ~
ತಿಗಳ ಸಹಾಯದಿಂದ ಗೊತ್ತಿರದ ಸಂಗತಿಗಳನ್ನು ಅರಿಯುವದು ಒಂದು ಸಾಮಾನ್ಯ
ಅಭ್ಯಾಸವೆಂದು ಹೇಳಬಹುದು. ಮೊದಲಿನ ಜ್ಞಾನದ ಪರಿಣಾಮ ವಿದ್ಯಾರ್ಥಿಯ ಮನ~
ಸ್ಸಿನ ಮೇಲೆ ಉಂಟಾಗಿದ್ದರೆ ಹೊಸ ವಿಷಯವನ್ನು ಹೇಳಿದಾಗ ಅವನು ಮೊದಲಿನ
ಪರಿಣಾಮದೊಂದಿಗೆ ಸಂಬಂಧ ಕಲ್ಪಿಸಲು ಸಹಾಯವಾಗುತ್ತದೆ. ಸಾಮಾನ್ಯವಾಗಿ
ಮಕ್ಕಳ ಮನಸ್ಸಿನ ಮೇಲೆ ಅವರ ಪರಿಸರ ಹಾಗೂ ಸುತ್ತ ಮುತ್ತಲಿನ ವಸ್ತುಗಳ
ಪರಿಣಾಮವಿರುತ್ತದೆ. ಆದ್ದರಿಂದ ಅಂಥ ಸಂಗತಿಗಳ ಸಹಾಯದಿಂದ, ಹೊಸದನ್ನು
ಕಲಿಸುವದು ಉತ್ತಮ ಹಾಗೂ ಸುಲಭ. ಉದಾಹರಣೆಗೆ ಅರಣ್ಯಗಳ ಬಗ್ಗೆ ಕಲಿಸು~
ವಾಗ ವಿದ್ಯಾರ್ಥಿಗಳು ನೋಡಿದ ತೋಟದ ಸಹಾಯದಿಂದ ಅರಣ್ಯ ಹಾಗೂ ಅದರ
ಗುಣ ಧರ್ಮಗಳನ್ನು ಕಲಿಸುವದು ತುಂಬಾ ಸುಲಭ ಭೂಗೋಲ ಬೋಧನೆಯಲ್ಲಿ
ಶಿಕ್ಷಕನು ವಿಷಯಗಳನ್ನು ಹೇಳುವಾಗ ಆದಷ್ಟು ಮಟ್ಟಿಗೆ ವಿದ್ಯಾರ್ಥಿಗಳ ಪರಿಸರ~
ದಲ್ಲಿಯ ಸಂಗತಿಗಳೊಂದಿಗೆ ಹೋಲಿಸಿ ಬೋಧಿಸಬೇಕು. ಆದ್ದರಿಂದ ಪ್ರಾದೇಶಿಕ ಅಥವಾ
ಸ್ಥಳಿಕ ಭೂಗೋಲ ಅತ್ಯಂತ ಮಹತ್ವವನ್ನು ಪಡೆದಿದೆ.

3) ಮೂರ್ತದಿಂದ ಅಮೂರ್ತದೆಡೆಗೆ :- ಮೂರ್ತ ವಸ್ತುಗಳು ಕಣ್ಣಿಗೆ
ಕಾಣುತ್ತವೆ. ಆದ್ದರಿಂದ ಅವುಗಳ ಬಗ್ಗೆ ಜ್ಞಾನ ಮಾಡಿಕೊಳ್ಳುವದು ಅತೀ ಸುಲಭ.
ಅದೇ ಕಾಲಕ್ಕೆ ಅಮೂರ್ತ (ಕಲ್ಪನೆ) ವಸ್ತುಗಳ ಬಗ್ಗೆ ಜ್ಞಾನ ಮಾಡಿಕೊಳ್ಳುವದು
ಕಠಿಣ. ಇಂಥ ವಸ್ತುಗಳ ಬಗ್ಗೆ ತಿಳಿದುಕೊಳ್ಳುವಾಗ ಕಲ್ಪನಾ ಸಾಮರ್ಥ್ಯ ಹಾಗೂ
ಮನೋಬಲ ಸಾಕಷ್ಟಿರಬೇಕು. ಸತ್ಯ ಹಾಗೂ ಅಹಿಂಸೆಗಳ ಬಗ್ಗೆ ವಿವರಿಸುವಾಗ
ವಿದ್ಯಾರ್ಥಿಗಳಲ್ಲಿ ಅವುಗಳ ಬಗ್ಗೆ ತಿಳುವಳಿಕೆ ಉಂಟಾಗಲು ಸಾಕಷ್ಟು ಸಮಯ ಬೇಕಾ~
ಗುತ್ತದೆ. ಇದರ ಬದಲಾಗಿ ಸತ್ಯ ಅಹಿಂಸೆಗಳ ಉದಾಹರಣೆಗಳನ್ನು ಹೇಳಿದಾಗ ಅವು~
ಗಳನ್ನು ಸುಲಭವಾಗಿ ಹಾಗೂ ಕೂಡಲೇ ತಿಳಿದುಕೊಳ್ಳಬಲ್ಲರು, ಕಾರಣ ಯಾವಾ~
ಗಲೂ ಮೂರ್ತದಿಂದ ಅಮೂರ್ತದೆಡೆಗೆ ಸಾಗುವದು ಹೆಚ್ಚು ಸಮಂಜಸ. ಉಳಿದೆಲ್ಲ
ವಿಷಯಗಳಿಗಿಂತ ಭೂಗೋಲ ಬೋಧನೆಯಲ್ಲಿ ಮೂರ್ತದಿಂದ ಅಮೂರ್ತದೆಡೆಗೆ
ಸಾಗುವದು. ಹೆಚ್ಚು ಪ್ರಯಾಸಕರ ವಾದದ್ದು. ಏಕೆಂದರೆ ನಿಸರ್ಗದಲ್ಲಿಯ ಭೌಗೋಲದ
ಅಂಶಗಳು ಅಮೂರ್ತದಲ್ಲಿದ್ದು ಅವುಗಳನ್ನು ಮೂರ್ತರೂಪದಲ್ಲಿ ಹೇಳುವದು ಕಠಿಣ.
ಆದಾಗ್ಯೂ ಭೂಗೋಲ ಶಿಕ್ಷಕರು ಈ ವಿಧಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದರಂತೆ
ಮುಂದುವರೆಯಬೇಕು. ಅದಕ್ಕಾಗಿ ಯಾವ ದೇಶದ ಭೂಗೋಲವನ್ನು ಬೋಧಿಸಬೇಕಾಗಿದೆಯೋ
-22-
ಆ ದೇಶದ ಬಾಹ್ಯರೇಷೆಗಳನ್ನು ಮೊದಲಿಗೇ ತಿಳಿಯ ಪಡಿಸುವದು ಉತ್ತಮ.
ಇದಕ್ಕಾಗಿ ಶಿಕ್ಷಕರು ನಕಾಶೆ, ಚಿತ್ರ, ಮುಂತಾದವುಗಳನ್ನು ಉಪಯೋಗಿಸುವದು
ಅವಶ್ಯ.

4) ಪೂರ್ಣದಿಂದ ಭಾಗದೆಡೆಗೆ - ಕೆಲವರು ಮಕ್ಕಳಿಗೆ ಮೊದಲು ಭಾಗ~
ಗಳ ಪರಿಚಯದಿಂದ ಪೂರ್ಣ ಸಂಗತಿಗಳ ಪರಿಚಯ ಸುಲಭ ಎಂಬ ತಪ್ಪು ಕಲ್ಪನೆ~
ಯನ್ನು ಹೊಂದಿರುತ್ತಾರೆ. ಆದರೆ ಮನೋ ವೈಜ್ಞಾನಿಕ ಶಾಸ್ತ್ರಗಳ ಪ್ರಕಾರ ಪೂರ್ಣ~
ದಿಂದ ಭಾಗದೆಡೆಗೆ ಹೋಗುವದೆ ಅತ್ಯಂತ ಯೋಗ್ಯವಾದದ್ದು. ಮಾನ ಶಾಸ್ತ್ರದ
ನಿಯಮಗಳ ಪ್ರಕಾರ ಮಗು ಮೊದಲು ಪೂರ್ಣ ಸಂಗತಿಗಳನ್ನು ಅರಿತು ನಂತರ
ಅದರ ಭಾಗಗಳನ್ನು ಅರಿಯುತ್ತದೆ. ಒಂದು ವೇಳೆ ಒಂದು ದೇಶದ ಬಗ್ಗೆ ಬೋಧಿಸಿ
ನಂತರ ಜಗತ್ತಿನ ಬಗ್ಗೆ ಬೋಧಿಸಲು ಹೋದರೆ ಅದು ಅತ್ಯಂತ ತ್ರಾಸದಾಯಕ ಕೆಲಸ~
ವಾಗುತ್ತದೆ. ಆದಕಾರಣ ಪೂರ್ಣ ಪರಿಸರದ ಬಗ್ಗೆ ಹೇಳಿ ನಂತರ ಅದರ ಬೇರೆ ಬೇರೆ
ಭಾಗಗಳ ಬಗ್ಗೆ ಪರಿಚಯಿಸುವದು ಸುಲಭ. ಇಂಥ ಬೋಧನೆಯಲ್ಲಿ ಪುನರಾವರ್ತನೆಗೆ
ಅವಕಾಶವಿರದೆ ಬೋಧನೆ ಬೇಸರವನ್ನುಂಟು ಮಾಡುವದಿಲ್ಲ. ಉದಾಹರಣೆಗೆ
ಮೊದಲು ರಾಜ್ಯದ ಬಗ್ಗೆ ಬೋಧಿಸಿ ನಂತರ ದೇಶದ ಬಗ್ಗೆ ಬೋಧಿಸ ಹೋದರೆ ಅನೇಕ
ಸಂಗತಿಗಳ ಪುನರಾವರ್ತನೆಯಾಗಿ ಬೋಧನೆ ಪರಿಣಾಮಕಾರಿಯಾಗಲಾರದು. ಆದ್ದ~
ರಿಂದ ಬೋಧನೆಯು ಪರಿಣಾಮ ಶಾಶ್ವತವಾಗಲು ಪೂರ್ಣದಿಂದ ಭಾಗದೆಡೆಗೆ ಎಂಬುದೇ
ಅತ್ಯುತ್ತಮವಾದದ್ದು.

5) ನಿಶ್ಚಿತದಿಂದ ಅನಿಶ್ಚಿತದೆಡೆಗೆ :- ವೈಜ್ಞಾನಿಕವಾಗಿ ಹಾಗೂ ಮನೋ
ವೈಜ್ಞಾನಿಕವಾಗಿ ಶಿಕ್ಷಕರು ಮೊದಲು ನಿಶ್ಚಿತ ಸಂಗತಿಗಳನ್ನು ವಿದ್ಯಾರ್ಥಿಗಳ ಮುಂದೆ
ಸಾದರ ಪಡಿಸಬೇಕು. ನಂತರ ನಿಶ್ಚಿತದಿಂದ ಅನಿಶ್ಚಿತದೆಡೆಗೆ ಸಾಗಬೇಕು. ವಿದ್ಯಾರ್ಥಿ~
ಗಳಲ್ಲಿ ನೈಸರ್ಗಿಕ ವಸ್ತುಗಳು ಹಾಗೂ ಸಂಗತಿಗಳ ಬಗ್ಗೆ ಸ್ವಲ್ಪ ಜ್ಞಾನ ವಿರುತ್ತದೆ.
ಇದರ ಸಹಾಯದಿಂದ ಶಿಕ್ಷಕರು ಮುಂದುವರೆದಿದ್ದಾದರೆ ಕೆಲವೊಂದು ಅನಿಶ್ಚಿತ ಸಂಗತಿ~
ಗಳನ್ನು ಬೋಧಿಸುವದು ಸುಲಭವಾಗುತ್ತದೆ. ಇದಕ್ಕಾಗಿ ನಕಾಶ, ಚಿತ್ರ, ಮಾದರಿ~
ಗಳನ್ನು ಬೋಧನೆ ಕಾಲಕ್ಕೆ ಉಪಯೋಗಿಸುವದು ಅತ್ಯಂತ ಅವಶ್ಯ.

6) ವಿಶಿಷ್ಟದಿಂದ ಸಾಮಾನ್ಯದೆಡೆಗೆ :- ಶಿಕ್ಷಕರು ಮೊದಲು ನಿಶ್ಚಿತ
ಉದಾಹರಣೆಗಳನ್ನು ಕೊಡಬೇಕು. ನಂತರ ಸಾಮಾನ್ಯ ನಿಯಮಗಳೆಡೆಗೆ ಮುಂದುವ~
ರೆಯಬೇಕು. ಸಾದ್ಯವಿದ್ದ ಮಟ್ಟಿಗೆ ಶಿಕ್ಷಕರು ಕೆಲವು ನಿಶ್ಚಿತ ಉದಾಹರಣೆಗಳನ್ನು
ಕೊಟ್ಟು ವಿದ್ಯಾರ್ಥಿಗಳಿಂದ ಉತ್ತರಗಳನ್ನು ಪಡೆಯಬೇಕು. ಅದೇ ರೀತಿ ಕೆಲವು
ನಿಶ್ಚಿತ ಸಂಗತಿಗಳನ್ನು ಹೇಳಿ ಅವುಗಳ ಬಗ್ಗೆ ಇರುವ ಸತ್ಯ ಸಂಗತಿಗಳನ್ನು ತಿಳಿಸಿ.
ನಂತರ ಸಾಮಾನ್ಯ ನಿಯಮಗಳ ಬಗ್ಗೆ ತಿಳಿಸಿಕೊಡಬೇಕು. ಈ ರೀತಿಯ ಭೂಗೋಲ
-23-
ಬೋಧನೆಯು ಸುಲಭ ಮತ್ತು ಯೋಗ್ಯ. ಉದಾಹರಣೆಗೆ ಮೊದಲು ಶಿಕ್ಷಕರು ಒಂದು
ಭಾಗದ ಬಗ್ಗೆ ಬೋಧಿಸಿ ನಂತರ ಇಡೀ ಜಗತ್ತಿನ ಬಗ್ಗೆ ಇರುವ ಸಾಮಾನ್ಯ ಸಂಗತಿ~
ಗಳನ್ನು ಬೋಧಿಸುವದು ಯೋಗ್ಯ.

7) ಮನೋ ವೈಜ್ಞಾನಿಕದಿಂದ ವೈಜ್ಞಾನಿಕದೆಡೆಗೆ :- ಶಿಕ್ಷಣವು
ಉಪಯುಕ್ತ ಹಾಗೂ ಯಶಸ್ವಿ ಯಾಗಬೇಕಾದರೆ ಅದು ಮನೋವೈಜ್ಞಾನಿಕ ಹಾಗೂ
ವೈಜ್ಞಾನಿಕವಾಗಿ ಯೋಜಿತವಾಗಿರಬೇಕಾದದ್ದು ಅವಶ್ಯ. ವಿದ್ಯಾರ್ಥಿಗಳಿಗೆ ಸರಿಯಾದ
ಜ್ಞಾನವಾಗಬೇಕಾದರೆ ಅವರಿಗೆ ಮನೋ ವೈಜ್ಞಾನಿಕ ರೀತಿಯಲ್ಲಿ ಬೋಧಿಸಬೇಕಾದದ್ದು
ಅವಶ್ಯ. ಭೂಗೋಲ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯನ್ನು ಗಮ~
ನದಲ್ಲಿರಸಬೇಕಾದದ್ದು ಅವಶ್ಯ. ಪ್ರಾರಂಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನೋ~
ವೈಜ್ಞಾನಿಕ ರೀತಿಯಿಂದ ಬೋಧಿಸಬೇಕು. ಬರಬರುತ್ತ ಈ ರೀತಿಯೇ ವೈಜ್ಞಾನಿಕ
ರೀತಿಯಾಗಿ ಪರಿವರ್ತನೆ ಹೊಂದುತ್ತದೆ. ಮನೋ ವೈಜ್ಞಾನಿಕ ಮೂಲಗಳು ಬೋಧ~
ನೆಯ ಅಡಿಪಾಯವಾಗಿರಬೇಕು. ವಿಷಯವನ್ನು ವಿದ್ಯಾರ್ಥಿಗಳ ಕುತೂಹಲ ಕೆರಳು~
ವಂತೆ ಯೋಜಿಸಿ ಭಾಗಮಾಡಿರಬೇಕು. ಇಂದಿನ ಭೂಗೋಲ ಬೋಧನೆಯು ಕಾರಣ
ಪರಿಣಾಮದ ಮೇಲೆ ನಿಂತಿದೆ. ಇದೂ ಕೂಡಾ ವೈಜ್ಞಾನಿಕವಾದದ್ದು. ಈ ವೈಜ್ಞಾ~
ನಿಕ ಸಂಗತಿಯನ್ನು ಮನೋವೈಜ್ಞಾನಿಕ ರೀತಿಯಿಂದ ಪೂರ್ಣ ಗೊಳಿಸಬೇಕು.

ಈ ಮೇಲೆ ಹೇಳಿದ ಎಲ್ಲ ತತ್ವಗಳನ್ನು ಸಮರ್ಪಕವಾಗಿ ಅನುಸರಿಸಿದ್ದೇ ಆದರೆ
ಭೂಗೋಲ ಬೋಧನೆ ಅತ್ಯಂತ ಕುತೂಹಲಕಾರಿ ಹಾಗೂ ಪರಿಣಾಮಕಾರಿ ಯಾಗುವದ~
ರಲ್ಲಿ ಯಾವುದೇ ಸಂಶಯ ವಿಲ್ಲ.

ಪ್ರಶ್ನೆ 7. ಭೂಗೋಲ ವಿಷಯದ ಮೂಲ ಘಟಕಗಳು ಯಾವವು ?

ಅಥವಾ

ಭೂಗೋಲ ವಿಷಯದ ಮೂಲ ಘಟಕಗಳ ಬೋಧನೆಯ ಮಹತ್ವವೇನು ?

ಉತ್ತರ :- ಪ್ರತಿಯೊಂದು ವಿಷಯಕ್ಕೂ ಅದರದೇ ಆದ ಮೂಲಭೂತ ಘಟ~
ಕಗಳಿರುತ್ತವೆ. ಈ ಘಟಕಗಳ ಸಹಾಯದಿಂದಲೇ ಆಯಾ ವಿಷಯಗಳ ವ್ಯಾಪ್ತಿ ಅವ~
ಕಾಶಗಳು ಅವಲಂಬಿಸಿರುತ್ತವೆ. ಈ ಘಟಕಗಳೇ ವಿಷಯದ ಪ್ರಭಾವವನ್ನು ಹೆಚ್ಚಿ~
ಸುತ್ತವೆ. ಆ ವಿಷಯವನ್ನು ಅರಿಯುವಲ್ಲಿ ಈ ಘಟಕಗಳು ಅತ್ಯಂತ ಮಹತ್ವದ
ಪಾತ್ರವನ್ನಾಡುತ್ತವೆ. ಭೂಗೋಲ ವಿಷಯದಲ್ಲಿಯೂ ಇದು ಸತ್ಯ. ಭೂಗೋಲದ
ಮೂಲ ಘಟಕಗಳನ್ನು ಕೆಳಗಿನಂತೆ ವಿವರಿಸಬಹುದು.

1) ಪ್ರಾಕೃತಿಕ ಅಥವಾ ಭೌತಿಕ ಅಂಶಗಳು (ಸಂದರ್ಭಗಳು)
2) ಭೂಮಿಯ ಮೇಲ್ಭಾಗದ ರಚನೆ
3) ಹವಾಮಾನ
-24-
4) ಸ್ವಾಭಾವಿಕ ಸಸ್ಯ ಹಾಗೂ ಕೃಷಿ ಉತ್ಪನ್ನಗಳು
5) ಮಾನವ ಚಟುವಟಿಕೆಗಳು

ಈ ಎಲ್ಲ ಐದು ಘಟಕಗಳನ್ನು ಒಂದುಗೂಡಿಸಿ ಅದನ್ನು ಭೌಗೋಲಿಕ ಪರಿಸರವೆಂದು
ಕರೆಯುತ್ತಾರೆ. ಭೌಗೋಲಿಕ ನಿಯಂತ್ರಣಕ್ಕೆ ಈ ಎಲ್ಲ ಘಟಕಗಳೇ ಕಾರಣ.

1) ಪ್ರಾಕೃತಿಕ ಅಥವಾ ಭೌತಿಕ ಅಂಶಗಳು (ಘಟಕಗಳು) :-
ಭೂಗೋಲದ ರಚನೆಯು ಭೌತಿಕ ಅಂಶಗಳಿಂದಾಗಿದೆ. ಅಥವಾ ಭೌತಿಕ ಅಂಶಗಳಿಗೆ
ಇನ್ನೊಂದು ಹೆಸರು ಭೂಗೋಲದ ಅಂಶಗಳು. ಹೀಗೆ ಒಂದರ ಅಂಶಗಳಿಂದ ಇನ್ನೊಂ~
ದರ ಬೆಳವಣಿಗೆ ಆಗುತ್ತದೆ. ಭೂಮಿಯ ರಚನೆಯು ಹೆಚ್ಚಾಗಿ ಭೌತಿಕ ಅಂಶಗಳನ್ನು
ಅವಲಂಬಿಸಿದೆ. ವಾತಾವರಣವು ಭೌತಿಕ ಅಂಶಗಳಿಂದ ನಿರ್ಮಿತವಾಗುತ್ತದೆ. ಅದಕ್ಕೆ
ಮಾನವನ ಜೀವನವನ್ನು ರೂಪಿಸುವ ಪರಿಸರ ಭೌತಿಕ ಅಂಶಗಳಿಂದ ಕೂಡಿದೆ. ಆದ
ಕಾರಣ ಭೌತಿಕ ಅಂಶಗಳ ಅಭ್ಯಾಸ ಅತೀ ಮಹತ್ವದ್ದಾಗಿದೆ. ಒಂದು ದೇಶದ
ಭೌತಿಕ ಅಂಶಗಳನ್ನು ಅರಿಯದ ವಿನಃ ಆ ದೇಶದ ಇತರ ಸಂಗತಿಗಳ ಬಗ್ಗೆ ಅರಿಯು~
ವದು ಅಶಕ್ಯ. ಒಂದು ಕಾಲಕ್ಕೆ ಭೌತಿಕ ಅಂಶಗಳ ಹೆಸರು ಹಾಗೂ ನಿಯಮಗಳನ್ನು
ತಿಳಿಯುವದೇ ಭೂಗೋಲದ ಅಭ್ಯಾಸವೆಂದು ತಿಳಿಯಲ್ಪಡುತ್ತಿತ್ತು. ಆದರೆ ಇತ್ತೀ~
ಚಿನ ದಿನಗಳಲ್ಲಿ ಅದು ಮಹತ್ವವನ್ನು ಕಳೆದುಕೊಂಡಿದೆ. ಆಧುನಿಕ ಭೂಗೋಲ~
ದಲ್ಲಿ ಭೌತಿಕ ಬದಲಾವಣೆಗಳಲ್ಲಿ ಆಗುವ ಪ್ರತಿಯೊಂದು ಬದಲಾವಣೆಗೂ ಕಾರಣೀ~
ಭೂತವಾದ ಕಾರಣವನ್ನು ಕಂಡು ಹಿಡಿಯಲಾಗುತ್ತದೆ. ಒಂದಾನೊಂದು ಕಾಲಕ್ಕೇ
ಈ ಭೂಮಿಯು ಅತ್ಯಂತ ಶಾಖದಿಂದ ಕೂಡಿತ್ತೆಂಬುದನ್ನು ವಿಜ್ಞಾನಿಗಳೂ ಒಪ್ಪು~
ತ್ತಾರೆ. ಅಂದರೆ ಭೂಮಿಯೂ ಒಂದು ಬೆಂಕಿಯ ಚಂಡಾಗಿತ್ತು. ಬರ ಬರುತ್ತಾ
ಇದು ತಂಪಾಯಿತು. ಈ ತಂಪಾಗುವಿಕೆಯು ಭೂಮಿಯ ಮೇಲ್ಭಾಗದ ಮೇಲೆ
ಅನೇಕ ಪರಿಣಾಮಗಳನ್ನು ಮಾಡಿತು ಈ ಬದಲಾವಣೆಗಳು ಕೆಲವೊಂದು ಭೌತಿಕ
ಅಂಶಗಳಿಂದ ಕೂಡಿದೆ.

ಒಂದು ಸ್ಥಾನವು ವಿಷಮ ವೃತ್ತದಿಂದ ಅಂತರ ಹೊಂದಿದಂತೆ ಅದರ ಭೌತಿಕ
ಅಂಶಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ದಕ್ಷಿಣದ ಮತ್ತು ಉತ್ತರದ ತುದಿ~
ಗಳು ವರ್ಷ ಪೂರ್ಣ ಹಿಮದಿಂದ ಕೂಡಿರುತ್ತವೆ. ಅದೇ ರೀತಿ ವಿಷಮ ವೃತ್ತಕ್ಕೆ ಅತಿ
ಸಮೀಪವಿರುವ ಪ್ರದೇಶಗಳು ಅತ್ಯಂತ ಶಾಖದಿಂದ ಕೂಡಿರುತ್ತವೆ. ಮರುಭೂಮಿ~
ಗಳು ವರ್ಷವಿಡೀ ಒಣಿ ಶಾಖಭರಿತವಾಗಿರುತ್ತವೆ. ಸಮುದ್ರ ತಾರಕ್ಕೆ ಸಮೀಪವಿರುವ
ಪ್ರದೇಶಗಳು ಸಮಹವಾಮಾನವನ್ನು ಪಡೆದಿರುತ್ತವೆ. ಅದೇ ರೀತಿ ಸಮುದ್ರದಿಂದ
ಸುತ್ತುವರೆದ ದೇಶಗಳೂ ಸಮ ಹವೆಯನ್ನು ಹೊಂದಿರುತ್ತವೆ.

2) ಭೂಮಿಯ ಮೇಲ್ಭಾಗದ ರಚನೆ :- ಮೇಲೆ ಹೇಳಿದಂತೆ ಒಂದಾನೊಂದು
ಕಾಲಕ್ಕೆ ಭೂಮಿಯು ಉರಿಯುತ್ತಿರುವ ಬೆಂಕಿಯ ಗೋಲವಾಗಿತ್ತು. ಕ್ರಮೇಣವಾಗಿ
-25-
ತಂಪುಗೊಂಡಿತು. ಹೀಗೆ ತಂಪಾಗುವಾಗ ಮೇಲ್ಕವಚ ನಿರ್ಮಾಣವಾಯಿತು. ಕೆಲವೊಂ~
ದು ಪ್ರದೇಶಗಳಲ್ಲಿ ನೀರಿಗೆಗಳು ಉಂಟಾದವು. ಈ ನೀರಿಗೆಗಳ ಮೇಲಿನ ಕೆಲವು ಪ್ರದೇ~
ಶಗಳು ಉನ಼್ನತವಾಗಿಯೂ ಕೆಲವು ಪ್ರದೇಶಗಳು ತಗ್ಗಾಗಿಯೂ ನಿರ್ಮಾಣಗೊಂಡವು.
ಉನ್ನತ ಪ್ರದೇಶಗಳು ಕ್ರಮೇಣ ಪರ್ವತಗಳಾಗಿ ಪರಿವರ್ತನೆ ಗೊಂಡವು. ಇನ್ನೊಂದೆಡೆಗೆ
ತಗ್ಗು ಪ್ರದೇಶಗಳ ಕೊಳ್ಳಗಳು ಮತ್ತು ಮಹಾಸಾಗರಗಳಾಗಿ ಪರಿವರ್ತನೆ ಗೊಂಡವು.
ಪ್ರಕೃತಿಯು ತನ್ನ ತನವನ್ನು ಕಾಯ್ದುಕೊಳ್ಳಲು ಕೆಲವೊಂದು ಪ್ರದೇಶಗಳನ್ನು
ಬಯಲುಗಳನ್ನಾಗಿಯೂ ಕೆಲವು ಪ್ರದೇಶಗಳನ್ನು ಪ್ರಸ್ಥಭೂಮಿಗಳನ್ನಾಗಿ ಮಾಡಿತು.
ಮಾನವನಿಗೆ ಪ್ರಕೃತಿಯಲ್ಲಿ ಯಾವುದೇ ಬದಲಾವಣೆ ಮಾಡಲು ಆಸ್ಪದವಿಲ್ಲ. ಆದರೆ
ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಬಹುದು.

ಭೂಮಿಯ ಮೇಲ್ಭಾಗದ ರಚನೆಯ ಅಭ್ಯಾಸ ನಿಶ್ಚಿತವಾಗಿಯೂ ಭೂಗರ್ಭ~
ಶಾಸ್ತ್ರದ ಅಭ್ಯಾಸವಾಗಿದೆ. ಆದರೆ ಭೂಗೋಲ ಇದನ್ನು ಮರೆಯುವಂತಿಲ್ಲ. ಭೂಗೋಲ~
ದಲ್ಲಿ ಪರ್ವತಗಳ ರಚನೆ, ಶಿಲೆಗಳ ರಚನೆಯ ಬಗ್ಗೆ ಅಭ್ಯಿಸಿಸುವದು ಅವಶ್ಯ. ಏಕೆಂದರೆ
ಇದರ ಅಭ್ಯಾಸದಿಂದ ಯಾವದೊಂದು ಭಾಗದ ಹವಾಮಾನ ಹಾಗೂ ಉತ್ಪನ್ನದ ಬಗ್ಗೆ
ಅರಿಯಲು ಬರುತ್ತದೆ. ನದಿಗಳಿಂದಾದ ಬಯಲು ಪ್ರದೇಶದಲ್ಲಿ ಬೆಳೆಗಳು ಉಚ್ರಾಯ
ಸ್ಥಿತಿಯಲ್ಲಿರುತ್ತವೆ. ಅದೇ ಗುಡ್ಡಗಾಡು ಹಾಗೂ ಪ್ರಸ್ಥಗಳಲ್ಲಿ ಇದು ಸಾದ್ಯವಿಲ್ಲ.
ಪ್ರಾಚೀನ ಶಿಲೆಗಳಲ್ಲಿ ಬೆಳ್ಳಿ, ಬಂಗಾರ, ಕಲ್ಲಿದ್ದಲು ಮುಂತಾದ ಖನಿಜ ಸಂಪತ್ತು
ಅಡಗಿದೆ ಹಾಗೂ ಇತ್ತೀಚಿನ ಶಿಲೆಗಳಲ್ಲಿ ಎಣ್ಣೆಯಂತಹ ಖನಿಜಗಳು ದೊರೆಯುತ್ತವೆ.
ಒಂದು ದೇಶದ ಆರ್ಥಿಕ ಸ್ಥಿತಿಯ ಮೇಲೆ ಇವು ಅತ್ಯಂತ ಮಹತ್ವದ ಪರಿಣಾಮವನ್ನು ಬೀರ~
ಬಲ್ಲವುಗಳಾಗಿವೆ. ಮಾನವ ಜನಾಂಗ ಹಾಗೂ ನಾಗರೀಕತೆಯ ಬೆಳವಣಿಗೆಯ ಮೇಲೆ
ಭೂಮಿಯ ರಚನೆಯು ಸಾಕಷ್ಟು ಪ್ರಭಾವ ಬೀರಬಲ್ಲದಾಗಿದೆ. ಭೂಮಿಯ ರಚನೆಯ
ಬಗ್ಗೆ ವೈಜ್ಞಾನಿಕವಾಗಿ ಭೂಗರ್ಭ ಶಾಸ್ತ್ರದಲ್ಲಿ ಅಭ್ಯಾಸ ಮಾಡಲ್ಪಡುತ್ತದೆ. ಭೂಗೋಲ~
ದಲ್ಲಿ ಇತರ ರಚನೆ ನಿಯಮಗಳನ್ನು ಗಮನಕ್ಕೆ ತೆಗೆದುಕೊಳ್ಳುವದಿಲ್ಲ. ಆದರೆ ಮಾನವನ
ಜೀವನ ಸಾಕಷ್ಟು ಮಟ್ಟಿಗೆ ಭೂಮಿಯ ರಚನೆಯಿಂದ ಪ್ರಭಾವಿತ ಗೊಂಡಿರುವದರಿಂದ
ಭೂಗೋಲದಲ್ಲಿ ಇದರ ಬಗ್ಗೆ ಅಭ್ಯಸಿಸುವದು ಅವಶ್ಯ. ಭೂಗೋಲ ಮುಖ್ಯವಾಗಿ
ಮಾನವ ಹಾಗೂ ಪ್ರಕೃತಿಗಳ ನಡಿವಿನ ಚಟುವಟಿಕೆಗಳನ್ನು ಅವಲಂಬಿಸಿರುವದರಿಂದ ಈ
ವಿಷಯಗಳು ಮಹತ್ವ ಪಡೆದಿವೆ. ಭೂಮಿಯ ಮೇಲ್ಭಾಗವು ಸತತವಾಗಿ ಬದಲಾವಣೆ
ಹೊಂದಿರುತ್ತದೆ. ಈ ಬದಲಾವಣೆಗೆ ಕೆಲವು ಅಂಶಗಳು ಕಾರಣೀಭೂತವಾಗಿವೆ.
ಈ ಅಂಶಗಳನ್ನು ಕೆಳಗಿನಂತೆ ವರ್ಗೀಕರಿಸಬಹುದು.

(ಅ) ಬಾಹ್ಯ ಮಧ್ಯವರ್ತಿಗಳು (ಮಾಧ್ಯಮ) (ಆ) ಅಂತರ ಮಧ್ಯವರ್ತಿಗಳು
(ಮಾಧ್ಯಮ). ಭೂಮೀಯ ಅಥವಾ ಭೂಮಿಯ ಮೇಲ್ಭಾಗದ ಮೇಲೆ ಇರದ ಮಾಧ್ಯ~
ಮಗಳಿಗೆ ಬಾಹ್ಯಮಾಧ್ಯಮಗಳೆನ್ನುತ್ತಾರೆ. ಇವುಗಳಲ್ಲಿ ಗಾಳಿ ಮಳೆ, ಹರಿಯುವ
-26-
ನೀರು, ಹಿಮಸೂರ್ಯ, ಸೂರ್ಯನ ಉಷ್ಣ, ಮುಂತಾದವುಗಳು ಮುಖ್ಯ ಭೂಮಿ~
ಯಲ್ಲಿಯೇ ಇರುವ ಮಧ್ಯವರ್ತಿಗಳಿಗೆ ಅಂತರ ಮಧ್ಯವರ್ತಿಗಳೆನ್ನುತ್ತಾರೆ. ಇದರಲ್ಲಿ
ಭೂಕಂಪ, ಜ್ವಾಲಾಮುಖಿ ಮುಂತಾದವುಗಳು ಬರುತ್ತವೆ.

ಈ ಬಾಹ್ಯ ಹಾಗೂ ಅಂತರ ಮಾಧ್ಯಮಗಳಿಂದ ಭೂಮಿಯ ಮೇಲ್ಭಾಗ ನಿರಂತರವಾಗಿ
ಬದಲಾವಣೆ ಹೊಂದುತ್ತಿರುತ್ತದೆ. ಈ ಬದಲಾವಣೆಗಳು ಕೂಡಲೆ ಕಂಡು ಬರುವಂತಹವು
ಆಗಿದೆ. ನೂರಾರು, ಸಾವಿರಾರು ವರುಷಗಳ ನಂತರ ಕಂಡು ಬರುವಂತಹವು ಆಗಿವೆ.
ಒಂದು ಕಾಲಕ್ಕೆ ಗ್ರೀಕರು ನದಿಯ ದಂಡೆಯಲ್ಲಿ ಉನ್ನತ ಪ್ರದೇಶಗಳನ್ನು ನಿರ್ಮಿಸಿದ್ದರು.
ಇಂದು ಅವು ಸಮುದ್ರ ಸಪಾಟಿಯಿಂದ ಅತ್ಯಂತ ಎತ್ತರದಲ್ಲಿವೆ. ಚೀನಾದಲ್ಲಿಯೂ ಈ
ಸಂಗತಿ ಕಂಡು ಬರುತ್ತದೆ. ಭಾರತದಲ್ಲಿ ಥಾರ ಮರಭೂಮಿಯು ಕ್ರಮೇಣ ವಿಸ್ತಾರ~
ಗೊಳ್ಳುತ್ತಿರುವದು ಕಂಡು ಬರುತ್ತಿದೆ. ಈ ಬೆಳವಣಿಗೆಯನ್ನು ತಡೆಯಲು ಭಾರತ ಸರ~
ಕಾರ ಅನೇಕ ಕ್ರಮಗಳನ್ನು ಕೈಕೊಳ್ಳುತ್ತಿದೆ. ಅದಕ್ಕಾಗಿ ಅನೇಕ ಗಿಡಗಳನ್ನು ಬೆಳೆಸುವ
ಯೋಜನೆಯನ್ನು ಭಾರತ ಹೊಂದಿದೆ.

3) ಹವಾಮಾನ : - ಭೌಗೋಲಿಕ ಸಂಗತಿಗಳು ಹೆಚ್ಚಿನ ಪ್ರಭಾವ ಬೀರುವ
ಸಂಗತಿ ಎಂದರೆ ಹವಾಮಾನ ಭೌತಿಕ ರೂಪರೇಷೆಗಳನ್ನು ನಿರ್ಧರಿಸುವ ಹಾಗೂ ಪ್ರಭಾವ
ಬೀರುವ ಮಹತ್ವದ ಮೂಲ ಅಂಶ ಇದಾಗಿದೆ. ಕೃಷಿ ಉತ್ಪನ್ನಗಳ ಮೇಲೆ, ಜನರ
ಜೀವನದ ಮೇಲೆ, ಆಹಾರ ಕ್ರಮದ ಮೇಲೆ ವ್ಯಾಪಾರ, ಆಚಾರ ವಿಚಾರಗಳ ಮೇಲೆ~
ಯೂ ಇದರ ಪ್ರಭಾವವಿದೆ. ಬಂಗಾಲದಲ್ಲಿ ಅಕ್ಕಿಯ ಉತ್ಪಾದನೆ, ಪಂಜಾಬದಲ್ಲಿ
ಗೋದಿಯ ಉತ್ಪಾದನೆ, ಅಸಾಮದಲ್ಲಿ ಚಹ ಮುಂತಾದವುಗಳು. ಭೌಗೋಲಿಕ ಆಳ~
ಗಳ ಹಾಗೂ ಹವಾಮಾನದ ಪರಿಣಾಮವೆಂದೇ ಹೇಳಬಹುದು. ಹವಾಮಾನ ಪ್ರಭಾವವು
ನೇರವಾಗಿದ್ದು ಕಣ್ಣಿಗೆ ಕಾಣುವಂತಹದು. ನಮ್ಮ ನಿತ್ಯ ಜೀವನದಲ್ಲಿ ಮಾನವನ
ಜೀವನದ ಮೇಲೆ ಉಂಟಾಗುವ ಹವಾಮಾನ ಪ್ರಭಾವವನ್ನು ಕಾಣಿಸುತ್ತವೆ. ಯಾವ~
ನಿಗೆ ಜಗತ್ತಿನ ಹವಾಮಾನದ ಜ್ಞಾನವಿದೆಯೋ ಅವನು ಭೂಗೋಲ಼ವನ್ನು ಸರಿಯಾಗಿ
ಕಲಿಯಲಿಲ್ಲ. ಕೃಷಿ ಸಂಪತ್ತು ಹೆಚ್ಚಾಗಿ ಹವಾಮಾನವನ್ನು ಅವಲಂಬಿಸಿರುತ್ತದೆಂ~
ಬುದು ಅವನಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಲ್ಲದೆ ಜನಸಂಖ್ಯೆ ಹಾಗೂ ಅದರ ಹೆಚ್ಚಳ
ಕೂಡ ಇದನ್ನೆ ಅವಲಂಬಿಸಿದೆ. ಅನೇಕ ಕೈಗಾರಿಕೆಗಳು, ವ್ಯಾಪಾರಗಳು ಇದಕ್ಕ~
ನುಗುಣವಾಗಿಯೇ ಪ್ರಾರಂಭಿಸಲ್ಪಟ್ಟಿರುತ್ತವೆ. ಕೆಳಗಿನ ಅಂಶಗಳು ಹವಾಮಾನದ
ಮೇಲೆ ಪ್ರಭಾವ ಬೀರುತ್ತವೆ.

ಅ) ವಿಷುವ ವೃತ್ತದಿಂದ ಇರುವ ಅಂತರ.
ಆ) ಸಮುದ್ರ ತೀರದಿಂದ ಇರುವ ಅಂತರ.
ಇ) ಸಮುದ್ರ ಸಪಾಟಿಯಿಂದ ಎತ್ತರ.
ಈ) ಗಾಳಿಯ ಸ್ಥಿತಿ ಹಾಗೂ ಅದರ ದಿಕ್ಕು.
-27-
ಉ) ಪರ್ವತಗಳ ಇರುವಿಕೆ, ಅವುಗಳ ಎತ್ತರ.
ಊ) ಮಳೆ.
ಎ) ಭೂಮಿಯ ರಚನೆ.

ಮೇಲೆ ಹೇಳಿದ ಎಲ್ಲ ಅಂಶಗಳು ಒಂದು ಪ್ರದೇಶದ ಹವಾಮಾನವನ್ನು ನಿರ್ಧರಿ~
ಸುತ್ತವೆ. ಇವೆಲ್ಲವುಗಳ ಬಗ್ಗೆ ತಿಳಿದುಕೊಂಡಾಗ ನಮಗೆ ಕಾನಪುರ, ಬಾಂಬೆದಲ್ಲಿ
ಬಟ್ಟೆಯ ಗಿರಣಿಗಳು ಕಲಕತ್ತಾದಲ್ಲಿ ಜ್ಯೂಟ ಕಾರಖಾನೆಗಳು, ಭಾರತದ ಪೂರ್ವದಲ್ಲಿ
ಸಕ್ಕರೆ ಕಾರಖಾನೆಗಳು ನೆಲೆಸಿರುವದು ಯಾಕೆಂಬುದು ತಿಳಿದು ಬರುತ್ತದೆ.

ವಿಷವ ವೃತ್ತದ ಸಮೀಪಕ್ಕಿರುವ ದೇಶಗಳು ಉಷ್ಣವಾಗಿಯೂ ಧೃವ ಪ್ರದೇಶ~
ದಲ್ಲಿರುವ ದೇಶಗಳು ತಂಪಾಗಿಯೂ ಇರುತ್ತವೆ.

4) ಸ್ವಾಭಾವಿಕ ಸಸ್ಯ ಹಾಗೂ ಕೃಷಿ ಉತ್ಪನ್ನಗಳು :- ಭೂಮಿ
ಹಾಗೂ ಹವಾಮಾನ, ಸ್ವಾಭಾವಿಕ ಸಸ್ಯ ಕೃಷಿ ಉತ್ಪನ್ನಗಳಿಗೆ ಮೂಲವಾಗಿವೆ.
ವರ್ಷವಿಡೀ ಮಳೆಯಾಗುವ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿರುತ್ತವೆ. ಇದೇ ಕಾರ~
ಣಕ್ಕಾಗಿ ವಿಷುವ ವೃತ್ತ ಪ್ರದೇಶಗಳು ದಟ್ಟ ಕಾಡುಗಳನ್ನು ಹೊಂದಿದೆ. ಒಣ ಹಾಗೂ
ಮರ ಭೂಮಿಗಳಲ್ಲಿ ಕೃಷಿ ಅತೀ ಕಡಿಮೇ. ಕಾಡುಗಳನ್ನು ಹೊಂದಿರುವ ಪ್ರದೇಶದ ಸುತ್ತ
ಮುತ್ತ ಕಟ್ಟಿಗೆ ಕಾರಖಾನೆಗಳಿರುವದು ಸಾಮಾನ್ಯ. ಪೀಠೋಪಕರಣಗಳ ಕಾರಖಾನೆ~
ಯನ್ನು ಕಾಡಿನ ಹಿನ್ನೆಲೆಯಲ್ಲಿ ಸ್ಥಾಪಿಸುವದು ಯೋಗ್ಯ. ಕೃಷಿ ಉತ್ಪನ್ನಗಳು ಹವಾ~
ಮಾನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲಂಬಿಸಿವೆ. ಮುಖಜ ಭೂಮಿಯಲ್ಲಿ
ಕೃಷಿ ಉತ್ಪನ್ನವು ಉತ್ತಮವಾಗಿದ್ದು, ಪ್ರಸ್ಥಭೂಮಿಯಲ್ಲಿ ಇದು ಕಡಿಮೆ ಇರುತ್ತದೆ.
ಸ್ವಾಭಾವಿಕ ಅಂಶಗಳೂ ಭೂಮಿಯ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತವೆ. ಕೆಲ~
ವೊಂದು ಸ್ಥಳದಲ್ಲಿ ಹವಾಮಾನದ ಪ್ರಭಾವದಿಂದ ಭೂಮಿ ಫಲವತ್ತಾಗಿದ್ದು, ಕೆಲವು
ಪ್ರದೇಶದ ಭೂಮಿ ಹವಾಮಾನದಿಂದ ಒಣದಾಗಿದ್ದು ಕಡಿಮೆ ಉತ್ಪನ್ನ ಬೀರುವಂತಹ~
ದ್ದಾಗಿರುತ್ತದೆ. ಒಂದು ಪ್ರದೇಶದ ಉಷ್ಣತಾಮಾನವು 80% ವ ಸಮೀಪದಲ್ಲಿ ಇದ್ದರೆ
ಅಲ್ಲಿ ಸುಮಾರು 80" ನಷ್ಟು ಮಳೆಯಾಗುತ್ತದೆ. ಅಂದರೆ ಇಂಥ ಪ್ರದೇಶವು ಭತ಼್ತ,
ನಾರ, ಬೆಳೆಯುವ ಪ್ರದೇಶವಾಗಿದೆ ಮಳೆಯ ಅಭಾವದಿಂದ ಸಿಂಧು ನದಿಯಿಂದ
ಏರ್ಪಟ್ಟ ಬಯಲಿನಲ್ಲಿ ಭತ್ತ, ಹಾಗೂ ನಾರನ್ನು ಬೆಳೆಯುವದು ಸಾಧ್ಯವಾಗಿಲ್ಲ.

ಸಸ್ಯವರ್ಗವೂ ಭೌಗೋಲಿಕ ಅಂಶಗಳನ್ನು ನಿಯಂತ್ರಿಸುತ್ತದೆ. ಸಸ್ಯವರ್ಗವು ಕೈ~
ಗಾರಿಕೆಯ ಮೇಲೆ ಪ್ರಭಾವ ಬೀರುವದಲ್ಲದೆ ಒಂದು ದೇಶದ ಭೌಗೋಲಿಕ ಜೀವನದ
ಮೇಲೂ ಪ್ರಭಾವ ಬೀರುತ್ತದೆ. ಕೆನಡಾ ಹಾಗೂ ಸ್ವೀಡನ್್ಗಳಲ್ಲಿ ಬಹಳ ಸಂಖ್ಯೆಯಲ್ಲಿ
ಕಾಗದದ ಕಾರಖಾನೆಗಳಿವೆ. ಕಾರಣ ಅಲ್ಲಿ ಪೇಪರ ತಯಾರಿಕೆಗೆ ಉಪಯುಕ್ತವಾದ
ಕಟ್ಟಿಗೆ ಸಾಕಷ್ಟು ಬೆಳೆಯುತ್ತದೆ. ಅಲ್ಲದೆ ಅದಕ್ಕೆ ಹವಾಮಾನವೂ ಯೋಗ್ಯವಾಗಿದೆ.
-28-
ಟಾಟಾ ನಗರದಲ್ಲಿ ಉಕ್ಕಿನ ಕಾರಖಾನೆ ಸಾಧ್ಯವಾಗಿದೆ, ಏಕೆಂದರೆ ಅದರ ಸುತ್ತ ಮುತ್ತ~
ಲಿನ ಪ್ರದೇಶದಲ್ಲಿ ಕಬ್ಬಿಣದ ಅದಿರು ಸಾಕಷ್ಟಿದ್ದು, ಕಲ್ಲಿದ್ದಲಿಯೂ ಸಾಕಷ್ಟು
ದೊರೆಯುತ್ತದೆ.

ಪ್ರಾಣಿ ಸಂಪತ್ತು ಕೂಡ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅಲ್ಲದೆ
ಭೂಮಿಯ ಮೇಲ್ಭಾಗ ಮತ್ತು ಸಸ್ಯ ಸಂಪತ್ತೂ ಪ್ರಾಣಿ ಸಂಪತ್ತಿನ ಮೇಲೆ ಪ್ರಭಾವ
ಬೀರುತ್ತದೆ. ಒಂದು ಪ್ರದೇಶದಲ್ಲಿ ದಟ್ಟವಾದ ಕಾಡು ಇದ್ದರೆ ಅಲ್ಲಿ, ಮಂಗ, ಕರಡಿ,
ಜಿಂಕೆ ಮುಂತಾದವುಗಳನ್ನು ಕಾಣಬಹುದು. ಅದೇ ಮರಳುನಾಡಿನಲ್ಲಿ ಕೇವಲ ಒಂಟೆ~
ಗಳನ್ನು ಕಾಣಲುಸಾಧ್ಯ. ಪರ್ವತ ಪ್ರದೇಶಗಳಲ್ಲಿ ಹುಲಿ, ಸಿಂಹಗಳನ್ನು ಕಾಣಲು
ಸಾಧ್ಯವಿಲ್ಲ. ಏಕೆಂದರೆ ಸ್ವಾಭಾವಿಕ ಅಂಶಗಳು ಅವುಗಳ ಇರುವಿಕೆಗೆ ಅನುಕೂಲವಾಗಿ~
ರುವದಿಲ್ಲ. ಹವಾಮಾನಕ್ಕನುಗುಣವಾಗಿ ಟಂಡ್ರಾ ಪ್ರದೇಶದಲ್ಲಿ ರೇನ್್ಡೀರ ಮತ್ತು
ಟಿಬೇಟದಲ್ಲಿ ಯಾರ್ಕ ಪ್ರಾಣಿಗಳನ್ನು ಕಾಣಲು ಸಾಧ್ಯ. ಸಾಕು ಪ್ರಾಣಿಗಳಾದ ಕುದುರೆ,
ಎಮ್ಮೆ, ಆಕಳುಗಳು ಅವುಗಳ ಜೀವಿಸುವಿಕೆಗೆ ಅನಕೂಲ ವಾತಾವರಣ಼ವಿರುವ ಪ್ರದೇಶ
ಗಳಲ್ಲಿ ಕಂಡು ಬರುತ್ತವೆ. ಯಾವ ಪ್ರದೇಶದಲ್ಲಿ ಸಸ್ಯ ಸಂಪತ್ತು ಉತ್ತಮವಾಗಿರುತ್ತ~
ದೆಯೋ ಅಂಥ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆಯೂ ಸಾಕಷ್ಟಿರುತ್ತದೆ.

5) ಮಾನವನ ಚಟುವಟಿಕೆಗಳು :- ಮಾನವನೂ ಕೂಡಾ ಭೌಗೊ~
ಲಿಕ ಅಂಶಗಳಿಂದ ನಿಯಂತ್ರಿಸಲ್ಪಡುತ್ತಾನೆ. ಅವನೂ ಕೂಡಾ ಪ್ರಾಣಿಜೀವನದ
ಒಂದು ಭಾಗ. ಭೌಗೋಲಿಕ ಹಾಗೂ ಭೌತಿಕ ಅಂಶಗಳಿಗನುಗುಣವಾಗಿ ಮಾನವ
ತನ್ನ ಜೀವನ ಹಾಗೂ ಜೀವನ ಕ್ರಮವನ್ನು ಬದಲಿಸಿಕೊಳ್ಳುತ್ತಾನೆ. ಪರ್ವತ ಪ್ರದೇ~
ಶದಲ್ಲಿ ವಾಸಿಸುವ ಜನರು ವಸ್ತುಗಳನ್ನು ಹೊರಲು ಹೇಸರಗತ್ತೆ ಮತ್ತು ಯಾಕ್~
ಗಳಂತಹ ಪ್ರಾಣಿಗಳನ್ನು ಉಪಯೋಗಿಸುತ್ತಾರೆ. ಅದೇ ಬಯಲು ಪ್ರದೇಶದಲ್ಲಿ
ವಾಸಿಸುವವರು ಚಕ್ಕಡಿ ಹಾಗೂ ಉಪಯುಕ್ತವಾದ ಕೆಲವು ಪ್ರಾಣಿಗಳನ್ನು ಉಪ~
ಯೋಗಿಸುತ್ತಾರೆ. ಮರುಭೂಮಿಯಲ್ಲಿ ಒಂಟೆಯು ಅತೀ ಉಪಯುಕ್ತವಾದ ಪ್ರಾಣಿಯು
ಅಲ್ಲಿರುವ ಸಸ್ಯ ವರ್ಗವು ಕೇವಲ ಸ್ವಲ್ಪ ನೀರಿನಿಂದ ಬೆಳೆಯುವಂತಹವು ಇರುತ್ತವೆ.
ಅಂದರೆ ಗಿಡಗಂಟಿಗಳು ಮಾತ್ರ ಬೆಳೆಯುತ್ತವೆ. ಹೀಗೆ ಭೌಗೋಲಿಕ ಅಂಶಗಳ ಸಹಾ~
ಯದಿಂದಲೇ ಮಾನವನು ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ.

ನಿಜವಾಗಿ ನೋಡಿದರೆ ಮಾನವ ಭೌಗೋಲಿಕ ಅಭ್ಯಾಸದ ಕೇಂದ್ರವಾಗಿದ್ದಾನೆ.
ಅವನ ಜೀವನಕ್ರಮ ಅವನ ಚಟಗಳು, ವ್ಯಾಪಾರ, ಜನಸಂಖ್ಯೆ, ಉಡಿಗೆ - ತೊಡಿಗೆ
ಮುಂತಾದವುಗಳು ಭೌಗೋಲಿಕ ಅಂಶಗಳನ್ನೇ ಅವಲಂಬಿಸಿವೆ. ಸಾಮಾನ್ಯ ಉಷ್ಣ
ಹವಾಮಾನದಲ್ಲಿ ವಾಸಿಸುವ ಜನರು ಶ್ರಮಜೀವಿಗಳಾಗಿದ್ದು ಅದೇ ಉಷ಼್ಣ ಪ್ರದೇಶದ
ಜನರು ಅವರಿಗಿಂತಲೂ ಕಡಿಮೆ ಶ್ರಮಜೀವಿಗಳಾಗಿರುತ್ತಾರೆ. ಒಳ್ಳೆಯ ಭೂಮಿ
-29-
ಹಾಗೂ ಹವಾಮಾನ ವಿರುವ ಪ್ರದೇಶಗಳಲ್ಲಿ ನಾಗರಿಕತೆ ಸಾಕಷ್ಟು ಬೆಳವಣಿಗೆ
ಹೊಂದಿದೆ. ಅದೇ ಅತೀ ಉಷ್ಣ ಹಾಗೂ ಅತೀ ಶೀತ ಪ್ರದೇಶದ ಜನರಿಗೆ ಇಷ್ಟೊಂದು
ಮುಂದುವರೆಯಲು ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಮಾನವ ಭೌಗೋಲಿಕ ಅಂಶ~
ಗಳ ಜೀವಿ ಆಧುನಿಕ ಯುಗದಲ್ಲಿ ವಿಜ್ಞಾನ ಮಾನವನನ್ನು ಪ್ರಕೃತಿಯ ಒಡೆಯನ~
ನ್ನಾಗಿ ಮಾಡಿದ್ದರೂ ಇನ್ನೂ ಕೆಲವು ಸಂಗತಿಗಳು ಅವನಿಗೆ ನೀಗದಂತಾಗಿ ಹಾಗೇ
ಉಳಿದಿವೆ. ಅಂದರೆ ಪ್ರಕೃತಿಯನ್ನು ಕೆಲವೊಂದು ವಿಷಯದಲ್ಲಿ ಮಾತ್ರ ಬದಲಾಯಿ~
ಸಿಕೊಳ್ಳಲು ಸಾಧ್ಯವಾಗಿದೆ.

ಮಾನವನ ಜೀವನ ಹೆಚ್ಚಾಗಿ ಕೆಳಗಿನ ಅಂಶಗಳಿಂದ ಪ್ರಭಾವಿತ ಗೊಂಡಿದೆ.
(ಅ) ದೇಹದ ರಚನೆ (ಆ) ಮನೆ ಮತ್ತು ಆಹಾರ (ಇ) ಕೈಗಾರಿಕೆ ವಾಣಿಜ್ಯ ಉದ್ಯಮ
(ಇ) ಸಂಪರ್ಕ ಸಾಧನಗಳು (ಉ) ಜನಸಂಖ್ಯೆ (ಊ) ಭಾಷೆ ಹಾಗೂ ಧರ್ಮ
(ಎ) ನಾಗರಿಕತೆ (ಏ) ಪರಿಸರದ ಮೇಲೆ ಪ್ರಭುತ್ವವನ್ನು ಹೊಂದುವ ಅಭಿಲಾಷೆ.

ಈ ಮೇಲೆ ಹೇಳಿದ ಅಂಶಗಳ ಆಧಾರದಿಂದ ಮಾನವನ ಜೀವನ ನಿರ್ಧರಿಸಲ್ಪ~
ಡುತ್ತದೆ. ಈ ಎಲ್ಲ ಸಂಗತಿಗಳ ಬಗ್ಗೆ ತಿಳುವಳಿಕೆ ಉಂಟಾದರೆ ಭೂಗೋಲದ ಅಭ್ಯಾಸ
ಸುಲಭ ಸಾಧ್ಯ. ಅಂದಾಗ ಮಾತ್ರ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುವದು ಸಾಧ್ಯ.

ಬ್ರಿಟಿಷರು ಅನೇಕ ದಿವಸಗಳ ವರೆಗೆ ಜಗತ್ತನ್ನು ಯಾಕೆ ಆಳಿದರು ? ಟಂಡ್ರಾ
ಪ್ರದೇಶದ ಎಸ್ಕಿಮೋ ಮುಂತಾದ ಜನರು ತಮ್ಮ ಜೀವನವನ್ನು ಹಾಗೆ ಏಕೆ ನಡೆಸು~
ತ್ತಾರೆ ? ಕಾಡು ಹೊಂದಿರುವ ಹಾಗೂ ವಿಷುಮವೃತ್ತದ ಸಮೀಪದ ಪ್ರದೇಶದಲ್ಲಿ
ಜನಸಂಖ್ಯೆ ಏಕೆ ಅತೀ ಕಡಿಮೆ? ಜನರು ಮರುಭೂಮಿಯಲ್ಲಿ ವಾಸಿಸುವದು ಅಸಾಧ್ಯ
ಏಕೆ ? ಅಮೇರಿಕಾ ಮತ್ತು ರಶಿಯಾಗಳು ಜಗತ್ತಿನಲ್ಲಿ ಪ್ರಬಲ ರಾಷ್ಟ್ರಗಳು ಏಕೆ
ಆಗಿವೆ ?

ಆದಕಾರಣ ಭೂಗೋಲ ಶಿಕ್ಷಕನ ಆದ್ಯ ಕರ್ತವ್ಯವೆಂದರೆ ಮಾನವನ ಜೀವನದ
ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತು ಮನದಟ್ಟಾಗುವಂತೆ ಬೋಧಿಸುವದೇ
ಆಗಿದೆ. ಇದಕ್ಕಾಗಿ ಕೆಳಗೆ ಕೊಟ್ಟ ಕೋಷ್ಟಕವನ್ನು ಮಾದರಿಯಂತೆ ಉಪಯೋಗಿಸಬ~
ಹುದಾಗಿದೆ.

1) ಭೌತಿಕ ಸ್ಥಿತಿಗಳು 	ಇವುಗಳು ಒಂದನ್ನೊಂದು ಅಗಲಲಾರದಂತಹ
ಸಂಬಂಧ ಹೊಂದಿವೆ
2) ಹವಾಮಾನ
(1) ಬಾಹ್ಯ ಮಾಧ್ಯಮ
(2) ಆಂತರಿಕ ಮಾಧ್ಯಮ

3) ಹವಾಮಾನ
(1) ರೇಖಾಂಶ
(2) ಉನ್ನತ		ಇದು ಮೊದಲಿನ ಎರಡರೊಂದಿಗೆ ಸಂಬಂಧ
ಹೊಂದಿದೆ.
-30-

ಮೇಲಿನ ಕೋಷ್ಟಕದಿಂದ ಮಾನವನ ಜೀವನವು ಭೌತಿಕ ಹಾಗೂ ಪ್ರಾಕೃ~
ತಿಕ ಅಂಶಗಳಿಂದ ಪ್ರಭಾವಿತಗೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ. ಮಾನವನಲ್ಲಿ
ಬುದ್ಧಿ ಮತ್ತೆ ಮಾನವೀಯತೆಂಬ ಅಂಶಗಳಿದ್ದು ಅವುಗಳ ಸಹಾಯದಿಂದ ಅವನಿಗೆ ಪ್ರಕೃ~
ತಿಯ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗಿದೆ. ಮಾನವನ ನಿರ್ಮಾಣವೇ
ಅವನು ಪ್ರಕೃತಿಯ ಮೇಲೆ ಪ್ರಭುತ್ವ ಹೊಂದುವಂತೆ ಆಗಿದೆ. ಅವನು ಬುದ್ಧಿ ಮತ್ತೆ~
ಯಿಂದ ಸಂಪನ್ಮೂಲಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಹೀಗೆ ಅವನ
ಪ್ರಭಾವವೂ ಪ್ರಕೃತಿಯ ಮೇಲೆ ಉಂಟಾಗುತ್ತದೆ.
-31-

ಭೂಗೋಲದ ಮೂಲ ಅಂಶಗಳು:- ಭೂಗೋಲ ಶಿಕ್ಷಕರ ಪಾತ್ರ
ಅತ್ಯಂತ ಮಹತ್ವದ್ದು. ಅವನು ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾ~
ದರೆ, ಭೂಗೋಲದ ಮೂಲ ಅಂಶಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರಲೇಬೇಕು.
ಭೂಗೋಲ ವಿಷಯವನ್ನು ಬೋಧಿಸುವದನ್ನಾಧರಿಸಿ ವಿಷಯವನ್ನು ಮೂರು ಭಾಗ~
ಗಳಲ್ಲಿ ವಿಂಗಡಿಸಿದ್ದಾರೆ.

1) ಭೂಗೋಲ ವಿಷಯದ ಜ್ಞಾನ
2) ಭೂಗೋಲ ವಿಷಯದ ತಾರ್ಕಿಕ ಉಪಯೋಗ
3) ಭೌಗೋಲಿಕ ಕಲ್ಪನೆ.

1) ಭೂಗೋಲ ವಿಷಯದ ಜ್ಞಾನ :- ಭೂಗೋಲದಲ್ಲಿ ವ್ಯಾಪಕವಾದ
ಹಾಗೂ ವಿಧ ವಿಧವಾದ ವಿಷಯಗಳ ಸಂಗ್ರಹವಿದೆ. ಅದು ನದಿಗಳ ಬಗ್ಗೆ ಪರ್ವತ~
ಗಳ ಬಗ್ಗೆ ಹೀಗೆ ಅನೇಕ ಸಂಗತಿಗಳನ್ನು ಹೊಂದಿದೆ. ಇದಲ್ಲದೆ ಅದು ಅನೇಕ ಭೌಗೋ~
ಲಿಕ ಹೆಸರುಗಳನ್ನು ಹೊಂದಿದೆ. ಭೂಗೋಲ ಶಿಕ್ಷಕನಿಗೆ ಇವೆಲ್ಲವುಗಳ ಬಗ್ಗೆ ಸರಿಯಾದ
ಜ್ಞಾನ ವಿರಬೇಕಾದದ್ದು, ಅತ್ಯವಶ್ಯ ಅಂದಾಗ ಮಾತ್ರ ಅವನು ತನ್ನ ವೃತ್ತಿಗೆ ಹಾಗೂ
ವಿದ್ಯಾರ್ಥಿಗಳಿಗೆ ನ್ಯಾಯವನ್ನು ಒದಗಿಸಬಲ್ಲನು.

2) ಭೂಗೋಲ ವಿಷಯ ತಾರ್ಕಿಕ ಉಪಯೋಗ :- ಇತ್ತೀಚಿನ
ದಿನಗಳಲ್ಲಿ ಭೂಗೋಲ ಬೋಧನೆಯು ವೈಜ್ಞಾನಿಕ ಹಾಗೂ ಮನೋ ವೈಜ್ಞಾನಿಕ
ತಳಹದಿಯನ್ನು ಆಧರಿಸಿದೆ. ಕಾರಣ ಶಿಕ್ಷಕ ವಿಷಯವನ್ನು ವೈಜ್ಞಾನಿಕವಾಗಿ ಹಾಗೂ
ಮನೋ ವೈಜ್ಞಾನಿಕವಾಗಿ ಬೋಧಿಸಬೇಕಾದರೆ ಅದನ್ನು ತಾರ್ತಿಕವಾಗಿ ಉಪಯೋ~
ಗಿಸುವದು ಗೊತ್ತಿರಬೇಕು. ಶಿಕ಼್ಷಕನು ವಿಷಯವನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ
ಆಲಿಸುವಂತೆಯೂ ಮತ್ತು ಶಿಕ್ಷಕನ ಮಾತನ್ನು ನಂಬುವಂತೆಯೂ ಬೋಧಿಸಬೇಕು.
ಇದು ಸಾಧಿಸಬೇಕಾದರೆ ತಾರ್ತಿಕ ಪದ್ಧತಿಯೊಂದೇ ತಾರಕವಾದದ್ದು.

3) ಭೌಗೋಲಿಕ ಕಲ್ಪನೆ :- ಶಿಕ್ಷಕನು ತನ್ನ ಬೋಧನೆಯಲ್ಲಿ ಭೌಗೋ~
ಲಿಕ ಕಲ್ಪನೆಯನ್ನು ಬಳಸಬೇಕಾದದ್ದು ಅವಶ್ಯ. ಈ ಕಲ್ಪನೆಯ ಸಹಾಯದಿಂದ
ಮಾತ್ರ ಶಿಕ್ಷಕ ವಿದ್ಯಾರ್ಥಿಗಳಿಗೆ ವಿಷಯವನ್ನು ಸರಿಯಾಗಿ ಹಾಗೂ ವೈಜ್ಞಾನಿಕ~
ವಾಗಿ ಬೋಧಿಸಬಲ್ಲ. ಶಿಕ್ಷಕನು ಏಕಕಾಲಕ್ಕೆ ತರ್ಕ ಹಾಗೂ ಕಲ್ಪನೆಯನ್ನು ಬಳಸ~
ಬೇಕಾದದ್ದು ಅವಶ್ಯ. ಯಾವುದಾದರೊಂದು ಪ್ರದೇಶದ ಬಗ್ಗೆ ಬೋಧಿಸುವಾಗ ತಾನು
ನೋಡದಿದ್ದರೂ ಅದು ವಿದ್ಯಾರ್ಥಿಗಳ ಕಣ್ಣು ಮುಂದೆ ಬರುವಂತೆ ಕಲ್ಪನೆಯ ಸಹಾ~
ಯದಿಂದ ಬೋಧಿಸಬೇಕು. ಇಂಥ ಪ್ರತ್ಯಕ್ಷ ನೋಡಿರದ ಅನೇಕ ವಿಷಯಗಳು ಭೂಗೋ~
ಲದಲ್ಲಿ ಬರುತ್ತವೆ. ಇಂಥ ವಿಷಯಗಳ ಬೋಧನೆ ಕಲ್ಪನೆಯಿಂದಲೇ ಆಗಬೇಕು. ಅದು
ಶಿಕ್ಷಕನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
-32-

ಪ್ರಶ್ನೆ 6. ಭೂಗೋಲ ವಿಷಯದ ವಿವಿಧ ಬೋಧನಾ ಪದ್ಧತಿಗಳ ಬಗ್ಗೆ ಹೇಳಿರಿ

ಉತ್ತರ - ಭೂಗೋಲ ವಿಷಯದ ವ್ಯಾಪ್ತಿ ಹೆಚ್ಚಿದಂತೆ ಅದನ್ನು ಬೋಧಿಸು~
ವಲ್ಲಿ ಅನೇಕ ಪದ್ಧತಿಗಳನ್ನು ಬಳಸುವದು ರೂಢಿಯಲ್ಲಿ ಬಂದಿದೆ. ಈ ಪದ್ಧತಿಗಳನ್ನು
ಬಳಸುವಾಗ ಶಿಕ್ಷಕ ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ಇವುಗಳನ್ನು ಅಳವ~
ಡಿಸುವಾಗ ಶಿಕ್ಷಕನಿಗೆ ವಿದ್ಯಾರ್ಥಿಗಳ ಮಾನಸಿಕ ಮಟ್ಟದ ಪರಿಚಯ ಅವಶ್ಯ.
ಅಂದಾಗ ಮಾತ್ರ ಇಚ್ಛಿತ ಪರಿಣಾಮ ದೊರೆಯುತ್ತದೆ. ಭೂಗೋಲ ಬೋಧನೆಯ
ವಿವಿಧ ಪದ್ಧತಿಗಳು ಕೆಳಗಿನಂತಿವೆ.

1) ಪ್ರಶ್ನೋತ್ತರ ಪದ್ಧತಿ
2) ಇಂಡಕ್ಟಿವ್ ಪದ್ಧತಿ
3) ಡಿಡಕ್ಟಿವ್ ಪದ್ಧತಿ
4) ಉಪನ್ಯಾಸ ಪದ್ಧತಿ
5) ಪಠ್ಯ ವಿಧಾನ
6) ವಿವರಣಾತ್ಮಕ ವಿಧಾನ
7) ವೀಕ್ಷಣಾ ವಿಧಾನ
8) ಕಥಾ ವಿಧಾನ
9) ರಾಜಕೀಯ ವಿಧಾನ
10) ಪ್ರಾದೇಶಿಕ ವಿಧಾನ
11) ಮಾನವೀಯ ವಿಧಾನ
12) ತುಲನಾತ್ಮಕ ವಿಧಾನ
13) ಯೋಜನಾ ವಿಧಾನ
14) ಡಾಲ್ಟನ್ ವಿಧಾನ
15) ಪ್ರಯೋಗಶಾಲಾ ವಿಧಾನ
16) ಪ್ರವಾಸ ವಿಧಾನ.

1) ಪ್ರಶ್ನೋತ್ತರ ಪದ್ಧತಿ :- ಇದನ್ನು ಸಾಕ್ರೆಟಿಕ್ ಪದ್ಧತಿ ಎಂತಲೂ
ಕರೆಯಬಹುದು. ಈ ವಿಧಾನದಲ್ಲಿ ಶಿಕ್ಷಕನು ವಿದ್ಯಾರ್ಥಿಗಳ ಪೂರ್ವಜ್ಞಾನವನ್ನು
ನಿಯಮಿತ ಗೊಳಿಸುತ್ತಾನೆ. ಅಂದರೆ ಮೊದಲು ಕಲಿತ ವಿಷಯದ ಬಗ್ಗೆ ಇರುವ ಸಂಶ~
ಯವನ್ನು ನಿವಾರಿಸಿ ವಿದ್ಯಾರ್ಥಿ ಸರಿಯಾದ ಮಾರ್ಗದಲ್ಲಿ ಬರುವಂತೆ ಮಾಡುತ್ತಾನೆ.
ಇದಕ್ಕಾಗಿ ಶಿಕ್ಷಕ ಪ್ರಶ್ನೋತ್ತರ ಪದ್ಧತಿಯಲ್ಲಿ ಅನುಸರಿಸುವದು ಅವಶ್ಯ. ಪ್ರಶ್ನೋತ್ತರ~
ದಿಂದ ಪೂರ್ವಜ್ಞಾನವನ್ನು ವ್ಯವಸ್ಥಿತ ಗೊಳಿಸಲು ಬರುತ್ತದೆ. ಆದರೆ ಈ ವಿಧಾನವನ್ನು
ಅನುಸರಿಸುವಾಗ ಕೆಳಗಿನ ಸಂಗತಿಗಳ ಬಗ್ಗೆ ಎಚ್ಚರ ವಹಿಸಬೇಕಾದದ್ದು ಅವಶ್ಯ.

ಅ) ವಿದ್ಯಾರ್ಥಿಗಳ ಕುತೂಹಲ ಹೆಚ್ಚಿ ವಿಷಯದಲ್ಲಿ ಆಸಕ್ತರಾಗುವಂತೆ ಪ್ರಶ್ನೆಗಳನ್ನು
-33-
ಕೇಳಬೇಕು.

ಆ) ಪೂರ್ವಜ್ಞಾನದೊಂದಿಗೆ ಈಗಿನ ಜ್ಞಾನವನ್ನು ಹೊಂದುವಂತೆ ಮಾಡಬೇಕು.
ಅಂದರೆ ಪೂರ್ವಜ್ಞಾನದ ಸಹಾಯದಿಂದಲೇ ಹೊಸ ಜ್ಞಾನವನ್ನು ಬೋಧಿಸಬೇಕು.

ಇ) ಹೊಸ ವಿಷಯವನ್ನು ಬೋಧಿಸುವಾಗ ವಿದ್ಯಾರ್ಥಿಗಳ ಮಾನಸಿಕ ಮಟ್ಟದ
ಬಗ್ಗೆ ತಿಳುವಳಿಕೆ ಇರಬೇಕು. ಅವರ ಬೌದ್ಧಿಕ ಮಟ್ಟಕ್ಕನುಗುಣವಾಗಿ ವಿಷಯವನ್ನು
ಮಾರ್ಪಡಿಸಿ ಯೋಜಿಸಬೇಕು.

ಈ) ಚರ್ಚೆ, ವಿವರಣೆ ಹಾಗೂ ವಿಷಯ ವಿವೇಚನೆಯಿಂದ ಹೊಸ ಜ್ಞಾನವನ್ನು
ಗಟ್ಟಿಗೊಳಿಸಬೇಕು.

ಈ ಪದ್ಧತಿಯಲ್ಲಿ ಪೂರ್ವಜ್ಞಾನದ ಸಹಾಯದಿಂದ ಹೊಸ ಜ್ಞಾನವನ್ನು
ಬೋಧಿಸುವದರಿಂದ ಇದು ಬಹಳಷ್ಟು ಉಪಯುಕ್ತವೆನಿಸುತ್ತವೆ. ತರಗತಿಗಳಲ್ಲಿ
ಬೋಧಿಸಲು ಇದು ಅತ್ಯಂತ ಯೋಗ್ಯವಾದ ವಿಧಾನವು ಆದರೆ ಶಿಕ್ಷಕನು ಹೆಚ್ಚು
ಎಚ್ಚರಿಕೆ ವಹಿಸಬೇಕಾದದ್ದು ಅವಶ್ಯ. ಏಕೆಂದರೆ ಅವನು ವಿದ್ಯಾರ್ಥಿಗಳ ಆಸಕ್ತಿ
ಕುದುರುವಂತಹ ಪ್ರಶ್ನೆಗಳನ್ನೇ ಕೇಳಬೇಕು. ಇಲ್ಲದಿದ್ದರೆ ವಿಧಾನ ಪೂರ್ತಿ ನಿರುಪ~
ಯುಕ್ತವಾಗುವದು.

2) ಇಂಡಕ್ಟಿವ್ ವಿಧಾನ :- ಈ ವಿಧಾನದಲ್ಲಿ ಹೊಸ ಜ್ಞಾನದ ಬಗ್ಗೆ
ಹೊಸ ನಿಯಮವನ್ನು ಅರಿಯಲು ಕೆಲವು ವಿವರಣೆಗಳನ್ನು ಕೊಡಬೇಕು. ವಿವರಣೆಯ
ಸಹಾಯದಿಂದ ಹೊಸಜ್ಞಾನವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಅಂದರೆ ಇಲ್ಲಿ
ನಿಶ್ಚಿತದಿಂದ ಸಾಮಾನ್ಯದೆಡೆಗೆ ಸಾಗುವದೇ ಆಗಿದೆ. ಈ ರೀತಿಯಿಂದ ನೋಡಿದರೆ
ಈ ವಿಧಾನ ತಾರ್ಕಿಕ ಹಾಗೂ ಮನೋ ವೈಜ್ಞಾನಿಕವಾಗಿದೆ.

ಈ ವಿಧಾನವನ್ನು ವೈಜ್ಞಾನಿಕವಾಗಿ ಯಶಸ್ವಿಯಾಗಿ ಮಾಡಲು ಶಿಕ್ಷಕನು
ಕೆಳಗಿನ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದದ್ದು ಅವಶ್ಯ.

ಅ) ಶಿಕ್ಷಕ ಬಹಳಷ್ಟು ಉದಾಹರಣೆಗಳನ್ನು ಕೊಡಬಾರದು. ಉದಾಹರಣೆ~
ಗಳು ನಿಯಮಿತವಾಗಿದ್ದು ವಿದ್ಯಾರ್ಥಿಗಳು ಬೆಸರಿಸುವಂತಹವು ಇರಬಾರದು.

ಆ) ಶಿಕ್ಷಕ ಅತ್ಯಂತ ಸಂಯಮದಿಂದ ವರ್ತಿಸಿ ವಿದ್ಯಾರ್ಥಿಗಳಿಂದ ನಿಯಮಗಳನ್ನು
ಹೊರಡಿಸಬೇಕು.

ಇ) ಮೇಲಿಂದ ಮೇಲೆ ವಿದ್ಯಾರ್ಥಿಗಳನ್ನು ಹುರುದುಂಬಿಸಬೇಕು. ಅಂದರೆ ಅವರ
ಸಂಶೋಧನಾ ಸಾಮರ್ಥ್ಯ ಬೆಳೆಯುತ್ತದೆ. ಉಪಯುಕ್ತವಾದ ಪ್ರಶ್ನೆಗಳಿಂದ ಇಚ್ಛಿತ
ಗುರಿಯನ್ನು ತಲುಪಬೇಕು.

ಭೂಗೋಲ ಬೋಧನೆಯಲ್ಲಿ ಈ ವಿಧಾನ ಅತ್ಯಂತ ಉಪಯುಕ್ತವಾದದ್ದು
ಈ ವಿಧಾನದಿಂದ "ಕಾರಣ ಪರಿಣಾಮಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದು
ಇದು ಮುಂದಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ.
-34-

ವಿದ್ಯಾರ್ಥಿಗಳಿಗೆ ವಿಷುಮವೃತ್ತದ ಪ್ರದೇಶದ ಬಗ್ಗೆ ಬೋಧಿಸುವಾಗ ವಿದ್ಯಾರ್ಥಿ~
ಗಳನ್ನು ಬೆಂಕಿಯ ಸುತ್ತಲು ದುಂಡಗೆ ಕೂಡ್ರುವಂತೆ ಹೇಳಿ ಉಷ್ಣದ ಬಗ್ಗೆ ಪ್ರದೇಶಗ~
ಳನ್ನು ಕೇಳುತ್ತ ಹೋಗಿ ಬೆಂಕಿಯ ಸಮೀಪ ಹಾಗೂ ದೂರ ಇದ್ದಾಗ ಉಷ್ಣಾಂಶದ~
ಲ್ಲಾಗುವ ಬದಲಾವಣೆಗಳನ್ನು ತಿಳಿಸಿ ನಂತರ ವಿಷುವವೃತ್ತ ಸೂರ್ಯನಿಗೆ ಸಮೀಪ~
ವಿದ್ದು ಅಲ್ಲಿ ನೇರ ಕಿರಣಗಳು ಬೀಳುವದರಿಂದ ಅಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆಂಬ~
ದನ್ನು ಮನನ ಮಾಡಿಕೊಡಬೇಕು. ಒಂದು ವೇಳೆ ತರಗತಿಯಲ್ಲಿ ಬೆಂಕಿಯ ಸೌಲಭ್ಯ~
ವಿಲ್ಲದಿದ್ದರೆ ಅದರ ಚಿತ್ರವನ್ನು ಕರಿಹಲಗೆಯ ಮೇಲೆ ತೆಗೆದು ಅದರ ಸಹಾಯದಿಂದ
ಪಾಠವನ್ನು ಮುಂದುವರೆಸಬೇಕು.

ಈ ವಿಧಾನವನ್ನು ಅನುಸರಿಸುವಾಗ ವಿದ್ಯಾರ್ಥಿಗಳ ಮನೋವೈಜ್ಞಾನಿಕ ಅಗತ್ಯ~
ಗಳನ್ನೆಲ್ಲಾ ಮನದಟ್ಟು ಮಾಡಿಕೊಂಡಿರಬೇಕು. ಅಂದರೆ ಉಷುವ ವೃತ್ತದಲ್ಲಿ ಸೂರ್ಯನ
ಲಂಬ ಕಿರಣಗಳಿಂದ ಉಷ್ಣಾಂಶ ಹೆಚ್ಚಿಗೆ, ಹಾಗೂ ಧೃವ ಪ್ರದೇಶದಲ್ಲಿ ಕಿರಣಗಳ
ಬಾಗುವಿಕೆಯಿಂದ ಶೀತ ಎಂಬುದನ್ನು ತಿಳಿಯಪಡಿಸಬೇಕು.

3) ಡಿಡಕ್ಟಿವ ವಿಧಾನ :- ಈ ವಿಧಾನದಲ್ಲಿ ಮೊಟ್ಟ ಮೊದಲಿಗೆ ಸಿದ್ಧಾಂ~
ತಗಳನ್ನು ಹೇಳಬೇಕು ನಂತರ ಅನೇಕ ವಿವರಣೆಗಳ ಮೂಲಕ ಸಿದ್ಧಾಂತವನ್ನು ವಿಷದೀಕ~
ರಿಸಬೇಕು. ಈ ವಿಧಾನದಿಂದ ಅನೇಕ ಸಿದ್ಧಾಂತಗಳನ್ನು ಯಶಸ್ವಿಯಾಗಿ ತಿಳಿಹೇಳ~
ಬಹುದು.

ಉದಾಹರಣೆ ಶಿಕ್ಷಕನಿಗೆ ವಿಷುವ ವೃತ್ತ ಪ್ರದೇಶದಲ್ಲಿ ವರ್ಷವಿಡೀ ಉಷ್ಣಾಂಶ 
#ಹೆಚ್ಚಾ~
ಗಿದ್ದು ಧೃವ ಪ್ರದೇಶಗಳಲ್ಲಿ ವರ್ಷವಿಡೀ ಶೀತ ವಿರುತ್ತದೆ ಎಂಬುದನ್ನು ಬೋಧಿಸ~
ಬೇಕಾದಾಗ ಇದನ್ನು ಶಿಕ್ಷಕ ಮೊದಲು ಹೇಳಿಬಿಡಬೇಕು. ನಂತರ ಇದನ್ನು ಧೃಡೀಕರಿ~
ಸಲು ಕೆಲವು ವಿವರಣೆಗ಼ಳನ್ನು ನೀಡಬೇಕು. ಅದರಿಂದ ಅವರ ಜ್ಞಾನ ವೃದ್ಧಿಸುತ್ತದೆ.
ಈ ವಿಧಾನ ಕೆಳಗಿನ ತರಗತಿಗಳಿಗೆ ಯೋಗ್ಯವಾದದ್ದಲ್ಲ. ಆದರೆ ಮೇಲಿನ ತರಗತಿಗಳಲ್ಲಿ
ಅತ್ಯಂತ ಉಪಯುಕ್ತವಾದದು.

4) ಉಪವಿನ್ಯಾಸ ವಿಧಾನ :- ಈ ವಿಧಾನವೂ ಕೂಡ ಮೇಲಿನ ತರಗತಿ~
ಗಳಿಗೆ ಯೋಗ್ಯವಾದದ್ದು. ಇದನ್ನು ಉನ್ನತ ಪಾಠಶಾಲೆಯಲ್ಲಿ ಹಾಗೂ ವಿಶ್ವ ವಿದ್ಯಾಲ~
ಯಗಳಲ್ಲಿ ಇದನ್ನು ಉಪಯೋಗಿಸಬೇಕು. ಈ ವಿಧಾನದಲ್ಲಿ ಶಿಕ್ಷಕ ಉಪವಿನ್ಯಾಸದ
ಮೂಲಕ ವಿದ್ಯಾರ್ಥಿಗಳಿಗೆ ಸತ್ಯ ದರ್ಶನ ಮಾಡಲು ಪ್ರಯತ್ನಿಸುತ್ತಾನೆ. ಅವನು ವಿದ್ಯಾ~
ರ್ಥಿಗಳನ್ನು ಪ್ರೋತ್ಸಾಹಿಸುವದರ ಮೂಲಕ ಜ್ಞಾನ ಬೆಳೆಸಿಕೊಳ್ಳಲು ಹಾಗೂ ಅದನ್ನು
ತಮ್ಮ ನಿತ್ಯ ಜೀವನದಲ್ಲಿ ಅಳವಡಿಸುವಂತೆ ಮಾಡಲು ಪ್ರಯತ್ನಿಸುತ್ತಾನೆ. ಉಪನ್ಯಾ~
ಸವನ್ನು ನೀಡುವಾಗ್ಗೆ ಶಿಕ್ಷಕನು ವಿದ್ಯಾರ್ಥಿಗಳ ಮಾನಸಿಕ ಮಟ್ಟ ಹಾಗೂ ಮಾನಸಿಕ
ಬೇಕು ಬೇಡಗಳನ್ನು ಸರಿಯಾಗಿ ಗಮನದಲ್ಲಿರಿಸಿ ಕೊಂಡಿರಬೇಕು. ಉಪನ್ಯಾಸಕ್ಕೆ ವಿದ್ಯಾ~
ರ್ಥಿಗಳಿಗೆ ಮನದಟ್ಟು ಮಾಡುವಂತಹ ಭಾಷೆಯನ್ನು ಉಪಯೋಗಿಸಬೇಕು. ಆದರೆ
-35-
ಅನೇಕ ಸಲ ಇದು ಸಾಧ್ಯವಾಗಲಾರದು. ಈ ವಿಧಾನವನ್ನು ಅಮಾನಸಿಕ ಹಾಗೂ
ಅವೈಜ್ಞಾನಿಕವೆಂದು ಪರಿಗಣಿಸಿದ್ದಾರೆ. ಆದ್ದರಿಂದ ಇದನ್ನು ಕೆಳಗಿನ ತರಗತಿಗಳಲ್ಲಿ
ಉಪಯೋಗಿಸುವದು ಸಮಂಜಸವಲ್ಲ.

﻿
ಮಾರ್ಗರೆಟ್ ಭಾಟ್ಟಿ, ಡಾ।। ಕೆ. ಶಿವರಾಮ ಕಾರಂತ
03-05-21
Kannada
-55-
ಅಧ್ಯಾಯ 7

ಎಂದೆಂದೂ ಇಲ್ಲದ ಹಕ್ಕಿ ಹಾಗೇಕೆ ಮರಳಲಿಲ್ಲ?
ಅದು ಹೋದದ್ದೆಲ್ಲಿಗೆ ?

ಆ ಹೆಣ್ಣು ಸೆರೆಯಲ್ಲಿದ್ದಾಗ ತನಗೇನಾಯಿತೆಂಬು~
ದನ್ನಾಗಲಿ ತನ್ನ ಪಯಣದ ನೆನಪನ್ನಾಗಲಿ ತಂದುಕೊಳ್ಳ~
ಲಾರದು. ಸಾಗರದ್ವೀಪದಿಂದ ಹೊರಟ ಸ್ವಲ್ಪ ಸಮಯದ
ತನಕ ಅದಕ್ಕೆ ಕಡಲ ಮೊರೆತವೇ ಕೇಳಿಸಿತ್ತು; ಮೋಟರು
ದೋಣಿಯ ಸದ್ದೂ ಕೇಳಿಸಿತ್ತು; ಹತ್ತಿರದಲ್ಲಿ ತನ್ನಂತೆ
ಬಂಧಿಯಾದ ಪಕ್ಷಿಗಳಿದ್ದಾವೆ ಎಂಬುದು ಗೊತ್ತಾಗಿ - ಅವು
ತನ್ನ ಜಾತಿಯವು; ತಾನು ತೀರ ಒಂಟಿಯಲ಼್ಲ - ಎಂಬ ಅಲ್ಪ
ಸಮಾಧಾನ ಉಂಟಾಗಿತ್ತು.

ಕಡಲ ಪಯಣದ ಬಳಿಕವೂ ಅದನ್ನು ಒಂದು
ಕತ್ತಲು ಪೆಟ್ಟಿಗೆಯಲ್ಲೇ ಇರಿಸಿದ್ದರು. ಅಲ್ಲಿಂದ ಮುಂದೆ
ಅದು ಈ ತನಕ ಕೇಳದಿದ್ದ ಹೊಸ ಗುಂಯ್ ಗುಂಯ್ 
ಸದ್ದನ್ನು ಕೇಳಿತು. ಅದಕ್ಕೆ ತನ್ನನ್ನು ಅದ್ಭುತ ವೇಗದಿಂದ
ವಾಯುಮಾರ್ಗದಲ್ಲಿ ಒಯ್ಯುತ್ತಿದ್ದಾರೆ, ಎಂಬ ಅನುಭವ~
ವೇನೊ ಆಯಿತು. ಆದರೆ, ತಾನಿರುವುದು ರೆಕ್ಕೆ ಬಿಡಿಸಲು
ಜಾಗವಿಲ್ಲದ ಕತ್ತಲು ಪೆಟ್ಟಿಗೆಯಲ್ಲಿ. ಅಂಥ ತನಗೆ ವಾಯು~
ಸಂಚಾರ ಹೇಗೆ ಸಾಧ್ಯ ಎಂಬ ಸಂಗತಿ ಅದರ ಪಕ್ಷಿ ಬುದ್ದಿಗೆ
ಹೊಳೆಯದಾಯಿತು.

ಮುಂದೆ ಪೆಟ್ಟಿಗೆಯಿಂದ ಅದನ್ನು ಹೊರಕ್ಕೆ ತೆಗೆದಾಗ
ಸೂರ್ಯನ ಬೆಳಕನ್ನು ಕಂಡು ಅದಕ್ಕೆ ಸಂತೋಷವಾಯಿತು.
ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತು. ಮೈಯ
-56-
ತಿರುವು ಮುರುವು ಮಾಡಿಕೊಂಡು ಹಾರುತ್ತೇನೆ ಎಂದು
ಯೋಚಿಸಿದರೆ ಮನುಷ್ಯರು ಅದನ್ನು ಬಿಗಿಯಾಗಿ ಹಿಡಿ~
ದಿದ್ದರು. ಆದರೆ ಅವರು, ಅದು ಸುಮ್ಮನೆ ಕುಳಿತಾಗ
ಅದನ್ನು ಮೆಲುವಾಗಿ ಮಾತನಾಡಿಸಿದರು. ಆ ಮೆಲು಩ುಡಿ
ಅದಕ್ಕೆ ಹಿತವಾಗಿ ಕೇಳಿಸಿ, ಭಯ ತಗ್ಗಿತು. ಅವರ ಮಾತಿನ
ಅರ್ಥ ಅದಕ್ಕೆ ತಿಳಿಯುವಂತಿರಲಿಲ್ಲ. ಅನಂತರ ಅವರು
ಅದರ ಕಾಲಿಗೆ ಲೋಹದ ಉಂಗುರವನ್ನು ಬಿಗಿದು,
ಆಮೇಲೆ ಅದನ್ನು ಎತ್ತಿ ಆಕಾಶಕ್ಕೆಸೆಯುವ ಹೊತ್ತಿಗೆ
ಕತ಼್ತಲು ಕವಿಯತೊಡಗಿತ್ತು. ಅದು ಸಂತಸದಿಂದ ಕೂಗುತ್ತ
ನೆಟ್ಟಗೆ ವಾಯುಮಂಡಲವನ್ನು ಸೇರಿ, ಪೂರ್ವದಿಕ್ಕಿಗೆ
ತಿರುಗಿ ಸಮುದ್ರದ ಮೇಲೆ ಹಾರಿಹೋಯಿತು.

ಅಲ್ಲಿದ್ದವರು, "ಈ ಹಕ್ಕಿ ನಿಜಕ್ಕೂ ಯಾವತ್ತೂ
ದಾಖಲೆಗಳನ್ನು ಮುರಿದೀತು" ಎಂದಕೊಂಡರು. ಆದರೆ
ಆ ಭವಿಷ್ಯ ಸುಳ್ಳಾದೀತೆಂದು ಅವರಿಗೆ ಹೊಳೆಯಲೇ ಇಲ್ಲ.

ನಿಮ್ಮಾ ಹಕ್ಕಿ ಸಂತೋಷದಿಂದ ಹಿಗ್ಗಿ ಹಾರುತ್ತಿದೆ.
ಆಕಾಶದಲ್ಲಿ ಅದಕ್ಕೆ ಚೆನ್ನಾಗಿ ಪರಿಚಯವುಳ್ಳ ನಕ್ಷತ್ರಗಳು
ಕಾಣಿಸುತ್ತಿವೆ, ಅವೆಲ್ಲವೂ ಉತ್ತರ ಗೋಲಾರ್ಧದ ನಕ್ಷತ್ರ`
ಗಳು; ಅದು ಹುಟ್ಟಿದ ಕಾಲಕ್ಕೆ ತನ್ನ ಬಿಲದ ಬಾಯಿಗೆ
ಬಂದು ಬಾನನ್ನು ನೋಡಿದಾಗ ಕಾಣಿಸಿದ ನಕ್ಷತ್ರಗಳೇ
ಅವು. ಆ ನಕ್ಷತ್ರಗಳು ಅದನ್ನು ಎಂದೂ ವಂಚನೆ
ಮಾಡಿರಲಿಲ್ಲ, ಇಂದು ವಂಚಿಸಲಾರವು - ಎಂಬ ಭರವಸೆ
ಉಂಟಾಯಿತು.

ಅದಕ್ಕೆ ತಾನೆಲ್ಲಿದ್ದೇನೆ ಎಂದು ಎಣಿಕೆ ಹಾಕುವ
ಜ್ಞಾನ ಇತ್ತೇ? ಅದರ ಮನಸ್ಸಿನಲ್ಲಿ ಸಾಗರದ್ವೀಪಕ್ಕೆ
ಇಂಥದೇ ಸಮನಾದ ದಾರಿ ಎಂಬ ಅರಿವಾದರೂ ಇತ್ತೇ ?
-57-

ಅದು ಪೂರ್ವದಿಕ್ಕಿಗೆ ಹಾರಲು ತೊಡಗಿದ ಕಾರಣ
ಆ ಎಟ್ಲಾಂಟಿಕ್ ಸಾಗರದಲ್ಲಿ ದಕ್ಷಿಣಗೋಲದಿಂದ ಉತ್ತರ
ಗೋಲಾರ್ಧಕ್ಕೆ ವಲಸೆ ಹೋಗುವ ಮಿಲಿಯಗಟ್ಟಲೆ ಹಕ್ಕಿ~
ಗಳ ಆಕಾಶಪಥ ತನಗೆ ಸಿಕ್ಕೀತು - ಎಂಬ ನಂಬಿಕೆಯಿಂದಲೋ
ಏನೋ. ವರ್ಷದ ಈ ಸಮಯದಲ್ಲಿ ಉಳಿದ ಪಕ್ಷಿ~
ಗಳು ಹಾಗೆ ಹಿಂಡಾಗಿ ವಲಸೆ ಹೋಗುವ ಸಂದರ್ಭವಿಲ್ಲ.
ಅದು ಸಮನಾದ ಕಾಲವಾಗಿದ್ದರೆ, ದಕ್ಷಿಣದಿಂದ ಉತ್ತರಕ್ಕೆ
ಹಾಯುವ ಬಾನಿನ ಬೆಚ್ಚಗಿನ ವಾಯುಪ್ರವಾಹ ಅದಕ್ಕೆ
ಸಿಗುತ್ತಿತ್ತೋ ಏನೋ. ಹಾಗೆ ಸಿಗುವ ಸಮಯ ವಸಂತ
ಕಾಲ ಮಾತ್ರ. ಇದು ವರ್ಷದ ಮಧ್ಯಾವಧಿ.

ನಮ್ಮ ಹಕ್ಕಿ ಸಮುದ್ರದ ಮೇಲೆ ನೂರಾರು ಮೈಲು~
ಗಳ ದೂರ ಸಾಗಿತು; ತನ್ನ ವೇಗವನ್ನು ಹೆಚ್ಚಿಸಿಕೊಂಡಿತು.
ದುರ್ದೈವಕ್ಕೆ ಅದಕ್ಕೆ ಬಾನಿನ ನಕ್ಷತ್ರಗಳು ಒಮ್ಮೆಗೇ ಕಾಣಿ~
ಸಿದುವು. ಆ ಪ್ರಸಂಗ ಮನಸ್ಸಿನಲ್ಲಿ ಗಲಿಬಿಲಿಯನ್ನು
ಹುಟ್ಟಿಸಿತು. ಏನು ಮಾಡುವುದೆಂದೂ ಗೊತ್ತಾಗಲಿಲ್ಲ.
ಅದರ ದಾರಿಯಲ್ಲಿ ದಟ್ಟನಾದ ಮಂಜು ಕವಿದಿತ್ತು. ಇನ್ನೂ
ಮೇಲೆಕ್ಕೆ ಹಾರಿ ತಾನು ಆ ಮಬ್ಬಿನಿಂದ ತಪ್ಪಿಸಿಕೊಳ್ಳುತ್ತೇನೆ
ಎಂದು ಯೋಚಿಸಿ ಹಾರಿದರೂ, ಮತ್ತೂ ಮತ್ತೂ ಮಬ್ಬು
ಹರವಿದ್ದು ತಿಳಿಯಿತು.

ಆಗ ಬೇರೆ ಉಪಾಯ ಕಾಣದೆ ಸಾಗರಕ್ಕೆ ಇಳಿಯುವ
ಯೋಚನೆ ಮಾಡಿತು. ದಾರಿ ತಪ್ಪಿಯೇನು ಎಂಬ ಭಯ~
ದಿಂದ ಅದು ವೃತ್ತಾಕಾರದಲ್ಲಿ ಸುತ್ತಿ ಸುತ್ತಿ ಇಳಿಯುತ್ತ
ಸಾಗರದ ಮೇಲೆ ಬಂದೆರಗಿತು.

ಬಾನಿನಲ್ಲಿ ಕವಿದ ಮಬ್ಬು ಮಾಯವಾಗುವ ತನಕವೂ
ನೀರಿನಲ್ಲಿಯೇ ಕುಳಿತುಕೊಂಡಿತು. ಓಲಾಡುವ ಅಲೆಗಳು
-58-
ಅದಕ್ಕೆ ಸುಪರಿಚಿತ; ಆ ಅಲೆಗಳ ತೊಟ್ಟಿಲಲ್ಲಿ ಅದು
ವಿರಮಿಸಿ ನಿದ್ದೆ ಮಾಡಿತು.

ಅದು ಅರಿವಿಲ್ಲದೆ ಬಂದೆರಗಿದ ತಾವು ಮಾತ್ರ
ಎಟ್ಲಾಂಟಿಕ್ ಸಾಗರದಲ್ಲಿ; ಅತಿ ಹೆಚ್ಚಿನ ಸಂಖ್ಯೆಯ ಹಡಗು~
ಗಳು ಹಾದುಹೋಗುವ ಜಲಮಾರ್ಗವಾಗಿತ್ತು. ಆ ದಾರಿ~
ಯಾಗಿ ನೀರನ್ನು ಸೀಳಿಹೋಗುವ ದೈತ್ಯ ಹಡಗುಗಳು
ಬಂದಾವೆಂದು ಅದಕ್ಕೆ ಗೊತ್ತಿರಲಿಲ್ಲ. ಅಂಥ ಒಂದು ಹಡಗ
ಅದರ ತೀರ ಹತ್ತಿರಕ್ಕೆ ಬರುತ್ತಲಿತ್ತು. ಆ ಹಡಗಿನ ಯಂತ್ರ~
ಗಳು ಗುಡುಗುಡು ಧ್ವನಿಗೆ ನಿದ್ದೆಯಿಂದ ಎಚ್ಚರವಾಗಿ,
ಮಬ್ಬಿನಲ್ಲಿ ಹಾದುಬರುತ್ತಿರುವ ಹಡಗಿನಿಂದ ತಪ್ಪಿಸಿ~
ಕೊಳ್ಳಲು, ಅದು ಥಟ್ಟ಩ೆ ಮೇಲಕ್ಕೆ ಜಿಗಿಯಿತು. ಒಂದು
ಕ್ಷಣ ಮೊದಲೇ ಹಾರುತ್ತಿದ್ದರೆ ಆ ಕೆಲಸ ಸಾಧ್ಯವಾಗು~
ತ್ತಿತ್ತು. ಈಗ ಹಾಗಾಗಲಿಲ್ಲ. ಅದು ಹಾರಿದ ಭರಕ್ಕೆ, ಅದರ
ಹಣೆ ಹಡಗಿನ ಹರಿತವಾದ ಬಾಣಿಗೆ ಬಡಿಯಿತು. ಅದರ
ನೆತ್ತಿಗೆ ಗಾಯವಾಗಿ, ಅದಕ್ಕೆ ಕಣ್ಣು ಕತ್ತಲು ಬಂದು
ನೀರಿಗೆ ಬಿತ್ತು.

ನೀರಿನಲ್ಲಿ ಬಿದ್ದೊಡನೆ ಅದಕ್ಕೆ ತನ್ನ ಮೇಲಕ್ಕೆ ನಕ್ಷತ್ರ~
ಗಳಿದ್ದಂತೆ ಅನುಭವವಾಯಿತು. ಈ ಬಾರಿ ಅದು ಹಡಗನ್ನು
ತಪ್ಪಿಸಿಕೊಂಡು ಮೇಲಕ್ಕೇರಿ ಮಬ್ಬಿನ ನಡುವೆ ಹೆಚ್ಚಿನ
ಪ್ರಕಾಶದಿಂದ ಹೊಳೆಯುತ್ತಿದ್ದ ಒಂದು ನಕ್ಷತ್ರದ ಕಡೆಗೆ
ಹಾರಿತು. ಈಗಲೂ ದೂರವನ್ನು ಕುರಿತ ಅದರ ಎಣಿಕೆ
ತಪ್ಪಿತು. ಈ ನಕ್ಷತ್ರಗಳು ತೀರ ಒತ್ತೊತ್ತಾಗಿವೆ. ಆದರೆ
ಅವು ನಿಜಾವಾದ ನಕ್ಷತ್ರಗಳೇ ಅಲ್ಲ. ಆ ಹಕ್ಕಿಯ ಸುತ್ತ
ಹಡಗಿನ ದೀಪಗಳು ಉರಿಯುತ್ತಿವೆ. ನಡು ನಡುವೆ ಕಣ್ಣಿಗೆ
ಕಾಣಿಸದ ಸರಿಗೆಗಳು ತೂಗುತ್ತಿವೆ. ಅವುಗಳ ನಡುವೆ ಹಕ್ಕಿ
-59-
ರೆಕ್ಕೆ ಬಿಡಿಸಿ ಹಾರಲು ಪ್ರಯತ್ನಿಸಿ, ಎತ್ತರದೊಂದು
ಹಗ್ಗಕ್ಕೆ ಸಿಲುಕಿ, ಕಾಲು ತಿರುಪಿ ಜೋತಾಡತೊಡಗಿತು.
ಅದರಿಂದ ಒದ್ದಾಡಿ ತಪ್ಪಿಸಿಕೊಂಡೊಡನೆ ಕೆಳಕ್ಕೆ ಉರು~
ಳಿತು. ತಾನು ಕಡಲಿನ ಮೇಲೆ ಬಿದ್ದೆನೆಂದು ಅದು ಎಣಿಸಿ~
ಕೊಂಡರೆ ಹಾಗೂ ಆಗಲಿಲ್ಲ. ಅದು ದುಡಂ ಎಂದು ಆ
ಹಡಗಿನ ಒದ್ದೆ ಧಕ್ಕೆಯ ಮೇಲೆ ಬಿತ್ತು.

ತೀರ ಕೊನೆಗೆ ಅದರ ಅರಿವಿಗೆ ಬಂದ ವಿಷಯವೆಂದರೆ
ಯಾವನೋ ಮನುಷ್ಯನ ಕಪ್ಪು ಆಕೃತಿ ಅದರ ಮೇಲೆ
ಬಾಗಿ, "ಬಾರಯ್ಯ ನೋಡಿಲ್ಲಿ, ನಮ್ಮ ಪೀಟ್ ಮಾವನ ಸಂಗ್ರ~
ಹಕ್ಕಾಗಿ ಬಾನಿನಿಂದಲೇ ಏನೋ ಬಂದು ಬಿದ್ದಿದೆ" ಎಂಬ
ಮಾತು.
-60-

ಅಧ್ಯಾಯ 8

ಪೀಟ್ ಮಾವ ಆ ಹಡಗಿನ ಅಡುಗೆಯವನು. ಅವನದು
ದಾಂಡಿಗ ಜೀವ, ದೊಡ್ಡ ಗಂಟಲು. ಅಗಲವಾದ ಎದೆ,
ಮರದ ಕಾಂಡಗಳಂತಿರುವ ತೋಳುಗಳು, ದೊಡ್ಡ ಹಸ್ತ~
ಗಳು. ಅವನು ತನ್ನ ಕೈಗಳಿಂದ ನಾಲ್ಕು ಜನರು ಎತ್ತುವ
ಭಾರವನ್ನು ಒಬ್ಬನೇ ಎತ್ತಿಯಾನು. ಅವನ ಹಸ್ತಗಳು ದೊಡ್ಡ~
ವಾದರೂ ಕರುಣೆಯುಳ್ಳವು. ಆತ ಎಂದೆಂದೂ ಇಲ್ಲದ ಹಕ್ಕಿ~
ಯನ್ನು ಎತ್ತಿಕೊಂಡಾಗ ಅವನ ಹಸ್ತ ಮತ್ತು ಬೆರಳು~
ಗಳೊಳಗೆ ಹಕ್ಕಿಯೇ ಕಾಣಿಸುವಂತಿರಲಿಲ್ಲ. ಆ ಹಕ್ಕಿಗೆ ಬೆಚ್ಚ~
ಗಿನ ಅವನ ಹಿಡಿತ ಸುಖವಾಗಿ ಕಾಣಿಸಿದ್ದರಿಂದ, ಅದು
ಬೆದರಲಿಲ್ಲ. ಆತ ಆ ಹಕ್ಕಿಯ ತಲೆಗಾದ ಗಾಯವನ್ನು
ನಿತ್ಯವೂ ತೊಳೆದು, ಮದ್ದು ಹಚ್ಚಿ ಪ್ರೀತಿಯಿಂದ ಉಪ~
ಚರಿಸಿದ.

ಆ ಪೀಟ್ ಮಾವ ತಮ್ಮ ಹಡಗು ತಂಗುವ ರೇವುಗಳಲ್ಲಿ
ಸಣ್ಣ ಪುಟ್ಟ ಹಕ್ಕಿಗಳನ್ನು, ಪ್ರಾಣಿಗಳನ್ನು ಬೆಲೆಗೆ ಕೊಂಡು,
ದೂರದ ದೇಶಗಳ ಪಶುಸಂಗ್ರಾಹಕರಿಗೆ ಲಾಭಕ್ಕೆ ಮಾರು~
ತ್ತಿದ್ದ. ಈ ಎಂದೂ ಇಲ್ಲದ ಹಕ್ಕಿ ಸಿಕ್ಕಿದ್ದೆಂಬುದು ಅವನಿಗೆ
ಅಪೂರ್ವ ಪಕ್ಷಿಯಾಗಿ ಕಾಣಿಸಿತ್ತು. ಅದು ಸಾಮಾನ್ಯರು
ಸಾಕದ ಪಕ್ಷಿಯಲ್ಲವೆಂಬುದರಿಂದ ಒಳ್ಳೆಯ ಗಿರಾಕಿ ಬಂದೀ~
ತೆಂದು ಯೋಚಿಸಿದ್ದ.

ಆ ಹಡಗಿನ ಕಲಾಸಿಗಳು ಈ ಹಕ್ಕಿಯ ಕಾಲಿಗೆ ತೊಡಿ~
ಸಿದ ಉಂಗುರವನ್ನು ಕಂಡು ಅದರ ಬರಹವನ್ನೋದಲು
ಚಡಪಡಿಸಿದರೂ, ಪೀಟ್ ಮಾವ ಅವರನ್ನು ಹತ್ತಿರಕ್ಕೆ
-61-
ಸುಳಿಯಬಿಡುತ್ತಿರಲಿಲ್ಲ. "ಬರಬೇಡಿ ಇಲ್ಲಿ. ಅದು ತನ್ನ ಪಾಡಿಗೆ
ತಾನಿರಲಿ; ನಿಮ್ಮನ್ನು ಕಂಡರೆ ಅದಕ್ಕೆ ಭಯವಾದೀತೆಂದು
ತಿಳಿಯದೇ " ಎನ್ನುತ್ತಿದ್ದ.

"ಮಾವ, ಅದರ ಕಾಲುಂಗುರದಲ್ಲಿ ಬರೆದದ್ದೇನು?
ನೀನೇ ಓದಿ ಹೇಳು" ಎಂದು ಆ ಕಲಾಸಿಗಳು ಹಟ ಹಿಡಿದರು.
ಆ ಬರಹ ಹಕ್ಕಿಯ ಸ್ಥಾನಮಾನಗಳನ್ನು ಸೂಚಿಸುತ್ತದೆ.
ಈ ಹಕ್ಕಿ ಯಾವತ್ತು ಕಡಲು ಗಲ್ಲುಗಳ ಸಮಾಜಕ್ಕೆ ಅಧ್ಯಕ್ಷ~
ಪಕ್ಷಿ" ಎನ್ನುತ್ತ ಅದರ ಗಾಯಕ್ಕೆ ಮದ್ದನ್ನು ಸವರಿದ.

"ಓಹೋ! ಇದು ಕಡಲು ಗಲ್ಲೋ ! ಅದನ್ನು ಯಾರು
ಕೊಂಡಾರು ? ಅದು ಬೇಕಾದರೆ ಜಗತ್ತಿನ ಗಲ್ಲುಗಳ
ಸಮಾಜಕ್ಕೆ ಅಧ್ಯಕ್ಷನಾದರೂ ಒಂದೇ, ಇಲ್ಲವಾದರೂ ಒಂದೇ.
ಮಾವ, ನಿನಗೆ ಕೆಲಸವಿಲ್ಲ. ಅದನ್ನು ಉಪಚಾರ ಮಾಡುವ
ಬದಲು ಸಮುದ್ರಕ್ಕೆಸೆ."

ಆತ ಈ ಹಕ್ಕಿಯನ್ನು ಹಡಗಿನ ಉಗ್ರಾಣಕ್ಕೆ ಒಯ್ದು
ಇರಿಸಿದ, ಅಲ್ಲಿ ಇತರ ಹಕ್ಕಿಯ ಗೂಡುಗಳಿದ್ದುವು; ತೊಟ್ಟಿ~
ಗಳಿದ್ದುವು, ಬೇಕು ಬೇಡದ ಎಲ್ಲಾ ಸಾಮಾನುಗಳಿದ್ದುವು.
ಆದರೆ ಇತರ ಕೆಲವು ಹಕ್ಕಿಗಳೂ ಇದ್ದುವು. ನಮ್ಮ ಹಕ್ಕಿಯ
ಸ್ನೇಹಕ್ಕೆ ಚಂದದ ಒಂದು ಕೆಂಪು ಹಸುರು ಗಿಳಿ ಇದ್ದಿತ್ತು.
ನಮ್ಮೀ ಹಕ್ಕಿ ಒಂದು ಪಂಜರದೊಳಕ್ಕಿತ್ತು. ಆ ಗಿಳಿ ಸ್ವಚ್ಛಂದ~
ವಾಗಿ ಅಲೆದಾಡುತ್ತಿತ್ತು. ಆ ಗಿಳಿಗೆ ತಾನು ಬಲು ಚಂದ
ಎಂಬುದು ಗೊತ್ತಿತ್ತು. ಇಡೀ ದಿನ ತನ್ನ ರೆಕ್ಕೆಗಳನ್ನು ಸವರಿ~
ಕೊಳ್ಳುವುದೇ ಅದರ ಕೆಲಸ.

ಅದು ಹೊಸತಾಗಿ ಬಂದ ಈ ಅತಿಥಿಯನ್ನು ಕಂಡು
ತಾತ್ಸಾರದಿಂದ "ನೀನೊಂದೇನು ಹೆಚ್ಚಿನವ" ಎಂದು ಮೂದ~
ಲಿಸಿತು.
-62-

ಆ ಮಾತಿಗೆ ನಮ್ಮ ಎಂದೆಂದೂ ಇಲ್ಲದ ಹಕ್ಕಿ ನೊಂದು,
ಬೇಸರಗೊಂಡು ಸುಮ್ಮನಿತ್ತು. ಅದಕ್ಕೆ ಬಣ್ಣವಿಲ್ಲ, ಬೆಡಗಿಲ್ಲ,
ಅದರ ಬೆನ್ನೆಲ್ಲ ಕಪ್ಪು, ಹೊಟ್ಟೆಯೆಲ್ಲ ಬಿಳಿ. ತನ್ನ ಅಂದ~
ಚಂದದ ಕಡೆಗೆ ಅದು ಈ ತನಕ ಯೋಚಿಸಿರಲಿಲ್ಲ. ಅದಕ್ಕೆ
ಕಾಣಿಸುತ್ತಿದ್ದ ಮುಖ್ಯ ವಿಷಯವೆಂದರೆ ತನ್ನ ಪಕ್ಷಿ ಬುದ್ಧಿ
ಸೂಚುಸುವಂತೆ - ಹಾರುವುದು, ತೇಲುವುದು, ಗಾಳಿಯಲ್ಲಿ
ಏರುವುದು, ಇಳಿಯುವುದು.

ಆ ಗಿಳಿ ಬಹಳ ವರ್ಷಗಳಿಂದಲೂ ಮನುಷ್ಯರ ಸಹವಾಸ~
ದಲ್ಲಿ ಬೆಳೆದು, ತಾನು ಸಣ್ಣದರಲ್ಲಿ ಹೇಗಿದ್ದೆ ಎಂಬುದನ್ನೇ
ಮರೆತಿತ್ತು. ಒಂದು ಕಾಲದಲ್ಲಿ ತಾನೂ ಸಹ ಕಾಡಿನ ಗಿಳಿ~
ಯಾಗಿದ್ದೆ - ಎಂಬುದನ್ನು ಒಪ್ಪಿಕೊಳ್ಳದು. ಅದರ
ನಿತ್ಯದ ಕೆಲಸವೆಂದರೆ - ಕಾಣಲು ಸಿಕ್ಕಿದ್ದನ್ನೆಲ್ಲ ಕಚ್ಚಿ, ಕಚ್ಚಿ,
-63-
ಅಗೆಯುವುದು. ತಿನ್ನಲು ಬರುವ ಯಾವುದಿದ್ದರೂ ಅದಕ್ಕೆ
ಬೇಕು. ಒಮ್ಮೆ ಅದು ಹತ್ತಿರದ ಕಪಾಟಿನಲ್ಲಿದ್ದ ಸಾಲುಸಾಲು
ಸೀಸೆಗಳನ್ನು ನೋಡಿತು. ಒಂದು ಮಧ್ಯಾಹ್ನದ ಹೊತ್ತೆಲ್ಲ
ಅದು ಆ ಸೀಸೆಗಳ ಬೆಣೆಗಳನ್ನು ಕಚ್ಚಿ ತಿನ್ನುವುದರಲ್ಲಿ ಕಳೆ~
ಯಿತು.

ಇದಕ್ಕೆ ಪ್ರತಿಯಾದ ಸ್ವಭಾವ ಎಂದೆಂದೂ ಇಲ್ಲದ ಹಕ್ಕಿ~
ಯದು. ಅದರ ಗೂಡಿನೊಳಗೆ ತುರುಕುತಿದ್ದ ಬಾಳೆಯ
ಹಣ್ಣು, ತರಕಾರಿಗಳನ್ನು ಕಂಡರೆ ಅದಕ್ಕೆ ಬೇಸರ. ಹಸಿವು
ತಾಳಲಾರದ ಸಂಕಟಕ್ಕೆ ಅದು ಅಡುಗೆಯವನು ತಂದು
ಕೊಟ್ಟ ತಿಂಡಿ ಮೀನನ್ನು ತಿನ್ನುತ್ತಿತ್ತು. ಆ ರೀತಿ ಅದು ತನ್ನ
ಬಂಧನವನ್ನು ಸಹಿಸಿತು.

ಅದರ ನಡತೆಯನ್ನು ಕಂಡು ಗಿಳಿ ಒಂದು ದಿನ ತಾತ್ಸಾರ~
ದಿಂದ, "ನಿನ್ನಂಥ ದಡ್ಡ ಹಕ್ಕಿ ಹತ್ತಿರವಿದ್ದು ಯಾವ
ಪ್ರಯೋಜನವೂ ಇಲ್ಲ" ಎಂದಿತು. ಆ ಗಿಳಿಯ ಮತ್ತೊಂದು
ಗುಣವೆಂದರೆ ತಿನ್ನಲು ಏನಿಲ್ಲದಾಗ ಅದಕ್ಕೆ ಸಿಳ್ಳುಹಾಕು~
ವುದೇ ಕೆಲಸ.

ಇದನ್ನೆಲ್ಲ ಕಂಡ ನಮ್ಮ ಹಕ್ಕಿ ಸುಮ್ಮನಿರುತ್ತಿತ್ತು. ಆ
ಗಿಳಿಗೆ ತುಂಬ ಜಂಭ, ಬುದ್ಧಿ ಸಾಲದು, ಅದರ ಮಣಿಗಣ್ಣು~
ಗಳನ್ನು ಕಂಡರೆ ತಿಳಿಯುತ್ತದೆ - ಎಂದು ಸುಮ್ಮನಿರುತ್ತಿತ್ತು.
ಆ ಗಿಳಿಗೆ ಅದರ ಹೊಟ್ಟೆಯ ಸಂಕಟ ಏನು ಗೊತ್ತಾಗು~
ತ್ತದೆ? ಅದರ ಮನಸ್ಸೆಲ್ಲ ಸಾಗರದ್ವೀಪದ ಕಡೆಗಿದೆ. ತನ್ನ
ಸಂಗಾತಿಯನ್ನು ಕಾವಿಗೆ ಕುಳ್ಳರಿಸಿ, ತಾನು ಹೊರಟು ಬಂದು
ಎಷ್ಟು ಕಾಲವಾಯಿತು? ಅದು ತನ್ನ ಬರಕ್ಕಾಗಿ ಕಾದು
ಕಂಗೆಟ್ಟು, ಹೊಟ್ಟೆಯ ಹಸಿವೆಗೆ ಮೊಟ್ಟೆಯನ್ನು ಬಿಟ್ಟು
ಕಡಲಿಗೆ ಹೋಗಿದ್ದರೋ? ಆಗ ಮೊಟ್ಟೆ ತಣಿದು ವ್ಯರ್ಥ~
-64-
ವಾದೀತು. ತಾನು ಮೊಟ್ಟೆಯನ್ನಿರಿಸಿ ಎಷ್ಟು ದಿನಗಳಾದುವು?
ಎಂಬೆಲ್ಲ ಯೋಚನೆ ಅದಕ್ಕೆ.

ಅದು ಇದನ್ನೆಲ್ಲ ಆ ಗಿಳಿಗೆ ಹೇಳಿದರೆ, ಅದು ಬರಿದೆ ನಗ~
ಬಹುದು. ಆ ಗಿಳಿ, ಅದನ್ನು ಕಂಡು, ಅದರ ಭಯವನ್ನು
ಕಂಡು, ಅದೊಂದು ಕಾಡು ಹಕ್ಕಿ ಎಂದು ತಿಳಿದು ನಗು~
ತ್ತಿತ್ತು. ಆ ಗಿಳಿಗೆ ತನ್ನ ಬಂಧನವೇ ಪ್ರಿಯವಾಗಿತ್ತು. ಅಡುಗೆ~
ಯವ ಅದನ್ನು ಹೆಗಲ ಮೇಲೆ ಇರಿಸಿಕೊಂಡು ದಡಕ್ಕೆ
ಕೊಂಡೊಯ್ದರೂ, ತಾನು ಅಲ್ಲಿಂದ ಹಾರಿಹೋಗಬೇಕೆಂಬ
ಬುದ್ಧಿ ಸಹ ಅದಕ್ಕೆ ಬರುತ್ತಿರಲಿಲ್ಲ.

ಸಾಲದ್ದಕ್ಕೆ ಅದು ಮನುಷ್ಯರ ಮಾತುಗಳನ್ನೂ ಕಲಿ~
ತಿತ್ತು. ಹಡಗಿನ ಆಳುಗಳು ಉಗ್ರಾಣಕ್ಕೆ ಬಂದರೆ ಅದು
ಪೀಟ್ ಮಾವನ ಧ್ವನಿಯನ್ನು ಅನುಕರಿಸಿ, "ಬನ್ನಿ ಮಕ್ಕಳೇ
ಅದನ್ನು ತುಳಿಯಿರಿ ಹುಡುಗರೇ, ಹೂ ಕೆಲಸ ತೊಡಗಿ"
ಎಂದೆಲ್ಲ ನುಡಿಯುತ್ತಿತ್ತು.

ಆ ಮಾತನ್ನು ಕೇಳಿದ ಒಬ್ಬ ಆಳು, "ನೋಡು, ಇದೆಲ್ಲ
ನಿನ್ನ ಯೋಗ್ಯತೆಗೆ ಮೀರಿದ ಮಾತು" ಎಂದ.

ಅದಕ್ಕೆ ಗಿಳಿ ಬೇಸರಗೊಂಡಂತೆ, "ನಿನ್ನ ಅಜ್ಜಿಯ ಸಾವು"
ಎಂದಿತು.

ಅಲ್ಲಿ ನಿಂತಿದ್ದ ಒಬ್ಬ ಆಳು ಡಬ್ಬೆಗಳನ್ನು ತುಂಬಿಸಿದ
ಒಂದು ತೊಟ್ಟಿಯನ್ನು ಎತ್ತಿ, "ಇದರಲ್ಲೇನಿದೆ?" ಎಂದು
ಹತ್ತಿರದವನೊಡನೆ ಕೇಳಿದ.

"ಬಾಳೆ ಹಣ್ಣಿನ ಎಣ್ಣೆ" ಎಂದಿತು ಗಿಳಿ.

ಅವರಿಬ್ಬರೂ ನಕ್ಕರು. ಅವರಲ್ಲಿ ಒಬ್ಬ ಮುಷ್ಟಿ ಬಿಗಿದು,
ಗಿಳಿಯ ಹತ್ತಿರ ಕೊಂಡೊಯ್ದು ಅದನ್ನು ಹೊಡೆಯುವವ~
ನಂತೆ, "ಇದರಲ್ಲೇನಿದೆ ಹೇಳು" ಎಂದ.
-65-

"ಬೇಯಿಸಿದ ಬಟಾಣಿ" ಎಂದು ಚೀರಿತು ಗಿಳಿ.

"ಈ ಉತ಼್ತರ ಚಿಂತೆಯಿಲ್ಲ. ನೋಡು, ನಿನ್ನ ಹತ್ತಿರ
ಮಱ್ಯಾದೆಯಿಂದ ಪ್ರಶ್ನೆ ಕೇಳಿದರೆ, ಮಱ್ಯಾದೆಯಿಂದಲೇ
ಉತ್ತರ ಕೊಡಬೇಕು, ತಿಳಿಯಿತೋ" ಎಂದು ನಗುತ್ತ ತಿಳಿ~
ಸಿದ.

ಈ ಸಂಭಾಷಣೆ ಎಂದೆಂದೂ ಇಲ್ಲದ ನಮ್ಮ ಹಕ್ಕಿಗೆ
ಏನೇನೂ ಅರ್ಥವಾಗಲಿಲ್ಲ. ಅದಕ್ಕೆ ಅರ್ಥವಾಗದೆ
ಹೋದರೂ, ನಡೆದ ಮಾತಿನಿಂದ ಆ ಆಳುಗಳು ನಗುತ್ತಲೇ
ಇದ್ದರು. ಗಿಳಿ ಆ ಹೊತ್ತಿಗೆ ತನ್ನ ಮುಖ ಉಬ್ಬಿಸಿಕೊಂಡು,
ಅಲ್ಲಿದ್ದೊಂದು ಬೀರುನಿನ ಮೇಲೆ ದಿಟ್ಟನೆ ಓಡಾಡುತ್ತ,
ಉಗುರಿನಿಂದ ಯಾವುದೋ ಕಾಯಿಯನ್ನು ಎತ್ತಿ, ಒಡೆದು
ತಿನ್ನತೊಡಗಿತು.

ಆ ಹಡಗು ಕೆರಿಬಿಯನ್ ದ್ವೀಪಾವಳಿಗಳನ್ನು ದಾಟಿದ
ಬಳಿಕ, ಮತ್ತಷ್ಟು ಹಕ್ಕಿಗಳು, ಪ್ರಾಣಿಗಳು ಆ ಸಂಗ್ರಹಕ್ಕೆ
ಬಂದುವು. ಅವುಗಳಲ್ಲಿ ಹೆಚ್ಚಿನವನ್ನು ಮುಂದಣ ರೇವಿನಲ್ಲಿ
ಹಡಗು ತಂಗಿದೊಡನೆ ಪೀಟ್ ಮಾವ ಮಾರಿಬಿಟ್ಟ.

ಆ ಹಡಗಿಗೆ ಹೊಸತಾಗಿ ತಂದ ಕೆಲವು ಹಕ್ಕಿಗಳು
ಗಿಳಿಯ ಬಳಗದ ಹಕ್ಕಿಗಳಾಗಿ ಕಾಣಿಸಿದುವು. ಆದರೆ ಅವು~
ಗಳ ಬಣ್ಣ ಬೆಡಗನ್ನು ನಮ್ಮ ಹಕ್ಕಿಯು ಎಲ್ಲಿಯೂ ಕಂಡಿರ~
ಲಿಲ್ಲ. ಅವೋ! ಅವುಗಳಲ್ಲಿ ಕೆಲವು ಕೆಂಪು - ನೀಲ ಬಣ್ಣದುವು,
ಕೆಲವು ಹಳದಿ ಹಸುರು ಬಣ್ಣದುವು, ಅವು ಹೆಗ್ಗಿಳಿಗಳು
ಉದ್ದ ಬಾಲದ ಆ ಹಕ್ಕಿಗಳ ಮುಂದೆ, ಹಡಗಿನ
ಸಾಕು ಗಿಳಿಯ ಚಂದ ಏನೂ ಸಾಲದು. ಆದರೆ ಅದಕ್ಕೆ
ಅಂಥ ಬೇಸರವೂ ಬರಲಿಲ್ಲ. ಅದು ಮಾಮೂಲಿನಂತೆ ಕಿರಿ~
-66-
ಚುತ್ತ ಹಕ್ಕಿಗಳನ್ನು ನೋಡುತ್ತಾ, "ಬೇಯಿಸಿದ ಬಟಾಣಿ,
ಬೇಯಿಸಿದ ಬಟಾಣಿ" ಎಂದು ಕಿರಿಚುತ್ತಿತ್ತು.

ಈ ಹೆಗ್ಗಿಳಿಗಳ ಚಂದ ಎಷ್ಟೇ ಇದ್ದರೂ ಅವಕ್ಕೆ
ಮೂಗಿನ ಮೇಲೆ ಸಿಟ್ಟು! ಅವು ಸಾಕುಗಿಳಿಯನ್ನು ಕಂಡು
ಒರಟೊರಟಾಗಿ ಚೀರಿದುವು. ಆ ಗದ್ದಲವನ್ನು ಕೇಳಿ ಪೀಟಾ
ಮಾವ, `ಅದೆಲ್ಲ ಏನು ಗದ್ದಲ'ವೆಂದು ನೋಡಲು ಬರಬೇಕಾ~
ಯಿತು. 
ಪೀಟ್ ಮಾವ ಹಡಗಿಗೆ ಕೊಂಡು ಬಂದ ಪ್ರಾಣಿಗಳಲ್ಲಿ
ಕೆಲವು ಮನುಷ್ಯ ಮುಖದ ನಾಲ್ಕು ಕಾಲಿನ, ಉದ್ದ ಬಾಲದ
ಪ್ರಾಣಿಗಳಿದ್ದುವು. ಅವು ಮಧ್ಯ ಮತ್ತು ದಕ್ಷಿಣ ಅಮೇರಿಕದ
ಮಳೆಗಾಡಿನ ಕಪಿಗಳು. ನಮ್ಮ ಎಂದೆಂದೂ ಇಲ್ಲದ ಹಕ್ಕಿ
ಯಾವ ಕಾಲದಲ್ಲೂ ಅಲ್ಲಿಗೆ ಹೋದದ್ದಿಲ್ಲ. ಈ ಕಪಿಗಳನ್ನು
ಕಂಡು ಅದು ಹೆದರಿ ತನ್ನ ಗೂಡಿನ ಕಡ್ಡಿಗಳನ್ನು ಬಡಿಯ
ತೊಡಗಿತು. ಆಗ ಪೀಟ್ ಮಾವ ಓಡಿಬಂದು ಅದರ ಗೂಡ~
ನ್ನೆತ್ತಿಕೊಂಡು ಹೋಗಿ ದೂರದ ಒಂದು ಕೊಕ್ಕೆಗೆ ತೂಗಿ~
ಸಿದ.

ಪೀಟ್ ಮಾವ ಒಂದು ಜೊತೆ ಕಾಪುಚಿನ್ ಮಂಗಗಳನ್ನು
ಕೊಂಡು ಬಂದಿದ್ದ. ಅವುಗಳ ಮೈ ಕಪ್ಪು. ಎದೆ, ಮುಖಗಳು
ಬೆಳ್ಳಗೆ. ಅವುಗಳ ತಲೆಯ ಮೇಲೆ ಪಾದ್ರಿಗಳು ತೊಡುವ
ಟೊಪ್ಪಿಯಂಥ ಕಪ್ಪು ರೋಮ. ಎಂದೆಂದೂ ಇಲ್ಲದ
ನಮ್ಮ ಹಕ್ಕಿಗೆ ಆ ಮಂಗಗಳ ಶೋಕಪೂರಿತ ಕಣ್ಣುಗಳನ್ನು
ನೋಡಿ ಆಶ್ಚರ್ಯ! ತನ್ನಂತೆ ಅದನ್ನು ಬಂಧು - ಬಳಗದಿಂದ
ಕಿತ್ತು ತಂದಿರಬೇಕು ಎಂದು ಅದು ಯೋಚಿಸಿತು.

ಅಲ್ಲಿಗೆ ತಂದ ಪ್ರಾಣಿಗಳಲ್ಲಿ ಬೂದು ಬಣ್ಣದ ಮೈ
ಮತ್ತು ಕಪ್ಪು ತುಟಿ, ಮೂಗುಗಳ ಅಳಿಲುಮಂಗಗಳೂ
-67-
ಇದ್ದುವು; ಅವಕ್ಕೆ ಮಾತನಾಡುವ ಗಿಳಿಯನ್ನು ಕಂಡು
ಆಶ್ಚರ್ಯ. ಅವು ತಮ್ಮ ಉದ್ದನೆಯ ಬಾಲವನ್ನು ಒಂದೊಂ~
ದರ ಕೊರಳಿಗೆ ಸುತ್ತಿ, ಪರಸ್ಪರ ಸಮಾಧಾನ ಹೇಳುತ್ತಿದ್ದುವು.

ಅತ್ತ ಸಾಗರದ್ವೀಪದಲ್ಲಿ ನಮ್ಮ ಎಂದೆಂದೂ ಇಲ್ಲದ
ಹಕ್ಕಿಯ ಆಗಮನವನ್ನು ಕಾದಿದ್ದ ವಿಜ್ಞಾನಿಗಳು ನಿರಾಶ~
ರಾಗಿ, ಆ ತಾವನ್ನು ಬಿಟ್ಟು ಹೋಗುತ್ತಿದ್ದ ಅವಧಿಯಲ್ಲಿ,
ನಮ್ಮ ಹಕ್ಕಿ, ಒಂದು ಜುಜುಬಿ ಉಗಿಹಡಗಿನಲ್ಲಿ ಕುಳಿತು ಮಧ್ಯ
ಅಮೇರಿಕದ ಪನಾಮಾ ಕಾಲುವೆಯನ್ನು ದಾಟಿ, ಶಾಂತ~
ಸಾಗರದ ಮೂಲಕ ಆಸ್ಟ್ರೇಲಿಯಾಕ್ಕೆ ಹೋಗುವುದರಲ್ಲಿತ್ತು.

ಆ ಹಡಗ಼ು ಭೂಮಧ್ಯರೇಖೆಯನ್ನು ದಾಟುತ್ತಲೇ ದಕ್ಷಿ~
ಣಕ್ಕೆ ತಿರುಗಿತು. ಅಲ್ಲಿಂದ ಮುಂದಕ್ಕೆ ಹಗಲು ರಾತ್ರಿಗಳೊಳ~
ಗಿನ ವ್ಯತ್ಯಾಸ ಹೆಚ್ಚುತ್ತಿರುವುದು ನಮ್ಮ ಆ ಹೆಣ್ಣು ಹಕ್ಕಿಗೆ
-68-
ಬೋಧೆಯಾಯಿತು. ಅದರ ಬುದ್ಧಿ, ಮನಸ್ಸುಗಳೂ ನಿಸರ್ಗ~
ದೊಡನೆ ಹೊಂದಿ ಬೆಳೆದುವು. ಆದುದರಿಂದ ಅದಕ್ಕೆ ದಿನ
ಸರಿದಂತೆ ಹಗಲು ಗಿಡ್ಡವಾಗಿ ರಾತ್ರಿ ಉದ್ದವಾಗುತ್ತಿರುವುದು
ತಿಳಿಯಿತು. ಈಗ ದಕ್ಷಿಣಾರ್ಧಗೋಲದಲ್ಲಿ ಚಳಿಗಾಲ. ಅದೆಲ್ಲ
ಆ ಹಡಗಿನಲ್ಲಿದ್ದ ಗಿಳಿಗೆ ಗೊತ್ತಾಗಲಾರದು. ಒಮ್ಮೆ
ಗೊತ್ತಾದರೂ ಅದು ಮುಖ್ಯ ವಿಷಯ ಎನಿಸಲಾರದು.
ಮುಖ್ಯ - ಎನಿಸಲು ಅದರ ತಲೆಯಲ್ಲಿ ತಾನೊಂದು ನಾಗರಿಕ
ಪಕ್ಷಿ - ಎಂಬ ಜಂಭ ಹೋಗಬೇಕಲ್ಲ.

ಆದರೆ ಎಂದೆಂದೂ ಇಲ್ಲದ ಹಕ್ಕಿಯ ಮನಸ್ಸು ಮಾತ್ರ
ತಳಮಳಗೊಂಡಿತು. ಇನ್ನು ಚಳಿಗಾಲ ತೊಡಗುವುದರಿಂದ,
ತಾನು ಸೂರ್ಯನನ್ನು ಅನುಸರಿಸಿ, ಉತ್ತರ ದಿಕ್ಕಿಗೆ ದೀರ್ಘ
ಪಯಣ ಹೊರಡಬೇಕು ಎಂಬ ಒತ್ತಡ ಕಾಣಿಸಿತು. ಅದಕ್ಕೆ
ಕಾರಣ ಹೊಳೆಯದಿದ್ದರೂ, ಅದಕ್ಕೆ ಅನಿಸುತ್ತಿದ್ದ ಹಂಬಲ
-69-
ಅದೇನೆ. ಆ ಪುಟ್ಟ ಪಂಜರದಲ್ಲಿ ಸಿಲುಕಿ, ಅದರ ಉತ್ಸಾಹ
ಕರಗಿ ಹೋಗಿ, ತನಗೊದಗಿದ ಆಪತ್ತನ್ನು ನೆನೆದು ಅದಕ್ಕೆ
ಎದೆ ಬಿರಿದಿತ್ತು. ಈಗ ಅದರ ತಲೆಯ ಮೇಲಿನ ಗಾಯ
ಮಾಸಿತ್ತು; ಆದರೆ ಗಾಯದ ಗುರುತು ಹೋಗಿರಲಿಲ್ಲ. ಅದಕ್ಕೆ
ಗರಿ ಉದುರಿಸುವ ಕಾಲ ಬಂದಿದೆ. ಅಂಥ ಅಂದಗೆಟ್ಟ ಹಕ್ಕಿ~
ಯನ್ನು ಪೀಟ್ ಮಾವ ಹಿಡಿದುಕೊಂಡು ನಾಲ್ಕು ಮಂದಿ
ಗಿರಾಕಿಗಳಿಗೆ ತೋರಿಸಿದ್ದಾದರೆ ಆತ ಕುಚೇಷ್ಟೆ ಮಾಡು~
ತ್ತಿದ್ದಾನೆಂದೇ ಅನಿಸೀತು. ಪೀಟ್ ಮಾವ ಅದನ್ನು ಮಾರಲು
ಗಿರಾಕಿಗಳಿಗೆ ತೋರಿಸಿದಾಗ ಅವರು, "ಇದು ನಿಜವಾದ
ಹಕ್ಕಿಯೋ ಅಥವಾ ಮ್ಯೂಸಿಯಮ್್ನವರಿಗೆ ಮಾರಲು
ತಯಾರಿಸಿದ ಗರಿ, ಚರ್ಮ ಹೊದೆದ ಮಾದರಿಯೋ ?" ಎಂದು
ಕೇಳಿದರು.

ಆ ಹಡಗು ಒಂದೇ ವೇಗ಼ದಿಂದ ಶಾಂತಸಾಗರವನ್ನು
ಹಾಯುತ್ತ ನಡುವಣ ಕೆಲವು ದ್ವೀಪಗಳಲ್ಲಿ ತಂಗಿ, ಮುಂದು~
ವರಿದು ಆಸ್ಟ್ರೇಲಿಯಾದ ಸಿಡ್ನಿ ರೇವನ್ನು ಸೇರಲು ಒಂದೇ
ಒಂದು ದಿನದ ಮಜಲು ಉಳಿದಿತ್ತು. ಆ ರೇವಿನಲ್ಲಿ ಏನನ್ನೆಲ್ಲ
ಕೊಂಡುಕೊಳ್ಳಬೇಕಾದೀತು ಎಂದು ನೋಡಲು ಪೀಟ್
ಮಾವ ಆಳುಗಳೊಂದಿಗೆ ಉಗ್ರಾಣಕ್ಕೆ ಬಂದ. ಆ ಆಳುಗಳು
ಹಕ್ಕಿಯ ಪಂಜರಗಳನ್ನು ಚೊಕ್ಕ ಮಾಡುವುದಕ್ಕೂ, ಅವಕ್ಕೆ
ಒಂದಿಷ್ಟು ಗಾಳಿ ಉಣ್ಣಿಸುವುದಕ್ಕೂ ಅವನ್ನು ಧಕ್ಕೆಯ
ಮೇಲೆ ತಂದಿರಿಸಿದರು. ಪೀಟ್ ಮಾವನ ತಲೆಯಲ್ಲಿ - ತಾನು
ರೇವನ್ನು ಸೇರಿದೊಡನೆ ಅವೆಲ್ಲವೂ ವಿಕ್ರಯವಾಗುತ್ತವೆಂಬ
ನಂಬಿಕೆ ಇತ್ತು. ಆದರೆ ಆ ಎಂದೆಂದೂ ಇಲ್ಲದ ಹಕ್ಕಿ ಮಾರಿ
ಹೋಗುವುದ ಕಷ್ಟ ಎಂಬ ಸಂಶಯವೂ ಮೂಡಿತ್ತು.

ಅಷ್ಟರಲ್ಲಿ ಬಾನಿನಲ್ಲಿ ಒಮ್ಮೆಗೇ ಮುಗಿಲು ಕವಿದಂತೆ,
-70-
ಉತ್ತರ ದಿಕ್ಕಿಗೆ ಪಯಣ ಹೊರಟ ಮಿಲಿಯಗಟ್ಟಲೆ ವಲಸೆ~
ಗಾರ ಪಕ್ಷಿಗಳ ಸಮೂಹ ಕಾಣಿಸಿತು. ಅವೆಲ್ಲವೂ ತಾವು
ಹೋಗಿದ್ದ ನಾಡಿನಲ್ಲಿ ಚಳಿಗಾಲ ತೊಡಗುವ ಲಕ್ಷಣಗಳನ್ನು
ತಿಳಿದು, ಬೇಸಿಗೆಯನ್ನರಸಿಕೊಂಡು ಉತ್ತರ ಗೋಲಾರ್ಧಕ್ಕೆ
ಹೊರಟಿದ್ದುವು. ಹಾರುತ್ತಿದ್ದ ಆ ಅಸಂಖ್ಯ ಪಕ್ಷಿಗಳು ತಮ್ಮ
ಧ್ವನಿಗಳಿಂದ ವಾಯುಮಂಡಲವನ್ನು ತುಂಬಿಸಿದವು.

ಇಷ್ಟು ದಿನವೂ ಗೂಡಿನಲ್ಲಿ ಕದಲದೆ ಕುಳಿತ ಎಂದೆಂದೂ
ಇಲ್ಲದ ಹಕ್ಕಿ, ತಾನು ಕೇಳಿದ ಪಕ್ಷಿ ಧ್ವನಿಗಳ ಮೊರತದಿಂದ
ಚಕಿತಗೊಂಡಿತು. ಅದು ತನ್ನವರದ್ದೇ ಧ್ವನಿಗಳು! ತನ್ನ
ಬಂಧ - ಬಳಗವೇ ಸಮೀಪಕ್ಕೆ ಬಂದಂತಿದೆ ಎಂಬ ಭಾವನೆ~
ಯಿಂದ, ತಲೆಯೆತ್ತಿ ನೋಡುತ್ತ ತಾನೂ ಮಾರ್ದನಿ ಕೊಡ~
ತೊಡಗಿತು. ಹಾಗೆ ಕೂಗಿ ಕೂಗಿ ಎದೆ ಬಿರಿಯುವಂತಾ~
ದರೂ ಕೂಗನ್ನು ನಿಲ್ಲಿಸಲಿಲ್ಲ. ಒಂದು ದಿನ ಮಬ್ಬು ಕವಿದ
ರಾತ್ರಿಯಲ್ಲಿ ಅದು ಆ ಹಡಗಿಗೆ ಬಂದು ಅಪ್ಪಳಿಸಿತಲ್ಲ! ಅಂದಿ~
ನಿಂದ ಇಂದಿನ ತನಕವೂ ಸ್ವರವೆತ್ತದ ಹಕ್ಕಿ ಈಗ ಕೂಗು~
ವುದನ್ನು ಕಂಡು ಪೀಟ್ ಮಾವನೂ ಅವನ ಗೆಳೆಯರೂ ಬೆರಿಗ಼ಿ~
ನಿಂದ ಅದನ್ನು ನೋಡಿದರು.

ಅದೀಗ, ಒಮ್ಮಿಂದೊಮ್ಮೆಗೆ ಹಚ್ಚ ಹೊಸ ಹಕ್ಕಿಯಂತೆ
ಕಾಣಿಸಿತು. ಅದರ ಕಣ್ಣುಗಳಲ್ಲಿ ಕಾಂತಿ ತುಳುಕಿತು; ಮೈ
ಸೆಟೆದು ಚುರುಕಾಯಿತು. ಬಾನಿನ ಹಕ್ಕಿಗಳ ಧ್ವನಿಗಳ ಮೊರೆ~
ತಕ್ಕೆ ಅದು ಕಿವಿಯೊಡ್ಡುತ್ತಿದೆ; ಆ ಧ್ವನಿಗಳಿಗೆ ಮಾರ್ದನಿ
ಕೊಡುತ್ತಿದೆ.

ಎಂದೆಂದೂ ಇಲ್ಲದ ಹಕ್ಕಿಯಲ್ಲುಂಟಾದ ಈ ಅದ್ಭುತ
ಪರಿವರ್ತನೆಯನ್ನು ಕಂಡು ಪೀಟ್ ಮಾವನ ಕರುಳು ಕರ~
ಗಿತೋ ಏನೋ! ಆತ ಹೋಗಿ ಅದರ ಗೂಡಿನ ಬಾಗಿಲನ್ನು
ತೆರೆದು ಅದನ್ನು ಹಾರಿ ಹೋಗಲು ಬಿಟ್ಟ.
-71-

ಅಧ್ಯಾಯ 9

ಅದು ಈಗ ಸ್ವತಂತ್ರ.

ಆ ಕ್ಷಣಕ್ಕೆ ಎಂದೆಂದೂ ಇಲ್ಲದ ಹಕ್ಕಿ ಈ ತನಕ
ಹಾರದಷ್ಟು ಎತ್ತರಕ್ಕೆ ಏರಿ, ತನ್ನ ರೆಕ್ಕೆಗಳನ್ನು ಅಗಲಕ್ಕೆ
ಹರವಿ ಗಾಳಿಗೊಡ್ಡಿದಾಗ ಅದಕ್ಕಾದ ಸಂತೋಷ ಅಷ್ಟಿಷ್ಟಲ್ಲ.
ಮಗ್ಗುಲಿನಿಂದಲೇ ತನ್ನ ಬಳಗದ ಹಕ್ಕಿಗಳು ಗಾಳಿಯನ್ನು
ಸೀಳಿ ಹೋಗುವ ಧ್ವನಿ ಕಿವಿಗೆ ಬಡಿಯುತ್ತಿತ್ತು. ಅದು
ಕಡಲ ಗಾಳಿಯಲ್ಲಿ ದೀರ್ಘ ಉಸಿರನ್ನೆಳೆಯುತ್ತಿದ್ದಾಗ
ಸೂರ್ಯನ ಶಾಖದ ಅನುಭವವೂ ಆಯಿತು. ಅದರ ಕೆಳಕ್ಕೆ
ಭೂಗೋಲವನ್ನು ಆವರಿಸಿರುವ ಅನಂತಸಾಗರವಿದೆ; ಮೇಲೆ
ಎಷ್ಟು ಹಾರಿದರೂ ಅವಕಾಶವನ್ನು ಒದಗಿಸಬಲ್ಲ ಬೃಹತ್
ಆಕಾಶವಿದೆ. ಅದು ಹೋಗಬೇಕಾಗಿದ್ದ ಸಾಗರದ್ವೀಪ
ಕೆಲವು ಸಾವಿರ ಕಿಲೊಮೀಟರ್ ಉತ್ತರದಲ್ಲಿದೆ.

ಅದು ತಾನಿರುವಲ್ಲಿಂದ ಕೆಳಕ್ಕೆ ನೋಡಿದಾಗ ಮಿಲಿಯ
ಗಟ್ಟಲೆ ಹಕ್ಕಿಗಳು ಕೆಳಗಣ ಸಾಗರದ ಮೇಲೆ ತಮ್ಮ
ಹಿಂಡುಗಳ ಹಾರಾಟದ ಚಿತ್ರವನ್ನು ನೆರಳಿನಿಂದ ಬರೆಯು~
ತ್ತಿದ಼್ದುವು. ಅದು ತಿರುತಿರುಗಿ ಕೂಗಿ ಕರೆದಾಗ, ಕೆಳಗಣ
ಹಕ್ಕಿಗಳ ಕೂಗು ತನ್ನ ಧ್ವನಿಯ ಮರುಕಳಿಕೆಯಂತೆ ಕೇಳಿ~
ಸಿತು. ಆದರೆ ಕೆಳಗೆ ಹಾರುತ್ತಿದ್ದ ಆ ಹಕ್ಕಿಗಳು ಎಂದೆಂದೂ
ಇಲ್ಲದ ಹಕ್ಕಿಯ ಜಾತಿಯವಲ್ಲ. ಅದು ಬಿಳುಪು, ಕಪ್ಪು
ಮೈ ಬಣ್ಣದ್ದು; ಕೆಳಗಿದ್ದುವು ಕಂದು ಬಣ್ಣದುವು. ಅವು~
ಗಳೊಳಗೆ ದೂರದ ಸಂಬಂಧವಿದೆಯಾದರೂ, ಇಷ್ಟೊಂದು
-72-
ದಿನ ಒಂಟಿಯಾಗಿ ವಿಚಿತ್ರ ಆವರಣದಲ್ಲಿದ್ದ ಅದಕ್ಕೆ ಈ
ಪಕ್ಷಿ ಸಮೂಹದ ಸ್ನೇಹ ಅವಶ್ಯ ಎನಿಸಿತು.

ಆ ಹಕ್ಕಿಗಳು ಕೂಡ ಉತ್ತರಧ್ರುವ ವಲಯದ
ಬೇಸಿಗೆಯನ್ನರಸಿ ವಲಸೆ ಹೊರಟವು. ಅವೂ ಸೂರ್ಯನನ್ನು
ಗುರುತಿಸಿ ದಕ್ಷಿಣದಿಂದ ಉತ್ತರಕ್ಕೆ ಹೋಗುವಂಥವು. ಆದರೆ
ಅವು ಹೋಗುವ ಉದ್ದೇಶ ಬೇರೆ; ಇದರದ್ದೇ ಬೇರೆ. ಇದರ
ಮನಸ್ಸಿನಲ್ಲಿ ಚಳಗಾಲ ಸಮೀಪಿಸುತ್ತಿದ್ದರಿಂದ ತಾನು
ಇನ್ನೊಂದು ಗೋಲಾರ್ಧದಲ್ಲಿರುವ ಸಾಗರದ್ವೀಪಕ್ಕೆ
ಹೋಗಬೇಕೆಂಬ ಬಯಕೆ ಮೂಡಿದೆ. ಕೆಲವೇ ಸಾವಿರ ಕಿಲೊ~
ಮೀಟರ್ ದೂರ ಹೋದುದಾದರೆ ಆ ಸಾಗರ ದ್ವೀಪವನ್ನು
ತಾನು ಸೇರಿಯೇನು ಎನಿಸುತ್ತಿತ್ತು. ಆದರೆ ಆ ಭಾವನೆ
ಮಾತ್ರ ತಪ್ಪಾಗಿತ್ತು. ಉಳಿದ ಹಕ್ಕಿಗಳು ತಮ್ಮ ಹಾರಾಟಕ್ಕೆ
ಅನುಕೂಲವಾದ ವಾಯುಪ್ರವಾಹವನ್ನು ಹಿಡಿದು
ಹೋಗುತ್ತಿರುವುದನ್ನು ಕಂಡು, ತಾನೂ ಅವುಗಳೊಡನೆ
ಸೇರಿಕೊಂಡಿತು. ಅವು ಹವಳದ ದ್ವೀಪಗಳನ್ನೂ, ಮತ್ತಿತರ
ದ್ವೀಪಾವಳಿಗಳನ್ನೂ ದಾಟುತ್ತಲೇ, ಜಾಪಾನಿನ ಕಡೆಗೆ ತಿರುಗಿ,
ಉತ್ತರ ಶಾಂತಸಾಗರದ ಒಂದೆಡೆ ಇಳಿದು ವಿರಮಿಸಿದುವು.

ನಮ್ಮೀ ಹಕ್ಕಿಗೆ ಭೂಮಧ್ಯರೇಖೆಯನ್ನು ದಾಟಿ~
ದೊಡನೆ ಉತ್ತರ ಖಗೋಲದ ನಕ್ಷತ್ರಗಳ ಗುರುತೇನೋ
ಸಿಕ್ಕಿತು. ಹಾಗೆ ಗುರುತು ಸಿಗದೇ ಹೋಗಿದ್ದರೂ, ಗಾಳಿ
ಪ್ರತಿಕೂಲವಾಗಿದ್ದರೂ, ಅದು ಉತ್ತರ ದಿಕ್ಕಿಗೇ ಹೋಗು~
ತ್ತಿತ್ತು. ಆದರೆ ಈಗ ಅದು ಎಲೂಷಿಯನ್ ದ್ವೀಪ~
ಗಳ ಮೇಲೆ ಬಂದಾಗ ತನ್ನ ಸಾಗರದ್ವೀಪದ ವೃತ್ತಾಂತಕ್ಕೇ
ಬಂದಿತ್ತು. ಇನ್ನು ಅದು ತನ್ನ ಪೂರ್ವಜರಿಂದ ಸಂಪಾದಿ~
-73-
ಸಿದ ತಿಳಿವಳಿಕೆಯನ್ನು ಅನುಸರಿಸಿ ನೇರ ಪೂರ್ವಕ್ಕೆ ಹಾರಿ~
ದ್ದಾದರೆ - ಅದರ ತವರೂರು ಸಿಗಲೇಬೇಕು.

ಹಾಗೆಂದು ಅದು ಆಶಾಭರಿತವಾಗಿ ಉಳಿದ ಹಕ್ಕಿಗಳ
ಗುಂಪನ್ನು ಬಿಟ್ಟು 57 ವೃತ್ತಾಂಶವನ್ನು ಅನುಸರಿಸಿ,
ಯಾವ ಅಳುಕೂ ಇಲ್ಲದೆ ಪೂರ್ವಾಭಿಮುಖವಾಗಿ ಹಾರ~
ತೊಡಗಿತು. ಮುಂದೆ ಮಾತ್ರ ತಾನೆಲ್ಲಿಗೆ ಬಂದೆ ಎಂಬ
ಅಚ್ಚರಿ ಕಾಣಿಸಿತು; ಹಾರಾಟದ ಭರ ತಗ್ಗಿತು.

ಆಗ ಅದಕ್ಕೆ ಕಾಣಿಸಿದ್ದೊಂದು ಭೂಖಂಡ. ಅದರ
ಕರಾವಳಿಯಲ್ಲಿ ಬೆಟ್ಟದ ತೋಳುಗಳು ಕಡಲನ್ನು ನುಗ್ಗು~
ತ್ತವೆ; ಕಡಲು ಕೈಗಳು ಭೂಮಿಯ ಕಡೆಗೆ ಚಾಚಿವೆ. ಎಲ್ಲೆಲ್ಲೂ
ಕಾಡುಗಳಿಂದ ಕವಿದ ಪರ್ವತಶ್ರೇಣಿಗಳೇ ಸಮುದ್ರ ತೀರ~
ದಿಂದ ಹಿಂದಕ್ಕೆ ಕಾಣಿಸುತ್ತಿದ್ದುದು ಬೆಟ್ಟಗಳ ಸಾಲು~
ಗಳು.

ಅದರ ಮನಸ್ಸು, `ಎಂದೂ ಭೂಖಂಡದ ಮೇಲೆ
ಹಾಯಬೇಡ' ಎಂಬ ಎಚ್ಚರಿಕೆಯನ್ನು ಕೊಟ್ಟಿತು. ದಿಕ್ಕನ್ನು
ಬದಲಿಸಿ ಇನ್ನೊಮ್ಮೆ ಸೂರ್ಯನ ಸಹಾಯದಿಂದ ಹಾರ~
ತೊಡಗಿತು. ಅದು ಸಾಗರದ್ವೀಪಕ್ಕೆ ನೇರಾದ ದಾರಿ~
ಯಲ್ಲಿ ಇದ್ದುದೇನೋ ನಿಜ; ಆದರೆ ಎಲ್ಲೋ ಒಂದು
ತಪ್ಪಾಗಿದೆ. ಅದು ಇನ್ನೊಮ್ಮೆ ಪೂರ್ವ ದಿಕ್ಕಿಗೆ ಹಾರಿ~
ದಾಗ ವಿಚಿತ್ರ ಭೂಖಂಡವೊಂದು ಕಾಣಿಸಿತು; ದಾರಿಯನ್ನು
ಕುರಿತು ತಿರುಗಿ ಎಣಿಸಬೇಕಾಯಿತು.

ಆ ಪಾಪದ ಎಂದೆಂದೂ ಇಲ್ಲದ ಹಕ್ಕಿಯ ತಿಳಿವಳಿ~
ಕೆಗೆ ಸಿಗದಿದ್ದ ಒಂದು ವಿಷಯವೆಂದರೆ ಅದು ಹಾಕುತ್ತಿದ್ದ
ಪ್ರದೇಶ ಈ ತನಕ ಅದು ಹಾರಿಕೊಂಡಿದ್ದ ಎಟ್ಲಾಂಟಿಕ್
ಸಾಗರ ಪ್ರದೇಶವಲ್ಲ. ಆ ಸಾಗರದ ಪರಿಚಯ ಅದಕ್ಕಿತ್ತು.
-74-
ಅಲ್ಲಿ ಅದಕ್ಕೆ ದಾರಿ ತಪ್ಪುವಂತೆಯೇ ಇಲ್ಲ. ಈಗ ಅದು
ಸೇರಿರುವುದು ನೂರ ಎಪ್ಪತ್ತು ಮಿಲಿಯ ಚದರ ಕಿಲೊ~
ಮೀಟರ್ ವಿಸ್ತಾರದ ಮತ್ತು ಭೂಮಿಯ ಒಂದು ಮೂರನೇ
ಭಾಗವನ್ನೇ ಹೊದೆದಿರುವ ಶಾಂತಸಾಗರ. ಈಗ ಅದಕ್ಕಿದಿ~
ರಾಗಿರುವ ಭೂಭಾಗ ಕೆನಡಾದ ಪಶ್ಚಿಮದಲ್ಲಿರುವ ಬ್ರಿಟಿಷ್
ಕೊಲಂಬಿದರ ಪೂರ್ವಜ್ಞಾನ ಎಷ್ಟೇ ಇರಲಿ,
ಅದೆಷ್ಟೇ ಪರ್ಯತ್ನ ಮಾಡಲಿ, ಈ ಶಾಂತಸಾಗರದಲ್ಲಿ
ಅದರ ತವರೂರಾದ ಸಾಗರದ್ವೀಪ ಕಾಣಸಿಗುವಂತಿಲ್ಲ.
-75-
ಆದರೂ ಮುಂದೆಲ್ಲಾದರೂ ನೆಲದ ಬದಲು ಜಲ
ಕಾಣಿಸೀತು - ಎಂದು ಎಣಿಸಿ, ಹತಾಶವಾಗದೆ, ಕರಾವಳಿಯ
ಸೆರಗನ್ನು ಹಿಡಿದು ಉತ್ತರಕ್ಕೆ ಹಾರಿತು. ಅದು ಕಾಣಿಸದೆ
ಹೋದಾಗ ಮರಳಿ 57 ವೃತ್ತಾಂಶಕ್ಕೇ ಹಿಂದಿರುಗಿತು.
ಪೂರ್ವಕ್ಕೆ ಸರಿಯುವ ಬದಲು, ಅದೇ ವೃತ್ತಾಂಶದ
ಮೇಲೆ ಪಶ್ಚಿಮಕ್ಕೆ ಹಾರತೊಡ಼ಗಿತು. ಈಗ ಸೈಬೀರಿಯಾದ
ತಗ್ಗಾದ ಕರಾವಳಿ ಇದಿರಾಯಿತು. ಮನಸ್ಸಿನಲ್ಲಿ ಗೊಂದಲ
ಹುಟ್ಟಿ, ಏನಾಯಿತೆಂಬುದು ತಿಳಿಯದೇ ಹೋಯಿತು.
ಬೇರೆ ಉಪಾಯ ಕಾಣದ್ದಕ್ಕೆ ಅದು ಬೇರಿಂಗ್ ಜಲಸಂದು~
ವಿನ ಮೂಲಕ ಹಾದುಹೋಗುವ ಪಕ್ಷಿಗಳ ಗುಂಪಿನ
ಜೊತೆಗೆ ತಾನೂ ಸೇರಿಕೊಂಡಿತು. ಅಲ್ಲಿ ಹಿಮದಿಂದ
ಕವಿದ ಒಂದು ನಾಡು ಕಾಣಿಸಿತು. ಅಂಥ ಪ್ರದೇಶವನ್ನು
ನಮ್ಮ ಹಕ್ಕಿ ದಕ್ಷಿಣಧ್ರುವ ವಲಯದಲ್ಲಿ ಕಂಡಿತ್ತು. ಆದರೆ
ಇದು ಉತ್ತರಧ್ರುವ. ಆ ದಕ್ಷಿಣದಲ್ಲಿ ಅದು ಕಂಡಿದ್ದ
ಪೆಂಗ್ವಿನುಗಳ ಬಳಗ ಅಲ್ಲಿ ಕಾಣಿಸಲಿಲ್ಲ.

ತಾನು ಹಿಮಕವಿದ ಆ ನಾಡಿಗೆ ಸುತ್ತು ಬಂದರೆ
ಸರಿಯಾದ ದಾರಿ ಸಿಕ್ಕೀತೋ ಎಂದು ಯೋಚಿಸಿ ಜೊತೆಗಾರ
ಹಕ್ಕಿಗಳನ್ನು ಬಿಟ್ಟು, ಹಾರತೊಡಗಿತು. ಆ ಹಕ್ಕಿಗಳು
ಅದನ್ನು ಕಂಡು, "ಬಾ ಹಿಂದಕ್ಕೆ; ಬರಿದೆ ಸಮಯ
ಹಾಳುಮಾಡಬೇಡ" ಎಂದು ಎಚ್ಚರಿಸಿದರೂ, ಕೇಳದೆಯೇ
ಹಾರಿತು. ಅದು ಪ್ರತಿಕ್ಷಣಕ್ಕೂ ತನಗೆ ಸಾಗರದ್ವೀಪ
ಕಾಣಿಸಲೇಬೇಕು ಎಂಬ ಒಂದೇ ಕನಸನ್ನು ಕಟ್ಟಿಕೊಂಡು
ಹಾರುತ್ತಲೇ ಇತ್ತು. ಉಳಿದ ಹಕ್ಕಿಗಳು ಅದರ ಯೋಚನೆ~
ಯನ್ನು ಬಿಟ್ಟುವು. ಅವಕ್ಕೆ ನಮ್ಮೀ ಹಕ್ಕಿಯ ವರ್ತನೆ
ವಿಚಿತ್ರವಾಗಿ ಕಾಣಿಸಿತು. "ಅದಕ್ಕೆ ನಮ್ಮಂತೆ ದೀರ್ಘ
-76-
ವೈಶಾಖದ ಹಗಲನ್ನು ಕಾಣಲು ಇಷ್ಟವಿಲ್ಲ; ಒಬ್ಬಂಟಿಯಾಗಿ
ಎಲ್ಲೆಲ್ಲಿಗೋ ಹೊರಟಿದೆ" ಎಂದು ಕೊಂಡವು ಅವು.

"ಹೋದರೆ ಹೋಗಲಿ; ಹೋಗಿ ಕಷ್ಟಕ್ಕೆ ಸಿಲುಕಿದ
ಮೇಲೆ ಬುದ್ಧಿಬಂದೀತು" ಎಂದುಕೊಂಡವು ತಮ್ಮಷ್ಟಕ್ಕೆ.

ನಮ್ಮೀ ಹಕ್ಕಿ ಒಂಟಿಯಾಗಿ ಹಿಮ ಕವಿದ ದ್ವೀಪಗಳ
ಮೇಲೂ, ಹಿಮಗಡ್ಡೆಗಳ ಮೇಲೂ ಹಾರತೊಡಗಿತು;
ಅವುಗಳು ಮೇಲೆ ಮಧ್ಯರಾತ್ರಿ ಸೂರ್ಯನ ಬಿಸಿಲು ಮಿಂಚು~
ತ್ತಿತ್ತು. ಅದು ಕಡಲಿನ ಮೇಲೆಯೇ ಹಾರಿಹೋಗುವ ಎಚ್ಚರ
ವಹಿಸಿದರೂ, ಮುಂದೆ ಮಾತ್ರ ದಿಗಂತದ ತನಕವೂ
ತುಣುಕು ಹಿಮಗಡ್ಡೆಗಳು ಒತ್ತೊತ್ತಾಗಿ ನಿಂತ ವಿಶಾಲ
ಬರಡುಭುಮಿ ಇದಿರಾಯಿತು. ಅದು ಆ ಹಿಮಖಂಡ~
ವನ್ನು ದಾಟಬಾರದು. ಅದರ ಬುದ್ಧಿ ಅಂಥ ಎಚ್ಚರ~
ಕೊಟ್ಟಿತು.

ಈಗ ಸೂರ್ಯನ ಶಾಖ ದಕ್ಷಿಣ಼ಧ್ರುವ ವಲಯಕ್ಕೆ
ಹೆಚ್ಚಾಗಿ ಸಿಗುವ ಕಾಲ ಬಂದಿದೆ, ಅದಕ್ಕೆ ಸಮನಾಗಿ ನಮ್ಮ
ಎಂದೆಂದೂ ಇಲ್ಲದ ಹಕ್ಕಿಯೂ ದಕ್ಷಿಣ ದಿಕ್ಕಿನ ವಲಸೆ
ತೊಡಗಬೇಕಾಗಿದೆ. ಅಲ್ಲಿಯ ತನಕ ಅದು ಸಾಗರದ್ವೀಪ~
ವನ್ನು ಕಾಣುವ ಹಟದಿಂದ ಯಾವತ್ತು ಬೇಸಿಗೆಯನ್ನು
ಉತ್ತರ ಶಾಂತಸಾಗರದಲ್ಲಿ ಕಳೆದಿತ್ತು.

ದಕ್ಷಿಣಾಭಿಮುಖವಾಗಿ ವಲಸೆ ಹೋಗುತ್ತಿರುವ ಪಕ್ಷಿ~
ಗಳ ಮಂದೆಯನ್ನು ಸೇರಿಕೊಂಡ ನಮ್ಮ ಹಕ್ಕಿ ಸುತ್ತಲಿದ್ದವ~
ರೊಡನೆ, "ನಾನು ದಿಕ್ಕು ತಪ್ಪಿದೆ" ಎಂದು ಮರುಗಿತು.
ಬಳಿಯಲ್ಲಿದ್ದ ಹಕ್ಕಿಗಳು ಆ ಮಾತನ್ನು ನಂಬಲಾರದೆ, "ದಿಕ್ಕು
ತಪ್ಪುವುದೆ ? ನಮ್ಮ ಹಿಂಡಿನಲ್ಲಿ ಎಷ್ಟೆಲ್ಲ ಹಕ್ಕಿಗಳಿಲ್ಲ !
ಹದಿನೈದು ಮಿಲಿಯ ಹಕ್ಕಿಗಳಿವೆ ! ಅಷ್ಟೆಲ್ಲ ಬಂಧುಗಳು
ನಡುವೆ ನೀನು ದಿಕ್ಕು ತಪ್ಪುದಾದರೂ ಹೇಗೆ ?" ಎಂದುವು.
-77-

ಅದು ಹಿಮದ ಹಾಳೆಯೊಂದರ ಮೇಲೆ ಕುಳಿತ
ಹಿಮಗರಡಿಯೊಂದನ್ನು ಕಂಡು , "ನನಗೆ ದಿಕ್ಕಿಲ್ಲ" ಎಂದಿತು.

ಆ ಕರಡಿ, "ದಿಕ್ಕಿಲ್ಲ ಎಂದರೇನು ? ಆ ಮಾತೇ ನಮಗೆ
ಅರ್ಥವಾಗುವುದಿಲ್ಲ" ಎಂದಿತು. ಅವು ಸಹ ತೇಲುವ
ಮಂಜುಗಡ್ಡೆಗಳ ಮೇಲೆ ಕುಳಿತು ಸಾವಿರಾರು ಮೈಲು
ದೂರ ಕಡಲಲ್ಲಿ ಸಾಗುತ್ತ, ವಾಲ್ರಸ್ ಮರಿಗಳನ್ನೋ,
ಮೀನನ್ನೋ ಬೇಟೆಯಾಡುತ್ತಾ ಸಾಗುತ್ತಿವೆ.

ಸಾಗರದಲ್ಲಿ ಮುಳುಗುತ್ತಿದ್ದ ಸೀಲುಗಳ ಹಿಂಡೊಂದನ್ನು
ಕಂಡ ನಮ್ಮ ಹಕ್ಕಿ ಅವುಗಳೊಡನೆ, "ನನಗೆ ದಿಕ್ಕಿಲ್ಲ" ಎಂದು
ಕೂಗಿ ಹೇಳಿತು.

ಅದನ್ನು ಕೇಳಿದ ಆ ಸೀಲುಗಳು, "ನಿನ್ನ ಮಾತಿಗೆ
ಅರ್ಥವೇ ಇಲ್ಲ" ಎಂದುವು. ಅವೀಗ ತಮ್ಮ ತವರು ಮನೆ
-78-
ಯಾದ ಪ್ರಿಬಿಲಾಫ ದ್ವೀಪಗಳಿಂದ ಮೂರು ಸಾವಿರ ಕಿಲೊ~
ಮೀಟರ್ ದೂರ ದಕ್ಷಿಣಕ್ಕೆ ಸಾಗುತ್ತಿವೆ.

ನಮ್ಮ ಹಕ್ಕಿಯ ಮಾತುಗಳನ್ನು ಕೇಳಿದ ವಾಲ್ರಸ~
ಗಳೂ, "ದಿಕ್ಕಿಲ್ಲ ; ಗತಿಯಿಲ್ಲ - ಎಂದರೇನು ?" ಎಂದೆನ್ನುತ್ತ
ದಕ್ಷಿಣಕ್ಕೆ ತೇಲುತ್ತಿರುವ ಹಿಮದ ಹಾಳೆಗಳನ್ನೇರಿ ಪಯಾಣಿ~
ಸುತ್ತಿದ್ದುವು.

ಇದೇ ಅವಧಿಯಲ್ಲಿ ಎಲಾಸ್ಕಾದಿಂದ ಹವಾಯಿ ದ್ವೀಪ~
ಗಳಿಗೆ ಇರುವ ಮೂರು ಸಾವಿರ ಕಿ. ಮೀ. ದೂರ ಪಯಾಣ~
ದಲ್ಲಿದ್ದ ಹೊಂಬಣ್ಣದ ಪ್ಲೋವರು ಹಕ್ಕಿಗಳು ಕೂಡ,
"ದಿಕ್ಕಿಲ್ಲ, ದಿಕ್ಕಿಲ್ಲ ?" ಎಂದು ಮಾರ್ದನಿ ಕೊಟ್ಟುವು
ಒಂಬತ್ತು ಸಾವಿರದ ಐನೂರು ಕಿ.ಮೀ. ದೂರದ ದ್ವೀಪ~
ಗಳಿಗೆ ಪಯಣ ಹೊರಟಿದ್ದ ಕರ್ಲ್ಯು ಹಕ್ಕಿಗಳು ನಮ್ಮ
-79-
ಹಕ್ಕಿಯ ಕೂಗನ್ನು ಕೇಳಿ, "ದಿಕ್ಕಿಲ್ಲವೆಂದರೆ !" ಎಂದು
ಉದ್ಗರಿಸಿ ಸಾಗಿದವು.

ಆ ಯಾವತ್ತು ಪಶುಪಕ್ಷಿಗಳಿಗೆ ತನ್ನ ಕಷ್ಟ ತಿಳಿಯ~
ಲಾರದು. ತಾನು ಸಿಕ್ಕಿಬಿದ್ದಂತೆ ಕಾಣಿಸುವ ಈ ಸಾಗರ
ಅವುಗಳ ಮನೆಯೇ. ಅವು ಇಲ್ಲಿಯವು. ಹೀಗಿರುತ್ತ ಅವು
ಇಲ್ಲಿ ನನ್ನಂತೆ ದಿಕ್ಕುಗೆಡುವ ಪರಿಸ್ಥಿತಿಯೇ ಬಾರದು.

ಅನಂತರ ಅದು ಕ್ಯಾಲಿಫೋರ್ನಿಯಾ ಕರಾವಳಿ~
ಯಿಂದ ಯಾವತ್ತು ಶಾಂತಸಾಗರದ ಅಗಲವನ್ನು ಹಾಯು~
ತ್ತಿದ್ದ ಬೇರೊಂದು ಪಕ್ಷಿ ಮಂದೆಯನ್ನು ಇದಿರಾಯಿತು.
ಎಲ್ಲಿಯೂ ತಂಗದೆ, ಆ ಮಿಲಿಯಗಟ್ಟಲೆ ಹಕ್ಕಿಗಳು ರೆಕ್ಕೆ
ಬಡಿತಗಳ ಗದ್ದಲ ಹೊರಡಿಸುತ್ತಾ ಟೆಸ್ಮೇನಿಯ ದ್ವೀಪಕ್ಕೆ
ಹೊಗುತ್ತಿದ್ದವು. ಅದು ಅವುಗಳ ತವರೂರು. ಯುಗ~
ಮಾನಗಳಿಂದಲೂ ಅವುಗಳ ಹಿರಿಯರು ನವಂಬರ ತಿಂಗಳಲ್ಲಿ
ಒಂದು ನಿಶ್ಚಿತ ದಿನಕ್ಕೆ ಅಲ್ಲಿ ಬಂದೆರಗುತ್ತಿದ್ದುವು. ಅಲ್ಲಿ
ಸಂಸಾರ ಹೂಡಿ, ಮೊಟ್ಟೆಯಿಟ್ಟು ಮರಿಮಾಡುತ್ತಿದ್ದುವು.
-80-

ನಮ್ಮೀ ಎಂದೆಂದೂ ಇಲ್ಲದ ಹಕ್ಕಿ ಅವುಗಳ ಪಾಲಿಗೆ
ಪರದೇಶಿ ! ಹಳೆಯ ಗರಿಗಳನ್ನುದುರಿಸಿ, ಹೊಸ ಹೊದಿಕೆ
ಪಡೆಯುವ ಕಾಲ. ಅದು ಸಂಧಿಸಿದ ಆ ಪಕ್ಷಿಗಳು
ಉತ್ತರಾರ್ಧಗೋಲದಲ್ಲಿ ಹಸ ಗರಿಗಳನ್ನು ಪಡೆದಿದ್ದುವು.
ಇದರ ಕುಲದವರು ಉತ್ತರಾರ್ಧಗೋಲದಲ್ಲಿ ಮೊಟ್ಟೆ~
ಯಿಟ್ಟು ಮರಿಮಾಡಿದರೆ, ಅವು ದಕ್ಷಿಣ ಗೋಲಾರ್ಧದಲ್ಲಿ
ಆ ಕೆಲಸ ಮಾಡುತ್ತಿದ್ದುವು. ಇದರ ಮತ್ತು ಅವುಗಳ ದಿನ~
ಚರಿಯಲ್ಲಿ ಆರು ತಿಂಗಳಷ್ಟು ವ್ಯತ್ಯಾಸವಿತ್ತು.

ಆದುದರಿಂದ ಅದು ತನ್ನ ಬಂಧುಗಳಂತೆ ಕಾಣಿಸಿದ
ಅವುಗಳ ಗುಂಪನ್ನು ಬಿಟ್ಟು, ನ್ಯೂಜಿಲ್ಯಾಂಡ್ ದ್ವೀಪದ
ದಕ್ಷಿಣದಲ್ಲಿರುವ ಒಂದು ದ್ವೀಪಾವಳಿಗೆ ಹಾರಿತು. ಅದು
ದಕ್ಷಿಣಧ್ರುವ ವಲಯದ ಭಾಗ. ಅಲ್ಲಿ ನಮ್ಮ ಹಕ್ಕಿಗೆ ಹಿಂದೆ
ಕಂಡಂಥ ಕಪ್ಪು, ಬಿಳಿ ಅಂಗಿ ತೊಟ್ಟು ಪೆಂಗ್ವಿನುಗಳು
ಕಾಣಸಿಕ್ಕಿದುವು.
-81-

ಅಲ್ಲಿಂದ ಮುಂದುವರಿದಂತೆ ಅದರ ಮನಸ್ಸಿನಲ್ಲಿ ಇನ್ನು
ತಾನು ಹಳೆಯ ಮಿತ್ರರನ್ನು ಸಂಧಿಸಬಹುದೆಂಬ ಆಸೆ
ಮೂಡಿತು. ಅವರು ತನಗೆ ಸಾಗರದ್ವೀಪ ಎಲ್ಲಿದೆಯೆಂದು
ತಿಳಿಸಬಹುದು - ಎನಿಸಿತು.
-82-

ನಮ್ಮ ಹಕ್ಕಿ ಬಂದೆರಗಿದ ದ್ವೀಪಗಳೂ ಅಪರಿಚಿತ~
ವಾದುವೇ ; ಅದಕ್ಕೆ ಏನೇನೂ ತಿಳಿಯದವು. ಅಲ್ಲಿ ವಾಸಿ~
ಸುತ್ತಿರುವ ಪೆಂಗ್ವಿನುಗಳೂ ಬೇರೆ ಜಾತಿಯವು. ಅವುಗಳಲ್ಲಿ
ಕ಼ೆವಲೇ ಎಡಿಲೇ ಪೆಂಗ್ವಿನುಗಳು ಸಾಮ್ರಾಟ ಪೆಂಗ್ವಿನುಗಳು
ಕಾಣಿಸಿದರೂ, ಅದಕ್ಕೆ ಸಾಗರದ್ವೀಪವನ್ನು ಕುರಿತು ಕೇಳಿಯೇ
ಗೊತ್ತಿಲ್ಲ.

ನಮ್ಮ ಹಕ್ಕಿ ವಿಚಾರಿಸಿದ್ದಕ್ಕೆ ಅವು "ಇಲ್ಲಿನ ಬೇಸಿಗೆಗೆ
ಉತ್ತರಿಂದ ಹಲವಾರು ಪಕ್ಷಿ ಜಾತಿಗಳು ಬರುತ್ತವೆ,
ಅವಾವವೂ ಸಾಗರದ್ವೀಪದಿಂದ ಬಂದತಿಲ್ಲ" ಎಂದು
ತಿಳಿಸಿದುವು. ಅಲ್ಲಿದ್ದ ಹೆಚ್ಚಿನ ಪೆಂಗ್ವಿನುಗಳು ಹೊಸ ಜಾತಿ~ 
ಯವು. ಅಲ್ಲಿ ದೇವತಾ ಪೆಂಗ್ವಿನುಗಳಿದ್ದುವು, ಹಳದಿಕಣ್ಣಿನ
ಪೆಂಗ್ವಿನುಗಳಿದ್ದುವು. ದಪ್ಪ ಕೊಕ್ಕಿನವಿದ್ದುವು. ಬಿಳಿ ರೆಕ್ಕೆ~
ಯವು ಇದ್ದುವು. ಅರಸು ಪೆಂಗ್ವಿನುಗಳೂ ಇದ್ದುವು.
ಅವೊಂದಕ್ಕೂ ಪೆಂಗ್ವಿನೀಸ್ ಭಾಷೆಯೂ ತಿಳಿದಿರಲಿಲ್ಲ.

ಅದು ಆ ಬೇಸಿಗೆಯನ್ನು ಈ ಅಪರಿಚಿತ ಸಮುದ್ರದ
ಮೇಲೆ ತೇಲಾಡುತ್ತ ಕಳೆಯಬೇಕಾಯಿತು. ಅದು ಈಗ
ಬಂದಿರುವ ತಾವಿಗೂ, ಹಿಂದೆ ಹೋಗುತ್ತಿದ್ದ ತಾವಿಗೂ
ಮಧ್ಯದಲ್ಲಿ ಹಿಮಾಚ್ಛಾದಿತ ಎಂಟಾರ್ಕಟಿಕ ಭೂಖಂಡವಿದೆ
-83-
ಎಂಬುದೇ ಅದಕ್ಕೆ ತಿಳಿಯದು. ಆ ಭೂಖಂಡವು ಹದಿ~
ಮೂರು ಮಿಲಿಯ ಚದರ ಕಿ. ಮೀ. ವಿಶಾಲ ಪ್ರದೇಶ.

ಸರಿಯೆ, ಆ ಬೇಸಿಗೆ ಕಳೆಯಿತು. ನಮ್ಮ ಹಕ್ಕಿ ಬೇರೆ
ಉಪಾಯ ಕಾಣದೆ ತನ್ನ ಸಾಗರದ್ವೀಪವನ್ನು ಹುಡುಕುವ
ಹಂಬಲದಿಂದ, ಇನ್ನೊಮ್ಮೆ ಉತ್ತರ ದಿಕ್ಕಿಗೆ ಪಯಣ ತೊಡ~
ಗಿತು. ಅಷ್ಟರೊಳಗಾಗಿ ಪೀಟ್ ಮಾವನ ಕೈಗೆ ಅದು ಸಿಕ್ಕಿ
ಶಾಂತಸಾಗರವನ್ನು ಸೇರಿ ಬಿಡುಗಡೆಗೊಂಡ ಮೇಲೆ ಎಂದು
ವರ್ಷವೇ ಸಂದು ಹೋಗಿತ್ತು.

ಅಧ್ಯಾಯ 10

ಅದು ಉತ್ತರಧ್ರುವ ವಲಯದಲ್ಲಿ ವ್ಯರ್ಥ ಸಮಯ~
ವನ್ನು ಕಳೆದು ಬೇಸಿಗೆಯ ಹೊತ್ತಿಗೆ ಇನ್ನೊಮ್ಮೆ ದಕ್ಷಿಣಕ್ಕೆ
ಪಯಣ ಹೊರಟಿತು. ಅಷ್ಟೆಲ್ಲ ದುಃಖ ಸಹಿಸಿ ಬಾಳಿದ್ದರಿಂ~
ದಲೋ ಏನೋ, ಅದರ ರೀತಿಯಲ್ಲಿ ಮಾರ್ಪಾಟು ಉಂಟಾ~
ಗಿತ್ತು. ತಾನುಂಡ ಕಹಿಯಿಂದಾಗಿ ತನ್ನ ಬಾಳು ನಿಷ್ಫಲವಾಗ
-84-
ದಂತೆ ಬದುಕಬೇಕೆಂಬ ಹಟ ಅದರಲ್ಲಿ ಮೂಡಿದೆ. ಬದು~
ಕುತ್ತ ಕಲಿಯುತ್ತಲೇ ಹೋಗುತ್ತೇ಩ೆ ಎಂದುಕೊಂಡಿತು.
ಆದರೂ ಅದು ಸಾಗರದ್ವೀಪಕ್ಕೆ ಮರಳುವ ಆಸೆಯನ್ನು
ಮಾತ್ರ ತೊರೆಯಲಿಲ್ಲ.

ಈ ಬಾರಿ ತಾನು ತನ್ನ ಚಿಕ್ಕಂದಿನಲ್ಲಿ ಮಾಡಿದಂತೆ,
ದಾರಿಯ ಗುರುತಿಗೆ ದೈತ್ಯ ತಿಮಿಂಗಿಲಗಳನ್ನು ಹಿಂಬಾಲಿಸುವ
ಮಾನಸ್ಸಾಯಿತು. ಅಲ್ಲದೆ, ಪೆಂಗ್ವಿನುಗಳ ವಿಷಯದಲ್ಲಿ
ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಹಂಬಲವೂ ಮೂಡಿತು.
ದಕ್ಷಿಣ ಶಾಂತಸಾಗರದಲ್ಲಿ ಅದು ಕಳೆಯದಿರುವ ಎರಡನೇ
ಬೇಸಿಗೆಯ ಬಗ್ಗೆ ಅದರ ಮನಸ್ಸಿನಲ್ಲಿ ಎಷ್ಟೆಷ್ಟೋ ನಿರೀಕ್ಷೆ~
ಗಳಿದ್ದುವು.

ಅದೇ ಬೇಸಿಗೆಯಲ್ಲಿ ಇನ್ನೊಂದು ಸೆಕೆಯ ದಿನ ಬಂದಿದೆ.
ಬಾನಿನಲ್ಲಿ ದಟ್ಟನಾಗಿ ಮುಗಿಲುಗಳು ಕವಿದಿವೆ. ಗುಡುಗು,
ಮಳೆ ಬಂದು ಹವೆ ಒಂದಿಷ್ಟು ತಂಪಾದರೂ ಆದೀತು - ಎಂಬ
ಭರವಸೆ ಮೂಡಿದೆ. ಆಸ್ಟ್ರೇಲಿಯಾದ ಪಶ್ಚಿಮ ಕಡಲು ತೀರ~
ದಲ್ಲಿ ಇಬ್ಬರು ಬಾಲಕರು ಹೊತ್ತಾರೆ ಎದ್ದು ಮರಳಿನ ಮೇಲೆ
ಅಲೆದಾಡುತ್ತಿದ್ದಾರೆ. ಅವರ ಕೈಯಲ್ಲೊಂದು ಗಾಳಿ
ಕೋವಿಯೂ ಇತ್ತು. ಈ ಮೊದಲು ಅಲ್ಲಿಗೆ ವಿಲಾಸಕ್ಕಾಗಿ
ಬಂದ ಹಲವರು ಕಡಲಿಗೆ ಎಸೆದ ಖಾಲಿ ಡಬ್ಬೆಗಳನ್ನು ಕಡ~
ಲಿನ ಅಲೆಗಳು ದಡದ ಮೇಲೆ ಎಸೆಯುತ್ತಿದ್ದುವು; ಆ ಬಾಲ~
ಕರು ಅವಕ್ಕೆ ಗುರಿಯಿಟ್ಟು ಗುಂಡು ಹೊಡೆಯುವ ಆಟ~
ದಲ್ಲಿ ನಿರತರಾಗಿದ್ದರು.

ಅವರಲ್ಲಿ ದೊಡ್ಡ ಹುಡುಗ ಒಂದು ಸಮೆಗಲ್ಲನ್ನು ಎತ್ತಿ~
ಕೊಂಡ. ಅದಕ್ಕೊಂದು ಕಾಗದವನ್ನು ಸುತ್ತಿ ಎತ್ತರಕ್ಕೆ
ಎಸೆದ. ಆ ಕಲ್ಲು ಡೊಂಕಾಗಿ ಹಾದು ಕಡಲಿಗೆ ಬಿತ್ತು. ಹಾರು~
-85-
ವಾಗ ಅದಕ್ಕೆ ಸುತ್ತಿದ ಕಾಗದದ ಹಾಳೆ ಕಳಚಿ, ಗಾಳಿಯಲ್ಲಿ
ತೇಲುತ್ತ ಮೆಲ್ಲಗೆ ಇಳಿಯತೊಡಗಿತು.

ಆ ಹುಡುಗನ ಸೋದರ, "ಅದಕ್ಕೆ ಗುರಿಯಿಡು" ಎಂದ.

ಗಾಳಿಯಲ್ಲಿ ತಟಪಟ ಹಾರುತ್ತಿದ್ದ ಕಾಗದಕ್ಕೆ ಕಿರಿಯ
ಹುಡುಗ ಗುರಿಯಿಟ್ಟು ಹೊಡೆದ. ಆ ಕಾಗದ ನೆಲಕ್ಕೆ ಬೀಳು~
ವಷ್ಟರೊಳಗೇನೇ ಅವರು ಓಡಿಹೋಗಿ ಅದನ್ನು ಹಿಡಿದರು.

"ನಿನ್ನ ಗುರಿ ತಗಲಲಿಲ್ಲ" ಎಂದ ದೊಡ್ಡವ. ದೊಡ್ಡ
ಹುಡುಗ, "ಈಗ ನಾನು ಹೊಡೆಯುತ್ತೇನೆ" ಎಂದ. ಅವನು
ಕೋವಿಯನ್ನು ತೆಗೆದುಕೊಂಡ. ಅವನ ತಮ್ಮ ಹಾಳಿತವಾದ
ಒಂದು ಸಮೆಗಲ್ಲನ್ನು ತಂದು ಅದಕ್ಕೊಂದು ಕಾಗದವನ್ನು
ಸುತ್ತಿದ.

ಅಣ್ಣ, "ತೀರ ಬಿಗಿಯಾಗಿ ಸುತ್ತಿದರೆ ಗಾರದ ಕಳಚಿ ಬೀಳ~
ಲಾರದು" ಎಂದ.

ತಮ್ಮ ಸಮೆಗಲ್ಲನ್ನು ಜೋರಾಗಿ ಎಸೆದ. ಅದು ಮುಗಿ~
ಲಿನ ಕೆಳ ಅಂಚನ್ನು ಸೇರಿದಂತೆ ಕಾಣಿಸಿತು. ಅಲ್ಲಿ ಕಲ್ಲಿಂದ
ಕಾಗದ ಕಳಚಿ, ತೂರಾಡುತ್ತ ಇಳಿಯತೊಡಗಿತು. ದೊಡ್ಡ
ಹುಡುಗ ಕೋವಿ ಹಿಡಿದು ಹೊಡೆಯಲು ಸಿದ್ಧನಾದ.

ದೊಡ್ಡವ ಕೋವಿಯ ನಳಿಗೆಯನ್ನು ಚಲಿಸುವ ಗುರಿ~
ಯಲ್ಲ ತಿರುಗಿಸಿದ. ಆಗ ಬಾನಿನಿಂದ ಎರಡೆರಡು ಬಿಳಿಯ
ಕಾಗದದ ತುಣುಕುಗನಲು ಇಳಿಯುವಂತೆ ಕಾಣಿಸಿದುವು.
ಒಂದು ನೇರಾಗಿ ವೇಗ಼ದಿಂದ ಚಲಿಸಿದರೆ, ಇನ್ನೊಂದು ತಟಪಟ
ಚಲಿಸುತ್ತಿತ಼್ತು. ಆತ ಗುರಿ ಬದಲಿಸಿ ನೇರ ಬರುತ್ತಿರುವ ಬಿಳಿಯ
ತುಣುಕಿಗೆ ಗುರಿಯಿಟ್ಟ. ಅದರ ವೇಗದ ಎಣಿಕೆ ಹಾಕಿ ತುಸು
ಮುಂದಕ್ಕೆ ಗುರಿ ಹಿಡಿದ. ಆ ಕೆಲಸ ಸುಲಭವೆನಿಸದಿದ್ದರೂ
ಅವನು ಪ್ರಯತ್ನಿಸದೆ ಬಿಡಲಾರ.
-86-

"ಟಪಾ! ಆ ವಸ್ತು ಗಾಳಿಯಂದ ಉರುಳುತ್ತ ನೆಲದ
ಮೇಲೆ ಗರಿಗಳ ಒಂದು ಮುದ್ದೆಯಾಗಿ ಕಡಲಲೆಗಳು ನೊರೆ~
ಯಾಗಿ ಮಗುಚುವಲ್ಲಿಗೆ ಬಂದು ಬಿತ್ತು.

"ಅದೊಂದು ಹಕ್ಕಿ! ನೀನು ಹಕ್ಕಿಯೊಂದನ್ನು ಉರುಳಿ~
ಸಿದೆ" ಎನ್ನುತ್ತ, ಹುಡುಗನ ತಮ್ಮ ಅದು ಬಿದ್ದಲ್ಲಿಗೆ ಧಾವಿ~
ಸಿದ.

ದೊಡ್ಡ ಹುಡುಗ ನಗುತ್ತ, "ನಾನು ಗೊತ್ತಿದ್ದೇ ಅದನ್ನು
ಹೊಡೆದೆ" ಎಂದ.

ಅವರು ಅದನ್ನು ಹೆಕ್ಕಿ ಪರಿಶೀಲಿಸಿದರು. ಪಾರಿವಾಳದ
ಗಾತ್ರದ ಆ ಹಕ್ಕಿಯ ಮೇಲ್ಮೈ ಬಿಳುಪಾಗಿತ್ತು; ಕೆಳಗಡೆ
ಕಪ್ಪಾಗಿತ್ತು, ಗರಿಗಳು ಉದುರುವ ಕಾಲ ಬಂದಿದ್ದುದರಿಂದ
ಅವು ಅಂದಗೆಟ್ಟಿದ್ದುವು.

"ಅಣ್ಣಾ ನಿನ್ನ ಗುರಿಯೇ. ಗುಂಡು ಎದೆಯ ಮೂಲಕವೇ
ಹಾದಿದೆ" ಎಂದು ಚೀರಿದ ಚಿಕ್ಕವ.

ಹಿರಿಯ ಹುಡುಗ ಅದನ್ನು ಕುತೂಹಲದಿಂದ ತಿರುವಿ,
"ಈ ಜಾತಿಯ ಹಕ್ಕಿಯನ್ನು ಇಲ್ಲೆಲ್ಲೂ ಕಂಡಂತಿಲ್ಲ. ಇದು
ಯಾವ ಹಕ್ಕಿಯೋ" ಎಂದು ನುಡಿದ.

"ಹಾಂ, ನೋಡಿಲ್ಲಿ, ಅದರ ಕಾಲಲ್ಲಿ ಒಂದು ಪಟ್ಟಿಯಿದೆ,
ಯಾರೋ ಅದನ್ನು ತೊಡಿಸಿದ್ದಾರೆ."

ಉತ್ತರ ಅಮೇರಿಕದ ವಿಜ್ಞಾನಿಗಳಿಗೆ ಈ ವಿಚಾರ ತಿಳಿ~
ದದ್ದು ಆ ಬಾಲಕರಿಂದ. ಅವರು ಆ ಮಕ್ಕಳು ಒದಗಿಸಿದ
ಪಟ್ಟಿಯ ವಿವರಗಳನ್ನು ಹುಡುಕಿ, ತಮ್ಮ ದಾಖಲೆ ಬರಹ~
ವನ್ನು ಪರಿಶೀಲಿಸಿ ಅದು ತಾವು ಹಿಂದಣ ಬೇಸಿಗೆಯಲ್ಲಿ
ಸಾಗರದ್ವೀಪದಲ್ಲಿ ಹಿಡಿದ ನಾಲ್ಕನೆಯ ಹಕ್ಕಿ ಎಂಬುದನ್ನು
ಗುರುತಿಸಿದರು. ಆ ಎಂದೆಂದೂ ಇಲ್ಲದ ಹಕ್ಕಿಯನ್ನು ಹಿಡಿದ
-87-
ಒಂದೂವರೆ ವರ್ಷದ ಬಳಿಕ ಆಸ್ಟ್ರೇಲಿಯಾದ ಪಶ್ಚಿಮ ಕರಾ~
ವಳಿಯಲ್ಲಿ ಅದು ಸತ್ತುಬಿದ್ದಿತ್ತು.

ಅದನ್ನು ಎಸೆಯುವ ಕಾಲದಲ್ಲಿ ಇದ್ದ ಒಬ್ಬಾತ, "ಈ
ಹಕ್ಕಿ ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ" ಎಂದಿದ್ದ.
ಈ ಹಕ್ಕಿ ಆ ಕೆಲಸವನ್ನೆನೋ ಮಾಡಿದ್ದು ನಿಜ, ಆದರೆ
ಹಾಗೆ ಮಾಡಿದುದರಿಂದಲೇ ಅದರ ಪಾಲಿನ ಸಮಸ್ಯೆ ಮುಗಿ~
ಯುವ ಬದಲು, ಇನ್ನೂ ಹೆಚ್ಚಿನ ಪ್ರಶ್ನೆಗಳು ಹುಟ್ಟಿ~
ಕೊಂಡುವು. ಈ ಹಕ್ಕಿಯ ವಲಸೆ ನಿತ್ಯರೂಢಿಯ ವಲಸೆ~
ಯೇನು? ಉತ್ತರ ಎಟ್ಲಾಂಟಿಕ್ ಸಾಗರದ ಹಕ್ಕಿಗಳು ಈ
ಹಕ್ಕಿಯಂತೆ ಭೂಮಿಗೆ ಅರ್ಧ ಸುತ್ತು ಬರುತ್ತವೆಯೋ?
ಅಥವಾ ಇದು ಅಪೂರ್ವಕ್ಕೆ ಸಂಭವಿಸಬಹುದಾದ ಒಂದು
ಆಕಸ್ಮಿಕ ಘಟನೆಯೇ?

ಆ ಬೆಳಿಗ್ಗೆ ನಮ್ಮೀ ಎಂದೆಂದೂ ಇಲ್ಲದ ಹಕ್ಕಿ ಆಸ್ಟ್ರೇಲಿ~
ಯಾದ ಕರಾವಳಿಯನ್ನು ಅನುಸರಿಸಿ ಹಾರುತ್ತಿತ್ತು. ಅದಕ್ಕೆ
ಯಾವ ಅವಸರವೂ ಇರಲಿಲ್ಲ. ಅದು ಗೊತ್ತು ಗುರಿಯಿಲ್ಲದೆ
ತನ್ನ ಶೇಷಾಯುಷ್ಯವನ್ನು ಈ ಹೊಸ ಸಾಗರದ ಉದ್ದ,
ಅಗಲಗಳನ್ನು ಅಲೆಯುತ್ತ ಕಳೆಯಬಹುದು. ಆ ದಿವಸವಂತೂ
ಅದು ಹೊಸ ಹೊಸ ತಾವುಗಳನ್ನು, ಹೊಸ ಹೊಸ ಜೀವಿ~
ಗಳನ್ನು ಕಾಣಬಹುದಾದ ಪ್ರಸಂಗವಿತ್ತು. ಅದರ ಜತೆಗೆ ತನ್ನ
ಸಾಗರದ್ವೀಪದ ನೆನಪೂ ಅದಕ್ಕಿತ್ತು.

ಆ ದಿನ ಅದು ಮುಗಿಲಿಗಿಂತ ಕೆಳಕ್ಕೆ ಇಳಿದಾಗ ಜನ
ಶೂನ್ಯವಾದ ಕಡಲ ತಡಿಯ ಮೇಲೆ ಹಾರುವಾಗ ಇಬ್ಬರು
ಹುಡುಗರು ಆಟವಾಡುವುದನ್ನು ಕಂಡಿತು. ಅವರಿಂದ ತನಗೆ
ಅಪಾಯ ಬಂದೀತೆಂಬ ಯೋಚನೆಯೇ ಅದಕ್ಕೆ ಹುಟ್ಟಿರ~
ಲಾರದು. ಎಷ್ಟೋ ದೂರದಲ್ಲಿದ್ದರು ಅವರು. ಆಗ ಥಟ್ಟನೆ
-88-
ಗುಂಡಿನ ಸದ್ದು ಕೇಳಿಸಿತು. ಕ್ಷಣದಲ್ಲಿ ತಾನೇ ಗಾಳಿಯಲ್ಲಿ
ಉರುಳುರುಳಿ ಬೀಳತೊಡಗಿತು. ಅದಕ್ಕೆ ಏನೆಂದೂ ತಿಳಿಯ~
ದಾಯಿತು. ತಾನು ಮರಳಿಗೆ ಬಂದು ಬಡಿದದ್ದೂ ಗೊತ್ತಿಲ್ಲ,
ಮುಂದೆ ತಿಳಿಯುವಂತೆಯೂ ಇಲ್ಲ. ಅದಕ್ಕೆನಿಸಿದ್ದೆಂದರೆ - ತನ್ನ
ಯಾವುದೋ ಒಂದಂಶ ಕೆಳಕ್ಕೆ ಬೀಳುವ ಬದಲು ಮೇಲಕ್ಕೂ,
ಹೊರಕ್ಕೂ. ಹೋಗುತ್ತಿದೆ ಎಂದು.

ಅದು ಈ ಮೊದಲು ಕಂಡಿರಲಾರದಷ್ಟು ಬೆಳಕು
ಎಲ್ಲೆಲ್ಲೂ ಹಬ್ಬಿಕೊಂಡಿತ್ತು. ಸಮುದ್ರವೇ ಪ್ರಕಾಶದಿಂದ
ಹೊತ್ತಿಕೊಂಡಂತಿತ್ತು. ಸೂರ್ಯ ಇನ್ನೂ ಉದಯಿಸಿಲ್ಲ~
ವಾದರೂ ಬಾನು ಸಹ ಉಜ್ಜಲ ಪ್ರಕಾಶವನ್ನು ಹೊಮ್ಮು~
ತ್ತಿತ್ತು.

ಭೂಮಿ, ಅಂತರಿಕ್ಷಗಳು ಬಾಗಿ ಒಂದುಗೂಡುವ ಆ
ದೂರದಲ್ಲೆಲ್ಲೋ ಒಂದು ಕಡ಼ೆ ಎಂದೆಂದೂ ಇಲ್ಲದ
ನಾಡೊಂದಿದೆ. ಅಲ್ಲಿಗೆ ಯಾವತ್ತು ಕಡಲು ಹಕ್ಕಿಗಳು ಆತ್ಮ
ಹೋಗಿ ಸೇರುತ್ತವಂತೆ. ಅಲ್ಲಿಗೆ ಹೋಗುತ್ತ ಅದೂ ಕೂಗಿತು,
ಮರುಧ್ವನಿ ಕೇಳಿಸಿತು. ಆ ಮಾರ್ದನಿಗಳಾದರೆ ಈ
ತನಕ ಕೇಳಿರದಂಥ ಶುದ್ಧ ಮಾರ್ದನಿಗಳು. ಅವು ವಂಚಿಸು~
ವಂತಿಲ್ಲ. ಆ ಮಾರ್ದನಿ ಅದನ್ನು ಸಾಗರದ ಮೇಲಿಂದ
ಆಕಾಶದ ದಾರಿಯಾಗಿ ಕರೆದೊಯ್ದಿತು. ಅದು ತನ್ನ
ತವರನ್ನು ಸೇರುವ ತನಕವೂ ಆ ಮರ್ದನಿಗಳು ಅದಕ್ಕೆ
ದಾರಿತೋರಿಸಿದ್ದುವು.

ಅಲ್ಲಿಗೆ ಹೋದ ಬಳಿಕ ನಮ್ಮ ಎಂದೆಂದೂ ಇಲ್ಲದ
ಹಕ್ಕಿಗೆ, ಅಲೆದಾಟ ಮುಗಿದು, ಚಿರ ವಿಶ್ರಾಂತಿ ದೊರಕಿತು.
﻿
ಡಾ।। ಕೃಷ್ಣಾನಂದ ಕಾಮತ್
03-05-21
Kannada
-16-
ಪ್ರಾಣಿ ಜಾತಿ. ಈ ಲೆಮೂರುಗಳ ಕುಲ ಇತರ ಕೆಲವು ದೇಶ~
ಗಳಲ್ಲಿವೆ. ಇವುಗಳ ಮುಖ ನೀಳವಾದದ್ದು. ಅದು ಕಾಡು
ಪಾಪದಂತೆ, ಅಥವಾ ನಮ್ಮ ಕಪಿಯಂತೆ ಇರುವ ಆಕೃತಿ~
ಯದು. ಇಂದ್ರಿ ಎಂಬುದು ಲೆಮೂರಿನಂತೆ ಕಾಣಿಸುವ
ಒಂದು ಪ್ರಾಣಿ. ಅದು ವೃಕ್ಷಗಳಲ್ಲಿ ವಾಸಿಸುತ್ತಾ ಹಣ್ಣು,
ಹಂಪಲು, ಚಿಗುರು, ಎಲೆ, ತೊಗಟೆಗಳನ್ನು ತಿನ್ನುವ ಜಾತಿ.
ಮೆಡಗಾಸ್ಕರ ದ್ವೀಪದಲ್ಲಿ ವಾಸಿಸುವ ಇದು, ಅಲ್ಲಿನ
ಲೆಮೂರಗಳಲ್ಲೇ ಹಿರಿಯ ಜಾತಿ. ಇದರ ಶರೀರವು ಬಾಲ
ಸಹಿತ ಎರಡು ಅಡಿಗಳಿಗಿಂತ ಉದ್ದವಾಗಿದೆ. ಬಾಲ ಮಾತ್ರ
ಗಿಡ್ಡ; ಅದು ಒಂದು ಇಂಚಿನಷ್ಟೂ ಉದ್ದವಿಲ್ಲ. ಅಲ್ಲಿನ
ಜನರು ಇದನ್ನು ಮನುಷ್ಯ ವರ್ಗದ ಒಂದು ಪ್ರಾಣಿಯೆಂದೇ
ಭಾವಿಸುವುದುಂಟು.

ಮರಗಳಲ್ಲಿ ವಾಸಿಸುವ ಇವುಗಳು ಕೆಳಗಿಂದ
ಮೇಲಕ್ಕೆ ಮರಗಳನ್ನು ಅಪ್ಪಿ ಸರಿಯುವಂತೆ, ಕೆಳಗಿಂದ 
ಮೇಲಕ್ಕೆ ಕುಪ್ಪಳಿಸುತ್ತಾ ರೆಂಬೆ ಕೊಂಬೆಗಳನ್ನು ಹಿಡಿದು,
ಏರಿಯಾವು. ಅವುಗಳ ಕೈ ಮತ್ತು ಕಾಲುಗಳು ಉದ್ದ~
ವಾಗಿರುವುದರಿಂದ, ಅವು ಮನುಷ್ಯನ ಕುಲದವು ಎಂದು
ಆಫ್ರಿಕನರು ಭಾವಿಸಿದರೆ ಆಶ್ಚರ್ಯವಿಲ್ಲ.

ಈ ಮೆಡಗಾಸ್ಕರ ದ್ವೀಪ ಒಂದು ಕಾಲದಲ್ಲಿ
ಆಫ್ರಿಕಾ ಭೂಖಂಡದೊಡನಿದ್ದು ಅನಂತರ ಪ್ರತ್ಯೇಕಗೊಂಡ
ಒಂದು ದ್ವೀಪ. ಅದು ಉಷ್ಣವಲಯದ ಹವಾಮಾನವುಳ್ಳ
ಪ್ರದೇಶ. ಅಲ್ಲಿನ ದಟ್ಟವಾದ ಕಾಡುಗಳಲ್ಲಿ ಇಂದ್ರಿಗಳು
ವಾಸಿಸುತ್ತವೆ. ಅವು ಎರಡರಿಂದ ನಾಲ್ಕು ಸದಸ್ಯರ ಗುಂಪಿ~
ನಲ್ಲಿ ವಾಸಿಸುತ್ತವೆ. ಅವು ತಮ್ಮ ವಿಚಿತ್ರ ಕಿರಿಚು ಧ್ವನಿ~
ಯಿಂದ, ಬಹಳ ದೂರದ ಇತರ ಗುಂಪುಗಳೊಡನೆ
ಸಂಭಾಷಿಸುತ್ತವೆ. ತಾಯಿ ಇಂದ್ರಿ ಒಂದೇ ಒಂದು ಶಿಶು~
ವನ್ನು ಹೆತ್ತು, ಅದನ್ನು ಸದಾ ತಬ್ಬಿಕೊಂಡು ಸಂಚರಿಸು~
ತ್ತದೆ. ಅರಣ್ಯನಾಶವಾಗುತ್ತಿರುವ ಈ ದಿನಗಳಲ್ಲಿ ಈ
ಪ್ರಾಣಿ ಇಂದು ಹೇಳ ಹೆಸರಿಲ್ಲಾದಾಗುವ ಪರಿಸ್ಥಿತಿ ಬಂದಿದೆ.

ಇಂಪಾಲ (Impala): ಆಫ್ರಿಕಾ ಖಂಡದಲ್ಲಿ ಇರುವಷ್ಟು
ಎರಳೆಗಳ ಪ್ರಭೇದ ಜಗತ್ತಿನ ಇನ್ನೆಲ್ಲೂ ಇಲ್ಲ. ಅದೇ
ರೀತಿ, ಅಲ್ಲಿ ಇರುವ ಎರಳೆಗಳಲ್ಲಿ ಒಂದೆನಿಸುವ ಇಂಪಾಲ~
ದಷ್ಟು ಬಹು ಸಂಖ್ಯೆಯ ಎರಳೆಗಳು ಜಗತ್ತಿನ
ಇನ್ನೆಲ್ಲಿಯೂ ಇಲ್ಲ. ಇವುಗಳು ಮೂರೂ ಕಾಲು ಅಡಿ
ಎತ್ತರದ ಭುಜವುಳ್ಳ, ಕೆಂಚು ಮೈಬಣ್ಣದ ಪಶುಗಳು.
ಅವುಗಳ ಶರೀರದ ಮಗ್ಗುಲಿನ ಬಣ್ಣ ಕಪಿಲ ವರ್ಣ,
ಹೊಟ್ಟೆಯ ಬಣ್ಣ ಬಿಳಿದು. ಇವುಗಳಲ್ಲಿ ಗಂಡು ಎರಳೆ~
ಗಳಿಗೆ ಮಾತ್ರ ಜೋಡು ಕೊಂಬುಗಳು ಇರುತ್ತವೆ. ಹೆಣ್ಣು~
ಗಳಿಗೆ ಇಲ್ಲ. ಈ ಕೊಂಬುಗಳು ಎರಡು ಮೂರು ಅಡಿ
ಉದ್ದನೆಯವು. ಈ ಎರಡೂ ಕೊಂಬುಗಳು ಅದರ ನೆತ್ತಿ~
ಯಿಂದ ಮೂಡಿ, ಅಲ್ಲಿಂದ ಮೇಲಕ್ಕೆ ಏರಿ, ಅನಂತರ ಎಡ
ಬಲಕ್ಕೂ, ಹಿಂದಕ್ಕೂ ಚಾಚಿ, ತಿರುಗಿ ಮೇಲಕ್ಕೆ ಸರಿದು
ಒಂದರ ಕುಡಿ ಇನ್ನೊಂದಕ್ಕೆ ಇದಿರಾಗಿ ಕೊನೆಗೊಳ್ಳುತ್ತವೆ.
ಆ ಕೊಂಬುಗಳ ಉದ್ದಕ್ಕೂ ದೂರ ದೂರಕ್ಕೆ ಏಣುಳ್ಳ
ದುಂಡಾದ ದಂಡೆಗಳಿವೆ.

ಇವುಗಳ ವಿಹಾರಕ್ಷೇತ್ರವೆಂಬುದು ಉಗಾಂಡಾದ
ಉತ್ತರಕ್ಕಿರುವ ವಿಶಾಲ ಪ್ರದೇಶ. ಇವುಗಳ ಮಂದೆಗಳಲ್ಲಿ
ನೂರಾರು ಪಶುಗಳ ಹಿಂಡು ಕಲೆತು, ವಿಹರಿಸುತ್ತವೆ. ಮಳೆ
ಬೀಳುವ ಶ್ರಾಯ ಬಂದಾಗ ಈ ಮಂದೆಗಳು ಸಣ್ಣ ಸಣ್ಣ 
ಗುಂಪುಗಳಾಗಿ ಒಡೆಯುತ್ತವೆ. ಆಗ ಒಂದೊಂದು ಗಂಡು
ಇಂಪಾಲದ ಜತೆಗೂ ಅದರ ಯಾವತ್ತು ಪರಿವಾರ ಕಲೆಯು~
ತ್ತದೆ. ಆ ಗಂಡಿನ ಜತೆಗೆ ಹತ್ತಿಪ್ಪತ್ತು ಹೆಣ್ಣು ಇಂಪಾಲ~
ಗಳು ಕಲೆಯಬಹುದು. ಮಿಕ್ಕುಳಿದ ಯಾವತ್ತು ಗಂಡು
ಇಂಪಾಲಗಳು ತಮ್ಮದೇ ಆದ, ಇತರ ದೊಡ್ಡ ಗುಂಪು~
ಗಳಲ್ಲಿ ಸೇರಿ ವಿಹರಿಸುತ್ತವೆ.

ಒಂದು ಹಿಂಡಿನ ಯಜಮಾನ ಎರಳೆ ತನ್ನ
ಗುಂಪನ್ನು ನಡೆಯಿಸಿಕೊಂಡು ಹೋಗುವ ಚಂದವೇ ಚಂದ!
ಅದು ಹಿಂದೆ, ಮುಂದೆ ತನ್ನ ತಲೆಯನ್ನು ಕುಲುಕುತ್ತಾ,
ಆಗಾಗ ಧ್ವನಿ ಸಂರಕ್ಷಣೆಯ ಕೆಲಸ ಮಾಡುತ್ತದೆ. ಆದರ
ಅಧಿಕಾರಕ್ಕೆ ಬೇರೆ ಗಂಡುಗಳಿಂದ ಪ್ರತಿಸ್ಫರ್ಧೆ ಬಂದಾಗ,
ಜೀವದ ಹಂಗು ತೊರೆದು ಅದು ಕಾದಾಡೀತು.

ಉಡ (Monitor): ಇವುಗಳಲ್ಲಿ ಸಾಕಷ್ಟು ದೊಡ್ಡ
ಜಾತಿಗಳೂ ಇವೆ. ಉದ್ದನೆಯ ಶರೀರ ಮತ್ತು ಬಾಲವಿರುವ
ಇವುಗಳ ಮೈಯ ಮೇಲೆ ಒಂದು ತೆರನ ಹಿಣಿಜಿನ ಹೊದ್ದಿಕೆ
ಇದೆ. ಈ ಉಡಗಳು ತಮ್ಮ ಆಹಾರವನ್ನು ಹಾವಿನಂತೆ
ನುಂಗಬಲ್ಲವು. ಅವು ತಮ್ಮ ಸೀಳು ನಾಲಿಗೆಯನ್ನು
ಆಗಾಗ ಹೊರಕ್ಕೆ ಚಾಚುತ್ತಿರುತ್ತವೆ. ಇವುಗಳಲ್ಲಿನ ಅತಿ
-17-
ದೊಡ್ಡ ಜಾತಿಯ ಉಡ ಎಂಬುದು `ಕೊಮೊಡೋ'
ದ್ವೀಪದ 'ಡ್ರೇಗನು'. ಇವು ಬಯಲುಗಾವಲಲ್ಲೂ, ಮರು~
ಭೂಮಿಗಳಲ್ಲೂ ಅಲೆದಾಡುವಂತೆ, ನದಿಗಳಲ್ಲೂ ಈಜಿ,
ಅಲ್ಲಿನ ಮೀನುಗಳನ್ನು ತಿನ್ನಬಲ್ಲವು. ನ್ಯೂ ಗಿನಿಯ~
ದಂಥ ಉಷ್ಣವಲಯದ ಅರಣ್ಯಗಳಲ್ಲಿ ಉಡಗಳು ಮರಗಳ
ಮೇಲೆ ವಾಸಿಸುವುದುಂಟು. ಇತರ ಅನೇಕ ಕಡೆಗಳಲ್ಲಿ
ಅವು ನೆಲದಲ್ಲಿ ಬಿಲ ಕೊರೆದು ವಾಸಿಸಲೂ ಬಹುದು.
ನಮ್ಮವರು ದುರ್ಗಗಳನ್ನು ಏರಲೂ ಇವನ್ನು ಬಳಸು~
ತ್ತಿದ್ದರು.

ಇವುಗಳಲ್ಲಿ ತೀರ ಸಣ್ಣ ಜಾತಿಯವು ಕ್ರಿಮಿ,
ಕೀಟಗಳನ್ನು ಕೊಂದು ತಿಂದರೆ, ದೊಡ್ಡ ಜಾತಿಯವು
ಪಶುಪಕ್ಷಿಗಳನ್ನು ಹಿಡಿದು ತಿಂದಾವು. ಮೊಟ್ಟೆಗಳೆಂದರೂ
ಅವಕ್ಕೆ ಪ್ರೀತಿ. ಹೀಗಾಗಿ ನೈಲು ನದಿ ದಂಡೆಯ ಉಡಗಳು
ಅದೇ ನದಿಯಲ್ಲಿ ವಾಸಿಸುವ ಮೊಸಳೆಗಳು ಎಲ್ಲಿ ತಮ್ಮ
ತತ್ತಿಗಳನ್ನು ಕಾವಿಗೆ ಇರಿಸಿವೆ - ಎಂದು ಹುಡುಕಿ ಹೋಗಿ
ಅವನ್ನು ತಿಂದು ಮುಗಿಸುತ್ತವಂತೆ!

ಉಣ್ಣೀ, ಉಣುಗು (Ticks): ಇವು ಹೆಚ್ಚಾಗಿ ನಾಯಿ,
ದನಕರು, ಆಡು ಮೊದಲಾದ ತುಂಬ ಕೂದಲಿರುವ ಪಶುಗಳ
ಮೈಯನ್ನು ಸೇರಿ, ಅಲ್ಲಿಯೇ ವೃದ್ಧಿಗೊಂಡು, ಆಸರೆ
ಕೊಟ್ಟ ಪ್ರಾಣಿಯ ರಕ್ತವನ್ನು ಹೀರಿ ಬದಕುವ ಜೀವಿಗಳು.
ಇವುಗಳಲ್ಲಿ ವಿವಿಧ ತೆರನವು ಇವೆ. ಇವುಗಳ ಎದೆ
ಮತ್ತು ಹೊಟ್ಟೆ ಸೇರಿ ಜಿಗುಟಾದ ಸಣ್ಣ ಚೀಲದಂತೆ
ಕಾಣಿಸುತ್ತವೆ. ಪ್ರತ್ಯೇಕವಾದ ಶಿರಸ್ಸು ಇವಕ್ಕೆ ಇಲ್ಲದೆ
ಹೋದರೂ, ಕಚ್ಚಿ, ರಂಧ್ರವನ್ನು ಕೊರೆದು ಪರಪ್ರಾಣಿಯ
ರಕ್ತ ಹೀರಲು ಬೇಕಾದ ಎರಡು ದವಡೆಗಳು ಇದ್ದೇ ಇವೆ.
ತನ್ನ ದವಡೆಗಳಿಂದಲೇ ಅದು ತಾನು ವಾಸಿಸುತ್ತಿರುವ
ಪ್ರಾಣಿಯ ಮೈಯ ಚರ್ಮವನ್ನು ಕಚ್ಚಿಹಿಡಿದುಕೊಂಡರೆ,
ನಾವು ಅದನ್ನು ಬಲವಂತದಿಂದ ಕೀಳುವುದಕ್ಕೂ ಕಷ್ಟ~
ವಾದೀತು. ಇವುಗಳ ಶರೀರದ ಕವಚ ಚರ್ಮದಂತಿರುವ
ಮತ್ತು ಸಾಕಷ್ಟು ಹಿಗ್ಗ಼ಬಲ್ಲ, ಹೀರಿದ ರಕ್ತವನ್ನೆಲ್ಲ
ತುಂಬಿಸಿಕೊಳ್ಳಬಲ್ಲ ಒಂದು ಚೀಲ. ಆ ಚೀಲ ತುಂಬಿದ
ಬಳಿಕ ಆ ಉಣ್ಣಿ, ಕೆಲವೊಮ್ಮೆ ತನ್ನ ಸ್ಥಾನವನ್ನು
ಬಿಟ್ಟೀತು. ಅಲ್ಲಿಂದ ನೆಲದ ಮೇಲೋ, ಇನ್ನೆಲ್ಲೋ
ಬಿದ್ದು, ಮುಂದೆ ಅದೇ ಹಾದಿಯಾಗಿ ಸಾಗುವ ಬೇರೆ
ಪ್ರಾಣಿಗಳ ಶರೀರವನ್ನು ಏರಿ, ತಿರುಗಿ ಮೊದಲಿನ ಕೆಲಸವನ್ನೇ
ತೊಡಗೀತು. ಅದರ ಓಡಾಟಕ್ಕೆ ಬೇಕಾಗುವ ಆರು ಕಾಲು~
ಗಳು ಅವಕ್ಕಿವೆ. ಇವುಗಳಿಂದಾಗಿ ಅನೇಕ ರೋಗಕಾರಿ
ಜೀವಾಣುಗಳನ್ನು ಒಂದು ಪ್ರಾಣಿಯಂದ ಇನ್ನೊಂದಕ್ಕೆ
ಸಾಗಿಸುತ್ತವೆ. ಜಾನುವಾರುಗಳಲ್ಲಿ ಹಲವು ತೆರನ ಕಾಯಿಲೆ~
ಗಳು ಹಬ್ಬುವುದು ಇವುಗಳಿಂದಲೇ.

ಇತ್ತೀಚೆಗೆ ಕರ್ನಾಟಕದಲ್ಲಿ ಕಾಣಿಸಿಕೊಂಡ
ಮಂಗನ ಕಾಯಿಲೆ (ಕ್ಯಾಸನೂರು ಬೇನೆ) ಎಂಬುದು ಕಪಿ~
ಗಳಿಂದ ಮನುಷ್ಯನಿಗೆ ಹಬ್ಬುವುದು ಇವುಗಳಿಂದಲೇ ಎಂದು
ತಿಳಿದುಬಂದಿದೆ. ಇವು ತಮ್ಮ ಶರೀರದ ನೂರು ಪಾಲಷ್ಟು
ತೂಕ ಅನ್ಯ ಪ್ರಾಣಿಗಳ ರಕ್ತವನ್ನು ಹೀರಿ ಬೀಗ ಬಲ್ಲುವು.
ಇವುಗಳಲ್ಲಿ ಸುಮಾರು ಏಳು ನೂರರಷ್ಟು ಜಾತಿಗಳಿವೆ.
ಇವುಗಳ ಜೀವನ - ಅವು ಎಲ್ಲಾದರಲ್ಲಿ ಇರಿಸುವ
ಧೂಳಿನ ಕಣದಂತಿರುವ ತತ್ತಿಗಳಿಂದ ತೊಡಗುತ್ತಿದೆ.
ಮುಂದೆ ಅವಕ್ಕೆ ಕ್ರಿಮಿಯ ಅವಸ್ಥೆಯಿದೆ. ಅವು ಆರು
ಕಾಲಿನ ಕ್ರಿಮಿಗಳು. ಅದಕ್ಕಿಂತ ಮುಂದಣ ಕೋಶಾವಸ್ಥೆ
ಮತ್ತು ಕೀಟಾವಸ್ಥೆಗಳಲ್ಲಿ, ಅದು ನಾಲ್ಕು ಜತೆ ಕಾಲುಳ್ಳ,
ಸಂಚರಿಸಬಲ್ಲ ಒಂದು ಜೀವಿಯಾಗುತ್ತದೆ. ನಿಜಕ್ಕೂ
ಅವು ಸಂಚಾರಿ ಪೀಡೆಗಳು. ಅವುಗಳ ಪೀಡೆ ಕಾಡುಪ್ರಾಣಿ~
ಗಳಿಗೂ ತಪ್ಪಿದ್ದಲ್ಲ; ಅದರಂತೆ ಮನುಷ್ಯರ ಸಾಕುಪ್ರಾಣಿ~
ಗಳಿಗೂ ತಪ್ಪಿದ್ದಲ್ಲ.

ಉಣ್ಣೆ ಸೀಲು (Fur seal): ಕಡಲಿನ ಪಶುಗಳಲ್ಲಿ
ಸೀಲುಗಳ ಬಳಗ ಸಾಕಷ್ಟು ದೊಡ್ಡದು. ಅವು ಹಿಮ
ಬೀಳುವ ಕಡಲ ದ್ವೀಪಗಳ ದಂಡೆಗಳ್ಲಿ ಮಂದೆಯಾಗಿ
ಜೀವಿಸುವ ಪ್ರಾಣಿಗಳು. ಅವುಗಳ ಮೈಯ ರೋಮ ಬಲು
ನವಿರಾದದ್ದು. ಬಿಳಿ ಜನರ ಅಸೂಯೆಗೆ ಗುರಿಯಾದ ವಸ್ತು
ಅದು. ಆ ಉಣ್ಣೆದೊಗಲಿಗಾಗಿಯೇ ಸೀಲುಗಳನ್ನು
ಸಾಮೂಹಿಕವಾಗಿ ಕೊಂದು ಮುಗಿಸುವ ವ್ಯಾಪಾರ ಹಿಂದಿನ
ಕಾಲದಿಂದಲೂ ನಡೆದುಬಂದ ನಿರ್ದಯ ಬೇಟೆ ಎನಿಸಿದೆ.
ಸೀಲುಗಳ ಮೈ ಹೊದಿಕೆಯಲ್ಲೂ ವಿವಿಧ ತೆರನವು ಇವೆ.
ಅದರಲ್ಲಿ ಚರ್ಮಕ್ಕೆ ತಗಲಿ ಬೆಳೆ೟ುವ ಗಿಡ್ಡ ರೋಮಗಳಿವೆ.
ಅವು ದಟ್ಟವಾಗಿ ಬೆಳೆದರೆ ಅವುಗಳ ಎಡೆಯಿಂದಲೇ
ಮಿದುವಾದ ಮತ್ತು ನೀಳವಾದ ರೋಮಗಳು ದೂರದೂರಕ್ಕೆ
ಬೆಳೆಯುತ್ತವೆ. ಈ ಸೀಲುಗಳು ವಾಸಿಸುವಲ್ಲಿನ ಬಂಡೆಗಳಿಗೆ
-18-
ತಮ್ಮ ಮೈಗಳನ್ನು ಆಗಾಗ ಅರಚಿದಾಗ, ಅವುಗಳ
ಚರ್ಮಕ್ಕೆ ಯಾವ ಹಾನಿಯೂ ಆಗದಂತೆ ಈ ಉದ್ದ ರೋಮ~
ಗಳು ರಕ್ಷಿಸುತ್ತದೆ.

ಉಣ್ಣೆದೊಗಲಿರುವ ಈ ಸೀಲುಗಳು, ಮೊನಚು
ಮೂತಿಯವು. ಅವುಗಳ ಮೂತಿಯಲ್ಲಿ ಉದ್ದನೆಯ ಮೀಸೆ~
ಗೂದಲುಗಳಿವೆ. ಅವುಗಳ ಶರೀರ ಆರೇಳು ಅಡಿಗಳಷ್ಟು
ಉದ್ದವಾಗಿ ಬೆಳೆದೀತು. ಅವುಗಳ ಮೈಗೂದಲು ಕಡು~
ಗಂದು. ಅಲ್ಲಲ್ಲಿ ಬೂದು ಇಲ್ಲವೆ ಬಿಳಿದಾಗಿರಲೂ
ಬಹುದು. ಹೆಣ್ಣು ಸೀಲುಗಳು ಗಂಡುಗಳಿಗಿಂತ ಗಿಡ್ಡ
ಮತ್ತು ತೆಳ್ಳಗಿನ ಶರೀರದವು. ಈ ಜಾತಿಯವು ಬೇರಿಂಗದ
ಜಲ ಸಂದುವಿನ ಸಮೀಪದ ಕಡಲ ದಂಡೆಗಳಲ್ಲೂ,
ಅದರ ಆಚೀಚಿನ ಹಲವಾರು ದ್ವೀಪಗಳಲ್ಲೂ ವಾಸಿಸು~
ತ್ತವೆ. ಸೀಲುಗಳು ಆ ಜಲಸಂದುವಿನ ಆಚಿನ ಎಟ್ಲಾಂಟಿಕ್
ಸಾಗರದ ತೀರಗಳಿಗೂ, ಈಚಿಗಿರುವ ಶಾಂತ ಸಾಗರದ
ತೀರಗಳಿಗೂ ಆಗಾಗ ವಲಸೆಹೋಗುತ್ತವೆ.

ಇವು ವರ್ಷದ ನಿಯತ ಕಾಲದಲ್ಲಿ ಸಂತಾನ
ಪಡೆಯುವ ಸಲುವಾಗಿ ಸದಾ ಭೂಮಿಗೆ ಬಂದು ಸೇರುತ್ತವೆ.
ಆಗ ಅವುಗಳಲ್ಲಿ ಬಲಿಷ್ಟ ಗಂಡುಗಳ ಯೋಗ್ಯ ತಾವನ್ನು
ಬಂದು ಸೇರಿದವೆಂದರೆ, ಅವನ್ನು ಒಲಿದ ಹೆಣ್ಣುಸೀಲುಗಳು
ಅವನ್ನು ಕೂಡಿಕೊಂಡಾವು. ಅಂಥ ಒಂದು ಗಂಡು ಗೂಳಿ
ಸೀಲು ಐವತ್ತು, ಅರವತ್ತು ಅರಸಿಯರನ್ನು ಕೂಡಿಸಿಕೊಂಡು
ಅವುಗಳಿಂದ ಸಂತಾನ ಪಡೆದೀತು. ಎಳೆಯ ಪ್ರಾಯದ
ಗಂಡುಗಳಿಗೆ ತಾವು ಬೆಳೆದು ಬಲಿಷ್ಟ ದೇಹಿಗಳಾಗಿ,
ಪ್ರತಿಸ್ಪರ್ಧಿಗಳನ್ನು ಜಗಳದಲ್ಲಿ ಗೆಲ್ಲುವ ತನಕವೂ
ಮಕ್ಕಳ ತಂದೆಯಾಗುವ ಯೋಗವೇ ಇಲ್ಲ! ಅವಕ್ಕೆ ಅಂಥ
ಯೋಗ್ಯತೆ ಬರುವುದಕ್ಕೆ ಹತ್ತು ಹದಿನೆರಡು ವರ್ಷಗಳೇ
ಸಂದಾವು.

ಅವು ಸಂತಾನಕ್ಕಾಗಿ ಕಲೆತ ಆ ದ್ವೀಪವಾಸದ
ಅವಧಿಯಲ್ಲಿ ಒಂದೊಂದು ತಾಯಿಗೆ ಒಂದೊಂದು ಮರಿ
ಹುಟ್ಟೀತು. ಕಪ್ಪು ಮೈರೋಮ ಆ ಮರಿಗಳದ್ದು. ಅವು
ಹುಟ್ಟುವಾಗ ಎರಡು ಅಡಿ ಉದ್ದವಿದ್ದಾವು. ತಾಯಿ ಸೀಲು
ಮರಿಗಳ ಜತೆಯಲ್ಲಿದ್ದ ಆರಂಭದ ಒಂದು ವಾರವೆಲ್ಲ
ಮರಿಗಳಿಗೆ ಮೊಲೆಯೂಡುತ್ತ ಸಮೀಪವಿದ್ದರೂ, ಮುಂದೆ
ಅದು ತನ್ನ ಆಹಾರದ ಬೇಟೆಗಾಗಿ ಮರಿಗಳನ್ನು ಬಿಟ್ಟು
ಒಂದೊಂದು ದಿನ ಕಡಲಿಗೆ ಹೋದೀತು.

ಅದರ ಮರಿಗಳಿಗೆ ಒಂದು ತಿಂಗಳ ಪ್ರಾಯ
ಸಲ್ಲುತ್ತಲೇ ಅವು ನೀರಿಗಿಳಿದು ಆಟದಲ್ಲಿ ಸಮಯ ಕಳೆ~
ಯುತ್ತವೆ. ಸೀಲುಗಳ ಇಂಥ ಶಿಶುಗಾರದಲ್ಲಿ ಸಾವಿರಾರು
ಮರಿಗಳು ಒಮ್ಮೆಗೇ ಜನಿಸುವಾಗ, ಅವುಗಳ ತಾಯಿಗಳು
ತಂತಮ್ಮ ಮರಿಗಳನ್ನು ನಿತ್ಯವೂ ದೂರ ಸರಿದು ತಿರುಗಿ
ಸೇರಿಕೊಂಡ ವಿದ್ಯಮಾನ ಆಶ್ಚರ್ಯಕರವೇ ಸರಿ.

ಈ ಶಿಶುಗಾರಗಳು ಒಂದೊಂದು ಗುಂಪೂ, ತಿರು~
ತಿರುಗಿ ವರ಼್ಷಕ್ಕೊಮ್ಮೆ ಅದೇ ಸ್ಥಳಕ್ಕೆ ಬಂದು, ಕ಼ಲೆತು,
ಸಂತಾನ ಪಡೆಯುವ ತಾವು ಎಂಬುದನ್ನು ಮರೆಯಬಾರದು.

ದಕ್ಷಿಣ ಅಮೇರಿಕದ ದ್ವೀಪಗಳಲ್ಲಿ, ಆಫ್ರಿಕಾ
ಭೂಶಿರದ ಸಮೀಪ ಮತ್ತು ಆಸ್ಟ್ರೇಲಿಯ ಖಂಡದ ದಕ್ಷಿಣ
ಕರಾವಳಿಯಲ್ಲಿ ಉಣ್ಣೆದೊಗಲಿನ ಸೀಲುಗಳ ಬೇರೆ ತೆರನ
ಬಳಗಗಳೂ ಇವೆ.

ಉಬ್ಬುಗ, ಉಬ್ಬುಕೊಕ್ಕು (Puffin): ಇದು ಗಲ್ಲು,
ಆಕು ಮೊದಲಾದುವುಗಳಂತೆಯೇ ಕಡಲನ್ನು ವಿಶೇಷವಾಗಿ
ಆಶ್ರಯಿಸುವ ಉಬ್ಬು ಕೊಕ್ಕಿನ ಪಕ್ಷಿಜಾತಿ. ಇವುಗಳ
ಶರೀರ ಮೊಟಕು, ಬಾಲ ಗಿಡ್ಡ, ತಲೆ ದೊಡ್ಡದು. ತಲೆಯೇ
ಕೊಕ್ಕಾದಂತೆ ಉಬ್ಬಿಕಾಣಿಸುವ ಮೂತಿ ಅದರದು. ಇದರ
ಬಣ್ಣವೂ ವಿಚಿತ್ರವೇ! ಇದರ ಕಣ್ಣಿಂದ ತೊಡಗುವ
ಕನ್ನಡಕದ ಕಾಲುಗಳಂತಿರುವ ಕಪ್ಪು ಮತ್ತು ಬಿಳಿ ಗೆರೆ~
ಗಳು ಕಪೋಲದ ಮೇಲೆ ಹಾಯುತ್ತವೆ. ಇದರ ತಲೆ,
ಕತ್ತಿನ ಹಿಂದು ಮುಂದು, ಮತ್ತು ರೆಕ್ಕೆಗಳು ಬಾಲದ
ಕುಡಿಯ ತನಕವೂ ನೀಲಗಪ್ಪು ತುಪ್ಪಳ ಮತ್ತು ಗರಿ~
ಗಳಿಂದ ಆವೃತವಾದುವು. ಗಿಡ್ಡವಾದ ಅದರ ಬಾಲವನ್ನು
ರೆಕ್ಕೆಯ ಕುಡಿಗಳು ಮುಚ್ಚುತ್ತವೆ. ಅದರ ಎದೆಯ ಭಾಗ
ಬಿಳುಪು. ಇವುಗಳ ತಲೆಯ ಮುಂಗಡೆಯ ಕೊಕ್ಕು
ಚಪ್ಪಟೆಯೂ, ಅಗಲವೂ ಆದಂಥ, ಯಾವತ್ತು ಮುಖ~
ದಿಂದ ಮೂಡುವಂತೆ ಕಾಣಿಸುವ ಉಬ್ಬು ಕೊಕ್ಕು. ಆ
ಕೊಕ್ಕಿನ ಮುಂಭಾಗದ ಬಣ್ಣವು ಪಾಟಲ; ಹಿಂಭಾಗವು
ತುಪ್ಪಳದಿಂದ ಆವೃತವಾದ ನೀಲಿಗಪ್ಪು ಬಣ್ಣದ್ದು.

ಇವು ಸಾಮಾನ್ಯವಾಗಿ ಎಟ್ಲಾಂಟಿಕ್ ಸಾಗರದ
ತೀರಗಳಲ್ಲಿ ವಾಸಿಸುವಂಥ ಜಲಪಕ್ಷಿಗಳು. ಬೆದೆಗಾಲ~
ದಲ್ಲಿ ಇವುಗಳ ಕೊಕ್ಕು ಮತ್ತಷ್ಟು ಉಬ್ಬಿ ಕಾಣಿಸುತ್ತವೆಯಂತೆ.
-19-
ಆಗ ಅದರ ಮುಖದಲ್ಲಿ ಇನ್ನಿತರ ಬೆಡಗಿನ
ಲಕ್ಷಣಗಳೂ ಕಾಣಿಸುತ್ತವೆ. ನಮ್ಮ ನೋಟಕ್ಕೆ ಇವು
`ಕೋಡಂಗಿ'ಗಳಂತೆ ವಿಕಟವಾಗಿ ಕಾಣಿಸಿದರೂ, ಅವುಗಳ
ಒಲುಮೆಯ ಕೆಲಸಕ್ಕೆ ಈ ವಿಚಿತ್ರವಾದ ಆಕಾರ ಮತ್ತು
ಬಣ್ಣ, ಬೆಡಗುಗಳು ಬಲ ಮುಖ್ಯವಾಗುತ್ತವೆ.

ಕಡಲಿನಲ್ಲಿ ಈಜುತ್ತಿರುವಾಗ ಇವು ತಮಗೆ
ಇದಿರಾಗುವ ಮೀನುಗಳನ್ನು ಒಂದೊಂದಾಗಿ ಕೊಕ್ಕಿನಿಂದ
ಹಿಡಿಯುತ್ತ ಸಾಗುತ್ತವೆ. ಮೊದಲು ಹಿಡಿದ ಮೀನುಗಳು
ಯಾವುವೂ ಕೊಕ್ಕಿನಿಂದ ಕಳಚಿ ಬೀಳದಂತೆ ಮಾಡುವ,
ಹತ್ತಾರು ಮೀನುಗಳನ್ನು ಒಟ್ಟೊಟ್ಟಿಗ಼ೇ ಹಿಡಿಯಬಲ್ಲ
ಚಮತ್ಕಾರದ ರೀತಿ ಇವುಗಳದ್ದು. ಅವು ಮೊಟ್ಟೆಯಿರಿಸಿ,
ಮರಿಮಾಡುವ ಕಾಲದಲ್ಲಿ ಕಡಲತೀರದ ಉನ್ನತ ಗುಡ್ಡ~
ಗಳಲ್ಲಿ ಬೆಳೆದ ಹುಲ್ಲುಗಾವಲಲ್ಲಿ, ಅಥವಾ ಕಡಲ
ದೂರದ ಹಲವು ದ್ವೀಪಗಳಲ್ಲಿ ಸಾಮೂಹಿಕವಾಗಿ ನೆಲೆಸಿ,
ಅಲ್ಲಲ್ಲಿ ಕುಣಿಗಳನ್ನು ತೋಡಿಯೋ, ಅನ್ಯ ಪ್ರಾಣಿಗಳು
ಮಾಡಿದ ಕುಣಿಗಳಲ್ಲಿಯೋ ತಮ್ಮ ತತ್ತಿಯಿಡುತ್ತವೆ. ಅವು
ಇರಿಸುವ ತತ್ತಿ ಮಾತ್ರ ಒಂದೇ ಒಂದು. ಅದು ಸಾಕಷ್ಟು
ದೊಡ್ಡದು. ಅದಕ್ಕೆ ಕಾವನ್ನು ಕೊಡುವ ಕೆಲಸ ಹೆಣ್ಣು
ಹಕ್ಕಿಯದು. ಆ ತತ್ತಿ ಬಲಿತು, ಮರಿ ಹೊರಬಂದ ಬಳಿಕ
ಅದರ ತಂದೆತಾಯಿಗಳಿಬ್ಬರೂ ಅದನ್ನು ಸಾಕುವ ಹೊಣೆ
ವಹಿಸುತ್ತವೆ.

ಉಬ್ಬುಮೀನು (Puffer fish): ಉಷ್ಣವಲಯದ
ಕಡಲುಗಳಲ್ಲಿ ವಾಸಿಸುವಂಥ ಈ ಮೀನಿನ ಜಾತಿ, ತಮ್ಮ
ಶರೀರದೊಳಕ್ಕೆ ನೀರನ್ನು, ಗಾಳಿಯನ್ನೂ ಬೇಕಾದಾಗ
ಹೆಚ್ಚಿಸಿಕೊಂಡು, ತಮ್ಮ ಶರೀರದ ಗಾತ್ರವನ್ನು ಬೀಗಿಸಿ,
ತೋರಿಸಬಲ್ಲವು. ಇದು ನೋಟಕ್ಕೆ ಚಂದವಿಲ್ಲದ ಜಾತಿ;
ಅದರ ಎದೆಯ ಭಾಗದಷ್ಟೆ ದೊಡ್ಡದಾಗಿದ್ದು, ಮೂತಿ
ಮತ್ತು ಹಿಂಭಾಗಗಳು ಸಪೂರವಾಗಿರುತ್ತವೆ. ಇವುಗಳ
ಮೈಯಲ್ಲಿ ಹಿಣಿಜುಗಳಿರುವ ಬದಲು, ಮುಳ್ಳುಗಳಿರುತ್ತವೆ.

ಇವುಗಳ ಕೆಲವು ಜಾತಿಗಳು ಹಲವು ತೆರನ
ಬಣ್ಣಗಳನ್ನು ಹೊಮ್ಮುತ್ತವೆ. ಅವುಗಳ ಶರೀರದಲ್ಲಿ ವಿಷ~
ವಿದೆ. ಜನರು ಅವನ್ನು ತಿನ್ನುವುದು ತೀರ ಅಪಾಯಕರ
ಎನ್ನುತ್ತಾರೆ. ಅಷ್ಟಿದ್ದರೂ ಜಾಪಾನೀಯರು ಇವುಗಳ
ಮಾಂಸವನ್ನು ಬಹುವಾಗಿ ಮೆಚ್ಚುತ್ತಾರೆ.

ಉಭಯಚರಿಗಳು (Amphibian): ಈ ಹೆಸರನ್ನು
ಜಲ ಮತ್ತು ನೆಲಗಳೆರಡರಲ್ಲೂ ಚಲಿಸಬಲ್ಲ ಜೀವಿಗಳಿಗೆ
ಹೇಳುತ್ತಾರೆ. ಮೊದಲು ನೀರಲ್ಲಿ ಬಾಲ್ಯ ಕಳೆದು,
ಅನತಂರ ನೆಲದಲ್ಲಿ ವಾಸಿಸುವ ಪ್ರಾಣಿಗಳಿಗೂ ಇಂಥ
ಹೆಸರಿದೆ. ಇವು ಎಲುಬುಳ್ಳ ಮೀನು ಮತ್ತು ಉರಗಗಳ
ಜಾತಿಗೆ ಸೇರಿದವು. ಗೌಳಿ ಆಕಾರದ ಸಲಮಾಂಡರು ಇಂಥ
ಒಂದು ಜೀವಿ. ತೀರ ಆದಿ ಯುಗದಲ್ಲಿ ಇದೂ ಸಹ
ನೆಲದ ಪ್ರಾಣಿಯಾಗಿದ್ದು ಅನಂತರ ನೀರನ್ನು ಆಶ್ರಯಿಸಿತು
ಎನ್ನುತ್ತಾರೆ.

ನಮ್ಮೆಲ್ಲರಿಗೂ ಬಲು ಪರಿಚಿತವಾದ ಕಪ್ಪೆ ಈ
ಬಳಗದ್ದು. ಮೊಟ್ಟೆಗಳನ್ನಿರಿಸುವ ಅದರ ಹುಟ್ಟು ಮೊಟ್ಟೆ~
ಯಿಂದ ಆಯಿತು; ಆ ಮೊಟ್ಟೆ ಫಲಗೊಳ್ಳುವುದು
ಹೊರಗಿದ್ದಾಗ. ಆ ಮೊಟ್ಟೆ ಒಡೆದು ಹೊರಬರುವ ದೊಡ್ಡ
ತಲೆಯುಳ್ಳ ಅದರ ಮರಿ ಚೊಂದ ಕಪ್ಪೆಯೆನಿಸಿ ನೀರಲ್ಲಿ
ಜೀವಿಸುತ್ತದೆ. ಆ ಅವುಗಳ ಉಸಿರಾಟ ಟೊಳ್ಳೆಗಳಿಂದ;
ನೀರಲ್ಲಿರುವ ವಾಯುವನ್ನು ಹೀರಿ. ಮುಂದೆ ಅವಕ್ಕೆ ಕಾಲೂ
ಬರುತ್ತದೆ; ಕ್ರಮೇಣ ಅವುಗಳ ಟೊಳ್ಳೆ ಮಾಯವಾಗಿ
ಶ್ವಾಸಕೋಶವುಂಟಾಗುತ್ತದೆ. ಬಾಲ ಕಳಚುತ್ತದೆ. ಕಪ್ಪೆ~
ಗಳಿಗೆ ಧ್ವನಿ ಹೊರಡಿಸಬಲ್ಲ ಗಂಟಲೂ ಇರುತ್ತದೆ. ಬೆದೆ~
ಗಾಲಕ್ಕೆ ಹೆಣ್ಣು ಕಪ್ಪೆ ತನ್ನ ಕೂಗಿನಿಂದ ಗಂಡನ್ನು
ಸಮೀಪಕ್ಕೆ ಕರೆಯುತ್ತದೆ. ಅದರ ಕೂಗು ಹಗೆಗಳನ್ನು
ಬೆದರಿಸುವುದಕ್ಕೂ ಬೇಕು. ಕಪ್ಪೆಗಳು ನೀರು, ನೆಲಗಳನ್ನು
ಆಕ್ರಮಿಸಿದಂತೆ - ಮರಗಳನ್ನೇರಬಲ್ಲವು. ಗಾಳಿಯಲ್ಲಿ
ಜಿಗಿಯಬಲ್ಲವು.

ಉರಿಯಾಲು (Urial): ಉರಿಯಾಲುಗಳು ನಮ್ಮ ದೇಶದ
ಸಾಕು ಕುರಿಗಳ ಪೂರ್ವಜರು ಆಗಿದ್ದವು ಎಂಬ ನಂಬಿಕೆ~
ಯಿದೆ. ಆಕೃತಿಯಲ್ಲಿ ಇಂದಿನ ಊರಿನ ಕುರಿಗಳಿಗೂ,
ಅವಕ್ಕೂ ಹೆಚ್ಚಿನ ವ್ಯತ್ಯಾಸಗಳು ಕಂಡುಬರುತ್ತವೆ.
ಉರಿಯಾಲುಗಳನ್ನು `ಕೆಂಪು ಕುರಿ' ಎಂದು ಕರೆಯುವ~
ದಾದರೂ, ಕರ್ನಾಟಕದ ಜನರು ಕರೆಯುವಂಥ `ಕೆಮ್ಮೆ'
ಬೇರೆಯೇ ಜಾತಿಯ ಒಂದು ಮೃಗ. ಅದು ಎರಳೆ. ಅದಕ್ಕೆ
ಕುರಿಯ ಹೋಲುಮೆಯೇ ಇಲ್ಲ.

ಉರಿಯಾಲುಗಳು ಹರಿಣಗಳಂತೆ ಉದ್ದನೆಯ
ಕಾಲುಳ್ಳವು; ಅವುಗಳ ಹೊಟ್ಟೆ ಮತ್ತು ಕಾಲುಗಳ ರೋಮ
ಬಿಳುಪು. ಅವು ತಮ್ಮ ಕತ್ತನ್ನು ಎತ್ತಿ ಹಿಡಿಯುವ ಜಾತಿ.
ಇವುಗಳ ಕೊಂಬುಗಳು ಕುರಿಗಳ ಕೊಂಬಿಗಿಂತಲೂ ಬಲು
ದೊಡ್ಡ; ಅವು ಹಿಂಬಾಗಿನ ಸುರುಟಿ ಕೊಂಬುಗಳು.
ಇವಕ್ಕೆ ಕೊರಳ ಮುಂಗಡೆ ಜೋಲುವ ಕೂದಲಿನ ರಾಶಿ~
ಯಿದೆ. ಈ ಜಾತಿಯ ಪಶುಗಳು ಇಂದು ಪಾಕಿಸ್ತಾನದ
-20-
ಹಲವು ಪ್ರಾಂತಗಳ ಬಲು ಎತ್ತರದ ಗುಡ್ಡಗಾಡುಗಳಲ್ಲಿ
ವಾಸಿಸುತ್ತವೆ. ಅವುಗಳಲ್ಲಿ ಗಂಡು ಮತ್ತು ಹೆಣ್ಣು~
ಗಳೆರಡಕ್ಕೂ ಹೆಗ್ಗೊಂಬುಗಳಿವೆ. ಇವು ಸಾಕಷ್ಟು ದೊಡ್ಡ
ಮಂದೆಯಾಗಿ ವಾಸಿಸುವುದಲ್ಲದೆ, ಸಂಜೆ, ಮುಂಜಾನೆಗಳ
ಹೊತ್ತು ಮೇವನ್ನು ಅರಸುತ್ತಾ ಅಲೆಯುತ್ತವೆ. ನಡು~
ಹಗಲೆಲ್ಲ ತಂಪಾದ ಒಂದು ಸ್ಥಳವನ್ನು ಆರಿಸಿ, ಅಲ್ಲಿ
ವಿರಮಿಸುತ್ತವೆ. ಇವುಗಳ ಮರಿಗಳು, ಹುಟ್ಟಿದ ಮರು~
ಗಳಿಗೆಯಿಂದಲೇ ತಾಯಿಯ ಬೆಂಗಡೆ ಅಲೆದಾಡಲು
ಸಮರ್ಧವಾಗುತ್ತವೆ.

ಉಲ್ಲಂಗಿ (Snipe): ಸಾಮಾನ್ಯವಾಗಿ ಕೊಳ ಮತ್ತು
ಸರೋವರಗಳ ತಡಿಗಳಲ್ಲಿ ವಾಸಿಸುವ ಈ ಹಕ್ಕಿಯ ಮೈಯ
ಗರಿಗಳು ತರಕಲು ಬಣ್ಣದ ಗೌಜಲಿನಂತೆ ಕಾಣಿಸುತ್ತವೆ.
ಅದರ ಹೊಟ್ಟೆಯ ಗರಿಗಳ ಬಣ್ಣ ಬಿಳಿದು, ಮೈಯ
ಗರಿಗಳ ಬಣ್ಣ ಕಂದು, ಕಡುಪು ಹುಂಡುಗಳಿಂದ ಕೂಡಿ~
ದವು. ಅದರ ಬಾಲ ತೀರ ಗಿಡ್ಡ; ಕತ್ತು ಸಹ ಗಿಡ್ಡವೇ.
ಕೊಕ್ಕು ಮಾತ್ರ ತೀರ ಉದ್ದವಾಗಿರುವುದಲ್ಲದೆ, ಆಚೀಚೆ
ಬಾಗಬಲ್ಲಷ್ಟು ಮಿದುವಾದುದು. ಇವುಗಳ ಮೈಯ
ಗರಿಗಳು ಒತ್ತೊತ್ತಾಗಿರದೆ ಕೆದರಿಕೊಂಡಂತೆ ಕಾಣಿಸುತ್ತವೆ.
ಅವು ಸದ್ದುಮಾಡದೆಯೇ ಅಲ್ಲಿ, ಇಲ್ಲಿ ಆಹಾರ
ಮೇಯುತ್ತಾ ಇರುವಾಗ, ಯಾರಾದರೂ ತೀರ ಸಮೀಪ
ಬರುವ ತನಕವೂ ತಟಸ್ಥವಾಗಿದ್ದು, ತಮ್ಮ ಅಸ್ತಿತ್ವವನ್ನು
ಮರೆಯಿಸುತ್ತವೆ. ಆದರೆ ತೀರ ಹತ್ತಿರಕ್ಕೆ ಇನ್ನೊಂದು
ಪ್ರಾಣಿ ಬಂದಾಗ, ಥಟ್ಟನೆ ಅಂತರಿಕ್ಷಕ್ಕೆ ನೆಗೆದು, ಹಗೆಗೆ
ಸಿಗದ ತೆರನಲ್ಲಿ, ಅಂಕುಡೊಂಕಾಗಿ ಹಾರತೊಡಗುತ್ತದೆ.
ಇದು ತನ್ನ ಬಾಲದ ಗರಿಗಳಲ್ಲಿ, ಎರಡನ್ನು ಮಾತ್ರ ಅಲು~
ಗಿಸಿ, ಮದ್ದಲೆಯ ಬಡಿತದಂತೆ ಅನುರಣಿಸುವ ಧ್ವನಿಯನ್ನು
ಹೊರಡಿಸಬಲ್ಲದು.

ಉಷ್ಟ್ರ ಪಕ್ಷಿ (Ostrich): ಇದು ಪೂರ್ವ ಮತ್ತು
ನೈಋತ್ಯ ಆಫ್ರಿಕದ ಹಲವಾರು ಕಡೆ ವಾಸಿಸುವ ಪಕ್ಷಿಜಾತಿ,
ಹಾರಲಾರದ ಪಕ್ಷಿಗಳಲ್ಲೇ ದೈತ್ಯ ಜಾತಿ ಇದು. ಇಂದು
ದ. ಅಮೇರಿಕದಲ್ಲಿ ಮತ್ತು ಆಸ್ಟ್ರೇಲಿಯಾಗಳಲ್ಲಿ ಈ ತೆರನ
ರೀ, ಕಸೋವಾರಿ, ಎಮು ಮೊದಲಾದ ಕೆಲವೇ ದೈತ್ಯ
ಪಕ್ಷಿಗಳ ಕುಲ ಉಳಿದಿದೆ. ಹಾರಲಾರದ ಇವು ನೆಲದ
ಮೇಲೆಯೇ ಓಡಾಡಿಕೊಂಡಿರುವ ಜಾತಿಗಳು. ಇವುಗಳಲ್ಲೇ
ಉಷ್ಟ್ರಪಕ್ಷಿಯು ಬಲು ನೀಳ ಕತ್ತಿನ, ಅತಿ ಎತ್ತರದ ಜಾತಿ.
ಗಂಡು ಉಷ್ಟ್ರಪಕ್ಷಿ ತನ್ನ ಕತ್ತೆತ್ತಿ ನಿಂತರೆ ಎಂಟು ಅಡಿ
ಎತ್ತರವಾದೀತು. ಅವುಗಳಲ್ಲಿ ಪಕ್ಷಿಗಳ ಗರಿ ಮತ್ತು
ರೆಕ್ಕೆಗಳ ಬಣ್ಣ ಕಂದು ಇದ್ದರೆ, ಗಂಡು ಪಕ್ಷಿಗಳ ರೆಕ್ಕೆ
ಮತ್ತು ಬಾಲದ ಗರಿಗಳು ಕಪ್ಪು ಮತ್ತು ಬಿಳಿ ಬಣ್ಣದವು.
ಅದರ ಕತ್ತು, ತಲೆ ಮತ್ತು ಕಾಲುಗಳಲ್ಲಿ ಕೂದಲು ತೀರ
ವಿರಳವಿರುವುದರಿಂದ ಕಾಲಿನ ಚರ್ಮದ ಪಾಟಲ ವರ್ಣವು
ಪ್ರಧಾನವಾಗಿ ಕಾಣಿಸುತ್ತದೆ. ಹೆಣ್ಣು ಹಕ್ಕಿ ಗಂಡಿಗಿಂತ
ಕಿರಿದು. ಇವುಗಳ ಪಾದದಲ್ಲಿರುವ ಮೂರು ಬೆರಳುಗಳಲ್ಲಿ
ಮೂರನೆಯ ಬೆರಳು ದೊಡ್ಡದು; ಉಳಿದೆರಡು ಬೆರಳುಗಳು
ಚಿಕ್ಕವು. ಇವು ಹೆಚ್ಚಾಗಿ ಸಸ್ಯಾಹಾರಿಗಳಾದರೂ, ಇವು
ವಾಸಿಸುವ ಮರುಭೂಮಿಯಲ್ಲಿ ಅದೊಂದರಿಂದಲೇ ಅವು
ಬದುಕಲಾರವು. ಹೀಗಾಗಿ ಅವು ಇತರ ಸಣ್ಣ ಪುಟ್ಟ
ಜೀವಿಗಳನ್ನು ಕೊಂದು ತಿನ್ನುತ್ತವೆ. ಇವುಗಳಲ್ಲಿ ಹೆಚ್ಚಿನ
ಪಕ್ಷಿಗಳಲ್ಲಿರುವಂತೆ ಗಂಡು ಹೆಣ್ಣುಗಳಲ್ಲಿ ದಾಂಪತ್ಯ
ಸಂಬಂಧವಿಲ್ಲ. ಅವು ತಮ್ಮ ಆಹಾರದ ಜತೆಯಲ್ಲಿ,
ನಮ್ಮ ಊರಿನ ವಿವಿಧ ಕೋಳಿಗಳಂತೆ, ಕಲ್ಲು ಮತ್ತು
ಹರಳುಗಳನ್ನೂ ಕಬಳಿಸುತ್ತವೆ. ಆಹಾರ ಪಚನವಾಗಲು
ಅವು ಬೇಕು.
-21-

ಗಬ್ಬದ ಹೆಣ್ಣು ಉಷ್ಟ್ರಪಕ್ಷಿಯು ತನ್ನೆಲ್ಲ
ತತ್ತಿಗಳನ್ನು ಮರಳಿನಲ್ಲಿ ತೋಡಿದ ಹೊಂಡವೊಂದರಲ್ಲಿ
ಕಲೆಯಹಾಕುತ್ತದೆ. ಒಂದೊಂದು ಹೆಣ್ಣು ಉಷ್ಟ್ರಪಕ್ಷಿ
15 ರಿಂದ 60ರಷ್ಟು ತತ್ತಿಗಳ ತನಕ ಇರಿಸಿದ್ದುಂಟು. ಈ
ತತ್ತಿಗಳು ಮಾತ್ರ ಆರು ಇಂಚು ಉದ್ದ, ಐದು ಇಂಚು
ದಪ್ಪದವು!

ಉಷ್ಟ್ರಪಕ್ಷಿಗಳ ಮೈಯ ಗರಿಗಳಿಗೆ ವಿದೇಶದ
ಮಹಿಳೆಯರ ಗಿರಾಕಿ ಇರುವುದರಿಂದ ಆಫ್ರಿಕಾ ಖಂಡದಲ್ಲಿ
ಅವನ್ನು ಖಾಸಗಿಯಾಗಿ ಸಾಕಿ ಅವುಗಳ ಸಂತಾನ ಪಡೆ~
ಯುವ ಉದ್ಯಮವೂ ಬೆಳೆದಿದೆ. ಹಿಂದಿನ ದಿನಗಳಲ್ಲಿ
ದಕ್ಷಿಣ ಆಫ್ರಿಕಾದ ಜನರು ಏಳು ಲಕ್ಷ ಪಕ್ಷಿಗಳನ್ನು
ಸಾಕುತ್ತಿದ್ದ ಕಾಲವಿತ್ತು. ವಿದೇಶಗಳಲ್ಲಿ ಅವುಗಳ
ಚರ್ಮಕ್ಕೂ ವಿಶೇಷ ಗಿರಾಕಿ ಇದೆ. ಆದರೆ ಇಂದು ಈ
ಉದ್ಯಮ ಅಷ್ಟೊಂದು ಸಂಪನ್ನವಾಗಿ ಉಳಿದಿಲ್ಲ.

ಉಂಗುರ ಕತ್ತಿನ ಪಾರಿವಾಳ, `ಹಲಸಿನ ಹಕ್ಕಿ'
(Ring dove): ನಮ್ಮ ನಾಡಿನ ಬೂದು ನೀಲ ಕಾಡು
ಪಾರಿವಾಳಗಳಿಗಿಂತಲೂ ಇವು ಚಿಕ್ಕವು. ಅವಕ್ಕಿಂತಲೂ
ಸಪೂರ ಶರೀರದವು. ಹಿಂದೆ ಇವು ಯುರೋಪಿನಲ್ಲಿ
ಇದ್ದಿರಲಿಲ್ಲ. ಕಳೆದ ಶತಮಾನದಲ್ಲಷ್ಟೆ ತುರ್ಕಿ ದೇಶದ
ಮಾರ್ಗವಾಗಿ ಇವು ಭಾರತ ದೇಶದಿಂದ ಯುರೋಪಿನ ತನಕ
ಹಬ್ಬಿದವು ಎನ್ನುತ್ತಾರೆ. ಇವುಗಳ ಉದ್ದ 10-11
ಇಂಚು ಇದ್ದೀತು. ಮೈಬಣ್ಣ ಬೂದು ಮಿಶ್ರವಾದ ಕಪಿಲ
ವರ್ಣ. ಇವುಗಳ ಕೊರಳಲ್ಲಿ ಉಂಗುರದಂತಹ ಕಪ್ಪು
ಪಟ್ಟಿಯಿದೆ. (ಗಿಳಿಗ಼ಳಿಗೆ ಕೆಂಪು ಕೊರಳ ಪಟ್ಟಿ ಇರುವಂತೆ)
ಇವು ಅತಿಶಯ ವೇಗದಿಂದ ಹಾರಬಲ್ಲವು.

ಭಾರತ ದೇಶ ಇವುಗಳ ಜನ್ಮಭೂಮಿ ಇರ~
ಬಹುದು ಎನ್ನುತ್ತಾರೆ. ಈಚಿನ ವರ್ಷಗಳಲ್ಲಿ ಜಾಪಾ಩ು,
ಚೀನಾ, ಯೂರೋಪುಗಳಲ್ಲಿ ಇವುಗಳ ಕುಲ ಹಬ್ಬಿದೆ.
1815ರಲ್ಲಿ ಇದು ಮೊದಲಬಾರಿಗೆ ಯುರೋಪಿನ
ಬಲ್ಗೇರಿಯಾದಲ್ಲಿ ಕಾಣಿಸಿದ್ದರೆ, 1912ರಲ್ಲಿ ಹಂಗೇರಿ ದೇಶ~
ದಲ್ಲಿ ಕಾಣಿಸಿತು. 1955ರಲ್ಲಿ ಅದು ಫ್ರಾನ್ಸ್ ದೇಶ~
ದಲ್ಲೂ, 1958ರಲ್ಲಿ ಬ್ರಿಟಿಷ್ ದ್ವೀಪಗಳಲ್ಲೂ ಕಾಣಿಸ~
ತೊಡಗಿತು. ಹಾಗೆಂದರೆ ಅದರ ಪೀಳಿಗೆ ವಿವಿಧ ದೇಶಗಳ
ಹವಾಮಾನ ವ್ಯತ್ಯಾಸದ ಲಕ್ಷ್ಯವಿಲ್ಲದೆಯೇ ಹಬ್ಬಿದಂತೆ.

ಉಂಬಾಟು (Wombat): ಇದು ಆಸ್ಟ್ರೇಲಿಯ ಖಂಡಕ್ಕೆ
ಸೀಮಿತವಾದ ಶಿಶುಕೋಶಿ ಪಶುಗಳಲ್ಲಿ ಒಂದು. ಕರಡಿಯ
ಆಕಾರದ ಈ ಜೀವಿ ನಾಲ್ಕು ಅಡಿಗಳಷ್ಟು ಉದ್ದವಾಗಿದೆ,
ಅದು ಚತುಷ್ಪಾದಿ. ಅದರ ಒಂದೊಂದು ಗಿಡ್ಡ ಕಾಲಲ್ಲೂ
ಐದೈದು ಬೆರಳುಗಳು ಇವೆ. ಈ ಪ್ರಾಣಿಗೆ ಬಾಲವೂ ಇದೆ.
ಇವುಗಳ ಬಾಯಿಯಲ್ಲಿ ಇಲಿ, ಮೊಲಗಳಿಗೆ ಇರುವ ತೆರನ
ಉಳಿ ಹಲ್ಲುಗಳ ಜತೆಗಳಿವೆ. ಅದರ ಯಾವತ್ತು ಹಲ್ಲು~
ಗಳೂ ದವಡೆಯ ಎಲುಬಿಂದ ಮೊಳೆಯುವಂಥ ಹಲ್ಲುಗಳು.
ಅವು ಅದರ ಜೀವಮಾನದಲ್ಲಿ ಸದಾ ಬೆಳೆಯುತ್ತಲೇ
ಹೋಗುವ ಹಲ್ಲುಗಳು. ಈ ರಾತ್ರಿಚರ ಪ್ರಾಣಿಗಳು ಸಸ್ಯಾ~
ಹಾರಿಗಳು. ಹುಲ್ಲು, ಗಡ್ಡೆಗೆಣಸು ಮೊದಲಾದುವು ಅವು~
ಗಳ ಆಹಾರ.

ಊಳಿಡುವ ಮಂಗ (Howler monkey): ಈ
ಕಪಿಗಳನ್ನು ಪ್ರದರ್ಶಿಸುವ ಯಾವುದೇ ಮೃಗಾಲಯಗಳನ್ನು
ಸಂದರ್ಶಿಸುವ ಮೊದಲೇ, ಅವಿರುವ ಕಡೆಯಿಂದ ಎಷ್ಟೋ
ಬಾರಿ ಕೊನೆಮೊದಲಿಲ್ಲದ ಗೋಳು ಕೇಳಿಸುವುದುಂಟು.
ಹಾಗೆ ವಿರತಿಯಿಲ್ಲದೆ ಒಂದೇ ಸವನೆ ಊಳಿಡುವ ಪ್ರಾಣಿ~
ಗಳು ಆ ಮೃಗಾಲಯದವರು ತಂದಿರಿಸಿದ ಒಂದು ಜಾತಿ
ಕಪಿಗಳು. ದಕ್ಷಿಣ ಅಮೇರಿಕ ಖಂಡದ ಅರಣ್ಯಗಳಲ್ಲಿರುವ
ಈ ಕಪಿಯು ಗಟ್ಟಿಮುಟ್ಟಾದ ಕೈ ಮೈಗಳುಳ್ಳ, ಬಲಿಷ್ಟ
ಶರೀರ ಮತ್ತು ಮುಖದ ಸುತ್ತಲೂ ಗಡ್ಡವಿರುವ ಒಂದು
ಜಾತಿ. ಅದಕ್ಕೆ ಉದ್ದನೆಯ ಬಾಲವಿದೆ. ಆ ಬಾಲದ
ಕುಡಿಯು ರೋಮ ರಹಿತವಾಗಿದೆ. ಆ ಬಾಲವನ್ನು ಅದು
ಕೊಂಬೆ ರೆಂಬೆಗಳಿಗೆ ಸುತ್ತಿ, ಬಾಲದಿಂದ ಜೋತಾಡ~
ಬಲ್ಲದು. ಈ ಕಪಿಗಳಿಗೆ ಒಂಟಿಯಾಗಿ ಕೆಲಸಮಾಡಬಲ್ಲ
ಹೆಬ್ಬೆರುಳುಗಳಿವೆ.

ಈ ಕಪಿಗಳ ಬೊಬ್ಬೆಯು ಸುಪ್ರಸಿದ್ದ. ಅದು
ಮೂರು ಮೈಲುಗಳ ದೂರದಿಂದ ಕೇಳಿಸುವ ಘರ್ಜನೆ. ಈ
ಕಪಿಯ ಮುಖದಲ್ಲಿರುವ ಕೆಳ ದವಡೆ ದೊಡ್ಡದು. ಅದು
-22-
ನಾಲಿಗೆಯ ಬುಡದಲ್ಲಿರುವ ಸ್ವರ ಹೊರಡಿಸುವ ಧ್ವನಿ
ಪಟ್ಟಿಗೆಯಷ್ಟೇ ದೊಡ್ಡದು! ಅದು ಹೊರಡಿಸುವ
ಧ್ವನಿಯು ವಿಶೇಷ ದೂರಕ್ಕೆ ಕೇಳಿಸುವ, ಕಿವಿಗಡಚುವಂಥ
ಕರ್ಕಶ ಬೊಬ್ಬೆ.

ಈ ಸ್ವಭಾವದ ಮಂಗಗಳಲ್ಲಿ ಎರಡು ಜಾತಿ~
ಗಳಿವೆ. ಒಂದು ಜಾತಿಯ ಕಪಿಯ ಮೈ ರೋಮ ಕಂದು
ಇಲ್ಲವೆ ಕಪ್ಪಾಗಿದ್ದರೆ, ಇನ್ನೊಂದರ ಮೈ ರೋಮ ಕೆಂಚು!
ಅವುಗಳ ಒಂದೊಂದು ಹಿಂಡಿನಲ್ಲಿಯೂ ಹತ್ತಿಪ್ಪತ್ತು
ಮಂಗಗಳಿರುವುದು ರೂಢಿ. ಅವುಗಳ ವಾಸ ಹೆಚ್ಚಾಗಿ
ಮರದ ಮೇಲೆಯೇ. ಅವು ವಿರಾಮ ಗತಿಯಿಂದ ನಾಲ್ಕೂ
ಕಾಲೂರಿ ನಡೆಯುತ್ತಲೋ, ಕೈಗಳಿಂದ ಜೋತಾಡಿ
ಕುಪ್ಪಳಿಸುತ್ತಲೋ, ಮೆಲುಗತಿಯಿಂದ ಸಂಚರಿಸುವುದು
ಅವುಗಳ ಅಭ್ಯಾಸ. ರಾತ್ರಿ ಕಾಲದಲ್ಲಿ ಮರಗಳ ಮೇಲೆ
ನಿದ್ರಿಸಿ, ಬೆಳಗಿನ ಹೊತ್ತಿಗೆ ಅವುಗಳ ಗುಂಪು ಆಹಾರ
ಸಂಪಾದನೆಗೆ ಹೊರಟಿತಾದರೆ, ಗುಂಪಿನ ಯಜಮಾನ ಮಂಗ
(ಗಂಡು), ಹೊರಡುವ ಮುಂಚೆ ಗಟ್ಟಿಯಾಗಿ ಊಳಿಡುತ್ತವೆ.
ಅಲ಼್ಲಿ ಪರರ ಆಕ್ರಮಣವನ್ನು ಅವು ಸಹಿಸಲಾರವು.
ಹೀಗಾಗಿ, ಒಂದು ಮಂಗದ ಪಡೆ ನೆರೆಕರೆಯ ಪಡೆಗೆ
ಇದಿರಾದೊಡನೆಯೇ, ಪರಸ್ಪರ ಹಕ್ಕು ಸ್ಥಾಪನೆಯ ಕಾಳಗ
ತೊಡಗ಼ೀತು. ಆ ಕಾಳಗ ಹೆಚ್ಚಾಗಿ ಬರಿದೆ ಊಳಿಡುವ
ಸ್ಪರ್ಧೆ! ಮೇಲಿಂದ ಮೇಲೆ ಗಂಟಲು ಬಿರಿಯುವ ತನಕವೂ
ಬೊಬ್ಬರಿಯುವ ಕೆಲಸ ಅದು. ಅಷ್ಟಕ್ಕೇ ಹಗೆಯ
ಆಕ್ರಮಣ ನಿಂತು, ತಮ್ಮ ತಮ್ಮ ಕ್ಷೇತ್ರದಲ್ಲಿ ಅವು
ಮೇಯ ತೊಡುಗ಼ುತ್ತವೆ. ಎರಡು ಗುಂಪುಗಳೊಳಗೆ ಹೊಯ್
ಕೈ ಸಂಭವಿಸುವುದು ತೀರ ವಿರಳ ಎನ್ನುತ್ತಾರೆ.

ಎಕಿಡ್ನಾ (Echidna): ನೋಡು- ಮುಳ್ಳಂಗಿ, ಶಿಶು
ಕೋಶಿ. ಇವು ಮೈಮೇಲೆ ಮುಳ್ಳುಗಳ ಕವಚವುಳ್ಳ ಗೆದ್ದಲು
ಬಾಕಗಳು. ಇವುಗಳ ದೇಹದ ಆಕೃತಿ ನಮ್ಮ ದೇಶದ
ಮುಳ್ಳಿಲಿ (hedge hog)ಗಳಂತಿದೆ. ಇದು ಆಸ್ಟ್ರೇಲಿಯ
ಖಂಡಕ್ಕೆ ಸೀಮಿತವಾದ ಒಂದು ಪ್ರಾಣಿ ಜಾತಿ. ಅಲ್ಲಿನ
ಎದೆಯ ಕೋಶದಲ್ಲಿ ಇರಿಸಿಕೊಂಡು, ಅವು ಸಂಪೂರ್ಣ
ಬೆಳೆದ ಬಳಿಕವೇ ಮರಿಯನ್ನು ಹೊರಕ್ಕೆ ಬಿಡುವ ಜಾತಿ.
ಎಕಿಡ್ನಾಕ್ಕೆ ಬಾಯಿಯಲ್ಲಿ ಹಲ್ಲುಗಳಿಲ್ಲ. ಅದು ತನ್ನ
ಬಾಯಿಯ ಬೆಂಗಡೆ ಇರುವ ಒಂದು ನೀಳ ನಾಳದಿಂದ
ಗೆದ್ದಲುಗಳನ್ನು ಹೀರುತ್ತದೆ.

ಇದು ತಮ್ಮ ಮೈಯ ಮುಳ್ಳುಗಳನ್ನು ನಿಮಿರಿಸಿ
ಕೊಂಡಾಗ - ಒಂದೂವರೆ ಅಡಿ ಉದ್ದ, ಮುಕ್ಕಾಲು ಅಡಿ
ದಪ್ಪವಾಗಿದ್ದು - ನಮ್ಮ ದೇಶದ ಮುಳ್ಳುಹಂದಿಯಂತೆ
ಕಾಣಿಸೀತು. ಇದರ ಕಾಲುಗಳು ಗಿಡ್ಡ ಮತ್ತು ಬಹು
ಬಲಿಷ್ಟ. ಅದರ ನಾಲ್ಕು ಪಾದಗಳ ಕೊನೆಯಲ್ಲಿ ಚಮಚೆ~
ಯಂತಿರುವ ಉಗುರುಗಳಿವೆ. ಅವುಗಳ ಕಾಲು ಮತ್ತು
ಚೋಟು ಮಣ್ಣನ್ನು ಅಗೆಯಲು, ಹುತ್ತಗಳನ್ನು ಕೆದಕಲು
ಅನುಕೂಲವಾದುವು.

ಅದು ತನ್ನ ಮೂತಿಯನ್ನು ನಳಿಗೆಯಂತೆ ಮಾಡಿ,
ಅದರ ಒಳಗಿಂದ ಸಪೂರವಾದೊಂದು ನಾಳವನ್ನು ಆರೇಳು
ಇಂಚು ಮುಂದಕ್ಕೆ ಚಾಚುತ್ತದೆ. ಆ ನಳಿಗೆಯಲ್ಲಿರುವ
ನಾಲಗೆಯ ಅಂಚಿಗೆ ಗೆದ್ದಲು, ಇರುವೆ ಮೊದಲಾದುವು
ಸಿಲುಕಿಬೀಳುತ್ತವೆ. ಈ ಪ್ರಾಣಿಗೆ ಹಲ್ಲಿಲ್ಲವಾದರೂ,
ಅದರ ಬಾಯಿಯ ಒಳಗಡೆ ಅರದಂತಿರುವ ದೊರಗಾದ
ಮಗ್ಗುಲುಗಳಿವೆ ತಾನು ತಿಂದುದನ್ನು ಅರಚಿದಾಗ, ಅದು
ಕಡೆದಂತಾಗುತ್ತದೆ.

ಅದರ ಇನ್ನೊಂದು ವಿಶೇಷವೆಂದರೆ - ಅದಕ್ಕೆ
ಮಲದ್ವಾರ ಮತ್ತು ಮೂತ್ರ ದ್ವಾರಗಳೆರಡೂ ಒಂದೇ.
ಇವು ಆಸ್ಟ್ರೇಲಿಯ ಖಂಡದ ಮರುಭೂಮಿಯಲ್ಲೂ, ದಟ್ಟ~
ವಾದ ಕಾಡುಗಳಲ್ಲೂ ಹಬ್ಬಿಕೊಂಡಿವೆ. ಅದೇ ರೀತಿ
ಕಡಲ ತೀರಗಳಲ್ಲೂ, ಹಿಮಪಾತವಾಗುವ ಉನ್ನತ ಬೆಟ್ಟ~
ಗಳಲ್ಲೂ ಬದುಕಿವೆ. ಅಂದರೆ, ಈ ಪ್ರಾಣಿಯ ಮುಳ್ಳು
ಕವಚ ಎಂಥ ಹವಾಮಾನಕ್ಕೂ ತಕ್ಕುದು-ಎಂದಂತಾಯಿತು.

ಇದು ತತ್ತಿಗಳನ್ನು ಇರಿಸುವ ಜಾತಿ; ಆ ತತ್ತಿ~
ಗಳು ಗರ್ಭದಲ್ಲಿದ್ದು 27 ದಿನಗಳಲ್ಲಿ ಹೊರಬಿದ್ದರೆ,
ಹೇಗೋ ಹೇಗೋ ಅವು ತಾಯಿಯ ಎದೆಯ ಕೋಶವನ್ನು
ಸೇರಿ, ಅಲ್ಲಿ ಕಾವನ್ನು ಪಡೆಯುತ್ತವೆ. ಅಲ್ಲೇ ಆ ತತ್ತಿ
ಬಲಿತು ಅದರಿಂದ ಒಂದು ದಿನ ಮರಿ ಹೊರಬಿತ್ತೆಂದರೆ,
ಮುಂದಿನ ಹಂತದಲ್ಲಿ ಆ ಮರಿ ತಾಯಿಯ ಮೊಲೆಗೆ
ಬಾಯಿಯಿಕ್ಕಿ ಹಾಲನ್ನು ಹೀರತೊಡಗುತ್ತದೆ.

ಆಸ್ಟ್ರೇಲಿಯದ ಉತ್ತರಕ್ಕಿರುವ ನ್ಯೂ ಗಿನಿಯ
ದ್ವೀಪದಲ್ಲಿ ಇದಕ್ಕಿಂತಲೂ ದೊಡ್ಡದಾದ ಇಂಥ ಗೆದ್ದಲು
ಬಾಕಗಳು ಜೀವಿಸುತ್ತವೆ. ಅವು ಮೂರು ಅಡಿಗಳಿಗಿಂತ
ಹೆಚ್ಚಿಗೆ ಎತ್ತರಕ್ಕೆ ಬೆಳೆದಾವು. ಅವುಗಳ ಮೂತಿ ಮತ್ತಷ್ಟು
ಉದ್ದವಾಗಿರುತ್ತದೆ.

ಎಮೀಬ (Amoebae): ಇದು ಒಂದೇ ಜೀವಕೋಶವುಳ್ಳ
ಸೂಕ್ಷ್ಮ ಜೀವಿ. ಇದು ತನ್ನ ಶರೀರದ ಆಕಾರವನ್ನು
ಬೇಕಾದಂತೆ ಮಾಡಿಕೊಳ್ಳಬಲ್ಲುದು. ದೇಹದ ಭಾಗವನ್ನು
-23-
ಬೆರಳಿನಂತೆ ಹೊರಚಾಚಿ, ಅದರ ನೆರವಿಂದ ಈಜಬಲ್ಲುದು,
ಅದರ ನೆರವಿಂದಲೇ ನೀರಿನ ಹೊರಗೆ ದೊರೆತ ಆಹಾರ
ಕಣಗಳನ್ನು ಬಾಚಿ ನುಂಗಬಲ್ಲುದು. ಅದರ ಶರೀರದ
ನಡುವೆ ಬೀಜದಂತಹ ಒಂದು ಪ್ರಧಾನ ಅಂಗ ಇದೆ.
ಇದರ ಅವಾಸ ತಿಳಿ ನೀರಿನ ಕೊಳಗಳಲ್ಲಿ. ಅದು ಕಣ್ಣಿಗೆ
ಕಾಣಿಸದಷ್ಟು ಸಣ್ಣದಾದ ಜೀವಿ ಅದು. ದೊಡ್ಡ ಒಂದು
ಬಿಂದುವಿನಂತೆ ಅದು ನಮ್ಮ ಕಣ್ಣಿಗೆ ಕಾಣಿಸೀತು. ಅದರ
ಒಂದು ದೇಹವೇ ಬೀಜದೊಡನೆ ಎರಡಾಗಿ, ಎರಡು
ಸಂಪೂರ್ಣ ಜೀವಿಗಳಾಗುವುದು ಅದರ ರೀತಿ. ಪರಿಸ್ಥಿತಿ
ಅನಾನುಕೂಲವಾದಾಗ, ನೀರು ಸಿಗದಾಗ, ಅದರ ಹೊರಗೆ
ಜಿಗುಟಾದ ಒಂದು ಕವಚ ಉಂಟಾಗಿ, ಅದು ದೀರ್ಘಕಾಲ
ಹಾಗೆಯೇ ಜಡವಾಗಿ ಉಳಿಯಬಹುದು. ಕೆಲವೊಮ್ಮೆ
ಅಂಥ ಎರಡೆರಡು ಜೀವಿಗಳ ಮಿಲನದಿಂದ ಮರಿಗಳೂ
ಹುಟ್ಟ ಬಹುದು. ಅತಿ ದೊಡ್ಡ ಎಮೀಬ 0.5 ಮಿ.ಮೀ.
ಗಾತ್ರವಿದ್ದೀತು. 1755ನೇ ಇಸವಿಯಷ್ಟು ಹಿಂದೆ ರೊಸೆಲ್
ಪಾನ್ ರೊಸೆನ್್ಹಾಫ್ ಎಂಬಾತ ಇದನ್ನು ಮೊದಲ ಬಾರಿ
ಗುರುತಿಸಿದ.

ಎತ್ತೆರಳೆ, ಹಾರ್ಟಬೀಸ್ಟು (Hartebeast): ಉತ್ತರ
ಆಫ್ರಿಕದ ಸೂಡಾನು, ಸೋಮಾಲಿಯು, ಎಬ್ಸೀನಿಯ ರಾಜ್ಯ~
ಗಳ ವಿಶಾಲ ಬಯಲುಗಾವಲುಗಳಲ್ಲೂ ಮತ್ತು ದಕ್ಷಿಣ
ಆಫ್ರಿಕದಲ್ಲೂ ವಾಸಿಸುವ ಎತ್ತು ಮತ್ತು ಎರಳೆಗಳ
ಸ್ವಮಿಶ್ರ ಸಂತಾನ ಇದು. ಇವು ಸೀಳು ಗೊರಸಿನ ಮೆಲು~
ಕಾಡುವ ಒಂದು ಗಣ್ಯ ಪಶು ವರ್ಗಕ್ಕೆ ಸೇರಿದ ಪಶುಗಳು.
ಇವುಗಳ ಭುಜ ನಾಲ್ಕೂವರೆ ಅಡಿ ಎತ್ತರ. ಅವುಗಳ
ಮುಂಗಾಲುಗಳಿಗಿಂತಲೂ ಹಿಂಗಾಲುಗಳು ತುಸು ಗಿಡ್ಡ~
ವಾದುದರಿಂದ, ಇವುಗಳ ನಿಲುವು ನಮ್ಮ ನಾಡಿನ
ನೀಲಗಾಯಿಯಂತಿರುತ್ತದೆ. ಇದರ ಮೂತಿ ಎರಳೆ ಮತ್ತು
ಎತ್ತುಗಳ ಸಮ್ಮಿಶ್ರ ತೆರನ ರೂಪ. ಅದರ ನೆತ್ತಿಯ
ಮೇಲಿನ ಕೊಂಬುಗಳು ಒಂದೇ ಪೀಠದಿಂದ ಹೊರಟ ಕ಼ವೆ~
ಗಳಂತೆ ಎರಡೂ ಮಗ್ಗುಲಿಗೆ ಸರಿದು, ಅನಂತರ ಬೆಂಗಡೆಗೆ
ಮೊನಚಾಗಿ ಬಾಗುತ್ತವೆ. ಉದರ ಬಾಲ ಎತ್ತಿನ ಬಾಲ~
ದಂತಿದ್ದು, ಕುಡಿಯಲ್ಲಿ ಕೂದಲುಗಳ ಗೊಂಚಲಿದೆ.

ಇವುಗಳಲ್ಲಿ ಮೂರೋ ನಾಲ್ಕೋ ಪ್ರಸಿದ್ಧ ಜಾತಿ~
ಗಳಿವೆ. ಅವುಗಳ ಮೈಬಣ್ಣ ಸ್ಥೂಲವಾಗಿ ಕೆಂಚು. ಕೆಲವು
ಪ್ರಾಂತಗಳಲ್ಲಿ ಕಂದು, ಕಪಿಲ ವರ್ಣಗಳ ಮೈ ಹೊದಿಕೆ~
ಯುಳ್ಳವೂ ಇವೆ. ಆಫ್ರಿಕಾದ ಸವಾನಾಗಳಲ್ಲೂ ಮತ್ತು
ಅಲ್ಲಿನ ಕುರುಚಲು ಕಾಡುಗಳಲ್ಲೂ ಅವು ಹುಲ್ಲು
ಮೇಯುತ್ತ ಜೀವಿಸುತ್ತವೆ! ನಮ್ಮ ದೇಶದ ಕಾಟಿಗಳಂತೆ
ಅವು ರಾತ್ರೆ ಹೊತ್ತು ಸಂಪೂರ್ಣ ವಿರಮಿಸಿ, ಸಂಜೆ
ಮುಂಜಾನೆಗಳಲ್ಲಷ್ಟೆ ಮೇಯುವ ಕೆಲಸ ಮಾಡಿ, ಉಳಿದ
ವೇಳೆ ಆಹಾರವನ್ನು ಮೆಲುಕು ಹಾಕಿ ನುಂಗುತ್ತವೆ.

ಇವು ಜೀಬ್ರಾ, ಎರಳೆ ಮೊದಲಾದ ಪಶುಗ಼ಳ
ಹಿಂಡುಗಳಲ್ಲಿ ಬೆರೆತು ಬಾಳುತ್ತವೆ. ಇವುಗಳ ಮಂದೆಗಳೂ
ಸಾಕಷ್ಟು ದೊಡ್ಡವೇ. ಅವು ಗುಂಪಾಗಿ ಮೇಯುವಾಗ
ಅವುಗಳಲ್ಲೇ ಬಲಿಷ್ಟವಾದೊಂದು ಎತ್ತೆರಳೆ ಸಮೀಪದ
ದಿಬ್ಬದಲ್ಲಿ ಕಾವಲು ನಿಂತು, ಅಪಾಯದ ಸುಳಿವನ್ನು
ಕೊಡುತ್ತವೆ. ಆಫ್ರಿಕಾ ಖಂಡದಲ್ಲಿ ಅದಕ್ಕೆ ಸಿಂಹ
ಸ್ವಾಭಾವಿಕ ವೈರಿ. ಕಾವಲು ನಿಂತ ಪ್ರಾಣಿಗೆ ಅಂಥ ಹಗೆ
ಕಾಣಿಸಿದರೆ ಅವೆಲ್ಲವೂ ಸಾಲು ಹಿಡಿದು ಓಟ ಹೂಡುತ್ತವೆ.
ಆ ಹಗೆ ತೀರ ಸಮೀಪಿಸಿದರೆ, ಪ್ರತಿಭಟಿಸುವ ಸಲುವಾಗಿ
ಅವೆಲ್ಲವೂ ಒಗ್ಗೂಡಿ ಮುಂಗಾಲುಗಳನ್ನು ಮಡಚಿ,
ನೆಲಕ್ಕೂರಿ ಹಾಯಲು ಅಣಿಯಾದಾವು. ಗುಂಪಾಗಿ ಜೀವಿ~
ಸುವ ಸಸ್ಯಾಹಾರಿ ಪಶುಗಳು ಈ ರೀತಿಯಲ್ಲಿ ಹಗೆಯನ್ನು
ಇದಿರಿಸುತ್ತವೆ.

ಎರಣೆ, ಹಾವ್ರಾಣಿ (Skink): ಜಗತ್ತಿನಲ್ಲಿ ಹಲ್ಲಿ,
ಗೌಳಿ, ಓತಿಕೇತಗಳಂಥ ವಿವಿಧ ಜಾತಿಯ ಉರಗಗಳ ರೀತಿ~
ಯಲ್ಲಿ, ಅಷ್ಟೇ ವಿವಿಧ ರೂಪಗಳಲ್ಲಿ ಎರಣೆ ಅಥವಾ
ಹಾವ್ರಾಣಿಯೂ ಇದೆ ಅವುಗಳ ಮೂತಿ ಮೊನಚು. ಮೈ
ತುಸು ಚಪ್ಪಟೆಯಾಗಿದ್ದು, ನಾಲ್ಕೂ ಕಾಲೂರಿ ಒಡಾಡಲು
ಅನುಕೂಲವಾಗಿದೆ. ಆ ಶರೀರಕ್ಕೆ ಒಪ್ಪುವ ಬಾಲವೂ ಇದೆ.
ಇವುಗಳಲ್ಲಿ ಸಣ್ಣ ಜಾತಿಗಳಿವೆ. ಅವುಗಳ ಮೈಯ ಚರ್ಮ
ಹಾವುಗಳಿಗಿರುವಂತಹ ಹಿಣಿಜುಗಳಿಂದ ಹೊದೆದಂತೆ
ಕಾಣಿಸುತ್ತದೆ. ಇಂಥವುಗಳಲ್ಲೇ ಒಂದು ಅತಿ ದೊಡ್ಡ
ಜಾತಿ ಸೊಲೋಮನ್ ದ್ವೀಪದಲ್ಲಿವೆ. ಅವು ಎರಡು ಅಡಿ
ಉದ್ದಕ್ಕೆ ಬೆಳೆದಾವು. ಆಸ್ಟ್ರೇಲಿಯ, ಆಫ್ರಿಕಾ ಮೊದಲಾದ
-24-
ಭೂಖಂಡಗಳ ಹಲವು ಪ್ರದೇಶಗಳಲ್ಲಿ ಇವೇ ಉರಗಗಳ
ಪ್ರಭೇದಗಳಿವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೂಮಿಯ
ಮೇಲಿರುವ ಗೌಳಿಗಳು ಇವು. ಅವು ನೆಲದಲ್ಲಿ ಬಿಲ
ಕೊರೆದು ಅಲ್ಲಿ ಬದುಕುವುದುಂಟು; ಗಿಡಮರಗಳ ಮೇಲೆ
ವಾಸಿಸುವುದುಂಟು. ಇವುಗಳ ನಾಲಿಗೆಯು ಹಾವಿಗಿರುವಂತೆ
ಸೀಳುನಾಲಿಗೆ. ನಮ್ಮವರು ಅದರ ಆಕಾರವನ್ನು ಹಾವಿ~
ನೊಂದಿಗೆ ಹೋಲಿಸಿ, ಅದನ್ನು `ಹಾವ್ರಾಣಿ' ಎಂದೂ ಕರೆ~
ಯುತ್ತಾರೆ. ಇವಕ್ಕೆ ಕ್ರಿಮಿಕೀಟಗಳು ಆಹಾರ. ಇವುಗಳಲ್ಲಿಿ಼
ಸಸ್ಯಹಾರಿ ಜಾತಿಗಳೂ ಇವೆ.

ಇವುಗಳಲ್ಲಿ ಮರಿಯಿಡುವ ಜಾತಿಗಳೂ ಇವೆ;
ತತ್ತಿ ಇರಿಸಿ ಸಂತಾನ ಪಡೆಯುವ ಜಾತಿಗಳೂ ಇವೆ, ಇವು
ಹೆಚ್ಚಾಗಿ ಹಗೆಗಳ ಕಣ್ಣಿಗೆ ಬೀಳದಂತೆ ಅಡಗಿಕೊಂಡು
ತಮ್ಮ ಜೀವನ ಕಳೆಯುತ್ತವೆ. ಪ್ರಸಂಗ ಬಂದಾಗ ಮಾತ್ರ
ನಿಂತಲ್ಲಿಂದಲೇ ತಮ್ಮ ಬಾಲವನ್ನೆತ್ತಿ ಅಲುಗಿಸುತ್ತಾ ಹಗೆ~
ಯನ್ನು ಬೆದರಿಸುವುದೂ ಇದೆ. ಅದರ ಬಾಲ ಕಾದಾಟ~
ದಲ್ಲಿ ಕಡಿದು ತುಂಡಾದರೆ, ತುಂಡಾಗಿ ಬಿದ್ದ ಭಾಗ ಜೀವ~
ವಿರುವಂತೆ ಹೊರಳಾಡುತ್ತದೆ. ಅವುಗಳ ನಷ್ಟವಾದ
ಬಾಲದ ಅಂಶ ತಿರುಗಿ ಬೆಳೆಯುವುದುಂಟು.

ಎರಳೆ: ಪೂರ್ವ ಗೋಲಾರ್ಧದ ಏಸ್ಯಾ, ಆಫ್ರಿಕಾ ಖಂಡ~
ಗಳಿಗೆ ಸೀಮಿತವಾದ ಪಶು ವರ್ಗದ ಪ್ರಾಣಿಗಳು ಈ ಎರಳೆ~
ಗಳು. ಕೆಲವು ಜಾತಿಗಳಲ್ಲಿ ಇವುಗಳ ಶರೀರ ಎತ್ತು,
ದನಗಳಂತೆ ಇರುತ್ತದೆ, ಇನ್ನು ಕೆಲವು ಜಾತಿಗಳಲ್ಲಿ ಲಘು
ಶರೀರದ ಚಿಗರಿ ಜಿಂಕೆಗಳಂತೆ ಅವು ಪ್ರತ್ಯೇಕವೆಂದು
ತಿಳಿಯುತ್ತಾರೆ. ಇವಕ್ಕೆ ಮೇಕೆ (ಆಡು) ಗಳಂತೆ ಹಣೆಯ
ಮೇಲೆ ಎರಡು ಕೊಂಬುಗಳು ಮೇಲ್ಮೊಗವಾಗಿ ಚಾಚಿರು~
ತ್ತವೆ. ಅವು ನೀಳ ತಿರುಪಳಿಗೊಂಬುಗಳಿರ ಬಹುದು,
ಬಾಗಿದ ಸುರುಳಿಗೊಂಬುಗಳೂ ಆಗಿರಬಹುದು. ಆ ಕೊಂಬು~
ಗಳ ನಡುವಣ ಎಡೆ ಬುಡದಿಂದ ತುದಿಗೆ ಸರಿದಂತೆ ಅಗಲ~
ವಾದೀತು. ನಮ್ಮ ದೇಶದ ಕಾಟಿಗಳಿಗೆ ಇರುವಂತೆ ಈ
ಕೊಂಬುಗಳು ಹಣೆಯ ಇಕ್ಕೆಡೆಗಳಿಂದ ಹೊರಕ್ಕೆ ಚಾಚಿ,
ಮೇಲಕ್ಕೇರಿದಂತೆ ಒಂದಕ್ಕಿದಿರಾಗಿ ಇನ್ನೊಂದು ಕೂಡಿ
ಚಾಚಿದವೂ ಆಗಿರಬಹುದು. ನಮ್ಮ ನಾಡಿನ ಚಿಗರಿ (ಕೃಷ್ಣ
ಮೃಗ) ಬಳಗಕ್ಕೆ ಸೇರುವ ಒಂದು ಪ್ರಾಣಿ ಜಾತಿ ಎರಳೆ~
ಗಳು. ಹೆಚ್ಚಿನ ಎರಳೆಗಳ ಆವಾಸ ಆಫ್ರಿಕಾ ಖಂಡ ಮತ್ತು
ಏಸ್ಯಾದ ಅರೇಬಿಯ ಮತ್ತು ಸೀರಿಯ ದೇಶಗಳು.

ಇವು ಗಾತ್ರದಲ್ಲಿ ಬೇಕಷ್ಟು ವ್ಯತ್ಯಾಸವುಳ್ಳವು.
ಇಲಾಂಡು ಎಂಬ ಎರಳೆ ಜಾತಿ ಭುಜದ ಎತ್ತರಕ್ಕೆ ಆರು
ಅಡಿಗ಴ಷ್ಟಿದ್ದರೆ, ಮೊಲದಷ್ಟು ಎತ್ತರ `ಕಿಲ್್ಸ್ಟ್ರಿಂಗರ್'
ಎಂಬ ಎರಳೆಯ ಜಾತಿ. ಇವುಗಳಲ್ಲಿಯ ಮುಂಬಾಗಿನ
ಕೊಂಬುಳ್ಳ ಎರಳೆಗಳೂ ಇವೆ. ಹಿಂಬಾಗಿನ ಕೊಂಬುಳ್ಳ
ಎರಳೆಗಳೂ ಇವೆ. ಅವು ಹೆಚ್ಚಾಗಿ ಕೆಂಚು, ಕಪಿಲ, ಬೂದು
ಬಣ್ಣದ ರೋಮವುಳ್ಳವು. ಅವುಗಳ ಮೈಯ ಮೇಲೆ ಬಿಳಿಯ
ಬರೆಗಳಿರುವುದುಂಟು, ಇಲ್ಲದವೂ ಉಂಟು. ಹೆಚ್ಚಿನವಕ್ಕೆ
ಹೊಟ್ಟೆಯ ಭಾಗ ಮತ್ತು ಎದೆಯ ಭಾಗ ಬಿಳಿ ಬಣ್ಣದ
ರೋಮಗಳಿಂದ ಕೂಡಿವೆ. ಹಿಂಭಾಗ (ಪ್ರಷ್ಠ) ಹೆಚ್ಚಿನವು~
ಗಳಲ್ಲಿ ಬಿಳಿ ಬಣ್ಣದ ರೋಮದಿಂದ ಕೂಡಿದವು. ಕಿರಿಯ
ಜಾತಿಗಳಲ್ಲಿ ಬಾಲ ಗಿಡ್ಡವಾಗಿದ್ದರೆ, ಎತ್ತರದ ಜಾತಿ`
ಗಳಲ್ಲಿ ಗೊಂಡೆಯಿರುವ ನೀಳ ಬಾಲದವೇ ಹೆಚ್ಚು.
ಯಾವತ್ತು ಎರಳೆಗಳಿಗೆ ಸೀಳು ಗೊರಸುಗಳಿರುತ್ತವೆ.

ಇವು ಹೆಚ್ಚಾಗಿ ದೊಡ್ಡ ದೊಡ್ಡ ಹಿಂಡುಗಳಲ್ಲಿ
ಹುಲ್ಲುಗ಼ಾವಲುಗಳಲ್ಲಿ ಜೀವಿಸುತ್ತವೆ. ಅಪಾಯದ
ಸುಳಿವು ತಿಳಿದೊಡನೆಯೇ ಅವುಗಳ ಗುಂಪಿಗೆ ಗುಂಪೇ
ಕಾಲು ಕೀಳುತ್ತವೆ. ಶರೀರ ಗಾತ್ರದ ದೃಷ್ಟಿಯಿಂದ ನೂ
(gnu), ಕುಡು ಮತ್ತು ಇಲಾಂಡು ಜಾತಿಯ ಎರಳೆಗಳು
ಬಲು ದೊಡ್ಡವು.

ಎರಳೆ - ಮೇಕೆ (Goral): ಈ ಹೆಸರೇ ಹೇಳುವಂತೆ,
ಇವು ಎರಳೆ ಮತ್ತು ಮೇಕೆಗಳೆರಡನ್ನೂ ಹೋಲುವ ಜಾತಿ.
ಇವು ಸಾಮಾನ್ಯ ಆಡುಗಳಿಗಿಂತ ದೊಡ್ಡವು. ಅವುಗಳ
ಭುಜದ ಎತ್ತರ ಎರಡು ಅಡಿಗಳನ್ನು ಮೀರೀತು. ಇವಕ್ಕೆ
ಮೈತುಂಬ ರೋಮವಿದೆ. ಆ ಹೊದಿಕೆಯಲ್ಲಿ ಕಿರಿಯ
ಕೂದಲುಗಳ ನಡುವೆ, ನೀಳವಾದ ಜೂಲು ಗೂದಲುಗಳೂ
ಇವೆ. ಕತ್ತಿನ ಮೇಲೆ ಉದ್ದನೆಯ ಕೂದಲ ದಂಡೆ ಇದೆ.
ಇವುಗಳ ಕೊಂಬು 8-10 ಇಂಚು ಉದ್ದದವು. ಅವು
ಹಿಂಬಾಗಿನ, ಆಚೀಚೆ ಎತ್ತರಕ್ಕೆ ಸರಿಯುವ ಕೊಂಬುಗಳು.
ಇವುಗಳ ಸಂತತಿ 8,000-12,000 ಅಡಿ ಉನ್ನತ ಪರ್ವತ
ಪ್ರದೇಶಗಳಿಗೂ ಹಬ್ಬಿದೆ. ಅವುಗಳು ಹೆಚ್ಚಾಗಿ ಬರ್ಮಾ
ದೇಶದಿಂದ ತೊಡಗಿ, ಟಿಬೇಟು ದೇಶ ಮತ್ತು ಅದರ
ಉತ್ತರಕ್ಕಿರುವ ಉನ್ನತ ಪರ್ವತಾವಳಿಗಳ ಮೂಲಕ ಹಾದು,
ಮಂಗೋಲಿಯದ ತನಕವೂ ಕಾಣಸಿಗುತ್ತವೆ. ಅವುಗಳಲ್ಲಿ
ಕಂದು ಬಣ್ಣದವೂ ಇವೆ; ಬೂದುಗಂದು ಬಣ್ಣದವೂ ಇವೆ.
ಈ ಎರಳೆ. ಮೇಕೆಗಳ ಒಂದು ಜಾತಿ ಏಸ್ಯಾಖಂಡದ ಪೂರ್ವ
ಪ್ರಾಂತಗಳಲ್ಲಿರುವ `ಸೆರಾವು'.

ಎರೆಹುಳು (Earthworm): ಈ ಜಾತಿಯ ಹುಳು~
ಗಳಲ್ಲಿ ಕೆಲಕೆಲವು ನಾಲ್ಕಾರು ಇಂಚು ಉದ್ದವಿದ್ದರೆ,
ಆಸ್ಟ್ರೇಲಿಯಾ ಖಂಡದ ಒಂದು ಜಾತಿ 11 ಅಡಿ ಉದ್ದಕ್ಕೆ
ಬೆಳೆಯುತ್ತದೆ. ಇವುಗಳಲ್ಲಿ ಹಲವು ಜಾತಿ ಮಣ್ಣಿನಲ್ಲಿ
-25-
ಜೀವಿಸುವಂಥ ಹುಳುಗಳು. ಇನ್ನು ಹಲವು ಜಾತಿ ನೀರಲ್ಲಿ
ಜೀವಿಸುವಂಥವು. ಎರೆಹುಳುಗಳು ಮಣ್ಣನ್ನು ತಿರುವಿ
ಹಾಕುತ್ತ ಆ ನೆಲವನ್ನು ಸಸ್೟ಗಳ ಬೆಳೆಗೆ ಸಾರವತ್ತಾಗಿ
ಮಾಡುತ್ತವೆ. ಅವು ಮಣ್ಣನ್ನು ತಿನ್ನುತ್ತ ನೆಲದೊಳಕ್ಕೆ
ಮುಂಬರಿಯುತ್ತವೆ. ತಾವು ನುಂಗಿದ ಆ ಮಣ್ಣಿನಲ್ಲಿರುವ
ಆಹಾರಾಂಶವನ್ನು ಪಡೆದು, ಮಿಕ್ಕಿದ ಮಣ್ಣನ್ನು ಮಲವಾಗಿ
ಹೊರಕ್ಕೆ ಚೆಲ್ಲುತ್ತವೆ. ಈ ಹುಳುಗಳು ತಮ್ಮ ಚರ್ಮದ
ಮೂಲಕ ವಾಯುವನ್ನು ಸೇವಿಸುತ್ತವೆ. ಅದರ ಇನ್ನೊಂದು
ವಿಶೇಷವೆಂದರೆ ಇಂಥ ಎರೆಹುಳುಗಳಲ್ಲಿ ಗಂಡುತನ ಮತ್ತು
ಹೆಣ್ಣ಼ತನಗಳೆರಡೂ ಸೇರಿವೆ. ಅವು ಉಭಯಲಿಂಗಿಗಳು.

ನೆಲದೊಳಕ್ಕೆ ನೀರು ಇಂಗಿ, ಶೀತಗಾಲದಲ್ಲಿ
ಹೆರೆಗಟ್ಟುವ ಪ್ರದೇಶಗಳ ಹೊರತಾಗಿ, ಮಣ್ಣು ಹಾಸಿ~
ದಲ್ಲೆಲ್ಲ ಎರೆಹುಳುಗಳು ವಾಸಿಸಲು ಅನುಕೂಲ ಸ್ಥಳ
ಸಿಕ್ಕೀತು. ಅವು ಹಗಲಲ್ಲಿ ನೆಲದೊಳಗೆ ಹುದುಗಿ ಜೀವಿ~
ಸುವ ಹುಳುಗಳು. ಬಲಿತ ಒಂದೊಂದು ಹುಳುವೂ, ನಾಲ್ಕನೆ
ಒಂದು ಇಂಚಿನಷ್ಟು ದಪ್ಪ, ಒಂದು ಅಡಿಯಷ್ಟು ಉದ್ದ~
ವಿದ್ದೀತು. ಅವನ್ನು ನಮ್ಮವರು ಭೂನಾಗ ಎಂದು ಕರೆ~
ದುದೂ ಉಂಟು. ಅವು ಮಣ್ಣನ್ನು ಹೊಗುವಾಗಲೆಲ್ಲ
ಅದನ್ನು ತಮ್ಮ ಬಾಯಿಂದ ನುಂಗುತ್ತಾ, ಹೋಗುತ್ತವೆ.
ಅದರಲ್ಲಿ ಸೇರಿಕೊಂಡಿರುವ ಜೀವಜನ್ಯ ವಸ್ತುಗಳನ್಩ು
ಆಹಾರವಾಗಿ ಸ್ವೀಕರಿಸಿ, ಉಳಿದದ್ದನ್ನು ಮಲದ ರೂಪ~
ದಲ್ಲಿ ಹೊರಗೆಡಹುತ್ತವೆ! ಅವು ವಾಸಿಸುವ ಬಿಲಗಳ
ಹೊರಗೆ ಅವು ಹೊರಗೆಡಹಿದ ತ್ಯಾಜ್ಯವಸ್ತು ಕಾಣಿಸುತ್ತದೆ.
ರೈತರ ಪಾಲಿಗೆ ನೆಲದಲ್ಲಿರುವ ಎರೆಹುಳುಗಳು ಭೂಮಿಯ
ಸಾರವನ್ನು ಹೆಚ್ಚಿಸುವ ಉಪಕಾರ ಮಾಡುತ್ತವೆ.

ಅದರ ಶರೀರದ ರಚನೆ ಒಂದು ನಳಿಗೆಯಂತೆ
ಇದ್ದು, ಅದರ ಒಂದು ತುದಿಯಲ್ಲಿ ಬಾಯಿ, ಇನ್ನೊಂದು
ತುದಿಯಲ್ಲಿ ಮಲ ದ್ವಾರವಿದೆ. ಅದರ ಬಾಯಿಯಲ್ಲಿ
ಹಲ್ಲುಗಳೇನೂ ಇಲ್ಲವಾದರೂ, ಅದು ತನ್ನೆರಡು ಅವುಡು~
ಗಳಿಂದ ಎಲೆ, ಹುಲ್ಲು ಮೊದಲಾದ ಜೀವಜನ್ಯ ವಸ್ತು~
ಗಳನ್ನು ಕಚ್ಚಿ, ನೆಲದೊಳಕ್ಕೆ ಇಳಿದೀತು. ತಣಸು ನೆಲ,
ನೆರಳು, ನೀರುಗಳು ಇಲ್ಲದಲ್ಲಿ ಅವು ಬಾಳಲಾರವು.

ಅದರ ದೇಹದ ಚಲನೆ, ತನ್ನ ಮೈಯ ಮಾಂಸದ
ಕೊಳವೆಯನ್ನು ಅಲೆಅಲೆಯಾಗಿ ಮಾಡುವಾಗ ಅದರ
ಮಾಂಸ ಖಂಡಗಳು ಸಂಕೋಚ ಮತ್ತು ವಿಸ್ತಾರ~
ಗ಼ೊಳ್ಳುವುದರಿಂದ ಸಾಧ್ಯವಾಗುತ್ತದೆ. ಅದರ ಮುಖದಲ್ಲಿ
ಕಣ್ಣಿಲ್ಲವಾದರೂ ಅದರ ಮುಂಭಾಗದ ಜೀವಕೋಶಗಳಿಗೆ
ಬೆಳಕನ್ನು ಗುರುತಿಸುವ ಶಕ್ತಿಯಿದೆ. ಅದೇ ರೀತಿ, ದೇಹದ
ಇದರ ಕೆಲವು ಭಾಗಗಳಿಗೆ ಇತರ ಸಂವೇದನಾ ಶಕ್ತಿಗಳೂ
ಇವೆ. ಅದರ ಚರ್ಮದ ಹೊದಿಕೆಯ ಜೀವಕೋಶಗಳು
ವಾಯುವಿನಿಂದ ಆಮ್ಲಜನಕವನ್ನು ಹೀರಿ, ಅಂಗಾರಾಮ್ಲ
ಅನಿಲವನ್ನು ತ್ಯಜಿಸಬಲ್ಲುವು.

ಈ ಎರೆಹುಳುಗ಼ಳ ಜಾತಿ ದ್ವಿಲಿಂಗಿ. ಗಂಡೂ
ಅದೇನೇ, ಹೆಣ್ಣೂ ಅದೇನೇ. ಇಂಥ ಎರಡು ಹುಳುಗಳು
ಸೇರಿ ಒಂದು ಇನ್ನೊಂದರ ಮುಖಕ್ಕೆ ಬಾಲ, ಬಾಲಕ್ಕೆ
ಮುಖ ಜೋಡಿಸಿ ಒಂದನ್ನೊಂದು ಕೂಡುತ್ತವೆ. ಅದ~
ರಿಂದಾಗಿ ಎರಡು ಹುಳುಗಳೂ ಗರ್ಭವನ್ನು ತಾಳಿ ಸಕಾಲ~
ದಲ್ಲಿ ತತ್ತಿಗಳನ್ನು ಇರಿಸುತ್ತವೆ.

ಈ ಹುಳುವಿನಲ್ಲಿ ಶರೀರದ ಉದ್ದಕ್ಕೂ
ಹಾಯುವ ನರಗಳ ವ್ಯವಸ್ಥೆಯಿದೆ; ರಕ್ತನಾಳದ ವ್ಯವಸ್ಥೆ~
ಯಿದೆ. ಮೈಯ ಚರ್ಮದ ಮೂಲಕ ವಾಯುವಿನ ಆಮ್ಲ~
ಜನಕವನ್ನು ಹೀರಿ, ರಕ್ತಕ್ಕೆ ಒದಗಿಸಬಲ್ಲ ವಿನಿಮಯ
ವ್ಯವಸ್ಥೆಯಿದೆ.

ಆಸ್ಟ್ರೇಲಿಯಾ ಖಂಡದಲ್ಲಿ ಎರೆಹುಳುಗಳಲ್ಲೇ
ಅತಿ ದೊಡ್ಡದಾದ ಒಂದು ಜಾತಿ ಇದೆಯಂತೆ. ಅದು
ನಮ್ಮಲ್ಲಿಯ ಹುಳುಗಳಂತೆ ಕೆಲವೇ ಇಂಚು ಉದ್ದವಲ್ಲ
ಎಂಟು, ಹತ್ತು ಅಡಿಗಳಷ್ಟು ಉದ್ದಕ್ಕೆ ಬೆಳೆಯುವ ದೈತ್ಯ
ಭೂನಾಗ!

ಈ ಹುಳುಗಳ ಬಳಗಕ್ಕೆ ಸೇರುವ ಒಂದು ಜೀವ
ಜಾತಿಯೇ ನೀರಲ್ಲಿ ಬಾಳುವ ಜಿಗಣೆಗಳು. ಅವು ನೀರಿಗಿಳಿದ
ಯಾವುದೇ ಪ್ರಾಣಿ೟ನ್ನು ಕಚ್ಚಿ, ಹಿಡಿದು, ಅದರ ರಕ್ತ
ಹೀರಿ ಕೊಬ್ಬಿ, ತಮ್ಮ ಹೊಟ್ಟೆತುಂಬಿದ ಬಳಿಕ ಬಿಟ್ಟಾವು.
ಇವುಗಳ ದೇಹದಲ್ಲಿ ಪ್ರಾಯ ಸರಿದಂತೆ ಒಂದೊಂದೇ
ಉಂಗುರದಂಥ ಸಂದು ಹೆಚ್ಚುತ್ತದೆ. ಸಾಮಾನ್ಯ ಜಿಗಣೆ~
ಗಳಿಗೆ ಐದು ಜೋಡಿ ಕಣ್ಣುಗಳಿರಬಹುದು. ಕೇವಲ ನಾಲ್ಕು
ಕಣ್ಣುಗಳಿರುವುದು ತೀರ ಸಾಮಾನ್ಯ. ಇವು ಕೇವಲ
ಬೆಳಕನ್ನು ಗುರುತಿಸಬಲ್ಲ ಅಂಗ ಭಾಗಗಳು ಎಂದರೆ
ತಪ್ಪಾಗದು.

ನೀರಿನಲ್ಲಿ ವಾಸಿಸುವ ಜಿಗಣೆಗಳು ಇರುವಂತೆಯೇ
ಉಷ್ಣವಲಯದ ಕಾಡುಗಳಲ್ಲಿ, ನೆಲದ ಮೇಲೆ ಎಲೆಗಳು
ಕೊಳೆತು ಬಿದ್ದಲ್ಲೆಲ್ಲ, ಒಂದು ಅಂಗುಲಕ್ಕಿಂತ ಕಿರಿದಾದ,
ಕಸಕಡ್ಡಿಗಳಂತೆ ಕಾಣಿಸುವ ಜಿಗಣೆಗಳ ಸಮೂಹವೇ
ವಾಸಿಸುತ್ತವೆ. ಅವು ಮರಗಳನ್ನು ಏರಬಹುದು. ಅಂಥ
ಜಿಗಣೆ ಇಲ್ಲವೆ `ಇಂಬುಳ'ಗಳಿರುವ ದಾರಿಯಲ್ಲಿ ಯಾವ
ಪ್ರಾಣಿ ಬಂದರೂ, ಈ ಹುಳುಗಳು ಅದಕ್ಕೆ ಅಂಟಿಕೊಂಡು,
-26-
ಬಾಯಿಯ ಮುಳ್ಳಿನಂತಹ ಕಿರಿಯ ಹಲ್ಲುಗಳಿಂದ ತೂತು
ಮಾಡಿ, ದೇಹದ ಇನ್ನೊಂದು ತುದಿಯ ತೂತನ್ನು ಅದಕ್ಕೆ
ತಗಲಿಸಿ ರಕ್ತ ಹೀರುತ್ತಾ ಹೋಗುತ್ತವೆ. ಅದರ
ಬಾಯಿಂದ ಸುರಿಯುವಂಥ ಒಂದು ದ್ರವವು, ರಕ್ತ
ಹೆಪ್ಪುಗಟ್ಟುವುದನ್ನು ತಡೆದೀತು. ಆ ಜಿಗಣೆಗೆ ಹೊಟ್ಟೆ
ತುಂಬಿತೆಂದರೆ, ಅದು ಕೆಳಕ್ಕೆ ಉದುರೀತು. ಅದು ಮಾಡಿದ
ಗಾಯದಿಂದ ಬಳಬಳನೆ ರಕ್ತ ಸೋರುವುದನ್ನು ಕಂಡ
ಬಳಿಕವೇ ಅದರಿಂದಾದ ಹಾನಿ ತಿಳಿದೀತು.

ಎಲೆ ಕೀಟ, ಪಲ್ಲವ ಕೀಟ (Leaf insect):
ಉಷ್ಣವಲಯದ ಈ ಕೀಟಗಳು ನೋಟಕ್ಕೆ ಚಪ್ಪಟೆ
ಎಲೆಗಳಂತಿವೆ. ಅವುಗಳ ರೆಕ್ಕೆಗಳೂ ಎಲೆಗಳ ತೆರನಲ್ಲಿ
ಕಾಣಿಸುತ್ತವೆ. ಅಂಥ ಎಷ್ಟೋ ಹುಳುಗಳು ಹಸಿ ಎಲೆಯಂತೆ
ಕಾಣಿಸಿದರೆ, ಇನ್ನು ಕೆಲವು ಜಾತಿಯವು ಒಣಗಿದ
ಎಲೆಗಳಂತೆ ಕಾಣಿಸಿಯಾವು. ಅವುಗಳ ಮೈಯಲ್ಲಿ ಎಲೆಗಳ
ನರಗಳಂತೆ ಪ್ರತ್ಯೇಕವಾಗಿ ಕಾಣಿಸುವ ರೇಖೆಗಳು ಇರುತ್ತವೆ.

ಎಲೆ ಮೀನು (Leaf fish): ದಕ್ಷಿಣ ಅಮೇರಿಕ, ಪ.
ಆಫ್ರಿಕಾ, ದಕ್ಷಿಣ ಏಸ್ಯಾಗಳಲ್ಲಿ ವಾಸಿಸುವ ಈ ಮೀನು
ಸಿಹಿನೀರಿನ ನದಿಗಳಲ್ಲಿ ವಾಸಿಸುವ ಜಾತಿ. ನೋಟಕ್ಕೆ ಅವು
ನೀರಲ್ಲಿ ತೇಲುವ ಒಣ ಎಲೆಗಳಂತೆ ಕಾಣಿಸುವುದರಿಂದ,
`ಎಲೆ ಮೀನು' ಎಂಬ ಹೆಸರನ್ನು ಕೊಟ್ಟಿದ್ದಾರೆ. ಅವುಗಳ
ಮೂತಿಯ ಭಾಗ ಎಲೆಯ ತೊಟ್ಟಿನಂತೆ ಕಾಣಿಸುತ್ತದೆ. ಈ 
ಮೀನು ನೀರು ಹರಿದುಹೋಗುವ ದಿಕ್ಕಿಗೆ ಒಣ ಎಲೆಯಂತೆ
ಅನಾಯಾಸವಾಗಿ ಸರಿಯುತ್ತ, ತನ್ನ ದಾರಿಯಲ್ಲಿ ಕಿರಿಯ
ಮೀನುಗಳು ಇದಿರಾದರೆ ಅವನ್ನು ಹಿಡಿದು ತಿಂದೀತು.
ಇವು ಕೇವಲ ನಾಲ್ಕು ಇಂಚು ಗಾತ್ರಕ್ಕೆ ಬೆಳೆಯುವ ಮೀನು~
ಗಳು. ಅಂಥವು ತಮ್ಮ ಅರ್ಧದಷ್ಟು ಗಾತ್ರದ ಮೀನು~
ಗಳನ್ನು ನುಂಗುವುದುಂಟು. ಎಲೆಯಂತೆಯೋ, ಕಡ್ಡಿ~
ಯಂತೆಯೋ ಆಕಾರವಿರುವ ಜೀವಿಗಳಿಗೆ, ಕಡ್ಡಿಗಳ ಮತ್ತು
ಎಲೆಗಳ ನಡುವೆ ಅಡಗಿರಲು ಅನುಕೂಲತೆ ದೊರೆಯುತ್ತದೆ.
ಬೇಟೆ ಸುಲಭವಾಗುತ್ತದೆ.

ಎಲೆಹಕ್ಕಿ (leaf bird): ಇವು ಬುಲ್್ಬುಲ್ ಇಲ್ಲವೆ
ನಮ್ಮ ಕೊಟ್ಟುಗದ ಆಕಾರದ, ಅಷ್ಟೇ ಗಾತ್ರದ, ಹಸುರು
ಬಣ್ಣದ ಪಕ್ಷಿಜಾತಿ. ಚೀನಾ ದೇಶ ಮತ್ತು ಪಿಲಿಫ್ಪೈನ್
ದ್ವೀಪಗಳಲ್ಲಿ ಕಾಣಸಿಗುವ ಜಾತಿ. ಹಣ್ಣು ಹಂಪಲು,
ಹೂವು, ಜೇನು ಮತ್ತು ಕ್ರಿಮೀಕೀಟಗಳು ಅವುಗಳ ಆಹಾರ.

ಇವುಗಳಲ್ಲಿಯೆ ಒಂದು ಜಾತಿಯ ಹಕ್ಕಿಯ
ಹೊಟ್ಟೆಯ ಬ಼ಣ್ಣ ಕಿತ್ತಳೆಯಾಗಿದ್ದು, ಕಣ್ಣಿಗೆ ಬಲು
ಆಕರ್ಷಕವಾಗಿ ಕಾಣಿಸುತ್ತದೆ. ಅದರ ಶರೀರದ ಉದ್ದ
ಎಂಟು ಇಂಚಿನಷ್ಟಿರಬಹುದು. ಇವು ಉತ್ತರ ಭಾರತ
ಮತ್ತು ಮಲಯಾ ದೇಶಗಳಲ್ಲೂ ವಾಸಿಸುತ್ತವೆ. ಅವು
ಅನ್ಯ ಹಕ್ಕಿಗಳ ಹಾಡನ್ನು ಅನುಕರಿಸಬಲ್ಲವು. ಜನರು
ಅವನ್ನು ಪಂಜರಗಳಲ್ಲಿ ಇರಿಸಿ, ಸಾಕುವ ವಾಡಿಕೆಯೂ
ಇದೆ. ಈ ಬಳಗದಲ್ಲಿ ಹೊಂಬಣ್ಣದ ಎದೆಯ ಎಲೆ ಹಕ್ಕಿ~
ಗಳೂ ಇವೆ.

ಎಲೆ ಹೇನು (Aphid): ಇವು ಸೂಕ್ಷ್ಮ ರೆಕ್ಕೆಯುಳ್ಳ
ನೊಣಗಳ ಬಳಗದವು. ಹೆಚ್ಚಾಗಿ ಹಾರದೆ, ಗಿಡ ಮರಗಳ
ಹಸುರು ಎಲೆ, ದಂಟುಗಳ ಮೇಲೆ ಕುಳಿತು, ಆ ಸಸ್ಯಗಳ
ರಸವನ್ನು ಹೀರಿ ಬದುಕುವಂಥವು. ಅವುಗಳಲ್ಲೂ
ಸಾವಿರಾರು ಜಾತಿಗಳಿವೆಯಂತೆ. ಗಿಡಗಳ ಹಿಂಬದಿಯಲ್ಲಿ
ಕುಳಿತು, ಎಲೆಗಳ ರಸ ಹೀರುವ ಹೇನಿನ ಗಾತ್ರದ ಅವನ್ನು
ನಾವು ಎಲ್ಲೆಲ್ಲೂ ಕಾಣಬಹುದು. ಹಾಗೆ ಗಿಡಗಳ ರಸ
ಹೀರಲು, ಅವುಗಳ ಮೂತಿಯಲ್ಲಿ ನೀಳ ನಳಿಗೆಯಂಥ
ಸೊಂಡಿಲಿದೆ. ಅದನ್ನು ಹೊರಕ್ಕೆ ಚಾಚಿ ಸಸ್ಯಗಳ ಕಾಂಡ~
ವನ್ನು ಎಲೆಯನ್ನು ಚುಚ್ಚಿ ರಸವನ್ನು ಹೀರಿ ಬದುಕುವ ಚಟ 
ಅವುಗಳದ್ದು. ಅವಕ್ಕೆ ನಾಲ್ಕು ಪುಟ್ಟ ರೆಕ್ಕೆಗಳೂ ಇರು~
ವುದರಿಂದ, ಕುಳಿತಲ್ಲಿಯೇ ಆಹಾರ ಸಿಗದೆ ಹೋದರೆ
ಇನ್ನೊಂದು ಗಿಡಕ್ಕೆ ಹಾರಬಹುದು. ಅವು ಅನೇಕ ಸಸ್ಯ~
ಗಳ ಪಾಲಿಗೆ ಮೃತ್೟ುಕಾರಕವಾದಾವು.

ಇವುಗಳಲ್ಲಿ ಇನ್ನೊಂದು ಜಾತಿಯ ಎಲೆ ಹೇನು~
ಗಳನ್ನು ಇರುವೆಗಳು ತಮ್ಮ ಆಹಾರಕ್ಕಾಗಿ ಆಶ್ರಯಿಸುತ್ತವೆ.
ಅವುಗಳ ಶರೀರದಿಂದ ಹೊರಬೀಳುವ ಮಲ, ಜೇನಿನಂತಹ
ಒಂದು ಸಿಹಿಯಾದ ದ್ರವ. ಹಾಗಾಗಿ, ಇರುವೆಗಳು ಅವು~
ಗಳಿರುವಲ್ಲಿಯೆ ಬಿಡಾರ ಹೂಡಿ, ಅವನ್ನು ಹಿಂಡಿ ಜೇನನ್ನು
ಪಡೆಯುತ್ತವೆ. ಅವನ್ನು ಸಾಗಿಸಿ ತಂದು ನಾವು ಹಸು~
ಗಳನ್ನು ಸಾಕುವಂತೆ ಪಾಲಿಸಿ, ಹಾಲನ್ನು ಹಿಂಡುವಂತೆ,
ಜೇನನ್ನು ಹಿಂಡಿ ಸಂಗ್ರಹ ಮಾಡುತ್ತವೆ!

ಕೆಲಕೆಲವು ಜಾತಿಗಳು ಎಲೆಗಳ ಬದಲು, ಮಣ್ಣಿ~
ನಲ್ಲಿ ಬಿಡಾರ ಹೂಡಿ, ಗಿಡಮರಗಳ ಬೇರುಗಳನ್ನು ಚುಚ್ಚಿ,
ರಸ ಹೀರಿ ಬದುಕನ್ನು ಸಾಗಿಸುತ್ತವೆ.

ಎವೊಸೆಟ್ (avocet): ಅದು ಕೆರೆ, ಕುಂಟೆಗಳ ದಂಡೆ~
ಗಳಲ್ಲಿ, ಜವುಗು ಭೂಮಿಗಳ ನೀರಲ್ಲಿ ನಿಂತು, ನಡೆದು
ಅಲ್ಲಿನ ಕೆಸರಲ್ಲೂ, ನೀರಿನಲ್ಲೂ ವಾಸಿಸುವ ಜೀವಜಂತು~
ಗಳನ್ನು ತಿಂದು ಬದುಕುವ ಪಕ್ಷಿ. ಈ ಪಕ್ಷಿ ವರ್ಗವನ್ನು
waders ಅಥವಾ `ದಾಟುಗ'ಗಳು ಎನ್ನುತ್ತಾರೆ. ನೀರಲ್ಲಿ
ಮುಳುಗಿ, ಈಜದೆ, ಅವುಗಳ ಜೀವನ ಓಡಾಡಿ~
ಕೊಂಡೇ ಸಾಗಬೇಕು. ಅಂಥ ಪಕ್ಷಿಗಳಲ್ಲಿ ಖಂಜನ,
ದೇವನ ಹಕ್ಕಿ, ಮರಳು ಪೀಪಿ ಮೊದಲಾದವು ಹೇಗೆ
ಮುಖ್ಯವೋ, ದೇವನಹಕ್ಕಿಯ ಗಾತ್ರದ, ಮೇಲ್ಮೊಗವಾಗಿ
ಬಾಗಿದ ಕೊಕ್ಕುಳ್ಳು ಎವೊಸೆಟ್ಟು ಅಷ್ಟೇ ಮುಖ್ಯ. ಕೆಸರಲ್ಲಿ
ತನ್ನ ಕಾಲು ಗಂಟಿನ ತನಕವೂ ನೀರು ನಿಂತಲ್ಲಿ,
ಜವುಗಿನಲ್ಲಿ ಜೀವಿಸುವ ಕೀಟಗಳನ್ನು ಥಟ್ಟನೆ ಹಿಡಿದು
-27-
ತಿನ್ನುವ ಹಕ್ಕಿ ಇದು. ಈ ಹಕ್ಕಿಗಳ ತಲೆ ಮತ್ತು
ಕತ್ತುಗಳ ಹಿಂಭಾಗ ಕಪ್ಪು; ರೆಕ್ಕೆಯ ಮಗ್ಗುಲುಗಳು,
ಗರಿಗಳ ಕುಡಿಗಳು ಕಪ್ಪಾಗಿದ್ದು, ಉಳಿದ ಭಾಗಗಳು
ಬಿಳಪಾಗಿವೆ. ದೇಹ ಸುಟಿ, ಸುಟಿ; ನೀಳ ಕಾಲುಗಳು
ನೀರಲ್ಲಿ ಅದ್ದಿ ನಡೆಯಲು ಅನುಕೂಲವಾದಂಥವು. ಅದು
ತನ್ನ ಕತ್ತನ್ನು ಆಚೀಚೆ ತಿರುಗಿಸಿ, ಜಿಗಿದು ಹಾರುವ
ಕೀಟಗಳನ್ನು ಹಿಡಿದು ತಿಂದೀತು. ಕತ್ತನ್ನು ನೀರಲ್ಲಿ ಅದ್ದಿ,
ಕಲಕು ನೀರನ್ನು ಮುಕ್ಕಿ, ಕತ್ತೆತ್ತಿ, ನೀರಿನ ಅಂಶವನ್ನು
ಸೋರಗೊಟ್ಟು, ಆಹಾರಾಂಶವನ್ನು ನುಂಗೀತು. ಇವು
ಜಗತ್ತಿನ ಅನೇಕ ಕಡಲ ತೀರಗಳಲ್ಲೂ, ವಿಶಾಲ ಜವುಗು
ಪ್ರದೇಶಗಳಲ್ಲೂ ವಾಸಿಸುತ್ತವೆ. ಸವುಳು ನೀರಿನ ಮತ್ತು
ಉಪ್ಪುನೀರಿನ ಹರಹುಗಳೂ ಅವಕ್ಕೆ ಒಗ್ಗುತ್ತವೆ. ಇಂಥ
ತಾವುಗಳಲ್ಲಿ ಹಲವಾರು ತೆರನ ದಾಟುಗಗಳು ಕಲೆಯು~
ವುದು ರೂಢಿ.

ಏಡಿ (Crab): ಈ ಚಿಪ್ಪು ಜೀವಿಗಳು ಇತರ ಚಿಪ್ಪು
ಜೀವಿಗಳಂತಲ್ಲ. ಇವುಗಳ ಬೆನ್ನ ಮೇಲೆ ಲಘುವಾದ
ಚಿಪ್ಪಿದ್ದು, ಕೆಳಗೆ ಅದರ ಹೊಟ್ಟೆಯೂ ಇರುತ್ತದೆ. ಅದಕ್ಕೆ
ನಿಡಿದಾದ ಹತ್ತು ಕಾಲುಗಳಿದ್ದು, ದೇಹವನ್ನು ಹೊತ್ತು
ವೇಗವಾಗಿ ಸಾಗಿಸುವ ಚುರುಕುತನವೂ ಇದೆ. ಅದರ
ಶರೀರದ ಮುಂಗಡೆ ಆಹಾರವನ್ನಾಗಲಿ, ಮತ್ತೇನನ್ನೇ
ಆಗಲಿ ಕಚ್ಚಿ ಹಿಡಿಯಬಲ್ಲ ಚಿಮಟಿಯಂತಿರುವ ಕೈಗಳಿವೆ.
ಅದರ ಬೆಂಗಡೆಯಲ್ಲಿ ನಡೆಯಲು ಒದಗುವ ನಾಲ್ಕು ಜತೆ
ಕಾಲುಗಳಿವೆ. ಇಂಗ್ಲಿಷಿನಲ್ಲಿ ಈ ವರ್ಗದ ಪ್ರಾಣಿಗಳನ್ನು
`ದಶಪದಿ' ಎಂದು ಕರೆಯುತ್ತಾರೆ. ಕನ್ನಡದಲ್ಲಿ ಅದನ್ನು
`ಆರಡಿ' ಎಂದು ಕರೆಯುವುದುಂಟು. ಇವು ಬಲು ವೇಗವಾಗಿ
ಓಡಬಲ್ಲ ಪ್ರಾಣಿಗಳಾದರೂ, ಆ ಓಟದಲ್ಲಿ ಕೇವಲ ಎರಡು
ಜತೆ ಕಾಲುಗಳನ್ನಷ್ಟೇ ಅವು ಬಳಸುತ್ತವೆ. ಕಡಲಿನ
ಮತ್ತು ಖಾರಿಗಳ ದಡಗಳಲ್ಲಿ ಅವು ಜನರನ್ನು ಕಂಡು
ಬೆದರಿ ಓಡುವ ಓಟವೇ ಓಟ!

ಏಡಿಗಳ ಉಸಿರಾಟದ ಟೊಳ್ಳೆಗಳು ಅದರ
ಎದೆಯ ಎರಡೂ ಮಗ್ಗುಲುಗಳಲ್ಲಿರುತ್ತವೆ. ನೀರಲ್ಲಿ
ಕರಗಿದ ಗಾಳಿಯನ್ನು ಸೇವಿಸುವಾಗ, ಏಡಿಗಳು ಅದನ್ನು
ಟೊಳ್ಳೆಗಳಿಂದ ಹೀರಿ, ಮುಖದ ಮುಂಗಡೆಯ ಮೀಸೆಗಳ
ಬುಡದಲ್ಲಿರುವ ರಂಧ್ರದಿಂದ ಹೊರಕ್ಕೆ ಕಳುಹಿಸುತ್ತವೆ.
ಅಷ್ಟರಲ್ಲಿ ಟೊಳ್ಳೆಯಲ್ಲಿರುವ ರಕ್ತನಾಳಗಳು ದೇಹಕ್ಕೆ
ಅವಶ್ಯವಾದ ಆಮ್ಲಜನಕ ಅನಿಲವನ್ನು ಹೀರುತ್ತವೆ.
ಕೆಲವು ಜಾತಿಯ ಏಡಿಗಳಲ್ಲಿ ಈ ಕ್ರಮದ ವಿರುದ್ಧ ಗತಿ~
ಯಿಂದ ನೀರು ಹರಿದೀತು; ಮೀಸೆಯ ಮಗ್ಗುಲ ರಂಧ್ರದಿಂದ
ನೀರನ್ನು ಹೀರಿ, ಟೊಳ್ಳೆಗಳ ಮೂಲಕ, ಅದನ್ನು ಹೊರಕ್ಕೆ
ಕಳುಹಿಸುವ ಪ್ರಾಣಿಗಳಿವೆ.

ಕೆಲಕೆಲವು ಜಾತಿಯ ಏಡಿಗಳು - ನೆಲದ ಮೇಲೆ
ಬಹಳ ಸಮಯವನ್ನು ಕಳೆಯುವುದುಂಟು. ಅವುಗಳಲ್ಲಿ
ಮರಗಳನ್ನು ಏರಬಲ್ಲ ಜಾತಿಗಳಿವೆ. ಸಾಮಾನ್ಯವಾಗಿ,
ಕಡಲ ತಡಿಯ ಕಾಂಡಲು ಮರಗಳನ್ನು ಅವು ಏರಿದಾಗ,
ಅವು ಸೇವಿಸಿದ ನೀರು, ಅದರ ಮಗ್ಗುಲ ಟೊಳ್ಳೆಗಳ
ಮೂಲಕ ಹರಿದು, ರಕ್ತಕ್ಕೆ ಆಮ್ಲಜನಕ ಅನಿಲವನ್ನು
ಒದಗಿಸುತ್ತದೆ. ಈ ಏಡಿಗಳ ನೆತ್ತಿಯ ಮೇಲೆ ಚಾಚಿದ 
ಎರಡು ದುಂಟುಗಳ ಮೇಲೆ ಅದರ ಕಣ್ಣುಗಳಿರುತ್ತವೆ.

ಇವುಗಳ ಆಕಾರ ಬಹು ತೆರನಾಗಿವೆ. ಅದೇ ರೀತಿ
ಗಾತ್ರವೂ, ಬಣ್ಣಗಳೂ ವಿವಿಧ ತೆರನವು. ಇದರ ಬೆನ್ನಿನ
ಚಿಪ್ಪು ತೆಳ್ಳಗಿನದು. ಸಣ್ಣ ಏಡಿಗಳಲ್ಲಿ ಅದರ ಹರಹು
ಕೇವಲ ಕಾಲು ಇಂಚು ಚಚ್ಚೌಕವಾಗಿರಬಹುದು. ದೊಡ್ಡ
ಏಡಿಗಳಲ್ಲಿ ಅದೇ ಬೆನ್ನಿನ ಚಿಪ್ಪು ಒಂದು ಚದರ ಅಡಿ
ವಿಶಾಲವಾಗಿರಲೂ ಬಹುದು. ಈ ಏಡಿಗಳನ್ನು ಕುರಿತು
ಪ್ರಾಣಿ ವಿಜ್ಞಾನಿಗಳು ಬೇಕಷ್ಟು ಅಧ್ಯಯನ ನಡೆಯಿಸಿದ್ದಾರೆ.

ಏಡರು (Adder): ಇದೊಂದು ಜಾತಿಯ ವಿಷವುಳ್ಳ
ಹಾವು. ಯುರೋಪಿನ ಚಳಿಗಾಲದಲ್ಲಿ ಇದು ನೆಲದಲ್ಲಿ
ಹುದುಗಿ ಕಾಲವನ್ನು ಕಳೆದು, ಅನಂತರ ಹೊರಗೆ ಬಂದು
-28-
ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಒಂದು
ಜಾತಿಯ ಹಾವು. ಇದರ ಮೈಯ ಉದ್ದಕ್ಕೂ, ಎರಡೂ
ಮಗ್ಗುಲುಗಳಲ್ಲಿ ಕಂದು ಹಳದಿ ಬಣ್ಣದ ಚಿತ್ತಾರ
ಕಾಣಿಸುತ್ತದೆ. ಇದರ ಮೈಗಿಂತ ಕತ್ತು ಸಪೂರ. ಅದರ
ಮುಂದಣ ತಲೆಯ ಭಾಗವೂ ಕಿರಿದೇ. ಅದರ ತಲೆಯ
ಮೇಲೆ ಹಳದಿಗಂದು ಬಣ್ಣದ V ಆಕಾರದ ನಾಮವಿದೆ. ಆ
ನಾಮದಿಂದ ತೊಡಗಿ ದೇಹದ ಉದ್ದಕ್ಕೂ ಹಾಯುವಂಥ
ಸರಪಣಿಯಂಥ ಚಿತ್ತಾರ ಕಾಣಿಸುತ್ತದೆ. ಹಗಲಿನಲ್ಲಿ
ಇದು ತನ್ನ ಆಹಾರದ ಬೇಟೆ ನಡೆಯಿಸುತ್ತದೆ. ಇಲಿ,
ಗೌಳಿ, ಬಸವನ ಹುಳ, ಹಕ್ಕಿ, ಎರೆಹುಳು ಮೊದಲಾದವು
ಇದಕ್ಕೆ ಆಹಾರ.

ಇದು ಮನುಷ್ಯರನ್ನು ಕಚ್ಚುವುದು ಬಲು ವಿರಳ.
ಕಚ್ಚುವುದರ ಉಪಯೋಗ ತಾನು ಕಚ್ಚಿದ ಪ್ರಾಣಿಯನ್ನು
ನಿಶ್ಚೇತಗೊಳಿಸುವುದು. ಮನುಷ್ಯರನ್ನು ಕಚ್ಚಿದ್ದಾದರೆ ಅದು
ಕಚ್ಚಿದ ಭಾಗವನ್ನು ಬಾಯಿಂದ ಚೀಪಿ, ವಿಷವನ್ನು ಹೀರಿ,
ಅದನ್ನು ಹೊರಕ್ಕೆ ಉಗುಳ ಬೇಕು. ಆ ಗಾಯವನ್ನು
ಪೊಟಾಸಿಯಂ ವರ್ಮಂಗನೇಟಿನಂಥ ಔಷಧದಿಂದ ತಿಕ್ಕ~
ಬೇಕು.

ಯೂರೋಪು ಖಂಡದ ಈ ಹಾವುಗಳ ಅಲ್ಲಿನ
ಹಾವುಗಳಲ್ಲಿಯೇ ವಿಷದ ಹಾವುಗಳೆನಿಸಿಕೊಂಡಿವೆ. ಅವು
ಸಾಮಾನ್ಯವಾಗಿ ಎರಡು ಅಡಿಗಳಷ್ಟು ಉದ್ದಕ್ಕೆ ಬೆಳೆದಾವು.
ಅವಕ್ಕಿರುವ ವಿಷದಿಂದಾಗಿ ಜನಕ್ಕೆ ಭಯವಿದೆ.

ಎಮು (Emu): ಆಸ್ಟ್ರೇಲಿಯ ಖಂಡದ ಹಾರಲಾರದ
ಪಕ್ಷಿಗಳ ಜಾತಿಯಲ್ಲಿ `ಏಮು' ಎಂಬುದು ಒಂದು ಹಕ್ಕಿ.
ಗಾತ್ರದಲ್ಲಿ ಅದು ಆಫ್ರಿಕಾ ಖಂಡದ ಉಷ್ಟ್ರಪಕ್ಷಿಯ
ಒತ್ತಿನ ಸ್ಥಾನದ್ದು. ಸ್ಥೂಲವಾಗಿ ಏಮು ಉಷ್ಟ್ರಪಕ್ಷಿಯನ್ನೇ
ಹೋಲುತ್ತದೆ. ಇದಕ್ಕೆ ದುಂಡಾದ ತಲೆಯಿದೆ; ಗಿಡ್ಡದಾದ
ಕೊಕ್ಕಿದೆ. ಅದು ಮಾತ್ರ ಮೊಂಡ ಕೊಕ್ಕು. ಅದಕ್ಕೆ ಮೈ
ತುಂಬ ರೋಮದಂತಿರುವ ಗರಿಗಳಿವೆ. ಈ ಗರಿಗಳ ವೈಶಿಷ್ಟ್ಯ~
ವೆಂದರೆ, ಪ್ರತಿ ಗರಿಯ ನಡುವೆ ಒಂದೇ ದಂಟಿರುವ ಬದಲು
ಎರಡೆರಡು ದಂಟುಗಳಿವೆ.

ಏಮು ಹಕ್ಕಿಯ ಉದ್ದನೆಯ ಕಾಲುಗಳು
ಬಲಿಷ್ಟವಾಗಿದ್ದು, ಓಡಾಟಕ್ಕೆ ಬಹಳ ಅನುಕೂಲವಾದವು.
ಇದರ ಯಾವತ್ತು ಮೈಯನ್ನು ಹೊದೆಯುವ ಗರಿಗಳು
ಅದರ ಕತ್ತಿನ ಅರ್ಧದ ತನಕವೂ ಬೆಳೆಯುತ್ತವೆ. ಕತ್ತಿನ
ಮೇಲಣ ಅಂಗ ಗರಿಗಳಿಲ್ಲದ ಬೋಳು ಕತ್ತು. ಅದರ
ಕಾಲುಗಳಲ್ಲಿ ಒಂದೊಂದರಲ್ಲೂ ಮೂರು ಬೆರಳುಗಳಿವೆ.
ಅಷ್ಟೇ ಉಗುರುಗಳಿವೆ. ಈ ಪಕ್ಷಿಯು ಬಯಲು ಭೂಮಿ~
ಯಲ್ಲಿ ಅಲೆದಾಡುತ್ತ, ಸೊಪ್ಪು ಸದೆ, ಹಣ್ಣು ಹಂಪಲು
ಮತ್ತು ಗ಼ಡ್ಡೆ ಗೆಣಸುಗಳನ್ನು ತಿನ್ನುವ ಸಸ್ಯಾಹಾರಿ.

ಏಮು ಒಂದು ತಾಸಿಗೆ ಮೂವತ್ತು ಮೈಲು ವೇಗ~
ದಿಂದ ಧಾವಿಸಬಲ್ಲುದು. ಅದು ನೀರಲ್ಲಿ ಈಜಬಲ್ಲದು.
ಈ ಏಮುಗಳು ಸಣ್ಣ ಗುಂಪುಗಳಲ್ಲಿ ಕ಼ಲೆತು, ಆಹಾರ
ಸಂಪಾದನೆಗಾಗಿ ಸಂಚರಿಸುವಂಥವು. ಹೆಣ್ಣು ಏಮು ಸಣ್ಣ
ಕುಳಿ ತೋಡಿ, ಹತ್ತು ಹದಿನೆರಡು ತತ್ತಿಗಳನ್ನು ಅದರಲ್ಲಿ
ಇರಿಸಿದರೆ, ಅವಕ್ಕೆ ಕಾವು ಕೊಡುವ ಕೆಲಸವನ್ನು ಹೆಚ್ಚಾಗಿ
-29-
ಗಂಡು ಹಕ್ಕಿ ಮಾಡುತ್ತದೆ. ಆ ಕೆಲ಼ಸ ಪೂರ್ಣವಾಗಲು
ಎರಡು ತಿಂಗಳು ಬೇಕು. ಹೆಣ್ಣು ಹಕ್ಕಿಯ ಮೊದಲ
ಬಾಣಂತಿತನದಲ್ಲಿ ಅದಕ್ಕೆ ಕಾವಿಗೆ ಕುಳಿತಿರುವ ಕೆಲಸ~
ವಿಲ್ಲದೆ ಹೋದರೂ, ಎರಡನೆಯ ಬಾರಿ ತತ್ತಿಯಿಟ್ಟಾಗ
ಅದನ್ನು ಕಾವು ಕೊಟ್ಟು ರಕ್ಷಿಸುವ ಕೆಲಸ ಹೆಣ್ಣಿನದೇ.
ಮರಿಗಳಿಗೆ ಮೈತುಂಬ ಗರಿಗಳಿದ್ದು ಶರೀರದ ಉದ್ದಕ್ಕೂ
ಬಿಳಿಯ ಪಟ್ಟೆಗಳಿರುತ್ತವೆ. ಅದು ಬೆಳೆದಂತೆ ಮೊದಲಿನ
ಬಣ್ಣವಾಗಲಿ, ಗರಿಗಳಾಗಲಿ ಬದಲಾಗುತ್ತವೆ.

ಐಬೆಕ್ಸ್, ಹೆಗ್ಗೊಂಬಿನ ಮೇಕೆ (Ibex): ಪರ್ವತ
ಪ್ರದೇಶಗಳಲ್ಲಿ ಅಲೆದಾಡುವ ಕೆಲವೊಂದು ಜಾತಿಯ
ಕಾಡಾಡುಗಳಿಗೆ ಈ ಹೆಸರನ್ನು ಬಳಸುತ್ತಾರೆ. ಇವುಗಳ
ಉತ್ತಮ ಮಾದರಿ ಆಲ್ಪ್ಸ ಪರ್ವತಾವಳಿಯಲ್ಲಿ ವಾಸಿಸುವ
ಬಲಿಷ್ಠ ಕಾಯದ, ಭುಜಕ್ಕೆ ಎರಡುವರೆ ಅಡಿಗಳಿಗಿಂತಲೂ
ತುಸು ಹೆಚ್ಚೇ ಎತ್ತರವಿರುವ ಆಡುಗಳು. ಅವುಗಳ ಹಣೆಯ
ಮೇಲಿನ ಕೋಡುಗಳು ಎರಡಡಿಗಿಂತಲೂ ಉದ್ದದವು; ಅವು
ಹಿಂದಕ್ಕೆ ಬಾಗಿಕೊಂಡವು. ಆ ಕೊಂಬುಗಳ ಮುಂಭಾಗ
ಚಪ್ಪಟೆ ಮತ್ತು ಗಂಟು ಗಂಟು. ಅವುಗಳ ಏಣುಗಳನ್ನು
ಗೀಸಿದಂತಿದೆ. ಈ ಐಬೆಕ್ಸುಗಳ ಮೈಯ ಬಣ್ಣ ಕಡುಗಂದು.
ಇತರ ಹಲವಾರು ಪ್ರಾಣಿಗಳಲ್ಲಿ ಬೆನ್ನಿನ ಬಣ್ಣಕ್ಕಿಂತ
ಹೊಟ್ಟೆಯ ಬಣ್ಣವು ಎಳಸಾಗಿದ್ದರೆ, ಐಬೆಕ್ಸುಗಳಲ್ಲಿ
ಹೊಟ್ಟೆಯ ಬಣ್ಣ ಮತ್ತಷ್ಟು ಕಡುಪು; ಅವುಗಳ
ಮುಖವೂ ಕಪ್ಪು.

ಐಬಿಸು (Ibis): ಇವು ಬಕ ಪಕ್ಷಿಯ ವರ್ಗಕ್ಕೆ ಸೇರಿದ
ಜಲ ಪಕ್ಷಿಗಳು. ಇವುಗಳ ಕಾಲುಗಳು ಬಲಿಷ್ಟ, ಅವುಗಳ
ಬಣ್ಣ ಕೆಂಚು. ಯಾವತ್ತು ಐಬಿಸುಗಳ ಕೊಕ್ಕು ನೀಳವೂ,
ಬಾಗಿದ್ದೂ ಆಗಿವೆ; ಅವುಗಳ ಕೊಕ್ಕು ಕೆಂಪಾಗಿರುವುದೂ
ಉಂಟು, ಕಪ್ಪೂ ಉಂಟು. ಅಂಥ ಬಣ್ಣ ಕೊಕ್ಕಿನ ಬುಡ~
ದಲ್ಲಿ ಬಣ್ಣ ಬಿಳುಪು. ಅವುಗಳಲ್ಲಿ ಮೋಹಕ ಪಾಟಲ
ವರ್ಣದ ಪಕ್ಷಿಗಳೂ ಇವೆ.

ಇವುಗಳಲ್ಲಿ ಸುಮಾರು ಇಪ್ಪತ್ತಕ್ಕಿಂತಲೂ
ಅಧಿಕ ಸಂಖ್ಯೆಯ ಜಾತಿಗಳನ್ನು ಗುರುತಿಸಿದ್ದಾರೆ. ಇವೆಲ್ಲ
ಉಷ್ಣ ವಲಯದಲ್ಲಿ ಹೆಚ್ಚಾಗಿ ವಾಸಿಸುವವು. ತೀರ ಕೆಲವು
ಜಾತಿಗಳು ಮಾತ್ರ ಕಡಿಮೆ ಉಷ್ಣತೆಯಿರುವ ಪ್ರದೇಶಗಳಿಗೆ
-30-
ವಲಸೆ ಹೋಗುತ್ತವೆ. ಇವು ನೀರಿನಲ್ಲಿ ವಾಸಿಸುವ ಪ್ರಾಣಿ~
ಗಳನ್ನು ಆಹಾರವಾಗಿ ತಿನ್ನುವ ಕಾರಣದಿಂದ ಸಿಹಿನೀರಿನ
ಜಲಾಶಯ, ಸರೋವರ ಅಥವಾ ನದಿಗಳ ಬಳಿ ವಾಸಿಸು~
ತ್ತವೆ. ಅವುಗಳು ಹೆಚ಼್ಚಾಗಿ ಸಮೂಹ ಜೀವನ ನಡೆಯಿಸು~
ವಂಥವು. ಜಲಚರಗಳು ಮಾತ್ರ ಅವುಗಳ ಆಹಾರವಾಗಿರು~
ವುದರಿಂದ ಮತ್ತು ಅವುಗಳ ವಾಸ ಗೂಡು ಮೊದಲಾದುವು
ನೀರಿನ ಆಸರೆಗೆ ಹತ್ತಿರವಾಗಿರುವ ಗಿಡ ಮರಗಳು, ಅಥವಾ
ಜೊಂಡು ಹುಲ್ಲಿನ ಮೆಳೆಗಳು. ಸರೋವರ ಮಧ್ಯದ
ದ್ವೀಪಗಳು, ಕಡಿದಾದ ಬೆಟ್ಟಗಳೂ, ಅವುಗಳ ವಾಸಕ್ಕೆ
ಅನುಕೂಲವಾದ ತಾವುಗಳೇ.

ಒಕಾಪಿ (Okapi): ಮಧ್ಯ ಆಫ್ರಿಕದ ಮಳೆಗಾಡುಗಲ್ಲಿ
ವಾಸಿಸುವ ಈ ಪ್ರಾಣಿ ಜಿರಾಫೆಯ ತಮ಼್ಮನೆಂಬ ಭಾವನೆ
ಹುಟ್ಟಿಸುವ ಪಶು. ಜಿರಾಫೆಯಂತೆ ಇದರ ಮುಂಗಾಲು~
ಗ಼ಳು ಹಿಂಗಾಲುಗಳಿಗಿಂತ ದೊಡ್ಡವು; ಅದೇ ರೀತಿ ಕತ್ತೂ
ಸಾಕಷ್ಟು ಎತ್ತರಕ್ಕೆ ಬಾಚುವಂಥದು. ಇದರ ಭುಜದ
ಎತ್ತರ ಐದು ಅಡಿಗಳಷ್ಟಾದರೆ ಒಟ್ಟು ಎತ್ತರ ಏಳು
ಅಡಿಗಳಷ್ಟಾದೀತು. ಇದು ಮೆಲುಕಾಡುವ ಮತ್ತು ಕಾಲಲ್ಲಿ
ಸೀಳು ಗೊರಸಿರುವ ಪಶು. ಇದರ ಮೈಯ ಬಣ್ಣ ಕೆನ್ನೇರಿಳೆ.
ಮುಖದ ಬಣ್ಣ ಕಪಿಲ ವರ್ಣ. ಆದರೆ ಇದರ ಮೈ ಮೇಲೆ
ಜಿರಾಫೆಗಳಿಗಿರುವಂತೆ ಬಣ್ಣದ ದೊಡ್ಡ ದೊಡ್ಡ ಹುಂಡು~
ಗಳಿಲ್ಲವಾದರೂ ಕಾಲುಗಳಲ್ಲಿ, ಪ್ರಷ್ಠಭಾಗದಲ್ಲಿ ಬಿಳಿ
ಮತ್ತು ಕಪ್ಪು ಬಣ್ಣಗಳ ಪಟ್ಟೆಗಳಿರುವುದರಿಂದ, ನೋಡಿ~
ದರೆ ಜೀಬ್ರಾದ ನೆನೆಪು ಬಂದೀತು. ಈ ಶತಮಾನದ
1901ನೇ ಇಸವಿಯ ತನಕವೂ ಈ ಪ್ರಾಣಿಯ ಅಸ್ತಿತ್ವ
ಹೊರಗಿನ ಜಗತ್ತಿಗೆ ತಿಳಿದಿರಲಿಲ್ಲ. ಗಂಡು ಒಕಾಪಿಯ
ನೆತ್ತಿಯ ಮೇಲೆ ಎರಡು ಗಿಡ್ಡ ಕೊಂಬುಗಳಿರುತ್ತವೆ. ಆ
ಕೊಂಬುಗಳು ಚರ್ಮ ಮತ್ತು ರೋಮಗಳಿಂದ ಹೊದೆದವು.

ಇದರ ಬಾಯಿಯಲ್ಲಿ ಒಟ್ಟು 32 ಹಲ್ಲುಗಳಿವೆ.
ಮರಗಳ ಸೊಪ್ಪನ್ನು ಎಳೆದು ತಿನ್ನುವ ಕೆಲಸವನ್ನು ಅದರ
ನಾಲಗೆಯೊಂದೇ ಮಾಡಬಲ್ಲುದು. ನಾಲಗೆಯನ್ನು ಅದು
ಹೊರಕ್ಕೆ ಚಾಚಿದಾಗ, ಅದರ ತುದಿಯು ಅದರ ಕಣ್ಣಿಗೆ
ತಗಲುವಷ್ಟು ಉದ್ದವಾದೀತು. ಸಸ್ಯಾಹಾರಿಯಾದ ಇದು
ಇತರ ಹಲವಾರು ಪ್ರಾಣಿಗಳ ವಿಚಾರದಲ್ಲಿ ಭಯಪಡುವ
ಜೀವಿಯಾದುದರಿಂದ, ಅಡವಿಯಲ್ಲಿ ಸದಾ ಅಡಗಿಕೊಂಡೇ
ಜೀವಿಸುವುದರಿಂದ ಜನರಿಗೆ ಕಾಣ ಸಿಗುವುದು ಅಪೂರ್ವ.
ಅಲ್ಲದೆ, ಅದರ ವಂಶದ ಪಶುಗಳ ಸಂಖ್ಯೆಯೂ ಹೆಚ್ಚಿಗೆ
ಉಳಿದಿಲ್ಲ.

ಒಪೂಸಮು (Oppusum): ಇದು `ಶಿಶುಕೋಶಿ' ವರ್ಗದ
ಒಂದು ಪ್ರಾಣಿ. ಎಂದರೆ, ಇದರ ಮರಿಗಳು ತಾಯಿಯ
ಎದೆಯಲ್ಲಿರುವ ಒಂದು ಚೀಲದಲ್ಲಿ ತಮ್ಮ ಭ್ರೂಣಾವಸ್ಥೆ~
ಯಿಂದ ಮುಂದಣ ಯಾವತ್ತು ಬೆಳವಣಿಗೆಯನ್ನು ಪಡೆಯು~
ತ್ತವೆ. ಇಂಥ ಜೀವಿಗಳ ಉದಯ ದಕ್ಷಿಣ ಅಮೇರಿಕ
ಖಂಡದಲ್ಲಿ ತೊಡಗಿತು. ಅವುಗಳಲ್ಲಿ ಕೆಲವು ಜೀವಿಗಳು
ಅನಂತರ ಅಲ್ಲಿಂದಲೇ ಉತ್ತರ ಅಮೇರಿಕಕ್ಕೆ ಹೋದು~
ದುಂಟು. ಇನ್ನಿತರ ಜಾತಿಯ ಪ್ರಾಣಿಗಳು ದ. ಅಮೇರಿಕ~
ದೊಡನೆ ಅನಾದಿ ಕಾಲದಲ್ಲಿ ಒಂದೂಗೂಡಿದ್ದ ಆಸ್ಟ್ರೇಲಿಯ
ಖಂಡದಲ್ಲೂ ಕಾಣಿಸತೊಡಗಿದುವು. ಇಂದು ಶಿಶುಕೋಶಿಗಳ
ಕುಲ ಆಸ್ಟ್ರೇಲಿಯದಲ್ಲಿ ಅಧಿಕವಾಗಿದೆ. ಅಂಥ ಜೀವಿ~
ಗಳಲ್ಲಿ ಕೆಲವೊಂದು ಜಾತಿಗಳು ದಕ್ಷಿಣ ಅಮೇರಿಕದಲ್ಲಿ
ಇಂದಿಗೂ ತಮ್ಮ ಸಂತಾನವನ್ನು ಉಳಿಸಿಕೊಂಡಿವೆ. ಅವು~
ಗಳಲ್ಲಿ `ಒಪೂಸಮು' ಎಂಬುದು ಒಂದು ಅಪೂರ್ವ ಜೀವಿ.
ಇದರ ಸ್ಥೂಲ ಆಕಾರ ಇಲಿ, ಅಥವಾ ಹೆಗ್ಗಣಗಳಂತಿದೆ.
ಅವುಗಳಲ್ಲಿ ಇಲಿಗಳಷ್ಟೇ ಸಣ್ಣ ಜಾತಿಗಳಿವೆ. ಬೆಕ್ಕಿನಷ್ಟೇ
ದೊಡ್ಡ ಜಾತಿಗಳೂ ಇವೆ. ಅವು ಇಲಿಗಳಿಗಿಂತ ಹೆಚ್ಚಿಗೆ
ಮೈರೋಮವುಳ್ಳ ಜಾತಿ. ಅವುಗಳ ಅಂಗರಚನೆಯ ವೈಶಿಷ್ಟ್ಯ~
ವೆಂದರೆ - ಅವು ತಮ್ಮ ಉದ್ದನೆ. ಬಾಲದ ಕುಡಿಯಿಂದ
ಮರದ ಕೊಂಬೆ ರೆಂಬೆಗಳನ್ನು ಸುತ್ತಿ ಹಿಡಿಯಬಲ್ಲುವು.
ಈ ಒಪೂಸಮುಗಳ ಕಾಲು ಮತ್ತು ಹಸ್ತಗಳಲ್ಲಿ ನಾಲ್ಕು
ಬೆರಳುಗಳು ಒತ್ತೊತ್ತಿಗಿವೆ. ಆ ಬೆರಳುಗಳ ಕುಡಿಯಲ್ಲಿ
ಉಗುರುಗಳೂ ಇವೆ. ಪಾದದಲ್ಲಿ ಅದರ ಇತರ ಬೆರಳು~
ಗಳಿಗೆ ಇದಿರಾಗಿರುವ ಹೆಬ್ಬೆರಳು ಪ್ರತ್ಯೇಕವಾಗಿದ್ದು, ಉಳಿದ
ಬೆರಳುಗಳ ಇದುರಿಗಿದೆ. ಅದಕ್ಕೆ ಉಗುರು ಇಲ್ಲ.

ಇವು ರಾತ್ರಿಚರ ಪ್ರಾಣಿಗಳು. ಮರಗಳ ಹಣ್ಣು
ಹಂಪಲನ್ನು, ಸಣ್ಣಪುಟ್ಟ ಅನ್ಯ ಜೀವಿಗಳನ್ನು ತಿಂದು
ಬದುಕುವಂಥವು. ಈ ಪ್ರಾಣಿಗಳಲ್ಲಿ ಹೆಣ್ಣು ಒಪೂಸಮು
ಗಬ್ಬವಾಯಿತಾದರೆ ಅದರ ಹೊಟ್ಟೆಯಲ್ಲಿ ಹತ್ತೋ
-31-
ಹದಿನೈದೋ ಬ್ರೂಣಗಳು ಜನಿಸಿ, ಎಂಟು ವಾರಗಳ ಕಾಲ
ಬೆಳೆದ ಬಳಿಕ, ಅವು ತಾಯಿಯ ಶರೀರದಿಂದ ಹೊರಕ್ಕೆ
ಬಂದಾವು. ಅನಂತರ ಬಲು ಉಪಾಯದಿಂದ, ತಾಯಿಯ
ಎದೆಯ ಮುಂದಣ ಶಿಶುಕೋಶವನ್ನು ಸೇರಿ, ಅಲ್ಲಿ
ಸುಮಾರು ಮೂರು ತಿಂಗಳ ಕಾಲವನ್ನು ಕಳೆದು ಅನಂತರ
ಜನಿಸುತ್ತವೆ. ಮುಂದೆಯೂ ಆ ಮರಿಗಳು ಸ್ವತಂತ್ರ ಜೀವನ
ನಡೆಯಿಸಲು ಶಕ್ತವಾಗುವ ತನಕ ತಮ್ಮ ತಾಯಿಯ ಮೈಗೆ
ಅಂಟಿಕೊಂಡೇ, ಅಲೆದಾಡುತ್ತವೆ.
﻿
ಕಾನೂನು ಪ್ರಾಧ್ಯಾಪಕರು
03-05-21
Kannada
-35-

ಅಧ್ಯಾಯ 3
ವಿವಾಹ

ಪ್ರ. 10. "ಮುಸ್ಲಿಂ ಕಾನೂನಿನ ಪ್ರಕಾರ ವಿವಾಹವು ಒಂದು ದಿವಾನೀ
ಕರಾರು ಆಗಿರುತ್ತದೆ." ಈ ಹೇಳಿಕೆಯನ್ನು ಚರ್ಚಿಸಿರಿ ಮತ್ತು ಮುಸ್ಲಿಂ ಕಾನೂನಿನ
ಅಧೀನ ವಿವಾಹದ ಅವಶ್ಯಕ ಅಂಶಗಳನ್ನು ಚರ್ಚಿಸಿರಿ.

ಉ. ಒಂದು ಮುಸ್ಲಿಂ ವಿವಾಹದ ಸ್ವರೂಪ ಮತ್ತು ಅವಶ್ಯಕತೆಗಳು :

ಮಹಮ್ಮದೀಯ ಕಾನೂನಿನ ಪ್ರಕಾರ, ವಿವಾಹವು ಒಂದು ದಿವಾನೀ ಕರಾರು
ಆಗಿದ್ದು ಅದರ ಗುರಿಯು ಲೈಂಗಿಕ ಸಂಭೋಗವನ್ನು ಮತ್ತು ಸಂತತಿ ಪಡೆಯುವಿಕೆ~
ಯನ್ನು ಕಾನೂನುಬದ್ಧಗೊಳಿಸುವುದಾಗಿರುತ್ತದೆ. ಈ ಹೇಳಿಕೆಗೆ ಕೆಲವೊಮ್ಮೆ
ಅವಶ್ಯಕತೆ ಮೀರಿ ಮಹತ್ವಕೊಡಲಾಗುತ್ತದೆ ಮತ್ತು ಇದರಿಂದಾಗಿ ಒಂದು ಮುಸ್ಲಿಂ
ವಿವಾಹದ ನಿಜವಾದ ಸ್ವರೂಪವು ನಿರ್ಲಕ್ಷಿಸಲ್ಪಡುತ್ತದೆ. ಇದರಿಂದಾಗಿ ಒಂದು
ಮುಸ್ಲಿಂ ವಿವಾಹದ ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪವು ಗಮನಿಸಲಾಗುವು~
ದಿಲ್ಲ. ಇಸ್ಲಾಮಿನಲ್ಲಿ ವಿವಾಹವು ಸಾಮಾಜಿಕ ಜೀವನದ ಆಧಾರವೆಂಬುದಾಗಿ ಸ್ವೀಕರಿ~
ಸಲ್ಪಟ್ಟುದನ್ನು ನಾವು ಮರೆಯಬಾರದು. ಇದು ಒಂದು ಕರಾರು ಎಂಬುದರಲ್ಲಿ
ಸಂಶಯವಿಲ್ಲ. ಆದರೆ ಇದೊಂದು ಪವಿತ್ರವಾದ ಒಡಂಬಡಿಕೆಯೂ ಸಹ ಆಗಿದೆ.
ಪೈಗಂಬರನು ಒಮ್ಮೆ ವಿವಾಹದ ಬಗ್ಗೆ ಒಂದು ಉಪದೇಶ ಕೊಟ್ಟಿದ್ದನು ಮತ್ತು ಅದು
ಮುಸ್ಲಿಂ ವಿವಾಹ ಕಾಲದಲ್ಲಿ ಇಂದಿಗೂ ಸಹ ಹೇಳಲಾಗುತ್ತದೆ. ಈ ಉಪದೇಶವು
ತುಂಬಾ ವ್ಯವಹಾರಿಕ ಸಲಹೆ ಮತ್ತು ಅತ್ಯುತ್ತಮ ಭಾವನೆಗಳಿಂದ ಕೂಡಿಕೊಂಡಿದೆ.

ಒಂದು ಕಾನೂನುಬದ್ಧವಾದ ವಿವಾಹವು ಘಟಿಸಲ್ಪಡಬೇಕಾದರೆ ಯಾವತ್ತೂ
ಔಪಚಾರಿಕತೆಯ ಅವಶ್ಯಕತೆಯಿಲ್ಲ; ಇದಕ್ಕಾಗಿ ಯಾವತ್ತೂ ಮತೀಯ ಆಚರಣೆಯ
ಅವಶ್ಯಕತೆಯೂ ಇಲ್ಲ. ಒಂದು ವಿಧ್ಯುಕ್ತವಾದ ಕರಾರು ನಿರ್ಮಿಸಲ್ಪಡಲು ಯಾವ
ಎಲ್ಲ ಷರತ್ತುಗಳು ಅವಶ್ಯಕವೊ ಅದೇ ಷರತ್ತುಗಳು ಒಂದು ವಿವಾಹಕ್ಕೂ ಸಹ ಅವಶ್ಯಕ~
ವಾಗಿವೆ. ಹೀಗೆ, ಪಕ್ಷಗಾರರು ಸ್ವಸ್ಥಚಿತ್ತದವರಾಗಿರಬೇಕು ಮತ್ತು ಅನ್ಯಥಾ ಕರಾರು
ಮಾಡಲು ಸಕ್ಷಮರಾಗಿರಬೇಕು ಮತ್ತು ಅವರು ನಿಷೇಧಿತ ಸಂಬಂಧದ ಹಂತಗಳೊಳಗೆ
ಬರಬಾರದು. ಚಿತ್ತವಿಕಲರು ಮತ್ತು ಯೌವನಾವಸ್ಥೆಯ ವಯಸ್ಸಿಗೆ ಬಾರದಿರುವ
ಅಲ್ಪವಯಿಗಳು ತಮ್ಮ ಸಂರಕ್ಷರ ಮೂಲಕ ವಿವಾಹದ ಕರಾರನ್ನು ವಿಧ್ಯುಕ್ತವಾಗಿ
-36-
ಮಾಡಿಕೊಳ್ಳಬಹುದು. ಯೌವನಾವಸ್ಥೆಯ ವಯಸ್ಸಿಗೆ ಬಾರದಿರುವ ಒಬ್ಬ ಹುಡುಗ
ಅಥವಾ ಹುಡುಗಿಯ ಪ್ರಕರಣದಲ್ಲಿ, ಕಾನೂನೀ ಸಂರಕ್ಷಕನು ಅದಕ್ಕೆ ಸಮ್ಮತಿ ಕೊಟ್ಟ
ಹೊರತು ಅದು ವಿಧ್೟ುಕ್ತವಲ್ಲ.

ಒಂದು ಮುಸ್ಲಿಂ ವಿವಾಹದ ಮೂರು ಅವಶ್ಯಕತೆಗಳು :
1. ಪ್ರಸ್ತಾವ ಮತ್ತು ಸ್ವೀಕೃತಿ.
2. ವಿವಾಹದ ಕರಾರು ಮಾಡುವ ಸಾಮರ್ಥ್ಯ.
3. ಯಾವತ್ತೂ ಅಡತಡೆಯಿಲ್ಲದಿರುವುದು.

1. ಪ್ರಸ್ತಾವ ಮತ್ತು ಸ್ವೀಕೃತಿ

ಅಲ್ಲೊಂದು ಪ್ರಸ್ತಾವವಿದ್ದಿರಬೇಕು ಮತ್ತು ಪ್ರಸ್ತಾವದ ಒಂದು ಸ್ವೀಕೃತಿ ಇದ್ದು
ಇವೆರಡೂ ಒಂದೇ ಭೇಟಿಯ ಕಾಲದಲ್ಲಿ ಮತ್ತು ಇಬ್ಬರು ಗಂಡು ಅಥವಾ ಒಬ್ಬ ಗಂಡು
ಮತ್ತು ಇಬ್ಬರು ಹೆಣ್ಣು ಸಾಕ್ಷಿದಾರರ ಮುಂದೆ ವ್ಯಕ್ತಮಾಡಲ್ಪಟ್ಟವುಗಳಾಗಿರಬೇಕು.
ಪ್ರಸ್ತಾವ ಮತ್ತು ಸ್ವೀಕೃತಿ ಒಂದೇ ಭೇಟಿಯಲ್ಲಿ ವ್ಯಕ್ತಮಾಡಲ್ಪಟ್ಟವುಗಳಾಗಿರಬೇಕು.
ಒಂದು ಭೇಟಿಯ ಕಾಲದಲ್ಲಿ ಮಾಡಲಾದ ಒಂದು ಸ್ವೀಕೃತಿ ಇವು ಒಂದು ವಿಧ್ಯುಕ್ತ~
ವಾದ ವಿವಾಹವಾಗಿ ಘಟಿಸಲ್ಪಡುವುದಿಲ್ಲ. ಸಾಮಾನ್ಯವಾಗಿ ಒಂದು ಪ್ರಸ್ತಾವವು
ಈ ರೀತಿಯಿರುತ್ತದೆ-"ನನ್ನನ್ನು ನಾನು ನಿನಗೆ ವಿವಾಹವಾಗಿರುವೆನು" ಮತ್ತು ಸ್ವೀಕೃ~
ತಿಯ ಸಾಮಾನ್ಯ ಸ್ವರೂಪವು ಈ ರೀತಿಯಿತ್ತದೆ - "ನಾನು ಸಮ್ಮತಿಸಿರುವೆನು."

ಒಂದು ವಿಧ್೟ುಕ್ತವಾದ ಮುಸ್ಲಿಂ ವಿವಾಹಕ್ಕಾಗಿ ಯಾವತ್ತೂ ಬರವಣಿಗೆ ಅಥವಾ
ಧಾರ್ಮಿಕ ಆಚರಣೆಯ ಅವಶ್ಯಕತೆಯಿರುವುದಿಲ್ಲ. ಆದರೆ ಸಾಕ್ಷಿದಾರರ ಹಾಜರಿಯು
ಕೇವಲ ಸಾಕ್ಷ್ಯಕ್ಕೆ ಸಂಬಂಧಪಟ್ಟ ಸಂಗತಿಯಾಗಿದೆಯಲ್ಲದೆ ಇನ್ನೇನೂ ಆಗಿರುವುದಿಲ್ಲ.
ಸಾಕ್ಷಿದಾರರಿಲ್ಲದ ಒಂದು ವಿವಾಹವು ಕೇವಲ ಕ್ರಮಬಾಹಿರ ಆಗಿರುತ್ತದೆ.
ಮತ್ತು ಅದು ಶೂನ್ಯ ಆಗುವುದಿಲ್ಲ; ಶಿಯಾ ಕಾನೂನಿನ ಪ್ರಕಾರ ಸಾಕ್ಷಿದಾ~
ರರ ಹಾಜರಿಯು ಸಹ ಅವಶ್ಯಕವಲ್ಲ.

ಮೋಸ ಅಥವಾ ಬಲಾತ್ಕಾರದಿಂದ ಪಡೆಯಲಾದ ಸಮ್ಮತಿ :

ಒಂದೊಮ್ಮೆ ಒಂದು ವಿವಾಹ ಕರಾರಿಗೆ ಸಮ್ಮತಿಯು ಬಲಾತ್ಕಾರದಿಂದ ಅಥವಾ
ಮೋಸದಿಂದ ಪಡಯಲಾಗಿದ್ದರೆ, ಆ ವಿವಾಹವು ಅನುಸಮ್ಮತಿಸಲ್ಪಟ್ಟ ಹೊರತು ಅದು
ಅಸಿಂಧುವಾಗುತ್ತದೆ. ಮುಸ್ಲಿಂ ಕಾನೂನಿನ ಅಧೀನ, ಒತ್ತಡ ಹೇರಿ ಮಾಡಲಾದ
ಒಂದು ವಿವಾಹವು ಕಾನೂನು ಬಾಹಿರವಾಗಿರುತ್ತದೆ.

2. ವಿವಾಹ ಕರಾರು ಮಾಡುವ ಸಾಮರ್ಥ್ಯ :

ಮಹಮ್ಮದೀಯ ಕಾನೂನಿನ ಅಧೀನ ಚಿತ್ತಸ್ವಾಸ್ಥ್ಯವುಳ್ಳ ಮತ್ತು ಯೌವನಾಸ್ಥೆಗೆ
-37-
ಮುಟ್ಟಿರುವ ಪ್ರತಿಯೊಬ್ಬ ಮುಸಲ್ಮಾನನು ವಿವಾಹವಾಗುವ ಸಾಮರ್ಥ್ಯ
ಹೊಂದಿರುವನು.

ವಯಸ್ಕತನದ ವಯಸ್ಸು :

ಮಹಮ್ಮದೀಯ ಕಾನೂನಿನ ಅಧೀನ, ತಾರುಣ್ಯಕ್ಕೆ ಮುಟ್ಟಿದಾಗ ಒಬ್ಬ
ವ್ಯಕ್ತಿಯು ವಯಸ್ಕತನದ ವಯಸ್ಸಿಗೆ ಬಂದಿರುವನು ಎಂಬುದಾಗಿ ಎಣಿಸಲ್ಪಡುವನು.
ಭಾರಹತೀಯ ವಯಸ್ಕತನ ಅಧಿನಿಯಮ. 1875 ಇದರ ಉಪಬಂಧಗಳು ವಿವಾಹ,
ಕನ್ಯಾಶುಲ್ಕ ಮತ್ತು ವಿವಾಹ ವಿಚ್ಛೇದನೆಗೆ ಸಂಬಂಧಿಸಿರುವ ಸಂಗತಿಗಳಿಗೆ ಅನ್ವಯವಾ~
ಗುವುದಿಲ್ಲ. ಹೀಗೆ, ಒಬ್ಬ ಮುಸಲ್ಮಾನನು ಚಿತ್ತಸ್ವಾಸ್ಥ್ಯವುಳ್ಳವನಾಗಿದ್ದು ಅವನು
ಅಥವಾ ಅವಳು ಯೌವನಾಸ್ಥಗೆ ಮುಟ್ಟಿದರೆ, ಅವನು ಅಥವಾ ಅವಳು 18 ವರ್ಷಗಳ
ವಯಸ್ಸಿಗಿಂತ ಕಡಿಮೆಯವನಾಗಿದ್ದರೂ ಅಥವಾ ಕಡಿಮೆಯವಳಾಗಿದ್ದರೂ ಸಹ ಒಬ್ಬ
ಮುಸಲ್ಮಾನನು ಅಥವಾ ಮುಸಲ್ಮಾನಳು ಒಂದು ವಿವಾಹದ ಕರಾರಿಗೆ ಸೇರಲು
ಸಕ್ಷಮರಾಗುವರು. ಮಹಮ್ಮದೀಯ ಕಾನೂನಿನ ಪ್ರಕಾರ, ವಿವಾಹ, ಕನ್ಯಾಶುಲ್ಕ
ಮತ್ತು ವಿವಾಹವಿಚ್ಛೇದನೆಗೆ ಸಂಬಂಧಪಟ್ಟ ಸಂಗತಿಗಳಲ್ಲಿ ಯೌವನಾವಸ್ಥೆ ಮತ್ತು
ವಯಸ್ಕತನ ಇವೆರಡು ಒಂದೇ ಆಗಿರುತ್ತವೆ.

ಯೌವನಾವಸ್ಥೆಯ ಪರಿಭಾಷೆ

ಮಹಮ್ಮದೀಯ ಕಾನೂನಿನ ಅಧೀನ, ಹನಫಿ ಕಾನೂನಿನ ಪ್ರಕಾರ ಯಾವುದೇ
ಲಿಂಗದ ಒಬ್ಬ ಅಲ್ಪವಯಿಯ ತಾರುಣ್ಯವು 15 ವರ್ಷಗಳ ವಯಸ್ಸನ್ನು ಪೂರ್ತಿಗೊಳಿಸಿ~
ದಾಗ ಆ ವ್ಯಕ್ತಿಯು ತಾರುಣ್ಯಾವಸ್ಥೆಯನ್ನು ಪಡೆದಿರುವನು ಅಥವಾ ಪಡೆದಿರುವಳು
ಎಂಬ ಪೂರ್ವ ಭಾವನೆ ತೆಗೆದುಕೊಳ಼್ಳಲಾಗುತ್ತದೆ. ಶಿಯಾ ನಾರಿಯರ ಪ್ರಕರಣದಲ್ಲಿ,
ತಾರುಣ್ಯದ ವಯಸ್ಸು ರಜಸ್ವಲೆಯಾಗುವಿಕೆಯೊಂದಿಗೆ ಆರಂಭವಾಗುತ್ತದೆ.

ತಾರುಣ್ಯ ಎಂದರೆ ಯಾವ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯು ಸಂತಾನೋತ್ಪನ್ನ
ಮಾಡಲು ಅಥವಾ ಒಬ್ಬ ನಾರಿಯು ಗರ್ಭದಾರಣೆ ಮಾಡಲು ಸಮರ್ಥಳಾಗುವಳೊ ಆ
ಅವಧಿಯಾಗಿರುತ್ತದೆ. ಭಾರತದಲ್ಲಿ ಒಬ್ಬ ನಾರಿಯ ಯೌವನವು ಸಾಮಾನ್ಯವಾಗಿ
13 ನೇ ಅಥವಾ 14ನೇ ವಯಸ್ಸಿನಲ್ಲಿ ಆರಂಭವಾಗುತ್ತದೆ. `ಹೆದಾಯ' ಇದರ ಪ್ರಕಾರ
ಒಬ್ಬ ಹುಡುಗನಿಗೆ ತಾರುಣ್ಯಕ್ಕೆ ಮುಟ್ಟುವ ಅತ್ಯಂತ ಕಡಿಮೆ ವಯಸ್ಸು 12 ವರ್ಷ
ಮತ್ತು ಒಬ್ಬ ಹುಡುಗಿಗೆ 9 ವರ್ಷ

ಭಾರತೀಯ ವಯಸ್ಕತನ ಅಧಿನಿಯಮವು ವಿವಾಹ ಸಂಬಂಧಿ ಮುಸ್ಲಿಂ ಕಾನೂ~
ನನ್ನು ಎಲ್ಲೆಲ್ಲೂ ಸ್ಪರ್ಶಿಸಿಲ್ಲ. ಇದರಿಂದಾಗಿ ಈ ಅಧಿನಿಯಮದ ಅಧೀನ ಒಬ್ಬ 
#ವ್ಯಕ್ತಿಯು
ಅಲ್ಪವಯಿಯಾಗಿದ್ದರೂ ಸಹ ಅವನು ಅಥವಾ ಅವಳು ಯೌವನಾವಸ್ಥೆಗೆ ಬಂದಿದ್ದರೆ
-38-
ಒಂದು ವಿಧ್ಯುಕ್ತವಾದ ವಿವಾಹದ ಕರಾರು ಮಾಡಿಕೊಳ್ಳಬಹುದು. ಶಿಶುವಿವಾಹ
ನಿರ್ಬಂಧನಾ ಅಧಿನಿಯಮ, 1929 ಇದರ ಒಂದು ಮುಖ್ಯ ಪರಿಣಾಮವಾಗಿ, 21
ವರ್ಷಗಳ ವಯಸ್ಸಿಗಿಂತ ಕಡಿಮೆ ವಯಸ್ಸಿನ ಪುರುಷರ ಮತ್ತು 18 ವರ್ಷಗಳ ವಯಸ್ಸಿ~
ಗಿಂತ ಕಡಿಮೆಯ ವಯಸ್ಸಿನ ನಾರಿಯ ವಿವಾಹ ನಿರ್ಬಂಧಿಸಲಾಗಿದೆ. ಆದರೆ ಈ
ಅಧಿನಿಯಮವು ಅಂಥ ವಿವಾಹಗಳನ್ನು ಶೂನ್ಯಗೊಳಿಸುವುದಿಲ್ಲ. ಇದು ಕೇವಲ ಒಂದು
ದಂಡನಾತ್ಮಕ ಅಧಿನಿಯವಾಗಿದೆ. ಇದರ ಉಪಬಂಧಗಳ ಉಲ್ಲಂಘನೆಯ ಸಂಬಂಧ~
ದಲ್ಲಿ ಇದು ಕೆಲವು ಅಂಶಗಳನ್ನು ಗೊತ್ತುಮಾಡಿದೆ.

ವಯಸ್ಸಿನ ಬಗ್ಗೆ ಪುರಾವೆ :

ವಯಸ್ಸಿನ ಸಂಗತಿಯು ಒಂದು ವಸ್ತುಸ್ಥಿತಿಗೆ ಸಂಬಂಧಪಟ್ಟ ವಿಷಯವಾಗಿರು~
ತ್ತದೆ ಮತ್ತು ಜನನ ಪತ್ರವು ಹಾಜರು ಪಡಿಸದಿದ್ದರೂ ಸಹ ಇತರ ಸಾಕ್ಷ್ಯದಿಂದ ವ೟~
ಸ್ಸನ್ನು ಸಾಬೀತು ಪಡಿಸಬಹುದು.

ವಿವಾಹ ಮಾಡಿಕೊಳ್ಳಲ್ಪಡಲು ಸಾಮರ್ಥ್ಯ :

ಮಹಮ್ಮದೀಯ ಕಾನೂನಿನ ಅಧೀನ, ತಾರುಣ್ಯಾವಸ್ಥೆಗೆ ಬಂದಿರುವ ಮತ್ತು
ಚಿತ್ತಸ್ವಾಸ್ಥ್ಯವಿರುವ ಒಬ್ಬ ವ್ಯಕ್ತಿ ಮಾತ್ರ ವಿವಾಹದ ಕರಾರು ಮಾಡಬಹುದಾದರೂ
ಸಹ ಪ್ರತಿಯೊಬ್ಬ ವ್ಯಕ್ತಿಯು ವಿವಾಹ ಮಾಡಿಕೊಳ್ಳಲ್ಪಡಲು ಸಮರ್ಥನಾಗಿರುವನು.
ಒಬ್ಬ ಅಲ್ಪವಯಿ ಅಥವಾ ಚಿತ್ತ ವಿಕಲ ವ್ಯಕ್ತಿಯು ಸಹ ತನ್ನ ಸಂರಕ್ಷಕನ ಮೂಲಕ
ವಿವಾಹ ಕರಾರು ಮಾಡಿಕೊಳ್ಳಬಹುದು.

ವಿವಾಹದಲ್ಲಿ ಸಂರಕ್ಷಕತ್ವ :

ತಾರುಣ್ಯದ ವಯಸ್ಸಿಗೆ ಬಂದಿಲ್ಲದ ಒಂದು ಹೆಣ್ಣು ಅಥವಾ ಗಂಡು ಮುಸ್ಲಿಂ
ಶಿಶುವು ಒಂದು ವಿವಾಹ ಕರಾರು ಮಾಡಿಕೊಳ್ಳಲು ಸಕ್ಷಮವಾಗಿರುವುದಿಲ್ಲ. ಆದರೆ ಒಬ್ಬ
ಅಲ್ಪವಯಿಯ ಸಂರಕ್ಷಕನು ಆ ಅಲ್ಪವಯಿಯ ವಿವಾಹದ ಬಗ್ಗೆ ವಿಧ್ಯುಕ್ತವಾಗಿ ಕರಾರು
ಮಾಡಿಕೊಳ್ಳಬಹುದು. ವಿವಾಹದ ಉದ್ದೇಶಕ್ಕಾಗಿ ಸಂರಕ್ಷಕರ ಅನುಕ್ರಮ ಈ ಕೆಳಗಿ~
ನಂತಿದೆ.

(ಅ) ತಂದೆ ;
(ಆ) ತಂದೆಯ ಕಡೆಯ ಅಜ್ಜ, ಇದು ಮೇಲ್ಮುಖವಾಗಿ ಎಷ್ಟೋ ಮಟ್ಟಿಗೆ
ಹೋಗಬಹುದು ;
(ಇ) ಸಹೋದರ ಮತ್ತು ಇತರ ವಾರಸಿನ ಅನುಕ್ರಮದಂತೆ ತಂದೆಯ
ಕಡೆ ಇತರ ಸಂಬಂಧಿಕರು ;
-39-
(ಈ) ತಾಯಿ ;
(ಉ) ನಿಷೇಧಿತ ಹಂತಗಳೊಳಗೆ ತಾಯಿಯ ಇತರ ಸಂಬಂಧಿಕರು;
ಇವರೊಳಗೆ ಯಾರೂ ಇಲ್ಲದಿದ್ದರೆ,
(ಊ) ಸರಕಾರ.
ಶಿಯಾ ಕಾನೂನು - ಶಿಯಾ ಕಾನೂನಿನಿಂದ ಮನ್ನಿಸಲ್ಪಟ್ಟ ಸಂಕ್ಷಕರು ತಂದೆ
ಮತ್ತು ಎಷ್ಟೇ ಮೇಲ್ಮುಖವಾಗಿ ತಂದೆಯ ಕಡೆಯ ಅಜ್ಜಂದಿರು ಮಾತ್ರ ಆಗಿರುವನು ;
ಅಥವಾ ಒಬ್ಬ ಅಜ್ಜನಾಗಿರದ ಇತರ ಯಾವನೇ ಒಬ್ಬ ವ್ಯಕ್ತಿಯಿಂದ ಮಾಡಲ್ಪಟ್ಟ
ಒಂದು ವಿವಾಹ ವ್ಯವಸ್ಥೆಯು ಆ ಅಲ್ಪವಯಿಯು ತಾರುಣ್ಯಾವಸ್ಥೆಗೆ ಬಂದಾಗ ಅದಕ್ಕೆ
ಅನುಸಮ್ಮತಿ ಕೊಟ್ಟ ಹೊರತು ಅದು ಎಷ್ಟು ಮಾತ್ರಕ್ಕೂ ಪರಿಣಾಮಕಾರಿಯಾಗುವು~
ದಿಲ್ಲ.

11. ತಾರುಣ್ಯದ ಆಯ್ಕೆ ಎಂದರೇನು ?

ತಾರುಣ್ಯದ ಆಯ್ಕೆ

ಒಬ್ಬ ಮುಸ್ಲಿಂ ಅಲ್ಪವಯಿಯ ವಿವಾಹ ಕರಾರು ಅವನ ಅಥವಾ ಅವಳ ಸಂರ~
ಕ್ಷಕನಿಂದ ಮಾಡಲ್ಪಡಬಹುದು. ಆದರೆ ಇಂಥ ಒಂದು ಪ್ರಕರಣದಲ್ಲಿ, ಆ ಅಲ್ಪವಯಿಯು
ತಾರುಣ್ಯಾವಸ್ಥೆಗೆ ಬಂದಾಗ ಆ ವಿವಾಹಕ್ಕೆ ಅನುಸಮ್ಮತಿ ಕೊಡಲು ಅಥವಾ ಅದನ್ನು
ಖಂಡಿಸಲು ಆಯ್ಕೆ ಮಾಡಬಹುದು. ಈ ಆಯ್ಕೆಯು "ತಾರುಣ್ಯಾವಸ್ಥೆಯ ಆಯ್ಕೆ"
ಎಂಬುದಾಗಿ ಕರೆಯಲ್ಪಡುತ್ತದೆ. ತಾರುಣ್ಯದ ಆಯ್ಕೆಯು ಸ್ತ್ರೀಯರು ಮತ್ತು ಮಕ್ಕಳ
ಮೇಲೆ ಇಸ್ಲಾಂ ಪೂರ್ವದ ವಾಡಿಕೆಗಳಿಂದ ಮತ್ತು ರೂಢಿಗಳಿಂದ ಆಗುತ್ತಿರುವ ತೊಂದರೆ~
ಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಪಾರಂಪರಿಕ ಮುಸ್ಲಿಂ ಕಾನೂನಿನ ಅಧೀನ, ಒಬ್ಬ ಅಲ್ಪವಯಿಯ ವಿವಾಹದ
ಕರಾರು ಆ ಅಲ್ಪವಯಿಯ ತಂದೆಯಿಂದ ಅಥವಾ ತಂದೆಯ ಕಡೆಯ ಅಜ್ಜನಿಂದ
ಮಾಡಲ್ಪಟ್ಟಿದ್ದರೆ ಅದು ವಿಧ್ಯುಕ್ತವಾಗಿರುತ್ತದೆ ಮತ್ತು ಆ ಅಲ್ಪವಯಿಯನ್ನು ಬಾಧ್ಯ~
ಗೊಳಿಸುತ್ತದೆ; ಆ ತಂದೆ ಅಥವಾ ತಂದೆಯ ತಂದೆಯು ದುರುದ್ದೇಶದಿಂದ ವರ್ತಿಸಿ~
ದ್ದ಩ು ಎಂಬುದನ್ನು ಸಾಬೀತು ಪಡಿಸಿದ ಹೊರತು ಆ ವಿವಾಹವನ್ನು ವಿಘಟನೆಗೊಳಿಸು~
ವಂತಿರಲಿಲ್ಲ. ಈಗ ಮಹಮ್ಮದೀಯ ಕಾನೂನಿನ ಮೇಲಿನ ಸಿದ್ಧಾಂತವು ಮುಸ್ಲಿಂ
ವಿವಾಹಗಳ ವಿಘಟನಾ ಅಧಿನಿ೟ಮ, 1939 ಇದರಿಂದ ಪೂರ್ಣವಾಗಿ ಕ್ರಾಂತಿಕಾರಕ
ಬದಲಾವಣೆಗೆ ಒಳಪಡಿಸಿದೆ. ಈ ಅಧಿನಿಯಮದ ಕಾರಣದಿಂದಾಗಿ, ಯಾವ ಒಬ್ಬ
ಅಲ್ಪವಯಿ ಹುಡುಗಿಯ ವಿವಾಹವು ಆಕೆಯ ತಂದೆ ಅಥವಾ ಅಜ್ಜನಿಂದ ಮಾಡಲಾಗಿ~
ದೆಯೋ ಆಕೆಯ ತಾರುಣ್ಯದ ಆಯ್ಕೆಯ ಮೇಲಿನ ಎಲ್ಲ ನಿರ್ಬಂಧನೆಗಳು ಈ ಅಧಿನಿಯಮದ
-40-
ಕಲಮು 2 (7) ಇದರಿಂದ ರದ್ದುಗೊಳಿಸಲಾಗಿವೆ; ಒಬ್ಬ ಪತ್ನಿಯು
ಈ ಕೆಳಗಿನ ಸಂಗತಿಗಳನ್ನು ಸಾಬೀತು ಪಡಿಸಿದರೆ ಆಕೆಯು ತನ್ನ ವಿವಾಹವನ್ನು
ವಿಘಟನೆಗೊಳಿಸಲು ಹಕ್ಕುದಾರಳಾಗುವಳು :

(ಎ) ಅದೇನೆಂದರೆ ಅವಳು ತನ್ನ ತಂದೆ ಅಥವಾ ಇತರ ಯಾವನೇ ಒಬ್ಬ
ಸಂರಕ್ಷಕನಿಂದ ಮದುವೆ ಮಾಡಿಕೊಡಲ್ಪಟ್ಟಿರುವಳು.

(ಬಿ) ಅದೇನೆಂದರೆ ಆ ವಿವಾಹವು ಪೂರ್ಣಗೊಳಿಸಲ್ಪಟ್ಟಿರಲಿಲ್ಲ ;

(ಸಿ) ಅದೇನೆಂದರೆ ಆ ವಿವಾಹವು ಆಕೆಯ 15 ವರ್ಷಗಳ ವಯಸ್ಸನ್ನು
ಮುಗಿಸುವುದಕ್ಕಿಂತ ಮೊದಲೇ ಮಾಡಲ್ಪಟ್ಟಿತು ; ಮತ್ತು

(ಡಿ) ಅದೇನೆಂದರೆ ಅವಳು 18 ವರ್ಷಗಳ ವಯಸ್ಸನ್ನು ಪೂರ್ತಿಗೊಳಿಸುವುದ~
ಕ್ಕಿಂತ ಮೊದಲೇ ಆ ವಿವಾಹವನ್ನು ಮುರಿದಿರುವಳು.

ಆದರೆ ಒಂದೊಮ್ಮೆ ಆ ವಿವಾಹ ಕರಾರು ಇತರ ಯಾವನೇ ಒಬ್ಬ ಸಂರಕ್ಷಕನಿಂದ
ಮಾಡಲ್ಪಟ್ಟಿದ಼್ದರೆ, ಆ ಅಲ್ಪವಯಿಯು ತಾರುಣ್ಯವನ್ನು ಮುಟ್ಟಿದಾಗ ಅದಕ್ಕಾಗಿ
ಯಾವತ್ತೂ ಕಾರಣಗಳನ್ನು ನಿರ್ದಿಷ್ಟಪಡಿಸದೆನೇ ಆ ವಿವಾಹವನ್ನು ಮುರಿಯುವ
ಆಯ್ಕೆಯಿರುತ್ತದೆ.

ಶಿಯಾ ಕಾನೂನು :

ಶಿಯಾ ಕಾನೂನಿನ ಪ್ರಕಾರ, ಒಬ್ಬ ತಂದೆ ಅಥವಾ ಅಜ್ಜನಾಗಿರುವ ಇತರ
ಯಾವನೇ ಒಬ್ಬ ವ್ಯಕ್ತಿಯಿಂದ ವ್ಯವಸ್ಥೆ ಮಾಡಲಾದ ಒಂದು ವಿವಾಹವು ಆ ಅಲ್ಪ~
ವಯಿಯು ತಾರುಣ್ಯಾವಸ್ಥೆಗೆ ಬಂದಾಗ ಅದಕ್ಕೆ ಅನುಮತಿ ಕೊಟ್ಟಹೊರತು ಅದು
ಪರಿಣಾಮಕಾರಿಯಾಗುವುದಿಲ್ಲ.

ಈ ಆಯ್ಕೆಯು ಎಂದು ಚಲಾಯಿಸಲ್ಪಡುತ್ತದೆ -

ತಾರುಣ್ಯದ ಆಯ್ಕೆಯು ಈ ಕೆಳಗಿನ ರೀತಿಯಲ್ಲಿ ಚಲಾಯಿಸಲ್ಪಡುತ್ತದೆ -

(ಅ) ಪತ್ನಿಯಿಂದ - ಆಕೆಯು ತಾರುಣ್ಯಾವಸ್ಥೆಗೆ ಮುಟ್ಟಿದಾಗ ಮತ್ತು
ಆ ವಿವಾಹದ ಬಗ್ಗೆ ಹಾಗೂ ಅದನ್ನು ಮುರಿಯಲು ಅವಳ ಹಕ್ಕಿನ ಬಗ್ಗೆ
ಹೇಳಲ್ಪಟ್ಟಾಗ ;

(ಆ) ಪತಿಯಿಂದ - ಪತಿಯು ಕನ್ಯಾಶುಲ್ಕವನ್ನು ಸಂದಾಯ ಮಾಡುವಿಕೆ~
ಯಿಂದ ಅಥವಾ ಸಹವಾಸದಿಂದ ಆ ವಿವಾಹಕ್ಕೆ ಅನುಸಮ್ಮತಿ ಕೊಡುವುದಕ್ಕಿಂತ
ಮೊದಲು ಯಾವುದೇ ಕಾಲದಲ್ಲಿ ; ಅನ್ಯಥಾ, ಆ ವಿವಾಹವನ್ನು ಮುರಿಯುವ ಹಕ್ಕು
ಕಳೆದುಹೋಗುತ್ತದೆ.
-41-

ತಾರುಣ್ಯದಲ್ಲಿ ಆಯ್ಕೆಯ ಪರಿಣಾಮ :

ತಾರುಣ್ಯದಲ್ಲಿ ಆಯ್ಕೆಯನ್ನು ಚಲಾಯಿಸುವಿಕೆಯ ಪರಿಣಾಮವು ಯಾವು~
ದೆಂದರೆ ಆ ವಿವಾಹವು ಒಂದು ವಿವಾಹವಾಗಿರುವುದು ನಿಂತುಬಿಡುತ್ತದೆ ಮತ್ತು ಅದು
ಎಂದೆಂದೂ ಕಾರ್ಯಾಚರಣೆಗೆ ಬಂದಿರಲಿಲ್ಲವೆಂಬುದಾಗಿ ಎಣಿಸಲಾಗುತ್ತದೆ. ಆದರೆ
ಅದೇ ಕಾಲದಲ್ಲಿ, ವಾರಸಿನ ಉದ್ದೇಶಗಳಿಗಾಗಿ ಆ ಪಕ್ಷಗಾರರು ಪತಿ ಮತ್ತು ಪತ್ನಿ ಆಗಿ
ಉಳಿಯುವರು. ಇದರ ಅರ್ಥವೇನೆಂದರೆ ಒಂದೊಮ್ಮೆ ಅವರೊಳಗೆ ಯಾವನಾದ~
ರೊಬ್ಬನು ಸತ್ತರೆ, ಸಂದರ್ಭಾನುಸಾರ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯಿಂದ
ಪತಿ ಅಥವಾ ಪತ್ನಿಯ ಸಾಮರ್ಥ್ಯದಲ್ಲಿ ವಾರಸು ಪಡೆಯುವನು ಅಥವಾ ಪಡೆಯುವಳು.

ಅಡೆತಡೆಗಳಿಲ್ಲದಿರುವಿಕೆ :

ಒಂದು ಮುಸ್ಲಿಂ ವಿವಾಹದ ಮೂರನೇ ಅವಶ್ಯಕತೆಯು ಯಾವುದೆಂದರೆ ಆ
ಪಕ್ಷಗಾರರ ವಿವಾಹಕ್ಕೆ ಯಾವತ್ತೂ ಅಡೆತಡೆಗಳು ಅಥವಾ ನಿಷೇಧಗಳು ಇದ್ದಿರ~
ಬಾರದು. ಈ ಅಡೆತಡೆಗ಼ಳು ಎರಡು ರೀತಿಯವುಗಳಾಗಿವೆ: (ಎ) ಕಡ್ಡಾಯವಾದ,
ಹಾಗೆಂದರೆ ಒಂದು ವಿವಾಹವನ್ನು ನಿಷೇಧಿಸುವ ಮತ್ತು ಅದನ್ನು ಶೂನ್ಯಗೊಳಿಸುವ
ಅಡೆತಡೆಗಳು; ಮತ್ತು (ಬಿ) ಸಂಬಂಧಿತ, ಹಾಗೆಂದರೆ, ಒಂದು ಕಡ್ಡಾಯ~
ವಾದ ನಿಷೇಧವನ್ನು ಹೇರದ ಅಡೆತಡೆಗಳು. ಸಂಬಂಧಿತ ಅಡೆತಡೆಗಳಿದ್ದರೂ ಸಹ
ಒಂದು ವಿವಾಹ ಕರಾರು ಮಾಡಲ್ಪಟ್ಟರೆ ಅದು ಕೇವಲ ಅಸಿಂಧು ಅಥವಾ ಕ್ರಮ~
ಬಾಹಿರ ವಿವಾಹವಾಗುತ್ತದಲ್ಲದೆ ಅದು ಶೂನ್ಯ ವಿವಾಹವಾಗುವುದಿಲ್ಲ.

(ಎ) ಕಡ್ಡಾಯ ನಿಷೇಧಗಳು

ಕಡ್ಡಾಯ ನಿಷೇಧಗಳು 4 ರೀತಿಯವುಗಳಾಗಿವೆ, ಅವು :

(ಅ) ಬಹುಪತಿತ್ವ
(ಆ) ರಕ್ತ ಸಂಬಂಧ
(ಇ) ಸಾಮೀಪ್ಯ
(ಈ) ಪಾಲನೆ ಸಂಬಂಧ

(ಅ) ಬ಼ಹುಪತಿತ್ವ

ಒಬ್ಬ ವಿವಾಹಿತ ನಾರಿಯು ಆಕೆಯ ಮೊದಲನೇ ವಿವಾಹವು ಊರ್ಜಿತವಾವಸ್ಥೆ~
ಯಲ್ಲಿದ್ದ ಕಾಲದಲ್ಲಿ ಒಂದು ಎರಡನೇ ವಿವಾಹದ ಕರಾರು ಮಾಡುವಂತಿಲ್ಲ. ಮುಸ್ಲಿಂ
ಕಾನೂನು ಒಂದು ಕಾಲದಲ್ಲಿ ನಾಲ್ಕರಷ್ಟು ಮಂದಿ ಪತ್ನಿಯರನ್ನು ಹೊಂದಿಕೊಂಡಿರಲು
ಬಹುಪತ್ನಿತ್ವವನ್ನು ಮನ್ನಿಸುತ್ತಾದದರೂ ಸಹ ಅದು ಬಹುಪತಿತ್ವವನ್ನು ನಿಷೇಧಿಸು~
ತ್ತದೆ. ಯಾವ ಒಬ್ಬ ನಾರಿಯ ಪತಿಯು ಬದುಕಿರುವನೊ ಮತ್ತು ಆಕೆಯು ಪತಿಯಿಂದ
Page 42
ವಿವಾಹ ವಿಚ್ಛೇದನ ಪಡೆದಿಲ್ಲವೊ ಆಕೆಯೊಂದಿಗಿನ ವಿವಾಹವು ಶೂನ್ಯ~
ವಾಗಿರುತ್ತದೆ.

ಮುಸ್ಲಿಂ ಕಾನೂನಿನ ಅಧೀನ, ಒಬ್ಬ ಪತ್ನಿಯು ಒಂದೇ ಕಾಲದಲ್ಲಿ ಒಬ್ಬನಿಗಿಂತ
ಹೆಚ್ಚಿನ ಪತಿಯರನ್ನು ಹೊಂದಿಕೊಂಡಿರುವಂತಿಲ್ಲ, ಆದರೆ ಒಬ್ಬ ಪತಿಯು ಒಂದು
ಕಾಲದಲ್ಲಿ ನಾಲ್ಕರಷ್ಟು ಮಂದಿ ಪತ್ನಿಯರನ್ನು ಹೊಂದಿಕೊಂಡಿರಲು ಸ್ವತಂತ್ರನಾಗಿರು~
ವನು. ಆದುದರಿಂದ ಒಂದು ಮುಸ್ಲಿಂ ವಿವಾಹವು ಇಂಗ್ಲೀಷ್ ಕಾನೂನಿನ ಅಧೀನ
ಒಂದು ವಿಧ್ಯುಕ್ತವಾದ ವಿವಾಹವಾಗುವುದಿಲ್ಲ.

(ಆ) ರಕ್ತಸಂಬಂಧ

ಎರಡನೇ ನಿಷೇಧವು ರಕ್ತ ಸಂಬಂಧದ ನಿಷೇಧವಾಗಿದೆ. ಹೀಗೆ, ಈ ಕೆಳಗಿನವ~
ರೊಂದಿಗೆ ಯಾವುದೇ ಒಂದು ವಿಧ್ಯುಕ್ತವಾದ ವಿವಾಹದ ಕರಾರು ಮಾಡಿಕೊಳ್ಳು~
ವಂತಿಲ್ಲ. (1) ಪೂರ್ವಜರು ಹಾಗೆಂದರೆ, ತಾಯಿ ಅಥವಾ ಅಜ್ಜಿ ಹಾಗೂ ಮೇಲ್ಮುಖ~
ವಾಗಿ ಇದೇ ರೀತಿಯ ಸಂಬಂಧದವರು; (2) ವಂಶಜರು, ಉದಾಹರಣೆಗಾಗಿ, ಮಗಳು
ಅಥವಾ ಮೊಮ್ಮಗಳು, ಇದೇ ರೀತಿಯಲ್ಲಿ ಕೆಳಮುಖವಾಗಿ ಸಂಬಂಧಿಕರು: (3)
ಎರಡನೇ ಹಂತದ ಸಂಬಂಧಿಕರು. ಉದಾಹರಣೆಗಾಗಿ, ಸಹೋದರರು ಅಥವಾ
ಸಹೋದರಿಯರು ಮತ್ತು ಅವರ ವಂಶಜರು ; ಮತ್ತು (4) ತಂದೆಯ ಸಹೋದರರು
ಮತ್ತು ಅವರ ಪತ್ನಿಯರು ಮತ್ತು ತಾಯಿಯ ಸಹೋದರರು ಮತ್ತು ಅವರ ಪತ್ನಿ~
ಯರು ಇವರು ಎಷ್ಟೇ ಮೇಲ್ಮುಖದವರಾಗಿರಲಿ, ಇವು ರಕ್ತ ಸಂಬಂಧದ ಕಾರಣಕ್ಕಾಗಿ
ಮಹಮ್ಮದೀಯ ಕಾನೂನಿನಿಂದ ವಿವಾಹದ ಮೇಲೆ ಹಾಕಲಾದ ನಿರ್ಬಂಧನೆಗಳಾಗಿವೆ.
ರಕ್ತ ಸಂಬಂಧದ ಕಾರಣದಿಂದ ಒಬ್ಬ ನಾರಿಯೊಂದಿಗಿನ ವಿವಾಹದ ಮೇಲೆ ಹಾಕಲಾದ
ನಿಷೇಧವು ಪೂರ್ಣವಾಗಿ ಶೂನ್ಯವಾಗಿರುತ್ತದೆ.

(ಇ) ಸಮೀಪದ ಸಂಬಂಧ

ಮೂರನೇ ನಿಷೇಧವು ಸಮೀಪದ ಸಂಬಂಧದ ಕಾರಣಕ್ಕಾಗಿ ಹಾಕಲಾಗಿದೆ.
ಹೀಗೆ, ಒಬ್ಬ ಪುರುಷನು (1) ತನ್ನ ಪತ್ನಿಯ ತಾಯಿ ಅಥವಾ ಅಜ್ಜಿಯೊಂದಿಗೆ,
ಈ ಸಂಬಂಧವು ಎಷ್ಟೇ ಮೇಲ್ಮುಖವಾಗಿರಲಿ; (2) ಒಂದೊಮ್ಮೆ ಅವನ ಪತ್ನಿಯೊಂದಿ~
ಗಿನ ವಿವಾಹವು ಪೂರ್ಣಗೊಳಿಸಲ್ಪಟ್ಟಿದ್ದರೆ, ಅವನ ಪತ್ನಿಯ ಮಗಳು ಅಥವಾ
ಮೊಮ್ಮಗಳು, ಅದು ಎಷ್ಟೇ ಕೆಳಮುಖವಾಗಿರಲಿ; (3) ಅವನ ತಂದೆಯ ಪತ್ನಿ
ಅಥವಾ ಇತರ ಯಾವನೇ ಒಬ್ಬ ವಂಶಜನ ಪತ್ನಿ ಮತ್ತು (4) ಅವನ ಮಗನ ಪತ್ನಿ
ಅಥವಾ ಇತರ ಯಾವನೇ ಒಬ್ಬ ರೇಖಿತ ವಂಶಜನ ಪತ್ನಿ ಇವರೊಂದಿಗೆ ವಿವಾಹ
ಮಾಡಿಕೊಳ್ಳುವಂತಿಲ್ಲ. ಸಮೀಪದ ವಿವಾಹವು ಶೂನ್ಯವಾಗಿರುತ್ತದೆ.

Page 43

(ಈ) ಸಾಕು ಸಂಬಂಧ

ವಿವಾಹದ ಬಗ್ಗೆ ಸಾಕು ಸಂಬಂಧವು ರಕ್ತ ಸಂಬಂಧದಷ್ಟೇ ಕಡ್ಡಾಯವಾದ
ಸಂಬಂಧವಾಗಿರುತ್ತದೆ. ಏಕೆಂದರೆ ಒಂದು ಮಗುವಿಗೆ ತನ್ನ ಎದೆಹಾಲನ್ನು ಕುಡಿಸು~
ವುದು ಆ ಮಗುವಿಗೆ ಜನ್ಮ ಕೊಡುವುದಕ್ಕೆ ಸಮಾನವೆಂಬುದಾಗಿ ಎಣಿಸಲಾಗುತ್ತದೆ.
ಹೀಗೆ ರಕ್ತ ಸಂಬಂಧದಿಂದ ಅಥವಾ ಸಮೀಪದ ಸಂಬಂಧದಿಂದ ನಿಷೇಧಿಸಲ್ಪಟ್ಟವರು
ಸಾಕು ಸಂಬಂಧದ ಕಾರಣದಿಂದಾಗಿಯೂ ಸಹ ನಿಷೇಧಿಸಲ್ಪಡುವರು. ಆದರೆ ಇದು
ಕೆಲವು ರೀತಿಯ ಸಂಬಂಧಗಳಿಗೆ ಅನ್ವಯವಾಗುವುದಿಲ್ಲ. ಉದಾಹರಣೆಗಾಗಿ,
ಸಹೋದರಿಯ ಸಾಕುತಾಯಿ ಅಥವಾ ಸಾಕು ಸಹೋದರಿಯ ತಾಯಿ. ಇವರೊಂದಿಗೆ
ಒಂದು ವಿಧ್ಯುಕ್ತವಾದ ವಿವಾಹ ಕರಾರು ಮಾಡಲ್ಪಡಬಹುದು. ಸಾಕು ಸಂಬಂಧದ
ಕಾರಣದಿಂದಾಗಿ ನಿಷೇಧಿಸಲ್ಪಟ್ಟಿರುವ ಒಂದು ವಿವಾಹವು ಪೂರ್ಣವಾಗಿ ಶೂನ್ಯವಾಗಿರು~
ತ್ತದೆ.

(ಡಿ) ಸಂಬಂಧಿತ ನಿಷೇಧಗಳು :

ಸಂಬಂಧಿತ ನಿಷೇಧಗಳು 5 ರೀತಿಯವುಗಳಾಗಿವೆ :

(ಅ) ಐದನೇ ಪತ್ನಿಯನ್ನು ವಿವಾಹವಾಗುವುದು:

ನಾಲ್ಕು ಪತ್ನಿಗಳನ್ನು ಹೊಂದಿರುವ ಒಬ್ಬ ವ್ಯಕ್ತಿಯು ಒಬ್ಬ ಐದನೇ ಪತ್ನಿ~
ಯೊಂದಿಗೆ ವಿವಾಹವಾಗುವುದು ಅಸಿಂಧುವಾಗಿರುತ್ತದೆ; ಆದರೂ ಸಹ, ಆ ಹಿಂದಿನ
ನಾಲ್ವರು ಪತ್ನಿಯರಲ್ಲಿ ಯಾವಳಾದರೊಬ್ಬಳಿಗೆ ವಿವಾಹ ವಿಚ್ಛೇದನ ಕೊಡುವಿಕೆಯಿಂದ
ಈ ಅಡೆತಡೆಯು ಕಿತ್ತುಹಾಕಲ್ಪಡುವುದು.

(ಆ) ಸರಿಯಾದ ಸಾಕ್ಷಿದಾರರಿಲ್ಲದೆ ಮಾಡಿಕೊಳ್ಳಲಾದ ವಿವಾಹ :

ಸರಿಯಾದ ಸಾಕ್ಷಿದಾರರಿಲ್ಲದೆ ಮಾಡಿಕೊಳ್ಳಲಾದ ಒಂದು ವಿವಾಹ ಕರಾರು
ಸುನ್ನಿ ಕಾನೂನಿನ ಪ್ರಕಾರ ಅಸಿಂಧುವಾಗಿರುತ್ತದೆ. ಈ ದೋಷವು ಪಾರ್ಶ್ವಿಕ ಪರಿಸ್ಥಿತಿ~
ಗಳಿಂದ ಉಂಟಾಗುತ್ತದೆ ಎಂಬುದಾಗಿ ಎಣಿಸಲಾಗುತ್ತದೆ ಮತ್ತು ಸಾಕ್ಷಿದಾರ
ಹಾಜರಿಯನ್ನು ಆ ಬಳಿಕ ಪುಷ್ಟೀಕರಿಸುವಿಕೆಯಿಂದ ಸರಿ ಮಾಡಲ್ಪಡಬಹುದು.

ಶಿಯಾ ಕಾನೂನಿನ ಅಧೀನ ಸಾಕ್ಷಿದಾರರ ಹಾಜರಿಯು ಅವಶ್ಯಕವಲ್ಲ. ಆದುದ~
ರಿಂದ, ಶಿಯಾ ಕಾನೂನಿನ ಅಧೀನ ಈ ರೀತಿಯ ಅಡೆತಡೆಯ ಪ್ರಶ್ನೆಯುಂಟಾಗು~
ವುದಿಲ್ಲ.

(3) ಧಾರ್ಮಿಕ ಭಿನ್ನತೆ

ಶಿಯಾ ಕಾನೂನಿನ ಪ್ರಕಾರ, ಒಂದು ವಿಧ್ಯುಕ್ತವಾದ ವಿವಾಹವು ಘಟಿಸಲ್ಪಡ಼ಬೇಕಾದರೆ
-44-
ಆ ಪತಿ ಪತ್ನಿಯರಿಬ್ಬರೂ ಮುಸಲ್ಮಾನರಾಗಿರಬೇಕು. ಒಂದೊಮ್ಮೆ
ಅವರೊಳಗೆ ಯಾರಾದರೂ ಮುಸಲ್ಮಾನೇತರರಾಗಿದ್ದರೆ, ಆ ವಿವಾಹವು ಕಾನೂನು~
ಬಾಹಿರವಾಗುತ್ತದೆ. ಆದರೆ ಒಬ್ಬ ಮುಸ್ಲಿಂ ಪುರುಷನು ಒಬ್ಬ ಕಿತಾಬಿಯಾಳೊಂದಿಗೆ
ಅಥವಾ ಒಬ್ಬ ಅಗ್ನಿಪೂಜಕಳೊಂದಿಗೆ ಒಂದು ವಿಧ್ಯುಕ್ತವಾದ ಮುತಾ ವಿವಾಹದ
ಕರಾರು ಮಾಡಿಕೊಳ್ಳಬಹುದು. ಕಿತಾಬಿಯ ಎಂದರೆ ಕ್ರೈಸ್ತಳು ಮತ್ತು ಅಗ್ನಿ~
ಪೂಜಕಳು ಎಂದರೆ ಪಾರ್ಸಿ.

ಆದರೆ ಸುನ್ನಿ ಕಾನೂನಿನ ಮೇರೆಗೆ :

(ಅ) ಒಬ್ಬ ಮುಸ್ಲಿಂ ಪುರುಷನು ಒಬ್ಬ ಮುಸ್ಲಿಂ ನಾರಿಯೊಂದಿಗೆ ಮಾತ್ರವಲ್ಲ
ಒಬ್ಬ ಕಿತಾಬಿಯಾಳನ್ನೂ ಸಹ ವಿಧ್ಯುಕ್ತವಾಗಿ ವಿವಾಹವಾಗಬಹುದು. ಒಂದೊಮ್ಮೆ
ಅವನು ಒಬ್ಬ ಮೂರ್ತಿ ಪೂಜಕಳನ್ನು ಅಥವಾ ಅಗ್ನಿಪೂಜಕಳನ್ನು ವಿವಾಹವಾದರೆ,
ಆ ವಿವಾಹವು ಪೂರ್ಣ ಶೂನ್ಯವಾಗಿರುವುದಿಲ್ಲ; ಅದೇ ಕೇವಲ ಕ್ರಮಬಾಹಿರವಾಗಿರು~
ತ್ತದೆ. ಒಂದೊಮ್ಮೆ ಆ ವಧುವು ಇಸ್ಲಾಂ ಮತವನ್ನು ಸ್ವೀಕರಿಸಿದರೆ ಅಥವಾ ಒಬ್ಬ
ಕಿತಾಬಿಯಾ ಆದರೆ ಈ ಕ್ರಮಬಾಹಿರತೆಯು ಕಿತ್ತುಹಾಕಲ್ಪಡುತ್ತದೆ.

(ಆ) ಒಬ್ಬ ಮುಸ್ಲಿಂ ನಾರಿಯು ಒಬ್ಬ ಮುಸಲ್ಮಾನನನ್ನು ಮಾತ್ರ ವಿಧ್ಯುಕ಼್ತ~
ವಾಗಿ ವಿವಾಹವಾಗಬಹುದು. ಒಂದೊಮ್ಮ ಆಕೆಯು ಒಬ್ಬ ಮುಸ್ಲಮಾನೇತರರನ್ನು
ವಿವಾಹವಾದರೆ ಆ ವಿವಾಹವು ಶೂನ್ಯವಾಗುತ್ತದೆ.

ಒಬ್ಬ ಸುನ್ನಿ ಪುರುಷನು ಒಬ್ಬ ಶಿಯಾ ನಾರಿಯೊಂದಿಗೆ ವಿಧ್ಯುಕ್ತವಾಗಿ ವಿವಾಹದ
ಕರಾರು ಮಾಡಿಕೊಳ್ಳಬಹುದು ಮತ್ತು ಇದೇ ರೀತಿಯಲ್ಲಿ ಒಬ್ಬ ಶಿಯಾ ಪುರುಷನು
ಒಬ್ಬ ಸುನ್ನಿ ನಾರಿಯನ್ನು ವಿವಾಹವಾಗಬಹುದು.

(4) ಕಾನೂನು ಬಾಹಿರ ಸಹವಾಸ

ಇಬ್ಬರು ನಾರಿಯರಲ್ಲಿ ಒಂದೊಮ್ಮೆ ಯಾವಳಾದರೊಬ್ಬಳು ಪುರುಷಳಾಗಿದ್ದರೆ
ಅವರು ಪರಸ್ಪರರನ್ನು ವಿವಾಹವಾಗುವುದಕ್ಕೆ ನಿಷೇಧವುಂಟಾಗುತ್ತಿತ್ತಾದರೆ ಒಬ್ಬ
ಮುಸಲ್ಮಾನನು ಏಕಕಾಲದಲ್ಲಿ ಅಂಥ ಇಬ್ಬರು ಪತ್ನಿಯರನ್ನು ಹೊಂದಿಕೊಂಡಿರು~
ವುದು ನಿಷೇಧಿಸಲಾಗುತ್ತದೆ. ಉದಾಹರಣೆಗಾಗಿ, ಒಬ್ಬ ಮುಸ್ಲಿಂ ಪುರುಷನು ಇಬ್ಬರು
ಸಹೋದರಿಯನ್ನು ವಿವಾಹವಾಗುವಂತಿಲ್ಲ. ಈ ಅಡ್ಡಿಯು ಕಾನೂನುಬಾಹಿರ
ಸಹವಾಸ ಎಂಬುದಾಗಿ ಕರೆಯಲ್ಪಡುತ್ತದೆ.

ಪತ್ನಿಯ ಸಹೋದರಿಯೊಂದಿಗಿನ ವಿವಾಹದ ಸ್ವರೂಪ :

ತನ್ನ ಪತ್ನಿಯ ಜೀವಮಾ಩ದ ಕಾಲದಲ್ಲಿ ಒಬ್ಬ ವ್ಯಕ್ತಿಯು ತನ್ನ ಪತ್ನಿಯ
ಸಹೋದರಿಯನ್ನು ವಿವಾಹವಾಗುವುದನ್ನು ಕುರಾನ್ ನಿಷೇಧಿಸುತ್ತದೆ; ಆದರೆ
ಕುರಾನಿನಲ್ಲಿ ಹಾಕಲಾದ ಈ ನಿಷೇಧವು ಅಂಥ ಒಂದು ವಿವಾಹದ ಮಕ್ಕಳನ್ನು
-45-
ಅ಩ೌರಸರು ಎಂಬುದಾಗಿ ಘೋಷಿಸುವುದಿಲ್ಲ. ಒಂದು ಅಸಿಂಧು ವಿವಾಹದ ಪ್ರಕರಣ~
ದಲ್ಲಿ ಅಂಥ ವಿವಾಹದಿಂದ ಹುಟ್ಟಿರುವ ಮಕ್ಕಳು ಅನೌರಸ ಮಕ್ಕಳು ಎಂಬುದಾಗಿ
ಮಹಮ್ಮದೀಯ ಕಾನೂನಿನ ಯಾವನೇ ಒಬ್ಬ ಲೇಖಕನು ಘೋಷಿಸಿಲ್ಲ. ಒಂದೊಮ್ಮೆ
ಒಬ್ಬ ಮುಸಲ್ಮಾನನು ಕಾನೂನಿಗೆ ವಿರುದ್ಧವಾಗಿ ಒಬ್ಬ ವ್ಯಕ್ತಿಯನ್ನು ವಿವಾಹವಾದರೆ
ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಆ ವಿವಾಹವು ಕ್ರಮಬದ್ಧಗೊಳ್ಳುವುದು ಸಾಧ್ಯವಿಲ್ಲ~
ದಿದ್ದರೆ ಆ ಸಂತತಿಗಳು ಔರಸ ಸಂತತಿಗಳಾಗುವುದಿಲ್ಲ. ಪತ್ನಿಯ ಸಹೋದರಿಯೊಂದಿಗಿನ
ವಿವಾಹವು ಆ ಕರಾರು ಮಾಡಲ್ಪಡುವ ಕಾಲದಲ್ಲಿ ಕಾನೂನಿಗೆ ವಿರುದ್ಧವಾಗಿರಬಹುದು.
ಆದರೆ ಪತ್ನಿಯ ವಿವಾಹ ವಿಚ್ಛೇದನ ಅಥವಾ ಮರಣವಾದಾಗ ಅದು ಒಂದು ವಿಧ್ಯುಕ್ತ~
ವಾದ ವಿವಾಹವಾಗಲು ಸಮರ್ಥವಾಗಿರುತ್ತದೆ. ಆದುದರಿಂದ ಅಂಥ ಒಂದು ವಿವಾಹದ
ಮಕ್ಕಳು ಧರ್ಮಜ ಮಕ್ಕಳಾಗುವರು.

ಆದರೆ ಕಲ್ಕತ್ತಾ ಉಚ್ಛನ್ಯಾಯಾಲಯದ ಒಂದು ತೀರ್ಪಿನ ಪ್ರಕಾರ ಅಂಥ
ಒಂದು ವಿವಾಹವು ಶೂನ್ಯವಾಗುತ್ತದೆ ಮತ್ತು ಆ ಸಂತತಿಯು ಅಧರ್ಮಜವಾಗುತ್ತದೆ.
ಆದರೆ ಈ ದೃಷ್ಟಿಕೋನವು ಹೆಚ್ಚಿನ ಮುಸ್ಲಿಂ ನ್ಯಾಯದರ್ಶಿಗಳಿಂದ ಸ್ವೀಕರಿಸಲ್ಪಟ್ಟಿಲ್ಲ.

ಇದ್ದತ್ ಆಚರಿಸುತ್ತಿರುವ ನಾರಿ

ತನ್ನ ಹಿಂದಿನ ವಿವಾಹದ ಇದ್ದತ್ ಆಚರಿಸುತ್ತಿರುವ ಒಬ್ಬ ನಾರಿಯೊಂದಿಗಿನ
ಒಂದು ವಿವಾಹವು ಶೂನ್ಯವಾಗಿರುವುದಿಲ್ಲ. ಅದು ಕೇವಲ ಕ್ರಮಬಾಹಿರ
ಆಗಿರುತ್ತದೆ.

ಇದ್ದತ್ ಇದರ ಪರಿಭಾಷೆ :

ಇದ್ದತ್ ಇದು ಪಾವಿತ್ರ್ಯದ ಒಂದು ಅವಧಿಯಾಗಿದ್ದು ಆಕೆಯ ಪತಿಯ ಮರಣ~
ದಿಂದಾಗಿ ಅಥವಾ ವಿವಾಹ ವಿಚ್ಛೇದನೆಯಿಂದಾಗಿ ಆಕೆಯ ವಿವಾಹ ವಿಘಟನೆಗೊಂಡ
ಬಳಿಕ ಮತ್ತು ಆಕೆಯು ಕಾನೂನುಬದ್ಧವಾಗಿ ಪುನಃ ವಿವಾಹವಾಗಿರುವುದಕ್ಕಿಂತ
ಮೊದಲು ಆಚರಿಸಲು ಬಾಧ್ಯಳಾಗಿರುವ ಪಾವಿತ್ರ್ಯದ ಅವಧಿಯಾಗಿರುತ್ತದೆ. ಇದು
ಪಿತೃತ್ವವನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಒಂದು ದಾಂಪತ್ಯವು ಕೊನೆ~
ಗೊಂಡಾಗ ಒಬ್ಬ ನಾರಿಯ ಮೇಲೆ ಹೇರಲಾದ ಸಂಯಮದ ಅವಧಿಯಾಗಿರುತ್ತದೆ.
ಆ ಬಳಿಕ ಆಕೆಗೆ ಹುಟ್ಟಬಹುದಾದಂಥ ಮಕ್ಕಳ ಪಿತೃತ್ವದ ಬಗ್ಗೆ ಆಗಬಹುದಾದ
ಅಸ್ತವ್ಯಸ್ತತೆಯನ್ನು ತಪ್ಪಿಸುವುದಕ್ಕಾಗಿ ಆಕೆಯು ತನ್ನ ಪತಿಯಿಂದ ಗರ್ಭಿಣಿಯಾಗಿರು~
ವಳೋ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಸಂಯಮವು ಆಕೆಯ
ಮೇಲೆ ಹೇರಲಾಗುತ್ತದೆ. ಇದೊಂದು ಅವಧಿಯಾಗಿದ್ದು ಇದನ್ನು ಪೂರ್ತಿಗೊಳಿಸಲಾದ
ಬಳಿಕ ಒಂದು ವಿವಾಹವು ಕಾನೂನುಬದ್ಧಗೊಳಿಸಲ್ಪಡುತ್ತದೆ. ಇದ್ದತ್ ಇದರ
-46-
ಪ್ರಾಥಮಿಕ ಉದ್ದೇಶವು ಒಂದು ನಿಶ್ಚಿತವಾದ ಸಮಯಕ್ಕಾಗಿ ಆ ಪತ್ನಿಯ ವಿವಾಹದ
ಮೇಲೆ ಒಂದು ನಿರ್ಬಂಧನೆ ಹೇರುವುದಾಗಿರುತ್ತದೆ.

ಇದ್ದತ್ ಇದರ ಕಾಲಾವಧಿ :

(ಅ) ಮರಣದಿಂದ ಉಂಟಾಗಿರುವ ಇದ್ದತ್.
ಮರಣದಿಂದ ಉಂಟಾಗಿರುವ ಇದ್ದತ್ ಇದು -

(ಎ) ಆ ಕಾಲದಲ್ಲಿ ಗರ್ಭಸ್ಥಳಾಗಿರುವ ಒಬ್ಬ ನಾರಿಯ ಪ್ರಕರಣದಲ್ಲಿ, 4
ತಿಂಗಳುಗಳು ಮತ್ತು 10 ದಿನಗಳಿಗಾಗ಼ಿ ಅಥವಾ ಹೆರಿಗೆಯ ತನಕ, ಇವೆರಡರಲ್ಲಿ
ಯಾವುದು ಉದ್ದದ ಅವಧಿಯೊ ಆ ಅವಧಿಯವರೆಗೆ ; ಮತ್ತು

(ಬಿ) ಇತರ ಪ್ರಕರಣಗಳಲ್ಲಿ -

4 ತಿಂಗಳುಗಳು ಮತ್ತು 10 ದಿನಗಳಿಗಾಗಿ.

ಇದ್ದತ್ ಮರಣ ದಿನಾಂಕದಿಂದ ಆರಂಭವಾಗುತ್ತದೆ. ಒಂದೊಮ್ಮೆ ಪತಿಯ
ಮರಣದ ಸುದ್ದಿಯು ಇದ್ದು, ಅವಧಿಯು ಮುಕ್ತಾಯವಾಗುವವರೆಗೆ ಪತ್ನಿಗೆ ಮುಟ್ಟ~
ದಿದ್ದರೆ, ಆಕೆಯು ಇದ್ದತ್ ಪಾಲನೆ ಮಾಡಲು ಬಾಧ್ಯಳಲ್ಲ. ಒಂದೊಮ್ಮೆ ಆ
ವಿವಾಹವು ಮಹಣದಿಂದಾಗಿ ವಿಘಟನೆಗೊಂಡರೆ, ಆ ವಿವಾಹವು ಪೂರ್ತಿಗೊಳಿಸಲ್ಪಟ್ಟಿ~
ರಲಿ ಅಥವಾ ಪೂರ್ತಿಗೊಳಿಸಲ್ಪಟ್ಟಿಲ್ಲದಿರಲಿ, ಪತ್ನಿಯು ಇದ್ದತ್ ಅವಧಿಯನ್ನು ಪಾಲನೆ
ಮಾಡಲು ಬಾಧ್೟ಳಾಗುವಳು.

(ಆ) ವಿವಾಹ ವಿಚ್ಛೇದನೆಯಿಂದ ಇದ್ದತ್ :

ವಿವಾಹ ವಿಚ್ಛೇದನೆಯ ಇದ್ದತ್ ಮೂರು ರಜೋದರ್ಶನಗಳ ಅವಧಿಗಳವರೆಗೆ
ಮುಂದುವರಿಯುತ್ತದೆ. ಒಂದೊಮ್ಮೆ ಆವಿವಾಹವಿಚ್ಛೇದಿತ ಪತ್ನಿಯು ಗರ್ಭ~
ಧಾರಣೆಯ ಹೊರತಾಗಿ ಇತರ ಯಾವತ್ತೂ ಕಾರಣಕ್ಕಾಗಿ ರಜೋದರ್ಶನಕ್ಕಾಗಿ ಬಾಧ್ಯ~
ಳಾಗಿರದಿದ್ದರೆ, ಆ ಇದ್ದತ್ ಅವಧಿಯು ಮೂರು ಚಾಂದ್ರಮಾನ ತಿಂಗಳುಗಳಿಗೆ
ಮುಂದುವರಿಯುತ್ತದೆ.

ಒಂದೊಮ್ಮೆ ಆಕೆಯು ಆ ಕಾಲದಲ್ಲಿ ಗರ್ಭಸ್ಥಳಾಗಿದ್ದರೆ, ಇದ್ದತ್ ಹೆರಿಗೆಯವರೆಗೆ
ಮುಂದುವರಿಯುತ್ತದೆ ಮತ್ತು ಅಲ್ಲಿ ಆ ಅವಧಿಯು ಮೂರು ತಿಂಗಳುಗಳಿಗಿಂತ
ಕಡಿಮೆಯದ್ದೊ ಅಥವಾ ಹೆಚ್ಚಿನದ್ದೊ ಎಂಬುದು ಗಮನಿಸಲಾಗುವುದಿಲ್ಲ.

ವಿವಾಹ ವಿಚ್ಛೇದನೆಯ ಇದತ್. ಇದು ವಿವಾಹ ವಿಚ್ಛೇದನೆಯ ದಿನಾಂಕದಿಂದ
ಆರಂಭವಾಗುತ್ತದೆ. ಒಂದೊಮ್ಮೆ ವಿವಾಹ ವಿಚ್ಛೇದನೆಯ ಸುದ್ದಿಯು ಆ ಇದ್ದತ್
ಅವಧಿಯು ಮುಕ್ತಾಯವಾಗುವವರೆಗೆ ಪತ್ನಿಗೆ ತಲುಪದಿದ್ದರೆ, ಆಕೆಯು ಇದ್ದತ್
ಪಾಲನೆ ಮಾಡಲು ಬಾಧ್ಯಳಲ್ಲ. ಒಂದೊಮ್ಮೆ ಆ ವಿವಾಹವು ಪೂರ್ತಿಗೊಳಿಸಲ್ಪಟ್ಟಿರದಿದ್ದರೆ,
-47-
ಅಲ್ಲಿ ವಿವಾಹ ವಿಚ್ಛೇದನೆಯ ಇದ್ದತ್ ಪಾಲನೆ ಮಾಡುವುದು ಅವಶ್ಯಕವಲ್ಲ
ಮತ್ತು ಆಕೆಯು ತತ್್ಕ್ಷಣ ವಿವಾಹವಾಗಲು ಸ್ವತಂತ್ರಳಾಗಿರುವಳು.

ಒಂದು ಕ್ರಮಬದ್ಧವಲ್ಲದ ವಿವಾಹದ ಪ್ರಕರಣದಲ್ಲಿ, ಒಂದೊಮ್ಮೆ ಆ ವಿವಾಹವು
ಪೂರ್ತಿಗೊಳಿಸಲಾದರೆ, ವಿವಾಹ ವಿಚ್ಛೇದನೆಯಾದಾಗ ಇದ್ದತ್ ಅವಧಿಯು ಮೂರು
ತಿಂಗಳುಗಳದ್ದಾಗುತ್ತದೆ.

ಇದ್ದತ್ ಅವಧಿಯಲ್ಲಿ ಪತ್ನಿಯ ಹಕ್ಕುಗಳು :

1. ಇದ್ದತ್ ಕಾಲದಲ್ಲಿ ಪತ್ನಿಯು ಪತಿಯ ಗೃಹದಲ್ಲಿ ವಾಸಿಸಲು ಹಕ್ಕು಴್ಳವ~
ಳಾಗಿರುವಳು.
2. ವಿವಾಹ ವಿಚ್ಛೇದನೆಯ ಇದ್ದತ್ ಅವಧಿಯಲ್ಲಿ ಆಕೆಯು ಜೀವನಾಂಶಕ್ಕೂ
ಸಹ ಹಕ್ಕುದಾರಳಾಗಿರುವಳು.

ಪ್ರ. 12. ಒಂದು ವಿಧ್ಯುಕ್ತವಾದ ನಿವೃತ್ತಿ ಎಂದರೇನು ?

ಉ. ಒಂದು ವಿಧ್ಯುಕ್ತವಾದ ನಿವೃತ್ತಿ

ಪತಿ ಪತ್ನಿಯರು ಲೈಂಗಿಕ ಸಂಭೋಗ ಮಾಡಲು ಯಾವತ್ತೂ ಕಾನೂನೀ,
ನೈತಿಕ ಮತ್ತು ಭೌತಿಕ ಅಡೆತಡೆಗಳಿಲ್ಲದ ಪರಿಸ್ಥಿತಿಗಳಲ್ಲಿ ಒಂದುಗೂಡಿದರೆ ಅದು
"ವಿಧ್ಯುಕ್ತವಾದ ನಿವೃತ್ತಿ" ಎಂಬುದಾಗಿ ಕರೆಯಲ್ಪಡುತ್ತದೆ. ಸುನ್ನಿ ಕಾನೂನಿನ
ಅಧೀನ ಒಂದು ವಿಧ್ಯುಕ್ತವಾದ ನಿವೃತ್ತಿಗೆ ಕನ್ಯಾಶುಲ್ಕ, ಪಿತೃತ್ವವನ್ನು ನಿರ್ಣಯಿಸು~
ವಿಕೆ, ಇದ್ದತ್ ಪಾಲನೆ, ಇದ್ದತ್ ಕಾಲದಲ್ಲಿ ಪತ್ನಿಯ ಜೀವನಾಂಶ, ಪತ್ನಿಯ ಸಹೋದರಿ~
ಯೊಂದಿಗೆ ವಿವಾಹಕ್ಕೆ ಅಡ್ಡಿ ಮತ್ತು ನಿಯಮದಿಂದ ಹೇರಲಾದ ವಿವಾಹಕ್ಕೆ ಅಡ್ಡಿ
ಇವುಗಳ ಸಂಬಂಧದಲ್ಲಿ ನೈಜ ಸಹವಾಸದ ಕಾನೂನೀ ಪರಿಣಾಮಗಳೇ ಇರುತ್ತವೆ.
ಆದರೂ ಸಹ, ಪತ್ನಿಯ ಪುತ್ರಿಯೊಂದಿಗೆ ವಿವಾಹದ ಬಗ್ಗೆ ಅಡ್ಡಿ ಅಥವಾ ವಿವಾಹ
ವಿಚ್ಛೇದನೆಯೊಂದಿಗೆ ಪುನರ್ವಿವಾಹಕ್ಕೆ ಅಡ್ಡಿ ಇವುಗಳ ಸಂಬಂಧದಲ್ಲಿ ನಿಜವಾಗಿ ವಿವಾಹ
ಪೂರ್ತಿಗೊಳಿಸುವಿಕೆಗೆ ಅದೇ ಪರಿಣಾಮವಿರುವುದಿಲ್ಲ.

ಪ್ರ. 13. ಒಂದು ಶೂನ್ಯ ವಿವಾಹ ಮತ್ತು ಅಸಿಂಧು ವಿವಾಹ ಇವುಗಳೊಳಗೆ
ಯಾವ ವ್ಯತ್ಯಾಸವಿರುತ್ತದೆ ?

ಉ. ಶೂನ್ಯ ಮತ್ತು ಅಸಿಂಧು ವಿವಾಹಗಳೊಳಗಿನ
ವ್ಯತ್ಯಾಸ :

ಮುಸ್ಲಿಂ ಕಾನೂನಿನಲ್ಲಿ ಮೂರು ರೀತಿಯ ವಿವಾಹಗಳಿವೆ. ಅವು-

(ಅ) ಸಾಹಿಹ, ಹಾಗೆಂದರೆ ನಿಜವಾದ ವಿವಾಹ. ಇದು ಒಂದು
ಪೂರ್ಣ ವಿಧ್ಯುಕ್ತವಾದ ಕರಾರು ಆಗಿರುತ್ತದೆ;
-48-

(ಆ) ಬಾತಿಲ್, ಹಾಗೆಂದರೆ, ಅದು ಆರಂಭದಿಂದಲೇ ಕೆಟ್ಟುದಾಗಿ~
ರುತ್ತದೆ ಮತ್ತು ಅದು ಪೂರ್ಣವಾಗಿ ಶೂನ್ಯ ಒಪ್ಪಂದವಾಗಿರುತ್ತದೆ; ಮತ್ತು

(ಇ) ಫಾಸಿದ್ ಹಾಗೆಂದರೆ, ಕ್ರಮಬದ್ಧವಲ್ಲದ ಅಥವಾ ಆರಂಭ~
ದಲ್ಲಿ ಒಳ್ಳೆಯದಾಗಿರುತ್ತದೆ. ಆದರೆ ಅದರ ಲಕ್ಷಣಗಳಲ್ಲಿ ಕಾನೂನು ಬಾಹಿರವಾಗಿರು~
ತ್ತದೆ. ಬಾತಿಲ್ ಮತ್ತು ಫಾಸಿದ್ ರೀತಿಯ ವಿವಾಹಗಳಲ್ಲಿ, ಪತಿ ಪತ್ನಿಯರೊಳಗೆ
ವಾರಸು ಪಡೆಯುವ ಯಾವತ್ತೂ ಪರಸ್ಪರ ಹಕ್ಕುಗಳಿರುವುದಿಲ್ಲ.

ಮಹಮ್ಮದೀಯ ಕಾನೂನಿನಲ್ಲಿ, ವಿಧ್ಯುಕ್ತವಲ್ಲದ ವಿವಾಹಗಳು ಕ್ರಮಬಾಹಿರ
ವಿವಾಹಗಳಾಗಿರಬಹುದು ಅಥವಾ ಶೂನ್ಯ ಸುನ್ನಿ ಕಾನೂನಿನ ಅಧೀನ ಕ್ರಮಬಾಹಿರ~
ವಾಗಿರುವ ವಿವಾಹಗಳು ಶಿಯಾ ಕಾನೂನಿನ ಪ್ರಕಾರ ಶೂನ್ಯವಾಗಿರುತ್ತವೆ.

ಒಂದು ಶೂನ್ಯ ಮತ್ತು ಅಕೃತ ವಿವಾಹ ಇವುಗಳೊಳಗೆ ಈ ಕೆಳಗಿನ ಪ್ರಮುಖ
ವ್ಯತ್ಯಾಸಗಳಿವೆ :

1. ಅವುಗಳ ಪರಿಭಾಷೆಗಳ ಬಗ್ಗೆ :

ಒಂದು ಬಾತಿಲ್ ವಿವಾಹವು ಪೂರ್ಣ ಕಾನೂನು ಬಾಹಿರವಾಗಿರುತ್ತದೆ ಮತ್ತು
ಅದು ಆ ಪಕ್ಷಗಾರರೊಳಗೆ ಯಾವತ್ತೂ ದಿವಾನೀ ಹಕ್ಕುಗಳು ಮತ್ತು ಬಾಧ್ಯತೆಗಳನ್ನು
ನಿರ್ಮಿಸುವುದಿಲ್ಲ. ಇಂಥ ಪ್ರಕರಣಗಳಲ್ಲಿ, ಅಲ್ಲಿ ಕನ್ಯಾಶುಲ್ಕವಾಗಲಿ ಅಥವಾ
ಇದ್ದತ್ ಅಥವಾ ಮಕ್ಕಳ ಔರಸತ್ವವಿರುವುದಿಲ್ಲ. ಹೀಗೆ ರಕ್ತ ಸಂಬಂಧ, ಸಮೀಪದ
ಸಂಬಂಧ ಅಥವಾ ಸಾಕು ಸಂಬಂಧ ಇವುಗಳ ಕಾರಣಕ್ಕಾಗಿ ಹಾಕಲಾದ ನಿಷೇಧವು
ಶೂನ್ಯವಾಗಿರುತ್ತದೆ. ಇಂಥ ಒಂದು ವಿವಾಹದ ಬಗ್ಗೆ ಹಾಕಲಾದ ನಿಷೇಧವು ಷರತ್ತು
ಬಾಹಿರ ಮತ್ತು ಪರಮವಾದದ್ದಾಗಿರುತ್ತದೆ.

ಆದರೆ ಒಂದು ಕ್ರಮಬಾಹಿರ ವಿವಾಹವು ಆರಂಭದಲ್ಲಿ ಒಳ್ಳೆಯದಾಗಿದ್ದರೂ ಸಹ,
ಅದು ತನ್ನ ಸ್ವರೂಪದಿಂದ ಕಾನೂನುಬಾಹಿರವಾಗಿರುತ್ತದೆ. ಇದಕ್ಕೆ ಇಲ್ಲಿ ಯಾವತ್ತೂ
ಔಪಚಾರಿಕತೆಯ ಕೊರತೆ ಅಥವಾ ಯಾವತ್ತೂ ಅಡತಡೆಯ ಅಸ್ತಿತ್ವದಿಂದ ಆ ವಿವಾ~
ಹವು ಕ್ರಮಬಾಹಿರವಾಗುತ್ತದೆ. ಈ ಔಪಚಾರಿಕತೆಯ ಕೊರತೆಯು ಆ ಬಳಿಕ ಪರಿಹರಿ~
ಸಲ್ಪಡಬಹುದು, ಅಥವಾ ಆ ಅಡೆತಡೆಯು ಆ ಬಳಿಕ ಕಿತ್ತು ಹಾಕಲ್ಪಡಬಹುದು.
ಬೇರೆ ಶಬ್ದಗಳಲ್ಲಿ ಹೇಳುವದಿದ್ದರೆ, ಇಂಥ ಒಂದು ವಿವಾಹವು ತನ್ನಲ್ಲೇ ತಾನು ಕಾನೂನು
ಬಾಹಿರವಾಗಿರುವುದಿಲ್ಲ. ಹೀಗೆ ಒಂದು ವಿವಾಹದಲ್ಲಿ-

(ಅ) ಸಾಕ್ಷಿದಾರರಿಲ್ಲದೆ :- ಕ್ರಮಬಾಹಿರತೆಯು ಪ್ರಾಸಂಗಿಕ ಪರಿಸ್ಥಿತಿಗಳಿಂದ
ಉಂಟಾಗುತ್ತದೆ ಮತ್ತು ಅದು ಸಾಕಷ್ಟು ಮಂದಿ ಸಾಕ್ಷಿದಾರರ ಮುಂದೆ ವ್ಯಕ್ತ ಅಥವಾ
ಅವ್ಯಕ್ತವಾಗಿರುವ ಒಂದು ಆ ಬಳಿಕದ ಅಧಿಸ್ವೀಕೃತಿಯಿಂದ ಕಿತ್ತು ಹಾಕಲ್ಪಡಬಹುದು.
-49-

(ಆ) ಸಂರಕ್ಷಕನ ಸಮ್ಮತಿಯಿಲ್ಲದೆ :- ಒಂದೊಮ್ಮೆ ಸಂರಕ್ಷಕನು ಆ ಬಳಿಕ
ಅದಕ್ಕೆ ಅನುಸಮ್ಮತಿ ಕೊಟ್ಟರೆ ಆ ಆಕ್ಷೇಪವು ಕಿತ್ತು ಹಾಕಲ್ಪಡಬಹುದು.

(ಇ) ಒಬ್ಬ ಐದನೇ ಪತ್ನಿಯೊಂದಿಗೆ :- ಪತಿಯು ತನ್ನ ಹಿಂದಿನ ನಾಲ್ವರು
ಪತ್ನಿಯರಲ್ಲಿ ಯಾವಳೇ ಒಬ್ಬಳೊಂದಿಗಿನ ವಿವಾಹವನ್ನು ವಿಚ್ಛೇದನೆಗೊಳಿಸುವುವಿಕೆಯಿಂದ
ಈ ಅಡ್ಡಿಯು ಕಿತ್ತು ಹಾಕಲ್ಪಡಬಹುದು.

(ಈ) ಇದ್ದತ್ ಅಡರಿಸುತ್ತಿರುವ ಒಬ್ಬ ನಾರಿಯೊಂದಿಗೆ :- ಇದ್ದತ್ ಅವಧಿಯು
ಮುಕ್ತಾಯವಾದಾಗ ಈ ಅಡ್ಡಿಯು ನಿಂತು ಬಿಡುತ್ತದೆ.

(ಉ) ಒಬ್ಬ ಮೂರ್ತಿ ಪೂಜಕಳು ಅಥವಾ ಅಗ್ನಿ ಪೂಜಕಳೊಂದಿಗೆ :-
ಒಂದೊಮ್ಮೆ ಆ ನಾರಿಯು ಇಸ್ಲಾಮಿಗೆ ಮತಾಂತರಣಗೊಳಿಸಲ್ಪಟ್ಟರೆ ಆ ಅಡ್ಡ಼ಿಯು
ಕಿತ್ತು ಹಾಕಲ್ಪಡುತ್ತದೆ.

(ಊ) ಒಬ್ಬ ನಾರಿಯು ಅವನ ಪತ್ನಿಯೊಂದಿಗೆ ಯಾವ ರೀತಿಯಲ್ಲಿ ಸಂಬಂಧಿ~
ಸಿರುವಳೆಂದರೆ ಒಂದೊಮ್ಮೆ ಅವರೊಳಗೆ ಒಬ್ಬನು ಪುರುಷನಾಗಿದ್ದರೆ, ಅವರು ಕಾನೂನು~
ಬದ್ಧವಾಗಿ ವಿವಾಹವಾಗುವಂತಿರಲಿಲ್ಲ,- ಈ ಸಮಸ್ಯೆಯನ್ನು ಅಡ್ಡಿ ಬರುವ ಪತ್ನಿ~
ಯೊಂದಿಗ಼ಿನ ವಿವಾಹವನ್ನು ವಿಚ್ಛೇದನೆಗೊಳಿಸುವಿಕೆಯಿಂದ ಕಿತ್ತು ಹಾಕಬಹುದು.
ಹೀಗೆ ಒಂದೊಮ್ಮೆ ಒಬ್ಬ ವ್ಯಕ್ತಿಯು ಆಗಲೇ ಒಬ್ಬ ನಾರಿಯನ್ನು ವಿವಾಹವಾಗಿದ್ದು
ಆಕೆಯ ಸಹೋದರಿಯನ್ನೂ ಸಹ ವಿವಾಹವಾದರೆ, ಅವನು ಮೊದಲನೇ ಪತ್ನಿಯೊಂದಿ~
ಗಿನ ವಿವಾಹವನ್ನು ವಿಚ್ಛೇದನೆಗೊಳಿಸಿ ಎರಡನೇ ವಿವಾಹವನ್ನು ಕ್ರಮಬದ್ಧಗೊಳಿಸ~
ಬಹುದು.

2. ಅವುಗಳ ಕಾನೂನೀ ಪರಿಣಾಮದ ಬಗ್ಗೆ :-

ಒಂದು ಬಾತಿಲ್ ವಿವಾಹದ ಪರಿಣಾಮವೇನೆಂದರೆ ಇದು ಆ ಪಕ್ಷಗಾರರೊಳಗೆ
ಯಾವತ್ತೂ ದಿವಾನೀ ಹಕ್ಕುಗಳು ಅಥವಾ ಬಾಧ್ಯತೆಗಳನ್ನು ನಿರ್ಮಿಸುವುದಿಲ್ಲ. ಆದರೆ
ಆ ವಿವಾಹವು ಪೂರ್ತಿಗೊಂಡ ಬಳಿಕ, ಪತ್ನಿಯು ರೂಢಿಗತ ಕನ್ಯಾಶುಲ್ಕಕ್ಕೆ ಮಾತ್ರ
ಹಕ್ಕುದಾರಳಾಗುವಳು.

ಒಂದು "ಫಾಸಿದ್" ವಿವಾಹವು ಪೂರ್ತಿಗೊ಴್ಳಲ್ಪಡುವುದಕ್ಕಿಂತ ಮೊದಲು
ಅದಕ್ಕೆ ಯಾವತ್ತೂ ಕಾನೂನೀ ಪರಿಣಾಮವಿರುವುದಿಲ್ಲ. ಪೂರ್ತಿಗೊಳ್ಳಲಾದ ಬಳಿಕವೂ
ಸಹ, ಆ ಪತಿ ಪತ್ನಿಯರಿಗೆ ವಾರಸು ಪಡೆಯುವ ಯಾವತ್ತೂ ಹಕ್ಕಿರುವುದಿಲ್ಲ. ಅಂಥ
ವಿವಾಹ ಸಂತತಿಯು ಔರಸ ಸಂತತಿಯಾಗಿರುತ್ತದೆ. ಒಂದೊಮ್ಮೆ ಆ ವಿವಾಹವು ಪೂರ್ತಿ~
ಗೊಂಡಿದ್ದರೆ ಪತ್ನಿಯು (ಅ) ಸರಿಯಾದ ಅಥವಾ ನಿರ್ದಿಷ್ಟವಾದ, ಇವುಗಳಲ್ಲಿ
-50-
ಯಾವುದು ಕಡಿಮೆಯದ್ದೊ ಅ ಕನ್ಯಾಶುಲ್ಕಕ್ಕೆ ಹಕ್ಕುದಾರಳಾಗುವಳು; ಮತ್ತು (ಆ)
ಆಕೆಯ ಇದ್ದತ್ ಆಚರಿಸಲು ಬಾಧ್ಯಳಾಗಿರುವಳು.

3. ವಿವಾಹದಿಂದ ಹುಟ್ಟಿರುವ ಸಂತತಿಯ ಬಗ್ಗೆ :

ಒಂದು ಶೂನ್ಯ ವಿವಾಹದ ಅನೌರಸವಾಗಿರುತ್ತದೆ; ಒಂದು ಫಾಸಿದ್ ವಿವಾಹ
ಸಂತತಿಯು ಔರಸವಾಗಿರುತ್ತದೆ.

4. ಒಂದು ವಿಧ್ಯುಕ್ತವಾದ ಮುಸ್ಲಿಂ ವಿವಾಹದ ಕಾನೂನೀ ಅನುಷಂಗಿ~
ಕತೆಗಳು :

ಒಂದು ವಿಧ್ಯುಕ್ತವಾದ ಮುಸ್ಲಿಂ ವಿವಾಹವು ಪತ್ನಿಗೆ ಈ ಕೆಳಗಿನ ಹಕ್ಕುಗಳನ್ನು
ಪ್ರಧಾನ ಮಾಡುತ್ತದೆ - (ಅ) ಕನ್ಯಾ ಶುಲ್ಕ ; (ಆ) ಜೀವನಾಂಶ ; (ಇ) ಯೋಗ್ಯ
ದಾಂಪತ್ಯದ ನಿವಾಸ ; (ಈ) ಒಂದೊಮ್ಮೆ ಆಕೆಗೆ ಸವತಿಗಳಿದ್ದರೆ ಸಮಾನವಾಗಿ
ನೋಡಿಕೊಳ್ಳುವಿಕೆ ಮತ್ತು ನಿಷ್ಪಕ್ಷಪಾತ; ಮತ್ತು (ಉ) ಸಹವಾಸದ ಹಕ್ಕು ಮತ್ತು
ಒಂದೊಮ್ಮೆ ವಿವಾಹ ವಿಚ್ಛೇದನೆಯಾಗಿದ್ದರೂ ಸಹ ತನ್ನ ಕಿರಿಯ ಮಕ್ಕಳನ್ನು ಪೋಷಿ~
ಸುವ ಹಕ್ಕು.

ಇದು ಪತ್ನಿಯ ಮೇಲೆ ಈ ಕೆಳಗಿನ ಹೊಣೆಗಾರಿಕೆಗಳನ್ನು ಹೇರುತ್ತದೆ - (ಅ)
ಪತಿಯ ಪ್ರತಿ ನಿಷ್ಠೆ ಮತ್ತು ವಿಧೇಯತೆ; (ಆ) ಆರೋಗ್ಯ ಮತ್ತು ಶಿಷ್ಟಾಚಾರಕ್ಕೆ
ಗಮನಕೊಟ್ಟು ಲೈಂಗಿಕ ಸಂಭೋಗಕ್ಕೆ ಅವನಿಗೆ ಅನುಮತಿ ಕೊಡುವುದು; (ಇ)
ಒಂದೊಮ್ಮೆ ಪತಿಯು ಹಾಲು ಕುಡಿಸುವ ಒಬ್ಬ ದಾದಿಯನ್ನು ನೇಮಕ ಮಾಡು~
ವಂತಿಲ್ಲವಾದರೆ ತನ್ನ ಮಕ್ಕಳಿಗೆ ಸ್ವಂತ ಎದೆ ಹಾಲನ್ನು ಕುಡಿಸುವುದು; (ಈ) ಇದ್ದತ್
ಆಚರಿಸುವುದು.

ಒಂದು ಮುಸ್ಲಿಂ ವಿವಾಹವು ಆ ಪಕ್ಷಗಾರರೊಳಗೆ ಸಂಬಂಧದ ನಿಷೇಧಿತ ಹಂತ~
ಗಳನ್ನು ಮತ್ತು ತತ್ಸಮಾನವಾದ ವಾರಸಿನ ಹಕ್ಕುಗಳನ್ನು ನಿರ್ಮಿಸುತ್ತದೆ. ಇದು
ಪಕ್ಷಗಾರರಲ್ಲಿ ವೈವಾಹಿಕ ವಿಶ್ವಾಸದ ಹಕ್ಕನ್ನೂ ಸಹ ನಿರ್ಮಿಸುತ್ತದೆ. ಆದರೆ ಪತಿಗೆ
ತನ್ನ ಪತ್ನಿಯ ಸ್ವತ್ತಿನ ಮೇಲೆ ಯಾವತ್ತೂ ಹಕ್ಕು ಸಿಗುವುದಿಲ್ಲ.

ಪ್ರ. 11. ಮುತಾ ವಿವಾಹ ಎಂದರೇನು ? ಒಂದು ಮುತಾ ವಿವಾಹದ
ಅನುಷಂಗಿಕತೆಗಳು ಯಾವುವು ?

ಉ. ಮುತಾ ವಿವಾಹ

ಪರಿಭಾಷೆ :

"ಮುತಾ" ಇದರ ಶಾಬ್ದಿಕ ಅನುಭೋಗ ಅಥವಾ ಉಪಭೋಗ ಆಗಿರುತ್ತದೆ.
ಅದರ ಕಾನೂನೀ ಸಂದರ್ಭದಲ್ಲಿ, ಅದರ ಅರ್ಥವು ಒಂದು ತಾತ್ಕಾಲಿಕ ವಿವಾಹ,
-51-
ಹಾಗೆಂದರೆ, ಅದೊಂದು ವಿವಾಹವಾಗಿದ್ದು ಅದರ ಅವಧಿಯು ಆ ಪಕ್ಷಗಾರರೊಳಗಿನ
ಒಂದು ಒಪ್ಪಂದದಿಂದ ನಿಗದಿ ಮಾಡಲ್ಪಟ್ಟಿರುತ್ತದೆ.

ಮುತಾ ವಿವಾಹ ಪದ್ಧತಿಯು ಪೈಗಂಬರನಿಗಿಂತ ಮೊದಲು ಹಾಗೂ ಪೈಗಂಬರನ
ಜೀವಮಾನದಲ್ಲಿ ಬಳಕೆಯಲ್ಲಿತ್ತು. ಆರಂಭದಲ್ಲಿ ಪೈಗಂಬರನು ಈ ಪದ್ಧತಿಯನ್ನು
ಸಹಿಸಿದ್ದನಾದರೂ ಸಹ ಕಾಲಕ್ರಮೇಣ ಅವನು ಇಂಥ ಒಂದು ವಿವಾಹವನ್ನು ಕಾನೂನು
ಬಾಹಿರವೆಂಬುದಾಗಿ ಘೋಷಿಸಿರುವನು ಎಂಬುದಾಗಿ ಹೇಳಲಾಗುತ್ತದೆ. ಭಾರತದಲ್ಲಿ~
ರುವ ನಾಲ್ಕು ಪ್ರಮುಖ ಅರಬರ ರೂಢಿಗಳಲ್ಲಿ ಮುತಾ ಪದ್ಧತಿಯು ಹನ್ನಫಿ, ಶಫಿ
ಮತ್ತು ಇಸ್ಮಾಯಿಲಿ ಪರಂಪರೆಗಳಿಂದ ಮನ್ನಿಸಲ್ಪಟ್ಟಿಲ್ಲ. ಶಿಯಾ ಸಮಾಜದ ಇತ್ನಾ
ಅಶಾರಿಯಾ ಪರಂಪರೆ ಮಾತ್ರ ಈ ರೀತಿಯ ಒಂದು ವಿವಾಹವನ್ನು ಮನ್ನಿಸುತ್ತದೆ.
ಈ ಪರಂಪರೆಯ ಅನುಯಾಯಿಗಳು ಭಾರತದಲ್ಲಿ ತುಂಬಾ ಕಡಿಮೆ ಸಂಖ್ಯೆಯಲ್ಲಿರುವರು.
ಇವರೊಳಗೂ ಸಹ ಈ ಪದ್ಧತಿಯು ಭಾರತದ ಮುಸಲ್ಮಾನರೊಳಗೆ ತುಂಬಾ ಕಡಿಮೆ
ಜನರಲ್ಲಿ ಬಳಕೆಯಲ್ಲಿದೆ.

ಸುನ್ನಿ ಕಾನೂನಿನ ಪ್ರಕಾರ ಒಂದು ವಿವಾಹದ ಕರಾರು ಅದರ ಅವಧಿಯ ಬಗ್ಗೆ
ಯಾವತ್ತೂ ನಿರ್ಬಂಧನೆ ಹಾಕಬಾರದು ಮತ್ತು ಪ್ರಸ್ತಾವ ಮತ್ತು ಸ್ವೀಕೃತಿಯ ಕಾಲ~
ದಲ್ಲಿ ಉಪಯೋಗಿಸಲಾದ ಶಬ್ದಗಳು ಒಂದು ತತ್್ಕ್ಷಣಿಕ ಮತ್ತು ಶಾಶ್ವತವಾದ
ದಾಂಪತ್ಯದ ಅರ್ಥ ಕೊಡತಕ್ಕದ್ದು. ಆದರೆ ಶಿಯಾ ಸಮಾಜದ ಇತ್ನಾ ಅಶಾರಿಯಾ
ಪರಂಪರೆಯು ಎರಡು ರೀತಿಗಳ ವಿವಾಹಗಳನ್ನು ಮನ್ನಿಸುತ್ತದೆ. ಒಂದು ಶಾಶ್ವತವಾದ
ವಿವಾಹ ಮತ್ತು ಇನ್ನೊಂದು ತಾತ್ಕಾಲಿಕವಾದ ಅಥವಾ ಮುತಾ ವಿವಾಹ. ಒಂದು
ಮುತಾ ವಿವಾಹವು ಒಂದು ದಿನಕ್ಕಾಗಿ, ಒಂದು ತಿಂಗಳಿಗಾಗಿ, ಒಂದು ವರ್ಷಕ್ಕಾಗಿ
ಅಥವಾ ಅನೇಕ ವರ್ಷಗಳ ಒಂದು ಅವಧಿಗಾಗಿ ಮಾಡಲ್ಪಡಬಹುದು. ಆದರೆ ಒಂದು
ಮುತಾ ವಿವಾಹವು ವಿಧ್ಯಕ್ತವಾಗಬೇಕಾದರೆ ಅಲ್ಲಿ (ಅ) ಆ ವೈವಾಹಿಕ ಸಂಬಂಧವು
ಯಾವ ಅವಧಿಯವರೆಗೆ ಉಳಿಯತಕ್ಕದ್ದು ಎಂಬುದನ್ನು ಆ ಮುತಾ ವಿವಾಹದ ಕರಾರು
ಮಾಡುವ ಕಾಲದಲ್ಲಿ ನಿಗದಿಗೊಳಿಸಲ್ಪಡತಕ್ಕದ್ದು; ಮತ್ತು (ಆ) ಆ ಕರಾರಿನಲ್ಲಿ
ಯಾವತ್ತೂ ಕನ್ಯಾ ಶುಲ್ಕವು ನಿರ್ದಿಷ್ಟಗೊಳಿಸಲ್ಪಡತಕ್ಕದ್ದು. ಒಂದೊಮ್ಮೆ ಸಹವಾಸದ
ನಿಂಬಂಧನೆಯು ನಿರ್ದಿಷ್ಟಗೊಳಿಸಲ್ಪಟ್ಟಿರದಿದ್ದರೆ, ಆದರೆ ಕನ್ಯಾಶುಲ್ಯವು ನಿಗದಿಗೊಳಿಸ~
ಲ್ಪಟ್ಟಿದ್ದರೆ, ಆ ವಿವಾಹ ಕರಾರು ಒಂದು ಮುತಾ ವಿವಾಹದ ರೀತಿಯಲ್ಲಿ ಶೂನ್ಯವಾಗಿರು~
ತ್ತದೆ. ಆದರೆ ಆ ವಿವಾಹವು ಒಂದು ಶಾಶ್ವತವಾದ ವಿವಾಹದ ರೀತಿಯಲ್ಲಿ ಕಾರ್ಯಾ~
ಚರಣೆಗೆ ಬರಬಹುದು. ಒಂದೊಮ್ಮೆ ಒಂದು ವಿವಾಹದ ಅವಧಿಯು ನಿರ್ದಿಷ್ಟಪಡಿಸ~
ಲಾಗಿದ್ದು ಕನ್ಯಾಶುಲ್ಕವು ನಿಗದಿಗೊಳಿಸಲ್ಪಟ್ಟಿರದಿದ್ದರೆ ಆ ಕರಾರು ಶೂನ್ಯವಾಗಿರುತ್ತದೆ.

ಒಬ್ಬ ಶಿಯಾ ಪುರುಷನು ಒಬ್ಬ ಮುಸ್ಲಿಂ, ಕ್ರೈಸ್ತ ಅಥವಾ ಯಹೂದಿ ಮತವನ್ನು
-52-
ಪಾಲನೆ ಮಾಡುವವಳೊಂದಿಗೆ ಅಥವಾ ಒಬ್ಬ ಅಗ್ನಿ ಪೂಜಕಳೊಂದಿಗೆ ಒಂದು
ಮುತಾ ವಿವಾಹದ ಕರಾರು ಮಾಡಿಕೊಳ್ಳುವಂತಿಲ್ಲ. ಒಬ್ಬ ಶಿಯಾ ನಾರಿಯು ಒಬ್ಬ
ಮುಸಲ್ಮಾನನೊಂದಿಗೆ ಮಾತ್ರ ಒಂದು ಮುತಾ ವಿವಾಹದ ಕರಾರು ಮಾಡಿಕೊಳ್ಳ~
ಬಹುದು.

ಇದರ ವೈಶಿಷ್ಟ್ಯಗಳು :

ಒಂದು ಮುತಾ ವಿವಾಹದ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ :

1. ದಾಂಪತ್ಯದ ಅವಧಿಯು ನಿಗದಿಗೊಳಿಸಲ್ಪಟ್ಟಿರಬೇಕು;

ಒಂದೊಮ್ಮೆ ಅದು ನಿಗದಿಗೊಳಿಸಲ್ಪಟ್ಟಿರದಿದ್ದರೆ, ಆ ಕರಾರು ಒಂದು ಶಾಶ್ವತ~
ವಾದ ವಿವಾಹದ ರೀತಿಯಲ್ಲಿ ವಿಧ್ಯುಕ್ತವಾಗಿರುತ್ತದೆ, ಆದರೆ ಒಂದು ಮುತಾ ವಿವಾಹದ
ರೀತಿಯಲ್ಲಿ ಶೂನ್ಯವಾಗಿರುತ್ತದೆ. ಆ ನಿಗದಿಗೊಳಿಸಲಾದ ಅವಧಿಯು ಮುಕ್ತಾಯ~
ವಾದಾಗ ಆ ಇಬ್ಬರು ಪಕ್ಷಗಾರರಿಂದ ಅದರ ನವೀಕರಣಕ್ಕಾಗಿ ಸಮ್ಮತಿಕೊಡಲಾದ
ಹೊರತು ಆ ಕರಾರು ಕೊನೆಗೊಳ್ಳುತ್ತದೆ.

2. ಒಂದಿಷ್ಟು ಕನ್ಯಾ ಶುಲ್ಕವು ನಿಗದಿಗೊಳಿಸಲ್ಪಟ್ಟಿರಬೇಕು ;

ಒಂದೊಮ್ಮೆ ಅದು ನಿಗದಿಗೊಳಿಸಲ್ಪಟ್ಟಿರದಿದ್ದರೆ, ಆ ಕರಾರು ಶೂನ್ಯವಾಗಿರುತ಼್ತದೆ.
ಅಗ್ನಿಪೂಜಕಳೊಂದಿಗೆ ಒಂದು ಮುತಾ ವಿವಾಹದ ಕರಾರು ಮಾಡಿಕೊಳ್ಳಬಹುದು.
ಆದರೆ ಒಬ್ಬ ಶಿಯಾ ನಾರಿಯು ಒಬ್ಬ ಮುಸಲ್ಮಾನನೇತರನೊಂದಿಗೆ ಒಂದು ಮುತಾ
ವಿವಾಹದ ಕರಾರು ಮಾಡಿಕೊಳ್ಳುವಂತಿಲ್ಲ.

ಇದರ ಅನುಷಂಗಿಕತೆಗಳು:

ಒಂದು ಮುತಾ ವಿವಾಹದ ಕಾನೂನೀ ಅನುಷಂಗಿಕತೆಗಳು ಈ ಕೆಳಗಿನವು~
ಗಳಾಗಿವೆ;

(1) ಇದು ಪತ್ನಿ ಅಥವಾ ಪತಿ ಇವರಿಗೆ ವಾರಸು ಪಡೆಯುವ ಪರಸ್ಪರ ಹಕ್ಕು~
ಗಳನ್ನು ಕೊಡುವುದಿಲ್ಲ. ಆದರೆ ಈ ವಿವಾಹದಿಂದ ಹುಟ್ಟಿರುವ ಮಕ್ಕಳು ಈ ವಿವಾಹವು
ಊರ್ಜಿತಾವಸ್ಥೆಯಲ್ಲಿ ಇದ್ದಾಗ ಹುಟ್ಟಿರುವ ಮಕ್ಕಳು ಔರಸ ಮಕ್ಕಳೆಂಬುದಾಗಿ ಎಣಿಸ~
ಲ್ಪಡುವರು ಮತ್ತು ಅವರು ತಮ್ಮ ಇಬ್ಬರು ಹೆತ್ತವರಿಂದ ವಾರಸು ಪಡೆಯಲು ಸಮರ್ಥ~
ರಾಗಿರುವರು.

(2) ಒಂದೊಮ್ಮೆ ಒಂದು ಸಹವಾಸವು ಒಂದು ಮುತಾ ವಿವಾಹದಲ್ಲಿ ಉಗಮ~
ವಾದರೆ, ಆದರೆ ಆ ಮುತಾ ವಿವಾಹವು ಮೂಲತಃ ಯಾವ ಅವಧಿಗಾಗಿ ಮಾಡಲ್ಪಟ್ಟಿತ್ತು
-53-
ಎಂಬ ಬಗ್ಗೆ ಯಾವತ್ತೂ ಸಾಕ್ಷ್ಯವಿಲ್ಲದಿದ್ದರೆ ಅಥವಾ ನಿಗದಿಗೊಳಿಸಲಾದ
ಅವಧಿಯು ಮುಕ್ತಾಯವಾದ ಬಳಿಕವೂ ಸಹ ಆ ಸಹವಾಸವು ಮುಂದುವರಿದರೆ, ಇಲ್ಲಿ
ಸರಿಯಾದ ಅನುಮಾನವು ಯಾವುವೆಂದರೆ ಆ ಮುತಾ ವಿವಾಹವು ಆ ದಾಂಪತ್ಯದ
ಇಡೀ ಅವಧಿಯ ಕಾಲದಲ್ಲಿ ಮುಂದುವರಿದಿತ್ತು ಮತ್ತು ಇಂಥ ಅವಧಿಯಲ್ಲಿ ಜನಿಸಿರುವ
ಮಕ್ಕಳು ಔರಸ ಮಕ್ಕಳಾಗಿರುವರು.

(3) ಒಂದೊಮ್ಮೆ ಒಬ್ಬ ಮುತಾ ವಿವಾಹವು ಪೂರ್ತಿಗೊಳಿಸಲ್ಪಡದಿದ್ದರೆ
ಪತ್ನಿಯು ಅರ್ಧದಷ್ಟು ಕನ್ಯಾ ಶುಲ್ಕಕ್ಕೆ ಹಕ್ಕುದಾರಳಾಗುವಳು.

(4) ಒಂದೊಮ್ಮೆ ಆ ವಿವಾಹವು ಪೂರ್ತಿಗೊಳಿಸಲಾರದೆ ಪತ್ನಿಯು ಪೂರ್ಣ
ಕನ್ಯಾಶುಲ್ಕಕ್ಕೆ ಹಕ್ಕುದಾರಳಾಗುವಳು ಮತ್ತು ಇಲ್ಲಿ ಒಂದೊಮ್ಮೆ ಪತಿಯು ಆ ನಿಗದಿ~
ಗೊಳಿಸಲಾದ ಅವಧಿಯು ಮುಗಿಯುವುದಕ್ಕಿಂತ ಮೊದಲೇ ಆ ವಿವಾಹವನ್ನು ಕೊನೆ~
ಗೊಳಿಸಿದರೂ ಸಹ ಇದು ಪೂರ್ಣ ಕನ್ಯಾಶುಲ್ಕ ಪಡೆಯುವ ಅವಳ ಹಕ್ಕಿನ ಮೇಲೆ
ಪರಿಣಾಮ ಬೀರುವುದಿಲ್ಲ.

(5) ಒಂದೊಮ್ಮೆ ಆ ನಿಗದಿಗೊಳಿಸಲಾದ ಅವಧಿಯು ಮುಗಿಯುವುದಕ್ಕಿಂತ
ಮೊದಲು ಪತ್ನಿಯನ್ನು ಬಿಟ್ಟರೆ, ಆಕೆಯು ಒಂದು ಅನುಪಾತಿಕ ಕನ್ಯಾಶುಲ್ಕಕ್ಕೆ
ಮಾತ್ರ ಹಕ್ಕುದಾರಳಾಗುವಳು.

(6) ಒಂದು ಮುತಾ ವಿವಾಹವು ಶಿಯಾ ಕಾನೂನಿನ ಪ್ರಕಾರ ಪತ್ನಿಗೆ ಜೀವ~
ನಾಂಶದ ಹಕ್ಕನ್ನು ಕೊಡುವುದಿಲ್ಲ.

(7) ಇಲ್ಲಿ ಪತ್ನಿಯರ ಸಂಖ್ಯೆಯು 4ಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಹೀಗೆ
ಒಬ್ಬ ಶಿಯಾ ಪುರುಷನು ಎಷ್ಟೇ ಮಂದಿ ನಾರಿಯರೊಂದಿಗೆ ಮುತಾ ವಿವಾಹದ ಕರಾರು
ಮಾಡಿಕೊಳ್ಳಬಹುದು.

(8) ಒಂದು ಮುತಾ ವಿವಾಹವು ನಿಗದಿತ ಅವಧಿಯು ಮುಗಿದಾಗ ತನ್ನಿಂದ
ತಾನಾಗಿಯೇ ವಿಘಟನೆಗೊಳ್ಳುತ್ತದೆ. ಇಂಥ ಒಂದು ವಿವಾಹದ ಪ್ರಕರಣದಲ್ಲಿ ವಿವಾಹ
ವಿಚ್ಛೇದನೆಯ ಯಾವುದೇ ಒಂದು ಹಕ್ಕು ಮನ್ನಿಸಲ್ಪಡುವುದಿಲ್ಲ. ಆದರೆ ಪತಿಯು ಆ
ನಿಗದಿಗೊಳಿಸಲಾದ ಅವಧಿಯು ಮುಗಿಯುವುದಕ್ಕಿಂತ ಮೊದಲೇ ಆ ನಿಗದಿತ ಅವಧಿಯ
ಬದಲಾಗಿ ಆಕೆಗೆ ಯಾವತ್ತೂ ಪರಿಹಾರ ಕೊಟ್ಟು ಆ ವಿವಾಹವನ್ನು ಕೊನೆಗೊಳಿಸ~
ಬಹುದು.

ಮುತಾ ವಿವಾಹವನ್ನು ವಿಘಟನೆಗೊಳಿಸುವ ರೀತಿಗಳು :-

ಒಂದು ಮುತಾ ವಿವಾಹವು ಈ ಕೆಳಗಿನ ರೀತಿಗಳಲ್ಲಿ ವಿಘಟನೆಗೊಳಿಸಲ್ಪಡುತ್ತದೆ.
-54-

(ಎ) ನಿಗದಿಗೊಳಿಸಲಾದ ಅವಧಿಯು ಮುಗಿದಾಗ ಅದು ತನ್ನಿಂದ ತಾನಾ~
ಗಿಯೇ ವಿಘಟನೆಗೊಳ್ಳುತ್ತದೆ ; ಅಥವಾ

(ಬಿ) ನಿಗದಿಗೊಳಿಸಲಾದ ಅವಧಿಯು ಮುಗಿಯುವುದಕ್ಕಿಂತ ಮೊದಲು ಆ
ಉಳಿದ ಅವಧಿಯ ಬದಲಾಗಿ ಪತಿಯು ಪತ್ನಿಗೆ ಯಾವತ್ತೂ ಪರಿಹಾರ ಕೊಡುವಿಕೆ~
ಯಿಂದ ಆ ಅವಧಿಗಿಂತ ಮೊದಲೇ ಒಂದು ವಿವಾಹವು ವಿಘಟನೆಗೊಳಿಸಲ್ಪಡಬಹುದು.

ಪ್ರ. 15. ಮುಸ್ಲಿಂ ಕಾನೂನಿನ ಅಧೀನ ವಿವಾಹದ ಪೂರ್ವ ಭಾವನೆಯು
ಹೇಗೆ ತೆಗೆದುಕೊಳ್ಳಲ್ಪಡುತ್ತದೆ ?

ಮಹಮ್ಮದೀಯ ಕಾನೂನಿನ ಅಧೀನ ವಿವಾಹದ ಪೂರ್ವಭಾವನೆ :

ಒಂದು ನೇರ ಪುರಾವೆಯು ಇಲ್ಲದಾಗ, ಈ ಕೆಳಗಿನ ಮೂರು ಪ್ರಕರಣಗಳಲ್ಲಿ
ಒಂದು ವಿವಾಹದ ಪೂರ್ವ ಭಾವನೆ ತೆಗೆದುಕೊಳ್ಳಲ್ಪಡುತ್ತದೆ.

(ಎ) ಒಂದೊಮ್ಮೆ ಆ ಪಕ್ಷಗಳು ಪತಿ ಮತ್ತು ಪತ್ನಿಯರಂತೆ ಒಂದು ದೀರ್ಘ~
ವಾದ ಮತ್ತು ನಿರಂತರವಾದ ಸಹವಾಸ ನಡೆಸಿರುವರಾದರೆ.

(ಬಿ) ಒಂದೊಮ್ಮೆ ಒಬ್ಬ ವ್ಯಕ್ತಿಯು -

(ಅ) ಆ ನಾರಿಗೆ ಹುಟ್ಟಿರುವ ಒಂದು ಮಗುವಿನ ಪಿತೃತ್ವವನ್ನು ಅಧಿಸ್ವೀಕ಼ಾರ
ಮಾಡಿದರೆ, ಅಲ್ಲಿ ಒಂದು ವಿಧ್ಯುಕ್ತವಾದ ಅಧಿಸ್ವೀಕೃತಿಯ ಎಲ್ಲ ಷರತ್ತುಗಳು ಪೂರ್ತಿ~
ಗೊಳಿಸಲ್ಪಡತಕ್ಕದ್ದು; ಅಥವಾ

(ಆ) ಆ ನಾರಿಯು ಅವನ ಪತ್ನಿ ಎಂಬುದಾಗಿ ಅವನು ಅಧಿಸ್ವೀಕಾರ ಮಾಡ~
ತಕ್ಕದ್ದು.

(ಸಿ) ನೇರ ಪುರಾವೆ ಇಲ್ಲದ ಒಂದು ವಿವಾಹವು ಪರಿಸ್ಥಿತಿಗಳಿಂದಲೂ ಸಹ ಅನು~
ಮಾನಿಸಲ್ಪಡಬಹುದು. ಕೇವಲ ಸಹವಾಸವು ಒಂದು ಪೂರ್ವ ಭಾವನೆಗೆ ಸಾಲುವುದಿಲ್ಲ.
ಅಲ್ಲಿ-

(ಅ) ಆ ಸಹವಾಸವು ಪತಿ ಮತ್ತು ಪತ್ನಿಯ ರೀತಿಯಲ್ಲಿದ್ದಿರಬೇಕು; ಮತ್ತು
(ಆ) ಆ ವ್ಯಕ್ತಿಯು ಆ ನಾರಿಯನ್ನು ತನ್ನ ಪತ್ನಿ ಎಂಬಂತೆ ನೋಡಿಕೊಂಡಿರ~
ಬೇಕು ಮತ್ತು ಆಕೆಯನ್ನು ಆ ರೀತಿಯಲ್ಲಿ ಮನ್ನಿಸಿರಬೇಕು ಮತ್ತು ಆಕೆಗೆ ತನ್ನ
ಪತ್ನಿಯ ಸ್ಥಾನಮಾನವನ್ನು ಕೊಡುವ ಉದ್ದೇಶ ಮತ್ತು ತಿಳುವಳಿಕೆಯಿಂದ ಆಕೆ~
ಯನ್ನು ಪತ್ನಿಯೆಂಬುದಾಗಿ ಮನ್ನಿಸಿರಬೇಕು.

ಒಂದೊಮ್ಮೆ ಆ ಪಕ್ಷಗಳ ನಡತೆಯು ಪತಿ ಪತ್ನಿಯರೊಂದಿಗಿನ ನಡತೆಗೆ ಸುಸಂಗ~
ತವಾಗಿದ್ದರೆ, ಅಥವಾ ಒಬ್ಬ ನಾರಿಯು ಪುರುಷನ ಮನೆಗೆ ತರಲ್ಪಡುವುದಕ್ಕಿಂತ
-55-
ಮೊದಲು ಆಕೆಯು ಒಬ್ಬ ವೇಶ್ಯೆಯಾಗಿದ್ದರೆ ಅಲ್ಲಿ ವಿವಾಹದ ಪೂರ್ವ ಭಾವನೆಯು
ಅನ್ವಯವಾಗುವುದಿಲ್ಲ.

16. ದಾಂಪತ್ಯದ ಹಕ್ಕುಗಳನ್ನು ಹೇಗೆ ಮರಳಿ ಪಡೆಯಲಾಗುತ್ತದೆ ?

ದಾಂಪತ್ಯದ ಹಕ್ಕುಗಳನ್ನು ಮರಳಿ ಪಡೆಯುವಿಕೆ :

ಒಂದೊಮ್ಮೆ ಯಾವುದೇ ಒಂದು ಕಾನೂನುಬದ್ಧವಾದ ಕಾರಣವಿಲ್ಲದೆ ಒಬ್ಬ
ಪತ್ನಿಯು ತನ್ನ ಪತಿಯೊಂದಿಗೆ ಸಹವಾಸ ಮಾಡುವುದನ್ನು ನಿಲ್ಲಿಸಿದರೆ, ಪತಿಯು
ದಾಂಪತ್ಯದ ಹಕ್ಕುಗಳ ಮರುಪ್ರಾಪ್ತಿಗಾಗಿ ಅವಳ ವಿರುದ್ಧ ದಾವೆ ಹೂಡಬಹುದು.
ಆದರೂ ಸಹ, ಒಂದೊಮ್ಮೆ ಆ ವಿವಾಹವು ಪೂರ್ತಿಗೊಳಿಸಲ್ಪಟ್ಟಿದ್ದರೂ ಸಹ ಒಂದು
ಇದ್ದತ್ ಅವಧಿಯಲ್ಲಿ ಮಾಡಲ್ಪಟ್ಟ ಒಂದು ಕ್ರಮಬಾಹಿರ ವಿವಾಹವಾಗಿದ್ದರೆ ಪತಿಯು
ಒಂದು ಡಿಕ್ರಿ ಪಡೆಯಲು ಹಕ್ಕುದಾರನಾಗುವುದಿಲ್ಲ. ಅಥವಾ ಒಂದೊಮ್ಮೆ ಆ ವಿವಾ~
ಹವು ಪತ್ನಿಯ ಅಲ್ಪವಯದ ಕಾಲದಲ್ಲಿ ಮಾಡಲ್ಪಟ್ಟಿದ್ದರೆ ಮತ್ತು ಒಂದೊಮ್ಮೆ ಅದು
ಆಕೆಯಿಂದ ವಿಧ್ಯುಕ್ತವಾಗಿ ಖಂಡಿಸಲ್ಪಟ್ಟಿದ್ದರೆ ಅಲ್ಲಿ ಪತಿಯು ಒಂದು ಡಿಕ್ರಿ ಪಡೆಯಲು
ಹಕ್ಕುದಾರನಾಗುವುದಿಲ್ಲ.

17. ಖಾಜಿ ಎಂದರೆ ಯಾರು ? ಒಬ್ಬ ಖಾಜಿಯ ಪ್ರಕಾಱ್ಯಗಳು ಮತ್ತು ಶಕ್ತಿ~
ಗಳು ಯಾವವು ?

ಖಾಜಿ -

ಮೂಲತಃ ಖಾಜಿಯು ಒಬ್ಬ ನ್ಯಾಯಾಧೀಶನಾಗಿದ್ದನು ಮತ್ತು ರಾಜ್ಯದಲ್ಲಿ
ತುಂಬಾ ಮೇಲ್ಮಟ್ಟದ ಒಬ್ಬ ನ್ಯಾಯಿಕ ಅಧಿಕಾರಿಯಾಗಿದ್ದನು. ಭಾರತದಲ್ಲಿ ಬ್ರಿಟಿಷ್
ಆಡಳಿತವು ಆರಂಭವಾದ ಬಳಿಕ ಖಾಜಿಗಳು ತಮ್ಮ ನ್ಯಾಯಿಕ ಸ್ಥಾನಮಾನವನ್ನು
ಕಳೆದುಕೊಂಡರು ಮತ್ತು ಅವರು ಕೇವಲ ಧಾರ್ಮಿಕ ಗುರುಗಳಾಗಿ ಉಳಿದರು. ಆಧು~
ನಿಕ ಕಾಲದಲ್ಲಿ ಒಬ್ಬ ಖಾಜಿಯ ಮುಖ್ಯ ಕೆಲಸವು ವಿವಾಹ ನಿಶ್ಚಯದಲ್ಲಿ ಮತ್ತು
ವಿವಾಹ ವಿಚ್ಛೇದನೆಗೆ ಸಂಬಂಧಪಟ್ಟ ಸಂಗತಿಗಳಲ್ಲಿ ಮೇಲ್ವಿಚಾರಣೆ ನಡೆಸುವದು.

"ಖಾಜಿ" ಇದರ ಶಾಬ್ದಿಕ ಅರ್ಥವು "ಡಿಕ್ರಿ" "ಆದೇಶ" ಅಥವಾ "ನ್ಯಾಯಾ~
ಧೀಶ" ಆಗಿರುತ್ತದೆ. ಮುಸ್ಲಿಂ ವಿಚಾರದ ಪ್ರಕಾರ ಖಾಜಿಗಳು ಎಂದರೆ ನ್ಯಾಯದ ಆಡ~
ಳಿತದ ಪ್ರಕಾಱ್ಯವನ್ನು ವಹಿಸಿಕೊಡಲ್ಪಟ್ಟ ವ್ಯಕ್ತಿಗಳಾಗಿರುವರು. ಈಸ್ಟ್ ಇಂಡಿಯಾ
ಕಂಪೆನಿಯು ತನ್ನ ಆಳ್ವಿಕೆಯ ಆರಂಭದ ದಿನಗಳಲ್ಲಿ ಮುಸ್ಲಿಂ ಕಾನೂನಿಗೆ ಸಂಬಂಧಪಟ್ಟ
ಪ್ರಶ್ನೆಗಳನ್ನು ನಿರ್ಣಯಿಸಲು ಕಾನೂನೀ ಸಲಹೆಗಾರರ ರೀತಿಯಲ್ಲಿ ಖಾಜಿಗಳನ್ನು
ಮತ್ತು ಹಿಂದೂ ಕಾನೂನಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ನಿರ್ಣಯಿಸಲು ಪಂಡಿತ~
ರನ್ನು ನೇಮಿಸುತ್ತಿತ್ತು. ಕಾಲಕ್ರಮೇಣ ಒಬ್ಬ ಖಾಜಿಯ ಕೆಲಸವು ವಿವಾಹಕ್ಕೆ
ಸಂಬಂಧಪಟ್ಟ ಕಾಗದ ಪತ್ರಗಳ ಮೇಲೆ ಅಭಿಪ್ರಮಾಣನ ಮಾಡುವದು ಮತ್ತು
-56-
ವಿವಾಹ ಸಮಾರಂಭಗಳಲ್ಲಿ ಮೇಲ್ವಿಚಾರಣೆ ಮಾಡುವಿಕೆಯಾಗಿತ್ತು. ಇಂದು ಭಾರತ~
ದಲ್ಲಿ ಖಾಜಿ ಎಂಬುದಾಗಿ ತನ್ನನ್ನು ತಾನು ಕರೆದುಕೊಳ್ಳುವ ಅಥವಾ ಕರೆಯಲ್ಪಡುವ
ವ್ಯಕ್ತಿಯಿಂದ ಮಾಡಬೇಕಾಗಿರುವ ಯಾವುದೇ ಒಂದು ನಿರ್ದಿಷ್ಟವಾದ ಕೆಲಸವಿಲ್ಲ
ಆದರೆ ಒಂದು ಸಮಾಜವು ತನ್ನ ಸ್ವಂತ ರೂಢಿಗಳು, ಬಳಕೆಗಳು ಅಥವಾ ಮತೀಯ
ನಿಯಮಗಳಿಂದ ಒಬ್ಬ ವ್ಯಕ್ತಿಯನ್ನು ವಿವಾಹ ಸಮಾರಂಭಕ್ಕೆ ಅವಶ್ಯವಾಗಿರುವ ಕೆಲಸ~
ಗಳನ್ನು ಮಾಡಲು ಅಥವಾ ವಿವಾಹ ವಿಚ್ಛೇದನೆಯ ಮೇಲ್ವಿಚಾರಣೆ ಮಾಡಲು ಹಕ್ಕು~
ಳ್ಳವನೆಂಬುದಾಗಿ ಅವನನ್ನು ಮನ್ನಿಸಬಹುದು.

ಭಾರತದಲ್ಲಿ ಬ್ರಿಟಿಷ್ ಆಡಳಿತವು ಜಾರಿಗೆ ಬಂದ ತಕ್ಷಣ ಬಳಿಕ ಸ್ವಲ್ಪ ಕಾಲ
ಖಾಜಿಗಳು ಭಾರತೀಯ ನ್ಯಾಯಾಲಯಗಳಿಗೆ ಕಾನೂನು ಸಲಹೆಗಾರರೆಂಬುದಾಗಿ
ನೇಮಿಸಲ್ಪಟ್ಟಿದ್ದರು. ಈಗ ಒಬ್ಬ ಖಾಜಿಯ ಸ್ಥಾನವು ದಿವಾನೀ ನ್ಯಾಯಾಲಯ~
ಗಳಿಂದ ತೆಗೆದುಕೊಳ್ಳಲ್ಪಟ್ಟಿದೆ. ಈಗ ಒಬ್ಬ ಖಾಜಿ ಎಂದರೆ ಒಬ್ಬ ಧಾರ್ಮಿಕ
#ಅಧಿಕಾರಿ~
ಯಾಗಿರುವನಲ್ಲದೆ ಅವನೊಬ್ಬ ನ್ಯಾಯಾಧೀಶನಾಗಿರುವುದಿಲ್ಲ. ಖಾಜಿಯ ಪದವು
ಅನುವಂಶಿಕವಲ್ಲ. ಹೀಗೆ, ಇಂದು ಖಾಜಿಯು ರಾಜ್ಯದಿಂದ ನೇಮಿಸಲ್ಪಟ್ಟ ಒಬ್ಬ
ನ್ಯಾಯಾಧೀಶನಲ್ಲ. ಅವನ ನ್ಯಾಯಿಕ ಪ್ರಕಾಱ್ಯಗಳು ದಿವಾನೀ ನ್ಯಾಯಾಲಯಗಳಿಂದ
ತೆಗೆದುಕೊಳ್ಳಲ್ಪಟ್ಟಿವೆ. ವೈವಾಹಿಕ ಸಮಾರಂಭಗಳ ಸಂಬಂಧದಲ್ಲೂ ಸಹ ಒಬ್ಬ
ಮುಲ್ಲಾ ಅಥವ ಒಬ್ಬ ಖಾಜಿಯು ಮೇಲ್ವಿಚಾರಣೆ ನಡೆಸುವ ಪರಂಪರೆ ಇದೆಯಾದರೂ
ಸಹ ಯಾವುದೇ ಒಂದು ಸಮಾರಂಭದಲ್ಲಿ ಒಬ್ಬ ಮುಲ್ಲಾ ಅಥವಾ ಖಾಜಿಯು
ಇರುವುದು ಅನಿವಾಱ್ಯವಲ್ಲ ಮತ್ತು ಅವನು ಇಲ್ಲದೇನೂ ಸಹ ಒಂದು ವಿಧ್ಯುಕ್ತವಾದ
ವಿವಾಹವು ನಡೆಯಬಹುದು.
-57-

ಅಧ್ಯಾಯ 4
ಕನ್ಯಾಶುಲ್ಕ

ಪ್ರ. 18. `ಕನ್ಯಾಶುಲ್ಕ' ಇದನ್ನು ಪರಿಭಾಷಿಸಿ. ಒಂದು ಕನ್ಯಾಶುಲ್ಕದ
ಸ್ವರೂಪವನ್ನು ಚರ್ಚಿಸಿರಿ.

ಉ. ಕನ್ಯಾಶುಲ್ಕ

ಕನ್ಯಾಶುಲ್ಕದ ಬಗ್ಗೆ ಇಸ್ಲಾಮಿನ ಪರಿಕಲ್ಪನೆಯು ಅನೇಕ ಕಾನೂನು ತಜ್ಞರಿಂದ
ಸರಿಯಾಗಿ ತಿಳಿದುಕೊಳ್ಳಲ್ಪಟ್ಟಿಲ್ಲ ಮತ್ತು ಇದಕ್ಕೆ ತಪ್ಪಾಗಿ ಅರ್ಥ ಮಾಡಿರುವ
ನಿದರ್ಶನಗಳೂ ಇವೆ. ಒಂದು ಮುಸ್ಲಿಂ ವಿವಾಹದ ಕರಾರೀ ಅಂಶದ ಕಡೆ ವಾಲುತ್ತಿ~
ರುವ ವ್ಯಕ್ತಿಗಳು ಇದನ್ನು ಪ್ರತಿಫಲಕ್ಕೆ ಸಮಾನವೆಂಬುದಾಗಿ ಎಣಿಸುವರು. ಇನ್ನು
ಕೆಲವರು, ಹಾಗೆಂದರೆ ಭಾರತದಲ್ಲಿ ಬಳಕೆಯಲ್ಲಿದ್ದಿರುವ ವರದಕ್ಷಿಣೆಯೊಂದಿಗೆ ಪರಿಚಿತ~
ರಾಗಿರುವ ವ್ಯಕ್ತಿಗಳು ಇದನ್ನು ಒಂದು ರೀತಿಯ ಕನ್ಯಾಶುಲ್ಕವೆಂಬುದಾಗಿ ಕರೆಯು~
ವರು. ಮೆಹರ್ ಇದು ಪ್ರತಿಫಲನೂ ಅಲ್ಲ ಮತ್ತು ವರದಕ್ಷಿಣೆಯೂ ಅಲ್ಲ; ಇದು
ಇಸ್ಲಾಮಿಕ್ ಕಾನೂನಿನಲ್ಲಿ ಒಂದು ಅಪೂರ್ವವಾದ ಸ್ಥಾನ ಪಡೆದಿದೆ.

ಹೀಗೆ ಮೆಹರ್ ಇದು ಒಂದು ಹಣದ ಮೊಬಲಗು ಅಥವಾ ಇತರ
ಸ್ವತ್ತು ಆಗಿದ್ದು ಪತ್ನಿಯು ಇದನ್ನು ನಿಜವಾದ ಪ್ರತಿಫಲವಾಗಿ ಪತಿಯಿಂದ ಪಡೆಯಲು
ಹಕ್ಕುದಾರಳಾಗಿರುವಳು. ಮಹಮ್ಮದೀಯ ಕಾನೂನಿನ ಪ್ರಕಾರ ವಿವಾಹವು ಒಂದು
ದಿವಾನೀ ಕರಾರು ಮತ್ತು ಮೆಹರ್ ಇದು ಈ ಕರಾರಿನ ಒಂದು ಅವಶ್ಯಕ ಪರಿಣಾಮ~
ವಾಗಿರುತ್ತದೆ. ಹಾಗೆಂದರೆ, ಆ ದಾಂಪತ್ಯವನ್ನು ಪೂರ್ತಿಗೊಳಿಸುವಿಕೆಯಿಂದ ಆಕೆಯು
ತನ್ನ ಪತಿಯ ಪತ್ನಿಯಾಗಲು ಒಪ್ಪಿಕೊಳ್ಳುವುದಕ್ಕಾಗಿ ಪ್ರತಿಫಲದ ಒಂದು ಭಾಗ~
ವಾಗಿರುತ್ತದೆ.

ಆದರೂ ಸಹ, "ಪ್ರತಿಫಲ" ಎಂಬ ಶಬ್ದವು ಭಾರತೀಯ ಕರಾರು ಅಧಿನಿಯಮ~
ದಲ್ಲಿ ಯಾವ ಅರ್ಥದಲ್ಲಿ ಉಪಯೋಗಿಸಲಾಗಿದೆಯೋ ಅದೇ ಅರ್ಥದಲ್ಲಿ ಇಲ್ಲಿ ಉಪ~
ಯೋಗಿಸಲ್ಪಟ್ಟಿಲ್ಲ. ಇದು ವಧುವಿನ ಮಾರಾಟದ ಬೆಲೆಯಲ್ಲ ಮತ್ತು ಒಂದು ಮುಸ್ಲಿಂ
ವಿವಾಹದ ಕರಾರು ವ್ಯಾಪಾರವಲ್ಲ. ನಿಜವಾಗಿ, ಮಹಮ್ಮದೀಯ ಕಾನೂನಿನ ಅಧೀನ
ಕನ್ಯಾ ಶುಲ್ಕವು ಪತ್ನಿಯ ಪ್ರತಿ ಗೌರವದ ಒಂದು ಸಂಕೇತದ ರೀತಿಯಲ್ಲಿ ಪತಿಯ
ಮೇಲೆ ಹೇರಲಾದ ಒಂದು ಬಾಧ್ಯತೆಯಾಗಿರುತ್ತದೆ.
-58-

ವರದಕ್ಷಿಣೆಯ ಮೊಬಲಗು ವಿವಾಹಕ್ಕಿಂತ ಮೊದಲು, ವಿವಾಹದ ಕಾಲದಲ್ಲಿ
ಅಥವಾ ವಿವಾಹದ ಬಳಿಕ ನಿಗದಿಗೊಳಿಸಲ್ಪಡಬಹುದು. ಪತ್ನಿಯು ತನ್ನ ಕನ್ಯಾ~
ಶುಲ್ಕವನ್ನು ಪರಿತ್ಯಜನೆ ಮಾಡಲು ಸಕ್ಷಮಳಾಗಿರುವಳು. ಆದರೆ ಆ ಪರಿತ್ಯಜನೆಯ
ಕಾಲದಲ್ಲಿ ಆಕೆಯು ತಾರುಣ್ಯಾವಸ್ಥೆಗೆ ಮುಟ್ಟಿರಬೇಕು.

ಕನ್ಯಾಶುಲ್ಕದ ಪ್ರಕಾರಗಳು :

ಕನ್ಯಾಶುಲ್ಕದಲ್ಲಿ ನಾಲ್ಕು ರೀತಿಗಳಿವೆ. ಅವು (ಅ) "ನಿರ್ದಿಷ್ಟವಾದ" ಅಥವಾ
(ಆ) "ಸರಿಯಾದ" ಹಾಗೆಂದರೆ, ಅದರ ಮೊಬಲಗನ್ನು ನಿರ್ಣಯಿಸುವ ರೀತಿಗೆ
ಅನುಗುಣವಾಗಿ. ಅದು (ಇ) "ತತ್್ಕ್ಷಣಿ" ಅಥವಾ (ಈ) "ವಿಳಂಬಿತ" ಆಗಿರ~
ಬಹುದು. "ತತ್್ಕ್ಷಣಿಕ" ಮತ್ತು "ವಿಳಂಬಿತ" ಕನ್ಯಾಶುಲ್ಕಗಳ ಸಂದಾಯಮಾಡುವ
ಸಮಯದ ಮೇಲೆ ಅವಲಂಬಿಸಿರುತ್ತದೆ.

1. ನಿರ್ದಿಷ್ಟಪಡಿಸಲಾದ ಕನ್ಯಾ ಶುಲ್ಕ

ನಿರ್ದಿಷ್ಟ ಕನ್ಯಾಶುಲ್ಕವು ಆ ವಿವಾಹ ಪಕ್ಷಗಳೊಳಗೆ ವಿವಾಹಕ್ಕಿಂತ ಮೊದಲು
ಅಥವಾ ವಿವಾಹ ಕಾಲದಲ್ಲಿ ಅಥವಾ ವಿವಾಹದ ಬಳಿಕ ನಿಗದಿಪಡಿಸಲಾಗುತ್ತದೆ.

ನಿರ್ದಿಷ್ಟ ಕನ್ಯಾ ಶುಲ್ಕವು 10 "ಡಿರ್ಹಾಮ್ಸ್" ಇದರ ಮೌಲ್ಯ~
ಕ್ಕಿಂತ ಕಡಿಮೆಯಾಗಿರಬಾರದು. 10 ಡಿರ್ಹಾಮ್ಸ್್ಗಳ ಹಣದ ಮೌಲ್ಯವು 3
ಅಥವಾ 4 ರೂಪಾಯಿಗಳಷ್ಟು ಆಗುತ್ತದೆ. ಇದು ಯಾವುದೇ ಒಂದು ಕನ್ಯಾಶುಲ್ಕದ
ಕನಿಷ್ಠ ಮೊತ್ತ ಆಗಿರುವ ಕಾರಣ ನಿರ್ದಿಷ್ಟಪಡಿಸಲಾದ ಕನ್ಯಾಶುಲ್ಕವು ಕಡಿಮೆಯಾಗಿ~
ದ್ದರೂ ಸಹ ಪತ್ನಿಯು ಈ ಕನಿಷ್ಠ ಮೊಬಲ಼ಗಿಗೆ ಹಕ್ಕುದಾರಳಾಗುವಳು. (ಶಿಯಾ
ಕಾನೂನಿನ ಅಧೀನ ಕನ್ಯಾಶುಲ್ಕದ ಬಗ್ಗೆ ಯಾವತ್ತೂ ಕನಿಷ್ಠ ಮೊಬಲಗು ನಿಗದಿ~
ಗೊಳಿಸಲ್ಪಟ್ಟಿಲ್ಲ.) ಆದರೆ ಯಾವತ್ತೂ ಮೇಲ್ಮಟ್ಟದ ಮಿತಿಯಿಲ್ಲ ಮತ್ತು ಅದು
ಅತಿರೇಕವಾಗಿದೆಯೆಂಬ ಕಾರಣಕ್ಕಾಗಿ ಒಂದು ಕನ್ಯಾಶುಲ್ಕವು ಅಸಿಂಧುವಾಗುವುದಿಲ್ಲ.
ಕೆಲವೊಮ್ಮೆ ಪತಿಯ ಸಾಮರ್ಥ್ಯವನ್ನು ಮೀರುವಂಥ ಒಂದು ಕನ್ಯಾ ಶುಲ್ಕದ ಅಂಕೆ~
ಯನ್ನು ನಿಗದಿಗೊಳಿಸುವ ಕ್ರಮವೂ ಇದೆ. ಒಂದೊಮ್ಮೆ ಇಂಥ ಒಂದು ಪ್ರಕರಣವು
ನ್ಯಾಯಲಯಕ್ಕೆ ಹೋದರೆ ಅಲ್ಲಿ ನ್ಯಾಯಾಲಯವು ಆ ನಿರ್ದಿಷ್ಟಪಡಿಸಲಾದ ಕನ್ಯಾ
ಶುಲ್ಕದ ಇಡೀ ಮೊಬಲಗನ್ನು ಡಿಕ್ರಿತಗೊಳಿಸತಕ್ಕದ್ದು ಮತ್ತು ಅದನ್ನು ನಿಗದಿಗೊಳಿಸಿ~
ದಾಗ ಪತಿಗೆ ಅದನ್ನು ಸಂದಾಯ ಮಾಡುವ ಸಾಮರ್ಥ್ಯವಿದ್ದಿರಲಿಲ್ಲ ಅಥವಾ ಅದನ್ನು
ಸಂದಾಯಮಾಡಿದರೆ ಪತಿಯ ವಾರಸುದಾರರಿಗೆ ಏನೂ ಉಳಿಯುವುದಿಲ್ಲ ಎಂಬುದನ್ನು
ಇಲ್ಲಿ ಗಮನಿಸಲಾಗುವುದಿಲ್ಲ.

ಆದರೆ ಒಂದೊಮ್ಮೆ ಈ ವಿಷಯದ ಬಗ್ಗೆ ಯಾವತ್ತೂ ನಿರ್ದಿಷ್ಟವಾದ ಶಾಸನವು
ಮಾಡಲ್ಪಟ್ಟರೆ ಅಲ್ಲಿ ನ್ಯಾಯಾಲಯವು ಆ ನಿರ್ದಿಷ್ಟವಾದ ಕನ್ಯಾ ಶುಲ್ಕದ ಇಡೀ
-59-
ಮೊಬಲಗನ್ನು ಡಿಕ್ರಿತಗೊಳಿಸಬೇಕಾಗಿಲ್ಲ. ಹೀಗೆ, "ಅವಧ್ ಕಾನೂನುಗಳ ಅಧಿ~
ನಿಯಮ, 1876" ಇದು ಕನ್ಯಾಶುಲ್ಕದ ಬಗ್ಗೆ ಒಂದು ಉಪಬಂಧದಿಂದ ಕೂಡಿತ್ತು.
ಈ ಉಪಬಂಧದ ಪ್ರಕಾರ ನ್ಯಾಯಾಲಯವು ಆ ಒಪ್ಪಂದದಲ್ಲಿ ನಿಗದಿಪಡಿಸಲಾದ ಕನ್ಯಾ~
ಶುಲ್ಕವನ್ನೇ ಐತೀರ್ಪು ಮಾಡಬೇಕಾಗಿಲ್ಲ. ಪತಿಯ ಸಾಮರ್ಥ್ಯ ಮತ್ತು ಪತ್ನಿಯ
ಸ್ಥಾನಮಾನ ಇವುಗಳಿಗೆ ಗಮನಕೊಟ್ಟು ಸೂಕ್ತವಾದ ಮೊಬಲಗು ಕೂಡಿಸಿದರೆ ಅದು
ಸಾಲುತ್ತದೆ.

2. ಸರಿಯಾದ ಕನ್ಯಾಶುಲ್ಕ

ಒಂದೊಮ್ಮೆ ವಿವಾಹದ ಕಾಲದಲ್ಲಿ ಕನ್ಯಾಶುಲ್ಕದ ಬಗ್ಗೆ ಏನೂ ಹೇಳಲ್ಪಟ್ಟಿರ~
ದಿದ್ದರೆ, ಪತ್ನಿಯು ಯಾವತ್ತೂ ಕನ್ಯಾಶುಲ್ಕಕ್ಕಾಗಿ ಹಕ್ಕುದಾವೆ ಮಾಡಬಹುದು.
ಸರಿಯಾದ ಕನ್ಯಾಶುಲ್ಕವನ್ನು ನಿಗದಿಗೊಳಿಸುವಲ್ಲಿ, ಪತ್ನಿಯ ತಂದೆಯ ಕುಟುಂಬದಲ್ಲಿ
ಇತರ ಹೆಣ್ಣು ಸದಸ್ಯಯರಿಗೆ ಯಾವ ಶುಲ್ಕವು ಕೊಡಲ್ಪಟ್ಟಿತ್ತೊ ಆ ಕನ್ಯಾಶುಲ್ಕದ
ಮೊಬಲಗಿನಿಂದ ನ್ಯಾಯಲಯವು ಮಾರ್ಗದರ್ಶನ ಪಡೆಯತಕ್ಕದ್ದು.

3. ತತ್್ಕ್ಷಣಿಕ ಕನ್ಯಾಶುಲ್ಕ

ಕನ್ಯಾಶುಲ್ಕದ ಮೊಬಲಗು ಸಾಮಾನ್ಯವಾಗಿ ಎರಡು ಭಾಗಗಳಲ್ಲಿ ವಿಭಜನೆ
ಮಾಡಲಾಗುತ್ತದೆ - ತತ್್ಕ್ಷಣಿಕ ಮತ್ತು ವಿಳಂಬಿತ. ತತ್್ಕ್ಷಣಿಕ ಕನ್ಯಾಶುಲ್ಕವು
ಕೇಳಲಾದಾಗ ಸಂದಾಯ ಪಾತ್ರವಾಗಿರುತ್ತದೆ ಮತ್ತು ವಿಳಂಬಿತ ಕನ್ಯಾಶುಲ್ಕವು
ಮರಣದಿಂದ ಅಥವಾ ವಿವಾಹ ವಿಚ್ಛೇದನೆಯಿಂದ ವಿವಾಹವು ವಿಘಟನೆಗೊಂಡಾಗ
ಸಂದಾಯ ಪಾತ್ರವಾಗಿರುತ್ತದೆ.

ತತ್್ಕ್ಷಣಿಕ ಕನ್ಯಾಶುಲ್ಕವು ವಿವಾಹ ಕಾಲದಲ್ಲಿ ಸಂದಾಯ ಪಾತ್ರವಾಗಿರುತ್ತದೆ
ಮತ್ತು ವಿಳಂಬದ ಬಗ್ಗೆ ಷರತ್ತು ಹಾಕಲಾದ ಹೊರತು ಅದರ ಬಗ್ಗೆ ಒಪ್ಪಂದವಿದ್ದಿರದ
ಹೊರತು ಅದು ಕೇಳಲಾದಾಗ ಮಾಡಲಾದಾಗ ಸಂದಾಯ ಮಾಡಲ್ಪಡತಕ್ಕದ್ದು.
ತತ್್ಕ್ಷಣಿಕ ಕನ್ಯಾಶುಲ್ಕವು ಆ ವಿವಾಹವು ಪೂರ್ತಿಗೊಳ್ಳುವ ಕಾಲದಲ್ಲಿ ಅಥವಾ
ಅದರ ಬಳಿಕ ಯಾವುದೇ ಕಾಲದಲ್ಲಿ ವಸೂಲಿ ಮಾಡಲ್ಪಡಬಹುದು. ಇದರ ಸಂದಾಯ~
ಕ್ಕಾಗಿ ಆ ಪತಿ ಪತ್ನಿಯರ ಒಂದಾಗುವಿಕೆಯು ಅವಶ್ಯಕವಲ್ಲ. ತತ್್ಕ್ಷಣಿಕ ಕನ಼್ಯಾ~
ಶುಲ್ಕವನ್ನು ಸಂದಾಯ ಮಾಡಲಾದ ಬಳಿಕ ಮಾತ್ರ ಪತಿಯು, ಆ ವಿವಾಹವು ಆಗಲೇ
ಪೂರ್ತಿಗೊಳಿಸಲ್ಪಟ್ಟ ಹೊರತು, ತನ್ನ ದಾಂಪತ್ಯದ ಹಕ್ಕುಗಳನ್ನು ಜಾರಿಮಾಡಲು
ಹಕ್ಕುದಾರನಾಗುವನು. ದಾಂಪತ್ಯದ ಹಕ್ಕುಗಳ ಮರುಪ್ರಾಪ್ತಿಯ ಹಕ್ಕು ಆ
ಕನ್ಯಾ ಶುಲ್ಕವು ಸಂದಾಯ ಮಾಡಲಾದ ಬಳಿಕ ಮಾತ್ರ ಉಂಟಾಗುತ್ತದೆ.

4. ವಿಳಂಬಿತ ಕನ್ಯಾಶುಲ್ಕ

Page 60

ವಿಳಂಬಿತ ಕನ್ಯಾಶುಲ್ಕವು (ಅ) ಆ ಪಕ್ಷಗಳಲ್ಲಿ ಯಾವುದಾದರೊಂದು ಪಕ್ಷದ
ಮರಣದಿಂದ, ಅಥವಾ (ಅ) ವಿವಾಹ ವಿಚ್ಛೇದನೆಯಿಂದ ಆ ವಿವಾಹವು ವಿಘಟನೆ~
ಗೊಂಡಾಗ ಸಂದಾಯ ಪಾತ್ರವಾಗುತ್ತದೆ. ಒಂದೊಮ್ಮೆ ಆ ವಿವಾಹದ ಕಾಲದಲ್ಲಿ
ಒಪ್ಪಂದದಿಂದ ಅಥವಾ ರೂಢಿಯಿಂದ ತತ್್ಕ್ಷಣಿಕ ಮತ್ತು ವಿಳಂಬಿತ ಕನ್ಯಾಶುಲ್ಕದ
ಯಾವತ್ತೂ ನಿರ್ಧಿಷ್ಟವಾದ ಅನುಪಾತವು ನಿಗದಿಗೊಳಿಸಲ್ಪಟ್ಟಿರದಿದ್ದರೆ-

(ಅ) ಆ ಇಡೀ ಮೊತ್ತವು ತತ್್ಕ್ಷಣಿಕ ಮತ್ತು ಇನ್ನೊಂದು ಭಾಗವು
ವಿಳಂಬಿತ ಕನ್ಯಾಶುಲ್ಕವೆಂಬುದಾಗಿ ಸುನ್ನಿ ಕಾನೂನಿನಿಂದ ಎಣಿಸಲಾಗುತ್ತದೆ; ಆ
ಅನುಪಾತವು ಆ ಪಕ್ಷಗಳ ಸ್ಥಾನಮಾನದಿಂದ ಮತ್ತು ಇತ್ಯರ್ಥ ಮಾಡಲಾದ ಕನ್ಯಾ~
ಶುಲ್ಕದ ಮೊಬಲಗಿನಿಂದ ನಿರ್ಣಯಿಸಲಾಗುತ್ತದೆ. ಆದರೆ ನ್ಯಾಯಾಲಯಕ್ಕೆ ಇಡೀ
ಮೊಬಲಗನ್ನು ತತ್್ಕ್ಷಣಿಕ ಮೊಬಲಗು ಎಂಬುದಾಗಿ ಐತೀರ್ಪು ಮಾಡುವ ಅಧಿಕಾರ~
ವಿರುತ್ತದೆ.

ಆ ವಿವಾಹವು ವಿಘಟನೆಗೊಂಡಾಗ -

(ಎ) ಒಂದೊಮ್ಮೆ ಆ ವಿವಾಹವು ಪೂರ್ತಿಗೊಳಿಸಲ್ಪಟ್ಟಿದ್ದರೆ -

ಪತ್ನಿಯು ತತ್್ಕ್ಷಣಿಕ ಮತ್ತು ವಿಳಂಬಿಕ ಈ ಎರಡು ಸಂದಾಯ ಮಾಡಲ್ಪಟ್ಟಿ~
ಲ್ಲದ ಇಡೀ ಕನ್ಯಾಶುಲ್ಕದ ತತ್್ಕ್ಷಣಿತ ಸಂದಾಯಕ್ಕಾಗಿ ಹಕ್ಕುದಾರಳಾಗುವಳು.

(ಬಿ) ಒಂದೊಮ್ಮೆ ಆ ವಿವಾಹವು ಪೂರ್ತಿಗೊಳಿಸಲ್ಪಟ್ಟಿರದಿದ್ದರೆ -

ಆಕೆಯು ಆ ನಿರ್ದಿಷ್ಟಪಡಿಸಲಾದ ಕನ್ಯಾಶುಲ್ಕದಲ್ಲಿ ಅರ್ಧಕ್ಕೆ ಮಾತ್ರ ಹಕ್ಕು~
ದಾರಳಾಗುವಳು.

ವಿಳಂಬಿತ ಕನ್ಯಾಶುಲ್ಕದಲ್ಲಿ ಪತ್ನಿಯ ಹಿತಸಂಬಂಧ-

ವಿಳಂಬಿತ ಕನ್ಯಾಶುಲ್ಕದಲ್ಲಿ ಪತ್ನಿಯ ಹಿತಸಂಬಂಧವು ಒಂದು ನಿಹಿತ ಹಿತ
ಸಂಬಂಧವಾಗಿದೆಯಲ್ಲದೆ ಅದೊಂದು ಘಟನಾವಲಂಬಿ ಹಿತಸಂಬಂಧವಲ್ಲ. ಅದು
ಯಾವುದೇ ಒಂದು ಘಟನೆಯ ಘಟಿಸಲ್ಪಡುವಿಕೆಯಿಂದ ಬದಲಾಯಿಸಲ್ಪಡಲು ಬಾಧ್ಯ~
ವಲ್ಲ. ಆಕೆಯ ಮರಣವೂ ಸಹ ಇದರ ಮೇಲೆ ಪರಿಣಾಮ ಬೀರುವುದಿಲ್ಲ: ಏಕೆಂದರೆ
ಆಕೆಯ ವಾರಸುದಾರರು ಆ ಹಣಕ್ಕಾಗಿ ಹಕ್ಕುದಾವೆ ಮಾಡಬಹುದು.

ಕನ್ಯಾಶುಲ್ಕವು ಸಂದಾಯ ಮಾಡಲ್ಪಡದಿದ್ದರೆ ಪತ್ನಿಯ ಹಕ್ಕುಗಳು ಮತ್ತು
ಪರಿಹಾರೋಪಯಗಳು ;

ತತ್್ಕ್ಷಣಿಕ ಕನ್ಯಾಶುಲ್ಕ - ತತ್್ಕ್ಷಣಿಕ ಕನ್ಯಾಶುಲ್ಕವು ಸಂದಾಯ ಮಾಡಲ್ಪ~
ಡದೆ ಉಳಿದಿರುವಷ್ಟು ಕಾಲ, ಪತ್ನಿಯು (ಅ) ಪತಿಯೊಂದಿಗೆ ವಾಸಿಸಲು ನಿರಾಕರಿಸ~
ಬಹುದು, ಮತ್ತು (ಆ) ಅವನೊಂದಿಗೆ ಕೂಡುವುದಕ್ಕಾಗಿ ಅನುಮತಿಯನ್ನು ನಿರಾಕರಿಸಬಹುದು.
-61-
ತತ್್ಕ್ಷಣಿಕ ಕನ್ಯಾಶುಲ್ಕ ಸಂದಾಯ ಮಾಡದಿರುವಿಕೆಯು ವಿವಾಹವು
ಪೂರ್ತಿಗೊಳ್ಳುವುದಕ್ಕಿಂತ ಮೊದಲು ವೈವಾಹಿಕ ಹಕ್ಕುಗಳ ಮರುಪ್ರಾಪ್ತಿಗಾಗಿ ಒಂದು
ದಾವೆಯಲ್ಲಿ ಒಂದು ಪೂರ್ಣ ಪ್ರತಿರಕ್ಷೆಯಾಗಿರುತ್ತದೆ; ಒಂದೊಮ್ಮೆ ಆ ದಾವೆಯು ಆ
ವಿವಾಹವು ಪೂರ್ತಿಗೊಂಡ ಬಳಿಕ ಹೂಡಲ್ಪಟ್ಟರೆ, ಆ ಡಿಕ್ರಿಯು ತತ್್ಕ್ಷಣಿಕ ಕನ್ಯಾ~
ಶುಲ್ಕದ ಸಂದಾಯದ ಷರತ್ತಿನ ಮೇಲೆ ವೈವಾಹಿಕ ಹಕ್ಕುಗಳ ಮರು ಪ್ರಾಪ್ತಿಗಾಗಿ
ಡಿಕ್ರಿಯು ಕೊಡಲ್ಪಡುತ್ತದೆ.

ಸಂದಾಯ ಮಾಡಲ್ಪಟ್ಟಿಲ್ಲದ ತತ್್ಕ್ಷಣಿಕ ಕನ್ಯಾಶುಲ್ಕವನ್ನು ವಸೂಲಿ ಮಾಡಲು
ಇನ್ನೊಂದು ಪರಿಹಾರೋಪಾಯವಿದೆ. ಆ ಪತ್ನಿ, (ಆಕೆಯ ಮರಣದ ಬಳಿಕ ಆಕೆಯ
ವಾರಸುದಾರರು) (ಅ) ಅದು ಕೇಳಲಾದರೆ ಮತ್ತು ನಿರಾಕರಿಸಲಾದರೆ; ಅಥವಾ (ಆ)
ಮರಣ ಅಥವಾ ವಿವಾಹ ವಿಚ್ಛೇದನೆಯಿಂದ ಆ ವಿವಾಹವು ವಿಘಟನೆಗೊಂಡರೆ ಆ
ದಿನಾಂಕದಿಂದ ಮೂರು ವರ್ಷಗಳೊಳಗೆ ಅಂಥ ಕನ್ಯಾಶುಲ್ಕಕ್ಕಾಗಿ ದಾವೆ ಹೂಡ~
ಬಹುದು.

ವಿಳಂಬಿತ ಕನ್ಯಾಶುಲ್ಕ :

ವಿಳಂಬಿತ ಕನ್ಯಾಶುಲ್ಕವು ಮರಣದಿಂದ ಅಥವಾ ವಿವಾಹ ವಿಚ್ಛೇದನೆಯಿಂದ
ವಿವಾಹವು ವಿಘಟನೆಗೊಳ್ಳುವಿಕೆಯಿಂದ ಮಾತ್ರ ಸಂದಾಯ ಪಾತ್ರವಾಗುತ್ತದೆ.
ಒಂದೊಮ್ಮೆ ಅದು ಆ ರೀತಿಯಲ್ಲಿ ಸಂದಾಯ ಮಾಡಲ್ಪಡದಿದ್ದರೆ, ಪತ್ನಿಯು ವಿವಾಹವು
ವಿಘಟನೆಗೊಂಡು ಮೂರು ವರ್ಷಗಳೊಳಗೆ ಅದಕ್ಕಾಗಿ ದಾವೆ ಹೂಡಬಹುದು.

19. ಕನ್ಯಾಶುಲ್ಕದ ಸಂದಾಯ ಮಾಡಲ್ಪಟ್ಟಿಲ್ಲದ ಭಾಗಕ್ಕಾಗಿ ಒಬ್ಬ ಪತ್ನಿಯ
ಹಕ್ಕುದಾವೆಯು ಹೇಗೆ ಜಾರಿ ಮಾಡಲ್ಪಡುತ್ತದೆ ?

ಕನ್ಯಾಶುಲ್ಕ - ಒಂದು ಋಣ :

ಕನ್ಯಾಶುಲ್ಕವು ಒಂದು ಭದ್ರಗೊಳಿಸಲ್ಪಟ್ಟಿಲ್ಲದ ಋಣವಾಗಿದ್ದರೂ ಸಹ
ಅದೊಂದು ಋಣವಾಗಿರುತ್ತದೆ, ಮತ್ತು ಆಕೆಯ ಪತಿಯ ಮರಣವಾದಾಗ ಉತ್ತರ
ದಾನಗ಼ಳು ಸಂದಾಯ ಮಾಡಲ್ಪಡುವುದಕ್ಕಿಂತ ಮೊದಲು ಹಾಗೂ ಆ ವಾರಸು ಹಂಚ~
ಲ್ಪಡುವುದಕ್ಕಿಂತ ಮೊದಲು ಅವನ ಆಸ್ತಿಯಿಂದ ಪಡೆಯಲು ಹಕ್ಕುದಾರಳಾಗುವಳು.
ಆದರೂ ಸಹ ಆಕೆಯ ಹಕ್ಕು ಇತರ ಯಾವನೇ ಒಬ್ಬ ಭದ್ರತೆಯಿಲ್ಲದ ಋಣದಾತನ
ಹಕ್ಕಿಗಿಂತ ಹೆಚ್ಚಿನದಲ್ಲ. ಆದರೆ ಒಂದೊಮ್ಮೆ ಆಕೆಯು ತನ್ನ ಮೃತ ಪತಿಯ ಸ್ವತ್ತನ್ನು
ಕಾನೂನು ಬದ್ಧವಾಗಿ ಮತ್ತು ಬಲಾತ್ಕಾರ ಅಥವಾ ಮೋಸವಿಲ್ಲದೆ ಕಬ್ಜೆ ಪಡೆದರೆ ತನ್ನ
ಋಣವು ಸಂದಾಯ ಮಾಡಲ್ಪಡುವವರೆಗೆ ಅದನ್ನು ಇಟ್ಟುಕೊಂಡಿರಲು ಹಕ್ಕುದಾರಳಾ~
ಗುವಳು.
-62-

ಒಂದು ಕನ್ಯಾಶುಲ್ಕದ ಋಣವು ಕೇವಲ ದಾವೆ ಹೂಡುವ ಒಂದು ಹಕ್ಕಲ್ಲ; ಅದು
ಒಂದು ವಾದಯೋಗ್ಯ ಹಕ್ಕುದಾವೆಯಾಗಿರುತ್ತದೆ. ಅದು ನಾಮಾಂತರಣೀಯವಾಗಿ~
ರುತ್ತದೆ, ಮತ್ತು ಅದು ಯಥಾ ಪ್ರಕಾರವಾಗಿ ಇತರ ಯಾವುದೇ ಋಣದಂತೆ ಆ ವಿಧ~
ವೆಯ ಋಣದಾತರಿಂದ ನಿಷ್ಪಾದನೆಯಲ್ಲಿ ತೆಗೆದುಕೊಳ್ಳಲ್ಪಡಬಹುದು.

ವಾರಸುದಾರರ ಬಾಧ್ಯತೆ :

ವಾರಸುದಾರರು ಕನ್ಯಾಶುಲ್ಕ ಋಣದ ಸಂದಾಯಕ್ಕಾಗಿ ವೈಯಕ್ತಿಕವಾಗಿ
ಬಾಧ್ಯರಲ್ಲ. ಆ ವಾರಸುದಾರರಲ್ಲಿ ಪ್ರತಿಯೊಬ್ಬನು ಆ ಆಸ್ತಿಯಲ್ಲಿ ತನ್ನ ಪಾಲಿನ ಅನು~
ಪಾತದಲ್ಲಿ ಆ ಋಣದ ಒಂದು ಪಾಲಿನ ಮಟ್ಟಿಗೆ ಮಾತ್ರ ಬಾಧ್ಯನಾಗಿರುವನು.

ಕನ್ಯಾಶುಲ್ಕವನ್ನು ಮಾಫಿ ಮಾಡುವಿಕೆ :

ಒಬ್ಬ ವಿಧವೆಯು ತನ್ನ ಪತಿಯ ಮರಣೋತ್ತರ ಕ್ರಿಯೆಯ ಕಾಲದಲ್ಲಿ ಒಂದು
ಕನ್ಯಾಶುಲ್ಕವನ್ನು ಮಾಫಿ ಮಾಡಬಾರದು: ಆದರೆ, ಅಂಥ ಒಂದು ಮಾಫಿ ಮಾಡುವಿ~
ಕೆಯು ಆ ವಿಧವೆಯ ಒಂದು ಸ್ವೇಚ್ಛೆಯ ಕೃತ್ಯವಾಗಿರಬೇಕು. ತನ್ನ ಈ ಕೃತ್ಯದ ಪರಿ~
ಣಾಮವನ್ನು ತಿಳಿದಿದ್ದು ಆಕೆಯು ಅದನ್ನು ಮಾಫಿ ಮಾಡಿರುವಳು ಎಂಬುದಾಗಿ ಆ
ನ್ಯಾಯಾಲಯಕ್ಕೆ ಸಮಾಧಾನವಾಗತಕ್ಕದ್ದು. ಒಬ್ಬ ಪತ್ನಿಯು ಮರಣದ ಕಾರಣ~
ದಿಂದಾಗಿ ತುಂಬಾ ದುಃಖದಲ್ಲಿದ್ದಾಗ ಆಕೆಯಿಂದ ಮಾಡಲಾದ ಒಂದು ಕನ್ಯಾಶುಲ್ಕ
ಋಣದ ಪರಿತ್ಯಜನೆಯು ಆಕೆಯನ್ನು ಬಾಧ್ಯಗೊಳಿಸುವುದಿಲ್ಲ.

2. ಕಬ್ಜೆಯನ್ನು ಇಟ್ಟುಕೊಂಡಿರುವ ಹಕ್ಕು :

ಒಂದೊಮ್ಮೆ ಆ ವಿಧವೆಯು ತನ್ನ ಪತಿಯ ಸ್ವತ್ತಿನ ನೈಜ ಕಬ್ಜೆ ಹೊಂದಿದ್ದರೆ
ಆಕೆಯು ತನ್ನ ಕನ್ಯಾಶುಲ್ಕವು ಸಂದಾಯ ಮಾಡಲ್ಪಡುವವರೆಗೆ ಅದನ್ನು ಇಟ್ಟುಕೊಂಡಿ~
ರಲು ಹಕ್ಕುದಾರಳಾಗುವಳು.

ಕನ್ಯಾಶುಲ್ಕದ ಬದಲಾಗಿ ತನ್ನ ಪತಿಯ ಆಸ್ತಿಯ ಕಬ್ಜೆಯನ್ನು ಇಟ್ಟುಕೊಂಡಿ~
ರಲು ಒಬ್ಬ ವಿಧವೆಯ ಹಕ್ಕು ಒಂದು ವಿಶೇಷ ಉದ್ದೇಶಕ್ಕಾಗಿ ಇರುತ್ತದೆ. ಅದು 
#ಭದ್ರತೆ~
ಯಿಲ್ಲದ ಋಣವಾಗಿರುವ ಕನ್ಯಾಶುಲ್ಕದ ತ್ವರಿತ ಸಂದಾಯವನ್ನು ಪಡೆಯಲು ಒತ್ತಡದ
ರೀತಿಯಲ್ಲಿರುತ್ತದೆ. ಇಲ್ಲಿ ಸಾರಯುಕ್ತ ಹಕ್ಕು ಆ ಋಣ ಮತ್ತು ಪಾಲು ಆಗಿರುತ್ತದೆ.
ಅದನ್ನು ಇಟ್ಟುಕೊಂಡಿರುವಿಕೆಯು ಪ್ರಕ್ರಿಯಾತ್ಮಕ ಹಕ್ಕಾಗಿರುತ್ತದೆ. ಇತರ
ಯಾವನೇ ಒಬ್ಬ ಭದ್ರಗೊಳಿಸಲ್ಪಟ್ಟಿಲ್ಲದ ಋಣದಾತನಿಗಿಂತ ಹೆಚ್ಚಿನ ಯಾವತ್ತೂ
ಹಕ್ಕನ್ನು ಆಕೆಯು ಪಡೆದಿರದಿದ್ದರೂ ಸಹ, ಆಕೆಯು ತನ್ನ ಮೃತ ಪತಿಯ ಸ್ವತ್ತನ್ನು
ಕಾನೂನುಬದ್ಧವಾಗಿ ಮತ್ತು ಬಲಾತ್ಕಾರ ಅಥವಾ ಮೋಸವಿಲ್ಲದೆ ಅದರ ಕಬ್ಜೆ ಪಡೆದರೆ
ಅವಳು ಆ ಋಣವು ತೃಪ್ತಿಪಡಿಸಲ್ಪಡುವವರಿಗೆ ಅದನ್ನು ಇಟ್ಟುಕೊಂಡಿರಲು ಹಕ್ಕುದಾರ~
ಳಾಗುವಳು.
-63-

ಲೆಕ್ಕಪತ್ರ ಕೊಡುವ ಬಾಧ್ಯತೆ :

ತನ್ನ ಕನ್ಯಾ ಶುಲ್ಕದ ಬದಲಾಗಿ ಆಕೆಯು ಆ ಸ್ವತ್ತಿನ ಕಬ್ಜೆ ಹೊಂದಿರುವಷ್ಟು
ಕಾಲ, ಆ ವಿಧವೆಯು ಆ ಸ್ವತ್ತಿನಿಂದ ಬರುವ ಬಾಡಿಗೆಗಳು ಮತ್ತು ಲಾಭಗಳ
ಸಂಬಂಧದಲ್ಲಿ ಲೆಕ್ಕಪತ್ರಗಳನ್ನು ಕೊಡಲು ಬಾಧ್ಯಳಾಗುವಳು. ಆದರೆ ಇಂಥ ಒಂದು
ಪ್ರಕರಣದಲ್ಲಿ ಆ ಕನ್ಯಾಶುಲ್ಕದ ಋಣದ ಸಂಬಂಧದಲ್ಲಿ ಆಕೆಯು ಆ ಬಡ್ಡಿ
ಪಡೆಯಲು ಹಕ್ಕುದಾರಳಾಗುವಳು. ಒಂದೊಮ್ಮೆ ಅಕ್ರಮಕಾರಕವಾಗಿ ಆಕೆಯು
ಆ ಕಬ್ಜೆಯಿಂದ ರಹಿತಗೊಳಿಸಲ್ಪಟ್ಟರೆ ಆ ಕಬ್ಜೆಯನ್ನು ಮರಳಿ ಪಡೆಯುವುದಕ್ಕಾಗಿ
ದಾವೆ ಹೂಡಬಹುದು. ಆದರೆ ಆಕೆಯು ಅದನ್ನು ಪುನ, ಪಡೆಯುವಂತಿಲ್ಲ.

ಕಬ್ಜೆ ಇಟ್ಟುಕೊಳ್ಳುವ ಹಕ್ಕು ಯಾವತ್ತೂ ಸ್ವತ್ತಾಧಿಕಾರ ಕೊಡುವುದಿಲ್ಲ-
ಕನ್ಯಾ ಶುಲ್ಕದ ಬದಲಾಗಿ ಪತಿಯ ಸ್ವತ್ತಿನ ಕಬ್ಜೆಯನ್ನು ಇಟ್ಟುಕೊಂಡಿರಲು
ಪತ್ನಿಯ ಹಕ್ಕು ಆಕೆಗೆ ಆ ಸ್ವತ್ತಿನಲ್ಲಿ ಯಾವತ್ತೂ ಸ್ವತ್ವಾಧಿಕಾರ ಕೊಡುವುದಿಲ್ಲ;
ಆದುದರಿಂದ, ತನ್ನ ಕನ್ಯಾ ಶುಲ್ಕ ಋಣವನ್ನು ತೃಪ್ತಿಪಡಿಸಲೂ ಸಹ ಆಕೆಯು ಆ
ಸ್ವತ್ತನ್ನು ಪರಾಧೀನಗೊಳಿಸುವಂತಿಲ್ಲ. ಆ ವಿಧವೆಯು ತನ್ನ ಕನ್ಯಾ ಶುಲ್ಕಕ್ಕಾಗಿ
ಪತಿಯ ಸ್ವತ್ತಿನ ಮೇಲೆ ಯಾವತ್ತೂ ಪ್ರಭಾರವನ್ನು ಪಡೆಯಲು ಹಕ್ಕುದಾರಳಾಗಿಲ್ಲ~
ದಿದ್ದರೂ ಸಹ, ಅಂಥ ಒಂದು ಪ್ರಭಾರವು ಒಂದು ಒಪ್ಪಂದದಿಂದ ಅಥವಾ ಒಂದು
ಡಿಕ್ರಿಯಿಂದ ನಿರ್ಮಿಸಲ್ಪಡಬಹುದು.

20. "ಖರ್ಚ್ - ಐ - ಪಾನದಾನ್" ಇದರ ಬಗ್ಗೆ ಟಿಪ್ಪಣಿ ಬರೆಯಿರಿ.

ಖರ್ಚ್ - ಐ - ಪಾನ್ದಾನ್

ಶಾಬ್ದಿಕವಾಗಿ ಖರ್ಚ್ - ಐ - ಪಾನ್ ಎಂದರೆ ಅಡಿಕೆ ವೆಚ್ಚಗಳು. ಈ
ಭತ್ಯೆಯು "ಮೇವಾಖೋರಿ" ಭತ್ಯೆ ಎಂಬುದಾಗಿಯೂ ಸಹ ಕರೆಯಲ್ಪಡುತ್ತದೆ. ಇದು
ಉತ್ತರ ಭಾರತದಲ್ಲಿ ಸಂಪನ್ನ ಮುಸ್ಲಿಂ ಕುಟುಂಬಗಳಲ್ಲಿ ರೂಢಿಯಲ್ಲಿದ್ದಿರುವ ಪತ್ನಿಗೆ
ಕೊಡಲಾಗುವ ಒಂದು ವೈಯಕ್ತಿಕ ಭತ್ಯೆಯಾಗಿದೆ. ಇದು ವಿವಾಹಕ್ಕಿಂತ ಮೊದಲು
ಅಥವಾ ಬಳಿಕ ನಿಗದಿಪಡಿಸಲಾಗುತ್ತದೆ ಮತ್ತು ಆ ಪಕ್ಷಗಳ ಸಾಮರ್ಥ್ಯ ಮತ್ತು ಸ್ಥಾನ~
ಮಾನಕ್ಕೆ ಅನುಗುಣವಾಗಿ ಬದಲಾವಣೆಗೊಳ್ಳುತ್ತದೆ. ಪತ್ನಿಯು ಈ ವೆಚ್ಚವನ್ನು
ಯಾವ ರೀತಿಯಲ್ಲಿ ಬೇಕಾದರೂ ವಿನಿಯೋಗಿಸಬಹುದು ಮತ್ತು ಇದರ ಮೇಲೆ ಪತಿಗೆ
ಯಾವುದೇ ರೀತಿಯ ನಿಯಂತ್ರಣವಿರುವುದಿಲ್ಲ.

﻿
ಕೆ. ಶಿವರಾಮ ಐತಾಳ
03-05-21
Kannada
ಜನಪದರ ಸಂಸ್ಕರಣಾಸಕ್ತಿ

ಪೂರ್ಣತೆಯ ಆಕಾಂಕ್ಷೆಯೇ ಸಂಸ್ಕರಣಕ್ಕೆ ಕಾರಣ. ಸಂಸ್ಕಾರ
ಸಂಸ್ಕೃತರಲ್ಲೆಂತೋ ಅಂತೆಯೇ ಜನಪದರಲ್ಲೂ ಇರುತ್ತದೆಂಬುದನ್ನು ಹಿಂದೆಯೇ
ಹೇಳಿದ್ದೇವೆ. ಈ ಸಂಸ್ಕರಣಾಸಕ್ತಿ ಆದಿಮಾನವನಿಂದಲೂ ಆರಂಭವಾಗಿ
ಬಂದುದು. ಸಂಸ್ಕರಣದ ಮಟ್ಟ ಬೇರೆಯಾದಂತೆ ಒಂದು ಸಮುದಾಯದಲ್ಲಿ
ಪ್ರತ್ಯೇಕತೆ ಉಂಟಾಗುತ್ತದೆ. ಸಂಸ್ಕೃತ ಅತಿಸಂಸ್ಕೃತಗಳು ಏರ್ಪಡುತ್ತವೆ.
ವಾಸ್ತವವಾಗಿ ಅಸಂಸ್ಕೃತ ಎನ್ನುವಂಥದೇ ಇಲ್ಲ. ಗ್ರಾಮೀಣರ ಸಂಸ್ಕಾ~
ರಣಾಸಕ್ತಿಯ ವಿಷಯದಲ್ಲಿ ಪುಟ್ಟ ಸ್ವಾರಸ್ಯದ ಘಟನೆಯೊಂದನ್ನು ಉದಾಹರಿಸಬಹುದು.
Page ಼಼಼ೌಸ
ಗ್ರಾಮೀಣ ನಾಟಕವೊಂದರಲ್ಲಿ ನಾಯಕ ನಾಯಕಿ~
ಯನ್ನು "ಓಗೋದಿಲ್ವೆ?" ಎಂದು ಕೇಳಿದನಂತೆ. ಎರಡನೇ ಬಾರಿಗೂ
ಹಾಗೆಯೇ ಕೇಳಿದ. ಮೂರನೇ ಬಾರಿ ಬಾಯಿತಪ್ಪಿ "ಓಗಾಕಿಲ್ವ" ಎಂದ~
ನಂತೆ. ಆಗ ಕೇಳುತ್ತಿದ್ದ ಅದೇ ಮಟ್ಟದವನು `ಉಟ್ಟು ಎಲ್ ಬಿಡ್ತಾನೆ?
ಈನ ಸುಳಿ ಬೋಳಿಸಿದರೆ ಓದಾತಾ" ಎಂದು ಬೈದನಂತೆ. ಇಲ್ಲಿ ಗಮನಿಸ~
ಬೇಕಾದ್ದು `ಹೋಗುವುದಿಲ್ಲವೆ' ಎಂಬುದು ಬರೆಹದ ರೂಪ. `ಹೋಗೋದಿಲ್ವೆ'
ಎನ್ನುವುದು ಸಂಸ್ಕೃತರ ಆಡುಮಾತಿನ ರೂಪ. `ಓಗಾಕಿಲ್ವ' ಎಂಬುದು
ಗ್ರಾಮ್ಯ ಸಂಸ್ಕರಣಾಸಕ್ತಿಯು `ಓಗೋದಿಲ್ವೆ' ಎಂಬ ಮೂರನೇ ರೂಪ~
ವನ್ನು ಸೃಜಿಸುವಂತಾಯಿತು. ಜನಪದಗೀತೆಗಳಲ್ಲಿನ, ಕಥೆಗಳಲ್ಲಿನ ಭಿನ್ನ ಪಾಠ~
ಗಳು ಒದಗಿರುವೆಡೆಗಳಲ್ಲಿ ಹಲವೆಡೆ ಈ ಸಂಸ್ಕರಣಾಸಕ್ತಿ ಕಂಡುಬರುತ್ತದೆ.
ಕಾರಣವೆಂದರೆ ಜನಪದರಲ್ಲಿನ ಪೂರ್ಣತೆಯ ಹಂಬಲವೇ ಆಗಿದೆ. ವ್ಯಕ್ತಿ~
ಯೊಬ್ಬನ ರಚನೆಯೊಂದು ಮಂಡಿತವಾದಾಗ ಸಮುದಾಯದ ಒಬ್ಬೊಬ್ಬ
ವ್ಯಕ್ತಿಯೂ ಅದನ್ನು ಸ್ವೀಕರಿಸುವುದರ ಜೊತೆಗೆ ಆ ರಚನೆಯ ಅಂಶ ಅಂಶಗಳ
ಔಚಿತ್ಯವನ್ನು ಪ್ರಶ್ನಿಸುತ್ತಾನೆ. ತನ್ನ ನೇರಕ್ಕೆ, ತನ್ನ ಅನಿಸಿಕೆಯ ಪೂರ್ಣತೆಗೆ
ಅನುಗುಣವಾಗಿ ಶಬ್ದ ಶಬ್ದವನ್ನೂ ತಿದ್ದಬಹುದು. ಇಂಥ ಪ್ರತಿಯೊಂದು ತಿದ್ದು~
ಪಾಡುಗಳೂ ಈ ಮೂಲರಚನೆಯನ್ನು ಸುಂದರತಮಗೊಳಿಸುವ ಉದ್ದೇಶದವೇ
ಆಗಿರುತ್ತವೆ. ಆದರೆ ಹಲವೇಳೆ ಆ ಉದ್ದೇಶ ಸಫಲವಾಗುತ್ತದೆ ಎನ್ನುವಂತಿಲ್ಲ.
ಸಫಲತೆಯ ಪ್ರಶ್ನೆಯೇ ಬೇರೆ. ಅವನ ದೃಷ್ಟಿಗೆ ಅದು ಸಫಲವೇ. ಏಕೆಂದರೆ ಆ
ಒಂದು ತಿದ್ದುಪಾಡು ಅವನಿಗೆ ತೃಪ್ತಿಯನ್ನು ಕೊಡುತ್ತದೆ. ಸೇರಿಕೆಗಳೂ, ಲೋಪ~
ಗಳೂ ಅಷ್ಟೆ. ವಾಸ್ತವವಾಗಿ ಉಚಿತವೊ ಅನುಚಿತವೊ ಸಮುದಾಯದ ಪ್ರತಿ~
ಯೊಬ್ಬ ಸದಸ್ಯನೂ ಅದನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ತನ್ನ ಮುದ್ರೆ~
ಯನ್ನು ಒತ್ತುತ್ತಾನೆ. ಆ ಹಕ್ಕು ಮತ್ತು ಅವಕಾಶ ಅವನಿಗೆ ಒದಗಿರುತ್ತದೆ.
ರಚನೆಯೊಂದು ಪೂರ್ಣತೆ ಪಡೆದಿರಬೇಕೆಂಬ ಒತ್ತಾಸೆ, ನಿರೀಕ್ಷೆ ಸಮುದಾಯಕ್ಕೆ
ಒಟ್ಟಿನಲ್ಲಿ ವ್ಯಕ್ತವಾಗಿ ಇಲ್ಲದಿದ್ದರೂ, ಆ ರಚನೆ ಎಷ್ಟೇ ಚೆನ್ನಾಗಿಯೂ,
ಸಂಗತವಾಗಿಯೂ, ಸಂಬದ್ಧವಾಗಿಯೂ ಇದ್ದರೂ ವ್ಯಕ್ತಿಗಳು ಬಳಸುವಾಗ~
ಲೆಲ್ಲ ತಮ್ಮ ತಮ್ಮ, ತಾವೇ ಉತ್ತಮವೆಂದುಕೊಂಡ ಅಭಿರುಚಿಗೆ ತಕ್ಕಂತೆ
ತಿರುಚಿಕೊಳ್ಳುವುದರಿಂದ ರಚನೆಯ ವೈಯುಕ್ತಿಕತೆ ಹಾರಿಹೋಗುತ್ತದೆ.
Page ಼಼಼ೌಸಸ
ಇನ್ನೊಂದು ವಿಶೇಷವೆಂದರೆ ವ್ಯಕ್ತಿಯು ಅನ್ಯಕೃತ ರಚನೆಯನ್ನು ಅಪ್ಪಿಕೊಳ್ಳು~
ವಾಗ ಉದ್ದೇಶಪೂರ್ವಕವಾಗಿ ಸೇರಿಸುವ ಹಂಬಲದಿಂದ ಹಿಗ್ಗಲಿಸುತ್ತಾನಲ್ಲದೆ
ಅನಾವಶ್ಯಕವಾದುದನ್ನು `ಸಂಪಾದನಾ' ದೃಷ್ಟಿಯಿಂದ ತೆಗೆದೊಗೆಯುವುದಿಲ್ಲ.
ವಿಮರ್ಶೆಯ ನಿಶಿತದೃಷ್ಟಿ ಇಲ್ಲದಿರುವುದೂ ಆ ಬಗೆಯ ಉದಾಸೀನತೆಗೆ ಕಾರಣ~
ವಿರಬಹುದು. ಹಾಗಾದರೆ, ಒಬ್ಬೊಬ್ಬ ವ್ಯಕ್ತಿಯೂ ಅನಾವಶ್ಯಕವಾದ ಕಸ~
ಕಡ್ಡಿಗಳನ್ನೆಲ್ಲಾ ಸೇರಿಸಿ ರಚನೆ ಕೆಡುವುದಿಲ್ಲವೆ? ಹಾಗೆ ಕೆಟ್ಟಿರುವ ಉದಾ~
ಹರಣೆಗಳು ಹೇರಳವಾಗಿ ಏಕೆ ಇಲ್ಲ? ಕಥೆಯ, ಹಾಡಿನ ಮೂಲರೇಖೆಗಳು
ಅಳಿಸದೆ ಉಳಿಯುತ್ತವೆಯಲ್ಲ - ಎಂಬ ಪ್ರಶ್ನೆ ಸಹಜವಾಗಿ ಏಳುತ್ತವೆ. ಇದಕ್ಕೆ
ಸಮಾಧಾನ - ಜನಪದ ಸಾಹಿತ್ಯ ನೈಸರ್ಗಿಕವಾಗಿ ಸಂಪಾದಿತವಾಗುತ್ತ~
ದೆಂಬುದೇ ಆಗಿದೆ, ಹಾಗೆ ಸೇರಿದ ಅನಾವಶ್ಯಕ ಭಾಗಗಳು, ಅತಿಗಳು, ತಮ್ಮ
ಮಂಕುತನದಿಂದ ಅಚ್ಚೊತ್ತಿ ನಿಲ್ಲಲಾರದೆ ಮರೆತುಹೋಗುತ್ತವೆ. ಮರೆವೇ ಈ
ಕತ್ತರಿ ಕೆಲಸವನ್ನು ಚೆನ್ನಾಗಿ ಮಾಡಿಬಿಡುತ್ತದೆ. ಜನಪದದ ರಚನೆಗಳ
ಪಾಠ ಖಚಿತವಾದಂತೆ ಸಂಸ್ಕರಣಗಳು ನಿಂತುಹೋಗುತ್ತವೆ. ದೀರ್ಘವಾದ
ಹಾಡುಗಳ ವಿಷಯದಲ್ಲಿ ಆವಶ್ಯಕವಾದ ಭಾಗಗಳೂ ಮರೆವುದು ಸ್ವಾಭಾವಿಕವೇ
ಆಗಿದೆ. ಅಂಥ ಸಂದರ್ಭದಲ್ಲಿ ಕೊಂಡಿ ಬಿಗಿಯುವ ಕೆಲಸ ನಡೆಯುತ್ತದೆ. ಅದರ
ಪರಿಷ್ಕಾರ ಅವಶ್ಯವಾಗುತ್ತದೆ. ಬೇರೆ ಬೇರೆ ವ್ಯಕ್ತಿಗಳ ಕೈಯಲ್ಲಿನ ಈ ಸಂಸ್ಕರಣ~
ಗಳ ಗೊಂದಲದಲ್ಲಿ ರಚನೆಯ ಒಟ್ಟು ರೂಪವೇ ಗೋಜಲಾಗಬಹುದು.
ಈ ಸಂಸ್ಕರಣಗಳ ಹಿನ್ನೆಲೆಯಲ್ಲಿ ವ್ಯಕ್ತಿ ಸಮಾಜಗಳ ಸಂಬಂಧವೇ ಪ್ರೇರಕ~
ವಾಗಿರುತ್ತದೆ. ನಾಗರಿಕ ಜಗತ್ತಿನಲ್ಲೆಂತೋ ಜನಪದ ಕ್ಷೇತ್ರದಲ್ಲೂ ವ್ಯಕ್ತಿ
ಸಮಾಜಗಳಲ್ಲಿ ಘರ್ಷಣೆ ಹೊಂದಾಣಿಕೆಗಳಿರುತ್ತವೆ. ಸಮಾಜ ಅಥವಾ
ಸಮುದಾಯದಲ್ಲಿ ಪ್ರಮುಖವೆಂದು ಅಂಗೀಕೃತವಾದ ಮೌಲ್ಯಗಳ ಚೌಕಟ್ಟಿ~
ನೊಳಗೆ ವ್ಯಕ್ತಿಗಳ ಸ್ವಾತಂತ್ರ್ಯ ಸೌಲಭ್ಯಗಳನ್ನು ಸೀಮಿತಗೊಳಿಸುವ ಕಾಱ್ಯ
ಒಂದು ಕಡೆ, ಸಮಾಜದ ಕಡೆಯಿಂದ ನಡೆಯುತ್ತಿದ್ದರೆ ಅದರಿಂದ ತುಳಿ~
ಯಲ್ಪಟ್ಟ ಆಸಕ್ತಿಗಳು ತೋರಿಕೆಗೆ ಅನಿಷಿದ್ಧವೆನಿಸಬಹುದಾದ, ಸಹ್ಯವೆನಿಸಬಹು~
ದಾದ ರೂಪಗಳಲ್ಲಿ ಮೈದೋರಿ ದಂಗೆಯೇಳುವುದು ಇನ್ನೊಂದು ಕಡೆ,
ವ್ಯಕ್ತಿಯ ಕಡೆಯಿಂದ ನಡೆಯುತ್ತಿರುತ್ತದೆ. ವ್ಯಕ್ತಿಯಲ್ಲದ ಸಮುದಾಯ
ಅಪೂರ್ಣವಾಗುವುದರಿಂದ, ಅವನು ಸಮುದಾಯದ ಮೂಲಘಟಕವಾದುದರಿಂದ
Page ಼಼಼ೌಸಸಸ
ಅವನ ಪ್ರಭಾವದಿಂದ ಸಮಾಜ ದೂರವಾಗುವುದು ಸಾಧ್ಯವೇ ಇಲ್ಲ.
ಈ ಪ್ರಭಾವ ಪೂರಕವಾಗಿರಬಹುದು, ನಿರೋಧಾತ್ಮಕವಾಗಿರಬಹುದು.
ಸಮಷ್ಟಿಗೆ ಸಮುಚಿತವಾಗಿ ತೋರುವಂತೆ ರಚನೆ ಮಾಡುವ ಸಮಯದಲ್ಲಿ
ಸ್ವಕೀಯತೆಯನ್ನು ವ್ಯಕ್ತಿ ಧಾರೆಯೆರೆಯುತ್ತಾನೆ. ತಿದ್ದುಗಳಲ್ಲೂ ಅದೇ ಕೆಲಸ
ಮಾಡುತ್ತಾನೆ. ವ್ಯಕ್ತಿ ವೈಲಕ್ಷಣ್ಯಗಳು ಸೇರುವುದಂತೂ ಸಾಮಾನ್ಯವಾಗಿದೆ.
ಈ ಎಲ್ಲಾ ಅಂಶಗಳನ್ನು ಪಾಠಭೇದಗಳ ಹಲವು ಸಂದರ್ಭಗಳಲ್ಲಿ ಕಾಣ~
ಬಹುದು. ಸಮುದಾಯದೊಳಗೆ ಅಜ್ಞಾತನಾಗಿದ್ದು ತನ್ನ ಬಣ್ಣದ ಕಾಣಿಕೆ
ನೀಡುವಾಗ ಒದಗುವ ಧೈಱ್ಯ ಪ್ರತ್ಯೇಕವಾಗಿ, ತನ್ನದೇ ಕೃತಿಯೆಂದು ಹೊಣೆ
ಹೊರಬೇಕಾದ ಸನ್ನಿವೇಶದಲ್ಲಿ ಇರುವುದಿಲ್ಲ. ವ್ಯಕ್ತಿಕೃತಿ ಸಮಾಜದ ಪ್ರಮುಖ
ಮೌಲ್ಯಗಳ ಹಿಂಬಾಲಕನಾಗಿ ಭವ್ಯಗೊಳಿಸುವುದರಲ್ಲಿ ತೊಡಗುವುದೂ, ಸಮು~
ದಾಯ ಕೃತಿ ಅವೇ ಮೌಲ್ಯಗಳನ್ನು ಆಂತರಿಕ ಹಂಬಲಗಳಿಗೆ ತಕ್ಕಂತೆ ರೂಪಿ~
ಸುವ ಕಾಱ್ಯದಲ್ಲಿ ತೊಡಗುವುದೂ ಸ್ವಾಭಾವಿಕವಾಗಿದೆ. ಸಮುದಾಯದಲ್ಲಿ~
ದ್ದಾಗ ವ್ಯಕ್ತಿ ರಚನೆಯ ಭಾಗವನ್ನು ಮರೆತರೆ ಇನ್ನೊಬ್ಬ ನೆನಪುಮಾಡಿಕೊಡ~
ಬಹುದು, ಸಂಸ್ಕಾರ ಸಮೂಹವಾಗಿ ನಡೆಯಬಹುದು. ಸಮುದಾಯ ಛಿದ್ರ~
ವಾದಾಗ ಆ ಸೌಲಭ್ಯವಿಲ್ಲದೆ ರಚನೆಗಳು ಅಳಿದುಹೋಗುತ್ತವೆ. ಉತ್ತಮ~
ವೆಲ್ಲ ಉಳಿಯುತ್ತವೆಯೆಂಬ ಭರವಸೆಯೇನೂ ಇಲ್ಲ. ಈ ಸಂಕಲನದಲ್ಲಿರುವ
ಗೋವಿನಹಾಡು ಇನ್ನು ಕೆಲವೇ ವರ್ಷಗಳಲ್ಲಿ ಸಿಗದೇನೇ ಹೋಗಬಹುದಾದ
ಸ್ಥಿತಿಯಲ್ಲಿದೆ. ಸಮುದಾಯವಿಲ್ಲದೆ ಪ್ರಾಚುಱ್ಯವಿಲ್ಲ. ವ್ಯಕ್ತಿಯಲ್ಲಿ ಉಳಿದು
ವ್ಯಕ್ತಿಯಲ್ಲೇ ಲಯವಾಗುತ್ತವೆ. ಸಂಸ್ಕಾರದ ಆಸಕ್ತಿಯೂ ಉಡುಗಿ
ಹೋಗುತ್ತದೆ. ಏಕೆಂದರೆ ಅದನ್ನು ಹಾಡಬೇಕೆಂಬ ಒತ್ತಾಯವಿರದು, ಕೇಳ~
ಬೇಕೆಂಬ ನಿರೀಕ್ಷಕರಿರರು. ವ್ಯಕ್ತಿ ವ್ಯಕ್ತಿಯಾಗಿ ಏಕಾಂಗಿ. ಅವನಲ್ಲಿರುವ
ರಚನೆಗೆ ಏಕಾಂತ, ಮರೆತ ಭಾಗಗಳು ಕೂಡಿಬರವು. ಅರ್ಥವಾಗದ ಭಾಗಗಳಿಗೆ
ಅರ್ಥವಿರಬೇಕೆಂಬ ಕಲ್ಪನೆಯೂ ಹೋಗುತ್ತದೆ. ಸಂಸ್ಕಾರದ ಬದಲು ಅಂತ್ಯ
ಸಂಸ್ಕಾರವನ್ನು ನಿರೀಕ್ಷಿಸುತ್ತವೆ.

Page ಼಼಼ಸ಼

ನಾಗರಿಕತೆ ಮತ್ತು ಜನಪದ

ಸಮಷ್ಟಿಯ ಪಾತ್ರದಲ್ಲಿ ವ್ಯಷ್ಟಿ ಕಾಣಿಸಿಕೊಳ್ಳುವುದು ಜನಪದದ
ಜಾಯಮಾನವಾದರೆ ವ್ಯಷ್ಟಿಯಲ್ಲಿ ಸಮಷ್ಟಿ ಕೂಡಿಕೊಳ್ಳುವುದು ನಾಗರಿಕದ,
ಮಾರ್ಗ಼ದ ಜಾಯಮಾನ. ಜನಪದ ಸಮಷ್ಟಿಪ್ರಧಾನ, ಮಾರ್ಗ ವ್ಯಷ್ಟಿಪ್ರಧಾನ.
ಅದಕ್ಕೆ ಇರವು ಆಧಾರ, ಇದಕ್ಕೆ ಅರಿವು ಆಧಾರ. ಅರಿವಿನ ಕೆಲಸ ಒಡೆಯು~
ವುದು, ವಿಶ್ಲೇಷಣೆ - ರಚನಾತ್ಮಕ; ಇರವಿನ ಕೆಲಸ ಕೂಡುವುದು, ಸಂಯೋ~
ಗಾತ್ಮಕ-ಪ್ರವೃತ್ಯಾತ್ಮಕ. ಕಾವ್ಯದಲ್ಲಿ ಹುರುಳು ಮತ್ತು ರೂಪ
ಎಂಬೆರಡಂಶಗಳಿವೆ ಎಂಬ ವಿಶ್ಲೇಷಣೆಯ ಪ್ರಜ್ಞೆಯೇ ನಾಗರಿಕತೆಯ
ಸೂಚನೆ. ಅರಿವು ಇರವುಗಳೆರಡೂ ಬದುಕಿಗೆ ಆವಶ್ಯಕ. ಅವುಗಳ ಸಾರ್ಥಕ್ಯ
ಪರಸ್ಪರಾವಲಂಬಿ. ಅವು ಪರಸ್ಪರ ಪೂರಕವಾದರೇನೇ ಸತ್ವದ ಬದುಕು.
ಇರವು ಜೀವವಾಹಿನಿ. ಅರಿವು ಅದರ ಪಾತ್ರ. ಅನುಭವದ ಪರಿಶೋಧದ
ತಿಳಿವೇ ಮಾರ್ಗದ ಆದಿ. ಹುರುಳಿಗೆ ಉಚಿತವಾದ ರೂಪವನ್ನು ಒದಗಿಸು~
ವುದೇ ಮಾರ್ಗದ, ಅರಿವಿನ ಉದ್ದೇಶ. ಈ ಕೆಲಸ ಮುಂದುವರಿದಂತೆ ಉದ್ದೇಶ~
ದಿಂದ ಚಲಿಸಿ, ದಾರಿ ತಪ್ಪಬಹುದು. ಆಗ ಹುರುಳಿಗಿಂತ ರೂಪ ಮುಖ್ಯ~
ವಾಗುತ್ತದೆ. ಹುರುಳಿಗೆ ನಷ್ಟವಾದೀತು. ಜನಪದದಲ್ಲಿ ಹುರುಳನ್ನು ಅನು~
ಸರಿಸಿ ತಾನಾಗಿ ಬರತಕ್ಕುದು ರೂಪ. ಅದು ಆಯ್ಕೆಯ ವಿಷಯವಲ್ಲ. ಮಾರ್ಗ~
ದಲ್ಲಿ ಅಭಿವ್ಯಕ್ತಿಯೇ ಒಂದು ಸಮಸ್ಯೆ. ಸೂಕ್ಷ್ಮಾತಿಸೂಕ್ಷ್ಮ ಭಾವತರಂಗಗಳನ್ನೂ
ಎಣಿಸುವ ಕುಶಲತೆ ಬೇಕು. ಜನಪದದಲ್ಲಿ ಒಟ್ಟಿನ ಬದುಕು ವಸ್ತು. ಒಟ್ಟಾರೆ
ಪ್ರಕಾಶನ. ಎರಡಕ್ಕೂ ಪರಿಮಿತಿಗಳಿದ್ದೇ ಇವೆ. ಹೇಗೆ ಕಾಣಿಸಿಕೊಳ್ಳಬೇಕು
ಎಂಬ ನಾಗರಿಕ ಹಂಬಲದಿಂದ `ನಾನು ಏನು' ಎಂಬ ಸ್ವ-ರೂಪದ ಮರೆವು
ಸಾಧ್ಯ. ರೂಪದ ಅತಿಪ್ರಿಯತೆ ಹಾನಿಕರವಾದೀತು. ವಾತಾವರಣವೂ ಭಿನ್ನ.
ಪಟ್ಟಣದ ನೌಕರನಿಗೆ ನಿಮಿಷ ನಿಮಿಷಗಳ ಜಂಜಡದ ವೃತ್ತ. ಅದರಾಚೆಗೆ
ತಾನೇನು? ತನ್ನ ಸುತ್ತೇನು? ಒಟ್ಟಿನ ಬದುಕೇನು? ಎಂಬುದನ್ನು ನೋಡಲು
Page ಼ಸ
ಸಮಯವಿಲ್ಲ. ನಿತ್ಯ ಅಭದ್ರ ಇಲ್ಲವೆ ಕೃತಕ ಆಕಾಂಕ್ಷೆಗಳಲ್ಲಿ ಸತತ ತಲ್ಲೀನ.
ಒಟ್ಟಿನಲ್ಲಿ ಹೆಚ್ಚಾದ ಅಂತರವುಳ್ಳ ದ್ವಂದ್ವ. ಇಲ್ಲೂ ತನ್ನನ್ನು, ತನ್ನ ಸುತ್ತಿನ
ಪರಿಸರವನ಼್ನು, ಪ್ರಕೃತಿಯನ್ನು ನೋಡಿದವರೇ ಎತ್ತರಕ್ಕೆ ಏರಿದ್ದು. ನಾಗರಿಕತೆ~
ಯಿಂದ ಮಾನವ ಎಲ್ಲಕ್ಕೂ ಪರಾವಲಂಬಿಯಾಗುತ್ತಾ ಬಂದು, ತನ್ನ ಬಂಧ~
ನಕ್ಕೆ ತಾನೇ ಸಿಕ್ಕಿ ಒದ್ದಾಡುತ್ತಾ, ಪ್ರಾಣಿಗೂ ಇರತಕ್ಕ ಸಹಜವನ್ನು ಪರಿ~
ಭಾವಿಸುವ, ಅನುಭವಿಸುವ ಸ್ವಾಭಾವಿಕವಾದ ಶಕ್ತಿಯನ್ನು ಕಳೆದುಕೊಳ್ಳುತ್ತಾ
ಬಂದ. ಒಳನೋಟ, ಆತ್ಮಪ್ರೇರಣೆ - ಇವಕ್ಕೆಲ್ಲ ಅವಶ್ಯವಾದ ಜೀವರಸ ಕಡಿಮೆ~
ಯಾಯಿತು. ಜನಪದ ಕವಿ ತನಗೇನು ಬೇಕು ಎನ್ನುವುದನ್ನು ತಿಳಿಯದೆಯೇ,
ತಿಳಿಯುವ ಅವಶ್ಯಕತೆಯೇ ಇಲ್ಲದೆ ಅದನ್ನು ದೊರಕಿಸಿಕೊಳ್ಳಲು ಸಮರ್ಥನಾದ.
ಅವನಿಗೆ ಭಾಷೆಯ, ರೂಪಗಳ ದಿನನಿತ್ಯದ ಸಾಮಾನ್ಯ ಪರಿಕರಗಳೇ ಸಾಕಾ~
ಯಿತು. ಅಂದರೆ ಮಾರ್ಗ ಕೀಳು ಎಂದಲ್ಲ. ನಿಜವಾದ ಸಾರ್ಥಕ್ಯ ಅವೆರಡರ
ಹೊಂದಾಣಿಕೆಯಲ್ಲೇ ಸಾಧ್ಯ. ಜನಪದ ಸಾಹಿತ್ಯ ಬಯಲ ಗಾಳಿಯಂತೆ,
ಮುಂಬಿಸಿಲಿನಂತೆ ಸ್ವಚ್ಛ ನಿರಂಬಳ ಎಂದು ಮೊದಲಾಗಿ ನಾವು ಎಷ್ಟೇ ಹೊಗಳ~
ಬಹುದು, ಉತ್ತಮಾಂಶಗಳನ್ನೆಲ್ಲಾ ಒಪ್ಪಲೂಬಹುದು - ಆದರೂ ಅರಿವಿನ
ಪಾತ್ರ ನಿರಾಕರಿಸಬಹುದಾದುದೆಂದು ಮಾರ್ಗವನ್ನೆಲ್ಲ ಅಸಾರ್ಥಕವೆಂದು ತಳ್ಳಿ
ಹಾಕುವುದು ವಿವೇಕವಾಗುವುದಿಲ್ಲ. ಶಾಸ್ತ್ರೀಯ ಸಂಗೀತ ಬೇಡ, ಕುಶಲ
ಚಿತ್ರಗಳು ಬೇಡ, ಆಲೋಚನೆಯೇ ಬೇಡ ಮೊದಲಾಗಿ ಎಂದಂತಾಗುತ್ತದೆ.
ಅತಿರೇಕ ಸರ್ವತ್ರ ವರ್ಜ್ಯ.

Page ಼ಸಸ

ವರ್ಗೀಕರಣ

ಜನಪದ ಸಾಹಿತ್ಯವನ್ನು, ಮಾನವಕುಲ ಬಯಸಿದ ಕಾಣ್ಕೆಯನ್ನು
ಅಧ್ಯಯನ ಮಾಡಬೇಕಾದರೆ ಬದುಕನ್ನು ಕುರಿತ ಸಂಶ್ಲಿಷ್ಟ ದೃಷ್ಟಿಯೂ,
ವಿಶ್ಲೇಷಣ ಕ್ರಿಯೆಯೂ ಅಗತ್ಯವಾಗುತ್ತದೆ. ವಿಶ್ಲೇಷಣಾತ್ಮಕ ಅಧ್ಯಯನ~
ಕ್ಕಾಗಿ ಜನಪದ ಸಾಹಿತ್ಯವನ್ನೂ ವೈಜ್ಞಾನಿಕವಾಗಿ ಹಲವು ರೀತಿಗಳಲ್ಲಿ ವರ್ಗೀ~
ಕರಿಸುವುದಗತ್ಯ.

ರೂಪದ ದೃಷ್ಟಿಯಿಂದ ಗದ್ಯ-ಪದ್ಯವೆಂಬಿವನ್ನು ಮೇಲುನೋಟಕ್ಕೇ
ಬೇರ್ಪಡಿಸಬಹುದು. ಪದ್ಯದಲ್ಲಿ ಕಥಾನಕಗಳು ಮುಕ್ತಕಗಳು ಎಂದು ಎರಡು
ಜಾತಿ. ಗದ್ಯದಲ್ಲೂ ಕಥಾನಕಗಳೆಂದೊಂದು ವರ್ಗ. ಇನ್ನೊಂದು ಗಾದೆಯವು.
ಗಾದೆಗಳಲ್ಲೂ ಕಥನಾತ್ಮಕ ಗಾದೆಗಳಿವೆ. ಕಥೆ ಮರೆತುಹೋಗಿ ಒಂದು ಅನು~
ಭವದಿಂದ ಹೊರಹೊಮ್ಮುವ ಒಂದು ಅಭಿವ್ಯಕ್ತಿಯಾಗಿ ಉಳಿಯತಕ್ಕವಿವೆ.
ಒಗಟುಗಳು ಮೂರನೇ ಜಾತಿ. ಒಗಟುಗಳು ಪದ್ಯದಲ್ಲಿರಬಹುದು, ಗದ್ಯದ
ತುಣುಕಾಗಬಹುದು. ಛಂದಸ್ಸಿನ ದೃಷ್ಟಿಯಿಂದಲೂ ವರ್ಗೀಕರಿಸಬಹುದು.

ವಸ್ತುವಿನ ದೃಷ್ಟಿಯಿಂದ ಮದುವೆಯ ಹಾಡುಗಳು, ತೂಗುವ ಹಾಡು,
ಲೋಕನೀತಿ, ಹೆಣ್ಣಿನ ಬದುಕು ಇವನ್ನೆಲ್ಲಾ ಸಾಮಾಜಿಕವೆನ್ನಬಹುದು. ಇದ~
ರೊಳಗೆ ಸಾಂಸಾರಿಕ ಮೊದಲಾಗಿ ಉಪವರ್ಗಗಳ ರಚನೆಯೂ ಸಾಧ್ಯ.
ಕುಮಾರರಾಮ, ಮದಕರಿನಾಯಕ, ಪಾಳೆಯಗಾರರದು - ಇತ್ಯಾದಿಗಳನ್ನು
ಐತಿಹಾಸಿಕವರ್ಗಕ್ಕೆ ಸೇರಿಸಬಹುದು. ಸುಗ್ಗಿ, ಭತ್ತಕುಟ್ಟುವುದು - ಇತ್ಯಾದಿ
ನಿರ್ದಿಷ್ಟ ಕಾಲಗಳಲ್ಲಿ ಹಾಡತಕ್ಕವನ್ನು ಸಾಂದರ್ಭಿಕ, ಪ್ರಾಸಂಗಿಕ ಎನ್ನ~
ಬಹುದು. ನೃತ್ಯದೊಡನೆ ಹಾಡತಕ್ಕವನ್ನು ಬೇರೆ ಮಾಡಬೇಕು, ರಾಮಾಯಣ,
ಈಶ್ವರದೇವರು ಪಟ್ಟೆ ಕೊಚ್ಚಿದ್ದು ಇತ್ಯಾದಿಗಳನ್ನು ಪೌರಾಣಿಕವೆನ್ನಬಹುದು.
ವೃತ್ತಿಪರವಾದವುಗಳನ್ನೂ ಪ್ರತ್ಯೇಕವಾಗಿ ಗುರುತಿಸಬಹುದು.

ಪ್ರದೇಶಗಳಿಗೆ ತಕ್ಕಂಥ ವರ್ಗೀಕರಣವೂ ಅಗತ್ಯವಾಗುತ್ತದೆ. ಜನ~
ಪದದ `ಸ್ಥಳೀಯತೆ'ಯ ಗುಣವನ್ನು ಹಿಂದೆಯೇ ಪ್ರಸ್ತಾಪಿಸಿದ್ದೇವೆ. ಭಾಷೆಯ
ವಿಷಯದಲ್ಲಿ `ಸೀಮಾರೇಖೆ' ಕಲ್ಪಿಸುವಂತೆ ಜನಪದ ಕೃತಿಗಳ ವಿಷಯದಲ್ಲೂ
ಕಲ್ಪಿಸಬೇಕು. ಒಂದು ಹಾಡು ಒಂದಷ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಸೀಮಿತವಾಗಿರುತ್ತದೆ.
Page ಼ಿಸಸ
ಒಂದು ಪ್ರದೇಶದಲ್ಲಿ ಪ್ರಚಲಿತವಾದ ಪಾಠಸಂಪ್ರದಾಯ
ಇನ್ನೊಂದಕ್ಕೆ ತೀರ ಭಿನ್ನವಾಗಿರುವಾಗ ಅಲ್ಲಲ್ಲಿನ ಸ್ಥಳೀಯತೆ ವಿಶಿಷ್ಟತೆಗಳನ್ನು
ಅರಿಯಲು ಸಹಾಯವಾಗುತ್ತದೆ. ಒಂದೊಂದು ಕಡೆಯ ವಿಶಿಷ್ಟತೆಯೂ
ಅಲ್ಲಲ್ಲಿನ ಪ್ರದೇಶದ ಸ್ಥಿತಿಗತಿಗಳನ್ನನುಸರಿಸಬಹುದು. ಉತ್ತರ ಕರ್ನಾಟಕದ
ಜನಪದಗೀತೆಗಳಲ್ಲಿನ `ರೀತಿ' ಮೈಸೂರಿಗೆ ಭಿನ್ನವಾಗಿರಬಹುದು. ಜೊತೆಗೆ,
ಪ್ರಾದೇಶಿಕ ಅಗತ್ಯವಾಗಿ ಜನಪದಗೀತೆ ಹೊರಹೊಮ್ಮುತ್ತದೆ. ಬಡತನ,
ಕಷ್ಟಕಾರ್ಪಣ್ಯಗಳಿರುವೆಡೆಯಲ್ಲಿನ ರಚನೆಗಳ ವೈಖರಿ ಅಷ್ಟು ಬೇಗೆ ತಟ್ಟದ
ತಂಪು ಸ್ಥಳಗಳಲ್ಲಿ ತೋರದು. ತುಂಬಾ ಮಳೆ ಬೀಳುವ ಸಮೃದ್ಧ ಪ್ರದೇಶ~
ಗಳಲ್ಲಿ ಪ್ರಕೃತಿ ವರ್ಣನೆ ಸಿಕ್ಕೀತೆ ವಿನಾ ಅಲ್ಲಿನ ಜನಪದರು `ಹುಯ್ಯೋ ಮಳೆ~
ರಾಯ' ಎಂದು ಮೊರೆಯಿಡಲಾರರು. ಮಾನವ ಶಾಸ್ತ್ರದ
ದೃಷ್ಟಿಯಿಂದಲೂ ಈ ಪ್ರಾದೇಶಿಕ ವರ್ಗೀಕರಣ ಮುಖ್ಯವಾಗಿದೆ.

ಭಾಷಾಶಾಸ್ತ್ರದಲ್ಲಿ ಸಾಮಾಜಿಕ ವರ್ಗಗಳಲ್ಲಿನ ಭಾಷಾಭೇದವನ್ನು
ಗುರುತಿಸುತ್ತಾರೆ. ಇದನ್ನು ಹಿಂದೆಯೇ ಪ್ರಸ್ತಾಪಿಸಿದ್ದೇನೆ.
ಜನಪದದಲ್ಲೂ ಬೇರೆ ಬೇರೆ ಸಾಮಾಜಿಕ ವರ್ಗಗಳ ರಚನೆಗಳನ್ನು ಪ್ರತ್ಯೇಕವಾಗಿ
ಅಧ್ಯಯನ ಮಾಡುವ ಅವಶ್ಯಕತೆಯಿದೆ. ಸಾಮಾಜಿಕ ವರ್ಗೀಯ ವರ್ಗೀಕರಣ
ತುಂಬಾ ಮುಖ್ಯವಾದುದು. ಈ ಸಂದರ್ಭದಲ್ಲೇ ಇನ್ನೊಂದು ಮಾತನ್ನು
ಹೇಳಬೇಕಾಗಿದೆ. `ಜನಪದ ಸಾಹಿತ್ಯ'ದ ಆವಶ್ಯಕತೆ ಕಾವ್ಯಾಸ್ವಾದನಕ್ಕೆ
ಮಾತ್ರ ಸೀಮಿತ ಎಂದು ಯಾರೂ ಭಾವಿಸಬಾರದು. ಅದು ಮಾನವಶಾಸ್ತ್ರ,
ಸಮಾಜ ಶಾಸ್ತ್ರ, ಚರಿತ್ರೆ, ಸಾಂಸ್ಕೃತಿಕ ಚರಿತ್ರೆ, ಭಾಷಾಶಾಸ್ತ್ರ, ಛಂದಶಾಸ್ತ್ರ
ಇತ್ಯಾದಿ ಹಲವು ಮುಖ್ಯ ಜ್ಞಾನಮಾರ್ಗಗಳಿಗೆ ಆಕರವಾಗಿರುತ್ತದೆ. ಆದುದ~
ರಿಂದ ಕಾವ್ಯದ ದೃಷ್ಟಿಯಿಂದ ಎಷ್ಟೇ ನೀರಸವಾದ ರಚನೆಗಳಿದ್ದರೂ ಅವನ್ನು
ತೀರ ಶ್ರದ್ಧೆಯಿಂದ ಅನ್ಯಪ್ರಯೋಜನಗಳಿಗಾಗಿ ಕಾದಿರಿಸುವುದು ಅಗತ್ಯ~
ವಾಗಿದೆ. ಒಂದು ಶಾಸ್ತ್ರದ ದೃಷ್ಟಿಯಿಂದ ಕೀಳಾದುದು ಇನ್ನೊಂದು ಶಾಸ್ತ್ರದ
ದೃಷ್ಟಿಯಿಂದ ತುಂಬಾ ಮುಖ್ಯವಾಗಿರಬಹುದು. ತುಂಬಾ ಹಿಂದುಳಿದ ಕೊರ~
ಗರ, ಹರಿಜನರ ಹಾಡುಗಳು, ಒಕ್ಕಲು ಮಕ್ಕಳ ಹಾಡುಗಳು, ಬ್ರಾಹ್ಮಣ
ಹೆಂಗಸರ ಹಾಡುಗಳು ವಸ್ತು, ಭಾಷೆ, ಸಂಸ್ಕಾರ ಮೊದಲಾಗಿ ಬೇರೆ ಲಕ್ಷಣ~
ಗಳನ್ನು ಹೊಂದಿರುತ್ತವೆ.

Page ಼ಿಸಸಸ

ವರ್ಗೀಕರಣದ ವಿಧಾನಗಳು ಇವಿಷ್ಟೇ ಅಲ್ಲ, ಅಥವಾ ಯಾವುದೇ
ಒಂದು ದಾರಿಯೂ ಪರಿಪೂರ್ಣವೂ ಅಲ್ಲ. ಒಂದು ಕೃತಿ ನಾಲ್ಕಾರು
ವರ್ಗಗಳಿಗೆ ಸೇರಬಹುದು, ಸೇರುವುದು ಸ್ವಾಭಾವಿಕ. ಆ ಎಲ್ಲ ವರ್ಗ~
ಗಳ ದೃಷ್ಟಿಯಿಂದಲೂ ಒಂದೊಂದೂ ಕೃತಿಯ ಅಧ್ಯಯನ ಆಗಬೇಕು.
ಶಾಸ್ತ್ರೀಯವಾದ ಅಧ್ಯಯನಕ್ಕೆ ಈ ವಿಶ್ಲೇಷಣೆಯ ಮಾರ್ಗ ಅನಿವಾರ್ಯ~
ವಾಗಿದೆ. ಇದರಿಂದ ಅವುಗಳ ಸ್ವರೂಪ ಬೇರೆ ಬೇರೆ ತಿರುವುಗಳಿಂದ ಅರಿವಾಗಿ
ಒಟ್ಟು ಶಿಲ್ಪದ ಪರಿಭಾವನೆಗೆ ನೆರವಾಗುತ್ತದೆ. ಒಟ್ಟಿನಲ್ಲಿ ಜನಪದ ಅಧ್ಯಯ~
ನಕ್ಕೆ ಸುದೃಢವಾದ ಶಾಸ್ತ್ರೀಯ ತಳಹದಿಯನ್ನು ಇನ್ನೂ ಹಾಕಿಕೊಳ್ಳ~
ಬೇಕಾಗಿದೆ.

Page ಼ಿಸೌ

ಜನಪದ ಸಾಹಿತ್ಯವನ್ನು ಸಂಪಾದಿಸುವುದು ಹೇಗೆ?

ಇಂದಿನ ಸ್ಥಿತಿ

ಹಳ್ಳಿಯ ಹಾಡುಗಳ ಪುಸ್ತಕಗಳ ಮುಖಪುಟಗಳ ಮೇಲೆ ಸಂಕಲನ~
ಕರ್ತರು ಕೆಲವರು `ಸಂಗ್ರಾಹಕ' ಎಂದೋ, `ಸಂಪಾದಕ' ಎಂದೋ ಕರೆದು~
ಕೊಳ್ಳುವುದುಂಟು. ಪ್ರಾಯಶಃ ಇಂಥೆಡೆಗಳಲ್ಲಿ `ಸಂಪಾದನೆ' ಎಂಬುದಕ್ಕೆ
ವಿಶಿಷ್ಟವಾದ ಪಾರಿಭಾಷಿಕ ಅರ್ಥವಿದ್ದಿರಲಾರದು. ಹಲವೇಳೆ ದೊರಕಿದ ಹಾಡಿನ
ರೂಪಗಳನ್ನು ಹಾಗೆ ಹಾಗೇ ಕೊಡುವುದುಂಟು. ಕೆಲವೇಳೆ ಅವನ್ನು ತಿದ್ದಿ,
ತಿದ್ದುಗಳಾವುವು ಮೂಲದ ರೂಪವೇನು ಎಂಬುದನ್ನು ತೋರಿಸದೆ ಹೋಗು~
ವುದೂ ಇದೆ. ಎಷ್ಟೋ ವೇಳೆ ಭಾಷಾಜ್ಞಾನ ಸಾಕಷ್ಟಿಲ್ಲದವರು ಹಾಡಿದು~
ದನ್ನು ಬರೆದುಕೊಳ್ಳುವಾಗಲೇ ತಮಗೆ ತಿಳಿಯದೇ ತಿದ್ದುಗಳನ್ನು ಮಾಡಿಬಿಟ್ಟಿ~
ರುವುದು ಸಾಧ್ಯವಿದೆ. ಇಂಥ ಸಂದರ್ಭಗಳನ್ನು ಸಾಕಷ್ಟು ಉದಾಹರಿಸುವುದು
ಕಷ್ಟವಲ್ಲ. ಸದ್ಯಕ್ಕೆ ನಾವು ಆ ವಿವರಗಳಿಗೆ ಹೋಗುವುದಿಲ್ಲ. ಇದ್ದುದರಲ್ಲಿ
ಸಂಪಾದನೆ ಮಾಡದಿದ್ದರೂ ಸರಿ ಹಾಡಿದುದನ್ನು ಆ ರಚನೆಗಳ ರೂಪ ಎಷ್ಟೇ
ಭ್ರಷ್ಟವಾಗಿರಲಿ, ದೋಷಪೂರ್ಣವಾಗಿರಲಿ - ಅವನ್ನು ಹಾಗೆಹಾಗೆಯೇ,
ಟೇಪ್್ರೆಕಾರ್ಡಿನಂತೆ ಮುಂದಿರಿಸುವುದೇ ಲೇಸು ಎನಿಸುತ್ತದೆ. ಜನಪದಸಾಹಿತ್ಯ~
ವನ್ನು ಸಂಪಾದಿಸುವುದು ಹೇಗೆ? - ಎಂಬುದರ ವಿಷಯವಾಗಿ ಕನ್ನಡದಲ್ಲಿ
ಇದುವರೆಗೂ ಏನೂ ಕೆಲಸವಾಗದಿರುವುದರಿಂದ ಆ ಬಗ್ಗೆ ಇಲ್ಲಿ ಸಂಕ್ಷೇಪವಾಗಿ
ಪ್ರಸ್ತಾಪಿಸಲಾಗುತ್ತಿದೆ. "ಇಂದು ಲಕ್ಷಣ ಮತ್ತು ವಿಷಯಗಳೆರಡರಲ್ಲೂ ಭ್ರಷ್ಟ~
ಗೊಂಡ ತ್ರಿಪದಿಗಳೇ ನಮ್ಮ ಜನಪದ ಸಾಹಿತ್ಯದ ಶೇಕಡ 99 ರಷ್ಟು ಆಗಿದ್ದರೆ,
ಆಶ್ಚರ್ಯವಿಲ್ಲ" ಎಂಬುದು ನೂರಕ್ಕೆ ನೂರು ನಿಜ. ಅವನ್ನು ಸರಿಯಾಗಿ
ಸಂಪಾದಿಸಬೇಕು ಎಂಬ ಮಾತುಗಳೇನೋ ಕೇಳಿ ಬರುತ್ತಿರುತ್ತದೆ. ಆದರೆ
ಪ್ರಯತ್ನಗಳು ಮಾತ್ರ ಸೊನ್ನೆ.

Page ಼ಿೌ

ಸಂಗ್ರಹ ಸಂಕಲನಗಳಿಗಿಂತ ಭಿನ್ನವಾದುದು ಸಂಪಾದನೆ. ಪ್ರಾಚೀನ
ಗ್ರಂಥಗಳನ್ನು ಯಾವ ರೀತಿ ಸಂಪಾದಿಸಬೇಕು ಎಂಬುದನ್ನು ಗ್ರಂಥ ಸಂಪಾ~
ದನಾಶಾಸ್ತ್ರ ಹೇಳುತ್ತದೆ. ಜನಪದ ಸಾಹಿತ್ಯ ಸಂಪಾದನೆಯಲ್ಲೂ ಖಚಿತ
ವಿಧಾನಗಳು, ತತ್ವಗಳು ಇವೆ. ಪ್ರಾಚೀನ ಗ್ರಂಥವೊಂದನ್ನು ಸಂಪಾದಿಸುವಾಗ
ಅದರ ಬೇರೆ ಬೇರೆ ಕಾಲಗಳಲ್ಲಿ ಬರೆಯಲಾದ ಬೇರೆ ಬೇರೆ ಪ್ರದೇಶಗಳ ಪ್ರತಿಗಳ~
ನ್ನಿಟ್ಟುಕೊಂಡು, ಅವುಗಳ ಭಿನ್ನಪಾಠಗಳನ್ನು ಗುರುತಿಸಿಕೊಂಡು, ಸಂಪ್ರ~
ದಾಯ ಭಿನ್ನತೆಯಿದ್ದರೆ ಅದನ್ನೂ ಗಮನಿಸಿ, ಹಲವು ಪ್ರಮಾಣಗಳ ಆಧಾರದ
ಮೇಲೆ ಉಚಿತವೆನಿಸಬಹುದಾದ ಪಾಠವನ್ನು ತತ್ಕಾಲಕ್ಕೆ ನಿರ್ಣಯಿಸಿ, ತೀರ
ಅಗತ್ಯವೆನಿಸಿದಾಗ ಕಂಸಗಳೊಳಗೆ ತಿದ್ದುಪಾಟು ಸೂಚಿಸಿ, ತಿಳಿಯದಾಗ ಪ್ರಶ್ನೆ~
ಯಿಟ್ಟು, ಅರ್ಥವೇ ಆಗದಾಗ ಹಾಗೇ ಉಳಿಸಿ ಕವಿಗೆ ತೀರ ಹತ್ತಿರವಿರಬಹು~
ದಾದ ಕೃತಿಯ ರೂಪವನ್ನು ಸಿದ್ಧಪಡಿಸುವುದು ಸಂಪಾದಕನ ಹೊಣೆಯಾಗಿರು~
ತ್ತದೆ. ಅದಕ್ಕೆ ಬೇಕಾದ ಪರಿಶ್ರಮಗಳನ್ನು ಅರ್ಹತೆಗಳನ್ನು ಅವನು ಪಡೆದಿರ~
ಬೇಕಾಗುತ್ತದೆ. ಗ್ರಂಥ ಸಂಪಾದನೆಯಲ್ಲಿರುವಂತೆ ಜನಪದ ಸಾಹಿತ್ಯ ಸಂಪಾ~
ದನೆಯಲ್ಲೂ ಸಮಸ್ಯೆಗಳಿಲ್ಲವೆ? ಒಂದು ಶಾಸ್ತ್ರೀಯ ಮಾರ್ಗವಿಲ್ಲವೆ? ಇದಕ್ಕೆ
ಯಾವ ಅರ್ಹತೆಗಳೂ ಅಗತ್ಯವಿಲ್ಲವೆ? ಹೇಗೋ ಸಂಗ್ರಹ ಮಾಡಿ ತೋಚಿ~
ದೊಂದು ಸಿಕ್ಕಿದೊಂದು ಎಂಥದೋ ರೂಪವನ್ನು ಹೇಗೋ ಅಚ್ಚಿಸಿಬಿಟ್ಟರೆ ಕೈ
ತೊಳೆದುಕೊಂಡಂತಾಗುತ್ತದೆಯೇ? ಇದೊಂದು ಶಾಸ್ತ್ರೀಯ ಕಾರ್ಯವಾಗ~
ಬೇಡವೆ?

ಅಳಿದು ಹೋಗುತ್ತಿರುವ ಈ ಸಾಹಿತ್ಯವನ಼್ನು ಹೇಗಾದರೂ ಉಳಿಸಿಬಿಟ್ಟರೆ
ಸಾಕು ಎನ್ನುವ ತವಕದಲ್ಲಿ ಈ ಯೋಚನೆ ನಮಗೆ ಬರಲಿಲ್ಲ. ಹೆಚ್ಚಿನ ಜನಪದ
ಸಾಹಿತ್ಯ ಪ್ರಕಟಣೆಗಳಲ್ಲಿನ ಮುನ್ನುಡಿ ಪೀಠಿಕೆ ಇತ್ಯಾದಿಗಳಲ್ಲಿ ಸಂಗ್ರಾಹಕರು
ಅಲೆದ ಅಲೆತ, ನಿದ್ರೆಕೆಟ್ಟರಾತ್ರಿಗಳು, ಊಟಬಿಟ್ಟ ದಿನಗಳು, ಮಳೆಯಲ್ಲಿ ನೆನೆ~
ದುದು, ಬಿಸಿಲಲ್ಲಿ ಒಣಗಿದುದು, ಹಾಡಿಸಲು ಕೊಟ್ಟ ಹಣದ ವಿವರ ಹೀಗೆ
ಸಂಗ್ರಹಿಸುವಲ್ಲಿನ ಸ್ವಾಭಾವಿಕವಾದ ಲೌಕಿಕ ಕಷ್ಟಕಾರ್ಪಣ್ಯಗಳು ಇತ್ಯಾದಿ~
ಯಾದ ದಿನಚರಿಗಳ ಮೊರೆಗಳ ಮೂಲಕ ಅನುಕಂಪೆಯನ್ನು ಬೇಡತಕ್ಕ~
ವಾಗಿವೆಯೇ ಹೊರತು ವೇಗವಾಗಿ ಹಾಡಿದ ಹಾಡನ್ನು ಬರೆದುಕೊಳ್ಳುವಲ್ಲಿ
ಬಿಟ್ಟವೆಷ್ಟು? ಅರ್ಥವಾಗದವೆಷ್ಟು? ರೂಪ ಕೆಡಿಸಿದವೆಷ್ಟು? ಮಧ್ಯೆ ಸೇರಿಸಿದ್ದೆಷ್ಟು?
Page ಼ಿೌಸ
ಸಂಗ್ರಹದ ರೀತಿಯೇನು? ಒಬ್ಬರಿಂದಲೋ ಇಬ್ಬರಿಂದಲೋ ಒಂದೇ
ಹಾಡನ್ನು ಹಾಡಿಸಿದ ಬಾರಿಗಳೆಷ್ಟು? ಅದನ಼್ನು ಹಾಡಿದವರ ನೆಲೆಯೇನು?
ಹಿನ್ನೆಲೆಯೇನು? ಇತ್ಯಾದಿ ವಿವರಗಳು ಅಷ್ಟಾಗಿ ಇರುವುದಿಲ್ಲ. ಛಂದಸ್ಸಿನ
ಅಜ್ಞಾನ, ಆ ಪ್ರದೇಶದ ಭಾಷೆಯ ಅಜ್ಞಾನ, ಒಂದು ಆಕರ ಸಾಕೆಂಬ ಅವಸರ
(ಈ ಅವಸರ ಇಲ್ಲಿನ ಕೆಲ ಕೃತಿಗಳ ವಿಷಯದಲ್ಲೂ ವಹಿಸಿದ್ದೇನೆ ಎಂಬುದನ್ನು
ಒಪ್ಪಿಕೊಳ್ಳುತ್ತೇನೆ. ನಾನು ಹೇಳುವ ನೀತಿಗೆ ನಾನೂ ಹೊರಗಲ್ಲ.) ಒಟ್ಟಿನಲ್ಲಿ
ಜನಪದ ಸಾಹಿತ್ಯದ ಲಕ್ಷಣ ಮತ್ತು ಅದರ ಇಂಗಿತಗಳನ್ನು, ಅದಕ್ಕವಶ್ಯವಾದ
ಸಾಧನೆಯನ್ನು ಅರಿಯದೆ ಹೋಗಿ ವಿಕಾರಗೊಂಡ ಸಂಗ್ರಹಗಳೇ ಹೆಚ್ಚಾಗಿ
ದೊರೆಯುವಂತಾಯಿತು.

ವಿಶಿಷ್ಟ ಕಾರ್ಯ

ಗ್ರಂಥ ಸಾಹಿತ್ಯದಲ್ಲಿ ಪ್ರತಿಕಾರ ಬೇರೆ, ಸಂಗ್ರಾಹಕರೂ ಸಂಪಾದಕರೂ
ಬೇಕಾದರೆ ಒಬ್ಬರೇ ಆಗಬಹುದು. ಜನಪದ ಸಾಹಿತ್ಯದಲ್ಲಿ ಬಹುಮಟ್ಟಿಗೆ
ಸಂಗ್ರಾಹಕನೇ ಪ್ರತಿಕಾರನೂ ಆಗುವುದರಿಂದ ಹೆಚ್ಚಿನ ಎಚ್ಚರ ಅಗತ್ಯವಾಗು~
ತ್ತದೆ. ಸಂಪಾದನಾ ಶಾಸ್ತ್ರದ ಪರಿಚಯವಿಲ್ಲದ ಸಂಗ್ರಾಹಕರಿಂದ ಪ್ರತಿ
ಮಾಡುವ ಕಾಱ್ಯ ತೀರ ಕೆಟ್ಟುಹೋಗಬಹುದು. ಬರೆಹದ ರೂಪಕ್ಕಿಳಿದ ಮೇಲೆ
ಮಾರ್ಪಾಡುಗಳಿಗೆ ಹೆಚ್ಚಿನ ಅವಕಾಶಗಳು ಸಹಜವಾಗಿಯೇ ಇರುವುದಿಲ್ಲ.
ಒಂದು `ಮೂಲ'ವು ಒಂದು ಆಕಾರದಲ್ಲಿ ಖಚಿತಗೊಂಡುಬಿಡುತ್ತದೆ. ಆದರೂ
ಕುಮಾರವ್ಯಾಸನ ಭಾರತದಂಥ ಕೃತಿಗಳಲ್ಲಿನ ಭಿನ್ನಪಾಠಗಳ, ಪ್ರಕ್ಷೇಪ
ವಿಕ್ಷೇಪಗಳ ರಾಶಿ ದಿಗ್ಭ್ರಮೆಗೊಳಿಸತಕ್ಕದ್ದು. ಪಾಠನಿರ್ಣಯ ಕಷ್ಟದ
ಕಾಱ್ಯ. ಬರೆಹ ರೂಪದಲ್ಲೇ ಹೀಗಿರುವಾಗ ಬಾಯಿಂದ ಬಾಯಿಗೆ ಹರಿದುಳಿದು
ಬರುವ, ವ್ಯಕ್ತಿ ವ್೟ಕ್ತಿಗೂ ಭಿನ್ನವಾಗುವ, ಒಬ್ಬ ವ್ಯಕ್ತಿಯಲ್ಲೇ ಕಾಲದಿಂದ
ಕಾಲಕ್ಕೆ ಭಿನ್ನರೂಪ ಪಡೆಯುವ ಜನಪದ ಸಾಹಿತ್ಯದಲ್ಲಿ ಖಚಿತತೆ ಎಷ್ಟು
ಮಟ್ಟಿನದು ಎಂಬುದನ್ನು ಯೋಚಿಸಬಹುದು. ವೇದದ ಪಾಠದ ಖಚಿತತೆ~
ಯಲ್ಲಿ ವಹಿಸಿದ ಅಕ್ಷರ ಪಾವಿತ್ರ್ಯದ ಪಾತ್ರ ಇಲ್ಲದೆ ಜನಪದವೇದ ಪ್ರಕ್ಷೇಪ,
ಲೋಪ, ವ್ಯತ್ಯಯಗಳ ಅತಿ ಗೊಂದಲದಿಂದ ಹೆಚ್ಚು ವಿರೂಪಕ್ಕೆ ಅವಕಾಶ~
ವಾಯಿತು. ಜನಪದ ಸಾಹಿತ್ಯ ಸಂಪಾದನೆ ಗ್ರಂಥ ಸಂಪಾದನೆಗಿಂತ ವಿಶಿಷ್ಟ,
Page ಼ಿೌಸಸ
ದುಸ್ತರ. ಹಳೆಗನ್ನಡ ಕಾವ್ಯ ಸಂಪಾದನೆಯಲ್ಲಿ ಆಗ ಶಕಟರೇಫವಿತ್ತು. ಇಂಥಿಂಥ
ಪ್ರತ್ಯಯಗಳು ಈ ರೂಪದಲ್ಲಿರತಕ್ಕುದು - ಎಂಬ ನಿಯಮಗಳನ್ನು ಸಿದ್ಧ
ವ್ಯಾಕರಣಗಳೂ ನೀಡಿ ಸಹಾಯ ಮಾಡುತ್ತವೆ. ಜನಪದ ಸಂಪಾದನೆಯಲ್ಲಿ
ಅವನ್ನೆಲ್ಲ ಸ್ವತಃ ಕಂಡುಕೊಳ್ಳಬೇಕಾಗುತ್ತದೆ.

ಅವಶ್ಯ ಅರ್ಹತೆಗಳು

ಜನಪದ ಸಾಹಿತ್ಯ ಸಂಪಾದನೆಗೆ ಕೆಲವೊಂದು ವಿಶೇಷ ಅರ್ಹತೆ ಬೇಕು.
ವಿಶೇಷ ಶ್ರಮವಹಿಸಬೇಕು. ಮೊದಲನೆಯದಾಗಿ ಒಂದು ಕೃತಿಯನ್ನು ಸಂಪಾ~
ದಿಸತಕ್ಕವನಿಗೆ ಆ ಪ್ರದೇಶದ ಭಾಷಾವೈಶಿಷ್ಟ್ಯ ಚೆನ್ನಾಗಿ ತಿಳಿದಿರಬೇಕು.
ಕವಿಯ ಹೃದಯವನ್ನು ಅನುಭವಿಸಿ, ಆ ಅನುಭವದ ನೇರಕ್ಕೆ ಉಚಿತಾನುಚಿತ~
ಗಳನ್ನು ವಿಮರ್ಶಿಸುವ ಶಕ್ತಿ ಬೇಕು. ಜನಪದ ಮನಶ್ಯಾಸ್ತ್ರವನ್ನು ರೂಪಿಸಿ~
ಕೊಳ್ಳಬೇಕು. ಅಲ್ಲಿನ ಸಾಮಾಜಿಕ ಮೌಲ್ಯಗಳ ಅರಿವು ಬೇಕು. ಮಾನವ~
ಶಾಸ್ತ್ರ, ಪುರಾಣ, ತಂತ್ರ ಆಚಾರ ಇತಿಹಾಸಗಳ ಹಿನ್ನೆಲೆ ಅವಶ್ಯ. ಛಂದಸ್ಸಿನ
ಪರಿಜ್ಞಾನ ತೀರಾ ಮುಖ್ಯ, ಮಿಗಿಲಾಗಿ ಕೃತಿಯು ಯಾವೊಂದು ಸಾಮಾಜಿಕ
ವರ್ಗಕ್ಕೆ ಸೇರಿದ್ದೋ ಆ ವರ್ಗದ ಆಚಾರ ವಿಚಾರಗಳನ್ನು ನಂಬಿಕೆ ಹಂಬಲ~
ಗಳನ್ನು, ಹಬ್ಬ ಹರಿದಿನಗಳ ಆಚರಣೆಗಳನ್ನು, ಆ ವರ್ಗದ ಮೇಲಿನ ಸಾಂಸ~
ರ್ಗಿಕ ಪ್ರಭಾವಗಳನ್ನು, ಒಟ್ಟಿನಲ್ಲಿ ಆ ಒಂದು ವರ್ಗದ ಜೀವನ ವಿಧಾನದ
ಆಂತರ್ಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಆಗಲೇ ಸಂಪಾದನೆಗೆ,
ವಿಮರ್ಶೆಗೆ ಹೆಚ್ಚಿನ ಪೂರ್ಣತೆಯೊದಗಲು ಸಹಾಯವಾಗುತ್ತದೆ.

ಸಂಪಾದನೆಯ ದಾರಿ

ಒಂದು ಕೃತಿಯನ್ನು ಒಂದು ಪ್ರದೇಶದಲ್ಲಿ ಮೂವರು ನಾಲ್ವರಿಂದ
ಹೇಳಿಸಬೇಕು. ಕೊನೆಯ ಪಕ್ಷ ಎರಡು ಆಕರಗಳಾದರೂ ಬೇಕು. ಈ
ಒಂದೊಂದು ಆಕರವೂ ಒಂದೊಂದು ಪ್ರತಿಗೆ ಸಮನೆನಿಸುತ್ತದೆ. ಇವಿಷ್ಟರಿಂದ
ಒಂದು ರೂಪವನ್ನು ಮೂಲಕ್ಕೆ ಹತ್ತಿರವಿರುವಂತೆ ಪರಿಷ್ಕಾರವಾಗಿ ಸಿದ್ಧ~
ಪಡಿಸಬೇಕು. ಇಲ್ಲಿ ಮೂಲವೆಂದರೆ ಒಬ್ಬ ಕವಿಯ ಕೃತಿಯಾಗಿರುವುದು
ಎಂದರ್ಥವಲ್ಲ. ಆ ಪ್ರದೇಶಕ್ಕೆ ಎಲ್ಲ ದೃಷ್ಟಿಗಳಿಂದಲೂ ಉಚಿತವಾಗುವಂತೆ
Page ಼ಿೌಸಸಸ
ಸ್ವಯಂಪೂರ್ಣತೆಯುಳ್ಳ ರೂಪ ಎಂದುಕೊಳ್ಳಬಹುದು. ಭಿನ್ನ ಆಕರಗಳ
ಭಿನ್ನ ಪಾಠಗಳನ್ನು ಗಮನಕ್ಕೆ ತರಬೇಕು. ಭಿನ್ನ ಪ್ರದೇಶದ ಭಿನ್ನ ಸಂಪ್ರ~
ದಾಯವೇ ಇದ್ದರೆ ಅದನ್ನು ಸ್ಪಷ್ಟಪಡಿಸಬೇಕು. ತಿದ್ದುಪಡಿಗಳು ಅನಿವಾ~
ರ್ಯತೆಯನ್ನೂ, ಸಮರ್ಥನೆಯನ್ನೂ ತಾನಾಗಿ ವ್ಯಕ್ತಪಡಿಸುವಂತಿರಬೇಕು.
ಸಮರ್ಥನೆ ಒದಗದೆ ಉಚಿತವಾಗಿ ಕಂಡುಬಂದರೆ ಪ್ರಶ್ನಾರ್ಥಕ ಚಿಹ್ನೆಯಿಡ~
ಬೇಕು. ಸಂದಿಗ್ಧಗಳನ್ನು ಮುಂದಿನ ಸಾಧ್ಯ ಪರಿಷ್ಕಾರಕ್ಕಾಗಿ ಹಾಗೆಯೇ
ಉಳಿಸಬೇಕು. ವಿವಿಧ ಪ್ರದೇಶಗಳಿಂದಾಗಿರುವ ಸಂಗ್ರಹವನ್ನು ನಕಾಶೆಯ
ಮೂಲಕ ವಿಶದಪಡಿಸಬಹುದು. ಸಂಗ್ರಹದ ಕಾಲದ ಜೊತೆಗೆ ಕೃತಿ ಹೇಳಿದವರ
ವಯಸ್ಸು, ಅವರ ಸಾಮಾಜಿಕ ಅಂತಸ್ತುಗಳ ವಿವರಗಳನ್ನು ಹೇಳಬೇಕು.
ಕೃತಿಗೆ ಸಂಬಂಧಿಸಿದ ವಿವರಗಳನ್ನೆಲ್ಲಾ ಒದಗಿಸಬೇಕು. ಕೃತಿಯ ಅಂತಸ್ಸಂ~
ಘಟನೆಯ ಆಂತರಿಕ ಪ್ರಮಾಣದಿಂದ ಸಂಪಾದನೆಗೆ ಹೆಚ್ಚಿನ ನೆರವಿದೆ. ಹೀಗೆ
ವೈಜ್ಞಾನಿಕವಾಗಿ ನಡೆಯಬೇಕಾದುದು ಜನಪದ ಸಾಹಿತ್ಯ ಸಂಪಾದನೆ.

Page lxxiii

ಸಂಕಲಿತ ಕೃತಿಗಳ ವಿಚಾರವಾಗಿ

ಆಕರ : `ಈಶ್ವರದೇವರು ಪಟ್ಟೆ ಕೊಚ್ಚಿದ ಹಾಡು' ಎಂಬುದು
ಮೊದಲು ನನಗೆ ಸಿಕ್ಕಿದುದು 1953 ರಲ್ಲಿ. 65 ವರ್ಷದ ಗಂಗಮ್ಮ ಎಂಬು~
ವರು ಹಾಡಿದ್ದು. ಗಣಪತಿಯ ಹಬ್ಬದ ದಿನ ಹಾಡಿದರೆ ಪುಣ್ಯ ಬರುತ್ತದೆ
ಎಂದು ಅವರ ನಂಬಿಕೆ. ಎರಡು ಬಾರಿ ಹಾಡಿಸಿದ್ದೇನೆ. ಅ಩ಂತರ, 1966 ರ~
ವರೆಗೂ ಇದರ ಇನ್ನೊಂದು ಆಕರ ಸಿಕ್ಕಲಿಲ್ಲ.

ಈ ಹಾಡು, ಜೊತೆಗೆ ಗೋವಿನ ಹಾಡು, ಗೌರಮ್ಮ ಅಪ್ಪನ ಮನೆಗೆ
ಹೋದ ಹಾಡು, ವಾಮನ ಹುಟ್ಟಿದ ಹಾಡು, ಸಂಕ್ಷೇಪ ರಾಮಾಯಣ ಮತ್ತು
ಮದುವೆಯ ಹಾಡುಗಳಲ್ಲಿ `ದಿಬ್ಬಣ ಹೊಕ್ಕ ಹಾಡು, ಉಡುಗೊರೆ ಕೊಟ್ಟ
ಹಾಡು, ಹರಸಿದ ಹಾಡು, ದೇವರ ದೇವನೆ ದೇವ ಶ್ರೀರಾಮಾ, ದಶರಥರಾಯ
ಮನೆಯ ಮಂತ್ರಿ ಪುರುಷರು - ಇವಿಷ್ಟು ನನ್ನ ಅಜ್ಜಿ (ವರ್ಷ 75) ಸೀತಮ್ಮ~
ನವರಿಂದ ದೊರಕಿದ್ದು, ಇವೆಲ್ಲವನ್ನೂ ಒಮ್ಮೆ ಹಾಡಿಸಿದ್ದೇನೆ.

ಉಳಿದುವೆಲ್ಲಾ ನನ್ನ ತಂಗಿಯರಾದ ಚಿ। ಸೌ। ರೇವತಿ, ಚಿ। ಸೌ।
ಲಲಿತ, ನನ್ನ ತಾಯಿ ಸೌ। ಪದ್ಮಾವತಮ್ಮ ಮತ್ತು ನನ್ನ ಚಿಕ್ಕಮ್ಮ ಸೌ
ಗಿರಿಜಮ್ಮ ಇವರಿಂದ ಲಭಿಸಿದುವು.

ಇಲ್ಲಿನ ಮದುವೆ ಹಾಡುಗಳಿಗೆ ಸಂಬಂಧಿಸಿದಂತೆ ಭಿನ್ನ ಆಕರಗಳು
ದೊರೆಯುವ ಸಾಧ್ಯತೆ ಇದ್ದರೂ ವೈಯುಕ್ತಿಕ ಅನಾನುಕೂಲತೆಗಳಿಂದ, ನಾನು
ಆ ಪ್ರದೇಶದಲ್ಲಿ ಹೆಚ್ಚು ಇರಲಾಗದ್ದರಿಂದ ಸಾಧ್ಯವಾಗಲಿಲ್ಲ. ಇದರಲ್ಲೂ ಹರ~
ಸಿದ ಹಾಡು, ದೇವರ ದೇವನೆ..., ದಶರಥರಾಯ - ಮೊದಲಾದವು ತೀರ
ಅಪರೂಪದವು, ಹಿಂದಿನ ಹಾಡುಗಳು. ಈಚಿನ ಸಿನಿಮಾ ಹಾಡುಗಳ
ಪ್ರಭಾವವೂ ಕಾಣತೊಡಗಿದ ಮೇಲೆ ಮತ್ತಿನ ಸಂಗ್ರಹದಲ್ಲಿ ಆಸಕ್ತಿ ಕಳೆದು~
ಕೊಂಡೆ.

ನನಗೆ ಮುಖ್ಯವಾದ ಗಮನವಿದ್ದುದು ಮೊದಲ ಮೂರು ಕಥನ ಗೀತ~
ಗಳು ಮತ್ತು ಅಜ್ಞಾತರ ಮೂರು ಕೃತಿಗಳ ಕಡೆಗೆ. ಅದರಲ್ಲೂ ನನ್ನ ಪಕ್ಷಪಾತ
ಈಶ್ವರ ದೇವರು... ಮತ್ತು ಗೋವಿನ ಹಾಡಿನ ಕಡೆಗೆ. ಗೋವಿನ
Page lxxiv
ಹಾಡು ಇನ್ನೂ ಚೆನ್ನಾದ ರೂಪದಲ್ಲಿ ಸಿಗುವಂತಾದೀತೇನೋ ಎಂಬ ಆಸೆ~
ಯೊಂದು ಕಾರಣ. ಸಂಪಾದನೆಯ ಮಾದರಿಗೆ ಈಶ್ವರದೇವರು... ಹಾಡಿನ
ಇನ್ನೊಂದೆರಡು ರೂಪಗಳು ಸಿಕ್ಕಿದ್ದರೆ ಚೆನ್ನಾಗಿತ್ತು ಎಂಬುದು ಒಂದು ಕಾರಣ.
ಈ ಬಗ್ಗೆ, ನಾನು ಆ ಸ್ಥಳದಲ್ಲಿದ್ದಾಗ ತುಂಬಾ ಜನರನ್ನು ವಿಚಾರಿಸಿದೆ. ಕಿರಿಯ~
ರಿಂದ, ಹರೆಯದವರಿಂದ ಪ್ರಯೋಜನವಿಲ್ಲವೆಂದು ಗೊತ್ತಾಗಿ ನನ್ನ ಅಜ್ಜಿಯ
ವಯಸ್ಸಿನವರನ್ನೇ ಹುಡುಕಿ ಹುಡುಕಿ ವಿಚಾರಿಸಿದೆ. ಕೊನೆಗೆ ನನ್ನ ಸ್ನೇಹಿತರಿಗೆ
ಬರೆದು ನನ್ನ ಕೆಲಸವನ್ನು ವಹಿಸಿದೆ. ಆದರೆ, ಈವರೆಗೂ ಈ ಹಾಡುಗಳಿಗೆ
ಇನ್ನೊಂದೇ ಆಕರವೂ ಸಿಗಲಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.
ಎಷ್ಟೋ ಸಂದರ್ಭಗಳಲ್ಲಿ ಗೋವಿನ ಹಾಡು ತ್ರಿಪದಿರೂಪದಲ್ಲಿರುವ ವಿಷಯವೇ
ಆಶ್ಚರ್ಯವುಂಟು ಮಾಡುತ್ತಿತ್ತು. ಹೀಗಾಗಿ, ನಿರುಪಾಯನಾಗಿ ಇರುವಷ್ಟನ್ನೇ
ಮುಂದಿಡಬೇಕಾಗಿದೆ. ಈಶ್ವರ ದೇವರು... ಇನ್ನೊಂದು ಆಕರ ಸಿಗ~
ಬೇಕಾದರೆ ಇಷ್ಟು ಕಾಲವಾಯಿತು. ಉಳಿದುದಕ್ಕೂ ಅಷ್ಟೇ ಕಾಲ ಬೇಕೇನೊ!
ಅಥವಾ ಅಷ್ಟರೊಳಗೆ ಮಾಯವಾಗಿಬಿಡುತ್ತದೊ! ಗೋವಿನ ಹಾಡಿನಂಥ
ಹಾಡಿಗೂ ಈ ಸ್ಥಿತಿ ಬರಬೇಕಾದರೆ ಒಳ್ಳೆಯವು ಉಳಿಯುತ್ತವೆಯೇ ಎಂದು
ಸಂದೇಹವಾಗುತ್ತದೆ.

ಪ್ರದೇಶ : ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿಗೆ ಸೇರಿದ
`ಕಾರ್ಕಡ' ಎಂಬ ನನ್ನ ಹುಟ್ಟೂರಿಗೆ ಸೇರಿದ ಹಾಡುಗಳು ಇವು. ಕೋಟದ
ಹದಿನಾಲ್ಕು ಗ್ರಾಮಗಳಲ್ಲಿ ಇದೂ ಒಂದು ಎಂದು ಹೇಳುತ್ತಾರೆ. ಇಲ್ಲಿನ ಕಾಗೆ~
ಗಳಿಗೆ ತುಂಬಾ ಧೈರ್ಯ. ಕೋಟದೂರ ಕಾಗೆಗಳು ಎಂದು ಈ ಜನರನ್ನು
ಹಾಸ್ಯಮಾಡುವುದುಂಟು. ಕುಂದಾಪುರಕ್ಕೆ ಸುಮಾರು ಎಂಟು ಹತ್ತು ಮೈಲಿ
ದೂರ.

ನೆಲೆ-ಹಿನ್ನೆಲೆ : ಈ ಹಾಡುಗಳನ್ನು ಹಾಡಿದವರು ಗುರುನರಸಿಂಹನ
ಭಕ್ತರಾದ ಕೋಟಿ ಬ್ರಾಹ್ಮಣ ಸ್ತ್ರೀಯರು. ಈ ಪ್ರದೇಶದಲ್ಲಿ ಕೋಟ
ಬ್ರಾಹ್ಮಣ(ಸ್ಮಾರ್ತ)ರೂ, ಸ್ವಲ್ಪ ಶಿವಳ್ಳಿ ಹವ್ಯಕರೂ, ಗೌಡ ಸಾರಸ್ವತ
(ಕೊಂಕಣಿಗ)ರೂ, ಇದ್ದಾರೆ. ವ್ಯವಸಾಯ ಮಾಡಿಸುವುದು ಬ್ರಾಹ್ಮಣರ
ಮುಖ್ಯ ಕಸುಬು. ವ್ಯಾಪಾರಗಳಲ್ಲಿ ಗೌಡಸಾರಸ್ವತರದು ಸಹಜವಾಗಿಯೇ
ಮೇಲುಗೈ. ಬ್ರಾಹ್ಮಣೇತರರಲ್ಲಿ ವ್ಯವಸಾಯ ಮಾಡುವವರೂ, ಮೀನು
Page lxxv
ಹಿಡಿಯತಕ್ಕವರೂ ಇದ್ದಾರೆ. `ಕೂಸಾಳು' ಎಂಬ ಶೂದ್ರರಿಗಿಂತ ಕಡಿಮೆಯೆನ್ನ~
ಲಾದ ವರ್ಗವಿದು. ತೀರಾ ಹಿಂದುಳಿದ `ಕೊರಗರು' ಸ್ವಲ್ಪ ಇದ್ದಾರೆ. ಕುಂದಾ~
ಪುರದ ಕಡೆಗೆ ಹೋಗುತ್ತ ಕೊಂಕಣಿಯೂ, ಉಡುಪಿಯ ಕಡೆ ಹೋಗುತ್ತ
ತುಳುವೂ ಹೆಚ್ಚುವಂತೆ ತೋರುತ್ತದೆ. ಕೋಟ ಬ್ರಾಹ್ಮಣರ ಮನೆಮಾತು
ತುಳು ಅಲ್ಲ, ಎಷ್ಟೋ ಮಂದಿಗೆ ತುಳು ಈಗಲೂ ಬರುವುದಿಲ್ಲ. ಕೋಟದವರ
ಮಾತು ಬೇರೆ, ಹವ್ಯಕರ ಮಾತು ಬೇರೆ. ಪ್ರಾಯಶಃ ಅಸ್ಪೃಶ್ಯತೆಯನ್ನು
ಹೆಚ್ಚಾಗಿ ಉಳಿಸಿಕೊಂಡು ಬಂದಿರುವ ಸ್ಥಳವೆಂದರೆ ಸಿಟ್ಟಾದಾರು. ಅದರ ಬದಲು
ಆಚಾರಗಳನ್ನು ತುಂಬಾ ಉಳಿಸಿಕೊಂಡು ಬಂದವರು ಎನ್ನೋಣ. ನಾನು
ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಕಾಲದ ಚಿತ್ರವನ್ನು ಕೊಡಬಯಸುತ್ತೇನೆ.
ಶಾಲೆಗೇ ಬೇರೆ ವಸ್ತ್ರ ಇಡಲಾಗುತ್ತಿತ್ತು. ಶಾಲೆಯಿಂದ ಹಿಂದಿರುಗಿದ ಕೂಡಲೇ
ಆ ವಸ್ತ್ರಗಳನ್ನು ಅದಕ್ಕೇ ಪ್ರತ್ಯೇಕವಾಗಿರುವ ಸ್ಥಳದಲ್ಲಿ ಪೂರ್ತಿ ಬಿಚ್ಚಿಡ~
ಬೇಕು. ಅನಂತರ ಬಾವಿಕಟ್ಟೆಗೆ ಹೋಗಿ ಕೈಕಾಲು ಮುಖ ತೊಳೆದು,
ಲಂಗೋಟಿ ಚಂಡಿ (ಒದ್ದೆ) ಮಾಡಿಕೊಂಡು ಅನಂತರ ಬೇರೆ ಬಟ್ಟೆ ತೊಡ~
ಬೇಕಾಗಿತ್ತು. ಉಪನಯನವಾಗುವವರೆಗೂ ಬ್ರಾಹ್ಮಣೇತರರ ಸ್ಪರ್ಶ ಅಷ್ಟು
ದೋಷವಾಗಿರಲಿಲ್ಲ. ಇವೆಲ್ಲ ಅಂದಿನ ಅಂದರೆ ಸುಮಾರು ಇಪ್ಪತ್ತುವರ್ಷಗಳ
ಹಿಂದಿನ ಮಾತು. ಈಗ ಸಾಕಷ್ಟು ಸುಧಾರಿಸಿದೆ. ನಮಗೆ ಇಲ್ಲಿ ಪ್ರಕೃತ~
ವಾದುದು ಪ್ರತ್ಯೇಕತೆಯಿಂದ ಆದ ಸಾಂಸ್ಕೃತಿಕವೇ ಮೊದಲಾದ ವಿಶಿಷ್ಟತೆಗಳ
ನಿರ್ಮಾಣವಾಗಿದೆ. ಹೀಗೆ ಪ್ರತ್ಯೇಕವಾದುದರಿಂದ ಆಡುಮಾತಿನಲ್ಲೂ
ಬ್ರಾಹ್ಮಣೇತರ ರೂಪಗಳು ಕಲ್ಪಿತವಾಗಿವೆ. ವರ್ಗೀಯ ಭಾಷಾಭೇದವನ್ನು
ಕಾಣಬಹುದಾಗಿದೆ. ಬ್ರಾಹ್ಮಣರು `ತಂಗಳು' ಎನ್ನಬಹುದು. ಆದರೆ `ಕೂಳು'
ಶಬ್ದ ನಾಚಿಕೆಗೇಡಿನದು. ಅದೇ ಇತರರು ಅಂಥ ಯಾವ ಸಂಕೋಚವೂ
ಇಲ್ಲದೆ `ಕೂಳು' ಶಬ್ದ ಬಳಸುತ್ತಾರೆ. ಈ ಸೂಕ್ಷ್ಮ ಭಿನ್ನತೆಯಲ್ಲದೆ ಸಂಸ್ಕೃತ
ಪ್ರಭಾವದಿಂದ ಬ್ರಾಹ್ಮಣರು ವಿಶೇಷವಾಗಿ `ಸಾಯಂಕಾಲ' ಎಂದರೆ ಇತರರು
ಅಚ್ಚಗನ್ನಡವಾದ `ಬೈಗು' ಬಳಸುತ್ತಾರೆ. ಇವರು `ಇಟ್ಟರೆ' ಅವರು `ಬೇತು'
ತ್ತಾರೆ. `ಹೊತ್ತಾರೆ' ಎಂಬಂತೆ ಇತರರಲ್ಲಿ `ಬೈಸಾರೆ' ಎಂಬ ಶಬ್ದವಿದೆ.
ಇವನ್ನೆಲ್ಲಾ ಇಲ್ಲಿ ವಿವರವಾಗಿ ಹೇಳಬೇಕಾದ್ದಿಲ್ಲ. ಇಲ್ಲಿ ಮಾತ್ರವಲ್ಲದೆ ತುಳುವಿ~
ನಲ್ಲೂ ಇದೇ ವರ್ಗೀಯಭಿನ್ನತೆ ಭಾಷೆಯ ವಿಷಯದಲ್ಲಿದೆ. ಇದ್ದಿ-ಇಜ್ಜಿ
Page lxxvi
(ಇಲ್ಲ), ಆನ-ಆಂಡ (ಆಯಿತೋ?), ಅಶನ-ಉಣಾಸ಼್। ಒಣಾಸ್।
ವಣಾಸ್ (ಊಟ) ಎಂಬಿವು. ಇನ್ನೊಂದು ಸ್ವಾರಸ್ಯದ ಉದಾಹರಣೆಯನ್ನು
ಇಲ್ಲಿ ಕೊಡಬಹುದೆನಿಸುತ್ತದೆ. ಕನ್ನಡದಲ್ಲಿ ವೇಡ>ಬೇಡ ಇದೆಯಲ್ಲ. ತಮಿಳಿ~
ನಲ್ಲಿ ವೇಂಡ ಎನ್ನುತ್ತಾರೆ. ಈಚೆಗೆ ಮೈಸೂರಿನಲ್ಲಿ ಬಸ್ಸಿನಲ್ಲಿ ಹಿಂದೆ ಕುಳಿತಿದ್ದ
ಗಂಡಸು ಮುಂದೆ ಕುಳಿತಿದ್ದು ಟಿಕೆಟ್ಟಿಗೆ ಹಣಕೊಡಹೋದ ಹೆಂಗುಸಿಗೆ
`ಬೋಂಡ ಬೋಂಡ' ಎಂದು ಕೂಗಿ ಹೇಳಿದ. ಅದು `ಹೋಲ್ಡಾನ್್'ನಂತೆ ಗದ್ದಲ~
ದಲ್ಲಿ ಕೇಳಿಸಿ ಯಾರೋ ಬೆಲ್ಲು ಎಳೆದರು, ಬಸ್ಸು ನಿಂತಿತು. ಬೋಂಡ ಎಂದರೆ
(ಕೊಡಗು) ಬೇಡ (ಕೊಡಬೇಡ) ಎಂದರ್ಥ. ಇದೇ ತುಳುವಿನಲ್ಲಿ ಬೋಡು
ಬೊಡ್ಚಿ ರೂಪ ತಳೆದಿದೆ. ಕೋಟದ ಕನ್ನಡದಲ್ಲಿ ಕೆಲವು ವಿಶಿಷ್ಟ ಪದಗಳು
ಹೆಚ್ಚು ಪ್ರಚುರವಾಗಿದೆ. ಕನ್ನಡದಲ್ಲಿ ಕಾಣು, ನೋಡು ಎಂಬ ಎರಡು
ಶಬ್ದಗಳಿವೆಯಷ್ಟೆ. ಅವನು ನೋಡುತ್ತಾನೆ, ಅದು ಕಾಣುತ್ತದೆ ಎನ್ನುತ್ತೇವೆ
ಮೈಸೂರಿನಲ್ಲಿ. ಅವನು ಕಾಣುತ್ತಾನೆ ಎಂದರೆ ಅವನು ನಮಗೆ ಗೋಚರ~
ವಾಗಿದ್ದಾನೆ ಎಂದರ್ಥ. ಆದರೆ ಕೋಟದಲ್ಲಿ `ಅವ ಕಾನ್ತ' (ಅವನು ಕಾಣು~
ತ್ತಾನೆ) ಎಂದರೆ ಅವನು ನೋಡುತ್ತಾನೆ ಎಂದೇ ಅರ್ಥ. ಅವನು ಗೋಚರ~
ವಾಗಿದ್ದಾನೆ ಎನ್ನುವ ಅರ್ಥ ಬರಬೇಕಾದರೆ `ಅವ ಕಾಣ್್ಸ್ತ' ಎನ್ನಬೇಕಾಗು~
ತ್ತದೆ. ಹಾಗೆಯೇ ಮುಂದೂಡು, ಹಿಂದೂಡು ಎಂಬ ಶಬ್ದ ಮೈಸೂರು ಕನ್ನಡ~
ದಲ್ಲಿವೆ. `ದೂಡು' ಎಂಬ ಶಬ್ದ ಸ್ವತಂತ್ರವಾಗಿ ಹೆಚ್ಚು ಪ್ರಚುರವಲ್ಲ. ಅದಕ್ಕೆ
ಪ್ರತಿಯಾಗಿ `ನೂಕು' ಎಂದೋ, `ತಳ್ಳು' ಎಂದೋ, `ದಬ್ಬು' ಎಂದೋ
ಹೇಳುತ್ತೇವೆ. ಆದರೆ ದೂಡು, ದೂಕುಗಳು ಕೋಟದ ಕನ್ನಡದಲ್ಲಿ ಹೆಚ್ಚು
ಪ್ರಚುರ. ನೀರ್-ದೀರ್ ಎಂಬಂತೆಯೇ ಇಲ್ಲಿನ ದೂಕು ನೂಕು ಎಂಬುದರಿಂ~
ದಲೇ ಬಂದುದು. ಇಲ್ಲಿನ ಕೃತಿಗಳಲ್ಲಿ ಬಂದಿರುವ ರೂಪಗಳಿಗೆ ಸಂಬಂಧಿಸಿದಂತೆ
ಭಾಷಾವಿಶ್ಲೇಷಣೆಯನ್ನು ಮುಂದೆ ಕೊಡುವುದರಿಂದ ಇಲ್ಲಿಗೆ ಇದನ್ನು ನಿಲ್ಲಿಸು~
ತ್ತೇವೆ.

ನಾಗಪೂಜೆ ದಕ್ಕೆಬಲಿಗಳಲ್ಲಿ ತುಂಬಾ ನಂಬಿಕೆಯಿಟ್ಟಿದ್ದಾರೆ. ಪ್ರತಿಯೊಂದು
ಮನೆಯಲ್ಲೂ ನಾಗಬನಗಳು ಸಾಮಾನ್ಯ. ಮನೆದೇವರುಗಳು ಬೇರೆ ಇರುತ್ತವೆ.
ಕಲ್ಲುಕುಟಿಕ, ಬೊಬ್ಬರ್ಯ ಮೊದಲಾದ ಭೂತಗಳನ್ನೂ ಪೂಜಿಸುತ್ತಾರೆ.
ಕಲ್ಲುಕುಟಿಕನಿಗೆ ಬ್ರಾಹ್ಮಣೇತರ ಪೂಜಾರಿ. ನಾಗ಼ನ ದರ್ಶನವನ್ನು ನಿಷ್ಠ
Page lxxvii
ಬ್ರಾಹ್ಮಣರು ಕೊಡುತ್ತಾರೆ. ಕಲ್ಲುಕುಟಿಕನ ದರ್ಶನ ಇತರರಿಂದ. ಇದೂ
ಬಹುತೇಕ ಕುಲಪರಂಪರೆಯಿಂದ ಬರುವುದು. ದರ್ಶನ ಎಂದರೆ ದೇವರು
ಮೈ ಮೇಲೆ ಅವತರಿಸಿ ಅನುಗ್ರಹಿಸುವುದು. ಜೈನಮೂಲವಿರಬಹುದಾದ
ಯಕ್ಷಿಣಿಯನ್ನೂ, ಇಲ್ಲಿ `ಜಕ್ಕಿಣಿ' ಎನ್ನುವರು, ನಂಬುವರು. ಮನೆದೇವರು
ಉದಾಹರಣೆಗೆ ನರಸಿಂಹನಾದರೂ ಮಾಧ್ವರೆನಿಸಬೇಕಾಗಿಲ್ಲ. ಪಂಥೀಯ
ಭಾವಾಂಧತೆ ಇಲ್ಲ. ಈ ವಿಶಾಲತೆಗೆ ಹತ್ತಿರದ ಮಾಧ್ವಪ್ರಭಾವ ಕಾರಣವಾಗಿರ~
ಬಹುದು. ಯಕ್ಷಗಾನ, ಬಯಲಾಟ, ಪುರಾಣಶ್ರವಣ - ಇತ್ಯಾದಿಗಳು ನಿತ್ಯ
ಜೀವನದ ಮೌಲ್ಯಗಳನ್ನು ತಿದ್ದಿವೆ. ಕುರಿತೋದದ ಪರಿಣತಿಗೆ ಇಲ್ಲಿ ಹೆಚ್ಚಿನ
ಅವಕಾಶವಾಗಿದೆ. ಈ ಸಂಕಲನದ ಮೊದಲ ಆರು ಹಾಡುಗಳ ರಚನೆಯ ಕಾಲ
ಸುಮಾರು ನೂರೈವತ್ತು ವರ್ಷಗಳ ಹಿಂದೆ ಹೋದೀತು. ಆಗ ಲೌಕಿಕ ಕಲೆ~
ಗಳನ್ನು ಈ ವರ್ಗದ ಜನರು ಗೌರವದಿಂದ ಕಾಣುತ್ತಿರಲಿಲ್ಲವೆಂದು ತೋರುತ್ತದೆ.
ಹಿಂದೆ ಸೂಚಿಸಿದಂತೆ ನನ್ನ ಅಜ್ಜಿ `ಒಂದು ಬಯಲಾಟ ನೋಡಿದರೆ ಒಂಬತ್ತು
ರಂಗಪೂಜೆಗಳನ್ನು ನೋಡಬೇಕು' ಎನ್ನುತ್ತಿದ್ದರು. ರಂಗಪೂಜೆ ಎಂದರೆ
ಹನುಮಂತನಿಗೆ ಮಾಡುವ ಒಂದು ವಿಶೇಷ ಪೂಜೆ. ಆ ಪೂಜೆಯ ಕೊನೆಯಲ್ಲಿ
ಪ್ರಸಾದ ವಿನಿಯೋಗಿಸುತ್ತಾರೆ. ನಾವು ಒಂಬತ್ತು ಬಯಲಾಟ ನೋಡಿ ಆ
ಸಿಹಿಯಾದ `ಪಂಚಕಜ್ಜಾಯ' ವೆಂಬ ಕಜ್ಜಾಯವಿಲ್ಲದ ಪ್ರಸಾದಕ್ಕಾಗಿ ಒಂದು
ರಂಗಪೂಜೆಗೆ ಹೋಗುತ್ತಿದ್ದೆವು. ಈಚೆಗೆ ಇಪ್ಪತ್ತೈದು ವರ್ಷಗಳ ಹಿಂದೆ
ಬ್ರಾಹ್ಮಣರು ಬಯಲಾಟದಲ್ಲಿ ಪಾತ್ರವಹಿಸುತ್ತಿದ್ದಿಲ್ಲ. ಅದು ಇತರರ ಪಾಲಾ~
ಗಿತ್ತು. ಭಾಗವತರು ಬ್ರಾಹ್ಮಣರಾಗುತ್ತಿದ್ದುದುಂಟು. ತೀರ ಅಪರೂಪಕ್ಕೆ
ಬ್ರಾಹ್ಮಣರು ಪಾತ್ರವಹಿಸುತ್ತಿದ್ದ ಒಂದೆರಡು ಉದಾಹರಣೆಗಳಿವೆ. ಅಂಥ
ಸಂದರ್ಭಗಳಲ್ಲಿ ಅದು ಗೌರವದ ಮಾತಾಗುತ್ತಿರಲಿಲ್ಲ. ಶ್ರೀಕಾರಂತರು ಆ
ಕ್ಷೇತ್ರಕ್ಕೆ ಬರುವ ಹೊತ್ತಿಗೆ ಅಲ್ಪ ಸ್ವಲ್ಪ ಪರಿವರ್ತನೆಗಳು ಮೌಲ್ಯಗಳ ವಿಷಯ~
ದಲ್ಲಿ ನಡೆದಿತ್ತು. ಈಗಲೂ ಮೂಗೆಳೆಯುವವರು ಕಡಿಮೆಯೇನಿಲ್ಲ. ಕಟ್ಟು~
ನಿಟ್ಟುಗಳು ಹೆಚ್ಚಾಗಿದ್ದ ಕಾಲದಲ್ಲಿ ಈ ಕೃತಿಗಳು ಹುಟ್ಟಿಕೊಂಡವೆಂಬುದು
ಮುಖ್ಯ. ಪುಣ್ಯಾರ್ಜನೆ, ಭಗವದನುಗ್ರಹ, ಒಳ್ಳೆಯ ನಡತೆ, ಸಂಪ್ರದಾಯ
ನಿಷ್ಠೆ ಇವೆಲ್ಲ ಇವರ ಹಂಬಲಗಳಾಗಿರುವುದರಿಂದ ಗೌರವ ಭಾವನೆ ಕೃತಿರಚನೆ~
ಯಲ್ಲಿ, ಹೇಳುವುದರಲ್ಲಿ, ಸ್ವಾಭಾವಿಕವಾಗಿ ಮೂಡಿದೆ. ಮುಟ್ಟಿನ ಹೆಣ್ಣು
ಯಾರ ಬಳಿಯೂ ಮಾತಾಡಬಾರದು, ಅವಳ ಬಳಿ ಯಾರೂ ಮಾತಾಡ~
ಬಾರದು, ಒಂದುವೇಳೆ ಅಗತ್ಯಬಿದ್ದರೆ ಹುಲ್ಲುಕಡ್ಡಿಯನ್ನು ಎದುರಿಗಿಟ್ಟು~
ಕೊಂಡು ಮಾತಾಡಬಹುದು - ಎಂಬಂಥ ಕಲ್ಪನೆಗಳಲ್ಲೂ ಈ ಕಟ್ಟುನಿಟ್ಟು
ಆಚಾರನಿಷ್ಠೆ ಕಾಣಿಸುತ್ತದೆ. ಸ್ನಾನ ಮಾಡದೆ ಬೆಳಗಿನಿಂದ ನೀರೂ ಕುಡಿಯದ
ಆಚಾರವಂತ ವೃದ್ಧ ಸ್ತ್ರೀಯರು ಇನ್ನೂ ಇದ್ದಾರೆ. ಪೂಜೆಯ ಅಥವಾ ಸಂಧ್ಯಾ~
ವಂದನೆಯ ಮಂತ್ರಗಳು ಹೆಣ್ಣಿನ ಕಿವಿಗೆ ಬೀಳಬಾರದು ಎನ್ನುವುದಿದೆ. ಒಟ್ಟಿನಲ್ಲಿ
ಇತರರನ್ನು ಬಿಟ್ಟರೆ ಹೆಣ್ಣು ಅಸ್ಪೃಶ್ಯ. ಆದುದರಿಂದ ಅವಳ ಉದ್ಧಾರಕ್ಕೆ
ಏನಾದರೂ ಮಾರ್ಗ ಬೇಕು. ಆಗಾಗ ಪಾರಾಯಣ ಮಾಡಬಹುದಾದ ಇಂಥ
ಹಾಡುಗಳೇ ಅವರಿಗೆ ಮೋಕ್ಷವನ್ನು ನೀಡುವ ತಾರಕ ಮಂತ್ರವಾಯಿತು. ಪರಿ~
ಮಿತಿಯನ್ನು ಅವರು ಒಪ್ಪಿಕೊಂಡರು, ಸಂತೋಷದಿಂದ ಎಂಬಂತೆ ಅಪ್ಪಿ~
ಕೊಂಡರು. ಈ ನೆರಳಿನಲ್ಲೇ ತಮ್ಮ ಬದ್ಧ, ಪರಿಮಿತ ಬಾಳಿನ ಅದಮ್ಯ ಹಂಬಲ~
ಗಳನ್ನೆಲ್ಲಾ ತೋಡಿಕೊಂಡರು, ಕಂಡುಕೊಂಡರು. ಈಚಿನ ಇಪ್ಪತ್ತೈದು
ಮೂವತ್ತು ವರ್ಷಗಳಲ್ಲಿ ಬೇಕಾದಷ್ಟು ಪರಿವರ್ತನೆ ನಡೆದಿದೆ. ಅನ್ನ ವಿಕ್ರಯ
ಪಾಪಕರವೆಂದಿದ್ದುದು ಪುಣ್ಯಕರವಾಗಿದೆ. ಬಯಲಾಟ ಉತ್ತಮಕಲೆಯಾಗಿದೆ.
ನಾಗರಿಕತೆ ಹಳೆಯ ಮೌಲ್ಯಗಳನ್ನು ಸಡಿಲಿಸುವಲ್ಲಿ ಒಳಿತೂ ಆಗಿದೆ ಕೆಡುಕೂ
ಆಗಿದೆ. ಒಂದು ಕಡ಼ೆ ಅರಿವಿನ ಬಾಳು ವಿಶಾಲಗೊಂಡರೆ ಇನ್ನೊಂದೆಡೆ ಆ ನಿಷ್ಠೆ,
ನಿಷ್ಠೆಯಲ್ಲಿ ಆನಂದಪಡುವ ಬಗೆ ಹೊರಟು ಹೋಗಿ ಇರವಿನ ಬಾಳನ್ನು
ದ್ವಂದ್ವಕ್ಕೆ, ಸಂಕೀರ್ಣತೆಗೆ, ಹುಲುದಾರಿಗಳಿಗೆ ನೂಕಿವೆ. ಇದಕ್ಕೆ ಅನ್ನ
ಕಾಣುವ ದಾರಿಗಳು ಬದಲಾದುದೇ ಕಾರಣವಿರಬಹುದು. ಏನೇ ಇರಲಿ,
ಇಂದಿನದು ಇಲ್ಲಿ ನಮಗಷ್ಟು ಮುಖ್ಯವಲ್ಲ. ಈಗ ಸಿನಿಮಾ ಹಾಡುಗಳು
ಮಾತ್ರ ಹುಟ್ಟಬಹುದು, ಅಷ್ಟು ಬದಲಾವಣೆ ಆಗಿವೆ. ಇಲ್ಲಿ ಮಾತ್ರವಲ್ಲ
ಬಹುಮಟ್ಟಿಗೆ ಎಲ್ಲೆಡೆಗಳಲ್ಲೂ.

ಸ್ವರೂಪ-ಸಂಪಾದನೆ : ಈ ವಿಚಾರದ ಬಹ್ವಂಶ ಎರಡನೇ
ಭಾಗದಲ್ಲಿ ಬಂದಾಗಿದೆ. ಅದು ನನ್ನ ಸಂಪಾದನೆಯ ದಾರಿಯ ಪರಿಚಯವನ್ನೂ
Page lxxix
ಮಾಡಿಕೊಡುತ್ತದೆ. ಕೃತಿಗಳಿಗಿರುವ ರೀತಿ ತನ್ನ ಸ್ವರೂಪವನ್ನು
ಚೆನ್ನಾಗಿ ಪ್ರಕಟಿಸುತ್ತದೆ. ಹೀಗಾಗಿ ಹೇಳಬೇಕಾದ್ದು ಕಡಿಮೆ. `ಈಶ್ವರ
ದೇವರು...' ಎಂಬ ಹಾಡಿಗೆ ಎರಡು ಆಕರಗಳಿವೆ. `ಗಂಗಮ್ಮ'
ಹೇಳಿದುದನ್ನು `ಗ' ಎಂದು ಅಂಕಿತಗೊಳಿಸಿದ್ದೇನೆ. `ಸೀತಮ್ಮ' ಹೇಳಿದುದಕ್ಕೆ
`ಸೀ' ಎಂದು ಗುರುತಿಟ್ಟಿದ್ದೇನೆ. ಎರಡು ಆಕರಗಳೂ ಶುದ್ಧವಾಗಿಲ್ಲ, `ಗ'
ಪ್ರತಿಯಲ್ಲಿ ಹಲವು ಕಳೆದುಹೋಗಿವೆ. ಅವನ್ನು `ಸೀ' ಯಿಂದ ಪಡೆಯಬೇ~
ಕಾಗುತ್ತದೆ. ಹೆರಗಿಂಕೆ ಮೊದಲಾಗಿ ಬ್ರಾಹ್ಮಣೇತರ ರೂಪಗಳ ಪ್ರಭಾವ~
ವಾಗಿದೆ. ಮೊದಲು `ಗ' ಸಿಕ್ಕಿದಾಗ ಅದರಲ್ಲಿ ಎರಡು ಕಥೆಗಳ,
ಎರಡು ಹಾಡುಗಳ ಮಿಶ್ರಣ ನಡೆದಿರಬೇಕೆಂದು ನನಗನ್ನಿಸಿತು. ಆ ಅಂಶ~
ವನ್ನು ಈ ಹಿಂದೆ ಕರ್ಮವೀರ ಸಾಪ್ತಾಹಿಕದಲ್ಲಿ ನಾನು ಬರೆದ ಲೇಖನ~
ದಲ್ಲೂ ವ್ಯಕ್ತಪಡಿಸಿದ್ದೆ. ಆದರೆ ಹೆಚ್ಚು ಸಂಯೋಗಗುಣ `ಸೀ'ಯಲ್ಲಿ ಕಾಣಿ~
ಸಿದುದರಿಂದ ಒಂದೇ ಕಥೆ ಎಂಬುದರ ಕಡೆ ಒಲವು ಮೂಡಲು ಅವಕಾಶ~
ವಾಯಿತು. `ಸೀ'ಯ ದೋಷಗಳೂ ಹಿಂದೆ ಚರ್ಚಿತವಾಗಿದೆ. ಜೊತೆಗೆ `ಗ'~
ದಲ್ಲಿ `ಪಾರ್ವತಿ' ಎಂದಿದ್ದರೆ `ಸೀ' ಉದ್ದಕ್ಕೂ `ಉಮದೇವಿ' (ಉಮಾದೇವಿ)
ಎಂದು ಬಳಸಿದೆ. ಈ `ಉಮದೇವಿ' ಭಿನ್ನ ಸಂಪ್ರದಾಯವನ್ನೇ ಸೂಚಿಸ~
ಬಹುದು. `ಉಮದೇವಿ' ರೂಪವು `ಸೀ' ಯಲ್ಲೇ ಕೆಲವೆಡೆ ಹೊಂದದುದರಿಂದ
ಅದನ್ನು ನಿರಾಕರಿಸಲಾಗಿದೆ. ಜೊತೆಗೆ, `ಸೀ' `ಮೇರುತಿ' ಶಬ್ದವನ್ನು
`ಕೊರಗಿತಿ'ಗೆ ಪ್ರತಿಯಾಗಿ ಬಳಸಿಕೊಂಡು ಹೋಗಿದೆ. ಪಾಠ ನಿಷ್ಕರ್ಷೆ~
ಯಲ್ಲಿ ಆಡುನುಡಿಯ ರೂಪ, ಅರ್ಥಸಾಂಗತ್ಯ, ಒಟ್ಟಂದದ ಸಾಧನೆ, ಇತ್ಯಾದಿ~
ಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.

ಇನ್ನುಳಿದೆಡೆಗಳಲ್ಲೆಲ್ಲಾ ಒಂದು ಆಕರವಿದ್ದಾಗ ಅನುಸರಿಸಬಹುದಾದ
ತತ್ವಗಳನ್ನೇ ಪಾಲಿಸಲಾಗಿದೆ. `ಕೊಟ್ಟಿಗೆಯೊಳಗಿನ ಹಿಂದಿನ ಕಡುಚೆಲ್ವಿ~
ಕೆಂದೆ ಕವಿಲೆಯು ಭಟ್ಟರ ಮನೆಯಲ್ಲಿ ಹುಟ್ಟಿದಳು' ಎಂಬಲ್ಲಿ (ಗೋ. 5)
`ಹಿಂದಿನ' ಎಂಬುದನ್ನು ಇತರ ಆಕರಗಳ ಸಹಾಯವೇ ಇಲ್ಲದೆ `ಹಿಂಡಿನ'
ಎಂದು ಮಾಡಿಬಿಟ್ಟಿದ್ದೇನೆ. ಅದೇ ನನ್ನ ಸಂಪಾದನೆ! ಅಲ್ಲಿನ ಔಚಿತ್ಯವೇ
ಅದಕ್ಕೆ ಆಧಾರ. ಅದು ಬೇಡವೆನಿಸಿದರೆ, ಸರಿಯಲ್ಲ ಎನಿಸಿದರೆ ಅಡಿ ಟಿಪ್ಪಣಿಯ
ಸ್ಥಳದಲ್ಲಿ ತಪ್ಪದೆ ತೋರಿಸಿರುವ "ಹಿಂದಿನ" ಎಂಬ ಮೂಲ ಪಾಠವನ್ನೇ ಧಾರಾಳವಾಗಿ
Page lxxx
ವಾಗಿ ಸ್ವೀಕರಿಸಬಹುದು. ಹಿಂದೆ ಇರುವ ಕಡು ಚೆಲುವೆಯಲ್ಲ ಹಿಂಡಿನಲ್ಲೇ
ಅವಳು ಕಡು ಚೆಲುವೆ ಎಂಬುದು ರಚಕರ ಇಂಗಿತವಿರಬೇಕು ಎಂದುಕೊಂಡಿ~
ದ್ದೇನೆ. `ಹಿಂಡಿನ' ಎಂದೇ ಹಾಡಿರಬೇಕು, ಸರಿಯಾಗಿ ಕೇಳಿಸದೆ `ಹಿಂದಿನ'
ಎಂದಂದುಕೊಂಡು ಬರೆದಿರಬೇಕು ಎಂಬಂಥ ಮಾತುಗಳಿಗೆ ಎರಡೆರಡು ಬಾರಿ
ಹಾಡಿಸಿ ಬರೆದುಕೊಂಡ ನಾನು ಕಿವುಡನಾಗಿದ್ದೇನೆ. ತ್ರಿಪದಿಯ ಎರಡನೇ
ಪಾದದಲ್ಲಿ `ಕೊಟ್ಟಿಗಿಯ ಗಂಟೀಯ ಹೊಡಿವವ್ಳ' ಎಂದಿದೆ.
ಇದು ಛಂದಸ್ಸಿಗೆ ಹೊಂದುವುದಿಲ್ಲ, `ಅದು ಕೊಟ್ಗಿಗಂಟೀಯ ಹೊಡಿವವ್ಳ'
ಎಂದಿರಬೇಕು. ಆದರೂ ಭಿನ್ನ ಆಕರದ ಸಹಾಯವಿಲ್ಲದುದರಿಂದ ತಿದ್ದಿಲ್ಲ.
ಆದರೆ ಅಡಿ ಟಿಪ್ಪಣಿಯಲ್ಲಿ ಹೀಗೆ ಇರಬಹುದೇ? ಎಂದು ಪ್ರಶ್ನಿಸಿಕೊಂಡಿ~
ದ್ದೇನೆ. ಹಾಗೆಯೇ ಇನ್ನೊಂದೆಡೆ `ಬಡವರನ್ಯಾಯ ನುಡಿವವ್ನ'
ಎಂಬುದನ್ನು `ಬಡವಱ್ಗನ್ಯಾಯ' ನುಡಿವವ್ನ ಎಂದು ಪರಿಷ್ಕರಿಸಿ ಮೂಲವನ್ನು
ಅಡಿ ಟಿಪ್ಪಣಿಯಲ್ಲಿ ತೋರಿಸಿದ್ದೇನೆ. ಹೀಗೆ ಗೋವಿನ ಹಾಡಿನಿಂದ ಆರಂಭಿಸಿ
ಕೊನೆಯವರೆಗೂ ಅನಿವಾರ್ಯವೆನಿಸಿದೆಡೆ, ಸಮರ್ಥನೀಯವೆನಿಸಿದೆಡೆ ಪರಿ~
ಷ್ಕಾರಗಳನ್ನು ಆವರಣದೊಳಗೆ ತೋರಿಸಿದೆ. ಆ ಆವರಣಗಳ ಆಚೆ ಈಚೆ
ಅಂಕೆಗಳನ್ನಿಟ್ಟು ಕೆಳಗೆ ಆ ಭಾಗದಲ್ಲಿರುವ ಮೂಲ ಪಾಠವನ್ನು ಸೂಚಿಸಿದೆ.
ಆವರಣವಿಲ್ಲದೆ ಒಂದೇ ಕಡೆ ಅಂಕೆಯಿಟ್ಟಿದ್ದರೆ ಕೆಳಗಡೆ ಅಷ್ಟು ಸಮರ್ಥನೀಯ~
ವೆನಿಸದ ಆದರೂ ಅಗತ್ಯವೆನಿಸುವ ಪರಿಷ್ಕಾರ ಪಾಠವನ್ನು ಸೂಚಿಸಿದ್ದೇನೆ.
ಕೆಲವೆಡೆ ಈ ಏಕ ಸಂಖ್ಯೆಗಳು ಕೆಳಗೆ ಪ್ರಕ್ಷೇಪಾದಿಗಳನ್ನು ಸೂಚಿಸುತ್ತವೆ.
ಅಡಿ ಟಿಪ್ಪಣಿಗಳು ಹೆಚ್ಚಾಗಿ ಗೊಂದಲವಾಗಬಾರದೆಂದು `ಈಶ್ವರದೇವರು
....' ಹಾಡಿಗೆ ಸಂಬಂಧಿಸಿದ ಪ್ರಕ್ಷೇಪಗಳನ್ನು ಕೊನೆಯ ಟಿಪ್ಪಣಿಗಳಲ್ಲಿ
ಸೇರಿಸಲಾಗಿದೆ.

ಕೃತಿಗಳ ವಿಷಯವಾಗಿ : ಈಶ್ವರ ಪಾರ್ವತಿಯರು ಪರಸ್ಪರ ಪರೀ~
ಕ್ಷಿಸಿದ ಕಥೆ `ಈಶ್ವರದೇವರು ಪಟ್ಟೆಕೊಚ್ಚಿದ ಹಾಡು'. ಮೊದಲು ಈಶ್ವರನ
ಸರದಿ. ಮೊದಲು ಏನೋ ವಿವಾದ ನಡೆದಿರಬೇಕು. ಸ್ತ್ರೀಯರನ್ನು ನಂಬು~
ವುದು ಹೇಗೆ? ಅವರ ಹೃದಯವನ್ನು ಕಂಡವರಾರು ಎಂಬ ಮಾತು ಲೋಕ
ಸಾಧಾರಣವಾಗಿ ಬಂದಿದೆ. ಪಟ್ಟೆಯ ಸೀರೆಯನ್ನು ಹೆಂಡತಿಗೆ ತಂದುಕೊಟ್ಟು
ಎಚ್ಚರ ಹೇಳಿ ಕಾಶಿಗೆ ಹೋಗಿಬರುವುದಾಗಿ ಹೊರಟು, ಇಲಿಯ ವೇಷದಲ್ಲಿ
Page lxxxi
ಬಂದು ಆ ಸೀರೆಯನ್ನು ಎಳ್ಳು ಕಟ್ಟಲೂ ಅವಕಾಶವಿಲ್ಲದಂತೆ ಕತ್ತರಿಸಿಹಾಕು~
ತ್ತಾನೆ. ಸೀರೆ ಬೇಕೆಂಬ ಗಣಪನ ಹಟ ಸೊಗಸಾಗಿದೆ. ಮತ್ತೆ ಈಶ್ವರನು ಹೊಲಿ~
ಗಾರನ ವೇಷಹಾಕಿಕೊಂಡು ಬಂದು, ಸೀರೆಯನ್ನು ಹೊಲಿದು, ಅಂಥ ಇಂಥ
ಕೂಲಿಗೆ ಒಪ್ಪದೆ ಬಲಾತ್ಕಾರ ಪಡಿಸುತ್ತಾನೆ. `ಹೊಯ್್ಕೈ ಹಿಡಿದ್ರು' ಎಂಬ
ಮಾತು ಚೆನ್ನಾಗಿದೆ. ದುರದೃಷ್ಟವಶಾತ್ ಆ ತ್ರಿಪದಿಯ ಪಾಠವೇ ಸರಿಯಿಲ್ಲ.
ಅಸಹಾಯಳಾದ ಪಾರ್ವತಿ ಶಿವನನ್ನು ನೆನೆಯುತ್ತಾಳೆ. ಶಿವನು ಸಮಾಧಾನ
ಪಡಿಸುತ್ತಾನೆ. ಸ್ವಲ್ಪ ಹಿಂದೆ ನಾಪಿತರು ಮನೆಮನೆಗೇ ಬರುತ್ತಿದ್ದರು;
ಅಗಸರೂ. ಹಾಗೆಯೇ ಹೊಲಿಗಾರರೂ ನಾನಾ ಭಾಷೆಗಳಲ್ಲಿ `ಹೊಲಿಯೋ
ಕುಂಟೇ' ಎಂದು ಕೂಗುತ್ತ ಬರುತ್ತಿದ್ದರೆಂದು ತೋರುತ್ತದೆ. ಅವನ ವರ್ಣ~
ನೆಯೂ ಗಮನೀಯವಾಗಿದೆ. ಈಶ್ವರನನ್ನು ಪರೀಕ್ಷಿಸುವ ಸರದಿ ಪಾರ್ವತಿಯ~
ದಾಗುತ್ತದೆ. ಹೊಲೆಯರವಳ, ಬೇಡಿತಿಯ ವೇಷ ಹಾಕುತ್ತಾಳೆ. ಹಾದಿಯಲ್ಲಿ
ನೋಡಿದ ಈಶ್ವರನೇ ಮರುಳಾಗಿ ಚಾರಕರನ್ನು ಅಟ್ಟಿ ಪ್ರಲೋಭನೆಗಳನ್ನು
ಮುಂದೆ ಒಡ್ಡಿಸುತ್ತಾನೆ. ಪಾರ್ವತಿ ಒಪ್ಪಲಿಲ್ಲ. ಕೊನೆಗೆ `ಹೊಲೆಗಂಡ ಬಂದರೆ
ನಿನ್ನನ್ನು ಕತ್ತರಿಸಿ ಹಾಕುತ್ತಾನೆ' ಎ಩್ನುತ್ತಾಳೆ. ಇಲ್ಲೂ ಈಶ್ವರ ಅಡಕೆ ಹೋಳು
ಕೊಡಬಂದ ಬೇಡಿತಿಯ ಎರಡು ಕೈಗಳನ್ನೂ ಹಿಡಿದುಬಿಟ್ಟ. ತಾನು ಹೀನ
ಕುಲದವಳೆಂದರೂ ಕೇಳಲಿಲ್ಲ. ಅವಳು ಕೊರಲ ಪದಕವನ್ನು ಕೊಟ್ಟರೆ ಬರುವೆ~
ನೆಂದಳು. ಇನ್ನಾರೂ ಬೇಡಲಾರದ ಪದಕವನ್ನು ಬೇಡಿದುದರಿಂದ ಇವಳು
ಪಾರ್ವತಿಯೇ ಎಂಬುದು ತಿಳಿದು ಈಶ್ವರ ಮಾತು ಮರೆಸುತ್ತಾನೆ. ಮಕ್ಕಳು
ಎಲ್ಲಿಗೆ ಹೋದವು ಎನ್ನುತ್ತಾನೆ. ಇಲ್ಲಿಂದ ಗಣಪತಿಯ ವಿಷಯ ಬರುತ್ತದೆ. 
ಒಟ್ಟಿನ ಪರೀಕ್ಷೆಯಲ್ಲಿ ಎರಡು ಬಾರಿಯೂ ಬಯಸಿದವನು ಈಶ್ವರನೇ. ಒಂದು
ವೇಳೆ ಅವಳು ಪದಕ ಬೇಡದಿದ್ದರೆ? ಬೇರೆಯವಳಾಗಿದ್ದರೆ? ಈ ದೃಷ್ಟಿಯಿಂದ
ಪಾರ್ವತಿಯೇ ಗೆದ್ದವಳೆನ್ನಬೇಕು. ಇಲ್ಲಿ ಇನ್ನೊಂದು ಮುಖ್ಯವಾದ ಅಂಶ
ಪಾರ್ವತಿಗೂ ಹೊಲಿಗಾರನಿಗೂ, ಈಶ್ವರನಿಗೂ ಕೊರತಿಗೂ ಸಂದರ್ಶನ~
ವಾದುದು. ಅತ್ಯುಚ್ಚವು ಕೀಳನ್ನು ಬಯಸುವ, ಕೀಳು ಔನ್ನತ್ಯದೊಡನೆ
ಸಂಯೋಗವಾಗಲೆಳಸುವುದರ ಪ್ರತೀಕ ಇದು ಎ಩್ನಬಹುದು. ಗಣಪತಿ ಬಿದ್ದು~
ದಕ್ಕೆ ಕೊಟ್ಟ ಕಾರಣ ಹೊಸತಾಗಿದೆ, ಮನನೀಯವಾಗಿದೆ. ಬಾಲೇಶ ಮೊದ~
ಲಾಗಿ ಲೀಲೆಯನ್ನು ತೋರಿದ ಈ ಕಥೆಯನ್ನು ಹೇಳಿ ಕೇಳಿದ ಯಾರಿಗಾದರೂ
Page lxxxii
ಪಾಪ ಹೋಗಿ ಪುಣ್ಯ ಬರುತ್ತದೆ ಎಂಬ ಮಾತಿನಲ್ಲಿ ಕಥೆ ಮುಗಿಯುತ್ತದೆ.

`ಗೋವಿನ ಹಾಡಿನ ಮಟ್ಟು' ಎಂದೇ ಪ್ರಖ್ಯಾತವಾಗಿರುವ ಚತುಷ್ಪದಿ~
ಯಾದ, `ಧರಣಿ ಮಂಡಲ' ರೂಪವೇ ಇದುವರೆಗೂ ಪ್ರಚಲಿತವಾಗಿರುವುದು.
ಇದನ್ನು ಪ್ರೊ।। ಡಿ.ಎಲ್. ನರಸಿಂಹಾಚಾರ್ ಅವರು ಸಂಪಾದಿಸಿದ್ದಾರೆ. ಇದು
ಮದ್ದೂರ ನರಸಿಂಹನ ಭಕ್ತನೊಬ್ಬನದಿರಬಹುದೆನ್ನಲಾಗಿದೆ. ಆ ಪದ್ಯವೇ
ಪ್ರಕ್ಷಿಪ್ತವಾಗಿರಬಹುದಾದರೂ ಅಸಾಧ್ಯವೇನೂ ಅಲ್ಲ. ಜೊತೆಗೆ ಯಾವ
ಯಾವ ಪ್ರದೇಶಗಳ ಆಕರಗಳು ಹಿನ್ನೆಲೆಯಲ್ಲಿವೆ, ಅವು ಒಂದೊಂದರ ಪ್ರಾದೇಶಿ~
ಕವೇ ಮೊದಲಾದ ವೈಶಿಷ್ಟ್ಯಗಳೇನು ಎಂಬುದನ್ನು ಹೇಳಿಲ್ಲ. ಜನಪ್ರಿಯ ಆ
ವೃತ್ತಿಯಾಗಿರುವುದರಿಂದ ಅವಕ್ಕೆ ಅವಕಾಶವಾಗದೇ ಹೋಗಿರಬಹುದು.
ಇಲ್ಲಿನ ಗೋವಿನ ಹಾಡಿಗೂ ಪ್ರಚಲಿತವಿರುವ ಗೋವಿನ ಹಾಡಿಗೂ ಸಮಾನ
ಕಥೆ ಎಂಬ ಮೂಲಾಂಶವೊಂದನ್ನು ಬಿಟ್ಟರೆ ಎಲ್ಲ ರೀತಿಗಳಲ್ಲೂ ಭಿನ್ನತೆ ಮಿಗಿ~
ಲಾಗಿದೆ. ಒಂದೊಂದಾಗಿ ಗಮನಿಸಬಹುದು.

(ಅ) ಧರಣಿಮಂಡಲ - ಗೋವಿನ ಹಾಡು ಚತುಷ್ಪದಿ. ಇಲ್ಲಿ ಅದು
ತ್ರಿಪದಿ. ಛಂದಸ್ಸಿನ ದೃಷ್ಟಿಯಿಂದ ತ್ರಿಪದಿರೂಪದ ಇದು ಹೆಚ್ಚು ಪ್ರಾಚೀನ~
ವೆನ್ನಲು ಅವಕಾಶವಿದೆ.

(ಆ) ಗೋವಿನ ಕಥೆ ಸಂಸ್ಕೃತದಲ್ಲಿರುವ `ಇತಿಹಾಸ ಸಮುಚ್ಚಯ'
ಎಂಬ ಪುರಾಣಕಥೆಗಳ ಪುಸ್ತಕದಲ್ಲಿ ಬರುತ್ತದೆಂದೂ, ಈ ಕಥೆಯನ್ನು
ಮೊದಲು ಭೀಷ್ಮನು ಧರ್ಮರಾಯನಿಗೆ ಹೇಳಿದನೆಂದೂ ಹೇಳಲಾಗಿದೆ.
ಭೀಷ್ಮನು ಧರ್ಮರಾಯನಿಗೆ ಹೇಳಿದನೆಂಬ ಅಂಶ ಇಲ್ಲಿನ ಹಾಡಿನಲ್ಲಿ ಮಾತ್ರ
ಬರುತ್ತದೆ.

